Tag: ಬಿರುದು

  • ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ 16 ವರ್ಷ

    ದರ್ಶನ್ ಚಾಲೆಂಜಿಂಗ್ ಸ್ಟಾರ್ ಆಗಿ 16 ವರ್ಷ

    ಬೆಂಗಳೂರು: ನಟ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿ ಮೇ 23ಕ್ಕೆ 16 ವರ್ಷವಾಗಿದೆ.

    ಮೇ 23 ರಂದು ಚಾಲೆಂಜಿಂಗ್ ಸ್ಟಾರ್ ಬಿರುದು ಸಿಕ್ಕಿ 16 ವರ್ಷ ಆಗಿದಕ್ಕೆ ಹಾಗೂ ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕೆ ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಜಮಾಯಿಸಿದ್ದರು.

    2003ರಲ್ಲಿ ದರ್ಶನ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ಎಂಬ ಬಿರುದು ಸಿಕ್ಕಿದೆ. ಇದಾದ ಬಳಿಕ ತಮ್ಮ ನೆಚ್ಚಿನ ನಟ ದರ್ಶನ್ ಅವರ ಅಭಿಮಾನಿಗಳು, ‘ಡಿ-ಬಾಸ್’, ‘ಬಾಕ್ಸ್ ಆಫೀಸ್ ಸುಲ್ತಾನ್’ ಎಂಬ ಅನೇಕ ಬಿರುದುಗಳನ್ನು ಅವರ ಅಭಿಮಾನಿಗಳು ನೀಡಿದ್ದಾರೆ.

    ದರ್ಶನ್ ಅವರು 2001ರಲ್ಲಿ ‘ಮೆಜೆಸ್ಟಿಕ್’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ನಟನಾಗಿ ಎಂಟ್ರಿ ಕೊಟ್ಟಿದ್ದಾರೆ. ಬಳಿಕ ದರ್ಶನ್ ಅವರು ‘ಕರಿಯಾ’, ‘ನಮ್ಮ ಪ್ರೀತಿಯ ರಾಮು’ ಹಾಗೂ ‘ಕಲಾಸಿಪಾಳ್ಯ’ ಚಿತ್ರ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    ದರ್ಶನ್ ಅವರು ಬಹುನಿರೀಕ್ಷಿತ 50ನೇ ಚಿತ್ರ ‘ಮುನಿರತ್ನ ಕುರುಕ್ಷೇತ್ರ’ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರ ರಿಲೀಸ್‍ಗೆ ಸಿದ್ಧವಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಕಾಣುತ್ತಿದೆ.

  • ಸತ್ತ ಕೋಳಿಮರಿಯೊಂದಿಗೆ ಆಸ್ಪತ್ರೆಗೆ ಓಡಿದ- ಬಾಲಕನ ಮುಗ್ಧತೆಗೆ ಪೇಟಾ ಫುಲ್ ಫಿದಾ

    ಸತ್ತ ಕೋಳಿಮರಿಯೊಂದಿಗೆ ಆಸ್ಪತ್ರೆಗೆ ಓಡಿದ- ಬಾಲಕನ ಮುಗ್ಧತೆಗೆ ಪೇಟಾ ಫುಲ್ ಫಿದಾ

    ಐಜಾಲ್: ತಾನು ಸೈಕಲ್ ಹತ್ತಿಸಿದ ಕೋಳಿಮರಿಯ ಜೀವ ಉಳಿಸಿಕೊಡಿ ಎಂದು ಆಸ್ಪತ್ರೆಗೆ ಓಡಿ ಬಂದಿದ್ದ ಪುಟ್ಟ ಬಾಲಕನೊಬ್ಬನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ 6ರ ಪೋರನ ಪ್ರಾಣಿ ಕಾಳಜಿ ಮೆಚ್ಚಿ ಪೇಟಾ(ಪ್ರಾಣಿ ದಯಾ ಸಂಘ) ಕಾಂಪಸಿನೇಟ್ ಕಿಡ್ ಎಂದು ಬಿರುದು ನೀಡಿದೆ.

    ಮಿಜೋರಾಂ ರಾಜ್ಯದ ಡೆರೆಕ್ ಸಿ ಲಾಲ್ ಚಹನಿಮಾ(6) ತನ್ನ ಮುಗ್ಧತೆಯಿಂದ ಎಲ್ಲರ ಮನ ಗೆದ್ದಿದ್ದಾನೆ. ಈತ ಆಟವಾಡುತ್ತಿದ್ದಾಗ ಪಕ್ಕದ ಮನೆಯ ಕೋಳಿ ಮರಿಯ ಮೇಲೆ ಆಕಸ್ಮಾತ್ತಾಗಿ ಸೈಕಲ್ ಹತ್ತಿಸಿದ್ದನು. ಪರಿಣಾಮ ಕೋಳಿ ಮರಿ ಬಿದ್ದಿದ್ದು, ಇದರಿಂದ ಗಾಬರಿಗೊಂಡ ಬಾಲಕ ತನ್ನಲ್ಲಿದ್ದ 10 ರೂ. ಹಣವನ್ನು ಹಿಡಿದುಕೊಂಡು ಆಸ್ಪತ್ರೆಗೆ ಓಡಿದ್ದಾನೆ. ಅಲ್ಲದೆ ಅಲ್ಲಿ ತನ್ನ ಕೈಯಲ್ಲಿದ್ದ ಹಣ ನೀಡಿ ಕೋಳಿ ಮರಿಯನ್ನು ಬದುಕಿಸಿಕೊಡುವಂತೆ ಗೋಗರೆದಿದ್ದಾನೆ. ಇದನ್ನು ಆಸ್ಪತ್ರೆಯಲ್ಲಿದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಬಳಿಕ ಬಾಲಕನ ಮುಗ್ಧತೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಈ ಫೋಟೋ ಸಾಕಷ್ಟು ನೆಟ್ಟಿಗರ ಮನ ಗೆದ್ದಿತ್ತು.

    ಈ ಬಾಲಕ ಒಂದು ಕೈಯಲ್ಲಿ ಹತ್ತು ರೂ. ಹಾಗೂ ಇನ್ನೊಂದು ಕೈಯಲ್ಲಿ ಕೋಳಿ ಮರಿ ಹಿಡಿದುಕೊಂಡು ಇರುವ ಫೋಟೋವನ್ನು ಸಂಗ ಸೇಸ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು. ಈ ಮುಗ್ಧ ಫೋಟೋಗೆ 1 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ 90 ಸಾವಿರಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ.

    ಇದನ್ನು ಗಮನಿಸಿದ ಭಾರತೀಯ ಪ್ರಾಣಿ ದಯಾ ಸಂಘವು ಈ ಬಾಲಕನ ಮುಗ್ಧತೆಗೆ ಕಾಂಪಸಿನೇಟ್ ಕಿಡ್ ಬಿರುದು ನೀಡಿ, ಈತನಿಗೆ ಪ್ರಾಣಿಗಳ ಮೇಲಿರುವ ಪ್ರೀತಿ, ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದಕ್ಕೂ ಮೊದಲು ಬಾಲಕನ ಶಾಲೆ ಕೂಡ ಆತನ ಕಾರ್ಯವನ್ನು ಮೆಚ್ಚಿ ಸನ್ಮಾನಿಸಿದೆ.

    https://www.facebook.com/sanga.says/posts/2544025018945443:0

  • ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ, ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ – ಅಂಬರೀಶ್

    ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ, ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ – ಅಂಬರೀಶ್

    ಗದಗ: ರೆಬೆಲ್ ಸ್ಟಾರ್ ಅಂಬಿಗೆ 60ನೇ ವಸಂತದ ಸಂದರ್ಭದಲ್ಲಿ ಗದಗ ನಗರಕ್ಕೆ ಆಗಮಿಸಿದ್ದರು. ದಿಗ್ಗಜನಿಗೆ ಅದ್ಭುತ ಸ್ವಾಗತ ಕೋರಿ ಗಂಡ-ಬೇರುಂಡ ಲಾಂಚನವಿರುವ ಚಿನ್ನದ ಸರವನ್ನು ಹಾಕಿ `ಕಲಾಭೂಷಣ’ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

    2012ರ ಸೆಪ್ಟೆಂಬರ್ 20ರಂದು ಬಜಾರ್ ಭೀಮನಿಗೆ ಕರ್ನಾಟಕ ಚಲನಚಿತ್ರ ಪ್ರದರ್ಶಕರ ಮಹಾಮಂಡಳಿ ಹಾಗೂ ಅಂಬಿ ಅಭಿಮಾನಿ ಬಳಗದಿಂದ ಅದ್ಭುತ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ `ಅಂಬಿ-ಅಭಿನಂದನೆ-ಅಭಿವಂದನೆ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.

    ಈ ಕನ್ವರ್ ಲಾಲ್‍ನ ಕಾರ್ಯಕ್ರಮ ಕಣ್ಣು ತುಂಬಿಕೊಳ್ಳಲು ಚಲನಚಿತ್ರದ ಗಣ್ಯಾತಿ ಗಣ್ಯರನ್ನು ಕರೆತರಲಾಗಿತ್ತು. ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಅಂಬರೀಶ್, ಸಂಕಷ್ಟಗಳ ಮಧ್ಯೆಯೂ ಉತ್ತರ ಕರ್ನಾಟಕದ ಜನತೆ ಈ ನಟನಿಗೆ ತೋರಿದ ಪ್ರೀತಿ, ಗೌರವವನ್ನು ಎಷ್ಟು ಹಣ ಕೊಟ್ಟರೂ ಈ ವಿಶ್ವಾಸ ಗಳಿಸಲಾಗುವುದಿಲ್ಲ. ನನ್ನ ರಕ್ತದ ಕಣ ಕಣದಲ್ಲಿ ಅಭಿಮಾನಿಗಳ ಬೆವರಿನ ಕಣವಿದೆ. ಅದಕ್ಕಾಗಿ ನನಗೆ ಒಳ್ಳೆತನ ಬಂದಿದೆ ಎಂದರು.

    ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಪ್ರಮುಖ ಬೀದಿಗಳಲ್ಲಿ ಇವರನ್ನು ಮೆರವಣಿಗೆ ಮಾಡಲಾಗಿತ್ತು. ಅಭಿಮಾನಿಗಳು ನೀಡುವ ಪ್ರೀತಿಯ ಮುಂದೆ ಯಾವ ಪ್ರಶಸ್ತಿ ದೊಡ್ಡದಲ್ಲ. ನನಗೆ ಅಧಿಕಾರದ, ಹಣದ ದಾಹವಿಲ್ಲ. ಇನ್ನು 60 ಆಗದಂತೆ ಕಾಣುವ ಈ ದೇಹ, 15 ಜನ ಮುಖ್ಯಮಂತ್ರಿಗಳನ್ನು ನೋಡಿದ್ದೇನೆ, ಪ್ರಧಾನಿಗಳ ಜೊತೆ ಕುಳಿತವನು ಸಾಕಷ್ಟು ಅನುಭವವಿದೆ ಎಂದು ಅಂಬರೀಶ್ ನಮ್ರವಾಗಿ ನುಡಿದರು. ನಾನು ಪಿಯುಸಿ ಫೇಲಾಗಿದ್ದೇನೆ. ಆದರೆ ನನಗೆ ವಿದ್ಯೆ, ಛಲವಿದೆ ಎಂಬ ಅಂಬಿ ಹೇಳಿಕೆ ನೆರೆದವರಲ್ಲಿ ಮತ್ತಷ್ಟು ಆತ್ಮಸ್ಥೈರ್ಯ ಮೂಡಿಸಿತು.

    ಅಂದಿನ ಆ ಕಾರ್ಯಕ್ರಮದಲ್ಲಿ ನಿರ್ದೇಶಕ ಎಸ್. ನಾರಾಯಣ ಕುಚಿಕು ಗೆಳೆಯನಿಗೆ ಜೈಕಾರ ಕೂಗಿದರು. 40 ವರ್ಷ ಚಿತ್ರರಂಗದಲ್ಲಿ ಸೇವೆ ಮಾಡಿರುವ ಅಂಬರೀಶ್ ಅವರನ್ನು ಯಾವ ವಿಶ್ವವಿದ್ಯಾಲಯ ಕೂಡ ಗುರುತಿಸಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು.

    ನಂತರ ಮಾತನಾಡಿದ ಚಿತ್ರನಟಿ ಸುಮಲತಾ, ಉತ್ತರ ಕರ್ನಾಟಕದ ಜನತೆ ತೋರಿದ ಪ್ರೀತಿ ಅನನ್ಯ. ಇದರ ಮುಂದೆ ಅಂಬರೀಶ್ ಅವರಿಗೆ ಸರ್ಕಾರದ ಯಾವ ಪ್ರಶಸ್ತಿ ದೊಡ್ಡದಲ್ಲ. ಅಂತಹದ್ದರ ಬಗ್ಗೆ ಬೇಸರ ಮಾಡಿಕೊಂಡವರು ಅಂಬರೀಶ್ ಅಲ್ಲ ಎಂದರು.

    1983 ರಿಂದ ಗದಗನಲ್ಲಿ ಅನಿಲ್ ಗರಗ ಎಂಬವರು ಅಂಬರೀಶ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ. ಅಂಬರೀಶ್ ಅವರ ಅಗಲಿಕೆಯಿಂದ ಆ ಅಭಿಮಾನಿ ಬಳಗ ಕಣ್ಣಿರಿಟ್ಟಿತು. 2012ರ ವೇಳೆ ಕಲಿಯುಗದ ಕರ್ಣ, ಇಂದ್ರಜಿತ್ ಕಾರ್ಯಕ್ರಮಕ್ಕೆ ಸಹಸ್ರಾರು ಅಭಿಮಾನಿಗಳು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೃಜನ್‍ಗೆ ಸಿಕ್ತು ಬಿರುದು

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸೃಜನ್‍ಗೆ ಸಿಕ್ತು ಬಿರುದು

    ಬೆಂಗಳೂರು: ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರನ್ನು ವಿದೇಶದಲ್ಲಿ ಗೌರವಿಸಲಾಗಿತ್ತು. ಇಬ್ಬರು ಗೆಳೆಯರನ್ನು ಸನ್ಮಾನ ಮಾಡುವುದರ ಜೊತೆಗೆ ಇಬ್ಬರಿಗೂ ಬಿರುದನ್ನು ನೀಡಿದ್ದಾರೆ.

    63ನೇ ಕನ್ನಡ ರಾಜ್ಯೋತ್ಸವದಂದು ಗೆಳೆಯರಾದ ದರ್ಶನ್ ಹಾಗೂ ಸೃಜನ್ ಲೋಕೇಶ್ ಅವರನ್ನು ವಿದೇಶದಲ್ಲಿ ಗೌರವಿಸಲಾಗಿದೆ. ಈ ವೇಳೆ ದರ್ಶನ್ ಅವರಿಗೆ ‘ಕರುನಾಡ ಕಲಾಕುಲತಿಲಕ’ ಬಿರುದು ನೀಡಿದರೆ, ಸೃಜನ್ ಅವರಿಗೆ ‘ಅಭಿನಯ ರತ್ನ’ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತು.

    ಕತಾರ್ ದೇಶದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಆ ದೇಶದ ಕನ್ನಡ ಸಂಘವೊಂದು ರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮಕ್ಕೆ ದರ್ಶನ್ ಹಾಗೂ ಸೃಜನ್ ಲೋಕೇಶ್ ಅತಿಥಿಯಾಗಿ ಭಾಗವಹಿಸಿದ್ದರು.

    ಅಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಸೃಜನ್ ಅವರನ್ನು ಅಲ್ಲಿನ ಸಂಘ ಗೌರವಿಸಿದೆ. ಕತಾರ್ ನಲ್ಲಿದ್ದ ಕನ್ನಡಿಗರು ತಮ್ಮ ನೆಚ್ಚಿನ ನಟ ದರ್ಶನ್ ಹಾಗೂ ಸೃಜನ್ ಅವರನ್ನು ನೋಡಿ ಸಂತೋಷಪಟ್ಟಿದ್ದಾರೆ.

    ಸದ್ಯ ದರ್ಶನ್ ಹಾಗೂ ಸೃಜನ್ ಅವರನ್ನು ಸನ್ಮಾನ ಮಾಡುತ್ತಿರುವ ಫೋಟೋವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಸನ್ಮಾನ ಮಾಡಿರುವುದು ಅಭಿಮಾನಿಗಳಲ್ಲಿ ಖುಷಿ ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಚಾಲೆಂಜಿಂಗ್ ಸ್ಟಾರ್ ಮುಡಿಗೆ ಮತ್ತೊಂದು ಬಿರುದು!

    ಚಾಲೆಂಜಿಂಗ್ ಸ್ಟಾರ್ ಮುಡಿಗೆ ಮತ್ತೊಂದು ಬಿರುದು!

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಈಗಾಗಲೇ ಅನೇಕ ಬಿರುದುಗಳಿವೆ. ಅವರ ಸರಳ ವ್ಯಕ್ತಿತ್ವ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಅನೇಕ ಹೆಸರಿನಿಂದ ಅವರನ್ನು ಕರೆಯುತ್ತಿದ್ದು, ಈಗ ದರ್ಶನ್ ಮುಡಿಗೆ ಮತ್ತೊಂದು ಬಿರುದು ಸೇರಿದೆ.

    ದರ್ಶನ್ ಅವರಿಗೆ ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ದಚ್ಚು ಹೀಗೆ ಅನೇಕ ಹೆಸರಿನಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇಷ್ಟು ಹೆಸರಿನ ಜೊತೆಗೆ ದರ್ಶನ್ ಅವರಿಗೆ ಈಗ ‘ಮೊನಾರ್ಕ್ ಆಫ್ ಸ್ಯಾಂಡಲ್ ವುಡ್’ ಬಿರುದು ದೊರೆತಿದೆ.

    ಮೊನಾರ್ಕ್ ಆರ್ಫ ಸ್ಯಾಂಡಲ್‍ವುಡ್ ಎಂದರೆ ‘ಸ್ಯಾಂಡಲ್‍ವುಡ್ ರಾಜಪ್ರಭುತ್ವದ ಸಾರ್ವಭೌಮ’ ಎಂಬ ಅರ್ಥ ಎಂದು ಹೇಳಲಾಗಿದೆ. ದರ್ಶನ್ ಅವರ ‘ಡಿ ಲಿಗಸ್ಸಿ’ ಅಭಿಮಾನಿಗಳ ತಂಡ ಈ ಬಿರುದನ್ನು ನೀಡಿದೆ.

    https://twitter.com/Darshanfans171/status/1013448284512378886

    ದರ್ಶನ್ ಸಾಕಷ್ಟು ಸಿನಿಮಾ ಸಾಧನೆ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ದರ್ಶನ್ ಅವರ ಈ ಕೆಲಸಗಳನ್ನು ಕಂಡು ಅಭಿಮಾನಿಗಳು ಮೊನಾರ್ಕ್ ಆಫ್ ಸ್ಯಾಂಡಲ್‍ವುಡ್ ಎಂಬ ಹೊಸ ಬಿರುದು ನೀಡಿ ಅವರಿಗೆ ಸನ್ಮಾನ ಮಾಡಿದ್ದಾರೆ. ಅಲ್ಲದೇ ತಮ್ಮ ನೆಚ್ಚಿನ ನಟನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಈ ಹಿಂದೆ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ. ನಾಗೇಂದ್ರ ಪ್ರಸಾದ್ ಅವರು `ಶತಸೋದರಾಗ್ರಜಾ ಶರವೀರ’ ಎಂದು ದರ್ಶನ್ ಅವರಿಗೆ ಹೊಸ ಬಿರುದನ್ನು ನೀಡಿದ್ದರು. ಅಲ್ಲದೇ ಹಿರಿಯ ನಟ ಶಂಕರ್ ಅಶ್ವಥ್ ದರ್ಶನ್ ಅವರಿಗೆ `ದೇವರಂಥ ಮನುಷ್ಯ’ ಎಂದು ಕರೆದು ಬಿರುದು ಕೊಟ್ಟಿದ್ದರು.

  • ದರ್ಶನ್ ಮುಡಿಗೇರಿತು ಮತ್ತೊಂದು ಬಿರುದು

    ದರ್ಶನ್ ಮುಡಿಗೇರಿತು ಮತ್ತೊಂದು ಬಿರುದು

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಈಗಾಗಲೇ ಅನೇಕ ಬಿರುದುಗಳಿವೆ. ಅವರ ಸರಳ ವ್ಯಕ್ತಿತ್ವ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಅನೇಕ ಹೆಸರಿನಿಂದ ಅವರನ್ನು ಕರೆಯುತ್ತಾರೆ.

    ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ದಚ್ಚು ಹೀಗೆ ಅನೇಕ ಹೆಸರಿನಿಂದ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. ಇಷ್ಟು ಹೆಸರಿನ ಜೊತೆಗೆ ದರ್ಶನ್ ಅವರಿಗೆ ಈಗ ಮತ್ತೊಂದು ಬಿರುದು ಅವರ ಮುಡಿಗೆ ಸೇರಿಕೊಂಡಿದೆ.

    ದರ್ಶನ್ ಅವರ ಸ್ನೇಹಿತ ಹಾಗೂ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ. ನಾಗೇಂದ್ರ ಪ್ರಸಾದ್ ಅವರು `ಶತಸೋದರಾಗ್ರಜಾ ಶರವೀರ’ ಎಂದು ಹೊಸ ಬಿರುದನ್ನು ನೀಡಿದ್ದಾರೆ.

    ದರ್ಶನ್ ನೂರಾರು ಜನರ ಸಹೋದರ ಹಾಗೂ ತಮ್ಮ ಸುತ್ತಮುತ್ತ ಇರುವವರನ್ನ ಸಹೋದರರಂತೆ ಕಾಣುತ್ತಾರೆ. ಈ ಕಾರಣಕ್ಕೆ ಶತಸೋದರಾಗ್ರಜಾ ಎಂದು ಕರೆಯಲಾಗಿದೆ. ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿರುವ ಕಾರಣ ಶರವೀರ ಎಂದು ಬಿರುದು ನೀಡಲಾಗಿದೆ ಎಂದು ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.

    ವಿ.ನಾಗೇಂದ್ರ ಪ್ರಸಾದ್ ಅಭಿನಯಿಸಿ ನಿರ್ದೇಶನ ಮಾಡಿರುವ ಗೂಗಲ್ ಸಿನಿಮಾದ ಹಾಡುಗಳನ್ನು ದರ್ಶನ್ ವೀಕ್ಷಣೆ ಮಾಡಿದ್ದು, ಹಾಡುಗಳನ್ನ ಮೆಚ್ಚಿಕೊಂಡು ಸಿನಿಮಾ ತಂಡಕ್ಕೆ ಶುಭ ಹಾರೈಸಿದ್ದಾರೆ. ಸದ್ಯಕ್ಕೆ ಚಿತ್ರೀಕರಣ ಮುಗಿಸಿ ಪ್ರಚಾರ ಪ್ರಾರಂಭ ಮಾಡಿರುವ ಗೂಗಲ್ ಚಿತ್ರ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.