Tag: ಬಿಬಿಎಂಪಿ ಶಾಲೆಗಳು

  • ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡ ಹೆಸರು ನಾಮಕರಣ

    ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡ ಹೆಸರು ನಾಮಕರಣ

    ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಕೆಂಪೇಗೌಡರ ಹೆಸರು ಇಡಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣ್ ಸ್ವಾಮಿ ಹೇಳಿದ್ದಾರೆ.

    ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸ್ಥಾಯಿ ಸಮಿತಿ ಹಾಗೂ ನಗರ ಜಿಲ್ಲಾ ಪಂಚಾಯತ್ ಶಿಕ್ಷಣ ಅಧ್ಯಕ್ಷ ನರಸಿಂಹಮೂರ್ತಿ ಗುರುವಾರ ನಡೆಸಿದ ಜಂಟಿ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ತಿಳಿಸಿದರು. ಈ ಬಗ್ಗೆ ಮಾತನಾಡಿದ ನರಸಿಂಹಮೂರ್ತಿ ಅವರು, ಬೆಂಗಳೂರಿನಲ್ಲಿರುವ ಸರ್ಕಾರಿ ಶಾಲೆ, ಪಾಲಿಕೆ ಶಾಲೆಗಳಿಗೆ ಸಂಬಂಧಿಸಿದ ಅಭಿವೃದ್ಧಿ ಮಾಡಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಹಣಕಾಸಿನ ವ್ಯವಸ್ಥೆ ಇಲ್ಲ. ಇದಕ್ಕೆ ಪಾಲಿಕೆ ಶಿಕ್ಷಣ ಸಮಿತಿಯಲ್ಲಿ ಮನವಿ ಮಾಡಿದ್ದೆವು. ಇದಕ್ಕೆ ಸ್ಪಂದಿಸಿದ ಪಾಲಿಕೆ ಶಿಕ್ಷಣ ಸಮಿತಿ ಈ ಬಜೆಟ್‍ನಲ್ಲಿ ಮೂಲಭೂತ ಸೌಕರ್ಯ ಕೊಡುವ ಭರವಸೆ ನೀಡಿದೆ ಎಂದರು.

    ಜೊತೆಗೆ ಪಾಲಿಕೆ ವ್ಯಾಪ್ತಿಯಲ್ಲಿ 529 ಸರ್ಕಾರಿ ಶಾಲೆಗಳಿವೆ. ನೀರು ಮತ್ತು ವಿದ್ಯುತ್ ಉಚಿತ ಹಾಗೂ ಮೂಲಸೌಕರ್ಯವೂ ಬಿಬಿಎಂಪಿ ಒದಗಿಸಲಿದೆ. 30 ಕೋಟಿ ರೂ. ವೆಚ್ಚದಲ್ಲಿ ಈ ಬಗ್ಗೆ ಬಜೆಟ್‍ನಲ್ಲಿ ಪ್ರಸ್ತಾವನೆ ಇಡಲಾಗಿದೆ. 529 ಸರ್ಕಾರಿ ಶಾಲೆಗಳ ನಿರ್ವಹಣೆಗೆ ಬಿಬಿಎಂಪಿ ಹಾಗೂ ಜಿಲ್ಲಾ ಪಂಚಾಯತ್‍ಗೆ ಕೇವಲ 75 ಲಕ್ಷ ರೂ. ಅನುದಾನ ಇದೆ. 1,300 ಕ್ಕೂ ಹೆಚ್ಚು ಶಾಲೆಗಳಿವೆ. ಬರೀ ಸಂಬಳ ಕೊಡೋಕೆ ಹಣ ಸಾಕಾಗ್ತಿದೆ. ನಮಗೆ ಸಣ್ಣ ವಾಹನದ ವ್ಯವಸ್ಥೆಯೂ ಇಲ್ಲ. ಇಲಾಖೆ ಖರ್ಚು ವೆಚ್ಚಕ್ಕೆ 75 ಲಕ್ಷ ಸಾಲುತ್ತಿಲ್ಲ ಎಂದು ಮಂಜುಳಾ ನಾರಾಯಣಸ್ವಾಮಿ ಹೇಳಿದರು.

    ಕೆಂಪೇಗೌಡರು ಕಟ್ಟಿರುವ ನಾಡು ಇದು. ಹೀಗಾಗಿ ಪಾಲಿಕೆ ಶಾಲೆಗಳಿಗೂ ಕೆಂಪೇಗೌಡ ಹೆಸರಿಡಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕೌನ್ಸಿಲ್‍ನಲ್ಲಿ ಪ್ರಸ್ತಾವನೆ ಇಡಲಾಗುವುದು ಎಂದರು. ಪಾಲಿಕೆ ಶಾಲೆಗಳ ಗುಣಮಟ್ಟವನ್ನೂ ಹೆಚ್ಚಳ ಮಾಡ್ತೇವೆ. ಮೂಲಭೂತ ಸೌಕರ್ಯಗಳಾದ ನೀರು, ಶೌಚಾಲಯ, ವಿದ್ಯುತ್ ನೀಡದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

  • ಹಳ್ಳ ಹಿಡೀತಿದೆ ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ರೋಶಿನಿ ಯೋಜನೆ

    ಹಳ್ಳ ಹಿಡೀತಿದೆ ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ರೋಶಿನಿ ಯೋಜನೆ

    ಬೆಂಗಳೂರು: ಬಿಬಿಎಂಪಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣ ಕೊಡೋ ಉದ್ದೇಶದಿಂದ ಜಾರಿಗೆ ಬಂದ ರೋಶಿನಿ ಯೋಜನೆ ಹಳ್ಳ ಹಿಡಿಯುತ್ತಿದೆ. ಕಳೆದ ಒಂದು ವರ್ಷದಲ್ಲಿ ರೋಶಿನಿ ಕೇವಲ ಕಡತಗಳಿಗೆ ಮಾತ್ರ ಸೀಮಿತವಾಗಿದ್ದು, ಪಾಲಿಕೆ ಶಾಲೆಗಳು ರೋಶಿನಿಯಿಂದ ಖಾಸಗೀಕರಣದ ಭಯವನ್ನು ಎದುರಿಸುತ್ತಿದೆ.

    ಬಿಬಿಎಂಪಿ ಶಾಲಾ ಮಕ್ಕಳಿಗೆ ಡಿಜಿಟಲ್ ಶಿಕ್ಷಣ ಕೊಡೋ ಉದ್ದೇಶದೊಂದಿಗೆ ಸರ್ಕಾರ ರೋಶಿನಿ ಯೋಜನೆಯನ್ನ ಜಾರಿಗೆ ತಂದಿತ್ತು. ಟ್ಯಾಗ್ ಎಂಬ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ರೋಶಿನಿ ಯೋಜನೆಯನ್ನ ಉದ್ಘಾಟನೆ ಕೂಡ ಮಾಡಲಾಗಿತ್ತು. ಆದರೆ ಈ ಸಂಸ್ಥೆ ಪಾಲಿಕೆ ಶಾಲೆಗಾಗಿ ಬಿಡುಗಾಸಿನ ಕೆಲಸವನ್ನು ಮಾಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

    ರೋಶಿನಿ ಅನ್ನೋದು ಯೋಜನೆಯನ್ನು ಗುತ್ತಿಗೆ ಪಡೆದಿರೋ ಕಂಪನಿ ಮಾಲೀಕರ ಮಗಳ ಹೆಸರು. ಈ ಹೆಸರಿನಲ್ಲೇ ಸರ್ಕಾರದ ಜೊತೆ ಟ್ಯಾಗ್ ಕಂಪನಿ ಒಪ್ಪಂದ ಮಾಡಿಕೊಂಡಿದೆ. ಬಿಬಿಎಂಪಿ ಶಾಲೆಗೆ ಟ್ಯಾಬ್, ಲ್ಯಾಪ್ ಟಾಪ್, ಡಿಜಿಟಲ್ ಶಿಕ್ಷಣ, ಟಿವಿ ಎಲ್ಲಾ ಕೊಡುತ್ತೇವೆ ಎಂದು ಶಾಲೆ ಆವರಣವನ್ನ ರೋಶಿನಿಮಯ ಮಾಡಿದ್ದಾರೆ. ಅಲ್ಲದೆ ಪಾಲಿಕೆ ಬೋರ್ಡ್ ಗಳನ್ನು ಕೂಡ ಕಿತ್ತುಹಾಕಿದ್ದಾರೆ. ಫ್ರೆಜರ್ ಟೌನ್ ಶಾಲೆಯಲ್ಲಂತೂ ಕೊಠಡಿಗೆ ಬೀಗ ಜಡಿದು ಹೋದವರು ಇವತ್ತಿನವರೆಗೂ ತಿರುಗಿ ನೋಡಿಲ್ಲ ಎನ್ನಲಾಗುತ್ತಿದೆ.

    ಇದೆಲ್ಲಾ ಯಾಕೆ ಎಂದು ಕೇಳೋ ಅಧಿಕಾರ ಪಾಲಿಕೆಗೆ ಇಲ್ಲ. ಯಾಕೆಂದರೆ ಒಪ್ಪಂದದ ಪ್ರಕಾರ ಪಾಲಿಕೆ ಶಾಲೆಗೆ ಸಾಫ್ಟ್ ವೇರ್ ಕಂಪನಿಗಳು ಸಿಎಸ್‍ಆರ್ ಫಂಡ್ ನೀಡಿದರೆ ಅದು ಈ ಟ್ಯಾಗ್ ಕಂಪನಿಗೆ ನೀಡಬೇಕು. ಹೀಗಾಗಿ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕೇಳಿದರೆ, ನನಗೆ ಗೊತ್ತಿಲ್ಲ ಕಮಿಷನರ್ ಬಳಿ ಕೇಳಿ ಎಂದು ಹೇಳುತ್ತಿದ್ದಾರೆ.

    ಕಳೆದ ಒಂದು ವರ್ಷದಲ್ಲಿ ರೋಶಿನಿಗಾಗಿ ಎಷ್ಟು ಸಿಎಸ್‍ಆರ್ ಹಣ ಬಂದಿದೆ ಎನ್ನುವ ಬಗ್ಗೆ ಪಾಲಿಕೆಗೆ ಗೊತ್ತಿಲ್ಲ. ಹೀಗೆ ಬಂದವರು ಹೋದವರು ಪಾಲಿಕೆ ಹೆಸರಲ್ಲಿ ಏನು ಬೇಕಾದರು ಮಾಡಬಹುದು ಎಂಬ ಆರೋಪವೂ ಹರಿದಾಡುತ್ತಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]