Tag: ಬಿಡಿಎ

  • ಗೋಲ್ಡನ್ ಗೌಡಯ್ಯನ ಕಾಪಾಡಿದ್ದಾರಾ ಇಬ್ಬರು ಸಚಿವರು?

    ಗೋಲ್ಡನ್ ಗೌಡಯ್ಯನ ಕಾಪಾಡಿದ್ದಾರಾ ಇಬ್ಬರು ಸಚಿವರು?

    ಬೆಂಗಳೂರು: ಬಿಡಿಎ ಎಂಜಿನಿಯರ್ ಗೌಡಯ್ಯ ಮನೆ ಮೇಲೆ ಬರೋಬ್ಬರಿ 20 ಗಂಟೆಗಳ ಕಾಲ ನಡೆದ ದಾಳಿ ಅಂತ್ಯವಾಗಿದ್ದು, ಸದ್ಯ ಗೌಡಯ್ಯನ ರಹಸ್ಯ ಬಗೆದಷ್ಟೂ ಬಯಲಾಗ್ತಿದೆ.

    ಶುಕ್ರವಾರ ಮಧ್ಯರಾತ್ರಿವರೆಗೆ ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ನಿಟೀಸ್ ಜಾರಿ ಮಾಡಿ ಹಿಂದಿರುಗಿದ್ದಾರೆ. ಹೊಸ ಸರ್ಕಾರ, ಹೊಸ ಸಚಿವರು ಬಂದ್ರೂ ಗೌಡಯ್ಯ ಮಾತ್ರ ಕದಲುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.

    ಗೌಡಯ್ಯ ಡಿಸಿಎಂ ಅದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿರಲಿಲ್ಲ. ಹೀಗಾಗಿ ಪರಮೇಶ್ವರ್ ಅವರು ಬಿಡಿಎ ಅಧ್ಯಕ್ಷರಾಗುತ್ತಿದ್ದಂತೆ ಗೌಡಯ್ಯನ ಬದಲಾವಣೆಗೆ ಮುಂದಾಗಿದ್ದರು. ಆದ್ರೆ ಈ ವೇಳೆ ಗೌಡಯ್ಯನ ಕಾಪಾಡಲು ಸಚಿವ ಎಚ್.ಡಿ.ರೇವಣ್ಣ ಅವರು ಎಂಟ್ರಿ ಕೊಟ್ಟಿದ್ದು, ಗೌಡಯ್ಯನ ಬದಲಾವಣೆ ಮಾಡದಂತೆ ಸಚಿವ ಪರಮೇಶ್ವರ್‍ಗೆ ತಾಕೀತು ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರೇವಣ್ಣ ಅವರು ದೇವೇಗೌಡರಿಂದಲೂ ಫೋನ್ ಮಾಡಿಸಿ ಒತ್ತಡ ಹೇರಿದ್ದರು ಎಂಬ ಮಾಹಿತಿಯೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದಾಳಿ ವೇಳೆ ಸಿಕ್ಕಿದ್ದೇನು..?:
    ಎಸಿಬಿ ದಾಳಿ ವೇಳೆ 10 ಕೆ.ಜಿ ಚಿನ್ನ, ಕೋಟಿ ಕೋಟಿ ನಗದು ಪತ್ತೆಯಾಗಿದೆ. ಅಲ್ಲದೇ 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ. ನಿನ್ನೆಯ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಇತ್ತ ಜಯನಗರದಲ್ಲಿರೋ ಅತ್ತೆಯ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ ಇಟ್ಟಿದ್ದು ದಾಳಿ ವೇಳೆ ಬಹಿರಂಗವಾಗಿದೆ. ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ 80 ಬಳೆ, ವಜ್ರದ ಸರ ಒಟ್ಟು 4.5 ಕೆ.ಜಿ ಚಿನ್ನದ ಆಭರಣ ಬಚ್ಚಿಟ್ಟಿದ್ದರು. ಆದ್ರೆ ಇದು ಅತ್ತೆಗೇ ಗೊತ್ತಿರಲಿಲ್ಲ. ಎಸಿಬಿ ರೈಡ್ ಮಾಡಿ ಬಾಚಿಕೊಂಡ ಬಳಿಕ ಅತ್ತೆಗೆ ಚಿನ್ನ ಎಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.

    ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ ಕೋಣೆಯೊಂದನ್ನ ಇಟ್ಟಿಕೊಂಡಿದ್ದರು. ಅತ್ತೆ ಮನೆಗೆ ಗೌಡಯ್ಯ ದಂಪತಿ ಹೋದಾಗಲೆಲ್ಲ ರೂಂಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರಂತೆ. ಮನೆಯಲ್ಲಿದ್ದ ಚಿನ್ನಾಭರಣ ಎಸಿಬಿ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಾಗ ಗೌಡಯ್ಯನ ಅತ್ತೆ ಕಕ್ಕಾಬಿಕ್ಕಿ ಆದರು. ಸದ್ಯ ಅತ್ತೆ ಮನೆಯಿಂದ 80 ಬಳೆ, 15 ಕ್ಯಾರೆಟ್ ವಜ್ರದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರದಿಂದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಗೌಡಯ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲೂ ಭಾರೀ ಆಸ್ತಿ ಸಂಪಾದಿಸಿದ್ದಾರೆ. 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್‍ಗಳು, ಕಾರುಗಳು ಪತ್ತೆಯಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=jr1aIT3Pc_g

  • ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

    ಹೆಬ್ಬಾಳದ ಭೂಪಸಂದ್ರದಲ್ಲಿ ಬಿಡಿಎ ಸೈಟ್ ಪರರ ಪಾಲು – ಕೇಳಿದ್ರೆ ಭೈರತಿ ಬೆಂಬಲಿಗರು ಧಮ್ಕಿ

    ಬೆಂಗಳೂರು: ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಭೈರತಿ ಸುರೇಶ್ ಬೆಂಬಲಿಗರ ಆಟಾಟೋಪ ಜೋರಾಗಿದೆ.

    ಭೂಪಸಂದ್ರದಲ್ಲಿರೋ ಬಿಡಿಎ ಸೈಟನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡು ಬಿಲ್ಡಿಂಗ್ ಎಬ್ಬಿಸ್ತಿದ್ದಾರೆ. ಯಾಕಪ್ಪ ಬಿಡಿಎ ಸೈಟ್‍ನಲ್ಲಿ ಕಟ್ಟಡ ಕಟ್ತಾಯಿದ್ದೀರ ಅಂತ ಕೇಳಿದ್ರೆ ನೀವ್ಯಾರು ಕೇಳೋದಕ್ಕೆ. ನಾವ್ಯಾರು ಗೊತ್ತಾ ಎಂಎಲ್‍ಎ ಭೈರತಿ ಸುರೇಶ್ ಕಡೆಯವರು ಅಂತಾ ಸ್ಥಳೀಯರಿಗೆ ಧಮ್ಕಿ ಹಾಕಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಒತ್ತುವರಿ ಸೈಟ್ ಬಳಿ ಯಾರಾದ್ರೂ ನಿಂತರೂ ಸಹ ಅವಾಜ್ ಹಾಕ್ತಿದ್ದಾರೆ. ಈ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಇದುವರೆಗೂ ಕಟ್ಟಡ ಕಾಮಗಾರಿ ತಡೆಯೋ ಕೆಲಸ ಮಾಡಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.

  • ರೈತರ ಭೂಮಿ ರೈತರಿಗೆ ಇಲ್ಲ – 6 ಲಕ್ಷದ ಜಮೀನಿಗೆ 70 ಲಕ್ಷ ರೂ. ಕೊಡುವಂತೆ ಬಿಡಿಎ ಡಿಮ್ಯಾಂಡ್!

    ರೈತರ ಭೂಮಿ ರೈತರಿಗೆ ಇಲ್ಲ – 6 ಲಕ್ಷದ ಜಮೀನಿಗೆ 70 ಲಕ್ಷ ರೂ. ಕೊಡುವಂತೆ ಬಿಡಿಎ ಡಿಮ್ಯಾಂಡ್!

    ಬೆಂಗಳೂರು: ರೈತರ ಸಾಲ ಮನ್ನಾ ಮಾಡೋದು ಇರಲಿ ಸ್ವಾಮಿ, ನಮ್ಮ ಸೈಟ್ ನಮಗೆ ಕೊಟ್ಟುಬಿಡಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಯೋಜನಾ ನಿರಾರ್ಶಿತ ರೈತರು ದುಂಬಾಲು ಬಿದ್ದಿದ್ದಾರೆ.

    ರೈತರೇ ಹೆದರಬೇಡಿ, ನಿಮ್ಮ ಸಾಲವನ್ನು ನಾನು ಮನ್ನಾ ಮಾಡುತ್ತೇನೆ ಎನ್ನುತ್ತಿರುವ ಕುಮಾರಸ್ವಾಮಿ ಅವರು ಬಿಡಿಎ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕಂಡೂ ಕಾಣದಂತೆ ಸುಮ್ಮನಿದ್ದಾರೆ. ನಮಗೆ ನ್ಯಾಯ ಒದಗಿಸಿಕೊಡಿ ಎಂದು ಪಟ್ಟು ಹಿಡಿದಿದ್ದಾರೆ.

    ಬಿಡಿಏ ಭರವಸೆ ಏನು?:
    ಬೆಂಗಳೂರು ಸುತ್ತಮುತ್ತ ಲೇಔಟ್‍ಗಳನ್ನು ನಿರ್ಮಾಣ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ರೈತರ ಭೂಮಿಯನ್ನ ಕಡಿಮೆ ಹಣಕ್ಕೆ ಖರೀದಿ ಮಾಡಿತ್ತು. ಒಂದು ಎಕರೆಗೆ ಕೇವಲ 6 ಲಕ್ಷ ದಂತೆ ಅಧಿಕ ಪ್ರಮಾಣದಲ್ಲಿ ಭೂಮಿಯನ್ನು ಖರೀದಿ ಮಾಡಲಾಗಿದ್ದು, ಲೇಔಟ್ ಅಭಿವೃದ್ಧಿ ನಂತರ ರೈತರು ಕೊಟ್ಟ ಜಮೀನಿಗೆ ಅನುಗುಣವಾಗಿ ಸೈಟ್‍ನ್ನು ಸಹ ನೀಡಲಾಗುತ್ತದೆ ಎಂದು ಬಿಡಿಎ ರೈತರಿಗೆ ಭರವಸೆ ನೀಡಿತ್ತು.

    ಸದ್ಯ ತನ್ನ ವರಸೆಯನ್ನು ಬದಲಿಸಿಕೊಂಡಿರುವ ಬಿಡಿಎ, ಮಾರುಕಟ್ಟೆ ದರದಲ್ಲಿ ಹಣ ಪಾವತಿಸಿ ಸೈಟ್ ಪಡೆಯಲು ರೈತರಿಗೆ ಸುತ್ತೋಲೆ ಹೊರಡಿಸಿದೆ. ಸುತ್ತೋಲೆ ಪ್ರಕಾರ ಒಂದು ಸೈಟ್ ಅನ್ನು ಪಡೆಯಲು 70 ಲಕ್ಷ ರೂ. ಗಿಂತಲೂ ಅಧಿಕ ಹಣವನ್ನು ನೀಡಬೇಕಾದ ಪರಿಸ್ಥಿತಿ ರೈತರಿಗೆ ಉಂಟಾಗಿದೆ.

    ಇತ್ತ ಜಮೀನು ಇಲ್ಲ, ಸೈಟೂ ಇಲ್ಲ. ಹೀಗಾಗಿ ರೈತರು ಕಂಗಾಲಾಗಿದ್ದು, ಬಿಡಿಎನಲ್ಲಿ ಸೈಟ್ ಸಿಗುತ್ತೆ ನಮ್ಮ ಜಮೀನಿನಲ್ಲಿಯೇ ನಾವು ಮನೆ ಕಟ್ಟಿಕೊಳ್ಳಬಹುದು ಎನ್ನುವ ಭರವಸೆ ಇಟ್ಟುಕೊಂಡಿದ್ದ ರೈತರಿಗೆ ಬಿಡಿಎ ತಣ್ಣೀರೆರಚಿದೆ. ಅಧಿಕಾರಿಗಳು ನಮ್ಮ ಜಮೀನು ಖರೀದಿಸುವಾಗ ಇಲ್ಲ ಸಲ್ಲದ ಆಸೆ ತೋರಿಸಿದ್ದರು. ಆದರೆ ಈಗ ತಮಗೆ ಇಷ್ಟ ಬಂದ ಹಾಗೆ ಕಾನೂನು ಮಾಡುತ್ತಿದ್ದಾರೆ. ಬಿಡಿಎ ಅಧಿಕಾರಿಗಳು ಜನಸಾಮಾನ್ಯರಿಗಾಗಿ ಇದ್ದಾರ ಅಥವಾ ರಿಯಲ್ ಎಸ್ಟೇಟ್ ಬ್ರೋಕರ್‍ಗಳಿಗಾಗಿ ಇದ್ದಾರ ಎಂದು ಭೂಮಿ ಕಳೆದುಕೊಂಡ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಸರ್ಕಾರ ಒಂದು ಕಡೆ ರೈತರು ಮಾಡಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇವೆ ಅಂತಾ ಹೇಳುತ್ತಿದೆ. ಆದರೆ ಮತ್ತೊಂದು ಕಡೆ ರೈತರ ಬಳಿ ಲಕ್ಷಾಂತರ ರೂ. ಮೌಲ್ಯದ ಭೂಮಿಯನ್ನು ಸರ್ಕಾರ ಸುಲಿಗೆ ಮಾಡುತ್ತಿದೆ. ಮುಂದೆಯಾದರೂ ರೈತರಿಗೆ ಸುಳ್ಳು ಭರವಸೆಗಳನ್ನ ನೀಡುವುದನ್ನು ಬಿಟ್ಟು ಆಗಿರುವ ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಡಬೇಕು ಎನ್ನುವುದೆ ನಮ್ಮ ಆಗ್ರಹ ಎಂದು ರೈತರು ಆಗ್ರಹಿಸಿದ್ದಾರೆ.

  • ಸಚಿವ ಜಾರ್ಜ್ ರ 700 ಕೋಟಿ ರೂ. ಮಹಾ ಹಗರಣ ಬಯಲು- 60 ವರ್ಷದವರೆಗೆ ಎಂಬೆಸ್ಸಿ ಗ್ರೂಪ್ ಪಾಲಾಗಲಿರೋ ಇಂದಿರಾನಗರ ಕಾಂಪ್ಲೆಕ್ಸ್

    ಸಚಿವ ಜಾರ್ಜ್ ರ 700 ಕೋಟಿ ರೂ. ಮಹಾ ಹಗರಣ ಬಯಲು- 60 ವರ್ಷದವರೆಗೆ ಎಂಬೆಸ್ಸಿ ಗ್ರೂಪ್ ಪಾಲಾಗಲಿರೋ ಇಂದಿರಾನಗರ ಕಾಂಪ್ಲೆಕ್ಸ್

    ಬೆಂಗಳೂರು: ಇಡೀ ಬೆಂಗಳೂರನ್ನೇ ಗುತ್ತಿಗೆ ಪಡೆಯಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹೊರಟಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಬೆಂಗಳೂರಿನ ಕಾಸ್ಟ್ಲಿ ಪ್ರಾಪರ್ಟಿ ಜಾರ್ಜ್ ಒಡೆತನದ ಎಂಬೆಸ್ಸಿ ಕೈಗೆ ಸಿಕ್ತಿದೆ. ಎಂಬೆಸ್ಸಿ ಸುಪರ್ದಿಗೆ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಮರು ನಿರ್ಮಾಣ ಗುತ್ತಿಗೆ ನೀಡಲಾಗ್ತಿದೆ.

    ಮೊನ್ನೆ ತಾನೆ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಯೋಜನೆಯಾದ ಪಾಡ್ ಟ್ಯಾಕ್ಸಿಯ ಗುತ್ತಿಗೆಯನ್ನು ಪಾಲುದಾರಿಕೆಯಲ್ಲಿ ಪಡೆದ ಸಚಿವ ಕೆ.ಜೆ ಜಾರ್ಜ್, ಅದನ್ನು ಮಾನ್ಯತಾ ಟೆಕ್ ಪಾರ್ಕ್‍ವರೆಗು ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ರು. ಈಗ ಬಿಡಿಎಗೆ ಕಾಲಿಟ್ಟಿರೋ ಕೆ.ಜೆ. ಜಾರ್ಜ್ ಅಂಡ್ ಕಂಪನಿ ಬಿಡಿಎನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ ಗಳ ಮರು ಅಭಿವೃದ್ದಿಯ ಯೋಜನೆಯಡಿಯಲ್ಲಿ ತಮ್ಮ ಪಾಲುದಾರಿಕೆಯ ಕಂಪನಿ ಎಂಬೆಸ್ಸಿ ಗ್ರೂಪ್‍ಗೆ ಗುತ್ತಿಗೆ ಕೊಡಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.

    ಈಗಾಗಲೇ ಇಂದಿರಾ ನಗರದ ಶಾಂಪಿಂಗ್ ಕಾಂಪ್ಲೆಕ್ಸ್ ಗುತ್ತಿಗೆಯನ್ನು ಪಡೆಯೋ ಅಂತಿಮ ಹಂತದಲ್ಲಿರೋ ಎಂಬೆಸ್ಸಿ ಗ್ರೂಪ್ ಇನ್ನುಳಿದ ಆಸ್ಟೀನ್ ಟೌನ್, ಕೋರಮಂಗಲ, ಆರ್.ಟಿ. ನಗರ, ಸದಾಶಿವನಗರ ಕಾಂಪ್ಲೆಕ್ಸ್ ಸೇರಿದಂತೆ 6 ಕಾಂಪ್ಲೆಕ್ಸ್ ಗಳಿಗೂ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಎಲ್ಲಾ ಕಂಪ್ಲೆಕ್ಸ್ ಗಳ ಗುತ್ತಿಗೆಯನ್ನು ಎಂಬೆಸ್ಸಿ ಗ್ರೂಪ್ ಪಡೆದರೆ ಬಿಡಿಎನ ಪ್ರಮುಖ ಆಸ್ತಿ ಕೆ.ಜೆ. ಜಾರ್ಜ್ ಪಾಲಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ. 657 ಕೋಟಿ ರೂಪಾಯಿಯ ಬೃಹತ್ ಯೋಜನೆ ಇದಾಗಿದ್ದು, 60 ವರ್ಷದವರೆಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗ್ತಾಯಿದೆ.

    ಇದನ್ನೂ ಓದಿ: ಬೆಂಗಳೂರಿನಲ್ಲಿ ಓಡಲಿದೆ ಸಚಿವ ಜಾರ್ಜ್ ಅಂಡ್ ಕಂಪೆನಿಯ ಪಾಡ್ ಟ್ಯಾಕ್ಸಿ!

  • ಬಿಡಿಎ ಸೈಟ್‍ಗಾಗಿ ಹಿರಿಯ ನಟ ಸತ್ಯಜಿತ್ ಅಲೆದಾಟ – ಗಂಟೆಗಟ್ಟಲೆ ಕಾದ್ರೂ ಸ್ಥಳಕ್ಕೆ ಬರಲಿಲ್ಲ ಆಯುಕ್ತರು

    ಬಿಡಿಎ ಸೈಟ್‍ಗಾಗಿ ಹಿರಿಯ ನಟ ಸತ್ಯಜಿತ್ ಅಲೆದಾಟ – ಗಂಟೆಗಟ್ಟಲೆ ಕಾದ್ರೂ ಸ್ಥಳಕ್ಕೆ ಬರಲಿಲ್ಲ ಆಯುಕ್ತರು

    ಬೆಂಗಳೂರು: ಅವರು ಕನ್ನಡ ನಾಡು ಕಂಡ ಅದ್ಭುತ ಕಲಾವಿದರು. ಕನ್ನಡ ಚಿತ್ರರಂಗ ಸೇರಿದಂತೆ ಇತರೆ ಭಾಷೆಗಳಲ್ಲಿ ಸರಿ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸದ ಹಿರಿಯ ಕಲಾವಿದ. ಇತ್ತೀಚೆಗಷ್ಟೇ ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡ ನಟ ಇದೀಗ ನಿವೇಶನಕ್ಕಾಗಿ ಪ್ರತಿನಿತ್ಯ ಬಿಡಿಎ ಕದ ತಟ್ಟುತ್ತಿದ್ದಾರೆ.

    ಹಿರಿಯ ನಟ ಸತ್ಯಜಿತ್ ಬಿಡಿಎ ಸೈಟ್‍ಗಾಗಿ ಪ್ರತಿನಿತ್ಯ ಬಿಡಿಎ ಮುಂದೆ ಅಲೆದಾಡೋ ಪರಿಸ್ಥಿತಿ ಬಂದಿದೆ. ಗ್ಯಾಂಗ್ರೀನ್‍ಗೆ ತುತ್ತಾಗಿ ತನ್ನ ಎರಡು ಕಾಲುಗಳನ್ನು ಕಳೆದುಕೊಂಡಿರೋ ಸತ್ಯಜಿತ್ ವ್ಹೀಲ್ ಚೇರ್‍ನಲ್ಲಿ ಬಿಡಿಎ ಆಯುಕ್ತರ ಭೇಟಿಗೆ ಬಂದಿದ್ರು. ಆದ್ರೆ 3-4 ಇಲಾಖೆಗಳನ್ನು ನೋಡಿಕೋಳ್ತಿರೋ ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಬಿಡಿಎಗೆ ಅಪರೂಪಕ್ಕೊಮ್ಮೆ ಬರುತ್ತಾರೆ. ಈ ಬಗ್ಗೆ ಗೊತ್ತಿರದ ಸತ್ಯಜಿತ್ ಪ್ರತಿನಿತ್ಯ ಬಿಡಿಎಗೆ ಬಂದು ಆಯುಕ್ತರ ಭೇಟಿಗಾಗಿ ಗಂಟೆಗಟ್ಟಲೆ ಕಾದು ಕಾದು ವಾಪಸ್ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.

    ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಕೊಟ್ಟ ಪತ್ರವನ್ನು ಪ್ರತಿನಿತ್ಯ ಹಿಡಿದುಕೊಂಡು ನನಗೋಂದು ಸೈಟ್ ಸಿಗುತ್ತೆ ಅನ್ನೋ ಆಸೆಯಿಂದ ಬರೋ ಸತ್ಯಜಿತ್‍ಗೆ ಇದುವರೆಗು ಬಿಡಿಎ ಆಯುಕ್ತ ರಾಕೇಶ್ ಸಿಂಗ್‍ರ ಮುಖ ದರ್ಶನವಾಗಿಲ್ಲ.

    ಇನ್ನಾದ್ರು ಆಯುಕ್ತರು ಕಚೇರಿಗೆ ಬಂದು ಇವರ ನೋವನ್ನು ಆಲಿಸಲಿ ಅನ್ನೋದು ನಮ್ಮ ಆಶಯ

  • Exclusive ಎಸಿಬಿ ಎಸ್‍ಪಿ ಪವಾರ್ ಹೆಸರಲ್ಲಿ ಬಿಡಿಎಯಲ್ಲಿ ನಡೆಯುತ್ತಿದೆ ಕೋಟಿ, ಕೋಟಿ ಡೀಲ್!

    Exclusive ಎಸಿಬಿ ಎಸ್‍ಪಿ ಪವಾರ್ ಹೆಸರಲ್ಲಿ ಬಿಡಿಎಯಲ್ಲಿ ನಡೆಯುತ್ತಿದೆ ಕೋಟಿ, ಕೋಟಿ ಡೀಲ್!

    – ಲಂಚ ಕೊಡದಿದ್ರೆ ಬೀಳುತ್ತೆ ಎಸಿಬಿ ಕೇಸ್
    – ಪಬ್ಲಿಕ್ ಟಿವಿ ಸ್ಟಿಂಗ್‍ನಲ್ಲಿ ಬಿಡಿಎ ಲಂಚವತಾರ

    ಸುನೀಲ್ ಗೋವಿನಕೋವಿ
    ಬೆಂಗಳೂರು: ಬಿಡಿಎ ಭ್ರಷ್ಟಾಚಾರ ಡೆವಲೆಪ್‍ಮೆಂಟ್ ಅಥಾರಿಟಿ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಇಲ್ಲಿ ಬಿಡಿಎ ಹೆಸರಲ್ಲದೆ ಎಸಿಬಿ ಹೆಸರಿನಲ್ಲಿ ಅಧಿಕಾರಿಗಳು, ಅಧಿಕಾರಿಗಳ ಹತ್ತಿರವೇ ಹಣ ವಸೂಲಿ ಮಾಡುತ್ತಿದ್ದಾರೆ.

    ಹೌದು. ಬಿಡಿಎನಲ್ಲಿ ಆರ್ ಟಿಐ ಸಮಾಲೋಚಕರ ಹುದ್ದೆಗೆ ಒಂದು ವರ್ಷದ ಅವಧಿಗೆ ನೇಮಕವಾಗಿದ್ದ ಚಂದ್ರಶೇಖರ್ ರಾವ್ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈಗ ಒಂದು ವರ್ಷ ಕಳೆದು ಅವಧಿ ಪೂರ್ಣಗೊಂಡಿದ್ದರೂ ಚಂದ್ರಶೇಖರ್ ರಾವ್ ತನ್ನ ಜಾಗವನ್ನು ಮಾತ್ರ ಬಿಡುತ್ತಿಲ್ಲ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ದಳದಲ್ಲಿ(ಎಸಿಬಿ) ಎಸ್‍ಪಿಯಾಗಿ ನನ್ನ ಶಿಷ್ಯ ಪವಾರ್ ಇದ್ದಾನೆ. ನಿಮ್ಮೆಲ್ಲರ ಕೇಸ್ ಆತನ ಬಳಿ ಇದೆ. ಅದನ್ನು ಕ್ಲಿಯರ್ ಮಾಡಬೇಕು ಅಂದ್ರೆ ಹಣ ಕೊಡಿ ಎಂದು ಬಿಡಿಎ ಅಧಿಕಾರಿಗಳ ಹತ್ರ ಹಣ ವಸೂಲಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಚಂದ್ರಶೇಖರ್ ರಾವ್ ಹೇಗೆ ಬಿಡಿಎಯಲ್ಲಿ ಹೇಗೆ ಪವರ್ ಹೊಂದಿದ್ದಾರೆ ಎನ್ನುವುದಕ್ಕೆ ಪಬ್ಲಿಕ್ ಟಿವಿ ಸ್ಟಿಂಗ್ ಆಪರೇಷನ್ ಮಾಡಿದ್ದು ಆ ಆಡಿಯೋದಲ್ಲಿ ಎಲ್ಲವೂ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಎಸಿಬಿ ಎಸ್‍ಪಿ ಪವಾರ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ದೊಡ್ಡ ಹುದ್ದೆಯಲ್ಲಿರುವವರ ಈ ರೀತಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ. ನಾನು ಯಾರ ಹತ್ತಿರವೂ ಹಣವನ್ನು ಕೇಳಿಲ್ಲ ಎಂದು ಸ್ಪಷ್ಟಪಡಿಸಿದರು.

    ಈಗಾಗಲೇ ಹಲವರ ಬಳಿ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿರುವ ಆರೋಪ ಹೊತ್ತಿರುವ ಚಂದ್ರಶೇಖರ್ ರಾವ್ ಈಗ ಇನ್ನೊಂದು ಅವಧಿಗೆ ನನ್ನನ್ನೆ ನೇಮಕ ಮಾಡಿ ಎಂದು ಮತ್ತೊಮ್ಮೆ  ಆಯುಕ್ತರಿಗೆ ಪತ್ರ ಬರೆದಿದ್ದಾರೆ.

    ಸ್ಟಿಂಗ್ ಆಡಿಯೋದಲ್ಲಿ ಏನಿದೆ?
    ಚಂದ್ರಶೇಖರ್ – ಈ ಯಮ್ಮ ಹೇಳಿದ್ದಕ್ಕೇನೆ ಎಫ್‍ಐಆರ್ ಹಾಕೋದಿಲ್ಲ ಅಂದ್ರು
    ಇಂಜಿನಿಯರ್ 1 – ಅದೇ ಸಾಹೇಬ್ರ ಹತ್ತಿರ ಹೇಳಿದ್ದೆ ಏನ್ ಮಾಡೋದು ಸಾರ್ ಅಮೌಂಟ್‍ಗೆ ಅಂತ. ಈಗ ಯಾವ್ದು ಇಲ್ವಲ್ಲ ಅಂತ
    ಇಂಜಿನಿಯರ್ 2 – ನಾನ್ ಮೊನ್ನೆ ಅಂದೆ. ಮೊನ್ನೆ ಮಾತಾಡಿದ್ನಲ್ಲ ಸಾರ್ ಆ ಎಸಿಬಿನವರದ್ದು ತಂಟೆ ಬೇಡ ಫಸ್ಟ್ ಕ್ಲಿಯರ್ ಮಾಡ್ಕೋ ಮಾಡ್ಕೋ ಅಂತ
    ಚಂದ್ರಶೇಖರ್ – ಹೇಳಿದ್ರು ಕೇಳಲ್ಲ ಅಲ್ಲಿಗೂ ನಾನೇನ್ ಮಾಡ್ದೆ ವ್ಯಕ್ತಿ ಓಳ್ಳೆಯವರು ಅಂತ ಕೈ ನಿಂದ ಕೊಟ್ಟಿದ್ದೀನಿ
    ಇಂಜಿನಿಯರ್ 1 – ಹೇಳಿದ್ರು ಸರ್ ಹೇಳಿದ್ರು ಸರ್
    ಇಂಜಿನಿಯರ್ 2 – ನೀವಂದ್ರಲ್ಲ ಸಾರ್ ಆವತ್ತು ನಾನ್ ಅಂದೆ ಸಾಹೆಬ್ರು ನೋಡಪ್ಪಾ ಕೈಯಿಂದ ಏನೋ ಕೊಟ್ಟಿದ್ದಾರಂತೆ ನೀ ಹಿಂಗೆಲ್ಲ ಮಾಡಬಾರದು ಅಂತ ಯಾಕಂದ್ರೆ ಯಾರನ್ನಾದರೂ ನಂಬಿ ಈ ಪೊಲೀಸ್ ನವರನ್ನ ನಂಬೇಡಿ ಅಂತ ಅದ್ರಲ್ಲೂ ಈ ಎಸಿಬಿನಲ್ಲಿ ಎಂಥವರು ಕೂತಿದ್ದಾರೆ ಅಂದ್ರೆ ಎಲ್ಲಾ
    ಇಂಜಿನಿಯರ್ 1 – ಎಸಿಬಿನಲ್ಲಿ ಇವರಿಗೆ ಎಸ್‍ಪಿ ಸಾಹೇಬ್ರ ಪರಿಚಯ ಅಂತೆ ಸಾರ್
    ಇಂಜಿನಿಯರ್ 2 – ಯಾರ್ ಸಾರ್
    ಇಂಜಿನಿಯರ್ 1 – ಪವಾರ್ ಅಂತೆ ಸಾರ್
    ಚಂದ್ರಶೇಖರ್ – ಹೌದ್ರಿ ಪವಾರ್ ಹೇ ಇದ್ರಲ್ಲಿ ಇರ್ಲಿಲ್ವೇನ್ರಿ ಅವನು ಕೆಪಿಎಲ್‍ನಲ್ಲಿ ಇರ್ಲಿಲ್ವೇನ್ರಿ ಅವನೇ ರ‍್ಯಾಂಕ್‌ ಹೋಲ್ಡರ್ ಅವನು ರಿಕ್ಯೂಟೆಡ್ ಅಲ್ಲ ಡೈರೆಕ್ಟ್ ಸೆಲೆಕ್ಷನ್ ಟ್ರಸ್ಟಿ ಅವನ ನಾದ್ನಿ ಬಂದು ಇದ್ರಲ್ಲಿ ಇದ್ದಾಳೆ ಲೀಗಲ್ ಮೆಟ್ರಾಲಜಿನಲ್ಲಿ ಚಿಕ್ಕಬಳ್ಳಾಪುರದಲ್ಲಿ
    ಇಂಜಿನಿಯರ್ 1 – ಸಾಹೇಬ್ರಿಗೆ ಸ್ವಲ್ಪ ಟಚ್ ಇರೋದ್ರಿಂದ ಸ್ವಲ್ಪ ಹೋಲ್ಡ್ ಮಾಡಿ
    ಇಂಜಿನಿಯರ್ 2 – ಸ್ವಲ್ಪ ಎಲ್ಲಾ ಕ್ಲಿಯರ್ ಮಾಡಿಕೊಟ್ಟುಬಿಡಿ ಸಾರ್

     

     

     

  • ಮತ್ತೆ ಫ್ಲ್ಯಾಟ್ ನಿರ್ಮಾಣಕ್ಕೆ ಬಿಡಿಎ ನಿರ್ಧಾರ – ರಾಮಲಿಂಗಮ್ ಕಂಪನಿಗೆ ಟೆಂಡರ್ ಕೊಡಲು ಪ್ಲಾನ್

    ಮತ್ತೆ ಫ್ಲ್ಯಾಟ್ ನಿರ್ಮಾಣಕ್ಕೆ ಬಿಡಿಎ ನಿರ್ಧಾರ – ರಾಮಲಿಂಗಮ್ ಕಂಪನಿಗೆ ಟೆಂಡರ್ ಕೊಡಲು ಪ್ಲಾನ್

    ಬೆಂಗಳೂರು: ಯಾರು ಏನೇ ಅಂದರು ಬಿಡಿಎ ಮಾತ್ರ ಬದಲಾಗೋ ಲಕ್ಷಣ ಕಾಣಿಸುತ್ತಿಲ್ಲ. ಏಕೆಂದರೆ ಬಿಡಿಎ ನಿರ್ಮಾಣ ಮಾಡೋ ಸೈಟ್ ಹಾಗೂ ಫ್ಲ್ಯಾಟ್ ಗಳಿಗೆ ಜನರಿಂದ ಉತ್ತಮ ಬೇಡಿಕೆ ಇಲ್ಲದಿದ್ದರೂ ಮತ್ತೆ ಅದೇ ಯೋಜನೆಗೆ ಕೈ ಹಾಕಿದೆ. ಅದೂ ಕೂಡ ಒಂದೇ ಕಂಪನಿ ಟೆಂಡರ್ ನಲ್ಲಿ ಬರುವ ಹಾಗೆ ಹೊಸ ನಿಯಮವನ್ನೇ ಜಾರಿ ಮಾಡಿದ್ದಾರೆ.

    ಬೆಂಗಳೂರು ಡೆವಲಪ್ ಮೆಂಟ್ ಅಥಾರಿಟಿ ನಿರ್ಮಾಣ ಮಾಡುವ ಫ್ಲ್ಯಾಟ್ ಗಳಿಗೆ ಬೇಡಿಕೆ ಇಲ್ಲದಿದ್ದರೂ ಬಿಡಿಎ ಮತ್ತೆ ಮತ್ತೆ ಪ್ಲ್ಯಾಟ್ ಗಳ ನಿರ್ಮಾಣಕ್ಕೆ ಮುಂದಾಗಿದೆ. ಅದರಲ್ಲೂ ರಾಮಲಿಂಗಮ್ ಚಂದ್ರಕಾಂತ್ ಕಂಪನಿಗೆ ಟೆಂಡರ್ ಕೊಡಲು ಉದ್ದೇಶಿಸಿರೋ ಬಿಡಿಎ, ಟೆಂಡರ್‍ನಲ್ಲಿ ಶೇರ್ ವಾಲ್ ಎಂಬ ನೂತನ ಟೆಕ್ನಾಲಜಿ ಅಳವಡಿಸಿಕೋಂಡಿರೋ ಕಂಪನಿಗಳು ಮಾತ್ರ ಭಾಗವಹಿಸಬೇಕು ಎಂದು ನಿಯಮ ಮಾಡಿದೆ.

    ಈ ನಿಯಮ ಅಳವಡಿಸಿಕೊಂಡಿರೋ ಏಕೈಕ ಕಂಪನಿ ಎಂದರೆ ಚಂದ್ರಕಾಂತ್ ರಾಮಲಿಂಗಮ್ ಕಂಪನಿ ಮಾತ್ರ. ಹಾಗಾಗಿ 500 ಕೋಟಿಗು ಹೆಚ್ಚು ಮೊತ್ತದ ಈ ಟೆಂಡರ್ ನಲ್ಲಿ ರಾಮಲಿಂಗಮ್ ಕಂಪನಿ ಮಾತ್ರ ಭಾಗವಹಿಸಲು ಸಾಧ್ಯವಿದ್ದು, ಅದೇ ಕಂಪನಿಗೆ ಗುತ್ತಿಗೆ ನೀಡೋ ಉದ್ದೇಶದಿಂದಲೇ ಈ ನಿಯಮ ಹಾಕಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಜೊತೆಗೆ ಬೆಂಗಳೂರು ಅಭಿವೃದ್ಧಿ ಸಚಿವರಿಗೆ 15 ಪರ್ಸೆಂಟ್ ಕಮಿಷನ್ ಸಹ ಸೇರುತ್ತೆ ಎನ್ನುವ ಮಾತು ಕೇಳಿ ಬರುತ್ತಿದೆ.

    ಒಟ್ಟಿನಲ್ಲಿ ಬಿಡಿಎ ಜನರ ಬೇಡಿಕೆ ಈಡೇರಿಸೋದು ಬಿಟ್ಟು ತಮ್ಮ ಹಿತಾಸಕ್ತಿಗಳನ್ನು ಈಡೇರಿಸಕೊಳ್ಳೋ ಸಲುವಾಗಿ ಈ ರೀತಿಯ ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಲು ಮುಂದಾಗಿರೋದು ವಿಪರ್ಯಾಸವೇ ಸರಿ.

  • ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ನೋಟಿನ ಕಂತೆಗಳ ಮೇಲೆ ವರಮಹಾಲಕ್ಷ್ಮಿ ಪೂಜಿಸಿದ ಬಿಡಿಎ ಬ್ರೋಕರ್

    ಬೆಂಗಳೂರು: ಬಿಡಿಎ ಬ್ರೋಕರ್‍ವೊಬ್ಬರ ಮನೆಯಲ್ಲಿ ವರಮಹಾಲಕ್ಷ್ಮಿ ಪೂಜೆಗೆ ಕಂತೆ ಕಂತೆ ನೋಟುಗಳು ಹಾಗೂ ಕೆಜಿಗಟ್ಟಲೆ ಚಿನ್ನದ ಆಭರಣಗಳನ್ನ ಇಟ್ಟಿರೋ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಬಿಡಿಎ ಬ್ರೋಕರ್ ಸುರೇಶ್ ಅಲಿಯಾಸ್ ಸೂರಿ ಮನೆಯಲ್ಲಿ ಗರಿಗರಿ ನೋಟುಗಳ ಕಂತೆ ಮೇಲೆ ಲಕ್ಷ್ಮೀ ವಿಗ್ರಹವಿಟ್ಟು ಪೂಜೆ ಮಾಡಲಾಗಿದೆ. ಸೂರಿ ಎಚ್‍ಎಸ್‍ಆರ್ ಲೇಔಟ್ ಬಿಡಿಎ ವಿಭಾಗದಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದು, ಇವರಿಗೆ ಕಾರ್ನರ್ ಕಟ್ಟಿಂಗ್ ಸೂರಿ ಎನ್ನುವ ಅಡ್ಡ ಹೆಸರಿದೆ. ಇದೀಗ ವರಮಹಾಲಕ್ಷ್ಮಿ ಹಬ್ಬದಂದು ಲಕ್ಷ್ಮಿ ಪೂಜೆಗೆ ಸಾಲಾಗಿ ಜೋಡಿಸಿರುವ ಹಣದ ಮುಂದೆ ರಾಜಾರೋಷವಾಗಿ ಫೋಸ್ ಕೊಟ್ಟು ಪೀಕಲಾಟಕ್ಕೆ ಸಿಲುಕಿದಂತಾಗಿದೆ.

    ಕಾರ್ನರ್ ಕಟಿಂಗ್ ಸೈಟ್, ಬದಲಿ ಸೈಟ್ ಹೆಸರಿನಲ್ಲಿ ಸೂರಿ ಕೋಟ್ಯಾಂತರ ರುಪಾಯಿ ಹಣ ಗಳಿಕೆ ಮಾಡಿದ್ದಾರೆ ಎನ್ನುವ ಆರೋಪ ಈಗ ಬಲವಾಗಿ ಕೇಳಿಬಂದಿದೆ. ಪಾರ್ಕ್ ಗೆ ಅಂತ ಮೀಸಲಿಟ್ಟಿದ್ದ ಜಾಗದಲ್ಲಿ ನಕಲಿ ಪತ್ರ ಸೃಷ್ಟಿಸಿ ಸೈಟ್‍ಗಳಾಗಿ ಕನ್ವರ್ಟ್ ಮಾಡಿ ಮಾರಿದ್ದ ಆರೋಪ ಇವರ ಮೇಲಿದೆ.

     

  • ಸ್ಟೀಲ್ ಬ್ರಿಡ್ಜ್ ಹೋಯ್ತು ಈಗ ಹೊಸ ಪ್ಲಾನ್- ಕೆಂಪೇಗೌಡ ಲೇಔಟ್ ಮರುನಿರ್ಮಾಣ ಹೆಸರಲ್ಲಿ 1300 ಕೋಟಿ ಖರ್ಚು ಮಾಡಲು ನಿರ್ಧಾರ

    ಸ್ಟೀಲ್ ಬ್ರಿಡ್ಜ್ ಹೋಯ್ತು ಈಗ ಹೊಸ ಪ್ಲಾನ್- ಕೆಂಪೇಗೌಡ ಲೇಔಟ್ ಮರುನಿರ್ಮಾಣ ಹೆಸರಲ್ಲಿ 1300 ಕೋಟಿ ಖರ್ಚು ಮಾಡಲು ನಿರ್ಧಾರ

    ಬೆಂಗಳೂರು: ಕೋಟಿ ರೂ. ಸ್ಟೀಲ್ ಬ್ರಿಡ್ಜ್ ಯೋಜನೆಗೆ ಭಾರೀ ವಿರೋಧ ವ್ಯಕ್ತವಾಗಿ ಅದನ್ನು ಕೈಬಿಟ್ಟ ನಂತರ ಇದೀಗ ಸಚಿವ ಕೆಜೆ ಜಾರ್ಜ್ ಮತ್ತು ತಂಡ ಮತ್ತೊಂದು ಹೊಸ ಪ್ಲಾನ್ ಸಿದ್ಧಪಡಿಸಿದೆ.

    ಕೆಂಪೇಗೌಡ ಲೇಔಟ್ ಮರು ನಿರ್ಮಾಣ ಹೆಸರಿನಲ್ಲಿ 1300 ಕೋಟಿ ರೂ. ಖರ್ಚು ಮಾಡಲು ನಿರ್ಧರಿಸಲಾಗಿದೆ. ಹೈಟೆಕ್ ಲೇಔಟ್ ನಿರ್ಮಾಣ ಹೆಸರಿನಲ್ಲಿ 1300 ಕೋಟಿ ಖರ್ಚು ಮಾಡಲು ಬಿಡಿಎ ನಿರ್ಧಾರ ಮಾಡಿದೆ. ಸ್ಟೀಲ್ ಬ್ರಿಡ್ಜ್ ಗುತ್ತಿಗೆ ಪಡೆದಿದ್ದ ಕಂಪನಿಗೆನೇ ಈ ಗುತ್ತಿಗೆಯನ್ನೂ ನೀಡೋ ಸಾಧ್ಯತೆಯಿದೆ.

    ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಗುತ್ತಿಗೆಯನ್ನು ನಾಗಾರ್ಜುನ ಮತ್ತು ಎಲ್ ಅಂಡ್ ಟಿ ಕಂಪೆನಿ ಪಡೆದಿದ್ದವು. ಇದೀಗ ಇದೇ ಕಂಪೆನಿಗೆ ಏನಾದ್ರು ಗುತ್ತಿಗೆ ನೀಡಿದ್ರೆ ಗೋವಿಂದರಾಜ್ ಡೈರಿಯಲ್ಲಿನ ಅಂಶಗಳು ದೃಢವಾಗಲಿವೆ ಎಂದು ಹೇಳಲಾಗ್ತಿದೆ.

    ಸ್ವತಃ ಬಿಡಿಎ ನಿರ್ಮಾಣ ಮಾಡಿರೋ ಬಹುತೇಕ ಲೇಔಟ್‍ಗಳಿಗೆ ಇನ್ನೂ ಮೂಲಭೂತ ಸೌಕರ್ಯ ನೀಡಿಲ್ಲ. ಜ.ಪಿ ನಗರ 9ನೇ ಹಂತ, ವಿಶ್ವೇಶ್ವರ ಲೇಔಟ್, ಅರ್ಕಾವತಿ ಲೇಔಟ್, ಬನಶಂಕರಿ 4ನೇ ಮತ್ತು 6ನೇ ಹಂತ ಹಾಗೂ ಇನ್ನೂ ಅನೇಕ ಲೇಔಟ್‍ಗಳಿಗೆ ಮೂಲಭೂತ ಸೌಕರ್ಯಕ್ಕೆ ಹಣ ಇಲ್ಲ ಎಂದು ಬಿಡಿಎ ಹೇಳಿದೆ. ಆದ್ರೆ ಕೇಂಪೇಗೌಡ ಲೇಔಟ್‍ಗೆ ಮಾತ್ರ ಹಣ ಹೊಂದಿಸಲು ನಿರ್ಧಾರ ಮಾಡಿದೆ. ನೌಕರರಿಗೆ ಸಂಬಳ ಕೊಡಲು ಹೆಣಗಾಡುತ್ತಿರೋ ಬಿಡಿಎ ಜಾರ್ಜ್‍ಗಾಗಿ 1300 ಕೋಟಿ ಖರ್ಚು ಮಾಡಲು ನಿರ್ಧಾರಿಸಿರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

  • ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

    ವರ್ತೂರು ಕೋಡಿಯಲ್ಲಿ ನೊರೆಯ ಆರ್ಭಟ- ನೊರೆಯಲ್ಲಿ ಫೋಟೊ ಕ್ಲಿಕಿಸಿಕೊಳ್ಳಲು ಮುಂದಾದ ಜನ

    ಬೆಂಗಳೂರು: ಕಳೆದ ರಾತ್ರಿ ಸುರಿದ ಮಳೆಗೆ ವರ್ತೂರು ಕೋಡಿ ಕೆರೆಯಲ್ಲಿ ನೊರೆಯ ಆರ್ಭಟ ಹೆಚ್ಚಾಗಿದೆ. ಇನ್ನೂ ನೊರೆಯ ಒಂದೆಡೆ ಶೇಖರಣೆಯಾಗಿ ಹಿಮಾಲಯದಂತೆ ಕಾಣಿಸುತ್ತಿದ್ದು, ಸೆಲ್ಫೀ ಪ್ರಿಯರು ನೊರೆಯ ಮುಂಭಾಗದಲ್ಲಿ ಫೋಟೋ ಕ್ಲಿಕಿಸಿಕೊಳ್ಳುತ್ತಿದ್ದಾರೆ.

    ನೊರೆಯ ಸಮಸ್ಯೆಯನ್ನು ತಡೆಗಟ್ಟುವ ಸಲುವಾಗಿ ಬಿಡಿಎ ವತಿಯಿಂದ 20 ಅಡಿ ಎತ್ತರದ ಕಬ್ಬಿಣದ ಮೆಷ್ ಅಳವಡಿಸಲಾಗಿತ್ತು. ಆದರೆ ಬಿಡಿಎ ಅರ್ಧ ಭಾಗಕ್ಕೆ ಮಾತ್ರ ಮೆಷ್ ಅಳವಡಿಸಿ ಉಳಿದ ಅರ್ಧಭಾಗ ಕಾಲಿ ಬಿಟ್ಟಿರುವುದರಿಂದಾಗಿ ನೊರೆ ಹೆಚ್ಚು ಸಂಗ್ರಹಣೆಯಾಗಿದೆ. ಮೆಷ್ ಒಳಗಡೆ ಭಾರೀ ಪ್ರಮಾಣದಲ್ಲಿ ನೊರೆ ಸಂಗ್ರಹಣೆಯಾಗಿದ್ದು, ನೊರೆ ರಸ್ತೆಗೆ ಬಂದು ವಾಹನ ಸವಾರರು ಪರದಾಡುವಂತಾಗಿದೆ.

    ಇಲ್ಲಿಯ ವರ್ಜೀನಿಯ ಮಾಲ್ ಗೇಟ್ ನಲ್ಲಿ ಬಳಿಯೇ ನೊರೆ ಶೇಖರಣೆಯಾಗಿದ್ದು, ಮಾಲ್ ಗೆ ಬರುವ ಗ್ರಾಹಕರಿಗೂ ತೊಂದರೆ ಉಂಟಾಗಿದೆ. ಮಾಲ್ ಸಿಬ್ಬಂದಿ ನೊರೆಯನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    https://www.youtube.com/watch?v=_FxnpjRlTKg