Tag: ಬಿಯ್ ಬಾಟ್ಲಿ

  • ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್

    ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್

    ಬೆಂಗಳೂರು: ಬಾರ್ (Bar) ಗೆ ನುಗ್ಗಿದ ಗ್ಯಾಂಗ್ ಮತ್ತು ಕುಡಿಯುತ್ತಾ ಕುಳಿತಿದ್ದ ಗ್ಯಾಂಗ್ ನಡುವೆ ಲಾಂಗ್ ಮತ್ತು ಬಿಯರ್ (Beer) ಬಾಟ್ಲಿಯಿಂದ ಮಾರಾಮಾರಿ ನಡೆದಿರೊ ಘಟನೆ ಬೆಂಗಳೂರಿನ ಲಗ್ಗೆರೆಯ ಸನ್ ರೈಸ್ ಬಾರ್ ನಲ್ಲಿ ನಡೆದಿದೆ.

    ಮೂರು ದಿನಗಳ ಹಿಂದೆ ಲಗ್ಗೆರೆಯ ಸನ್ ರೈಸ್ ಬಾರ್ ಗೆ ನುಗ್ಗಿದ ಇಬ್ಬರು ಪುಂಡರು ಚೀಲದಿಂದ ಲಾಂಗ್ ಹೊರತೆಗೆದಿದ್ದಾರೆ. ಕುಡಿಯುತ್ತಾ ಕುಳಿತಿದ್ದ ರೌಡಿಶೀಟರ್ ಐಕಾನ್ ರಾಜು ಮತ್ತು ಆತನ ಸ್ನೇಹಿತನ ಮೇಲೆ ಲಾಂಗ್ ನಿಂದ ಅಟ್ಯಾಕ್ ಮಾಡಿದ್ದಾರೆ. ಅಟ್ಯಾಕ್ ಗೆ ಮೊಂಡು ಧೈರ್ಯ ತೋರಿರೋ ಐಕಾನ್ ರಾಜು, ಹಾಗು ಸ್ನೇಹಿತ ಬಿಯರ್ ಬಾಟ್ಲಿಯಿಂದ ಹೊಡೆದು ಎದುರಾಳಿ ಗ್ಯಾಂಗ್ ಹಿಮ್ಮೆಟ್ಟಿಸಿದ್ದಾರೆ.

    ಯಾವ ರೀತಿಯ ಅಟ್ಯಾಕ್ ನಡೆದಿದೆ ಅಂದ್ರೆ ಮೈ ಝುಮ್ಮೆನ್ನುತ್ತೆ. ಆ ಕಡೆಯಿಂದ ಮಚ್ಚಿನ ದಾಳಿಯಾದ್ರೆ ಇವರಿಗೆ ಬಿಯರ್ ಬಾಟ್ಲಿಗಳೇ ಆಯುಧ. ಕೊನೆಗೆ ಹೊಡೆಯಲು ಬಂದವರ ಲಾಂಗ್ ಕಸಿದು ಓಡಿಸಿದ್ದಾರೆ. ಅಸಲಿಗೆ ಈ ಅಟ್ಯಾಕ್ ಗೆ ಕ್ರಿಕೆಟ್ ಬೆಟ್ಟಿಂಗ್ (Cricket Betting) ಕಾರಣ ಎನ್ನಲಾಗ್ತಿದೆ. ಇದನ್ನೂ ಓದಿ: ಗೇಟ್ ತೆಗೆಯೋದು ತಡವಾಗಿದ್ದಕ್ಕೆ ಸೆಕ್ಯೂರಿಟಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕಿ

    ಬೆಟ್ಟಿಂಗ್ ಡೀಲ್ ವಿಚಾರವಾಗಿ ಅರುಣ್ ಎನ್ನುವ ವ್ಯಕ್ತಿಯನ್ನ ಹುಡುಕಿಕೊಂಡು ಬಂದಿದ್ದ ಗ್ಯಾಂಗ್ ಗೆ ಅರುಣ್ ಸಹೋದರ ಐಕಾನ್ ರಾಜು ಕಂಡಿದ್ದಾನೆ. ಆಗ ಅಟ್ಯಾಕ್ ನಡೆಸಿದ್ದಾರೆ. ಹೀಗೆಲ್ಲಾ ಪುಡಿ ರೌಡಿಗಳು ಮಚ್ಚು ಹಿಡ್ಕೊಂಡು ಗಲಾಟೆ ಮಾಡ್ತಿದ್ರೆ, ನಮ್ಮ ಪೊಲೀಸ್ರು ನಿದ್ದೆ ಮಾಡ್ತಿದ್ದಂತೆ ಕಾಣ್ತಿದೆ.

    Live Tv
    [brid partner=56869869 player=32851 video=960834 autoplay=true]