Tag: ಬಿಪಾಶಾ ಬಸು

  • ಬೈಕಾಟ್ ನಡುವೆಯೂ ಮಾಲ್ಡೀವ್ಸ್ ನಲ್ಲಿ ಬಿಪಾಶಾ ಬರ್ತ್‌ಡೇ

    ಬೈಕಾಟ್ ನಡುವೆಯೂ ಮಾಲ್ಡೀವ್ಸ್ ನಲ್ಲಿ ಬಿಪಾಶಾ ಬರ್ತ್‌ಡೇ

    ಮಾಲ್ಡೀವ್ಸ್ ಮತ್ತು ಭಾರತದ ನಡುವೆ ಏನೆಲ್ಲ ಸಂಗತಿಗಳು ನಡೆಯುತ್ತಿವೆ. ಅದರಲ್ಲೂ ಬಾಲಿವುಡ್ ಸೆಲೆಬ್ರಿಟಿಗಳು ಬೈಕಾಟ್ ಮಾಲ್ಡೀವ್ಸ್ ಅಭಿಯಾನಕ್ಕೆ ಸಖತ್ ಬೆಂಬಲ ನೀಡುತ್ತಿದ್ದಾರೆ. ಈ ಹೊತ್ತಿನಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸುಂದರ ತಾಣದಲ್ಲಿ ಹುಟ್ಟು ಹಬ್ಬ ಎಂದು ಫೋಟೋ ಹಂಚಿಕೊಂಡಿದ್ದಾರೆ.

    ಜನವರಿ 7 ರಂದು ಬಿಪಾಶಾ ಮಾಲ್ಡೀವ್ಸ್ ನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆ ಫೋಟೋಗಳು ಸಾಕಷ್ಟು ನೆಗೆಟಿವ್ ಕಾಮೆಂಟ್ ಬಂದಿದೆ. ನಿಮಗೆ ಮಾಲ್ಡೀವ್ಸ್ ಮತ್ತು ಭಾರತದ ನಡುವಿನ ಕಿತ್ತಾಟ ಗೊತ್ತಿಲ್ಲವಾ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

    ಮಾಲ್ಡೀವ್ಸ್ ಅಭಿಯಾನ ಜೋರು

    ನರೇಂದ್ರ ಮೋದಿಯನ್ನು (Narendra Modi) ಟೀಕಿಸಿ ಪೇಚೆಗೆ ಸಿಲುಕಿದ ಮಾಲ್ಡೀವ್ಸ್‌ (Maldives) ಸರ್ಕಾರ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾಗಿದ್ದು, ಅಧ್ಯಕ್ಷ ಮೊಹಮ್ಮದ್ ಮಿಜು (Mohamed Muizzu) ಭಾರತಕ್ಕೆ ಬರಲು ಮುಂದಾಗಿದ್ದಾರೆ.

    ಹೌದು. ಸ್ವತ: ಮಾಲ್ಡೀವ್ಸ್‌ ಜನರೇ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಅಧ್ಯಕ್ಷ ಮೊಹಮ್ಮದ್ ಮಿಜು ನೇತೃತ್ವದ ಸರ್ಕಾರ ಮೂವರು ಸಚಿವರನ್ನು ಅಮಾನತು ಮಾಡುವ ಮೂಲಕ ಶಿಸ್ತು ಕ್ರಮ ಜರುಗಿಸಿತ್ತು. ಈಗ ಮೊಹಮ್ಮದ್ ಮಿಜು ವಿರುದ್ಧ ಈಗ ವಿಪಕ್ಷ ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಮುಂದಾಗಿವೆ ಎಂದು ವರದಿಯಾಗಿದೆ. ಈ ಬೆನ್ನಲ್ಲೇ ಮೊಹಮ್ಮದ್ ಮಿಜು ಭಾರತ (India) ಪ್ರವಾಸ ಕೈಗೊಳ್ಳಲು ಮುಂದಾಗಿದ್ದಾರೆ.

     

    ಮಾಲ್ಡೀವ್ಸ್‌ ಸರ್ಕಾರ ಈ ಪ್ರಸ್ತಾಪವನ್ನು ಭಾರತದ ಮುಂದಿಟ್ಟರೂ ಮೋದಿ ಸರ್ಕಾರ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಮೊದಲು ಮಾಲ್ಡೀವ್ಸ್‌ನಲ್ಲಿದ್ದ ಸರ್ಕಾರ ಭಾರತದ ಪರವಾಗಿತ್ತು. ಕೋವಿಡ್‌ ಸಮಯಲ್ಲಿ ಭಾರತ ಲಸಿಕೆಯನ್ನು ರಫ್ತು ಮಾಡಿತ್ತು. ಹೀಗಿದ್ದರೂ ಭಾರತದ ವಿರುದ್ಧವೇ ಹೇಳಿಕೆ ನೀಡಿಯೇ ಮೊಹಮ್ಮದ್ ಮಿಜು ಅಧ್ಯಕ್ಷ ಚುನಾವಣೆಯಲ್ಲಿ ಜಯಗಳಿಸಿದ್ದರು. ಸದ್ಯ ಮೊಹಮ್ಮದ್ ಮಿಜು ಚೀನಾ ಪ್ರವಾಸದಲ್ಲಿದ್ದಾರೆ.

  • ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ಬಾಲಿವುಡ್ (Bollywood) ನಟಿ ಬಿಪಾಶಾ ಬಸು(Bipasha Basu) ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳ ಆರೋಗ್ಯದ ಬಗ್ಗೆ ಬಿಪಾಶಾ ಭಾವುಕರಾಗಿದ್ದಾರೆ. ಮಗಳು ಹುಟ್ಟಿದ ಮೂರೇ ದಿನಕ್ಕೆ ಮಗಳಿಗೆ ಹಾರ್ಟ್‌ನಲ್ಲಿ ರಂಧ್ರವಿರುವ ವಿಚಾರದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಆಕೆಯ ಹೃದಯದಲ್ಲಿ ಎರಡು ರಂಧ್ರಗಳಿವೆ ಎಂದು ನಟಿ ಲೈವ್‌ನಲ್ಲಿ ಕಣ್ಣೀರಿಟ್ಟಿದ್ದಾರೆ.

    ಹಿಂದಿ ಸಿನಿಮಾಗಳ ಮೂಲ ಸಂಚಲನ ಮೂಡಿಸಿದ ನಟಿ ಬಿಪಾಶಾ ಅವರು ಮದುವೆಯ ಬಳಿಕ ಮಗಳ ಆರೈಕೆ, ದಾಂಪತ್ಯ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ ನಟಿ ನೇಹಾ ಧೂಫಿಯಾ (Neha Dhuphia) ನಡೆಸಿರುವ ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಮಗಳ ಬಗ್ಗೆ ಆಘಾತಕಾರಿ ಸುದ್ದಿಯೊಂದನ್ನ ಬಿಪಾಶಾ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಒಲಿದು ಬಂದ ಅದೃಷ್ಟ- ಮೆಗಾಸ್ಟಾರ್ ಸಿನಿಮಾದಲ್ಲಿ ಕನ್ನಡತಿ

    ಮಗು ಜನಿಸಿದ ಮೂರನೇ ದಿನಕ್ಕೆ ಈ ಶಾಕಿಂಗ್ ವಿಚಾರ ವೈದ್ಯರಿಗೆ ತಿಳಿಯಿತು. ಇದನ್ನು ವೈದ್ಯರು ಬಿಪಾಶಾಗೆ ಹೇಳಿದರು. ಆದರೆ, ಈ ವಿಚಾರವನ್ನು ಅವರು ಎಲ್ಲೂ ಹಂಚಿಕೊಳ್ಳಲಿಲ್ಲ. ಮಗುವಿನ ಹೃದಯದಲ್ಲಿ ರಂಧ್ರಗಳಿರುವ ವಿಚಾರ ಮೂರು ದಿನಗಳ ನಂತರ ನಮಗೆ ತಿಳಿಯಿತು. ಸರಿ ಆಗಬಹುದು ಎಂದು ಕಾದೆವು. ಆದರೆ, ಆಗಲಿಲ್ಲ. ಮೂರು ತಿಂಗಳ ಮಗುವಿಗೆ ಶಸ್ತ್ರಚಿಕಿತ್ಸೆ ತುಂಬಾ ಕಷ್ಟ. ಕೊನೆಗೂ ನಾವು ಶಸ್ತ್ರಚಿಕಿತ್ಸೆಗೆ ಒಪ್ಪಿಕೊಂಡೆವು. ಬಳಿಕ ವೈದ್ಯರು ಓಪನ್ ಹಾರ್ಟ್ ಸರ್ಜರಿ ಮಾಡಿದರು ಎಂದು ನಟಿ ಬಿಪಾಶಾ ತಿಳಿಸಿದರು.

    ಮಗಳು ಆಪರೇಷನ್ ಥಿಯೇಟರ್‌ನಲ್ಲಿದ್ದ ಆ 6 ಗಂಟೆ ನನ್ನ ಪ್ರಾಣವೇ ನಿಂತು ಹೋದಂತೆ ಅಂದು ಭಾಸವಾಗಿತ್ತು. ದೇವಿ (Devi) ಈಗ ಆರಾಮಾಗಿದ್ದಾಳೆ. ಮಗು ಗುಣಮುಖವಾಗಿದ್ದಾಳೆ ಎಂದು ತಿಳಿಯಲು ಪ್ರತಿ ತಿಂಗಳು ಮಗುವಿಗೆ ಹೃದಯದ ಸ್ಕ್ಯಾನ್ ಮಾಡಬೇಕಾಗುತ್ತದೆ. ಅದನ್ನು ನಾವು ಮಾಡಿಸುತ್ತಿದ್ದೇವೆ ಎಂದು ನಟಿ ಕಣ್ಣೀರು ಹಾಕಿದ್ದಾರೆ.

    2016ರಲ್ಲಿ ಕರಣ್ ಗ್ರೋವರ್ (Karan Grover) ಜೊತೆ ಬಿಪಾಶಾ ಬಸು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮುದ್ದಾದ ಮಗಳು ದೇವಿ ಪಾಲನೆಯಲ್ಲಿ ನಟಿ ಬ್ಯುಸಿಯಿದ್ದಾರೆ. ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದುಬಾರಿ ಕಾರು ಖರೀದಿಸಿದ ನಟಿ ಬಿಪಾಶಾ ಬಸು

    ದುಬಾರಿ ಕಾರು ಖರೀದಿಸಿದ ನಟಿ ಬಿಪಾಶಾ ಬಸು

    ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu) ಅವರು ಕೆಲ ತಿಂಗಳುಗಳ ಹಿಂದೆ ಚೊಚ್ಚಲ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮುದ್ದಿನ ಮಗಳು ದೇವಿಗಾಗಿ ದುಬಾರಿ ಕಾರನ್ನ ನಟಿ ಖರೀದಿಸಿದ್ದಾರೆ.

    ಹಿಂದಿ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಬಿಪಾಶಾ ಬಸು (Bipasha Basu) ಅವರು ನಟ ಕರಣ್ ಗ್ರೋವರ್ ಅವರನ್ನ ಪ್ರೀತಿಸಿ ಮದುವೆಯಾದರು. ಇದೀಗ ದೇವಿ (Devi) ಎಂಬ ಮುದ್ದಾದ ಮಗಳಿದ್ದಾಳೆ. ಇದನ್ನೂ ಓದಿ:ಕಡಲ ಕಿನಾರೆಯಲ್ಲಿ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್

     

    View this post on Instagram

     

    A post shared by Bipasha Basu (@bipashabasu)

    ಸದ್ಯ ಬಿಪಾಶಾ ಬಸು ಅವರು Audi Q7 ಕಾರನ್ನ ಮಗಳಿಗಾಗಿ ಖರೀದಿಸಿದ್ದಾರೆ. ಕಾರಿನ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. 90ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ‘ಅಡಿ ಕ್ಯೂ 7’ ಕಾರನ್ನ ಬಿಪಾಶಾ ದಂಪತಿ ಖರೀದಿ ಮಾಡಿದ್ದಾರೆ. ಈ ಕುರಿತ ಫೋಟೋ, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೆಚ್ಚಿನ ನಟಿಯ ಮನೆಗೆ ದುಬಾರಿ ಕಾರು ಬಂದಿರೋದ್ದಕ್ಕೆ ಫ್ಯಾನ್ಸ್‌ ಕೂಡ ಶುಭ ಹಾರೈಸಿದ್ದಾರೆ.

    ಮಗಳ ಆರೈಕೆ ಅಂತಾ ಸಿನಿಮಾಗಳಿಂದ ನಟಿ ದೂರವಿದ್ದಾರೆ. ಉತ್ತಮ ಸ್ಕ್ರೀಪ್ಟ್‌ ಸಿಕ್ಕಿದ್ದಲ್ಲಿ ಮತ್ತೆ ಚಿತ್ರರಂಗಕ್ಕೆ ಬಿಪಾಶಾ ಕಂಬ್ಯಾಕ್ ಆಗಲಿದ್ದಾರೆ.

  • ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಬಿಪಾಶಾ ಬಸು

    ಮೊದಲ ಬಾರಿಗೆ ಮಗಳ ಮುಖ ರಿವೀಲ್ ಮಾಡಿದ ಬಿಪಾಶಾ ಬಸು

    ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu) ಸದ್ಯ ತಾಯ್ತನದಲ್ಲಿ ಖುಷಿಯಲ್ಲಿದ್ದಾರೆ. ಮುದ್ದು ಮಗಳು ದೇವಿ (Devi) ಮುಖವನ್ನ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಮಗಳ ಚೆಂದದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ರೇಸ್ 2, ಅಲೋನ್, ಗೋಲ್ ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಸ್ಟಾರ್ ನಟರಿಗೆ ಜೋಡಿಯಾಗಿ ನಟಿಸಿದ್ದಾರೆ. ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಬಿಪಾಶಾ ಬಸು ಮಿಂಚಿದ್ದಾರೆ.

    2014ರಲ್ಲಿ Alone ಸಿನಿಮಾದಲ್ಲಿ ಕರಣ್ ಸಿಂಗ್‌ಗೆ ಬಿಪಾಶಾ ಬಸು ನಾಯಕಿಯಾಗಿದ್ದರು. ಸಿನಿಮಾ ಸೆಟ್‌ನಲ್ಲಿ ಭೇಟಿಯಾದ ಈ ಜೋಡಿ ರಿಯಲ್‌ ಲೈಫ್‌ನಲ್ಲಿಯೂ ಜೋಡಿಯಾದರು. 2016ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಬಿಪಾಶಾ-ಕರಣ್ ಮದುವೆಯಾದರು.

     

    View this post on Instagram

     

    A post shared by Bipasha Basu (@bipashabasu)

    ಕಳೆದ ವರ್ಷ ನವೆಂಬರ್ 12ರಂದು ಮುದ್ದು ಮಗಳ ಆಗಮನವಾಗಿತ್ತು. ಮಗುವಿಗೆ ದೇವಿ ಎಂದು ಹೆಸರನ್ನೀಟ್ಟಿದ್ದಾರೆ. ಇದೀಗ 5 ತಿಂಗಳು ತುಂಬಿದ ಶುಭ ಸಂದರ್ಭದಲ್ಲಿ, ಫಸ್ಟ್ ಟೈಮ್ ಮಗಳ ಮುಖವನ್ನ ನಟಿ ರಿವೀಲ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿರುವ ಮಗುವಿಗೆ ಹೇರ್ ಬೆಂಡ್ ಹಾಕಿರುವ ಫೋಟೋವನ್ನ ಬಿಪಾಶಾ ದಂಪತಿ ಶೇರ್ ಮಾಡಿದ್ದಾರೆ. ಬಿಪಾಶಾ ಮಗಳು ದೇವಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು

    ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ನಟಿ ಬಿಪಾಶಾ ಬಸು

    ಬಾಲಿವುಡ್ (Bollywood) ಬ್ಯೂಟಿ ಬಿಪಾಶಾ ಬಸು (Bipasha Basu)ಇದೀಗ ತಾಯ್ತನದ ಖುಷಿಯಲ್ಲಿದ್ದಾರೆ. ಮನೆಗೆ ಎಂಟ್ರಿಯಾಗಿರುವ ಮುದ್ದು ಮಗಳ ಆರೈಕೆಯಲ್ಲಿದ್ದಾರೆ. ಈಗ ಮಗಳ ಜೊತೆಗಿನ ಮುದ್ದಾದ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ಕರಣ್ ಸಿಂಗ್ ಗ್ರೋವರ್ ಮತ್ತು ಬಿಪಾಶಾ ಪ್ರೀತಿಸಿ ಗುರುಹಿರಿಯರ ಒಪ್ಪಿಗೆ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮಗಳ ಆಗಮನ ಖುಷಿಯಲ್ಲಿದ್ದಾರೆ. ಆಗಾಗ ಮಗಳ ಜೊತೆಗಿನ ಫೋಟೋ, ವೀಡಿಯೋ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ಅಪ್‌ಡೇಟ್ ಕೊಡುತ್ತಾರೆ. ಇದನ್ನೂ ಓದಿ: ಸಿನಿಮಾ ಸಕ್ಸಸ್ ಸೆಲೆಬ್ರೇಶನ್ ಸಂಭ್ರಮದಲ್ಲಿ `ಕಾಂತಾರ’ ಟೀಮ್

     

    View this post on Instagram

     

    A post shared by Bipasha Basu (@bipashabasu)

    ನಟಿ ಬಿಪಾಶಾ ಮಗುವಿನ ಫೋಟೋ ಶೇರ್ ಮಾಡಿ, ಚೆಂದದ ಅಡಿಬರಹ ನೀಡಿದ್ದಾರೆ. ನನ್ನ ಜೀವನದ ಅತ್ಯಂತ ಸಂತೋಷದ ವಿಷಯವೆನೆಂದರೆ ಮಗಳು ದೇವಿಗೆ (Devi) ತಾಯಿಯಾಗಿದ್ದು ಎಂದು ಬರೆದುಕೊಂಡಿದ್ದಾರೆ. ಈ ಮುದ್ದಾದ ಪೋಸ್ಟ್‌ ಈಗ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

     

    View this post on Instagram

     

    A post shared by Bipasha Basu (@bipashabasu)

    ಸದ್ಯ ಮಗಳು ಆರೈಕೆಯಲ್ಲಿರುವ ನಟಿ ಬಿಪಾಶಾ ಬಸು ಸಿನಿಮಾಗೆ ಕಮ್‌ಬ್ಯಾಕ್ ಆಗುತ್ತಾರಾ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟು ಸಂಭ್ರಮಿಸಿದ ನಟಿ ಬಿಪಾಶಾ ಬಸು

    ಮಗು ಹುಟ್ಟಿದ ಒಂದೇ ತಾಸಿಗೆ ಹೆಸರಿಟ್ಟು ಸಂಭ್ರಮಿಸಿದ ನಟಿ ಬಿಪಾಶಾ ಬಸು

    ಟಿ ಬಿಪಾಶಾ ಬಸು ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಚ್ಚರಿಯೆಂದರೆ ಮಗು ಹುಟ್ಟಿದ ಒಂದೇ ತಾಸಿಗೆ ತಮ್ಮ ಮಗುವಿಗೆ ಮುದ್ದಾದ ಹೆಸರಿಟ್ಟಿದ್ದಾರೆ. ತಾವು ದೇವಿಯ ಆರಾಧಕರು ಆಗಿರುವ ಕಾರಣದಿಂದಾಗಿ ತಮ್ಮ ಮಗುವಿಗೆ ಅವರು ‘ದೇವಿ’ ಎಂದು ಹೆಸರಿಟ್ಟಿದ್ದಾರೆ. ತಮ್ಮ ಮನೆಗೆ ದೇವಿಯನ್ನು ಬರಮಾಡಿಕೊಂಡಿರುವುದಾಗಿ ಅವರು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಬಿಪಾಶಾ ಬಸು ತಾಯಿ ಆಗುವ ಮೂಲಕ ಹೊಸ ಜವಾಬ್ದಾರಿಯತ್ತ ಹೊರಳಿದ್ದು, ಹಲವು ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ, ನಾಲ್ಕೈದು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದೇನೆ ಎಂದೂ ಬರೆದುಕೊಂಡಿದ್ದರು. ಇದನ್ನೂ ಓದಿ:ಗಡಿನಾಡ ಕನ್ನಡಿಗ ಎಂದ ರೂಪೇಶ್‌ ಶೆಟ್ಟಿಗೆ ಬೆದರಿಕೆ, ದೂರು ದಾಖಲಿಸಿದ ಕುಟುಂಬದವರು

    ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಆಗಾಗ್ಗೆ ಖಾಸಗಿ ಜೀವನದ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಮೊದಲ ಮಗುವಿನ ಕುರಿತು ಸಾಕಷ್ಟು ಕನಸುಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಮಗು ಹಾರೈಕೆ, ಮಗುವಿನ ಲಾಲನೆ, ಪಾಲನೆ ಸೇರಿದಂತೆ ಹಲವು ಟಿಪ್ಸ್ ಗಳನ್ನು ಹಿರಿಯರಿಂದ ಪಡೆದುಕೊಳ್ಳುವ ಕುರಿತು ಹೇಳಿಕೊಂಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಇದೇ ಆಗಸ್ಟ್ ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿಯನ್ನ ತಿಳಿಸಿದ್ದರು.

    ಬಿಪಾಶಾಗೆ ಮಗುವಾಗುತ್ತಿದ್ದಂತೆಯೇ ಅವರ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಿಪಾಶಾ ಇಷ್ಟಪಟ್ಟಂತೆ ಅವರಿಗೆ ಹೆಣ್ಣು ಮಗುವೇ ಆಗಿದೆ ಎಂದು ಹಲವರು ಸಂಭ್ರಮಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯದಲ್ಲೇ ಮಗುವಿನೊಂದಿಗೆ ಬಿಪಾಶಾ ಮನೆಗೂ ಬರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿನ ತಾಯಿಯಾದ ಬಾಲಿವುಡ್ ನಟಿ ಬಿಪಾಶಾ ಬಸು

    ಹೆಣ್ಣು ಮಗುವಿನ ತಾಯಿಯಾದ ಬಾಲಿವುಡ್ ನಟಿ ಬಿಪಾಶಾ ಬಸು

    ನಟಿ ಬಿಪಾಶಾ ಬಸು ತಾಯಿ ಆಗಿದ್ದಾರೆ. ಇಂದು ಹೆಣ್ಣು ಮಗುವಿಗೆ ಜನ್ಮ ನೀಡುವ ಮೂಲಕ ಹೊಸ ಜವಾಬ್ದಾರಿಯತ್ತ ಹೊರಳಿದ್ದಾರೆ. ಹಲವು ದಿನಗಳಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ನಟಿ, ನಾಲ್ಕೈದು ಬಾರಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಸಂಭ್ರಮಿಸಿದ್ದರು. ಅವುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಮೊದಲ ಮಗುವಿನ ಆಗಮನಕ್ಕೆ ಕಾಯುತ್ತಿದ್ದೇನೆ ಎಂದೂ ಬರೆದುಕೊಂಡಿದ್ದರು.

    ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿ ಆಗಾಗ್ಗೆ ಖಾಸಗಿ ಜೀವನದ ಸಂಗತಿಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಅದರಲ್ಲೂ ಮೊದಲ ಮಗುವಿನ ಕುರಿತು ಸಾಕಷ್ಟು ಕನಸುಗಳನ್ನು ಈಗಾಗಲೇ ಹಂಚಿಕೊಂಡಿದ್ದಾರೆ. ಮಗು ಹಾರೈಕೆ, ಮಗುವಿನ ಲಾಲಲೆ ಪೋಷನೆ ಸೇರಿದಂತೆ ಹಲವು ಟಿಪ್ಸ್ ಗಳನ್ನು ಹಿರಿಯರಿಂದ ಪಡೆದುಕೊಳ್ಳುವ ಕುರಿತು ಹೇಳಿಕೊಂಡಿದ್ದರು. 30 ಏಪ್ರಿಲ್ 2016ರಲ್ಲಿ ಮದುವೆಯಾಗಿರುವ ಬಿಪಾಶಾ ಇದೇ ಆಗಸ್ಟ್ ನಲ್ಲಿ ತಾವು ಗರ್ಭಿಣಿಯಾಗಿರುವ ಸಂಗತಿಯನ್ನ ತಿಳಿಸಿದ್ದರು. ಇದನ್ನೂ ಓದಿ:ಭಾರತಕ್ಕೆ ಬೈ ಹೇಳಿದ ಬೆನ್ನಲ್ಲೇ ಕ್ರಿಸ್‌ಮಸ್‌ಗೆ ಪ್ರಿಯಾಂಕಾ ಚೋಪ್ರಾ ತಯಾರಿ

    ಬಿಪಾಶಾಗೆ ಮಗುವಾಗುತ್ತಿದ್ದಂತೆಯೇ ಅವರ ಆಪ್ತರು, ಸ್ನೇಹಿತರು ಹಾಗೂ ಸಂಬಂಧಿಕರು ಶುಭಾಶಯಗಳನ್ನು ಕೋರುತ್ತಿದ್ದಾರೆ. ಬಿಪಾಶಾ ಇಷ್ಟಪಟ್ಟಂತೆ ಅವರಿಗೆ ಹೆಣ್ಣ ಮಗುವೇ ಆಗಿದೆ ಎಂದು ಹಲವರು ಸಂಭ್ರಮಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯದಲ್ಲೇ ಮಗುವಿನೊಂದಿಗೆ ಬಿಪಾಶಾ ಮನೆಗೂ ಬರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಮಿಂಚಿದ ನಟಿ ಬಿಪಾಶಾ ಬಸು

    ಮೆಟರ್ನಿಟಿ ಫೋಟೋಶೂಟ್‌ನಲ್ಲಿ ಮಿಂಚಿದ ನಟಿ ಬಿಪಾಶಾ ಬಸು

    ಬಾಲಿವುಡ್ ಬ್ಯೂಟಿ ಬಿಪಾಶಾ ಬಸು ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮತ್ತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೆಕ್ಸಿ ಲುಕ್‌ನಲ್ಲಿ ಬಿಪಾಶಾ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Bipasha Basu (@bipashabasu)

    ಹಿಂದಿಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಬಿಪಾಶಾ ಮತ್ತು ಕರಣ್ ಸಿಂಗ್ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಕೆಲ ತಿಂಗಳುಗಳ ಹಿಂದೆ ಪ್ರೆಗ್ನೆನ್ಸಿ ವಿಚಾರವನ್ನ ಅಭಿಮಾನಿಗಳಿಗೆ ತಿಳಿಸುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಮಗುವಿನ ಆಗಮನದ ಖುಷಿಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿದ್ದಾರೆ. ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ತಾಯ್ನಾಡಿಗೆ ಪ್ರಿಯಾಂಕಾ ಚೋಪ್ರಾ ಕಾಲಿಟ್ಟ ಬೆನ್ನಲ್ಲೇ ನಟಿಯ ವಿರುದ್ಧ ಗಂಭೀರ ಆರೋಪ

     

    View this post on Instagram

     

    A post shared by Bipasha Basu (@bipashabasu)

    ಗೋಲ್ಡನ್ ಕಲರ್ ಗೌನ್‌ನಲ್ಲಿ ಸೆಕ್ಸಿ ಪೋಸ್ ಕೊಟ್ಟು, ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್ ಇದೀಗ ನೆಟ್ಟಿಗರ ಗಮನ ಸೆಳೆಯುತ್ತಿದೆ.

     

    View this post on Instagram

     

    A post shared by Bipasha Basu (@bipashabasu)

    ಇನ್ನೂ ತುಂಬು ಗರ್ಭೀಣಿಯಾಗಿರುವ ಬಿಪಾಶಾಗೆ ಮುಂಬರುವ ಡಿಸೆಂಬರ್‌ಗೆ ಡೆಲಿವೆರಿ ಡೇಟ್ ಕೊಟ್ಟಿದ್ದಾರೆ. ಮುಂಬೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ನಟಿಯ ಹೆರಿಗೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬಿಪಾಶಾ ಬಸು ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಬಿಪಾಶಾ ಬಸು ದಂಪತಿ

    ಬಾಲಿವುಡ್‌ನ (Bollywood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟಿ ಬಿಪಾಶಾ ಬಸು (Bipasha Basu) ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮನೆಗೆ ಬರಲಿರುವ ಹೊಸ ಅತಿಥಿಯ ಆಗಮನದ ಕಾತುರದಲ್ಲಿದ್ದಾರೆ ಬಿಪಾಶಾ ದಂಪತಿ. ಇದೀಗ ಸದ್ಯ ಚೆಕಪ್‌ಗಾಗಿ ಮುಂಬೈ ಆಸ್ಪತ್ರೆಗೆ ಬಂದಿದ್ದಾರೆ. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

    ಹಿಂದಿಯ ಸಾಕಷ್ಟು ಚಿತ್ರಗಳಲ್ಲಿ ಮಿಂಚಿರುವ ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಸದ್ಯದಲ್ಲೇ ಪೋಷಕರಾಗಲಿದ್ದಾರೆ. 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಈ ಜೋಡಿ ಇದೀಗ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೀಗ ತುಂಬು ಗರ್ಭಿಣಿಯಾಗಿರುವ ಬಿಪಾಶಾ ಜನರಲ್ ಚೆಕಪ್‌ಗಾಗಿ ಮುಂಬೈನ ಹಿಂದುಜಾ ಆಸ್ಪತ್ರೆಗೆ(Hinduja Hospital) ಭೇಟಿ ನೀಡಿದ್ದಾರೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನಟಿಯರನ್ನ ಸೆಡ್ಡು ಹೊಡೆದು ಸ್ಟಾರ್ ನಟನಿಗೆ ನಾಯಕಿಯಾದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Bipasha Basu (@bipashabasu)

    ಇತ್ತೀಚೆಗಷ್ಟೇ ಬಿಪಾಶಾ ಬಸು ಅವರ ಬೇಬಿ ಶವರ್ ಕಾರ್ಯಕ್ರಮ ಮತ್ತು ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತ್ತು. ಮೊದಲ ಮಗುವಿನ ನಿರೀಕ್ಷೆಯ ಜೊತೆ ಖುಷಿಯಲ್ಲಿದ್ದಾರೆ ಬಿಪಾಶಾ ದಂಪತಿ.

    Live Tv
    [brid partner=56869869 player=32851 video=960834 autoplay=true]

  • ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    ಬೇಬಿ ಬಂಪ್‌ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ಬಿಪಾಶಾ ಬಸು

    ಬಾಲಿವುಡ್ ಬ್ಯೂಟಿ ಬಿಪಾಶಾ ಬಸು(Bipasha Basu) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ತಮ್ಮ ಬೇಬಿ ಬಂಪ್ ಫೋಟೋಶೂಟ್ ಮೂಲಕ ನಟಿ ಸಂಚಲನ ಮೂಡಿಸುತ್ತಿದ್ದಾರೆ. ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ತಮ್ಮ ಬೇಬಿ ಬಂಪ್ ಲುಕ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.

     

    View this post on Instagram

     

    A post shared by Bipasha Basu (@bipashabasu)

    ಬಿಟೌನ್‌ನಲ್ಲಿ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಬಿಪಾಶಾ ಬಸು ಮತ್ತೆ ಸುದ್ದಿಯಲ್ಲಿದ್ದಾರೆ. ಬೇಡಿಕೆ ಇರುವಾಗಲೇ 2016ರಲ್ಲಿ ಕರಣ್ ಸಿಂಗ್(Karan Singh) ಜೊತೆ ಬಿಪಾಶಾ ಹಸೆಮಣೆ ಏರಿದ್ದರು. ಆರು ವರ್ಷಗಳ ನಂತರ ಇದೀಗ ತಾವು ತಾಯಿಯಾಗಿರುವ ಗುಡ್ ನ್ಯೂಸ್‌ನ ಅಭಿಮಾನಿಗಳೊಂದಿಗೆ ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ, ಮೊದಲ ಬಾರಿಗೆ ಸಾರ್ವಜನಿಕವಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಪತಿ ರಣ್‌ಬೀರ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ ಆಲಿಯಾ ಭಟ್

     

    View this post on Instagram

     

    A post shared by Viral Bhayani (@viralbhayani)

    ಮುಂಬೈನ ಸಲೂನ್‌ವೊಂದರಲ್ಲಿ ಬೇಬಿ ಬಂಪ್ ಲುಕ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಪ್ರಗ್ನೆನ್ಸಿ ಗ್ಲೋ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]