Tag: ಬಿಲಿಯನೇರ್

  • ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ಟ್ರಂಪ್‌ಗಿಂತಲೂ ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಕೋಟ್ಯಧಿಪತಿಗಳ ಬೆಂಬಲ – ಇಲ್ಲಿದೆ ಬಿಲಿಯನೇರ್ಸ್‌ ಲಿಸ್ಟ್‌

    ವಾಷಿಂಗ್ಟನ್‌: ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ತಯಾರಿ ಭರದಿಂದ ಸಾಗುತ್ತಿದ್ದು, ದೇಶಾದ್ಯಂತ ಬಿಲಿಯನೇರ್‌ಗಳು (Billionaires) ಸದ್ದಿಲ್ಲದೇ ತಮ್ಮ ನೆಚ್ಚಿನ ರಾಜಕೀಯ ನಾಯಕರನ್ನ ಬೆಂಬಲಿಸುತ್ತಿದ್ದಾರೆ. ಚುನಾವಣಾ ಅಖಾಡಲ್ಲಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ (Kamala Harris) ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಗಮನಾರ್ಹ ಆರ್ಥಿಕ ಬೆಂಬಲ ಒದಗಿಸುತ್ತಿದ್ದಾರೆ.

    ಫೋರ್ಬ್ಸ್ ಪ್ರಕಾರ, 76 ಬಿಲಿಯನೇರ್‌ಗಳು ಕಮಲಾ ಹ್ಯಾರಿಸ್‌ಗೆ ಬೆಂಬಲ ನೀಡಿದ್ದರೆ, 49 ಬಿಲಿಯನೇರ್‌ಗಳು ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಬೆಂಬಲಿಸಿದ್ದಾರೆ. ಇನ್ನೂ ಕೆಲ ಬಿಲಿನೇರ್‌ಗಳ ಕೊಡುಗೆಗಳನ್ನು ಚುನಾವಣೆಯ ನಂತರ ಡಿಸೆಂಬರ್‌ನಲ್ಲಿ ಅಂತಿಮ ಫೆಡರಲ್ ಚುನಾವಣಾ ಆಯೋಗದ ವರದಿಗಳನ್ನು ಬಿಡುಗಡೆ ಮಾಡುವವರೆಗೆ ಸಾರ್ವಜನಿಕಗೊಳಿಸಲಾಗುವುದಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ಸೇನಾ ನೆಲೆಯ ಮೇಲೆ ಹಿಜ್ಬುಲ್ಲಾ ಡ್ರೋನ್ ಅಟ್ಯಾಕ್‌ – 4 ಇಸ್ರೇಲ್‌ ಸೈನಿಕರು ಬಲಿ

    ಹ್ಯಾರಿಸ್‌ ಕಡೆಗೆ ವಾಲಿದ ಕೋಟ್ಯಧಿಪತಿಗಳು:
    ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಗಳ ಜಟಾಪಟಿ ಜೋರಾಗುತ್ತಿದ್ದು, ಕಮಲಾ ಹ್ಯಾರಿಸ್‌ಗೆ ಹೆಚ್ಚಿನ ಬಿಲಿಯನೇರ್‌ಗಳ ಬೆಂಬಲ ಸಿಕ್ಕಿದೆ. ಹ್ಯಾರಿಸ್ ಅವರ ಅಧ್ಯಕ್ಷತೆಯಲ್ಲಿ ತಂತ್ರಜ್ಞಾನ, ಆರೋಗ್ಯ ಮತ್ತು ಸುಸ್ಥಿರತೆಯಂತಹ ಕ್ಷೇತ್ರಗಳು ಅಭಿವೃದ್ಧಿ ಹೊಂದುತ್ತವೆ ಎಂದು ಇತ್ತೀಚಿನ ಸಮೀಕ್ಷೆಯು ಬಹಿರಂಗಪಡಿಸಿದೆ. ಈ ಹಿನ್ನೆಲೆಯಲ್ಲಿ ಕೋಟ್ಯಧಿಪತಿಗಳು ಹ್ಯಾರಿಸ್‌ರನ್ನ ಬೆಂಬಲಿಸಲು ಶುರು ಮಾಡಿದ್ದಾರೆ.

    ಹ್ಯಾರಿಸ್‌ಗೆ ಬೆಂಬಲ ಸೂಚಿಸಿರುವ 76 ಬಿಲಿಯನೇರ್‌ಗಳಲ್ಲಿ, 28 ಜನರು ಆಕೆಯನ್ನು ಬೆಂಬಲಿಸುವ ಗುಂಪುಗಳಿಗೆ 1 ಮಿಲಿಯನ್ ಡಾಲರ್‌ (ಸುಮಾರು 8 ಕೋಟಿ) ಅಥವಾ ಅದಕ್ಕಿಂತ ಹೆಚ್ಚಿನ ಹಣ ನೀಡಿದ್ದಾರೆ. ಜೊತೆಗೆ, 36 ಬಿಲಿಯನೇರ್‌ಗಳು 50,000 ಡಾಲರ್‌ನಿಂದ 999,999 ಡಾಲರ್‌ ವರೆಗೆ ಕೊಡುಗೆ ನೀಡಿದ್ದಾರೆ. ಇದನ್ನೂ ಓದಿ: ಸಹರಾ ಮರುಭೂಮಿಯಲ್ಲಿ ಭಾರೀ ಮಳೆ – 50 ವರ್ಷದ ನಂತರ ಕೆರೆಗಳು ಭರ್ತಿ

    ಹ್ಯಾರಿಸ್‌ ಬೆಂಬಲಿತ ಬಿಲಿಯನೇರ್‌ಗಳು ಯಾರು?
    * ಮೈಕೆಲ್ ಬ್ಲೂಮ್‌ಬರ್ಗ್ (ಮಾಜಿ ನ್ಯೂಯಾರ್ಕ್ ಮೇಯರ್, ಬ್ಲೂಮ್‌ಬರ್ಗ್)
    * ಆರ್ಥರ್ ಬ್ಲಾಂಕ್ (ಅಟ್ಲಾಂಟಾ ಫಾಲ್ಕನ್ಸ್)
    * ರೀಡ್ ಹಾಫ್‌ಮನ್ (ಲಿಂಕ್ಡ್‌ಇನ್)
    * ವಿನೋದ್ ಖೋಸ್ಲಾ (ಖೋಸ್ಲಾ ವೆಂಚರ್ಸ್)
    * ಡಸ್ಟಿನ್ ಮಾಸ್ಕೋವಿಟ್ಜ್ (ಫೇಸ್‌ಬುಕ್)
    * ಸ್ಟೀವನ್ ಸ್ಪೀಲ್ಬರ್ಗ್ (ಹಾಲಿವುಡ್ ನಿರ್ದೇಶಕ)
    ಇವುಗಳಲ್ಲಿ ಕೆಲವು ಸೇರಿವೆ:

    50,000 ದಿಂದ 999,999 ಡಾಲರ್‌ ವರೆಗೆ ಕೊಡುಗೆ ನೀಡಿದ ಬಿಲಿಯನೇರ್ಸ್‌:
    * ಟೋರಿ ಬರ್ಚ್ (ಫ್ಯಾಶನ್ ಡಿಸೈನರ್)
    * ರೀಡ್ ಹೇಸ್ಟಿಂಗ್ಸ್ (ನೆಟ್‌ಫ್ಲಿಕ್ಸ್)
    * ಕ್ರಿಸ್ ಲಾರ್ಸೆನ್ (ರಿಪಲ್)
    * ಲಾರೆನ್ ಪೊವೆಲ್ ಜಾಬ್ಸ್ (ಆಪಲ್)

    ಡೊನಾಲ್ಡ್ ಟ್ರಂಪ್ ಬೆಂಬಲಿತ ಬಿಲಿಯನೇರ್
    ಅತ್ಯಂತ ಶ್ರೀಮಂತ ಮತ್ತು ಕಾರ್ಮಿಕ ವರ್ಗದ ಚಾಂಪಿಯನ್ ಆಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ಟ್ರಂಪ್, 49 ಬಿಲಿಯನೇರ್‌ಗಳಿಂದ ಗಮನಾರ್ಹ ಬೆಂಬಲ ಗಳಿಸಿದ್ದಾರೆ.
    * ಮಿರಿಯಮ್ ಅಡೆಲ್ಸನ್ (ಲಾಸ್ ವೇಗಾಸ್ ಸ್ಯಾಂಡ್ಸ್ ಕಾರ್ಪೊರೇಷನ್)
    * ಡಾನ್ ಅಹೆರ್ನ್ (ಲಾಸ್ ವೇಗಾಸ್ ನಿರ್ಮಾಣ)
    * ಡಯೇನ್ ಹೆಂಡ್ರಿಕ್ಸ್ (ಎಬಿಸಿ ಪೂರೈಕೆ)
    * ಲಿಂಡಾ ಮೆಕ್ ಮಹೊನ್ (WWE)
    * ಸ್ಟೀವ್ ವೈನ್ (ವೈನ್ ರೆಸಾರ್ಟ್ಸ್)

    50,000 ದಿಂದ 999,999 ಡಾಲರ್‌ ವರೆಗೆ ಕೊಡುಗೆ ನೀಡಿದ ಬಿಲಿಯನೇರ್ಸ್‌:
    * ಟಿಲ್ಮನ್ ಫೆರ್ಟಿಟ್ಟಾ (ಹೂಸ್ಟನ್ ರಾಕೆಟ್ಸ್)
    * ಜಾನ್ ಪಾಲ್ಸನ್ (ಪಾಲ್ಸನ್ & ಕಂ.)
    * ಥಾಮಸ್ ಸೀಬೆಲ್ (ಸೀಬೆಲ್ ಸಿಸ್ಟಮ್ಸ್)

  • ಸ್ವಂತ ಕಂಪನಿ ತೆರೆದ ಮಹಿಳೆಯರು: ಬಿಲಿಯನೇರ್ ಪಟ್ಟಿಯಲ್ಲಿ ನೈಕಾ ಸಂಸ್ಥಾಪಕಿ

    ಸ್ವಂತ ಕಂಪನಿ ತೆರೆದ ಮಹಿಳೆಯರು: ಬಿಲಿಯನೇರ್ ಪಟ್ಟಿಯಲ್ಲಿ ನೈಕಾ ಸಂಸ್ಥಾಪಕಿ

    ನವದೆಹಲಿ: ಸ್ವಂತ ಕಂಪನಿ ತೆರೆದು ಬಿಲಿಯನೇರ್ ಆದ ಮಹಿಳೆಯರ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ನೈಕಾ ಕಂಪನಿಯ ಸಂಸ್ಥಾಪಕಿ ಫಲ್ಗುಣಿ ನಾಯರ್ ಸ್ಥಾನ ಪಡೆದಿದ್ದಾರೆ.

    ನೈಕಾ ಭಾರತೀಯ ಇ-ಕಾಮರ್ಸ್ ಕಂಪನಿಯಾಗಿದ್ದು, ಇದನ್ನು 2012ರಲ್ಲಿ ಫಲ್ಗುಣಿ ನಾಯರ್ ಸ್ಥಾಪಿಸಿದ್ದರು. ಮುಂಬೈನಲ್ಲಿ ನೈಕಾದ ಪ್ರಧಾನ ಕಛೇರಿ ಇದ್ದು, ಇದು ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್ ಹಾಗೂ 84 ಆಫ್‌ಲೈನ್ ಸ್ಟೋರ್‌ಗಳಲ್ಲಿ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ.

    ಹುರುನ್ ಸಂಶೋಧನಾ ಸಂಸ್ಥೆ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 58 ವರ್ಷದ ಫಲ್ಗುಣಿ ನಾಯರ್ 7.6 ಬಿಲಿಯನ್ ಡಾಲರ್(ಸುಮಾರು 57 ಸಾವಿರ ಕೋಟಿ ರೂ.)ನ ಒಡತಿಯಾಗಿದ್ದಾರೆ. ಇದನ್ನೂ ಓದಿ: ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್

    ವಿಶ್ವದ ಟಾಪ್ 10 ಮಹಿಳಾ ಸ್ವಯಂ ನಿರ್ಮಿತ ಬಿಲಿಯನೇರ್‌ಗಳಲ್ಲಿ ಭಾರತದ ಫಲ್ಗುಣಿ ನಾಯರ್ ಸೇರಿದಂತೆ ಚೀನಾದ 8 ಮಹಿಳೆಯರು ಹಾಗೂ ಅಮೆರಿಕಾ, ಬ್ರಿಟನ್‌ನ ತಲಾ ಇಬ್ಬರು ಮಹಿಳೆಯರು ಸೇರಿದ್ದಾರೆ. ಇದನ್ನೂ ಓದಿ: ಫಲಿತಾಂಶ ಏನೇ ಬರಲಿ, ಇನ್ನೂ ಬಲಿಷ್ಠವಾಗಿ ಮರಳುತ್ತೇನೆ: ಇಮ್ರಾನ್ ಖಾನ್

    2022ರ ವರ್ಷದ ಮಹಿಳಾ ಸ್ವಯಂ ನಿರ್ಮಿತ ಬಿಲಿಯನೇರ್ ಪಟ್ಟಿಯಲ್ಲಿ 16 ದೇಶಗಳ 124 ಮಹಿಳೆಯರಿದ್ದಾರೆ. ಇದರಲ್ಲಿ 19 ಮಹಿಳೆಯರು ಹೊಸಬರಾಗಿದ್ದಾರೆ.