Tag: ಬಿಡಬ್ಲೂಎಸ್‌ಎಸ್‌ಬಿ

  • ನಾಳೆಯಿಂದ ಬೆಂಗಳೂರಿನಲ್ಲಿ 3 ದಿನ ಕಾವೇರಿ ನೀರು ಬರಲ್ಲ – ಜಲಮಂಡಳಿ ಮಾಹಿತಿ

    ನಾಳೆಯಿಂದ ಬೆಂಗಳೂರಿನಲ್ಲಿ 3 ದಿನ ಕಾವೇರಿ ನೀರು ಬರಲ್ಲ – ಜಲಮಂಡಳಿ ಮಾಹಿತಿ

    ಬೆಂಗಳೂರು: ನಿಯಮಿತ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸೆ.15, 16 ಮತ್ತು 17 ರಂದು ಕಾವೇರಿ ನೀರು ಸರಬರಾಜನ್ನು (Cauvery Water Supply) ಸ್ಥಗಿತಗೊಳಿಸಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.

    ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ಸೆ.15, 16 ಮತ್ತು 17 ರಂದು ಸ್ಥಗಿತಗೊಳಿಸಲಾಗುತ್ತಿದೆ. ಈ ಜಲರೇಚಕ ಯಂತ್ರಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಆ ಮೂರು ದಿನಗಳಲ್ಲಿ ಸಂಚಾರಿ ಕಾವೇರಿಯ ಯೋಜನೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಿ, ಈ ಟ್ಯಾಂಕರ್‌ಗಳನ್ನು ತುರ್ತು ನೀರು ಸರಬರಾಜಿಗಾಗಿ ಬಳಸಿಕೊಳ್ಳಲಾಗುವುದು ಎಂದಿದ್ದಾರೆ. ಇದನ್ನೂ ಓದಿ: ಪಾಕ್‌ ವಿರುದ್ಧ ಟೀಂ ಇಂಡಿಯಾ ಗೆಲುವಿಗೆ ವಿಶ್ವ ಹಿಂದೂ ರಕ್ಷಾ ಪರಿಷತ್‌ನಿಂದ ಹೋಮ-ಹವನ

    ಗ್ರೇಟರ್ ಬೆಂಗಳೂರು ನಗರದ ಜನತೆಗೆ ಯಾವುದೇ ಅಡೆತಡೆಯಿಲ್ಲದೇ ಕುಡಿಯುವ ನೀರನ್ನು ಸರಬರಾಜು ಮಾಡಲು, ಕಾವೇರಿ ನೀರು ಸರಬರಾಜು ಯೋಜನೆಯ ಜಲರೇಚಕ ಯಂತ್ರಗಾರಗಳು ಮತ್ತು ಮುಖ್ಯ ಕೊಳವೆ ಮಾರ್ಗಗಳ ಸುಲಲಿತ ಚಾಲನೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸುಸ್ಥಿತಿಯಲ್ಲಿಡುವ ಉದ್ದೇಶದಿಂದ ಜಲಮಂಡಳಿಯ ವಿವಿಧೆಡೆ ನಿಯಮಿತ ತುರ್ತು ನಿರ್ವಹಣೆಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅದೊಂದು ಹಾಡಿನಿಂದ ದಿಢೀರ್ ಫೇಮಸ್ ಆದ ಯುವತಿ – ಇನ್ಸ್ಟಾದಲ್ಲಿ 150 ಇದ್ದ ಫಾಲೋವರ್ಸ್ ಈಗ 40,000

    ಕಾವೇರಿ 5ನೇ ಹಂತದ ಜಲರೇಚಕ ಯಂತ್ರಗಾರಗಳು (ಪಂಪಿಂಗ್ ಸ್ಟೇಷನ್) ಸೆ.15 ರ ನಸುಕಿನ ಜಾವ 1 ಗಂಟೆಯಿಂದ ಸೆ.17ರ ಮಧ್ಯಾಹ್ನ 1 ಗಂಟೆವರೆಗೆ ಒಟ್ಟು 60 ಗಂಟೆಗಳು. ಕಾವೇರಿ ನೀರು ಸರಬರಾಜು ಯೋಜನೆಯ ಹಂತ-1, ಹಂತ-2, ಹಂತ-3, ಹಂತ-4 ರ 1ನೇ ಘಟ್ಟ ಮತ್ತು 2ನೇ ಘಟ್ಟಗಳ ಜಲರೇಚಕ ಯಂತ್ರಗಾರಗಳನ್ನು ಸೆ.16 ರ ಬೆಳಗ್ಗೆ 6ರಿಂದ ಸೆ.17ರ ಬೆಳಗ್ಗೆ 6ರವರೆಗೆ ಒಟ್ಟು 24 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗುತ್ತಿದೆ ಎಂದಿದ್ದಾರೆ.

    ಸಂಚಾರಿ ಕಾವೇರಿ ಯೋಜನೆ ಮೂರು ದಿನ ಸ್ಥಗಿತ:
    ಸಂಚಾರಿ ಕಾವೇರಿಯ ಯೋಜನೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಸೇವೆಯನ್ನು ಸ್ಥಗಿತಗೊಳಿಸಿ, ಈ ಟ್ಯಾಂಕರ್‌ಗಳನ್ನು ತುರ್ತು ನೀರು ಸರಬರಾಜಿಗಾಗಿ ಬಳಸಿಕೊಳ್ಳಲಾಗುವುದು. ಸಂಚಾರಿ ಕಾವೇರಿ ಯೋಜನೆಯ ಸೇವೆಯಲ್ಲಿ ಈ ಮೂರು ದಿನಗಳ ಕಾಲ ವ್ಯತ್ಯಯವಾಗಲಿದೆ. ಕಾವೇರಿ ನೀರು ಸರಬರಾಜಾಗುವ ಪ್ರದೇಶಗಳ ನಾಗರಿಕರು ಮುಂಜಾಗ್ರತೆಯಾಗಿ ಅಗತ್ಯವಿರುವ ನೀರನ್ನು ಸಂಗ್ರಹ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.

  • ಶೀಘ್ರದಲ್ಲೇ ನೀರಿನ ದರ ಏರಿಕೆ ಶಾಕ್ – ಜಲಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

    ಶೀಘ್ರದಲ್ಲೇ ನೀರಿನ ದರ ಏರಿಕೆ ಶಾಕ್ – ಜಲಮಂಡಳಿಯಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

    – ನಾಲ್ಕು ಆಯ್ಕೆಗಳನ್ನು ಮುಂದಿಟ್ಟ ಬಿಡಬ್ಲೂಎಸ್‌ಎಸ್‌ಬಿ

    ಬೆಂಗಳೂರು: ಡಿಸಿಎಂ ಡಿಕೆಶಿ ನೀರಿನ ದರ ಏರಿಕೆ ಬಗ್ಗೆ ಸುಳಿವು ಕೊಟ್ಟ ಬೆನ್ನಲ್ಲೇ ಇದೀಗ ಜಲಮಂಡಳಿ (BWSSB)ನೀರಿನ ದರ ಏರಿಕೆ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಜಲಮಂಡಳಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದ ಮುಂದೆ ನಾಲ್ಕು ಆಯ್ಕೆಗಳನ್ನು ಇಟ್ಟಿದೆ. ಶೇಕಡಾ ಎಷ್ಟು? ದರ ಏರಿಕೆ ಮಾಡಬೇಕು ಎಂದು ನಾಲ್ಕು ಮಾದರಿಯ ದರಗಳನ್ನ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿದೆ. ಈ ಕುರಿತು ಕೆಲವೇ ದಿನಗಳಲ್ಲಿ ಸರ್ಕಾರ ಪ್ರಸ್ತಾವನೆ ಫೈನಲ್ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಕನ್ನಡ ಬರೆಯಲು ಪರದಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ

    ಇತ್ತೀಚಿಗಷ್ಟೇ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಜಲಮಂಡಳಿ ಸಭೆಯಲ್ಲಿ ಮಾತನಾಡಿ, ಎಲ್ಲಾ ಫ್ರೀಯಾಗಿ ಕೊಟ್ಟರೆ ಸರ್ಕಾರ ಹೇಗೆ ನಡೆಯಬೇಕು? ಇನ್ಮೇಲೆ ಕಾವೇರಿ ನೀರನ್ನು ಫ್ರೀಯಾಗಿ ಕೊಡೋಕೆ ಆಗಲ್ಲ. ಒಂದು ಪೈಸೆಯಾದರೂ ಬಿಲ್ ಕಟ್ಟಬೇಕು. ಸರ್ಕಾರಿ ನೌಕರರು ಸಂಬಳ ಜಾಸ್ತಿ ಮಾಡಿ ಅಂತಿದ್ದಾರೆ. ಹೀಗಾಗಿ ಎಲ್ಲಾ ಸರಿದೂಗಿಸಿಕೊಂಡು ಹೋಗಬೇಕಲ್ವಾ ಎಂದಿದ್ದರು.

    ಜೊತೆಗೆ ವಿದ್ಯುತ್ ದರ ಏರಿಕೆಗೆ 5 ವಿದ್ಯುತ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದ್ದವು. 3 ವರ್ಷದ ದರ ಏರಿಕೆಯನ್ನು ಈಗಲೇ ಪ್ರಕಟಿಸಿ ಎಂದು ಮೊರೆ ಇಟ್ಟು, ಪ್ರತಿ ಯೂನಿಟ್‌ಗೆ 2025-26ರ ಸಾಲಿನಲ್ಲಿ 67 ಪೈಸೆ, 2026-27ರಲ್ಲಿ 74 ಪೈಸೆ ಮತ್ತು 2027-28ರಲ್ಲಿ 91 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿ ಎಂದು ಕೋರಿದ್ದವು.ಇದನ್ನೂ ಓದಿ: ಪಟ್ಟಾ ಜಮೀನು ಹೊಂದಿರುವವರ ಅರಣ್ಯ ಹಕ್ಕು ಅರ್ಜಿ ಪರಿಶೀಲನೆಗೆ ಈಶ್ವರ್ ಖಂಡ್ರೆ ಸೂಚನೆ