Tag: ಬಿರಿಯಾನಿ

  • ಗದಗ | ಬಿರಿಯಾನಿ ತಿನ್ನಲು ಹೋಟೆಲ್‌ಗೆ ಬಂದಾತನ ಭೀಕರ ಕೊಲೆ

    ಗದಗ | ಬಿರಿಯಾನಿ ತಿನ್ನಲು ಹೋಟೆಲ್‌ಗೆ ಬಂದಾತನ ಭೀಕರ ಕೊಲೆ

    ಗದಗ: ಬಿರಿಯಾನಿ ತಿನ್ನಲು ಹೋಟೆಲ್‌ಗೆ ಬಂದಾತನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಗದಗ (Gadag) ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

    ಬಸವರಾಜ್ ಮಮ್ಮಟಗೇರಿ (22) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ನರಗುಂದ (Naragund) ಪಟ್ಟಣದಲ್ಲಿದ್ದ ತಾಜ್ ಹೋಟೆಲ್‌ಗೆ ಬಸವರಾಜ್ ಬಿರಿಯಾನಿ (Biriyani) ತಿನ್ನಲು ಬಂದಿದ್ದ. ಇದನ್ನೂ ಓದಿ: ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿಗೆ ಸಕಲೇಶಪುರ ಪ್ರವೇಶಕ್ಕೆ ನಿರ್ಬಂಧ

    ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಸವರಾಜ್ ಕಣ್ಣಿಗೆ ಖಾರದಪುಡಿ ಮನಸೋ ಇಚ್ಛೆ ಹಲ್ಲೆ ಮಾಡಿ, ಹತ್ಯೆಗೈದು ಪರಾರಿಯಾಗಿದ್ದರು.

    ಕೊಲೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ನರಗುಂದ ಡಿವೈಎಸ್ಪಿ ಪ್ರಭು ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಣಾನಿಗೆ ಬಿರಿಯಾನಿ ಕೊಡಬೇಡಿ: ಮುಂಬೈ ದಾಳಿಯಲ್ಲಿ ಜನರ ರಕ್ಷಣೆಗೆ ನೆರವಾಗಿದ್ದ ಚಹಾ ಮಾರಾಟಗಾರ ಒತ್ತಾಯ

    ರಾಣಾನಿಗೆ ಬಿರಿಯಾನಿ ಕೊಡಬೇಡಿ: ಮುಂಬೈ ದಾಳಿಯಲ್ಲಿ ಜನರ ರಕ್ಷಣೆಗೆ ನೆರವಾಗಿದ್ದ ಚಹಾ ಮಾರಾಟಗಾರ ಒತ್ತಾಯ

    – ಉಗ್ರರನ್ನು 2-3 ತಿಂಗಳಲ್ಲಿ ಗಲ್ಲಿಗೇರಿಸುವ ವ್ಯವಸ್ಥೆ ಜಾರಿಗೆ ಬರಬೇಕೆಂದು ತೌಫಿಕ್‌ ಒತ್ತಾಯ

    ಮುಂಬೈ: ಉಗ್ರ ತಹವ್ವುರ್‌ ರಾಣಾಗೆ (Tahawwur Rana) ಯಾವುದೇ ವಿಶೇಷ ಸೌಲಭ್ಯ ಕೊಡಬಾರದು. ಆತನಿಗೆ ಬಿರಿಯಾನಿ (Biriyani) ನೀಡದಿರಿ ಎಂದು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ (Mumbai Terror Attack) ಅನೇಕ ಜನರನ್ನು ರಕ್ಷಿಸಲು ನೆರವಾಗಿದ್ದ ಮುಂಬೈನ ಪ್ರಸಿದ್ಧ ಚಹಾ ಮಾರಾಟಗಾರ ಮೊಹಮ್ಮದ್ ತೌಫಿಕ್ ಒತ್ತಾಯಿಸಿದ್ದಾರೆ.

    ಭಯೋತ್ಪಾದಕ ಅಜ್ಮಲ್ ಕಸಬ್‌ಗೆ ನೀಡಿದಂತೆಯೇ ಭಾರತವು ತಹವ್ವುರ್ ರಾಣಾಗೆ ಯಾವುದೇ ವಿಶೇಷ ಉಪಚಾರವನ್ನು ನೀಡಬಾರದು. ಪ್ರತ್ಯೇಕ ಸೆಲ್‌ನಂತಹ ವಿಶೇಷ ವ್ಯವಸ್ಥೆ ಕೂಡ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ

    ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತು ಮಾತನಾಡಿದ ತೌಫಿಕ್, ಭಾರತ ಅವನಿಗೆ ವಿಶೇಷ ಸೆಲ್ ಒದಗಿಸುವ ಅಗತ್ಯವಿಲ್ಲ. ಕಸಬ್‌ಗೆ ನೀಡಲಾದಂತಹ ಬಿರಿಯಾನಿ ಮತ್ತು ಸೌಲಭ್ಯ ಕೂಡ ಕೊಡಬಾರದು. ಭಯೋತ್ಪಾದಕರಿಗೆ ಪ್ರತ್ಯೇಕ ಕಾನೂನು ಇರಬೇಕು. ಉಗ್ರರನ್ನು 2-3 ತಿಂಗಳೊಳಗೆ ಗಲ್ಲಿಗೇರಿಸುವಂತಹ ವ್ಯವಸ್ಥೆ ಜಾರಿಯಲ್ಲಿರಬೇಕು ಎಂದು ತಿಳಿಸಿದ್ದಾರೆ.

    ಮುಂಬೈ ದಾಳಿ ನಡೆದಾಗ ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌ನಲ್ಲಿ ತೌಫಿಕ್‌ ಚಹಾ ಅಂಗಡಿ ಇಟ್ಟುಕೊಂಡಿದ್ದರು. ದಾಳಿ ಸಂದರ್ಭದಲ್ಲಿ ಅನೇಕ ಜನರನ್ನು ರಕ್ಷಿಸಲು ತೌಫಿಕ್‌ ನೆರವಾಗಿದ್ದರು. ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಸಹಾಯ ಮಾಡಿದ್ದರು. ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ

    166 ಅಮಾಯಕರ ಜೀವಗಳನ್ನು ಬಲಿತೆಗೆದುಕೊಂಡ 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಆರೋಪವನ್ನು ರಾಣಾ ಎದುರಿಸುತ್ತಿದ್ದಾನೆ. ಅಮೆರಿಕವು ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದೆ.

  • ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

    ಜಮೀರ್ ಕಣ್ಣೀರು ಮತ್ತು 100 ಬಿರಿಯಾನಿ..!

    ಅವರೆಲ್ಲ ಬೆಳ್ಳಂಬೆಳಗ್ಗೆ ಮೂರು ಗಂಟೆಗೆ ಎದ್ದು ಮೈಸೂರಿನಿಂದ (Mysuru) ನೇರವಾಗಿ ಬಸ್ ಹತ್ತಿ ಬೆಂಗಳೂರಿಗೆ ಬಂದಿದ್ರು. ವಸತಿ ಸೌಲಭ್ಯ, ಪಿಂಚಣಿ ಹೆಚ್ಚಳಕ್ಕಾಗಿ ಎಷ್ಟು ಅಂತಾ ಜಿಲ್ಲಾಧಿಕಾರಿ ಕಚೇರಿಗೆ ಅಲೆಯೋದು ಸಿಎಂ ಮನೆಗೆ ಹೋಗಿ ನ್ಯಾಯ ಕೇಳುವ ಅನ್ನುವ ಸೋತ ನೋವಿನಿಂದ ಬಂದಿದ್ರು.

    ಬಹುತೇಕರಿಗೆ ಕಾಲಿನ ಸ್ವಾಧೀನವಿಲ್ಲ, ನಡೆಯೋಕೆ ಆಗಲ್ಲ ವೀಲ್ ಚೇರ್ ಆಧಾರ. ಇನ್ನು ಕೆಲವರಿಗೆ ಕೈ ಇಲ್ಲ, ಊರುಗೋಲಿನ ಅಧಾರದಲ್ಲಿರೋರು. ಇವರೆಲ್ಲ ಬಸ್ ಮಾಡಿಕೊಂಡು ಸುಮಾರು ನೂರಕ್ಕೂ ಹೆಚ್ಚು ಜನ ಸಿಎಂ ಗೃಹಕಚೇರಿ ಕೃಷ್ಣಾಗೆ ಬಂದಿದ್ದಾರೆ. ಆದ್ರೇ ಸಿಎಂ ಕಚೇರಿಯಲ್ಲಿ ಇರದ ಕಾರಣ ಇವ್ರ ಭೇಟಿಗೆ ಅವಕಾಶ ಸಿಗಲಿಲ್ಲ. ಅಲ್ಲಿಂದ ವಸತಿ ವಿಚಾರಕ್ಕೆ ಸಿಎಂ ಆಪ್ತ ಕಾರ್ಯದರ್ಶಿ ಜಮೀರ್ (Zameer Ahmed Khan) ಮನೆಗೆ ಹೋಗಿ ಅಂತಾ ಸಾಗಾ ಹಾಕಿದ್ದಾರೆ.

    ಪಾಪ ವ್ಹೀಲ್‌ ಚೇರ್‌ನಲ್ಲಿಯೇ ಬೆಂಗಳೂರು ಟ್ರಾಫಿಕ್ ನಲ್ಲಿ ಅವರೆಲ್ಲ ಸಿಎಂ ಗೃಹಕಚೇರಿಯಿಂದ ಐನೂರು ಮೀಟರ್ ದೂರದ ಜಮೀರ್ ಸರ್ಕಾರಿ ನಿವಾಸಕ್ಕೆ ಹೋಗಿದ್ದಾರೆ. ಅರಂಭದಲ್ಲಿ ಅಪಾಯಿಂಟ್‌ಮೆಂಟ್‌ ತಗೊಂಡಿಲ್ಲ ಸಾಹೇಬ್ರು ಇಲ್ಲ ಅಂತಾ ಪೊಲೀಸರು ರಸ್ತೆಯಲ್ಲಿಯೇ ಇವರನ್ನು ನಿಲ್ಲಿಸಿದ್ದಾರೆ. ಫುಟ್‌ ಪಾತ್ ರಸ್ತೆಯಲ್ಲಿಯೇ ಬಿರುಬಿಸಿಲಿನಲ್ಲಿ ಸುಮಾರು ಮೂರು ನಾಲ್ಕು ಗಂಟೆ ನೀರು ತಿಂಡಿ ಇಲ್ಲದೇ ನಿಂತಿದ್ದಾರೆ. ಏನು ದಾರಿ ಕಾಣದೇ ʻಪಬ್ಲಿಕ್ ಟಿವಿʼಗೆ ಕರೆ ಮಾಡಿದ್ದಾರೆ. ಪಬ್ಲಿಕ್ ಟಿವಿ ಸ್ಥಳಕ್ಕೆ ಹೋಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿ ಜಮೀರ್ ಮನೆಯೊಳಗೆ ಬಿಟ್ಟಿದ್ದಾರೆ.

    ತಕ್ಷಣ ಜಮೀರ್ ಆಪ್ತಕಾರ್ಯದರ್ಶಿ ಬಂದು ಮನವಿ ಸ್ವೀಕರಿಸಿದ್ದಾರೆ. ಕೊನೆಗೆ ಚಾಮರಾಜಪೇಟೆಯಲ್ಲಿ ಸಭೆ ಮುಗಿಸಿ ಬಂದ ಜಮೀರ್ ತಕ್ಷಣ ಮನೆಬಾಗಿಲಲ್ಲಿ ನಿಂತ ವಿಶೇಷ ಚೇತನರ ಸಮಸ್ಯೆ ಆಲಿಸಿದ್ರು. ಯಾಕ್ ಬರೋಕೆ ಹೋದ್ರಿ ಮೈಸೂರಿಂದ ಸಿಎಂ ಬಂದಾಗ ಅವರಿಗೆ ಮನವಿ ನೀಡಬೇಕಾಗಿತ್ತು ಅಂತಾ ಹೇಳುತ್ತಲೇ ಮನವಿ ಸ್ವೀಕರಿಸಿದ್ರು. ಕೊನೆಗೆ ನಾನೇ ಜಿಲ್ಲಾಧಿಕಾರಿಗೆ ಪತ್ರ ಬರೆಯುತ್ತೇನೆ ರಾಜೀವ್ ಗಾಂಧಿ ವಸತಿ ಯೋಜನೆ ಮೂಲಕ ಮನೆ ಕೊಡಿಸುವ ಕೆಲ್ಸ ಮಾಡ್ತೀನಿ ಅಂತಾ ಭರವಸೆ ಕೊಟ್ರು.

    ಜೊತೆಗೆ ಬಿರಿಯಾನಿ ತರಿಸ್ತೀನಿ ಇರಪ್ಪ ಅಂತಾ 100 ಮಟನ್ ಬಿರಿಯಾನಿ, 20-30 ಪ್ಲೇಟ್ ಕಬಾಬ್‌ಗೆ ಆರ್ಡರ್ ಮಾಡಿದ್ರು. ವಿಶೇಷ ಚೇತನರು ಫುಲ್ ಖುಷ್. ಧನ್ಯವಾದ ಹೇಳೋಕೆ ಕಾಲು ಹಿಡಿಯೋಕೆ ಮುಂದಾದಾಗ ಜಮೀರ್‌ಗೆ ಕಣ್ಣೀರು.. ʻಪಬ್ಲಿಕ್ ಟಿವಿʼ ಜೊತೆಗೆ ಮಾತಾನಾಡ್ತಾ ಸಚಿವ ಜಮೀರ್ ಕಣ್ಣಿಂದ ನೀರು ಜಿನುಗುತ್ತಿತ್ತು. ಪಾಪ ಬಡವರು ಕಾಲಿಲ್ಲ.. ಕೈಯಿಲ್ಲ.. ನೋಡೋಕೆ ಬೇಜಾರಾಯ್ತು. ಇಷ್ಟು ದೂರ ಬಂದ್ರಲ್ಲ ಅಂತಾ ನೋವಿನಿಂದಲೇ ನುಡಿದ್ರು. ಕ್ಯಾಮೆರಾ ಆಫ್ ಮಾಡ್ರಪ್ಪ ಅಂತಾ ಮನವಿ ಮಾಡುತ್ತಲೇ ಎರಡು ಲಕ್ಷ ರೂಪಾಯಿ ದುಡ್ಡು ತಗೊಂಡು ವಿಶೇಷಚೇತನರ ಕೈಗೆ ತುರುಕಿದ್ರು.

  • ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

    ಉಪ್ಪಿಟ್ಟು ಬದಲು ಬಿರಿಯಾನಿ, ಚಿಕನ್‌ ಫ್ರೈ ಕೊಡಿ: ಅಂಗನವಾಡಿ ಬಾಲಕನ ಮನವಿಗೆ ಸಚಿವರ ಒಪ್ಪಿಗೆ

    ತಿರುವನಂತಪುರಂ: ಅಂಗನವಾಡಿಯಲ್ಲಿ (Anganwadi) ಉಪ್ಪಿಟ್ಟು ಬದಲಿಗೆ ಬಿರಿಯಾನಿ ಮತ್ತು ಚಿಕನ್‌ ಫ್ರೈ (Biriyani & Chicken Fry) ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಒಪ್ಪಿಗೆ ಸೂಚಿಸಿದ್ದಾರೆ.

    ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್‌ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ವೀಡಿಯೋಗೆ ಸಚಿವರು ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

    ಶಂಕು ಎಂಬ ಮಗು ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು ಎಂದು ಕೇಳಿ ಕೊಂಡಿದ್ದಾನೆ. ಜ.30 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಹರಿಬಿಡಲಾಗಿತ್ತು. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿರುವ ವೀಡಿಯೋ ಕೊನೆಗೆ ಸಚಿವರ ಗಮನಕ್ಕೆ ಬಂದಿದೆ.

    ಕೇರಳದಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಒದಗಿಸಲು ಸರ್ಕಾರ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳ ಪೋಷಣೆಗೆ ಪೂರಕವಾಗಿ ಊಟ ನೀಡಲಾಗುತ್ತಿದೆ. ಮೊಟ್ಟೆ ಮತ್ತು ಹಾಲನ್ನು ಸಹ ಸರ್ಕಾರ ನೀಡುತ್ತಿದೆ. ಮಕ್ಕಳು ಪೌಷ್ಟಿಕ ಆಹಾರದಿಂದ ಆರೋಗ್ಯದ ಪ್ರಯೋಜನ ಪಡೆಯಲು ಸಹಕಾರಿಯಾಗಿದೆ.

  • ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಡೂಟ – ಬಿರಿಯಾನಿ ಸೀಜ್ ಮಾಡಿದ ಚುನಾವಣಾಧಿಕಾರಿಗಳು

    ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಾಡೂಟ – ಬಿರಿಯಾನಿ ಸೀಜ್ ಮಾಡಿದ ಚುನಾವಣಾಧಿಕಾರಿಗಳು

    ರಾಮನಗರ: ಚನ್ನಪಟ್ಟಣ ಉಪಚುನಾವಣೆ (Channapatna By Election) ಅಖಾಡದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದಿದ್ದು, ಜನರಿಗೆ ಹಂಚಲು ತಯಾರು ಮಾಡಿಟ್ಟಿದ್ದ ಬಿರಿಯಾನಿಯನ್ನು (Biryani) ಚುನಾವಣಾ ಅಧಿಕಾರಿಗಳು (Election Officers) ಸೀಜ್ ಮಾಡಿದ್ದಾರೆ.

    ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಚನ್ನಪಟ್ಟಣದ ರೆಸಾರ್ಟ್ನಲ್ಲಿ ಕರೆಯಲಾಗಿದ್ದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಗೆ ಸಿದ್ಧವಾಗಿದ್ದ ಬಿರಿಯಾನಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಚುನಾವಣಾ ಅಧಿಕಾರಿಯಾದ ಉಪವಿಭಾಗಾಧಿಕಾರಿ ಬಿನೋಯ್ ನೇತೃತ್ವದಲ್ಲಿ ದಾಳಿಮಾಡಿದ ಅಧಿಕಾರಿಗಳು ಬಿರಿಯಾನಿ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕ ವಿಧಾನ ಪರಿಷತ್ ಕಾರ್ಯದರ್ಶಿ-2 ಹುದ್ದೆಗೆ ಎಸ್.ನಿರ್ಮಲಾ ಬಡ್ತಿ

    ನೀತಿಸಂಹಿತೆಯನ್ವಯ ಬಾಡೂಟ ಮಾಡಿಸಲು ಅವಕಾಶವಿಲ್ಲ. ಸಭೆಗೆ ಅನುಮತಿ ಪಡೆಯಲಾಗಿತ್ತಾದರೂ ಕಾರ್ಯಕರ್ತರಿಗೆ ಮಜ್ಜಿಗೆ ನೀರು, ಕಾಫಿ, ಟೀ ವಿತರಣೆಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ತಿಳಿಸಿ ಕಾರ್ಯಕರ್ತರನ್ನ ವಾಪಸ್ ಕಳುಹಿಸಿದ್ದಾರೆ. ಇದನ್ನೂ ಓದಿ: ಆದೇಶ ಆಗಿ 10 ದಿನ ಕಳೆದರೂ ಕಾರವಾರ ಅಪರ ಜಿಲ್ಲಾಧಿಕಾರಿ ಖುರ್ಚಿ ಖಾಲಿ

  • ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಕಾರಣಕ್ಕೆ ನರ್ಸರಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಪ್ರಾಂಶುಪಾಲ

    ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಕಾರಣಕ್ಕೆ ನರ್ಸರಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಪ್ರಾಂಶುಪಾಲ

    ಲಕ್ನೋ: ಶಾಲೆಗೆ ಊಟದ ಬಾಕ್ಸ್‌ನಲ್ಲಿ ಬಿರಿಯಾನಿ ತಂದ ಆರೋಪದ ಮೇಲೆ ನರ್ಸರಿ ವಿದ್ಯಾರ್ಥಿಯನ್ನು ಪ್ರಾಂಶುಪಾಲರು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಅಮ್ರೋಹಾದ (Amroha) ಖಾಸಗಿ ಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲರ ಜೊತೆಗೆ ಮಗುವಿನ ತಾಯಿ ತೀವ್ರ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ.

    ನಮ್ಮ ದೇವಸ್ಥಾನಗಳನ್ನು ಕೆಡವಿ ಶಾಲೆಗೆ ನಾನ್ ವೆಜ್ ತರುವ ಇಂತಹ ಮಕ್ಕಳಿಗೆ ನೈತಿಕತೆಯನ್ನು ಕಲಿಸಲು ನಾವು ಬಯಸುವುದಿಲ್ಲ ಎಂದು ಪ್ರಾಂಶುಪಾಲರು ತಾಯಿಗೆ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಎಲ್ಲರಿಗೂ ನಾನ್ ವೆಜ್ ತಿನ್ನಿಸಿ ಅವರನ್ನು ಇಸ್ಲಾಂಗೆ ಪರಿವರ್ತಿಸುವ ಬಗ್ಗೆ ಬಾಲಕ ಮಾತನಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.ಇದನ್ನೂ ಓದಿ: ಮಂತ್ರಾಲಯ ಗುರುರಾಯರ ಮೊರೆ ಹೋದ ನಟ ದರ್ಶನ್‌ ಪತ್ನಿ

    ಮಹಿಳೆ ಪ್ರಾಂಶುಪಾಲರ ಆರೋಪಗಳನ್ನು ತಳ್ಳಿಹಾಕಿದ್ದಾರೆ. ತನ್ನ ಮಗನಂತಹ 7 ವರ್ಷದ ಹುಡುಗ ಅಂತಹ ವಿಷಯಗಳ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಅದಕ್ಕೆ ಪ್ರಾಂಶುಪಾಲರು ಮಗು ಮನೆಯಲ್ಲಿ ಎಲ್ಲವನ್ನೂ ಕಲಿಯುತ್ತದೆ, ಅವರ ಪೋಷಕರು ಕಲಿಸುತ್ತಾರೆ. ಇತರ ವಿದ್ಯಾರ್ಥಿಗಳ ಪೋಷಕರಿಗೆ ಸಮಸ್ಯೆ ಇದ್ದ ಕಾರಣ ಶಾಲೆಯ ರಿಜಿಸ್ಟರ್‌ನಿಂದ ವಿದ್ಯಾರ್ಥಿಯ ಹೆಸರನ್ನು ತೆಗೆದುಹಾಕಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ.

    ಪ್ರಾಂಶುಪಾಲರ ಹೇಳಿಕೆಗೆ ಮಗುವಿನ ತಾಯಿ, ಶಾಲೆಯಲ್ಲಿ ವಿದ್ಯಾರ್ಥಿಗಳು ದೇಶದ ಹಿಂದೂ-ಮುಸ್ಲೀಂ ಸಮಸ್ಯೆಗಳ ಬಗ್ಗೆ ವಾದಿಸುತ್ತಾರೆ. ಮತ್ತೊಂದು ವಿದ್ಯಾರ್ಥಿ ತಮ್ಮ ಮಗನಿಗೆ ಹೊಡೆದು ಆಗಾಗ್ಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ನನ್ನನ್ನು, ದೇವೇಗೌಡರನ್ನು ಮುಗಿಸೋಕೆ ಯಾರಿಂದಲೂ ಆಗಲ್ಲ: ಹೆಚ್.ಡಿ.ರೇವಣ್ಣ

    ಈ ವೇಳೆ ಪ್ರಾಂಶುಪಾಲರು, ಮಹಿಳೆ ಮತ್ತೊಬ್ಬ ವಿದ್ಯಾರ್ಥಿಯ ಮೇಲೆ ಆರೋಪ-ಪ್ರತ್ಯಾರೋಪಗಳನ್ನು ಮಾಡುವ ಮೂಲಕ ಶಾಲೆಯನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾಳೆ ಎಂದು ಹೇಳಿದ್ದಾರೆ.

    ಸುಮಾರು 7 ನಿಮಿಷಗಳ ಅವಧಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಮ್ರೋಹಾ ಪೊಲೀಸರು, ಜಿಲ್ಲಾ ಶಾಲಾ ಇನ್ಸ್‌ಪೆಕ್ಟರ್‌ (DIS) ಕ್ರಮಕ್ಕೆ ಮುಂದಾಗಿದ್ದಾರೆ ಮತ್ತು ಈ ವಿಷಯದಲ್ಲಿ ತನಿಖೆ ಮತ್ತು ಮುಂದಿನ ಕ್ರಮ ತೆಗೆದುಕೊಳ್ಳಲು ಮೂರು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

  • ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಏರಿ ವ್ಯಕ್ತಿ ಹುಚ್ಚಾಟ- ಬಿರಿಯಾನಿ ಆಫರ್ ನೀಡಿ ರಕ್ಷಿಸಿದ ಪೊಲೀಸರು

    ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಏರಿ ವ್ಯಕ್ತಿ ಹುಚ್ಚಾಟ- ಬಿರಿಯಾನಿ ಆಫರ್ ನೀಡಿ ರಕ್ಷಿಸಿದ ಪೊಲೀಸರು

    ಕೋಲ್ಕತ್ತಾ: ಸೇತುವೆ ಏರಿ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹುಚ್ಚಾಟ ನಡೆಸುತ್ತಿದ್ದ ವ್ಯಕ್ತಿಗೆ ಬಿರಿಯಾನಿ (Biriyani) ಆಫರ್ ನೀಡಿ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ  (West Bengal) ನಡೆದಿದೆ.

    ಕೋಲ್ಕತ್ತಾ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಗರದಲ್ಲಿರುವ ಸೇತುವೆಯನ್ನು ಏರಿ ಬೆದರಿಕೆ ಹಾಕಿ ಹುಚ್ಚಾಟ ನಡೆಸಿದ್ದಾರೆ. ಹೆಂಡತಿಯಿಂದ ಬೇರ್ಪಟ್ಟ ಕಾರಣ ತೀವ್ರ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದರು. ಇತ್ತ ವ್ಯವಹಾರದಲ್ಲಿಯೂ ಅರ್ಥಿಕ ನಷ್ಟಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಮತ್ತೆ ತಿಹಾರ್ ಜೈಲು ಸೇರುತ್ತಾರೆ: ಈಶ್ವರಪ್ಪ ಭವಿಷ್ಯ

    ವ್ಯಕ್ತಿ ಮಧ್ಯಾಹ್ನ 3:20ರ ಸುಮಾರಿಗೆ ವಾಹನದಲ್ಲಿ ಹಿರಿಯ ಮಗಳನ್ನು ಸೈನ್ಸ್ ಸಿಟಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸೇತುವೆಯ ಬಳಿ ವಾಹನ ನಿಲ್ಲಿಸಿದ್ದಾರೆ. ಮೊಬೈಲ್ ಫೋನ್ ರಸ್ತೆಯ ಮೇಲೆ ಬಿದ್ದುಹೋಗಿದೆ ನಾನು ಅದನ್ನ ಹುಡುಕಿಕೊಂಡು ಬರುತ್ತೇನೆ ಎಂದು ಮಗಳಿಗೆ ಹೇಳಿ ಹೋಗಿದ್ದಾರೆ. ಇದನ್ನೂ ಓದಿ:  ಫೆ.13ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ- ಹರಿಯಾಣದ ಕೆಲವೆಡೆ ಇಂಟರ್ನೆಟ್ ಬ್ಯಾನ್, ಸೆಕ್ಷನ್ 144 ಜಾರಿ

    ನಂತರ ಸೇತುವೆ ಮೇಲೆ ಹತ್ತಿ ಅಲ್ಲಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿ ನೆರೆದಿದ್ದ ಜನರ ಮಂದೆ ಹುಚ್ಚಾಟ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಆತನ ಮನವೊಲಿಸಲು ಸುಮಾರು ಅರ್ಧ ಗಂಟೆಗಳ ಕಾಲ ಹಲವಾರು ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಗುದ್ದಲಿ ಪೂಜೆ ಮಾಡ್ತೀವಿ: ಮುತಾಲಿಕ್

    ಕೊನೆಗೆ ತಿನ್ನಲು ಬಿರಿಯಾನಿ ನೀಡಿ ನಿನಗೆ ಕೆಲಸವನ್ನು ಸಹ ನೀಡುತ್ತೇವೆ ಎಂದು ಉದ್ಯೋಗದ ಭರವಸೆ ನೀಡಿದಾಗ ಆತ ಕೆಳಗೆ ಬಂದಿದ್ದಾರೆ. ಮಗಳೊಂದಿಗೆ ಮಾತನಾಡಿದ ಬಳಿಕ ವ್ಯಕ್ತಿಯ ಮನವೊಲಿಸಲು ಸಾಧ್ಯವಾಯಿತು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ಪು ಪಟ್ಟಿ ಧರಿಸಿ ಅಮಿತ್‌ ಶಾ ವಿರುದ್ಧ ಪ್ರತಿಭಟನೆ

  • ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದು 17 ಜನ ಅಸ್ವಸ್ಥ

    ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದು 17 ಜನ ಅಸ್ವಸ್ಥ

    ಚಿಕ್ಕಮಗಳೂರು: ಭಾನುವಾರ ಮಾಡಿದ್ದ ಬಿರಿಯಾನಿಯನ್ನು (Biriyani) ಸೋಮವಾರ ತಿಂದು 17 ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಜಿಲ್ಲೆಯ ಕಡೂರು (Kadur) ತಾಲೂಕಿನ ಮರವಂಜಿ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಮರವಂಜಿ ಗ್ರಾಮದ ಮನೆಯೊಂದರಲ್ಲಿ ಖಾಸಗಿ ಕಾರ್ಯಕ್ರಮವೊಂದು ನಡೆದಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕರಿಗಾಗಿ ಬಿರಿಯಾನಿ ತಯಾರಿಸಿದ್ದರು. ಭಾನುವಾರ ಮಾಡಿದ್ದ ಬಿರಿಯಾನಿಯನ್ನು ಸೋಮವಾರ ತಿಂದ 17 ಜನ ಗ್ರಾಮಸ್ಥರು ಅಸ್ವಸ್ಥರಾಗಿ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಮರವಂಜಿ ಗ್ರಾಮದ ಮನೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ತಯಾರಿಸಿದ ಬಿರಿಯಾನಿಯನ್ನು ಸೋಮವಾರ ಕುಟುಂಬಸ್ಥರು ಹಾಗೂ ಕೆಲ ಗ್ರಾಮಸ್ಥರು ಸೇವಿಸಿದ್ದಾರೆ. ಸೇವಿಸಿದ ಸ್ವಲ್ಪ ಹೊತ್ತಿನ ಬಳಿಕ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡ ಹಿನ್ನೆಲೆ ಗ್ರಾಮಸ್ಥರು ಅಂಬುಲೆನ್ಸ್‌ನಲ್ಲಿ ಎಲ್ಲರನ್ನೂ ಕಡೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ದಣಿದಿದ್ದ ರಾಹುಲ್ ಗಾಂಧಿಗೆ ಸೌತೆಕಾಯಿ ನೀಡಿದ್ದ ಅಜ್ಜಿ ನಿಧನ

    ಭಾನುವಾರ ತಯಾರಿಸಿದ್ದ ಮಾಂಸಾಹಾರ ಸೋಮವಾರ ವಿಷಪೂರಿತಗೊಂಡಿದ್ದು, ಅದನ್ನೇ ಗ್ರಾಮಸ್ಥರು ಸೇವಿಸಿದ್ದರಿಂದ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕೂಡಲೇ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ ಯಾರ ಪ್ರಾಣಕ್ಕೂ ತೊಂದರೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆಸ್ಪತ್ರೆಗೆ ದಾಖಲಾದ ಗ್ರಾಮಸ್ಥರ ಪೈಕಿ 8 ಪುರುಷರು ಹಾಗೂ 9 ಮಹಿಳೆಯರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದು ಕಡೂರು ಶಾಸಕ ಕೆಎಸ್ ಆನಂದ್ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥಗೊಂಡವರ ಯೋಗಕ್ಷೇಮ ವಿಚಾರಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ 

  • ಪಾಕ್‌ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್‌ – ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಸಿಕ್ಕಿಬಿದ್ದ ಆಟಗಾರರು

    ಪಾಕ್‌ ತಂಡಕ್ಕೆ ಇನ್ಮುಂದೆ ಬಿರಿಯಾನಿ ಬಂದ್‌ – ಆನ್‌ಲೈನ್‌ನಲ್ಲಿ ಬುಕ್‌ ಮಾಡಿ ಸಿಕ್ಕಿಬಿದ್ದ ಆಟಗಾರರು

    ಕೋಲ್ಕತ್ತಾ: ಭಾರತದ ಆತಿಥ್ಯದಲ್ಲಿ ಇದೇ ನಡೆಯುತ್ತಿರುವ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡಿರುವ ಬಾಬರ್‌ ಆಜಂ ನಾಯಕತ್ವದ ಪಾಕಿಸ್ತಾನ ಕ್ರಿಕೆಟ್​ ತಂಡವು (Pakistan Criekct Team) ಬಾಂಗ್ಲಾದೇಶ ವಿರುದ್ಧ ಪಂದ್ಯವನ್ನಾಡಲು ಕೋಲ್ಕತ್ತಾಗೆ (Kolkata0 ಆಗಮಿಸಿದೆ. ಭರ್ಜರಿ ಆತಿಥ್ಯದೊಂದಿಗೆ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಬಿರಿಯಾನಿ ಮತ್ತು ಇತರ ಭಕ್ಷ್ಯಗಳನ್ನು ಸವಿದ ನಂತರ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ನಡೆಯಲಿರುವ ಕೊನೆಯ 3 ಪಂದ್ಯಗಳಿಗೆ ತಯಾರಿ ನಡೆಸುತ್ತಿರುವ ಪಾಕಿಸ್ತಾನ ತಂಡಕ್ಕೆ ಇನ್ನುಂದೆ ಬಿರಿಯಾನಿ (Biriyani) ಸಿಗುವುದಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

    ಪಾಕಿಸ್ತಾನ ತಂಡ ಅಕ್ಟೋಬರ್ 31ರಂದು (ಇಂದು) ಬಾಂಗ್ಲಾದೇಶ ವಿರುದ್ಧ ಹಾಗೂ ನವೆಂಬರ್ 4ರಂದು ನ್ಯೂಜಿಲೆಂಡ್ (New Zealand) ವಿರುದ್ಧ ಬೆಂಗಳೂರಿನಲ್ಲಿ ಸೆಣಸಲಿದೆ. ನವೆಂಬರ್ 11ರಂದು ಕೋಲ್ಕತ್ತಾಗೆ ವಾಪಸಾಗಲಿದ್ದು, ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಆದ್ರೆ ಇನ್ನುಳಿದ ಪಂದ್ಯಗಳಿಗೆ ಪಾಕಿಸ್ತಾನ ಕ್ರಿಕೆಟ್ ತಂಡವು ಬಿರಿಯಾನಿ ಮಾತ್ರವಲ್ಲದೆ ಇನ್ನೂ ಹಲವಾರು ಭಕ್ಷ್ಯಗಳನ್ನು ತ್ಯಜಿಸಬೇಕಾಗಿದೆ. ಕಟ್ಟುನಿಟ್ಟಾದ ಫುಡ್‌ ಚಾರ್ಟ್‌ನೊಂದಿಗೆ ಅಭ್ಯಾಸ ಮಾಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

    ಝಮ್‌ ಝಮ್‌ ಬಿರಿಯಾನಿ ಸವಿದ ಪಾಕ್‌: ಸತತ ಸೋಲಿನಿಂದ ಕಂಗೆಟ್ಟಿರುವ ಪಾಕ್‌ ಆಟಗಾರರು ಫಿಟ್‌ನೆಸ್‌ ಕಾಯ್ದುಕೊಳ್ಳಲು ತಮ್ಮ ಪ್ರೀತಿಯ ಬಿರಿಯಾನಿ ತ್ಯಜಿಸಬೇಕು, ಅದರ ಬದಲಿಗೆ ಮೆಡಿಟರೇನಿಯನ್ ಕಬಾಬ್​​ಗಳು (Mediterranean Kebabs), ಮೊಟ್ಟೆಗಳು ಮತ್ತು ಪ್ರೋಟೀನ್‌ಯುಕ್ತ ಆಹಾರವನ್ನು ಸೇವಿಸಬೇಕು ಎಂದು ಹೇಳಲಾಗಿದೆ. ಈ ನಡುವೆ ತಮಗೆ ನಿಗದಿಪಡಿಸಿದ್ದ ರೆಸ್ಟೋರೆಂಟ್‌ ಅನ್ನು ಬಿಟ್ಟು ಆನ್‌ಲೈನ್‌ನಲ್ಲಿ ಬುಕ್‌ಮಾಡಿದ ಬಗೆಬಗೆಯ ಭಕ್ಷ್ಯಗಳನ್ನ ಸವಿದಿರುವುದು ಕಂಡುಬಂದಿದೆ. ಇದು ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಯಲಿದೆ.

    ಹೌದು. ಕೋಲ್ಕತ್ತಾಗೆ ಆಗಮಿಸಿರುವ ಪಾಕ್‌ ತಂಡಕ್ಕೆ ಮೆನ್‌ ಇನ್‌ ಗ್ರೀನ್‌ ಹೋಟೆಲ್‌ನಲ್ಲಿ ಊಟ ನಿಗದಿಪಡಿಸಲಾಗಿತ್ತು. ಆದ್ರೆ ಪಾಕ್‌ ತಂಡ ಕೋಲ್ಕತ್ತಾದ ಫೇಮಸ್‌ ಝಮ್ ಝಮ್ ರೆಸ್ಟೋರೆಂಟ್‌ ಬಿರಿಯಾನಿ (Zam Zam Biriyani), ಕಬಾಬ್‌ ಹಾಗೂ ಚಾಪ್ಸ್‌ಗಳನ್ನು ಆನ್‌ಲೈನ್‌ನಲ್ಲಿ ಬುಕ್‌ಮಾಡಿ ತರಿಸಿಕೊಂಡು ಸವಿದಿದೆ. ಝಮ್ ಝಮ್ ರೆಸ್ಟೋರೆಂಟ್‌ನ ನಿರ್ದೇಶಕ ಶಾದ್ಮನ್ ಫೈಜ್ ಇದನ್ನು ಖಚಿತಪಡಿಸಿದ್ದಾರೆ.

    ಮೊದಲು ಇದು ಪಾಕ್‌ ತಂಡದಿಂದ ಬಂದ ಆರ್ಡರ್‌ ಎಂದು ತಿಳಿದಿರಲಿಲ್ಲ, ಸ್ವಲ್ಪ ತಡವಾಗಿ ಗೊತ್ತಾಗಿದೆ. ಇಡೀ ವಿಶ್ವದಲ್ಲೇ ಕೋಲ್ಕತ್ತಾದ ನಮ್ಮ ಝಮ್‌ ಝಮ್‌ ಬಿರಿಯಾನಿ ತನ್ನದೇ ವಿಶೇಷತೆ ಹೊಂದಿದೆ. ಹಾಗಾಗಿ ಬಹಳ ಪ್ರಸಿದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ.

    ಇದಕ್ಕೂ ಮುನ್ನ ಹೈದರಾಬಾದ್‌, ಚೆನ್ನೈನಲ್ಲಿ ಪಾಕ್‌ ತಂಡದ ಡಯಟ್‌ ಚಾರ್ಟ್‌ನಲ್ಲಿ ಗ್ರಿಲ್ಡ್‌ ಲ್ಯಾಂಬ್‌ ಚಾಪ್ಸ್ (Grilled Lamb Chops), ಮಟನ್‌ ಕರಿ, ಹೈದರಾಬಾದ್‌ನಲ್ಲಿ ಬಹುಬೇಡಿಕೆಯ ಬಟರ್‌ ಚಿಕನ್‌ ಮತ್ತು ಗ್ರಿಲ್ಡ್‌ ಫಿಶ್‌ (Grilled Fish) ನೀಗದಿಪಡಿಸಲಾಗಿತ್ತು.

    ಕಳಪೆ ಫಿಟ್‌ನೆಸ್‌ ಬಗ್ಗೆ ಕಿಡಿ: ಇನ್ನೂ ಪಾಕಿಸ್ತಾನ ಕ್ರಿಕೆಟ್‌ ತಂಡದ ಪಾಕ್‌ ಕಳಪೆ ಫಿಟ್‌ನೆಸ್‌ ಬಗ್ಗೆ ಪಾಕ್‌ ಮಾಜಿ ನಾಯಕ ವಾಸಿಮ್ ಅಕ್ರಮ್ ಅವರು ವಾಗ್ದಾಳಿ ನಡೆಸಿದ್ದಾರೆ. ಆಟಗಾರರು ಒಂದೆರಡು ವರ್ಷಗಳಿಂದ ಫಿಟ್ನೆಸ್ ಪರೀಕ್ಷೆಗೆ ಒಳಗಾಗಿಲ್ಲ. ದೇಶಕ್ಕಾಗಿ ಆಡುತ್ತಿರುವುದಕ್ಕೆ ಆಟಗಾರರಿಗೆ ಸಂಭಾವನೆ ನೀಡಲಾಗುತ್ತಿದೆ. ಆದ್ರೆ ಒಂದು ನಿರ್ದಿಷ್ಟ ಮಾನದಂಡವಿರಬೇಕು. ಪ್ರತಿದಿನ 8 ಕೆಜಿ ಮಟನ್​ ತಿನ್ನುತ್ತಾರೆ ಎಂದು ಹೇಳಿದ್ದರು. ಹೀಗಾಗಿ ತಂಡದ ಆಡಳಿತವು ಅವರ ಅನಾರೋಗ್ಯಕರ ಆಹಾರ ಪದ್ಧತಿಯನ್ನು ನಿಲ್ಲಿಸಿದೆ ಮತ್ತು ಆಟಗಾರರಿಗೆ ಕಟ್ಟುನಿಟ್ಟಾದ ಆಹಾರ ಯೋಜನೆ ರೂಪಿಸಿದೆ ಎಂದು ಹೇಳಿದ್ದಾರೆ.

    ಸದ್ಯ 6 ರಲ್ಲಿ 2 ಪಂದ್ಯಗಳಲ್ಲಿ ಗೆದ್ದಿರುವ ಪಾಕ್‌ ತಂಡ ಬೃಹತ್‌ ಜಯವನ್ನು ಎದುರು ನೋಡುತ್ತಿದೆ. ಆ ಮೂಲಕ ಉಳಿದ ಮೂರು ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಅಗ್ರ 4ರಲ್ಲಿ ಸ್ಥಾನ ಪಡೆಯಲು ಹಾತೊರೆಯುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಟೋದಲ್ಲಿ ಬಂದಿದ್ದಕ್ಕೆ ಬಿರಿಯಾನಿ ವಾಪಸ್ – ಬೆಂಜ್ ಕಾರ್‌ಗೆ ಶಿಫ್ಟ್ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಿದ ಜಮೀರ್

    ಆಟೋದಲ್ಲಿ ಬಂದಿದ್ದಕ್ಕೆ ಬಿರಿಯಾನಿ ವಾಪಸ್ – ಬೆಂಜ್ ಕಾರ್‌ಗೆ ಶಿಫ್ಟ್ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಿದ ಜಮೀರ್

    ಬೆಂಗಳೂರು: ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರು ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಭರ್ಜರಿ ಬಾಡೂಟ ಕಳುಹಿಸಿದ್ದಾರೆ. ಆದರೆ ಆಟೋ ರಿಕ್ಷಾದಲ್ಲಿ ಕಳುಹಿಸಲಾಗಿದ್ದ ಬಿರಿಯಾನಿಯನ್ನು (Biryani) ಸಿಎಂ ನಿವಾಸದೊಳಗೆ ತೆಗೆದುಕೊಂಡು ಹೋಗಲು ಪೊಲೀಸರು ಬಿಡದ ಹಿನ್ನೆಲೆ ಬೆಂಜ್ ಕಾರ್‌ನಲ್ಲಿ ಕೊಂಡೊಯ್ಯಲಾಗಿದೆ.

    ಹೌದು, ಜಮೀರ್ ಅಹಮದ್ ಖಾನ್ ಅವರು ಹಬ್ಬದ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರಿಗಾಗಿ ಆಟೋದಲ್ಲಿ ಬಿರಿಯಾನಿ ಕಳುಹಿಸಿದ್ದರು. ಸಿಎಂ ಸರ್ಕಾರಿ ನಿವಾಸದ ಬಳಿ ಆಟೋದಲ್ಲಿ ಬಂದ ಬಿರಿಯಾನಿಯನ್ನು ಅನುಮತಿ ಇಲ್ಲದೆ ಒಳಗೆ ಕೊಂಡುಹೋಗಲು ಬಿಡಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊನೆಗೂ ಅನುಮತಿ ಸಿಗದ ಹಿನ್ನೆಲೆ ಆಟೋದಲ್ಲಿ ತಂದಿದ್ದ ಬಿರಿಯಾನಿಯನ್ನು ಪೊಲೀಸರು ವಾಪಸ್ ಕಳುಹಿಸಿದ್ದಾರೆ. ಬಳಿಕ ಬಿರಿಯಾನಿಯನ್ನು ಹೇಗಾದ್ರೂ ಮಾಡಿ ಸಿಎಂ ನಿವಾಸಕ್ಕೆ ಕಳುಹಿಸಲೇಬೇಕು ಎಂದು ಜಮೀರ್ ಬೆಂಬಲಿಗರು ಅದನ್ನು ಬೆಂಜ್ ಕಾರಿಗೆ ಶಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ತೆರಳುತ್ತಿದ್ದ ರಾಹುಲ್ ಗಾಂಧಿಗೆ ಪೊಲೀಸರಿಂದ ತಡೆ

    ಬೆಂಜ್ ಕಾರಿನಲ್ಲಿ ಬಿರಿಯಾನಿ ಇಟ್ಟು ಕೊನೆಗೂ ಸಿಎಂ ನಿವಾಸದೊಳಗೆ ತೆರಳಿ ಅದನ್ನು ಅಲ್ಲಿ ಇಳಿಸಿ ಜಮೀರ್ ಬೆಂಬಲಿಗರು ವಾಪಸಾಗಿದ್ದಾರೆ. ಇದನ್ನೂ ಓದಿ: ಬಕ್ರೀದ್ ಆಚರಣೆ – ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಭಾಗಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]