Tag: ಬಿಬಿಎಂಪಿ ಕಛೇರಿ

  • BBMP ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 131ನೇ ಜನ್ಮ ದಿನಾಚರಣೆ

    BBMP ಕಚೇರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 131ನೇ ಜನ್ಮ ದಿನಾಚರಣೆ

    ಬೆಂಗಳೂರು: ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನವನ್ನು ಆಚರಿಸಲಾಯಿತು.

    ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 2022ನೇ ಸಾಲಿನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆಯ ಅಂಗವಾಗಿ ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಇಂದು ಮಾನ್ಯ ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ಗೌರವ್ ಗುಪ್ತರವರು ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಈ ವೇಳೆ ವಿಶೇಷ ಆಯುಕ್ತರುಗಳು, ವಲಯ ಜಂಟಿ ಆಯುಕ್ತರು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

    ಡಾ. ಬಿ.ಆರ್.ಅಂಬೇಡ್ಕರ್ ಅವರ 131ನೇ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ನಾಡಿನ ಅನೇಕ ಗಣ್ಯರು ಟ್ವೀಟ್ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ಬಾಬಾಸಾಹೇಬ್‌ ಅಂಬೇಡ್ಕರರು ಕಂಡ ಕನಸು ನನಸಾಗಿಸಲು ಬದ್ಧರಾಗೋಣ: ಮೋದಿ

    ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿಗೆ ನನ್ನ ನಮನಗಳು. ಭಾರತದ ಪ್ರಗತಿಗಾಗಿ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ. ನಮ್ಮ ದೇಶಕ್ಕಾಗಿ ಅವರು ಕಂಡ ಕನಸನ್ನು ನಾವು ನನಸಾಗಿಸಲು ಬದ್ಧರಾಗುವ ದಿನ ಬಂದಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: ರಂಗೋಲಿಯಲ್ಲಿ ಮೂಡಿಬಂದ 20 ಅಡಿ ಯಶ್ ಭಾವಚಿತ್ರ

    ಬಾಬಾಸಾಹೇಬ್ ಅಂಬೇಡ್ಕರ್ ಅವರ 131 ನೇ ಜಯಂತಿಗೆ ನಮನಗಳು. ಭಾರತಕ್ಕೆ ಬಲವಾದ ಶಕ್ತಿಯ ಆಧಾರ ಸ್ತಂಭವಾದ ನಮ್ಮ ಪವಿತ್ರ ಸಂವಿಧಾನವನ್ನು ನೀಡಿದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನನ್ನ ನಮನಗಳು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಗೌರವ ಸಮರ್ಪಿಸಿದ್ದಾರೆ.

  • ಬೆಡ್ ಬೇಕು ಅಂತ ಕಂದಾಯ ಸಚಿವರ ಕಾರು ಅಡ್ಡ ಹಾಕಿದ ಯುವತಿ

    ಬೆಡ್ ಬೇಕು ಅಂತ ಕಂದಾಯ ಸಚಿವರ ಕಾರು ಅಡ್ಡ ಹಾಕಿದ ಯುವತಿ

    ಬೆಂಗಳೂರು: ಸಭೆಗೆಂದು ಆಗಮಿಸುತ್ತಿದ್ದ ಕಂದಾಯ ಸಚಿವರ ಕಾರನ್ನು ಅಡ್ಡ ಹಾಕಿ ಯುವತಿಯೊಬ್ಬಳು ತಂದೆಗೆ ಬೆಡ್ ಬೇಕು ಎಂದು ಅಂಗಲಾಚಿದ ಘಟನೆ ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಛೇರಿ ಬಳಿ ನಡೆದಿದೆ.

    ಯಲಹಂಕ ರೈಲ್ವೆ ಆಸ್ಪತ್ರೆಯಲ್ಲಿ ತಾಯಿ ಮತ್ತು ತಂದೆಗೆ ಬೆಡ್ ಬುಕ್ ಆಗಿದೆ. ಒಂದು ವಾರದ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದರು. ಅವರ ತಂದೆಗೆ 65 ವರ್ಷ ವಯಸ್ಸಾಗಿದ್ದು, ರೈಲ್ವೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಐಸಿಯು ಇಲ್ಲ ಎಂದು ಅವರನ್ನು ನಿನ್ನೆ ವಿಕ್ರಮ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೀಗ ವಿಕ್ರಮ್ ಆಸ್ಪತ್ರೆಯವರು ಆಕ್ಸಿಟೋಸಿನ್ ಇಲ್ಲ ರೋಗಿಯನ್ನು ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದಾರೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿದ್ದಾರೆ.

    ತಂದೆಗೆ ಬೆಡ್ ಇಲ್ಲ ಅಂದ ತಕ್ಷಣ ಬಿಬಿಎಂಪಿ ವಾರ್ ರೂಂಗೆ ಆಗಮಿಸಿದ ಯುವತಿ, ಸಚಿವ ಆರ್. ಅಶೋಕ್ ಕಾರಿಗೆ ಅಡ್ಡಲಾಗಿ ನಿಂತ ಹಿನ್ನಲೆ ಇದೀಗ ಯುವತಿ ತಂದೆಗೆ ಬೆಡ್ ವ್ಯವಸ್ಥೆ ಮಾಡಿಸಲು ಮುಂದಾಗಿದ್ದಾರೆ. ಆರ್.ಅಶೋಕ್ ಮಧ್ಯಸ್ಥಿತಿಕೆಯಲ್ಲಿ ಅಂತಿಮವಾಗಿ ಯುವತಿ ತಂದೆಗೆ ಸಪ್ತಗಿರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ.

    ಈ ಕುರಿತಂತೆ ಯುವತಿ, ನನ್ನ ತಂದೆ ತಾಯಿ ಇಬ್ಬರು ಪಾಸಿಟಿವ್ ಆಗಿತ್ತು. ಬೆಡ್ ಸಿಗದ ಹಿನ್ನೆಲೆ ಏನು ಮಾಡಬೇಕೆಂದು ತಿಳಿಯದೆ ಬಿಬಿಎಂಪಿ ಕೇಂದ್ರ ಕಚೇರಿ ವಾರ್ ರೂಂ ಗೆ ಬಂದೆ. ವಾರ್ ರೂಂ ಬಂದ ವೇಳೆ ಸಚಿವ ಆರ್.ಅಶೋಕ್ ಬಳಿ ನಮ್ಮ ಕಷ್ಟ ಹೇಳಿ ಬೆಡ್ ಕೇಳಿದೆವು. ಯಲಹಂಕ ರೈಲ್ವೆ ಆಸ್ಪತ್ರೆಯಲ್ಲಿ ಹೆಚ್‍ಡಿಯು ಬೆಡ್ ಸಿಗದ ಕಾರಣ ವಿಕ್ರಂ ಆಸ್ಪತ್ರೆಗೆ ಶಿಫ್ಟ್ ಮಾಡಿದೆವು. ಈಗ ಸಪ್ತಗಿರಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ, ನನ್ನ ತಂದೆಯನ್ನು ಕರೆದೊಯ್ಯುತ್ತಿದ್ದೇನೆ. ಸಪ್ತಗಿರಿ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಕೊಡಿಸಿದಕ್ಕೆ ಧನ್ಯವಾದ ಎಂದು ಯುವತಿ ತಿಳಿಸಿದ್ದಾಳೆ.