Tag: ಬಿಲ್ಡಿಂಗ್

  • ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ

    ಮಗನ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ತಾಯಿ – 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ಆತ್ಮಹತ್ಯೆ

    ಲಕ್ನೋ: ʻಇದ್ದಕ್ಕಿದ್ದಂತೆ ಬಿಲ್ಡಿಂಗ್‌ವೊಂದರಿಂದ ಮಹಿಳೆಯ ಚೀರಾಟ ಕೇಳಿಬಂತು, ಕುತೂಹಲದಿಂದ ನೆರೆಯವರೆಲ್ಲ ಕಿಟಕಿ, ಬಾಲ್ಕನಿಯಲ್ಲಿ ನಿಂತು ಇಣುಕಿದ್ರು. ಕೆಲ ಸೆಕೆಂಡುಗಳಲ್ಲಿ ತಾಯಿ ಮಗು ಇಬ್ಬರ ದೇಹ ನೆಲ್ಲಕ್ಕೆ ರಪ್ಪನೆ ಅಪ್ಪಳಿಸಿತು, ರಸ್ತೆಗೆಲ್ಲ ರಕ್ತ ಚಿಮ್ಮಿತು. ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ತಾಯಿ, ಮಗುವಿನ ಪ್ರಾಣ ಪಕ್ಷಿ ಹಾರಿತು. ಇದೀಗ ಈ ಘಟನೆ ಅಲ್ಲಿನ ಸ್ಥಳೀಯರನ್ನೂ ಬೆಚ್ಚಿಬೀಳುವಂತೆ ಮಾಡಿದೆ. ಹೃದಯ ಕಲಕುವ ಈ ಘಟನೆ ನಡೆದಿದ್ದು, ಗ್ರೇಟರ್‌ ನೋಯ್ಡಾದಲ್ಲಿ (Greater Noida).

    ಹೌದು. ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ (Sakshi Chawla) (37) ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ. ಇದನ್ನೂ ಓದಿ: ಭಾರತ vs ಪಾಕ್ | 26 ಜೀವಗಳಿಗಿಂತ ಹಣಕ್ಕೆ ಅಷ್ಟೊಂದು ಮಹತ್ವವೇ? – ಅಸಾದುದ್ದೀನ್ ಓವೈಸಿ ಕಿಡಿ

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳಿಸೋದಕ್ಕೂ ಮುನ್ನವೇ ಮನೆಯನ್ನ ಶೋಧಿಸಿದ್ದಾರೆ. ಈವೇಳೆ ಮೃತ ಮಹಿಳೆ ಸಾಕ್ಷಿ ಪತಿಗೆ ಬರೆದಿದ್ದ ಡೆತ್‌ನೋಟ್‌ ಪತ್ತೆಯಾಗಿದೆ. ಇದರಲ್ಲಿ ʻನಾವು ಈ ಲೋಕವನ್ನು ತೊರೆಯುತ್ತಿದ್ದೇವೆ.. ಕ್ಷಮಿಸಿ… ನಾವು ಇನ್ಮುಂದೆ ನಿಮಗೆ ತೊಂದರೆ ಕೊಡಲು ಬಯಸುವುದಿಲ್ಲ. ನಮ್ಮಿಂದಾಗಿ ನಿಮ್ಮ ಜೀವನ ಹಾಳಾಗಬಾರದು. ನಮ್ಮ ಸಾವಿಗೆ ಯಾರೂ ಕಾರಣವಲ್ಲʼ ಎಂದು ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರ ಪ್ರಕಾರ, ಇದು ಆತ್ಮಹತ್ಯೆಯೇ. ಸಾಕ್ಷಿ ಅವರ ಮಗ ದಕ್ಷ ಮಾನಸಿಕ ಅಸ್ವಸ್ಥನಾಗಿದ್ದು, ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ಶಾಲೆಗೂ ಹೋಗುತ್ತಿರಲಿಲ್ಲ. ವಿಪರೀತ ಔಷಧ ಸೇವಿಸಬೇಕಿತ್ತು. ಇದರಿಂದ ಸಾಕ್ಷಿ ಬಹಳ ನೊಂದಿದ್ದಳು. ತನ್ನ ಕಷ್ಟವನ್ನು ನೆರೆಯವರೊಂದಿಗೆ ಹೇಳಿಕೊಳ್ಳುತ್ತಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್‌ ಕದನ ಯಾವಾಗಲೂ ಏಕೆ ರಣಕಣ? – ಆಕ್ರಮಣಕಾರಿ ಆಟಕ್ಕೆ ಟೀಂ ಇಂಡಿಯಾ ರೆಡಿ!

    ನಿನ್ನೆ ಬೆಳಗ್ಗೆ 9 ಗಂಟೆ ಸುಮಾರಿಗೆ ಪತಿ ದರ್ಪಣ್‌ ಚಾವ್ಲಾ, ಹೆಂಡತಿಯನ್ನ ಎಬ್ಬಿಸಿ ಮಗನಿಗೆ ಔಷಧಿ ಕೊಡುವಂತೆ ಹೇಳಿದ್ದರು. ಅದರಂತೆ ಔಷಧಿ ಕೊಟ್ಟು ಬಳಿಕ ಮಗನನ್ನ ಬಾಲ್ಕನಿಗೆ ವಾಕಿಂಗ್‌ಗೆ ಕರೆದೊಯ್ದಿದ್ದಳು ಸಾಕ್ಷಿ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರು 13ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ಈ ದುರಂತವು ನೆರೆಹೊರೆಯವರನ್ನೂ ಬೆಚ್ಚಿಬೀಳಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಕುಟುಂಬ ರಾಜಕಾರಣದಲ್ಲಿ ದೇಶದಲ್ಲೇ ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

  • ಬೆಂಗ್ಳೂರಲ್ಲಿ ಹೆಚ್ಚಾಗ್ತಿದೆ ಗುಜರಿ ಮನೆ, ಬಿಲ್ಡಿಂಗ್- ತೆರವಿಗೆ ಬಿಬಿಎಂಪಿ ನೋಟಿಸ್

    ಬೆಂಗ್ಳೂರಲ್ಲಿ ಹೆಚ್ಚಾಗ್ತಿದೆ ಗುಜರಿ ಮನೆ, ಬಿಲ್ಡಿಂಗ್- ತೆರವಿಗೆ ಬಿಬಿಎಂಪಿ ನೋಟಿಸ್

    – ನಗರದ 178 ಮನೆಗಳು, ಕಟ್ಟಡ ಡೇಂಜರ್

    ಬೆಂಗಳೂರು: ಬೇರೆಯವರ ಮನೆಯ ಪಾಯ ತೆಗೆಯೋವಾಗ ಅಕ್ಕ-ಪಕ್ಕದ ಎರಡು ಮನೆ ಕುಸಿತ ಕಂಡು ಬೆಂಗಳೂರಿನಲ್ಲಿ ಭಾನುವಾರ ಅನಾಹುತ ನಡೆದಿದೆ. ಇದರ ಬೆನ್ನಲ್ಲೇ ಗುಜರಿ ಮನೆಗಳು ಹಾಗೂ ಬಿಲ್ಡಿಂಗ್‍ಗಳ ಹಿಂದೆ ಬಿದ್ದ ಬಿಬಿಎಂಪಿಗೆ ಶಾಕ್ ಆಗಿದ್ದು, ಗುಜರಿ ಮನೆಗಳ ಮಾಲೀಕರಿಗೆ ಬಿಸಿ ಮುಟ್ಟಿಸೋಕೆ ಮುಂದಾಗಿದೆ.

    ಭಾನುವಾರ ರಾತ್ರಿ ಬೆಂಗಳೂರಿನಲ್ಲಿ ಮನೆಯ ಪಾಯ ಅಗೆದ ಪರಿಣಾಮ ಎರಡು ಅಕ್ಕ-ಪಕ್ಕದ ಮನೆಗಳಿಗೆ ಹಾನಿಯಾಗಿ ಕುಸಿದಿದ್ದವು. ಇದರ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಇದೀಗ ಗುಜರಿ ಬಿಲ್ಡಿಂಗ್ಸ್, ಮನೆಗಳ ಬೇಟೆಗೆ ಮುಂದಾಗಿದೆ. ಇದಕ್ಕಾಗಿ 8 ವಲಯದಲ್ಲೂ ಸರ್ವೆ ಮಾಡಿದಾಗ ಬಿಬಿಎಂಪಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಯಾಕೆಂದರೆ ಸಿಲಿಕಾನ್ ಸಿಟಿಯಲ್ಲಿ ಸಿಕ್ಕಾಪಟ್ಟೆ ಶಿಥಿಲಾವಸ್ಥೆಯಲ್ಲಿರುವ ಬಿಲ್ಡಿಂಗ್, ಮನೆಗಳು ಇರೋದು ಬೆಳಕಿಗೆ ಬಂದಿದೆ.

    ಬೆಂಗಳೂರಿನಲ್ಲಿ 178 ಮನೆಗಳು, ಕಟ್ಟಡ ಡೇಂಜರ್ ಜೋನ್‍ನಲ್ಲಿದೆ. ಈ ಪೈಕಿ, 77 ಕಟ್ಟಡಗಳಿಗೆ ಪಾಲಿಕೆ ನೋಟಿಸ್ ನೀಡಿದೆ. ಕಟ್ಟಡಗಳ ಮಾಲೀಕರು ತಾವಾಗಿಯೇ ಡೆಮಾಲಿಷನ್ ಮಾಡದೆ ಹೋದರೆ ನಾವೇ ಬಂದು ಮನೆಗಳನ್ನು ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಅಧಿಕಾರಿಗಳು ವಾರ್ನಿಂಗ್ ಕೊಟ್ಟಿದ್ದಾರೆ.

    ಈ ಹಿಂದೆ ರಾಜಕಾಲುವೆ ಒತ್ತುವರಿ ಮಾಡಿಕೊಂಡ ಮನೆಗಳನ್ನು ಒಡೆದಾಗ ದೊಡ್ಡ ಹೈಡ್ರಾಮ ನಡೆದಿತ್ತು. ದೊಡ್ಡವರ ಮನೆಗೆ ವಿನಾಯಿತಿ ಎಂದು ಬಿಬಿಎಂಪಿ ಮೇಲೆ ಆರೋಪ ಕೇಳಿಬಂದಿತ್ತು. ಈ ವಿಚಾರದಲ್ಲಿ ಮಾತ್ರ ಹೀಗಾಗದಿರಲಿ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.

  • ಮನೆಯ ಸಜ್ಜ ಮುರಿದು ಬಿದ್ದು 30 ಜನರಿಗೆ ಗಾಯ

    ಮನೆಯ ಸಜ್ಜ ಮುರಿದು ಬಿದ್ದು 30 ಜನರಿಗೆ ಗಾಯ

    ತುಮಕೂರು: ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಅಗ್ನಿಕೊಂಡ ವೀಕ್ಷಿಸಲು ಭಕ್ತರು ನಿಂತಿದ್ದ ಬಿಲ್ಡಿಂಗ್ ಸಜ್ಜ ಕಳಚಿ ಬಿದ್ದು 30 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

    ದೇಶದ ಅತೀ ದೊಡ್ಡ ಅಗ್ನಿಕೊಂಡ ಎಂದು ಪ್ರಸಿದ್ಧಿಯಾಗಿರುವ ಉಜ್ಜನಿ ಚೌಡೇಶ್ವರಿ ದೇವಿ ಅಗ್ನಿಕೊಂಡ ನೋಡಲು ಬುಧವಾರ ಸಾವಿರಾರು ಮಂದಿ ಭಕ್ತರು ಕಿಕ್ಕಿರಿದು ಸೇರಿದ್ದರು. ದೇವಸ್ಥಾನದ ಅಕ್ಕಪಕ್ಕದ ಬಿಲ್ಡಿಂಗ್ ಮೇಲೆ ಜನರು ಹತ್ತಿ ನಿಂತು ವೀಕ್ಷಣೆ ಮಾಡುತ್ತಿದ್ದರು.

    ಹಳೆಯ ಬಿಲ್ಡಿಂಗ್ ಆಗಿದ್ದರಿಂದ ಜನರ ಭಾರ ಹೆಚ್ಚಾಗಿ ಸಜ್ಜ ಕಳಚಿ ಬಿದ್ದಿದೆ. ಹೀಗಾಗಿ ಅದರ ಮೇಲೆ ಹಾಗೂ ಕೆಳಗೆ ನಿಂತಿದ್ದವರ ಮೇಲೆಯೂ ಬಿದ್ದಿದ್ದು, ಪರಿಣಾಮ ಅಲ್ಲಿದ್ದ ಜನರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಈ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಮಂಡ್ಯ ಹಾಗೂ ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸಣ್ಣ ಪುಟ್ಟ ಗಾಯಗೊಂಡವರು ಕುಣಿಗಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಬಗ್ಗೆ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

    ಕಸದ ವಿಚಾರಕ್ಕೆ ಬಿತ್ತು ಹೆಣ- ಬಿಲ್ಡಿಂಗ್ ಮೇಲಿಂದ ಯುವಕನನ್ನು ತಳ್ಳಿ ಕೊಲೆ

    ಬೆಂಗಳೂರು: ಕಸ ಎಸೆದ ಯುವಕನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಹನುಮಂತನಗರ ಬಳಿಯ ಪಿಇಎಸ್ ಕಾಲೇಜ್ ಬಳಿ ನೆಡೆದಿದೆ.

    ತುಮಕೂರು ಮೂಲದ ದೇವರಾಜ್ 29 ಮೃತ ಯುವಕ. ಮೃತ ದೇವರಾಜ್ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ನಂತರ ಮನೆ ಮೇಲಿನಿಂದ ಕಸದ ಕವರನ್ನು ಕೆಳಕ್ಕೆ ಎಸೆದಿದ್ದಾನೆ. ಈ ಸಂದರ್ಭದಲ್ಲಿ ದೇವರಾಜ್ ಮನೆಯ ಮುಂದೆ ರಸ್ತೆಯಲ್ಲಿ ನಿಂತಿದ್ದ ಮೂವರು ಯುವಕರು ಕಸ ಎಸೆದಿದ್ದನ್ನು ನೋಡಿ ಪ್ರಶ್ನೆ ಮಾಡಿದ್ದಾರೆ.

    ಅಲ್ಲದೇ ಮೂವರು ಯುವಕರು ದೇವರಾಜ್ ಮನೆಗೆ ತೆರಳಿ ಗಲಾಟೆ ಮಾಡಿದ್ದಾರೆ. ಕಸ ವಿಚಾರವಾಗಿ ಗಲಾಟೆ ತಾರಕಕ್ಕೇರಿ  ಯುವಕರು  ದೇವರಾಜ್ ನನ್ನು ಬಿಲ್ಡಿಂಗ್ ಮೇಲಿನಿಂದ ತಳ್ಳಿ ಪರಾರಿಯಾಗಿದ್ದಾರೆ. ಇತ್ತ ಬಿಲ್ಡಿಂಗ್ ಮೇಲಿನಿಂದ ಬಿದ್ದ ದೇವರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

    ಈ ಘಟನೆ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.