Tag: ಬಿಬಿಕೆ 8 ಫಿನಾಲೆ

  • ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್​​​ಗೆ ಮಂಜು ಸಂದೇಶ

    ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್​​​ಗೆ ಮಂಜು ಸಂದೇಶ

    ಬಿಗ್‍ಬಾಸ್ ಮನೆಗೆ ಎಂಟ್ರಿ ಕೊಟ್ಟ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಕಲಾವಿದರೆ ಆಗಿದ್ದರೂ, ಅವರಿಗೂ ಕೂಡ ಹಲವಾರು ನಟ ಹಾಗೂ ನಟಿಯರು ಇಷ್ಟ ಆಗಿರುತ್ತಾರೆ. ಅಲ್ಲದೇ ತಾವು ಇಷ್ಟ ಪಡುವ ಸ್ಟಾರ್ ನಟ ಅಥವಾ ನಟಿಯನ್ನು ಒಮ್ಮೆಯಾದರೂ ಭೇಟಿ ಮಾಡಬೇಕು, ಸೆಲ್ಫಿ ಮತ್ತು ಆಟೋಗ್ರಾಫ್ ತೆಗೆದುಕೊಳ್ಳಬೇಕೆಂಬ ಆಸೆ ಇರುತ್ತದೆ.

    ಅದೇ ರೀತಿ ಬಿಗ್‍ಬಾಸ್ ಮನೆಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಲ್ಯಾಗ್ ಮಂಜುಗೆ ಸ್ಯಾಂಡಲ್‍ವುಡ್ ನಟ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಎಂದರೆ ಬಹಳ ಇಷ್ಟ. ಶಿವಣ್ಣನ ಬಿಗ್ ಫ್ಯಾನ್ ಆಗಿರುವ ಮಂಜು ಬಿಗ್‍ಬಾಸ್ ಮನೆಯ ಕ್ಯಾಮೆರಾ ಮುಂದೆ ನಿಂತು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

    ಬಿಗ್‍ಬಾಸ್ ನನಗೆ ಶಿವಣ್ಣ ಅಂದರೆ ಬಹಳ ಇಷ್ಟ. ನಾನು ಈ ವಾರ ಫಿನಾಲೆಯಲ್ಲಿರುವುದಕ್ಕೆ ಬಹಳ ಖುಷಿಯಾಗುತ್ತಿದೆ. ಹಾಗಾಗಿ ಶಿವಣ್ಣ ಕಡೆಯಿಂದ ಒಂದೇ ಒಂದು ಚಿಕ್ಕ ಆಶೀರ್ವಾದ ಬೇಕಾಗಿತ್ತು. ಒಂದೇ ಮಾತಿನಲ್ಲಿ, ಒಂದೇ ಒಂದು ಸಣ್ಣ ವೀಡಿಯೋ ಸಿಕ್ಕಿದರೆ, ನನಗೆ ತುಂಬಾ ಖುಷಿಯಾಗುತ್ತದೆ. ಇದೊಂದೇ ಒಂದು ಆಸೆ ಇದೆ, ದಯವಿಟ್ಟು ಇದೊಂದು ಬೇಡಿಕೆಯನ್ನು ನೇರವೇರಿಸಿ ಕೊಡಿ ಬಿಗ್‍ಬಾಸ್ ಎಂದು ಮನವಿ ಮಾಡಿದ್ದಾರೆ.

    ಒಟ್ಟಾರೆ ಶಿವಣ್ಣನ ಅಪ್ಪಟ ಅಭಿಮಾನಿಯಾಗಿರುವ ಲ್ಯಾಗ್ ಮಂಜು ಆಸೆಯನ್ನು ಬಿಗ್‍ಬಾಸ್ ಈಡೇರಿಸುತ್ತಾರಾ? ಫಿನಾಲೆಗೂ ಮುನ್ನ ಶಿವಣ್ಣನಿಂದ ಏನಾದರೂ ಸಂದೇಶ ಬರುತ್ತಾ? ಎಂಬುವುದನ್ನು ಕಾದು ನೋಡಬೇಕಾಗಿದೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಗೆ ಬಂತು ಅರವಿಂದ್ ಬೈಕ್