Tag: ಬಿಬಿಕೆ8

  • BB ಫಿನಾಲೆಗೂ ಮುನ್ನವೇ 2 ಲಕ್ಷ ಗೆಲ್ಲಬಹುದು

    BB ಫಿನಾಲೆಗೂ ಮುನ್ನವೇ 2 ಲಕ್ಷ ಗೆಲ್ಲಬಹುದು

    ಬಿಗ್‍ಬಾಸ್ ಮನೆಯಲ್ಲಿ ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್ ಬಾಸ್ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದ್ದಾರೆ. ಫಿನಾಲೆಗೆ ಕೆಲವು ದಿನಗಳು ಬಾಕಿ ಇರುವಾಗ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್ ನೀಡಲಾಗುತ್ತಿದೆ. ಈ ಟಾಸ್ಕ್ ಗೆದ್ದ ಸ್ಪರ್ಧಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ. ಈ ಜಾಕ್‍ಪಾಟ್ ಪಡೆದುಕೊಳ್ಳೋಕೆ ಸ್ಪರ್ಧಿಗಳು ರೆಡಿಯಾಗಿ ಸ್ಪರ್ಧೆ ಶುರು ಮಾಡಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿ ಸ್ಪರ್ಧಿಗಳು 113 ದಿನಗಳ ಸುದೀರ್ಘ ಪಯಣದಲ್ಲಿ ಎಲ್ಲಾ ಭಾವಗಳನ್ನು ದಾಟಿ ಗುರಿಗೆ ಹತ್ತಿರವಾಗಿದ್ದಾರೆ. ಎರಡು ಲಕ್ಷ ಪಡೆದುಕೊಳ್ಳಲು ಬಿಗ್‍ಬಾಸ್ ಟಾಸ್ಕ್ ನೀಡುತ್ತಿದ್ದಾರೆ. ಪ್ರತಿ ಸ್ಪರ್ಧೆಯಲ್ಲಿ ಮೊದಲ ಸ್ಥಾನದಲ್ಲಿರುವ ಸ್ಪರ್ಧಿಗೆ 5 ಅಂಕ, ಎರಡನೇ ಸ್ಥಾನದಲ್ಲಿರುವ ಸ್ಪರ್ಧಿಗೆ ಅಂಕ 3 ಹಾಗೂ ಮೂರನೇ ಸ್ಥಾನಕ್ಕೆ 1 ಅಂಕ ಸಿಗುತ್ತದೆ. ವಾರದ ಕೊನೆಯಲ್ಲಿ ಯಾರ ಬಳಿ ಅಂಕ ಹೆಚ್ಚಿರುತ್ತದೆಯೋ ಅವರಿಗೆ ಎರಡು ಲಕ್ಷ ರೂಪಾಯಿ ಸಿಗಲಿದೆ ಎಂದು ಬಿಗ್‍ಬಾಸ್ ಸೂಚನೆಯನ್ನು ನೀಡಿದ್ದಾರೆ.

    ಎರಡು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ ಎನ್ನುವ ವಿಚಾರ ತಿಳಿದ ಸ್ಪರ್ಧಿಗಳು ತಮ್ಮ ಗೇಮ್ ಪ್ರಾರಂಭಿಸಿದ್ದಾರೆ. ಎಷ್ಟು ದುಬಾರಿ ಮೊತ್ತದ ಹಣ ಸಿಗುತ್ತಿದೆಯೋ ಅಷ್ಟೇ ಎಲ್ಲಾ ಟಾಸ್ಕ್‍ಗಳು ಸಾಕಷ್ಟು ಟಫ್ ಇರಲಿದೆ ಎನ್ನುವ ಯೋಚನೆ ಸ್ಪರ್ಧಿಗಳಿಗೆ ಇದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್‍ಬಾಸ್ ಸ್ಪರ್ಧಿಗಳಿಗೆ ಮತ್ತಷ್ಟು ಸ್ರ್ಧೆಯನ್ನು ಒಡ್ಡುತ್ತಿದ್ದಾರೆ.

    ಪ್ರತಿ ವಾರ ಸ್ಪರ್ಧಿಗಳಿಗೆ ಟಾಸ್ಕ್ ನೀಡಲಾಗುತ್ತದೆ. ವಾರ ಪೂರ್ತಿ ಟಾಸ್ಕ್ ಇರುತ್ತದೆ. ಈ ಟಾಸ್ಕ್‌ನಲ್ಲಿ ಗೆಲ್ಲೋರು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಆಗುತ್ತಾರೆ. ಕೊನೆಯಲ್ಲಿ ಟಾಸ್ಕ್‌ನಲ್ಲಿ ಗೆಲ್ಲೋರು ಕ್ಯಾಪ್ಟನ್ ಆಗುತ್ತಾರೆ. ಆದರೆ ಕೊನೆಯ ವಾರವಾದ್ದರಿಂದ ಈ ಬಾರಿ ಕ್ಯಾಪ್ಟನ್ಸಿ ಟಾಸ್ಕ್ ಇಲ್ಲ. ಆದರೆ ಬಿಗ್‍ಬಾಸ್ ​ ಸರ್​ಪ್ರೈಸ್ ನೀಡಿದ್ದಾರೆ.

  • ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮಂದಿಯನ್ನ ಬೆಚ್ಚಿ ಬೀಳಿಸಿದ ಚಪ್ಪಾಳೆ

    ಬಿಗ್‍ಬಾಸ್ ಮನೆಯಲ್ಲಿ ಲೈಟ್ ಆಫ್ ಆದ್ರೂ ಸ್ಪರ್ಧಿಗಳು ನಿದ್ದೆಗೆ ಜಾರಲ್ಲ. ಒಬ್ರು ಮತ್ತೊಬ್ಬರ ಆಟ. ಹೀಗೆ ಹಾಗೆ ಅಂತ ಗುಸು ಗುಸು ಸ್ಟಾರ್ಟ್ ಆಗಿರುತ್ತೆ. ನಿನ್ನೆ ಸಹ ರಾತ್ರಿ ಒಂದು ಗಂಟೆ ಆಗಿತ್ತು. ನಿಧಿ ಮತ್ತು ಶುಭಾ ಇಬ್ಬರ ಪಿಸು ಮಾತು ಮಾತ್ರ ಕೇಳಿಸಿತ್ತು. ಬಹುತೇಕ ಎಲ್ಲರೂ ನಿದ್ದೆ ಮಾಡ್ತಿದ್ದರಿಂದ ಮನೆ ಶಾಂತವಾಗಿತ್ತು. ಅಷ್ಟರಲ್ಲಿ ಕೇಳಿದ ಚಪ್ಪಾಳೆ ಸದ್ದು ಮನೆ ಮಂದಿಯನ್ನ ಬೆಚ್ಚಿ ಬೀಳಿಸಿತು.

    ರಾತ್ರಿ 1.5 ನಿಮಿಷಕ್ಕೆ ಎಲ್ಲರೂ ಮಲಗಿದ್ರೆ ಹೊಸ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ ಧ್ಯಾನ ಮಾಡ್ತಿದ್ರು. ಈ ವೇಳೆ ದಿಢೀರ್ ಅಂತ ಚಪ್ಪಾಳೆ ಹೊಡೆದ್ರು. ಮನೆ ಪೂರ್ಣ ಸೈಲೆಂಟ್ ಗಿದ್ದರಿಂದ ಚಪ್ಪಾಳೆ ಸೌಂಡ್ ಜೋರಾಗಿಯೇ ಕೇಳಿಸ್ತು. ಇನ್ನು ಪಿಸು ಮಾತುಗಳನ್ನಾಡುತ್ತಿದ್ದ ಶುಭಾ ಮತ್ತು ನಿಧಿ ಸಹ ಒಂದು ಕ್ಷಣ ತಬ್ಬಿಬ್ಬಾಗಿ ಯಾರು ಕ್ಲ್ಯಾಪ್ ಮಾಡಿದ್ದು ಅಂತ ಅತ್ತಿತ್ತ ನೋಡುತ್ತಿದ್ದರು.

    ಚಪ್ಪಾಳೆಯ ಸದ್ದಿನಿಂದ ಎಚ್ಚರಗೊಂಡ ಶಮಂತ್ ಮತ್ತು ಅರವಿಂದ್ ಯಾರ್ ಗುರು ಕ್ಲ್ಯಾಪ್ ಹಾಕಿದ್ರೂ ಅನ್ನೋ ರೀತಿ ಸನ್ನೆ ಮಾಡಿದ್ರು. ನಂತರ ಚಕ್ರವರ್ತಿ ಅವರೇ ಚಪ್ಪಾಳೆ ಹಾಕಿದ್ದು ಅಂತ ತಿಳಿದು ಎಲ್ಲರೂ ನಕ್ಕು ನಿದ್ದೆಗೆ ಜಾರಿದ್ರು.

    ಇನ್ನೂ ಬೆಳಗಾಗುತ್ತಲೇ ಚಪ್ಪಾಳೆ ವಿಷಯ ಮನೆಯ ಹಾಟ್ ಟಾಪಿಕ್ ಆಗಿ ಬದಲಾಯ್ತು. ಚಂದ್ರಚೂಡ ಮೆಡಿಟೇಷನ್ ಮಾಡುವಾಗ ಮಧ್ಯ ಒಂದು ಸಾರಿ ಚಪ್ಪಾಳೆ ತಟ್ಟುತ್ತೇನೆ. ಆದ್ರೆ ಮಂಜು ಕೂಗಿದ್ದು ಕೇಳಿಸಿಲ್ಲ. ನಿಮಗೆಲ್ಲ ತೊಂದರೆ ಆಗ್ತಿದ್ರೆ ಹೊರಗೆ ಮೆಡಿಟೇಷನ್ ಮಾಡ್ತೀನಿ ಅಂದ್ರು. ಇತ್ತ ಮಂಜು ಪಾವಗಡ ಮಾತ್ರ, ಕೇಳಿಸಿದ್ರೂ ಕೇಳಿಸದೇ ರೀತಿ ನಟಿಸರಬಹುದು ಅಂತ ಕಾಲೆಳೆದ್ರು.

  • ಬಿಗ್ ಮನೆಯಲ್ಲಿ ಸುದ್ದಿಯಾದ ಟೀ

    ಬಿಗ್ ಮನೆಯಲ್ಲಿ ಸುದ್ದಿಯಾದ ಟೀ

    ಬೆಂಗಳೂರು: ಬಿಗ್‍ಮನೆಯ ವಾರಾಂತ್ಯದ ಕಟ್ಟಾ ಪಂಚಾಯತಿಯಲ್ಲಿ ಮನೆಯ ಸರಿ ತಪ್ಪುಗಳನ್ನು ತಿಳಿಹೇಳುವ ಕೆಲಸವನ್ನು ಸುದೀಪ್ ಮಾಡುತ್ತಾರೆ. ಕಟ್ಟೆ ಪಂಚಾಯ್ತಿಯಲ್ಲಿ ಹೆಚ್ಚು ಚರ್ಚೆಯಾಗಿದ್ದು ಟೀ. ಮನೆಯವರಿಂದ ಕೇಳಿ ವಿಭಿನ್ನವಾದ ಟೀ ಮಾಡುವುದನ್ನು ಕಿಚ್ಚಾ ಕಲಿತುಕೊಂಡಿದ್ದಾರೆ.

    ಇಲ್ಲಿಯವರೆಗೆ ಬೇರೆ ತರಹದ ಪಾತ್ರಗಳನ್ನು ಬಿಗ್ ಮನೆಯಲ್ಲಿ ನೋಡಿದ್ದೇನೆ. ಆದರೆ ಈ ಭಾರೀ ಭಯಂಕರವಾಗಿದ್ದಾರೆ. ಯೋಗ ಮಾಡ್ತಾ ಟೀ ಕುಡಿಯೋದು, ಅರ್ಧರಾತ್ರಿಯಲ್ಲಿ ಮೇಕಪ್ ಹಾಕಿ ಕ್ಯಾಮೆರಾ ಮುಂದೆ ಮಾತನಾಡುತ್ತಾರೆ, ಮೇಕಪ್ ಹಾಕಿ ಸ್ನಾನಕ್ಕೆ ಹೋಗುತ್ತಾರೆ. ವಿಭಿನ್ನವಾಗಿ ಟೀ ಮಾಡುತ್ತಾರೆ ನಾನು ಉಳಿದ ಸೀಸನ್‍ಗಳಲ್ಲಿ ನೋಡಿದ್ದಕ್ಕಿಂತ ವಿಭಿನ್ನವಾಗಿದ್ದಿರಾ ನೀವೆಲ್ಲಾ ಮಾವ ಹೇಳಿ ಟೀ ಮಾಡೋದು ಎಂದಿದ್ದಾರೆ.

    ಒಳ್ಳೆ ಟೀ ಮಾಡೋದು ಹೇಗೆ..?
    ಪ್ರಶಾಂತ್ ಸಂಬರ್ಗಿ ಅವರದ್ದೇ ಆಗಿರುವ ಹೊಸ ರೀತಿಯಲ್ಲಿ ಟೀ ಮಾಡುವ ರೀತಿಯನ್ನು ಹೇಳಿದ್ದಾರೆ. ಈ ವೇಳೆ ಪ್ರಶಾಂತ್ ಅವರ ಮಾತಿನ ಮಧ್ಯೆ ಪ್ರವೇಶಿಸಿದ ಕಿಚ್ಚ ಸುದೀಪ್ ಹಾಲು ನೀರು ಮಿಕ್ಸ್ ಮಾಡಿದರೆ ವಿಷ ಆಗುತ್ತೆ ಅಲ್ಲವಾ.. ನಾನು ಮಧ್ಯಪ್ರೇಶ ಮಾಡಿ ಅಧಿಕ ಪ್ರಸಂಗ ಮಾಡುತ್ತೇನೆ ಎಂದು ಹೇಳುತ್ತಾ ಸಂಬರ್ಗಿ ಅವರಿಗೆ ಚಮಕ್ ಕೊಟ್ಟಿದ್ದಾರೆ.

    ಲ್ಯಾಗ್ ಮಂಜು ಟೀಗೆ ನನ್ನ ಕರಿಬೇಡಿ..!
    ಲ್ಯಾಗ್ ಮಂಜು ತಂದೂರಿ ಟೀ ಮಾಡುವ ವಿಧಾನವನ್ನು ಕೇಳಿದ ಸುದೀಪ್ ಈ ಟೀ ಇವತ್ತೆ ಕುಡಿಯೋದಾ ಅಥವಾ ನಾಳೆ ಕುಡಿಯೋದಾ? ದಯವಿಟ್ಟು ನಿಮ್ಮ ಮನೆಗೆ ಟೀಗೆ ಮಾತ್ರ ನನ್ನ ಕರೆಯಬೇಡಿ ಎಂದು ಹೇಳಿ ಜೋಕ್ ಮಾಡಿದ್ದಾರೆ.

    ಶುಭ ಪೂಂಜಾ ಹೇಳಿದ್ರೂ ಕ್ಯೂಟ್ ಟೀ:
    ಶುಭ ನೀವು ಹೇಗೆ ಟೀ ಮಾಡುತ್ತಿರಾ ಎಂದು ಕಿಚ್ಚಾ ಕೆಳಿದ್ದಾರೆ. ಆಗ ಶುಭ ಅವರು ಅವರದ್ದೇ ಆಗಿರುವ ಮಗುವಿನ ವಾಯ್ಸ್‍ನಲ್ಲಿ ನಿವೇದಿತಾ ಗೌಡ ಅವರನ್ನು ನೆನೆಪಿಸುವ ಹಾಗೇ ಟೀ ಮಾಡುವ ವಿಧಾನವನ್ನು ಹೇಳಿದ್ದಾರೆ.

    ಚಂದ್ರಕಲಾ ಮೋಹನ್ ಅವರು ಮಾಡುವ ಟೀ ಬಿರಿಯಾನಿನಾ ಅಥವಾ ಟೀ ನಾ ಎಂದು ಸುದೀಪ್ ಅವರಿಗೆ ಅನುಮಾನ ಬರುವ ಹಾಗೇ ಟೀ ಮಾಡೋದು ಹೇಳಿದ್ದಾರೆ. ರಘು ಅವರಿಗೆ ಇಲ್ಲಿವರೆಗೂ ಟೀ ಮಾಡೋದೆ ಗೊತ್ತಿಲ್ಲ ಆದರೂ ಟೀ ಕುಡಿಯುತ್ತಾರೆ. ಹೀಗೆ ಒಂಟಿ ಮನೆಯಲ್ಲಿ ವೈರಟಿ ವೈರಟಿ ಮಾಡುವ ವಿಧಾನವನ್ನು ಕೇಳಿ ಕಲಿತಿದ್ದಾರೆ.