Tag: ಬಿರುಗಾಳಿ

  • ಕಬಡ್ಡಿ ಪಂದ್ಯದ ವೇಳೆ ಹಠಾತ್ ಬಿರುಗಾಳಿ – ವಿದ್ಯುತ್ ತಂತಿ ತಗುಲಿ ಮೂವರು ಸಾವು

    ಕಬಡ್ಡಿ ಪಂದ್ಯದ ವೇಳೆ ಹಠಾತ್ ಬಿರುಗಾಳಿ – ವಿದ್ಯುತ್ ತಂತಿ ತಗುಲಿ ಮೂವರು ಸಾವು

    ರಾಯ್ಪುರ: ಛತ್ತೀಸ್‌ಗಢದ (Chhattisgarh) ಕೊಂಡಗಾಂವ್ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯದ (Kabaddi Match) ವೇಳೆ ಬಿರುಗಾಳಿ (Storm) ಬೀಸಿದ ಪರಿಣಾಮ ಟೆಂಟ್‌ಗೆ ವಿದ್ಯುತ್ ತಂತಿ ತಗುಲಿ ಮೂವರು ಸಾವನ್ನಪ್ಪಿದ್ದಾರೆ.

    ಕಬ್ಬಡಿ ಆಟಗಾರ ಸತೀಶ್ ನೇತಮ್, ಸ್ಥಳೀಯ ನಿವಾಸಿಗಳಾದ ಶ್ಯಾಮ್‌ಲಾಲ್ ನೇತಮ್ ಮತ್ತು ಸುನಿಲ್ ಶೋರಿ ಮೃತರೆಂದು ಗುರುತಿಸಲಾಗಿದೆ. ಇದನ್ನೂ ಓದಿ: ತುಮಕೂರಲ್ಲಿ ಇಬ್ಬರು ಮಕ್ಕಳ ಜೊತೆ ತಾಯಿ ನೇಣುಬಿಗಿದುಕೊಂಡು ಆತ್ಮಹತ್ಯೆ ಕೇಸ್;‌ ಮಹಿಳೆಯ ಪತಿ, ಅತ್ತೆ ಬಂಧನ

    ಶನಿವಾರ ರಾತ್ರಿ ಬಡೇರಾಜ್‌ಪುರ ಅಭಿವೃದ್ಧಿ ಬ್ಲಾಕ್‌ನ ರಾವಸ್ವಾಹಿ ಗ್ರಾಮದಲ್ಲಿ ಕಬಡ್ಡಿ ಪಂದ್ಯ ನಡೆಯುತ್ತಿರುವಾಗ ಈ ಅವಘಡ ಸಂಭವಿಸಿದೆ. ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್

    ಗ್ರಾಮದಲ್ಲಿ ಶನಿವಾರ ಕಬ್ಬಡಿ ಪಂದ್ಯವನ್ನು ಆಯೋಜಿಸಲಾಗಿತ್ತು. ಅಲ್ಲದೇ ಪ್ರೇಕ್ಷಕರಿಗಾಗಿ ಟೆಂಟ್ ಅನ್ನು ನಿರ್ಮಿಸಲಾಗಿತ್ತು. ಪಂದ್ಯ ನಡೆಯುತ್ತಿದ್ದ ವೇಳೆ ಹಠಾತ್ ಬಿರುಗಾಳಿ ಬೀಸಿದ ಪರಿಣಾಮ ಟೆಂಟ್‌ನ ಕಬ್ಬಿಣದ ಕಂಬಕ್ಕೆ 11-ಕೆವಿ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ಈ ದುರ್ಘಟನೆ ಸಂಭವಿಸಿದೆ.

    ಕೂಡಲೇ ಸ್ಥಳೀಯರು ಗಾಯಗೊಂಡ ಆರು ಮಂದಿಯನ್ನು ವಿಶ್ರಾಂಪುರಿಯ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲಾಗಲೇ ಮೂವರು ಸಾವನ್ನಪ್ಪಿದ್ದು, ಗಾಯಗೊಂಡ ಮೂವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

  • ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು

    ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು

    ಗದಗ: ಜಿಲ್ಲೆಯ ಖಾನತೋಟ (Khanathota) ಓಣಿಯಲ್ಲಿ ಬಿರುಗಾಳಿ ಸಹಿತ ಮಳೆಗೆ ಬೃಹತ್ ಗಾತ್ರದ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ.

    ಸತತ ಮಳೆಯಿಂದ ಮರದ ಬುಡ ಕೊಳೆತ ಸ್ಥಿತಿಯಲ್ಲಿತ್ತು. ಮಂಗಳವಾರ ಬೀಸಿದ ಬಿರುಗಾಳಿಯಿಂದ ಬೇರುಗಳು ಸಡಿಲಗೊಂಡು ರಸ್ತೆಗೆ ಉರುಳಿದೆ. ಹತ್ತಿರದಲ್ಲೇ ಇದ್ದ ವಿದ್ಯುತ್ ಕಂಬವು ನೆಲಕ್ಕಪಳಿಸಿದೆ. ವಿದ್ಯುತ್ ಕಂಬ ತುಂಡಾಗಿ ಬಿದ್ದ ಪರಿಣಾಮ ಕೆಲಕಾಲ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು. ಮರ ಹಾಗೂ ವಿದ್ಯುತ್ ಕಂಬ ಬಿದ್ದಾಗ ರಸ್ತೆಯಲ್ಲಿ ಜನ ಸಂಚಾರ ಇಲ್ಲದಿದ್ದುದರಿಂದ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಬಿರುಗಾಳಿ (Storm) ಮಳೆಗೆ ಖಾನತೋಟ ಬಡಾವಣೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಗಿತ್ತು. ನಂತರ ನಗರಸಭೆ ಹಾಗೂ ಅರಣ್ಯ ಇಲಾಖೆಯವರು ಮರ ತೆರವುಗೊಳಿಸಿದರು. ಇನ್ನು ಹೆಸ್ಕಾಂ ಸಿಬ್ಬಂದಿ ಸಹ ವಿದ್ಯುತ್ ಕಂಬ ತೆರವುಗೊಳಿಸಿದರು. ಇದರಿಂದ ಕೆಲವು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದೀಗ ಗ್ರಾಮಸ್ಥರು, ಅಪಾಯಕಾರಿ ಹಳೆಯ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

  • ಅಮೆರಿಕದಲ್ಲಿ ಬಿರುಗಾಳಿ ಅಬ್ಬರಕ್ಕೆ 25 ಮಂದಿ ಬಲಿ

    ಅಮೆರಿಕದಲ್ಲಿ ಬಿರುಗಾಳಿ ಅಬ್ಬರಕ್ಕೆ 25 ಮಂದಿ ಬಲಿ

    – 5,000ಕ್ಕೂ ಹೆಚ್ಚು ಕಟ್ಟಡಗಳು ನೆಲಸಮ

    ವಾಷಿಂಗ್ಟನ್: ಅಮೆರಿಕದ(America) ಸೇಂಟ್ ಲೂಯಿಸ್, ಮಿಸೌರಿ, ಕೆಂಟುಕಿ(Kentucky) ಮತ್ತು ವರ್ಜೀನಿಯಾದಲ್ಲಿ ಬಿರುಗಾಳಿ ಅಬ್ಬರಕ್ಕೆ ಕನಿಷ್ಠ 35 ಮಂದಿ ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಶುಕ್ರವಾರ ತಡರಾತ್ರಿಯಿಂದ ಈ ಪ್ರದೇಶಗಳಲ್ಲಿ ಬಿರುಗಾಳಿ(Storm) ಬೀಸುತ್ತಿದ್ದು, ಸುಮಾರು 5,000ಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗಿದೆ. ಇಲ್ಲಿಯವರೆಗೆ 25 ಮಂದಿ ಸಾವನ್ನಪ್ಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆಯುತ್ತಿದೆ ಎಂದು ಕೆಂಟುಕಿ ಗವರ್ನರ್ ಆಂಡಿ ಬೆಶಿಯನ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಹುಟ್ಟುಹಬ್ಬ – ಮೋದಿ, ಸಿದ್ದರಾಮಯ್ಯ ಸೇರಿ ಗಣ್ಯರಿಂದ ಶುಭಾಶಯ

    ಸೇಂಟ್ ಲೂಯಿಸ್‌ನ ಮೃಗಾಲಯ ಮತ್ತು ಐತಿಹಾಸಿಕ ಸ್ಮಾರಕಗಳು ಇರುವ ಫಾರೆಸ್ಟ್ ಪಾರ್ಕ್‌ನಲ್ಲಿ ಬಿರುಗಾಳಿ ಬೀಸಿದ ಪರಿಣಾಮ ಕಟ್ಟಡಗಳು ಹಾನಿಯಾಗಿವೆ. ಬಿರುಗಾಳಿ ಅಬ್ಬರಕ್ಕೆ ಗ್ರೇಟ್ ಲೇಕ್ಸ್‌ನ ಲಕ್ಷಾಂತರ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿ: ಬಿಕಿನಿಯಲ್ಲಿ ಬೀಚ್ ಬಳಿ ನಟಿ ಖುಷಿ ಕಪೂರ್ ಚಿಲ್

    ಬಿರುಗಾಳಿಯಿಂದಾಗಿ ಸೆಂಟಿನಿಯಲ್ ಕ್ರಿಶ್ಚಿಯನ್ ಚರ್ಚ್‌ನ ಒಂದು ಭಾಗ ಕುಸಿದು ಬಿದ್ದಿದೆ. ಮಿಡ್‌ವೆಸ್ಟ್ ಹಾಗೂ ಮಧ್ಯ ಅಟ್ಲಾಂಟಿಕ್‌ನಲ್ಲಿ ಸಂಭವಿಸಿದ ಚಂಡಮಾರುತ ಪರಿಣಾಮ ಬಿರುಗಾಳಿ ಬೀಸುತ್ತಿದೆ ಎನ್ನಲಾಗಿದೆ.

  • ಬಿರುಗಾಳಿ ಸಹಿತ ಮಳೆ – ರೇಷ್ಮೆ ಗೂಡಿಗೆ ಸಿಡಿಲು ಬಡಿದು ರೈತ ಸಾವು

    ಬಿರುಗಾಳಿ ಸಹಿತ ಮಳೆ – ರೇಷ್ಮೆ ಗೂಡಿಗೆ ಸಿಡಿಲು ಬಡಿದು ರೈತ ಸಾವು

    ದಾವಣಗೆರೆ: ರೇಷ್ಮೆ ಗೂಡಿಗೆ ಸಿಡಿಲು ಬಡಿದು ರೈತ ಸಾವನ್ನಪ್ಪಿದ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನಲ್ಲಿ ನಡೆದಿದೆ.

    ಹರಪನಹಳ್ಳಿ ತಾಲೂಕಿನಾದ್ಯಾಂತ ಬಿರುಗಾಳಿ ಸಹಿತ ಭಾರೀ ಮಳೆಯಾದ ಪರಿಣಾಮ ನಾನಾ ಅವಾಂತರಗಳು ಸೃಷ್ಟಿಯಾಗಿವೆ. ಮಳೆಯ ಪರಿಣಾಮ ಸಿಡಿಲು ಬಡಿದು ಹುಣಸೆಕಟ್ಟೆಯ ರೈತ ಬಸವರಾಜಪ್ಪ ಸಾವನ್ನಪ್ಪಿದ್ದಾರೆ. ಏಕಾಏಕಿ ಗಾಳಿ ಸಹಿತ ಮಳೆ ಶುರುವಾಗಿದ್ದರಿಂದ ಬಸವರಾಜಪ್ಪ ರೇಷ್ಮೆ ಗೂಡಿನ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಸಿಡಿಲು ಬಡಿದು ದುರಂತ ಸಂಭವಿಸಿದೆ. ಇದನ್ನೂ ಓದಿ: ಮುತ್ತಪ್ಪ ರೈ ಕುಟುಂಬದ ಮೇಲೆ ಸಾಕಷ್ಟು ಜನರಿಗೆ ದ್ವೇಷ ಇದೆ: ಪ್ರಕಾಶ್‌ ರೈ

    ಅಲ್ಲದೇ ಅಡವಿಹಳ್ಳಿಯ ಸಮೀಪದ ಹೊಂಬಳಗಟ್ಟೆ ಬಳಿ ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ನಂದಿಬೇವೂರಿನಲ್ಲಿಯೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಇದನ್ನೂ ಓದಿ: ಜನಿವಾರ ಹಾಕಿದ್ದಕ್ಕೆ ಸಿಇಟಿ ಪರೀಕ್ಷೆಗೆ ಕೂರಿಸದ ಪ್ರಕರಣ – ಶಿವಮೊಗ್ಗದ ದೊಡ್ಡಪೇಟೆ ಠಾಣೆಯಲ್ಲಿ FIR

    ಇನ್ನು ಬಿರು ಬೇಸಿಗೆಯಿಂದ ಬಸವಳಿದಿದ್ದ ಗಡಿ ಜಿಲ್ಲೆ ಚಾಮರಾಜನಗರದಲ್ಲಿಯೂ ವರುಣನ ಆಗಮನವಾಗಿದೆ. ಜಿಲ್ಲೆಯ ಹನೂರು ತಾಲೂಕಿನ ಅಜ್ಜಿಪುರದಲ್ಲಿ ಅರ್ಧ ಘಂಟೆಗೂ ಅಧಿಕ ಕಾಲ ಭಾರಿ ಬಿರುಗಾಳಿ ಸಹಿತ ಮಳೆ ಸುರಿದಿದೆ. ಇದನ್ನೂ ಓದಿ: ರಸ್ತೆ ಗುಂಡಿ ಬಗ್ಗೆ ದೂರು ಕೊಟ್ಟವರ ಎಕ್ಸ್ ಖಾತೆ ಬ್ಲಾಕ್; ಬಿಬಿಎಂಪಿ ನಡೆಗೆ ಸಾರ್ವಜನಿಕರ ಆಕ್ರೋಶ

  • Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

    Haveri | ಬಿರುಗಾಳಿ ಸಹಿತ ಮಳೆ – 20ಕ್ಕೂ ಅಧಿಕ ಮರಗಳು ಧರಾಶಾಹಿ, ಕಾರುಗಳು ಜಖಂ

    ಹಾವೇರಿ: ಜಿಲ್ಲೆಯ ಹಲವೆಡೆ ಸಂಜೆ 1 ಗಂಟೆ ಕಾಲ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಗೆ 20ಕ್ಕೂ ಹೆಚ್ಚು ಮರಗಳು ಧರೆಗುರುಳಿದ ಪರಿಣಾಮ 4 ಕಾರುಗಳು ಜಖಂ ಆಗಿವೆ.

    ಹಾವೇರಿ (Haveri) ನಗರದ ಮಾತ್ರವಲ್ಲದೇ ತಾಲೂಕಿನ ಹಲವೆಡೆ ವರುಣರಾಯ ಅಬ್ಬರಿಸಿದ್ದಾನೆ. ನಗರದಲ್ಲಿ 20ಕ್ಕೂ ಅಧಿಕ ಮರಗಳು ಧರೆಗೆ ಉರುಳಿವೆ. ಭಾರೀ ಗಾಳಿಗೆ ತಾಲೂಕಿನ ಕಳ್ಳಿಹಾಳ ಗ್ರಾಮದಲ್ಲಿ ಮನೆಯ ಮೇಲ್ಛಾವಣಿಗೆ ಹಾಕಿದ್ದ ತಗಡುಗಳು ಹಾರಿ ಹೋಗಿ ವಿದ್ಯುತ್ ತಂತಿಗಳ ಮೇಲೆ ಬಿದ್ದಿದೆ. ಇದನ್ನೂ ಓದಿ: ಜಾತಿಗಣತಿ ವಿರುದ್ಧ ಸಿಡಿದ ಒಕ್ಕಲಿಗರು- ವರದಿ ಜಾರಿಯಾದ್ರೆ ಸರ್ಕಾರ ಪತನದ ಎಚ್ಚರಿಕೆ

    ತಗಡುಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದಿದ್ದರಿಂದ ಕೆಲಕಾಲ ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಆದರೆ ಗಾಳಿ ಮಳೆಯ ಅಬ್ಬರ ಆರಂಭ ಆಗುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದರು. ಇದನ್ನೂ ಓದಿ: ಚಿಲ್ಲರೆ ಹಣದುಬ್ಬರ| 2019ರ ಬಳಿಕ ಕನಿಷ್ಠ ಮಟ್ಟಕ್ಕೆ ಇಳಿಕೆ

    ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮ ಮತ್ತು ನಗರಸಭೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೋಲಾರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ

    ಕೋಲಾರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಮಳೆ

    ಕೋಲಾರ: ಬಿಸಿಲಿನಿಂದ ಬಸವಳಿದಿದ್ದ ಕೋಲಾರ (Kolar) ಜಿಲ್ಲೆಗೆ ಮಳೆಯ ಸಿಂಚನವಾಗಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಮಳೆಯಾಗಿದ್ದು (Rain), ಬಿಸಿಗಾಳಿ, ಒಣಹವೆಗೆ ಬರಡಾಗಿದ್ದ ಭೂಮಿಗೆ ಜೀವ ಬಂದಂತಾಗಿದೆ.

    ಕಳೆದ 6 ತಿಂಗಳಿನಿಂದ ಮಳೆ ಕಾಣದೆ ಭೂಮಿ ಬರಡಾಗಿತ್ತು. ಇದೀಗ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಮಳೆಯಾಗಿದೆ. ಮಳೆಯ ಪರಿಣಾಮ ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮಟೋ ಮಂಡಿ ಶೆಡ್ ಉರುಳಿದೆ. ಘಟನೆಯಿಂದ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸುಮಾರು ಅರ್ಧ ಗಂಟೆಗೂ ಹೆಚ್ಚು ಮಳೆ ಸುರಿದಿದ್ದು, ಬೊಲೆರೋ ವಾಹನವೊಂದು ಮಳೆಗೆ ಜಖಂ ಆಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದ ಸುತ್ತಲೂ ಸಾಧಾರಣ ಮಳೆಯಾಗಿದೆ. ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ವರುಣ ಕೃಪೆ ತೋರಿದ್ದಾನೆ. ಇದನ್ನೂ ಓದಿ: ಪೆನ್‍ಡ್ರೈವ್ ಪ್ರಕರಣದಲ್ಲಿ ಷಡ್ಯಂತ್ರ- ಡಿಕೆಶಿ ವಿರುದ್ಧ ದೇವರಾಜೇಗೌಡ ನೇರ ಆರೋಪ

    ಮೇ 6 ರಿಂದ ಮೇ 10 ರವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ಮೇ 6ರಂದು ಕರಾವಳಿ ಭಾಗದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದರೆ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.  ಇದನ್ನೂ ಓದಿ: ಮಂಡ್ಯದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಭ್ರೂಣಹತ್ಯೆ ದಂಧೆ: ದಂಪತಿ ಅರೆಸ್ಟ್

  • ಬೀದರ್‌ನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ- ನಾನಾ ಅವಾಂತರ ಸೃಷ್ಠಿ

    ಬೀದರ್‌ನಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ- ನಾನಾ ಅವಾಂತರ ಸೃಷ್ಠಿ

    ಬೀದರ್: ರಣ ಬಿಸಿಲಿಗೆ ಹೈರಾಣಾಗಿದ್ದ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಇಂದು ಮಳೆರಾಯ ತಂಪೆರೆದಿದ್ದು, ಅಕಾಲಿಕ ಧಾರಾಕಾರ ಮಳೆಯಿಂದ (Rain) ಗಡಿ ಜಿಲ್ಲೆಯ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

    ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಕ್ಲಿ ಗ್ರಾಮದಲ್ಲಿ ಭಾರೀ ಬಿರುಗಾಳಿ (Storm) ಸಹಿತ ಧಾರಾಕಾರ ಮಳೆಗೆ ವಿದ್ಯುತ್ ಕಂಬ ನೆಲಕ್ಕುರುಳಿ ಅವಾಂತರ ಸೃಷ್ಠಿಯಾಗಿದೆ. ಯಾರೂ ಇಲ್ಲದ ವೇಳೆ ವಿದ್ಯುತ್ ಕಂಬ ನೆಲಕ್ಕುರುಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಅಲ್ಲದೇ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ. ಇದನ್ನೂ ಓದಿ: Elvish Yadav: ‘ಬಿಗ್ ಬಾಸ್ ಹಿಂದಿ ಒಟಿಟಿ 2’ ವಿನ್ನರ್ ಬಂಧನ

    ಭಾಲ್ಕಿ ತಾಲೂಕಿನ ಕೊಸಮ್ ಗ್ರಾಮದಲ್ಲಿ ಘಟನೆ ನಡೆದಿದೆ. ಸಿಡಿಲು ಬಡಿದು ತೆಂಗಿನ ಮರ ಧಗಧಗ ಹೊತ್ತಿ ಉರಿದಿದ್ದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೀದರ್, ಔರಾದ್, ಕಮಲನಗರ, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಸತತ ಒಂದು ಗಂಟೆಗಳ ಕಾಲ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎಎಸ್‌ಐ ಸಾವು – ಪಿಎಸ್‌ಐ ಸಸ್ಪೆಂಡ್

  • ಮಂಗಳೂರು, ರಾಮನಗರದಲ್ಲಿ ಮೇಘಸ್ಫೋಟ ಸಾಧ್ಯತೆ

    ಮಂಗಳೂರು, ರಾಮನಗರದಲ್ಲಿ ಮೇಘಸ್ಫೋಟ ಸಾಧ್ಯತೆ

    – ರಾಮನಗರ, ಮಂಗಳೂರು ಭಾಗದಲ್ಲಿ 150 ಮಿಲಿಮೀಟರ್ ಮಳೆ

    ಬೆಂಗಳೂರು: ಬೆಂಗಳೂರು (Bengaluru) ಸೇರಿದಂತೆ ರಾಜ್ಯದ ಹಲವೆಡೆ ಜೂನ್ 18ರಿಂದ 22ರವರೆಗೂ ತೀವ್ರ ಬಿರುಗಾಳಿ (Storm) ಸಹಿತ ಮಳೆಯಾಗುವ (Rain) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Meteorological Department) ಮುನ್ಸೂಚನೆ ನೀಡಿದೆ.

    ವರುಣನ ಆಗಮನದಿಂದ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳು ತಂಪೇರಿದೆ. ಹಳೆ ಮೈಸೂರು ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಬೆಂಗಳೂರು, ಕೋಲಾರ, ರಾಮನಗರ, ಮಂಡ್ಯ ಮತ್ತು ತುಮಕೂರು ಜಿಲ್ಲೆಗಳಲ್ಲಿ ಜೂನ್ 18ರಿಂದ 22ರವರೆಗೂ ತೀವ್ರ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: Delhi Weatherː ದೆಹಲಿಯಲ್ಲಿ ತಾಪಮಾನ ಏರಿಕೆ – ಮಾನ್ಸೂನ್ ವಿಳಂಬ ಸಾಧ್ಯತೆ

    ರಾಮನಗರ (Ramanagara) ಮತ್ತು ಮಂಗಳೂರು (Mangaluru) ಭಾಗದಲ್ಲಿ ಸುಮಾರು 150 ಮಿಲಿಮೀಟರ್‌ಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗುವ ಕಾರಣ ಜನರು ಮನೆಯಲ್ಲಿಯೇ ಸುರಕ್ಷಿತವಾಗಿರಿ. ಅಲ್ಲದೇ ಆದಷ್ಟು ಮಳೆಯ ಸಮಯದಲ್ಲಿ ಅಂಡರ್ ಪಾಸ್‌ಗಳಲ್ಲಿ ಸಂಚರಿಸಬೇಡಿ ಎಂದು ಹವಾಮಾನ ಇಲಾಖೆ ಜನರಿಗೆ ಸಲಹೆ ನೀಡಿದೆ. ಇದನ್ನೂ ಓದಿ: Cyclone Biparjoy: ಇಂದು ಸಂಜೆ ಅಪ್ಪಳಿಸಲಿದೆ ಸೈಕ್ಲೋನ್‌ – 74 ಸಾವಿರ ಮಂದಿ ಸ್ಥಳಾಂತರ

  • ಕೇಂದ್ರ ಸಚಿವ ಅಜಯ್ ಮಿಶ್ರಾ ಥೇನಿ ಸೋದರಳಿಯ ರಸ್ತೆ ಅಪಘಾತದಲ್ಲಿ ದುರ್ಮರಣ

    ಕೇಂದ್ರ ಸಚಿವ ಅಜಯ್ ಮಿಶ್ರಾ ಥೇನಿ ಸೋದರಳಿಯ ರಸ್ತೆ ಅಪಘಾತದಲ್ಲಿ ದುರ್ಮರಣ

    ಲಕ್ನೋ: ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಥೇನಿ ಅವರ ಸೋದರಳಿಯ ರಸ್ತೆ ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ.

    ಸೋನು ಮಿಶ್ರಾ ಮೃತ ದುರ್ದೈವಿ. ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸಂಜೆ 5:10ರ ಸುಮಾರಿಗೆ ಬೀಸಿದ ಪ್ರಬಲ ಬಿರುಗಾಳಿಯಿಂದ ಈ ದುರ್ಘಟನೆ ನಡೆದಿದೆ.

    ಸೋನು ಅವರು ಇಂದು ತಮ್ಮ ಮೋಟಾರ್ ಸೈಕಲ್‍ನಲ್ಲಿ ಬನ್ವಾರಿಪುರದಿಂದ ಲಖಿಂಪುರಕ್ಕೆ ಬರುತ್ತಿದ್ದರು. ಈ ವೇಳೆ ಖಂಬರಖೇಡ ಸಕ್ಕರೆ ಕಾರ್ಖಾನೆ ಬಳಿ ಜೋರಾಗಿ ಬಿರುಗಾಳಿ ಬೀಸಿದೆ. ಈ ಸಂದರ್ಭದಲ್ಲಿ ರಸ್ತೆ ಬದಿಯ ಮರವೊಂದು ಸೋನು ಅವರ ಬೈಕ್ ಮೇಲೆ ಬಿದ್ದಿದೆ. ಪರಿಣಾಮ ಬೈಕ್ ಸಮೇತ ಸೋನು ಮರದಡಿ ಅಪ್ಪಚ್ಚಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಜಮ್ಮು-ಕಾಶ್ಮೀರ ಗಡಿಯುದ್ದಕ್ಕೂ ಕಾಡ್ಗಿಚ್ಚು – ನೆಲಬಾಂಬ್‌ಗಳು ಸ್ಫೋಟ

    ಘಟನೆ ನಡೆದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಹೇಗೋ ಮರವನ್ನು ಕಡಿದು ತೆಗೆದು, ಅವರ ಮೃತ ದೇಹವನ್ನು ತೆಗೆದರು. ಸ್ವಲ್ಪ ಸಮಯದ ನಂತರ ಮೃತಪಟ್ಟಿರುವುದು ಕೇಂದ್ರ ಗೃಹ ಖಾತೆ ಸಚಿವ ಅಜಯ್ ಮಿಶ್ರಾ ಥೇನಿ ಅವರ ಸೋದರಳಿಯ ಸೋನು ಮಿಶ್ರಾ ಎಂದು ಜನರಿಗೆ ತಿಳಿದುಬಂದಿದೆ. ಇದನ್ನೂ ಓದಿ: ಅಸ್ಸಾಂನಲ್ಲಿ ಪ್ರವಾಹ – 4 ಲಕ್ಷಕ್ಕೂ ಅಧಿಕ ಮಂದಿಗೆ ಹಾನಿ, ಕೊಚ್ಚಿಹೋದ ರಸ್ತೆ, ರೈಲು ಹಳಿ

    ಇತ್ತ ಅಜಯ್ ಮಿಶ್ರಾ ಥೇನಿ ಗುರುವಾರ ಪ್ರಯಾಗರಾಜ್‍ಗೆ ಬರಬೇಕಿತ್ತು. ಆದರೆ ಸೋದರಳಿಯನ ಮರಣದ ಸುದ್ದಿ ಕೇಳಿ ತಮ್ಮ ಎಲ್ಲಾ ಕೆಲಸವನ್ನು ಬಿಟ್ಟು ಅಂತಿಮ ಸಂಸ್ಕಾರಕ್ಕಾಗಿ ಅವರು ಲಖಿಂಪುರ ಖೇರಿಗೆ ತೆರಳಿದ್ದಾರೆ.

  • ಲ್ಯಾಂಡಿಂಗ್ ವೇಳೆ ಸ್ಪೈಸ್‌ಜೆಟ್ ವಿಮಾನ ಅವಘಡ – ಪ್ರಯಾಣಿಕರ ಮೇಲೆ ಲಗೇಜ್‌ಗಳ ಸುರಿಮಳೆ

    ಲ್ಯಾಂಡಿಂಗ್ ವೇಳೆ ಸ್ಪೈಸ್‌ಜೆಟ್ ವಿಮಾನ ಅವಘಡ – ಪ್ರಯಾಣಿಕರ ಮೇಲೆ ಲಗೇಜ್‌ಗಳ ಸುರಿಮಳೆ

    ಕೋಲ್ಕತ್ತಾ: ಸ್ಪೈಸ್‌ಜೆಟ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ಭಾರೀ ಬಿರುಗಾಳಿಗೆ ಸಿಲುಕಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಲಗೇಜ್‌ಗಳು ಬಿದ್ದ ಪರಿಣಾಮ 40ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ.

    ಭಾನುವಾರ ರಾತ್ರಿ ವಾಯು ಪ್ರದೇಶದ ಬಿರುಗಾಳಿ ಹಿನ್ನೆಲೆಯಲ್ಲಿ ಸ್ಪೈಸ್‌ಜೆಟ್‌ನ ಎಸ್‌ಜಿ-945 ವಿಮಾನ ಪಶ್ಚಿಮ ಬಂಗಾಳದ ದುರ್ಗಾಪುರದ ಕಾಜಿ ನಜ್ರುಲ್ ಇಸ್ಲಾಂ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಲಗೇಜ್ ಬ್ಯಾಗ್‌ಗಳು ಪ್ರಯಾಣಿಕರ ತಲೆ ಮೇಲೆ ಬಿದ್ದಿರುವ ಪರಿಣಾಮ ಹೆಚ್ಚಿನವರ ತಲೆಗೆ ಗಾಯಗಳಾಗಿವೆ. ಇದನ್ನೂ ಓದಿ: ರಾಷ್ಟ್ರೀಯತೆ ಕಲಿಯಲು ಕೇಜ್ರಿವಾಲ್ RSS ಕಚೇರಿಗೆ ಭೇಟಿ ನೀಡಬೇಕು: ಬಿಜೆಪಿ ಸಂಸದ

    ಗಾಯಗೊಂಡಿರುವ 40 ಪ್ರಯಾಣಿಕರಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿವೆ. ಉಳಿದವರು ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಗಂಭೀರ ಗಾಯಗಳಾದವರಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಖಲೀಸ್ತಾನ ಬೇಡಿಕೆ ಸಾಂವಿಧಾನಿಕ ಹಕ್ಕು ಎಂದ ಆಪ್ ನಾಯಕ ಹರ್‌ಪ್ರೀತ್‌ಸಿಂಗ್

    ವಿಮಾನ ಭೀಕರ ಗಾಳಿಗೆ ಹೇಗೆ ಸಿಲುಕಿತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಬಿರುಗಾಳಿಗೆ ಸಿಲುಕಿದ ವಿಮಾನ ತೀವ್ರಗತಿಯಲ್ಲಿ ಅಲುಗಾಡಿ, ಕ್ಯಾಬಿನ್‌ನಲ್ಲಿದ್ದ ಲಗೇಜ್‌ಗಳು ಪ್ರಯಾಣಿಕರ ಮೇಲೆ ಬಿದ್ದಿವೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.