Tag: ಬಿಡುಗಡೆ ದಿನಾಂಕ

  • RRR ಸಿನಿಮಾ ಬಿಡುಗಡೆ ಮುಂದೂಡಿಕೆ ಅಧಿಕೃತ

    RRR ಸಿನಿಮಾ ಬಿಡುಗಡೆ ಮುಂದೂಡಿಕೆ ಅಧಿಕೃತ

    ಹೈದರಾಬಾದ್: ಕೊರನಾ ಕಾರಣದಿಂದಾಗಿ ಆರ್‌ಆರ್‌ಆರ್‌ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಕುರಿತಾಗಿ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಹೊರ ಹಾಕಿದೆ.

    ಟ್ವೀಟ್‍ನಲ್ಲಿ ಏನಿದೆ?: ಎಲ್ಲರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನಾವು ನಮ್ಮ ಚಲನಚಿತ್ರ ಬಿಡುಗಡೆಯನ್ನು ಮುಂದೂಡಲು ಇಚ್ಚಿಸಿದ್ದೇವೆ. ಎಲ್ಲರ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಚಿತ್ರತಂಡ ಸಿನಿಮಾ ಬಿಡುಗಡೆಯ ದಿನಾಂಕವನ್ನು ಮೂಂದುಡಿದೆ ಎನ್ನುವ ಮಾಹಿತಿಯನ್ನು ಹೊರ ಹಾಕಿದೆ.

    ನಮ್ಮ ನಿರಂತರ ಪ್ರಯತ್ನಗಳ ಹೊರತಾಗಿಯೂ, ಕೆಲವು ಸನ್ನಿವೇಶಗಳು ನಮ್ಮ ನಿಯಂತ್ರಣವನ್ನು ಮೀರಿದೆ. ಭಾರತದ ಅನೇಕ ರಾಜ್ಯಗಳು ಚಿತ್ರಮಂದಿರಗಳನ್ನು ಮುಚ್ಚುತ್ತಿರುವುದರಿಂದ, ನಿಮ್ಮ ಉತ್ಸಾಹವನ್ನು ಹಿಡಿದಿಟ್ಟುಕೊಳ್ಳಲು ಕೇಳುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲದಾಗಿದೆ. ನಾವು ಭಾರತೀಯ ಸಿನಿಮಾದ ವೈಭವವನ್ನು ಮರಳಿ ತರುವುದಾಗಿ ಭರವಸೆ ನೀಡುತ್ತಿದ್ದೇವೆ ಮತ್ತು ಸರಿಯಾದ ಸಮಯದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

     

    View this post on Instagram

     

    A post shared by Taran Adarsh (@taranadarsh)

    ರಾಮ್ ಚರಣ್ ತೇಜಾ, ಜೂ.ಎನ್‍ಟಿಆರ್ ಅಭಿನಯಿಸಿರುವ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಆರ್‌ಆರ್‌ಆರ್‌ ಸಿನಿಮಾ 2022ರ ಜನವರಿ 7ರಂದು ಐದು ಭಾಷೆಗಳಲ್ಲಿ ತೆರೆ ಕಾಣಬೇಕಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇದೀಗ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.

     

    ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧ ವಿಧಿಸಲಾಗಿದ್ದು, ಬೆಂಗಳೂರಿನಲ್ಲಿಯೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಚಿತ್ರ ಬಿಡುಗಡೆಗೊಳಿಸದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ಆರ್‍ಆರ್‍ಆರ್ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವುದನ್ನು ಬಿಟ್ಟು ನಿರ್ಮಾಪಕರಿಗೆ ಬೇರೆ ದಾರಿ ಇಲ್ಲದಂತಾಗಿದೆ.

    ಬೆಂಗಳೂರಿನಲ್ಲಿ ಆರ್‌ಆರ್‌ಆರ್‌ ಚಿತ್ರದ ಪ್ರಿರಿಲೀಸ್ ಇವೆಂಟ್ ಜನವರಿ 2ಕ್ಕೆ ನಿಗದಿಯಾಗಿತ್ತು. ಆದರೆ ಬೆಂಗಳೂರಿನಲ್ಲಿಯೂ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಪ್ರಮೋಷನ್ ಕಾರ್ಯಕ್ರಮವನ್ನು ಚಿತ್ರತಂಡ ಮೊಟಕುಗೊಳಿಸಿತ್ತು. ಇದೀಗ ಸಿನಿಮಾ ಬಿಡುಗಡೆ ದಿನಾಂಕವನ್ನು ಮಂದೂಡಿರುವುದಾಗಿ ಆರ್‌ಆರ್‌ಆರ್‌ ಚಿತ್ರತಂಡ ತಿಳಿಸಿದೆ.

  • ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಓಮಿಕ್ರಾನ್ ಭೀತಿ – ಮತ್ತೆ RRR ಚಿತ್ರ ಬಿಡುಗಡೆ ಮುಂದೂಡಿಕೆ?

    ಹೈದರಾಬಾದ್: ಟಾಲಿವುಡ್ ನಟ ಜ್ಯೂನಿಯರ್ ಎನ್‍ಟಿಆರ್ ಹಾಗೂ ನಟ ರಾಮ್ ಚರಣ್ ತೇಜ ಅಭಿನಯದ ಬಹುನಿರೀಕ್ಷಿತ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

    ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಆರ್‌ಆರ್‌ಆರ್‌ ಸಿನಿಮಾ 2022ರ ಜನವರಿ 7ರಂದು ಐದು ಭಾಷೆಗಳಲ್ಲಿ ತೆರೆ ಕಾಣಬೇಕಾಗಿತ್ತು. ಆದರೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇದೀಗ ಆರ್‌ಆರ್‌ಆರ್‌ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ ಎನ್ನಲಾಗುತ್ತಿದೆ.

    ತಮಿಳುನಾಡು, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ನಿರ್ಬಂಧ ವಿಧಿಸಲಾಗಿದ್ದು, ಬೆಂಗಳೂರಿನಲ್ಲಿಯೂ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಪಕರು ಚಿತ್ರ ಬಿಡುಗಡೆಗೊಳಿಸದಿರಲು ತೀರ್ಮಾನಿಸಿದ್ದಾರೆ. ಈಗಾಗಲೇ ಆರ್‌ಆರ್‌ಆರ್‌ ಚಿತ್ರತಂಡ ಸಿನಿಮಾ ಕುರಿತಂತೆ ಭರ್ಜರಿಯಾಗಿ ಪ್ರಮೋಷನ್ ನಡೆಸಿದ್ದು, ಚಿತ್ರ ನೋಡಲು ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡುವುದನ್ನು ಬಿಟ್ಟು ನಿರ್ಮಾಪಕರಿಗೆ ಬೇರೆ ದಾರಿ ಇಲ್ಲದಂತಾಗಿದೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು

    ಬೆಂಗಳೂರಿನಲ್ಲಿ ಆರ್‌ಆರ್‌ಆರ್‌ ಚಿತ್ರದ ಪ್ರಿರಿಲೀಸ್ ಇವೆಂಟ್ ಜನವರಿ 2ಕ್ಕೆ ನಿಗದಿಯಾಗಿತ್ತು. ಆದರೆ ಬೆಂಗಳೂರಿನಲ್ಲಿಯೂ ಕೊರೊನಾ ಹೆಚ್ಚಾಗುತ್ತಿರುವ ಕಾರಣ ಪ್ರಮೋಷನ್ ಕಾರ್ಯಕ್ರಮವನ್ನು ಚಿತ್ರತಂಡ ಮೊಟಕುಗೊಳಿಸಿದೆ. ಕೊರೊನಾ ಏರಿಕೆಯ ಪರಿಸ್ಥಿತಿ ನೋಡಿಕೊಂಡು ಆರ್‌ಆರ್‌ಆರ್‌ ರಿಲೀಸ್ ದಿನಾಂಕ ಘೋಷಿಸುವ ಸಾಧ್ಯತೆ ಇದೆ. ಸದ್ಯ ಆರ್‌ಆರ್‌ಆರ್‌ ಬಿಡುಗಡೆ ದಿನಾಂಕವನ್ನು ಎರಡು ತಿಂಗಳು ಮುಂದೂಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

    ಈ ತಿಂಗಳು ಆರ್‌ಆರ್‌ಆರ್‌ ಹಾಗೂ ರಾಧೆಶ್ಯಾಮ್ ಸೇರಿದಂತೆ ಅನೇಕ ಚಿತ್ರಗಳು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಬಿಡುಗಡೆಯಾಗದ ಹಿನ್ನೆಲೆ ಮಾರ್ಚ್ ಹಾಗೂ ಏಪ್ರಿಲ್‍ನಲ್ಲಿ ಬಿಗ್ ಸ್ಟಾರ್ ಸಿನಿಮಾಗಳು ಕ್ಲ್ಯಾಶ್ ಆಗುವುದು ಪಕ್ಕಾ ಎಂದೇ ಹೇಳಬಹುದು. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ

  • ರಾಧೆ ಶ್ಯಾಮ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ – ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ

    ರಾಧೆ ಶ್ಯಾಮ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ – ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ

    ಹೈದರಾಬಾದ್: ಟಾಲಿವುಡ್ ಬಾಹುಬಲಿ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರಾಧೆ ಶ್ಯಾಮ್ ಸಿನಿಮಾದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಆದರೆ ಈ ವಿಚಾರ ಅಭಿಮಾನಿಗಳಿಗೆ ಬೇಸರ ತರಿಸಿದೆ.

    ಕಳೆದ ಒಂದು ವರ್ಷದಿಂದ ಪ್ರಭಾಸ್‍ರನ್ನು ಬೆಳ್ಳಿ ಪರದೆ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಬೇಕಿದ್ದ ರಾಧೆ ಶ್ಯಾಮ ಸಿನಿಮಾ ಕೊರೊನಾ 2ನೇ ಅಲೆಯಿಂದಾಗಿ ಮುಂದೂಡಲಾಗಿತ್ತು. ಆದರೆ ಇದೀಗ ಚಿತ್ರತಂಡ ಸಿನಿಮಾವನ್ನು ಮುಂದಿನ ವರ್ಷ ಜನವರಿ 14ರಂದು ಅಂದರೆ ಸಂಕ್ರಾಂತಿ ಹಬ್ಬದಂದು ಬಿಡುಗಡೆಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ.

    ಈ ಕುರಿತಂತೆ ಚಿತ್ರತಂತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್‍ವೊಂದನ್ನು ಹಂಚಿಕೊಂಡಿದ್ದು, ಹೊಸ ವರ್ಷ, ಹೊಸ ಆರಂಭ ಮತ್ತು ಹೊಸ ಬಿಡುಗಡೆ ದಿನಾಂಕ. ರಾಧೆ ಶ್ಯಾಮ 2022ರ ಜನವರಿ 14ರಂದು ಮಕರ ಸಂಕ್ರಾಂತಿ ಹಬ್ಬದಂದು ತೆರೆ ಮೇಲೆ ಬರಲು ಸಿದ್ಧವಾಗಿದೆ ಎಂದು ಬರೆಯಲಾಗಿದೆ.

    ಒಟ್ಟಾರೆ ಈ ವರ್ಷವಾದರೂ ಪ್ರಭಾಸ್‍ರನ್ನು ತೆರೆ ಮೇಲೆ ನೋಡಬಹುದು ಅಂದುಕೊಂಡಿದ್ದ ಅಭಿಮಾನಿಗಳಿಗೆ ಮುಂದಿನ ವರ್ಷದವರೆಗೂ ಕಾಯಬೇಕಾಲ್ಲ ಎಂದು ನಿರಾಸೆ ಮೂಡಿದೆ. ರಾಧೆ ಶ್ಯಾಮ ಸಿನಿಮಾದಲ್ಲಿ ಪ್ರಭಾಸ್‍ಗೆ ಜೋಡಿಯಾಗಿ ಪೂಜಾ ಹೆಗ್ಡೆ ಜೋಡಿಯಾಗಿದ್ದು, ಈ ಸಿನಿಮಾಕ್ಕೆ ನಿರ್ದೇಶಕ ರಾಧಾ ಕೃಷ್ಣ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ತೆಲುಗು, ತಮಿಳು, ಮಲಯಾಳಂ, ಕನ್ನಡ ಹಾಗೂ ಹಿಂದಿಯಲ್ಲಿ ರಾಧೆ ಶ್ಯಾಮ ಸಿನಿಮಾ ತೆರೆಕಾಣಿಲಿದೆ. ಸದ್ಯ ಸಲಾರ್, ಆದಿಪುರುಷ್ ಇನ್ನೂ ಹೆಸರಿಡದ ಎರಡು ಸಿನಿಮಾ ಹೀಗೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳು ಪ್ರಭಾಸ್ ಕೈನಲ್ಲಿದ್ದು, ಇವು ಇನ್ನೂ ಚಿತ್ರೀಕರಣದ ಹಂತದಲ್ಲಿದೆ. ಇದನ್ನೂ ಓದಿ:ಪತಿ ಜೊತೆಗಿನ ಲಿಪ್‍ಲಾಕ್ ಫೋಟೋ ಶೇರ್ ಮಾಡಿದ ಸೋನಂ ಕಪೂರ್

  • ಲೈಗರ್ ಸಿನಿಮಾದ ಡೇಟ್ ಫಿಕ್ಸ್ – ಹೊಸ ಪೋಸ್ಟರ್ ಔಟ್

    ಲೈಗರ್ ಸಿನಿಮಾದ ಡೇಟ್ ಫಿಕ್ಸ್ – ಹೊಸ ಪೋಸ್ಟರ್ ಔಟ್

    ಹೈದರಾಬಾದ್: ಟಾಲಿವುಡ್ ನಟ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಸಿನಿಮಾ ತಮಿಳು, ತೆಲಗು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ.

    ವಿಶೇಷವೆಂದರೆ ಸಿನಿಮಾ ತಯಾರಕರು ಲೈಗರ್ ಸಿನಿಮಾದ ಹೊಸ ಪೋಸ್ಟರ್‍ನನ್ನು ಬಿಡುಗಡೆಗೊಳಿಸುವ ಮೂಲಕ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ. ಈ ಪೋಸ್ಟರ್‍ನಲ್ಲಿ ವಿಜಯ್ ಕೈನಲ್ಲಿ ಕೋಲು ಹಿಡಿದು ಜೋರಾಗಿ ಕಿರುಚುತ್ತಿರುವುದನ್ನು ಕಾಣಬಹುದು.

    ಸಿನಿಮಾ ಆಪ್‍ಡೇಟ್ಸ್ ಕುರಿತಂತೆ ವಿಜಯ್ ದೇವರಕೊಂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ಶೇರ್ ಮಾಡಿಕೊಂಡಿದ್ದು, ದಿನಾಂಕ ನಿಗದಿಯಾಗಿದೆ. ಸೆಪ್ಟೆಂಬರ್ 9ಕ್ಕೆ ನಾವು ಬರುತ್ತಿದ್ದೇವೆ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಲೈಗರ್ ಸಿನಿಮಾದ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.

    ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಕರಣ್ ಜೋಹರ್, ಜಗತ್ತಿನಾದ್ಯಂತ ಪಂಚ್ ಪ್ಯಾಕ್ ನೀಡಲು ಸಿನಿಮಾ ಸಿದ್ಧವಾಗಿದೆ. ಲೈಗರ್ ಸೆಪ್ಟೆಂಬರ್ 9 ರಂದು ಜಗತ್ತಿನಾದ್ಯಂತ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಹಿಂದಿ, ತೆಲಗು, ತಮಿಳ್, ಕನ್ನಡ ಮತ್ತು ಮಲೆಯಾಳಂ ಎಂದು ಕ್ಯಾಪ್ಷನ್ ಹಾಕಿಕೊಳ್ಳುವುದರ ಮೂಲಕ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    https://twitter.com/karanjohar/status/1359694753198088192

    ಕೊರೊನಾ ಸಾಂಕ್ರಮಿಕ ರೋಗದಿಂದ ಮಾರ್ಚ್ 2020ರಲ್ಲಿ ಸ್ಥಗಿತಗೊಂಡಿದ್ದ ಲೈಗರ್ ಸಿನಿಮಾದ ಚಿತ್ರೀಕರಣ 11 ತಿಂಗಳ ಬಳಿಕ ಇಂದಿನಿಂದ ಮುಂಬೈನಲ್ಲಿ ಚಿತ್ರೀಕರಣ ಆರಂಭಗೊಂಡಿದೆ.

    ನಿನ್ನೆ ಮುಂಬೈನಲ್ಲಿ ಅನನ್ಯಾ ಪಾಂಡೆ ಮತ್ತು ಅವರ ಕುಟುಂಬವನ್ನು ಪೂರಿಜಗನ್ನಾಥ್ ಹಾಗೂ ಚಾರ್ಮ್ ಎಂದು ಚಾರ್ಮ್ ಭೇಟಿಯಾಗಿದ್ದರು. ಈ ವೇಳೆ ಕ್ಲಿಕ್ಕಿಸಿದ ಕೆಲವು ಫೋಟೋವನ್ನು ಚಾರ್ಮಿ ಕೌರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಲೈಗರ್ ಸಿನಿಮಾದ ಲೀಡಿಂಗ್ ರೋಲ್‍ನಲ್ಲಿ ನಟ ವಿಜಯ್ ದೇವರಕೊಂಡ ಅಭಿನಯಿಸಿದ್ದು, ವಿಜಯ್ ಜೊತೆ ಅನನ್ಯಪಾಂಡೆ ಡ್ಯೂಯೆಟ್ ಹಾಡಲಿದ್ದಾರೆ. ಇನ್ನೂ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ರಮ್ಯಾ ಕೃಷ್ಣನ್, ರೋನಿತ್ ರಾಯ್, ಅಲಿ, ಮಕರಂದ್ ದೇಶಪಾಂಡೆ ಮತ್ತು ಗೆಟಪ್ ಶ್ರೀನು ಅಭಿನಯಿಸಿದ್ದಾರೆ. ಲೈಗರ್ ಸಿನಿಮಾ ಬಾಕ್ಸಿಂಗ್ ಕಥೆ ಆಧಾರಿತ ಸಿನಿಮಾವಾಗಿದ್ದು, ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಪೂರಿ ಜಗನ್ನಾಥ್, ಚಾರ್ಮ್ ಕೌರ್, ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ.