Tag: ಬಿಪ್ಲಬ್ ಕುಮಾರ್ ದೇಬ್

  • ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ತ್ರಿಪುರಾದ ಮಾಜಿ ಸಿಎಂ ಪೂರ್ವಜರ ಮನೆಗೆ ಬೆಂಕಿಯಿಟ್ಟ ದುಷ್ಕರ್ಮಿಗಳು

    ಅಗರ್ತಲಾ: ತ್ರಿಪುರಾದ (Tripura) ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ (Biplab Kumar Deb) ಅವರ ಪೂರ್ವಜರ ಮನೆಗೆ ಮಂಗಳವಾರ ರಾತ್ರಿ ಕೆಲ ಕಿಡಿಗೇಡಿಗಳು ದಾಳಿ ನಡೆಸಿ ಬಳಿಕ ಬೆಂಕಿ (Fire) ಹಚ್ಚಿದ್ದಾರೆ.

    ತ್ರಿಪುರಾದ ಗೋಮತಿ ಜಿಲ್ಲೆಯ ಜಮ್ಜುರಿ ಗ್ರಾಮದಲ್ಲಿರುವ ದೇಬ್ ಅವರ ಪೂರ್ವಜರ ಮನೆಗೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ನಿವಾಸದ ಬಳಿಯಿದ್ದ ಕಾರು ಹಾಗೂ ಇತರ ವಾಹನಗಳನ್ನೂ ಧ್ವಂಸಗೊಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವೀಡಿಯೋಗಳು ಹರಿದಾಡುತ್ತಿದ್ದು, ಮನೆ ಸೇರಿದಂತೆ ಪಕ್ಕದಲ್ಲಿದ್ದ ಅಂಗಡಿಗಳಿಗೂ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.

    ವರದಿಗಳ ಪ್ರಕಾರ, ದೇಬ್ ಅವರ ಸಂಬಂಧಿಕರು ತಮ್ಮ ತಂದೆ ಹಿರುಧನ್ ದೇಬ್ ಅವರ ವಾರ್ಷಿಕ ವಿಧಿ ವಿಧಾನಗಳ ವ್ಯವಸ್ಥೆ ಮಾಡಲು ಪೂರ್ವಜರ ಮನೆಗಾಗಮಿಸಿದ್ದರು. ಎಲ್ಲರೂ ತಮ್ಮ ಕೆಲಸಗಳಲ್ಲಿ ನಿರತರಾಗಿದ್ದಾಗ ದುಷ್ಕರ್ಮಿಗಳ ತಂಡ ಮನೆ ಮೇಲೆ ದಾಳಿ ನಡೆಸಿದೆ. ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹಲವಾರು ದ್ವಿಚಕ್ರ ವಾಹನಗಳು ಹಾಗೂ ಕಾರುಗಳನ್ನು ಕೂಡಾ ಧ್ವಂಸಗೊಳಿಸಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಬಿಜೆಪಿಗರಿಗೆ ಎಲೆಕ್ಷನ್ ಟಾಸ್ಕ್ ವರಿ- ಚುನಾವಣೆ ಮುನ್ನ ತ್ರಿಮೂರ್ತಿಗಳ ರಾಜ್ಯ ಪ್ರವಾಸ

    ದಾಳಿ ನಡೆಸಿರುವ ಕಿಡಿಗೇಡಿಗಳಿಗೆ ಪ್ರತಿಪಕ್ಷ ಸಿಪಿಐಎಂ ಬೆಂಬಲಿಸಿದೆ ಎಂದು ಆರೋಪಿಸಲಾಗಿದೆ. ಘಟನೆಗೂ ಮುನ್ನ ಸಿಪಿಐಎಂ ಶಾಸಕ ರತನ್ ಭೌಮಿಕ್ ಅದೇ ಗ್ರಾಮದಲ್ಲಿ ತಮ್ಮ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅವರ ಪಕ್ಷದ ಸಭೆ ಮುಗಿದ ಬಳಿಕ ಈ ಘಟನೆ ನಡೆದಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಯಚೂರಿನ ರಿಮ್ಸ್‌ನಲ್ಲಿ ಹಂದಿಗಳ ಕಾಟ- ಬಾಣಂತಿಯರು, ಶಿಶುಗಳ ವಾರ್ಡ್‍ನಲ್ಲಿ ಆತಂಕ

    Live Tv
    [brid partner=56869869 player=32851 video=960834 autoplay=true]