ಕೋಲಾರ: ಕುಡಿಯಲು (Drinks) ಹಣ ನೀಡದ ಹಿನ್ನೆಲೆ ಯುವಕ ತನ್ನ ಚಿಕ್ಕಮ್ಮನಿಗೆ (Aunt) ಬಿಯರ್ ಬಾಟಲಿಯಿಂದ ತಿವಿದು ಹತ್ಯೆ ಮಾಡಲು ಯತ್ನಿಸಿದ ಘಟನೆ ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ತಾಲೂಕಿನ ದಾಸೇಗೌಡನೂರು ಬಳಿ ನಡೆದಿದೆ.
ಗರುಡ ಕೆಂಪನಹಳ್ಳಿ ಗ್ರಾಮದ ಅನಸೂಯ (35) ಹಲ್ಲೆಗೊಳಗಾದ ಮಹಿಳೆ. ಇದೆ ಗ್ರಾಮದ ಆನಂದ್ (26) ಕೊಲೆಗೆ ಯತ್ನಿಸಿದ ಯುವಕ. ಕೆಲಸಕ್ಕೆ ತೆರಳಿದ್ದ ವೇಳೆ ಕುಡಿತಕ್ಕೆ ಹಣ ನೀಡುವಂತೆ ಯುವಕ ಬೇಡಿಕೆ ಇಟ್ಟಿದ್ದಾನೆ. ಹಣ ಕೊಡದಿದ್ದಾಗ ಬಿಯರ್ ಬಾಟಲಿಯಿಂದ ಚುಚ್ವಿ ಕೊಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ಮೈಸೂರಿನಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿ ಖಾತೆ ಮಾಡಿಸಲು ಲಂಚ ಕೇಳ್ತಾರೆ – ಯತೀಂದ್ರ ಆರೋಪ
ಗಾಯಾಳು ಮಹಿಳೆ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ಆನಂದನನ್ನು ಕಾಮಸಮುದ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿಎಂ ಅವರೇ ತುಘಲಕ್ ದರ್ಬಾರಿಗೆ ಇತಿಮಿತಿ ಇರಲಿ: ವಿಜಯೇಂದ್ರ
ಮಂಗಳೂರು: ಶಾಲೆಯ (School) ಮುಂದೆ ಬಿಯರ್ ಬಾಟಲಿಯನ್ನು (Beer Bottle) ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಯುವಕನ ಕೊಲೆ ಮಾಡಿರುವ ಘಟನೆ ಉಳ್ಳಾಲದ (Ullala) ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿ ನಡೆದಿದೆ.
ಕೊಲ್ಯ ಸಾರಸ್ವತ ಕಾಲೋನಿಯ ಜಾಯ್ ಲ್ಯಾಂಡ್ ಶಾಲೆ ಬಳಿಯ ನಿವಾಸಿ ವರುಣ್ ಗಟ್ಟಿ (28) ಕೊಲೆಯಾದ ಯುವಕ. ಬುಧವಾರ ತಡರಾತ್ರಿ ದುಷ್ಕರ್ಮಿಗಳಾದ ಸೂರಜ್ ಮತ್ತು ರವಿರಾಜ್ ಶಾಲೆ ಎದುರು ಇದ್ದ ಕಟ್ಟೆಯೊಂದರಲ್ಲಿ ಕುಳಿತು ಬಿಯರ್ ಕುಡಿದಿದ್ದಾರೆ. ನಂತರ ಬಾಟಲಿಯನ್ನು ರಸ್ತೆಗೆ ಎಸೆದಿದ್ದಾರೆ. ಇದನ್ನು ಕಂಡ ವರುಣ್ ಹಾಗೂ ಆತನ ಸ್ನೇಹಿತ ಅಕ್ಷಯ್ ಶಾಲೆಯ ಮುಂದೆ ಬಿಯರ್ ಬಾಟಲಿ ಯಾಕೆ ಎಸೆಯುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದರಿಂದ ರೊಚ್ಚಿಗೆದ್ದ ಸೂರಜ್ ಹಾಗೂ ರವಿರಾಜ್ ವರುಣ್ ಹಾಗೂ ಅಕ್ಷಯ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಜಗಳ ಅತಿರೇಕಕ್ಕೆ ಹೋಗಿ ಆರೋಪಿಗಳು ಹರಿತವಾದ ಆಯುಧದಿಂದ ವರುಣ್ ಬೆನ್ನಿಗೆ ಇರಿದಿದ್ದಾರೆ. ಇದನ್ನೂ ಓದಿ: ಬಿಎಂಟಿಸಿಗೆ ಗೃಹಿಣಿ ಬಲಿ – ಬಸ್ ಚಾಲಕ, ನಿರ್ವಾಹಕ ಎಸ್ಕೇಪ್
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ವರುಣ್ ಅದೇ ಸ್ಥಿತಿಯಲ್ಲಿ ತನ್ನ ಮನೆ ಕಡೆ ನಡೆದುಕೊಂಡೇ ಹೋಗಿದ್ದಾನೆ. ಆತ ನಡೆದ ದಾರಿಯುದ್ದಕ್ಕೂ ರಕ್ತ ಹರಿದಿದೆ. ತಕ್ಷಣ ವರುಣ್ ಕುಟುಂಬಸ್ಥರು ಆತನನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರುಣ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅದೇ ಸಾರಸ್ವತ ಕಾಲೋನಿ ನಿವಾಸಿಗಳಾಗಿರುವ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ರವಿರಾಜ್ ಸೋಮೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಸೂರಜ್ ಮರಳು ಸಾಗಿಸುವ ಲಾರಿ ಚಾಲಕನಾಗಿದ್ದಾನೆ. ಮೃತ ವರುಣ್ ಮಂಗಳೂರು ಮೂಡಾದ ಕಮಿಷನರ್ ವಾಹನ ಚಾಲಕನಾಗಿದ್ದ. ಇದೀಗ ವರುಣ್ ತಂದೆ, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾನೆ. ಇದನ್ನೂ ಓದಿ: ಆತ್ಮಹತ್ಯೆ ರೀತಿ ಬಿಂಬಿಸಿ ನಾಪತ್ತೆಯಾಗಿದ್ದ ಪೇದೆ ಅಯ್ಯಪ್ಪ ಮಾಲೆ ಧರಿಸಿ ಪತ್ತೆ
ನವದೆಹಲಿ: ಕಾರಿನಲ್ಲಿ ಜೋರಾಗಿ ಮ್ಯೂಸಿಕ್ ಹಾಕಿರುವ ಕುರಿತಾಗಿ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ, ದೆಹಲಿ ಪೊಲೀಸ್ ಮೇಲೆ ಬಿಯರ್ ಬಾಟ್ಲಿಯಿಂದ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ನಡೆದಿದ್ದೇನು?: ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಕಾರಿನಲ್ಲಿ ಮೂವರು ಜೋರಾಗಿ ಸೌಂಡ್ ಇಟ್ಟು ಹಾಡು ಕೇಳುತ್ತಿದ್ದರು. ಈ ವೇಳೆ ಗಸ್ತು ತಿರುಗುತ್ತಿದ್ದ ಪೊಲೀಸ್ ಪೇದೆಯೊಬ್ಬರು ಸೌಂಡ್ ಕಡಿಮೆ ಮಾಡುವಂತೆ ಹೇಳಿದ್ದಾರೆ. ಕಾರಿನಲ್ಲಿದ್ದವರು ಗಸ್ತು ತೀರುಗುತ್ತಿದ್ದ ಸಿಬ್ಬಂದಿಯನ್ನು ನಿಂದಿಸಲು ಪ್ರಾರಂಭಿಸಿದರು. ಪೊಲೀಸ್ ಕಾರಿನ ಸಂಖ್ಯೆಯನ್ನು ನಮೂದಿಸಿದರು. ತಮ್ಮ ಕಾರಿನ ನಂಬರ್ ನೋಟ್ ಆಗಿರುವುದನ್ನು ಅರಿತುಕೊಂಡ ಆರೋಪಿಗಳು ಮತ್ತೊಮ್ಮೆ ಯು-ಟರ್ನ್ ತೆಗೆದುಕೊಂಡು ಕಾರನ್ನು ಗಸ್ತು ತಿರುಗುತ್ತಿದ್ದ ಸಿಬ್ಬಂದಿಯತ್ತ ವೇಗವಾಗಿ ಚಲಾಯಿಸಿ ಕಾನ್‍ಸ್ಟೇಬಲ್‌ಗೆ ಡಿಕ್ಕಿ ಹೊಡೆಯಲು ಯತ್ನಿಸಿದರು ಆದರೆ ಎಚ್ಚೆತ್ತ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿದ್ದ ಮೂವರು ಕೈಯಲ್ಲಿ ಬಿಯರ್ ಬಾಟಲಿಗಳನ್ನು ಹಿಡಿದಿದ್ದರು. ಕಾರಿನಲ್ಲಿದ್ದವರಲ್ಲಿ ಒಬ್ಬನು ಬಿಯರ್ ಬಾಟಲಿಯಿಂದ ಕಾನ್‍ಸ್ಟೆಬಲ್ ಪ್ರದೀಪ್ ಅವರ ತಲೆಗೆ ಹೊಡೆದಿದ್ದಾನೆ. ತಕ್ಷಣವೇ ಮೂವರು ಎಸ್ಕೇಪ್ ಆಗಿದ್ದಾರೆ. ನಂತರ ಕಾನ್‍ಸ್ಟೇಬಲ್ ಪ್ರದೀಪ್ ಅವರನ್ನು ಚಿಕಿತ್ಸೆಗಾಗಿ ಗುಲಾಬಿ ಬಾಗ್‍ನ ಎನ್‍ಕೆಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ : ಇರುವೆ ಪಾತ್ರವಾಗಿ ಬಂದ ಸಂಚಾರಿ ವಿಜಯ್
ಐಪಿಸಿಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನ್‍ಸ್ಟೇಬಲ್ ಪ್ರದೀಪ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಘಟನೆಯ ನಂತರ ಅಶೋಕ್ (22), ಯಶ್ ಪ್ರತಾಪ್ ಸಿಂಗ್ (22) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಾರ್ ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
– ಕುಡಿಯುವ, ಕೈಯಿಂದ ಬಾಟಲಿ ಒಡೆಯುವುದರಿಂದಲೇ ಕಾರ್ಮಿಕ ಫೇಮಸ್
ಬೀಜಿಂಗ್: ಬಿಯರ್ ಕುಡಿಯುವ ಶೈಲಿಯಿಂದ ಕಾರ್ಮಿಕರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದು, ಕ್ಷಣಾರ್ಧದಲ್ಲೇ ಬಿಯರ್ ಕುಡಿಯುವ ಮೂಲಕ ನೆಟ್ಟಿಗರನ್ನು ನಿಬ್ಬೆರಗಾಗಿಸಿದ್ದಾರೆ.
ಚೀನಾದ ಹೆಬೀ ಪಾಂಗ್ಜೈ ಎಂಬುವವರು ಬೀಯರ್ ಕುಡಿಯುವ ಶೈಲಿಯಿಂದ ಯುವಕರು ಹಾಗೂ ನೆಟ್ಟಿಗರನ್ನು ನಿಬ್ಬೆರಗಾಗುವಂತೆ ಮಾಡಿದ್ದು, ಒಂದು ಸಾರಿ ಬಿಯರ್ ಬಾಟಲಿ ಎತ್ತಿದ ನಂತರ ಕ್ಷಣಾರ್ಧದಲ್ಲೇ ಅದನ್ನು ಖಾಲಿ ಮಾಡುತ್ತಾರೆ. ಬಿಯರ್ ಬಾಟಲಿಯ ಕ್ಯಾಪ್ ತೆಗೆಯುವುದರಿಂದ ಹಿಡಿದು ಕುಡಿದು ಮುಗಿಸುವವರೆಗೂ ವಿಭಿನ್ನ ಶೈಲಿ ಅನುಸರಿಸುತ್ತಾರೆ. ಅಲ್ಲದೆ ಕುಡಿಯಲು ಬಿಯರ್ ಬಾಟಲಿ ಎತ್ತಿದ ಕ್ಷಣಾರ್ಧದಲ್ಲೇ ಅದನ್ನು ಖಾಲಿ ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Today, I accepted an interview to make some brick chopping and drinking videos. Share them with you, have a nice weekends, friends! pic.twitter.com/Zi1NGBwvFo
ಪಾಂಗ್ಜೈ ಚೀನಾದ ಪುಟ್ಟ ಗ್ರಾಮ ಝೆಂಗ್ಯುವಾನ್ಸಿ ಯಲ್ಲಿ ಕಾರ್ಮಿಕರಾಗಿದ್ದಾರೆ. ಇವರ ಬಿಯರ್ ಕುಡಿಯುವ ಶೈಲಿಯ ವಿಡಿಯೋದಿಂದಲೇ ಟ್ವಿಟ್ಟರಿನಲ್ಲಿ ಸುಮಾರು 1.30 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಆದರೆ ಬಹುತೇಕ ಹಿಂಬಾಲಕರಿಗೆ ಇವರ ಹೆಸರು ಲಿಯು ಶಿಚಾವೊ ಎಂಬುದು ತಿಳಿದಿಲ್ಲ.
ಬಿಯರ್ ಕುಡಿಯುವ ಹಾಗೂ ಬಿಯರ್ ಬಾಟಲಿಗಳ ಮೂಲಕ ವಿವಿಧ ಸ್ಟಂಟ್ ಮಾಡುವುದರಿಂದಲೇ ಇವರು ಸಾಮಾಜಿಕ ಜಾಲತಾಣಗಳಲ್ಲಿ ಸುಪರ್ ಸ್ಟಾರ್ ಆಗಿದ್ದಾರೆ. ಪಾಂಗ್ಜೈ ಬಿಯರ್ ಜೊತೆಗೆ ಇನ್ನೂ ಹಲವು ವಿಧದ ಮದ್ಯವನ್ನು ಬೆರೆಸುತ್ತಾರೆ. ಅಲ್ಲದೆ ಚೀನಾದ ಮದ್ಯದವನ್ನು ಬೆರೆಸಿ ಕುಡಿಯುತ್ತಾರೆ.
ಇವರು ಟ್ವಿಟ್ಟರ್ ಖಾತೆ ತೆರೆಯುವುದಕ್ಕೂ ಮೊದಲು ಕುಯಿಶೌ ಎಂಬ ಶಾರ್ಟ್ ವಿಡಿಯೋ ವಾಹಿನಿ ಮೂಲಕ ತಮ್ಮ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದರಲ್ಲಿ ಪ್ರತಿದಿನ ನೂರಾರು ವೀಕ್ಷಕರು ಹೆಚ್ಚುತ್ತಿದ್ದಂತೆ, ಇನ್ನೂ ಹೆಚ್ಚು ಜನರನ್ನು ಸೆಳೆಯಲು ಟ್ವಿಟ್ಟರ್ ಖಾತೆ ತೆರೆಯಲು ನಿರ್ಧರಿಸಿದರು.
ಬಿಯರ್ ಬಾಟಲಿಯ ಸ್ಟಂಟ್ ಜೊತೆಗೆ ಇಟ್ಟಿಗೆ ಒಡೆಯುವುದು ಹಾಗೂ ಕೈಯಿಂದಲೇ ಬಿಯರ್ ಬಾಟಲಿಗಳನ್ನು ಒಡೆಯುವ ತಂತ್ರಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇಟ್ಟಿಗೆ ಒಡೆಯುವ ವಿಡಿಯೋವನ್ನು ನಾನು ಮೊದಲು ನೋಡಿದಾಗ ನಕಲಿ ಎನಿಸಿತು. ಹೀಗಾಗಿ ನಾನೇ ಪ್ರಯತ್ನ ಮಾಡಬೇಕು ಎಂದುಕೊಂಡು ಸ್ವತಃ ನಾನೇ ಇಟ್ಟಿಗೆ ಒಡೆಯಲು ಪ್ರಾರಂಭಿಸಿದೆ ಎಂದು ಪಾಂಗ್ಜೈ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಹೈದರಾಬಾದ್: 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಪ್ರೀತಿ ವಿಚಾರಕ್ಕೆ ಸಿಟ್ಟಿಗೆದ್ದು ಸ್ನೇಹಿತನಿಗೇ ಬಿಯರ್ ಬಾಟಲಿಯಿಂದ ಹೊಡೆದಿರುವ ಘಟನೆ ಮೀರ್‍ಪೇಟ್‍ನ ಜಿಲ್ಲೆಲಾಗುಡಾದಲ್ಲಿ ನಡೆದಿದೆ.
ಜಿಲ್ಲೆಲಾಗುಡಾದ ಜಿಲ್ಲಾ ಪರಿಷದ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಹೀಗಾಗಿ ಪ್ರೀತಿ ವಿಚಾರಕ್ಕೆ ಹಾಗೂ ಬೇರೆ ವೈಯಕ್ತಿಕ ವಿಚಾರಗಳಿಗೆ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇತ್ತು.
ಆದ್ರೆ ಶುಕ್ರವಾರ ಈ ಜಗಳ ಮಿತಿಮೀರಿತ್ತು. ಮತ್ತೆ ಶನಿವಾರ ಇಬ್ಬರು ಶಾಲೆಗೆ ಬಂದಾಗ ಕೂಡ ಜಗಳ ಮುಂದುವರಿಸಿದ್ದರು. ಕೊನೆಗೆ ಜಗಳ ತಾರಕಕ್ಕೇರಿ ಕೋಪಗೊಂಡ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿ ಮೂತ್ರ ವಿಸರ್ಜನೆ ಮಾಡಲು ಹೊರಹೋದಾಗ ಆತನಿಗೆ ಖಾಲಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ಮಾಡಿಸಿದ್ದಾನೆ. ಅಷ್ಟೇ ಅಲ್ಲದೆ, ಆತನನ್ನು ತಡೆಯಲು ಬಂದ ಸ್ನೇಹಿತನ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.
ಈ ಘಟನೆಯಿಂದ ಹಲ್ಲೆಗೊಳಗಾದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ಘಟನೆ ಕುರಿತು ರಾಚಕೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಈ ಹಿಂದೆ ಕೂಡ ಪ್ರೀತಿಯ ವಿಚಾರಕ್ಕೆ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳನ್ನು ಬೆಂಕಿ ಹಚ್ಚಿ ಸುಟ್ಟ ಘಟನೆ ಹೈದರಾಬಾದ್‍ನಿಂದ 190 ಕಿ.ಮೀ ದೂರವಿರುವ ತೆಲಂಗಾಣದ ಜಗ್ತಿಯಾಲ್ ಪಟ್ಟಣದಲ್ಲಿ ನಡೆದಿತ್ತು.
ಚಿಕ್ಕಬಳ್ಳಾಪುರ: ಡಿಸಿ, ಎಸ್‍ಪಿ ಮನೆಯ ಪಕ್ಕದಲ್ಲೇ ಗಾಂಜಾ ಹೊಡೆದು ಗಲಾಟೆ ಮಾಡಿದ ನಾಲ್ವರು, ವ್ಯಕ್ತಿಯೊರ್ವನ ತಲೆಗೆ ಬಿಯರ್ ಬಾಟಲಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಅದಿತ್ಯಾ ಕಾನಡೆ ಹಾಗೂ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರ ಮನೆಗಳ ಪಕ್ಕದಲ್ಲೇ ಇರುವ ಸಿಟಿಜನ್ ಕ್ಲಬ್ ಆವರಣದಲ್ಲಿ ಈ ಘಟನೆ ನಡೆದಿದೆ. ಸಿಟಿಜನ್ ಕ್ಲಬ್ ನ ಕಟ್ಟಡದಲ್ಲಿ ಸದ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿದ್ದು, ಈ ಸಿಟಿಜನ್ ಕ್ಲಬ್ ಆವರಣ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಇಂದು ಬೆಳ್ಳಂ ಬೆಳಿಗ್ಗೆ ಆವರಣದಲ್ಲೇ ಗಾಂಜಾ ಹೊಡೆದು ಮದ್ಯ ಸೇವನೆ ಮಾಡಿರೋ ಕಿರಾತಕರು ನಗರಗೆರೆ ಗ್ರಾಮದ ಗಂಗಾಧರ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಗಂಗಾಧರ್ ಪರಿಚಯಸ್ಥ ರಾಮು ಎಂಬಾತ ಫೋನ್ ಕರೆ ಮಾಡಿ ಈತನನ್ನ ಅಲ್ಲಿಗೆ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾನೆ. ಗಂಗಾಧರ್ ಬಂದ ಕೂಡಲೇ ರಾಮು ಸೇರಿದಂತೆ ಮೂವರು ಅಪರಿಚಿತರು ಗಂಗಾಧರ್ ಮೇಲೆ ಮುಗಿಬಿದ್ದು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.
ಸದ್ಯ ಗಾಯಾಳು ಗಂಗಾಧರ್ ತಲೆಗೆ ಗಂಭೀರವಾದ ಗಾಯವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಗಾಧರ್ ಬಳಿ ಇದ್ದ 5000 ರೂ. ನಗದು ಹಾಗೂ ಮೊಬೈಲನ್ನ ಕಿಡಿಗೇಡಿಗಳು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸಿ ಎಸ್‍ಪಿ ಮನೆ ಪಕ್ಕದಲ್ಲೇ ಇರೋ ಕಾಲೇಜಲ್ಲಿ ಈ ರೀತಿ ನಡೆದ್ರೆ ಜನಸಮಾನ್ಯರ ಗತಿ ಏನು ಅಂತ ಪ್ರತ್ಯಕ್ಷದರ್ಶಿಗಳು ಪ್ರಶ್ನಿಸಿದ್ದಾರೆ. ಆದ್ರೆ ಪ್ರಕರಣದಲ್ಲಿ ಈತನ ಪಾತ್ರ ಏನು? ಯಾಕೆ ಹಲ್ಲೆ ಮಾಡಿದ್ರು ಅನ್ನೋ ಸತ್ಯಾಂಶ ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಹಾಸನ: ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಗುಂಪೊಂದು ಹೊಡೆದಾಡಿಕೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಅರಕಲಗೂಡು ಪಟ್ಟಣದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಕಾಲೇಜು ಮುಗಿದ ಬಳಿಕ ಯುವಕರು ಪಟ್ಟಣದ ಬಸ್ ನಿಲ್ದಾಣದಲ್ಲಿ ತಗಾದೆ ತೆಗೆದುಕೊಂಡು ಬಡಿದಾಡಿಕೊಂಡಿದ್ದಾರೆ.
ಯುವಕರು ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯನ್ನು ತೆಗೆದುಕೊಂಡು ಪರಸ್ಪರ ಬಡಿದಾಡಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಹೆಚ್ಚಿನ ಅನಾಹುತ ಸಂಭವಿಸಬಾರದೆಂದು ಸಾರ್ವಜನಿಕರೇ ಮಧ್ಯಪ್ರವೇಶಿಸಿ ಯುವಕರನ್ನು ಹೊಡೆದಾಡದಂತೆ ತಡೆದಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ಬೆಂಗಳೂರು: ಮಹರ್ಷಿ ಆನಂದ್ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿರುವ ಘಟನೆ ನಡೆದಿದೆ.
ಬನಶಂಕರಿ ಮೂರನೇ ಹಂತದ ಕಾಮಾಕ್ಯ ಬಡವಾಣೆಯಲ್ಲಿರುವ ಆನಂದ್ ಗುರುಜಿ ನಿವಾಸದ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲಿ ಮತ್ತು ಮಾಂಸದ ತುಂಡನ್ನು ಎಸೆದಿದ್ದಾರೆ. ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯ ಮೇಲೆ ಮತ್ತು ಬಾಗಲಿಗೆ ಬಿಯರ್ ಬಾಟಲಿ ಒಡೆದು ಮಾಂಸ ಎಸೆದು ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಈ ಕೃತ್ಯ ಆನಂದ್ ಗುರುಜಿ ಮನೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೋವಿನ ಬಗ್ಗೆ ಆನಂದ್ ಗುರೂಜಿಯ ವಿಶೇಷ ಕಾರ್ಯಕ್ರಮ ನಾಳೆ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ರೀತಿಯ ಕೃತ್ಯವೆಸಗಿರಬಹುದು ಅಂತ ಆನಂದ್ ಗುರೂಜಿ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.