Tag: ಬಿಬಿಸಿ ಸಾಕ್ಷ್ಯಚಿತ್ರ

  • BBC Documentary Controversy: ಗುಜರಾತ್‌ ಗಲಭೆಯ ಬಗ್ಗೆ ಎಲೋನ್‌ ಮಸ್ಕ್‌ ಹೇಳಿದ್ದೇನು?

    BBC Documentary Controversy: ಗುಜರಾತ್‌ ಗಲಭೆಯ ಬಗ್ಗೆ ಎಲೋನ್‌ ಮಸ್ಕ್‌ ಹೇಳಿದ್ದೇನು?

    ವಾಷಿಂಗ್ಟನ್‌: ಕಳೆದ ಎರಡು ದಿನಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನ ಟ್ವಿಟ್ಟರ್‌ನಲ್ಲಿ ಫಾಲೋ ಮಾಡಲು ಶುರುಮಾಡಿದ ಟೆಸ್ಲಾ (Tesla) ಮುಖ್ಯಸ್ಥ ಹಾಗೂ ಟ್ವಿಟ್ಟರ್‌ ಸಿಇಒ ಎಲೋನ್‌ ಮಸ್ಕ್‌ ಇದೀಗ ಗುಜರಾತ್‌ ಗಲಭೆ, ಪ್ರಧಾನಿ ಮೋದಿ ಅವರ ಕುರಿತು ಬಿಬಿಸಿ ನಿರ್ಮಿಸಿದ್ದ ಸಾಕ್ಷ್ಯಚಿತ್ರ (BBC Documentary) ಪ್ರಸಾರದಲ್ಲಿ ಟ್ವಿಟ್ಟರ್‌ ಪಾತ್ರದ ಕುರಿತು ಮಾತನಾಡಿದ್ದಾರೆ.

    ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಟ್ವಿಟರ್‌ ವೇದಿಕೆಯಲ್ಲಿ ಲೈವ್ ಪ್ರಸಾರ ಮಾಡಿದ್ದರಿಂದ, ಭಾರತ ಸರ್ಕಾರದ ಆದೇಶದ ಮೇರೆಗೆ ಸೈಟ್ ಕೆಲವು ವಿಷಯವನ್ನು ತೆಗೆದುಹಾಕಿದೆಯೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಸ್ಕ್‌, ನನಗೆ ಈ ನಿರ್ದಿಷ್ಟ ಸನ್ನಿವೇಶದ ಬಗ್ಗೆ ತಿಳಿದಿಲ್ಲ. ಭಾರತದಲ್ಲಿನ ಕೆಲವು ವಿಷಯಗಳಲ್ಲಿ ಪರಿಸ್ಥಿತಿ ನಿಖರವಾಗಿ ಏನಾಯಿತು ಎಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: Twitter ನಲ್ಲಿ ಮೋದಿ ಫಾಲೋ ಮಾಡ್ತಿರುವ ಮಸ್ಕ್‌ – ಭಾರತಕ್ಕೆ ಬರುತ್ತೆ ಟೆಸ್ಲಾ ಎಂದ ನೆಟ್ಟಿಗರು!

    2002ರ ಗುಜರಾತ್ ಗಲಭೆ (Gujarat Riots) ಮತ್ತು ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿದ್ದ `India: The Modi Question’ ಸಾಕ್ಷ್ಯಚಿತ್ರವನ್ನು ಭಾರತ ಸರ್ಕಾರ ಬ್ಯಾನ್‌ ಮಾಡಿದ್ದು ಅದರ ಲಿಂಕ್‌ಗಳನ್ನು ತೆಗೆದುಹಾಕುವಂತೆ ಟ್ವಿಟ್ಟರ್‌ ಮತ್ತು ಯೂಟ್ಯೂಬ್‌ಗೆ ಆದೇಶಿಸಿತ್ತು. ಮಾಹಿತಿ ತಂತ್ರಜ್ಞಾನ ನಿಯಮಗಳು 2021ರ ಅಡಿಯಲ್ಲಿ ತುರ್ತು ಅಧಿಕಾರ ಬಳಸಿಕೊಂಡು ಲಿಂಕ್‌ಗಳನ್ನು ತೆಗೆದುಹಾಕಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ನೀಡಿದ್ದು ಟ್ವಿಟ್ಟರ್‌ ಮತ್ತು ಯೂಟ್ಯೂಬ್‌ ಈ ಆದೇಶ ಪಾಲನೆ ಮಾಡಲು ಒಪ್ಪಿಕೊಂಡಿದ್ದವು.

    ಭಾರತದಲ್ಲಿ ಬಿಬಿಸಿ ಸಾಕ್ಷ್ಯಚಿತ್ರವನ್ನ ಬ್ಯಾನ್‌ ಮಾಡಿದ್ದರೂ, ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ ವೀಡಿಯೋಗಳನ್ನ ಅಪ್‌ಲೋಡ್ ಮಾಡಲಾಗಿತ್ತು. ಆದ್ದರಿಂದ ಸಾಕ್ಷ್ಯಚಿತ್ರದ ವೀಡಿಯೋಗಳನ್ನು ಲಿಂಕ್‌ ಮಾಡುವ 50ಕ್ಕೂ ಹೆಚ್ಚು ಟ್ವಿಟ್ಟರ್‌ ಖಾತೆಗಳನ್ನ ನಿರ್ಬಂಧಿಸುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಆದೇಶಿಸಿತು ಎಂದು ಸರ್ಕಾರದ ಸಲಹೆಗಾರ ಕಾಂಚನ್‌ಗುಪ್ತಾ ತಿಳಿಸಿದ್ದಾರೆ. ಇದನ್ನೂ ಓದಿ: ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ – ತನಿಖೆಗೆ ಆದೇಶ

    ಈ ಕುರಿತು ಸಂದರ್ಶನದಲ್ಲಿ ಮಾತನಾಡಿದ ಮಸ್ಕ್‌, ಸಾಮಾಜಿಕ ಮಾಧ್ಯಮ ವಿಚಾರದಲ್ಲಿ ಭಾರತ ಸರ್ಕಾರದ ನಿಯಮಗಳು ಕಟ್ಟುನಿಟ್ಟಾಗಿವೆ. ನಾವು ಯಾವುದೇ ಕಾರಣಕ್ಕೂ ದೇಶದ ಕಾನೂನುಗಳನ್ನ ಮೀರಿ ಹೋಗಲು ಸಾಧ್ಯವಿಲ್ಲ. ಒಂದು ವೇಳೆ ಜನರು ಜೈಲಿಗೆ ಹೋಗ್ತೀರಾ? ಅಥವಾ ಕಾನೂನು ಪಾಲನೆ ಮಾಡ್ತೀರಾ? ಎಂಬ ಆಯ್ಕೆಗಳನ್ನ ನೀಡಿದ್ರೆ, ನಾವು ಕಾನೂನು ಪಾಲನೆ ಮಾಡುವ ಆಯ್ಕೆಯನ್ನೇ ಅನುಸರಿಸುತ್ತೇವೆ ಎಂದು ಭಾರತ ಕಾನೂನಿನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

  • BBC ಸಾಕ್ಷ್ಯಚಿತ್ರ ನಿಷೇಧ – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    BBC ಸಾಕ್ಷ್ಯಚಿತ್ರ ನಿಷೇಧ – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ನವದೆಹಲಿ: ಆನ್‌ಲೈನ್ ವೇದಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಿಬಿಸಿ ಸಿದ್ಧಪಡಿಸಿದ್ದ ಸಾಕ್ಷ್ಯಚಿತ್ರ (BBC Documentary) ಪ್ರಸಾರ ನಿಷೇಧಿಸಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರಕ್ಕೆ (Government Of India) ಸುಪ್ರೀಂ ಕೋರ್ಟ್ (Supreme Court) ನೋಟಿಸ್ ಜಾರಿ ಮಾಡಿದೆ.

    ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಖನ್ನಾ ಮತ್ತು ಎಂ.ಎಂ ಸುಂದ್ರೇಶ್ ಅವರ ದ್ವಿಸದಸ್ಯ ಪೀಠ ಯಾವುದೇ ಮಧ್ಯಂತರ ಆದೇಶ ನೀಡದೇ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್‌ಗೆ ಮುಂದೂಡಿತು. ಇದನ್ನೂ ಓದಿ: ಚೀನಾ ಓಲೈಸಲು ಮೋದಿ ವಿರುದ್ಧ ಬಿಬಿಸಿ ಸಾಕ್ಷ್ಯಚಿತ್ರ: ಮಹೇಶ್‌ ಜೇಠ್ಮಾಲನಿ

    ಬೆಂಗಳೂರಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರಸಾರ

    2002ರ ಗುಜರಾತ್ ಗಲಭೆಗೆ ಸಂಬಂಧಿಸಿದ `ಇಂಡಿಯಾ: ದಿ ಮೋದಿ ಕ್ವಶ್ಚನ್’ (India: The Modi Question) ಎಂಬ ಶೀರ್ಷಿಕೆಯ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ವಕೀಲ ಎಂ.ಎಲ್ ಶರ್ಮಾ, ತೃಣಮೂಲ ಕಾಂಗ್ರೆಸ್ (TMC) ಸಂಸದೆ ಮಹುವಾ ಮೊಯಿತ್ರಾ, ಪತ್ರಕರ್ತ ಎನ್. ರಾಮ್ ಹಾಗೂ ವಕೀಲ ಪ್ರಶಾಂತ್ ಭೂಷಣ್ (Prashant Bhushan) ಅವರು ಸಲ್ಲಿಸಿದ್ದರು.

    ಹೈದರಾಬಾದ್ ವಿವಿ ಕ್ಯಾಂಪಸ್‌ನಲ್ಲಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ - ತನಿಖೆಗೆ ಆದೇಶ

    ಫೆಬ್ರವರಿ 3ರಂದು ನಡೆದ ವಿಚಾರಣೆ ವೇಳೆ ಸರ್ಕಾರದ ಆದೇಶಕ್ಕೆ ತಡೆ ನೀಡಬೇಕು. ಸಾರ್ವಜನಿಕ ವಲಯದಲ್ಲಿ ಪ್ರಸಾರಕ್ಕೆ ಅವಕಾಶ ನೀಡಬೇಕು ಎಂದು ವಾದಿಸಲಾಯಿತು. ಇದನ್ನೂ ಓದಿ: ಮೋದಿ ವಿರುದ್ಧದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ರಷ್ಯಾ ಆಕ್ರೋಶ

    ಇದಕ್ಕೆ ಪ್ರತಿಕ್ರಿಯಿಸಿದ ಪೀಠ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳದೆ ಯಾವುದೇ ಆದೇಶ ನೀಡಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಳಿಕ ಈ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಜೆಎನ್‌ಯು, ಜಾಮಿಯಾ ಬಳಿಕ ದೆಹಲಿ ವಿವಿಗೆ ಕಾಲಿಟ್ಟ ಮೋದಿ ಸಾಕ್ಷ್ಯಚಿತ್ರ ವಿವಾದ

    ಜೆಎನ್‌ಯು, ಜಾಮಿಯಾ ಬಳಿಕ ದೆಹಲಿ ವಿವಿಗೆ ಕಾಲಿಟ್ಟ ಮೋದಿ ಸಾಕ್ಷ್ಯಚಿತ್ರ ವಿವಾದ

    ನವದೆಹಲಿ: ತೀವ್ರ ವಿರೋಧದ ನಡುವೆಯೂ ದೆಹಲಿ ವಿಶ್ವ ವಿದ್ಯಾಲಯದಲ್ಲಿ ಬಿಬಿಸಿ ಸಿದ್ಧಪಡಿಸಿದ `ಮೋದಿ ಎ ಕ್ವಶನ್’ ಸಾಕ್ಷ್ಯಚಿತ್ರವನ್ನು (BBC Documentary) ವೀಕ್ಷಿಸಲಾಗಿದೆ. ವಿದ್ಯಾರ್ಥಿಗಳು ಲ್ಯಾಪ್‌ಟ್ಯಾಪ್, ಮೂಬೈಲ್‌ಗಳಲ್ಲಿ ಚಿತ್ರ ವೀಕ್ಷಿಸಿ ಆಜಾದಿ ಘೋಷಣೆ ಕೂಗಿದ್ದಾರೆ.

    ಜೆಎನ್‌ಯು (JNU) ಮತ್ತು ಜಾಮಿಯಾ ಮೀಲಿಯ ಇಸ್ಲಾಮಿಯಾ ವಿವಿ ಬಳಿಕ ದೆಹಲಿ ವಿಶ್ವ ವಿದ್ಯಾಲಯದಲ್ಲಿರುವ (Delhi University) ಎಡಪಂಥೀಯ ಚಿಂತನೆಯ ವಿದ್ಯಾರ್ಥಿಗಳು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಣೆ ಮಾಡಿದ್ದರು. ಇದಕ್ಕೆ ವಿವಿ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿತ್ತು. ಇದನ್ನೂ ಓದಿ: BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    ವಿದ್ಯುತ್ ಕಡಿತಗೊಳಿಸಿದ ಬಳಿಕವೂ ಎಸ್‌ಎಫ್‌ಐ (SFI) ವಿದ್ಯಾರ್ಥಿ ಸಂಘಟನೆಯ ವಿದ್ಯಾರ್ಥಿಗಳು ಬದಲಿ ಮಾರ್ಗಗಳನ್ನು ಬಳಸಿ ಮೊಬೈಲ್, ಲ್ಯಾಪ್‌ಟಾಪ್‌ಗಳ ಮೂಲಕ ಚಿತ್ರ ವೀಕ್ಷಣೆಗೆ ವ್ಯವಸ್ಥೆ ಮಾಡಿದರು. ಚಿತ್ರ ವೀಕ್ಷಣೆ ಪಟ್ಟು ಹೆಚ್ಚುತ್ತಿದ್ದಂತೆ ದೆಹಲಿ ಪೊಲೀಸರು ಕ್ಯಾಂಪಸ್‌ಗೆ ಬಿಗಿ ಭದ್ರತೆ ಒದಗಿಸಿದರು. ಗುರುತಿನ ಚೀಟಿ ಇಲ್ಲದವರನ್ನ ಕ್ಯಾಂಪಸ್‌ನೊಳಗೆಯೇ ನಿರ್ಬಂಧಿಸಲಾಯಿತು.

    ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಎಸ್‌ಎಫ್‌ಐ (SFI) ಸೇರಿ ಎಡಪಂಥೀಯ ವಿದ್ಯಾರ್ಥಿಗಳು ಸಾಕ್ಷ್ಯ ಚಿತ್ರ ವೀಕ್ಷಣೆ ಮಾಡುತ್ತಿದ್ದಂತೆ ಬಲ ಪಂಥೀಯ ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದರು. ಆಜಾದಿ ಘೋಷಣೆಗೆ ಪ್ರತಿಯಾಗಿ ಜೈ ಶ್ರೀರಾಮ್ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: 74th Republic Day: ದೆಹಲಿಯ ಕರ್ತವ್ಯ ಪಥ್‌ನಲ್ಲಿ‌ ಹಲವು ಪ್ರಥಮಗಳಿಗೆ ಸಾಕ್ಷಿಯಾದ ಪರೇಡ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    BBC Modi V/s The Kashmir Filesː ಎಸ್‌ಎಫ್‌ಐ, ಎಬಿವಿಪಿ ವಿದ್ಯಾರ್ಥಿಗಳ ನಡುವೆ ತಾರಕಕ್ಕೇರಿದ ಸಂಘರ್ಷ

    ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ (Narendra Modi) ಕುರಿತು ಬಿಬಿಸಿ ನಿರ್ಮಿಸಿರುವ ಸಾಕ್ಷ್ಯಚಿತ್ರ ( BBC Documentary) ಈಗಾಗಲೇ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಭಾರೀ ಸಂಘರ್ಷವನ್ನುಂಟುಮಾಡಿದೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ (Hyderabad University) ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಸಿನಿಮಾ ಮಾದರಿಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ.

    ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) `ಪಿಎಂ ಮೋದಿ’ ಅವರ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನ ಆಯೋಜಿಸಿತ್ತು. ಇದಕ್ಕೆ ತಿರುಗೇಟು ನೀಡುವಂತೆ ಆರ್‌ಎಸ್‌ಎಸ್ (RSS) ಸಂಯೋಜಿತ ಎಬಿವಿಪಿ (ABVP) ಸಂಘಟನೆಯು ಅದೇ ಕ್ಯಾಂಪಸ್‌ನಲ್ಲಿ `ದಿ ಕಾಶ್ಮೀರ್ ಫೈಲ್ಸ್’ (The Kashmir Files) ಚಿತ್ರ ಪ್ರದರ್ಶನ ಏರ್ಪಡಿಸಿತ್ತು.

    ಗಣರಾಜ್ಯೋತ್ಸವ ದಿನದಂದೇ ವಿವಿಯಲ್ಲಿ ಸಾಕ್ಷ್ಯಚಿತ್ರ ಸ್ಕ್ರೀನಿಂಗ್ ಮಾಡಲಾಗಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೀಕ್ಷಣೆ ಮಾಡಿದ್ದಾರೆ ಎಂದು ಎಸ್‌ಎಫ್‌ಐ ಹೇಳಿಕೊಂಡಿದೆ.

    ಪೂರ್ವಾನುಮತಿಯಿಲ್ಲದೇ ಕ್ಯಾಂಪಸ್‌ನಲ್ಲಿ ಚಿತ್ರಪ್ರದರ್ಶಿಸಿದ ಬಗ್ಗೆ ವರದಿ ನೀಡುವಂತೆ ವಿವಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಈ ಬೆನ್ನಲ್ಲೇ ಎಬಿವಿಪಿ, ಎಸ್‌ಎಫ್‌ಐ ವಿರುದ್ಧ ದೂರು ಸಲ್ಲಿಸಿದೆ. ಆದರೆ ಎಸ್‌ಎಫ್‌ಐ ತನ್ನ ಮೇಲಿನ ಆರೋಪವನ್ನು ತಳ್ಳಿಹಾಕಿದೆ.

    ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ಅದೇ ದಿನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ `ದಿ ಕಾಶ್ಮೀರ ಫೈಲ್ಸ್’ ಚಿತ್ರ ಪ್ರದರ್ಶಿಸಿದ್ದಾರೆ. ಇದನ್ನೂ ಓದಿ: ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ಎರಡೂ ಸಿನಿಮಾಗಳ ಸ್ಕ್ರೀನಿಂಗ್ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಕ್ಯಾಂಪಸ್ ಶಾಂತಿಯುತವಾಗಿತ್ತು ಎಂದು ವಿಶ್ವವಿದ್ಯಾನಿಲಯದ ರಿಜಿಸ್ಟಾರ್‌ ಹೇಳಿದ್ದಾರೆ. ಆದರೆ ಎಬಿವಿಪಿ ಕಾರ್ಯಕರ್ತರು ಕ್ಯಾಂಪಸ್ ಭದ್ರತಾ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಇದನ್ನೂ ಓದಿ: Australian Open 2023: ಫೈನಲ್‍ನಲ್ಲಿ ಸೋತ ಬೋಪಣ್ಣ, ಸಾನಿಯಾ ಜೋಡಿ – ರನ್ನರ್ ಅಪ್ ಕಿರೀಟದೊಂದಿಗೆ ಗ್ರ್ಯಾಂಡ್‍ ಸ್ಲಾಮ್‍ಗೆ ಗುಡ್‍ಬೈ

    ಡಾರ್ಕ್‌ನೆಟ್‌ ಬಳಸಿ ಮೋದಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನ- ರಣಾಂಗಣವಾದ ವಿವಿ ಕ್ಯಾಂಪಸ್

    ವಿಶ್ವವಿದ್ಯಾನಿಲಯ ಆಡಳಿತ ಮಂಡಳಿ `ದಿ ಕಾಶ್ಮೀರ್ ಫೈಲ್ಸ್’ ಚಲನಚಿತ್ರದ ಪ್ರದರ್ಶನ ನಿಲ್ಲಿಸಲು ಪ್ರಯತ್ನಿಸಿತು. ಎಬಿವಿಪಿ ಕಾರ್ಯಕರ್ತರು ಮುಖ್ಯದ್ವಾರದಿಂದ ಪ್ರೊಜೆಕ್ಟರ್ ತರುತ್ತಿದ್ದಾಗ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಸಹ ನಡೆಸಿದರು ಎಂದು ಎಬಿವಿಪಿ ಜಾಲತಾಣದಲ್ಲಿ ಹಂಚಿಕೊಂಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k