Tag: ಬಿಡದಿ

  • ನಾನು ಹೇಳಿದ್ದಕ್ಕೆ ತಡವಾಗಿ ಉದಯಿಸಿದ – ಸೂರ್ಯನಿಗೆ ನಿತ್ಯಾನಂದ ಆರ್ಡರ್

    ನಾನು ಹೇಳಿದ್ದಕ್ಕೆ ತಡವಾಗಿ ಉದಯಿಸಿದ – ಸೂರ್ಯನಿಗೆ ನಿತ್ಯಾನಂದ ಆರ್ಡರ್

    ಬೆಂಗಳೂರು: ನಾನು ಧ್ವಜಾರೋಹಣ ಮುಗಿಸೋವರೆಗೂ ಕಾಣಿಸಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ಅದಕ್ಕೆ ಅವನು ಬಿಡದಿಯಲ್ಲಿ 40 ನಿಮಿಷ ತಡವಾಗಿ ಹುಟ್ಟಿದ ಎಂದು ನಿತ್ಯಾನಂದ ಸ್ವಾಮೀಜಿ ಭರ್ಜರಿ ಬಿಲ್ಡಪ್ ಕೊಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಬಿಡದಿ ಆಶ್ರಮದಲ್ಲಿ ವಿದೇಶಿ ಭಕ್ತಾದಿಗಳನ್ನು ಸುತ್ತಲು ಕೂರಿಸಿಕೊಂಡು ನಾನು ಆದೇಶ ನೀಡಿದ್ದಕ್ಕೆ ಸೂರ್ಯ ತಡವಾಗಿ ಉದಯಿಸಿದ. ಬಿಡದಿಯಲ್ಲಿ ಮಾತ್ರ 40 ನಿಮಿಷ ತಡವಾಗಿ ಕಾಣಿಸಿಕೊಂಡ ಎಂದು ನಿತ್ಯಾನಂದ ಹೇಳಿದ್ದಾನೆ.

    ನಿತ್ಯಾನಂದ ಹೇಳಿದ್ದೇನು?
    ದಿನ ಆರಂಭವಾಗುವುದು ಸೂರ್ಯೋದಯದ ಮೂಲಕ. ಇವತ್ತು ಎಷ್ಟು ಮಂದಿ ಸೂರ್ಯೋದಯವನ್ನು ನೋಡಿದ್ದೀರೋ ಗೊತ್ತಿಲ್ಲ. ಇವತ್ತು ನಾನು ಧ್ವಜರೋಹಣಕ್ಕೆ ತಡವಾಗಿ ಬಂದೆ. ಪ್ರತಿದಿನ ಮುಂಜಾನೆ 6:40ರಿಂದ 7 ರವರೆಗೆ ಧ್ವಜರೋಹಣ ನಡೆಯುತ್ತದೆ. ಆದರೆ ನಾನು ಇಂದು ಕೊಂಚ ತಡವಾಗಿ ಬಂದೆ. ನಾನು ಹೇಳೋವರೆಗೆ, ಧ್ವಜಾರೋಹಣ ಮುಗಿಸೋವರೆಗೆ ನೀನು ಕಾಣಿಸಿಕೊಳ್ಳಬೇಡ ಎಂದು ಸೂರ್ಯನಿಗೆ ಹೇಳಿದ್ದೆ. ನಾನು ಹೇಳಿದ ತಕ್ಷಣ ಸೂರ್ಯ ಅವತ್ತು ಬಿಡದಿಯಲ್ಲಿ ನಲವತ್ತು ನಿಮಿಷ ತಡವಾಗಿ ಕಾಣಿಸಿಕೊಂಡ.

    ಬಿಡದಿಯಲ್ಲಿ ಮಾತ್ರ ಈ ಅಚ್ಚರಿ ನಡೆದಿದ್ದು, ಬೇಕಾದರೆ ಗೂಗಲ್ ನಲ್ಲಿ ಇಂದಿನ ಸೂರ್ಯೋದಯದ ಸಮಯ ಎಷ್ಟಿತ್ತು? ಬಿಡದಿಯಲ್ಲಿ ಸೂರ್ಯೋದಯವಾದ ಸಮಯ ನೋಡಿ ಆಗ ಗೊತ್ತಾಗುತ್ತೆ. ಇದೆಲ್ಲ ನನ್ನಿಂದ ಮಾತ್ರ ಸಾಧ್ಯ ಎಂದು ವಿವರಿಸಿದ್ದಾನೆ.

    ನಿತ್ಯಾನಂದನ ಈ ಮಾತನ್ನು ಹೇಳುತ್ತಿದ್ದಂತೆ ಅಲ್ಲಿದ್ದ ವಿದೇಶಿ ಮಹಿಳಾ ಭಕ್ತೆಯರು ಚಪ್ಪಾಳೆ ತಟ್ಟಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ.

  • ಚೀಲದಲ್ಲಿ ಪುಟ್ಟ-ಪುಟ್ಟ ಕರುಗಳನ್ನು ತುಂಬಿ ಸಾಗಾಟ- ಆರೋಪಿಯನ್ನು ಹಿಡಿದ ಜನ

    ಚೀಲದಲ್ಲಿ ಪುಟ್ಟ-ಪುಟ್ಟ ಕರುಗಳನ್ನು ತುಂಬಿ ಸಾಗಾಟ- ಆರೋಪಿಯನ್ನು ಹಿಡಿದ ಜನ

    ಬೆಂಗಳೂರು: ಗೋವುಗಳ ಹಾಗೂ ಗೋಮಾಂಸ ಸಾಗಾಟ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದಕ್ಕೆ ಇಂದು ಬಿಡದಿಯಯಲ್ಲಿ ಸಿಕ್ಕ ಘಟನೆಯೂ ಸಾಕ್ಷಿಯಾಗಿದೆ.

    ವ್ಯಕ್ತಿಯೊಬ್ಬ ಪುಟ್ಟ ಪುಟ್ಟ ಕರುಗಳನ್ನು ಯೂರಿಯಾ ಚೀಲದಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದನು. ಈ ವಿಚಾರ ತಿಳಿದ ಸ್ಥಳೀಯರು ಅನುಮಾನದ ಮೇರೆಗೆ ಬಿಡದಿಯಲ್ಲಿ ಅಡ್ಡಗಟ್ಟಿ ಆತನ ಆಟೋವನ್ನು ನಿಲ್ಲಿಸಿದ್ದಾರೆ.

    ಆಟೋ ನಿಲ್ಲುತ್ತಿದ್ದಂತೆಯೇ ಸ್ಥಳೀಯರು ಒಟ್ಟು ಸೇರಿ ಅದರೊಳಗಡೆ ಇದ್ದ ಚೀಲಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯೂರಿಯಾ ಚೀಲಗಳೊಳಗೆ ಪುಟ್ಟ ಪುಟ್ಟ ಕರುಗಳು ಒದ್ದಾಡುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಚೀಲಗಳನ್ನು ಆಟೋದಿಂದ ಇಳಿಸಿ ಕಟ್ಟಿದ ಹಗ್ಗವನ್ನು ಬಿಚ್ಚಿದಾಗ ಕರುಗಳು ಹೊರಬಂದವು.

    ಈ ದೃಶ್ಯ ನೆರೆದಿದ್ದವರಲ್ಲಿ ಕಣ್ಣೀರು ತರಿಸುವಂತಿತ್ತು. ಆರೋಪಿ ಆಟೋದಲ್ಲಿ ಸುಮಾರು 10-15 ಕರುಗಳನ್ನು ತುಂಬಿಕೊಂಡು ಹೋಗುವ ಪ್ರಯತ್ನ ಮಾಡಿದ್ದಾನೆ. ಕರುಗಳು ಒದ್ದಾಡುತ್ತವೆ ಅನ್ನೋ ಕಾರಣಕ್ಕೆ ಅವುಗಳ ಕಾಲುಗಳನ್ನು ಮುರಿದು ಚೀಲದೊಳಗೆ ತುಂಬಿಸಿದ್ದಾನೆ. ಬಳಿಕ ಉಸಿರಾಡಲೆಂದು ಗೋಣಿಯಲ್ಲಿ ಒಂದು ಸಣ್ಣ ರಂಧ್ರ ಮಾಡಿ, ಚೀಲವನ್ನು ಬಿಗಿಯಾಗಿ ಕಟ್ಟಿದ್ದಾನೆ.

    ಆದರೆ ಈ ರೀತಿ ಕಟ್ಟಿ ಎಲ್ಲಿಗೆ, ಯಾಕೆ ಸಾಗಾಟ ಮಾಡುತ್ತಿದ್ದ ಎಂಬುದರ ಬಗ್ಗೆ ಇನ್ನಷ್ಟೇ ತಿಳಿದುಬರಬೇಕಿದೆ. ಬಿಡದಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

  • ಕ್ವಾರಿ, ಗಣಿಗಾರಿಕೆ ನಡೆಸೋರ ಮೇಲಿನ ದಾಳಿಗೆ ಸಿಎಂ ನಿಲುವೇನು: ಬಿಜೆಪಿ

    ಕ್ವಾರಿ, ಗಣಿಗಾರಿಕೆ ನಡೆಸೋರ ಮೇಲಿನ ದಾಳಿಗೆ ಸಿಎಂ ನಿಲುವೇನು: ಬಿಜೆಪಿ

    -ತನಿಖಾ ಏಜೆನ್ಸಿಗಳನ್ನ ಟೀಸಿಸುವುದು ಸಿಎಂಗೆ ಶೋಭೆ ತರಲ್ಲ

    ರಾಮನಗರ: ಕ್ವಾರಿ ಹಾಗೂ ಗಣಿಗಾರಿಕೆ ನಡೆಸೋರ ಮೇಲೆ ಐಟಿ ದಾಳಿ ನಡೆದ ಬಗ್ಗೆ ಸಿಎಂ ರಿಯಾಕ್ಟ್ ಮಾಡುತ್ತಾರೆ ಅಂದರೆ ಅವರ ನಿಲುವನ್ನ ಸಿಎಂ ಸ್ಪಷ್ಟಿಕರಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣ್ ಆಗ್ರಹಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಪ್ರಚಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದ ಅವರು, ತನಿಖಾ ಏಜೆನ್ಸಿಗಳನ್ನ ಟೀಕೆ ಮಾಡುವುದು ಸಿಎಂ ಅವರಿಗೆ ಶೋಭೆ ತರಲ್ಲ. ಇದಕ್ಕೆ ಕ್ಷಮೆ ಕೋರಬೇಕು. ಐಟಿ ದಾಳಿ ವೇಳೆ ಸಿಕ್ಕ ಹಣದ ಬಗ್ಗೆ ಸಚಿವ ಡಿಕೆ ಶಿವಕುಮಾರ್ ಹವಾಲ ಹಣವನ್ನ ನಮ್ಮದಲ್ಲ ಎಂದರು. ನಿನ್ನೆ ಡಿಕೆ ಸುರೇಶ್ ಘೋಷಣೆ ಮಾಡಿ ಅದನ್ನ ನಮ್ಮದು ಎಂದು ಒಪ್ಪಿಕೊಂಡಿದ್ದಾರೆ. ಬೇಕಾದಾಗ ಒಂದು ರೀತಿ ಬೇಡವೆಂದಾಗ ಒಂದು ರೀತಿ ಹೇಳಿಕೆ ನೀಡುವುದಲ್ಲ ಎಂದರು.

    ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಸಿಪಿ ಯೋಗೇಶ್ವರ್, ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ರೇವಣ್ಣ ತಮ್ಮ ಮಕ್ಕಳನ್ನ ಚುನಾವಣೆಗೆ ನಿಲ್ಲಿಸಿದ್ದು ಕಳೆದ ಒಂದುವರೆ ವರ್ಷದಿಂದ ಯಾರ್ಯಾರ ಬಳಿ ಏನೇನು ಕಲೆಕ್ಟ್ ಮಾಡಿದ್ದಾರೆ. ಆ ಹಣದ ಬಲದಿಂದ ತಮ್ಮ ಮಕ್ಕಳನ್ನ ಎಂಪಿ ಮಾಡಲಿಕ್ಕೆ ಹೊರಟಿದ್ದಾರೆ. ಆದ್ದರಿಂದಲೇ ಅವರಿಗೆ ಐಟಿ ಭಯ ಕಾಡುತ್ತಿದೆ ಎಂದರು.

    ಸಿಎಂ ಎಚ್‍ಡಿಕೆಯವರಿಗೆ ಈ ಚುನಾವಣೆಯನ್ನ ಎದುರಿಸೋಕೆ ಯಾವುದೇ ನೈತಿಕತೆಯಿಲ್ಲ. ಹಣ ಬಲದ ಮೇಲೆಯೇ ಈ ಚುನಾವಣೆ ಎದುರಿಸಬೇಕು. ಕಂಟ್ರಾಕ್ಟರ್‍ಗಳು, ಗುತ್ತಿಗೆದಾರರು, ಪಾಲುದಾರರು ಸರ್ಕಾರದಲ್ಲಿ ಬಂದ ಕಮಿಷನ್ ಹಣ. ಅಲ್ಲದೇ ಶಾಸಕಿ ಅನಿತಾ ಕುಮಾರಸ್ವಾಮಿ ವರ್ಗಾವಣೆ ದಂಧೆಯಲ್ಲಿ ಅಧಿಕಾರಿಗಳ ಹತ್ತಿರ, ಪೊಲೀಸರು, ಗುತ್ತಿಗೆದಾರರ ಹತ್ತಿರ ಹಣ ಕಲೆಕ್ಟ್ ಮಾಡಿದ್ದಾರೆ ಎಂಬುದು ಜಗಜ್ಜಾಹಿರಾಗಿದೆ. ಅವರು ಕಲೆಕ್ಟ್ ಮಾಡಿರುವ ಕಪ್ಪುಹಣದ ಮೇಲೆ ಐಟಿ ದಾಳಿ ಮಾಡಿರಬಹುದು ಅದರಲ್ಲಿ ತಪ್ಪೇನಿದೆ. ನಾವು ಕೂಡಾ ಐಟಿ ಇಲಾಖೆಗೆ ಸಾಕಷ್ಟು ಬಾರಿ ಇಲ್ಲಿ ಹಣದ ದಂಧೆ ನಡೆಯುತ್ತೆ, ಹಣ ಚೆಲ್ಲುತ್ತಾರೆ ಎಂದು ಮನವಿ ಮಾಡಿದ್ದೇವು. ಸಚಿವ ರೇವಣ್ಣ, ಸಿಎಂ ಕೂಡ ಬಹಳಷ್ಟು ಹಣ ಲೂಟಿ ಮಾಡಿದ್ದಾರೆ. ಡಿಕೆ ಬ್ರದರ್ಸ್ ರ ಹಣದ ಏರಿಕೆ ಪೈಪೋಟಿಯಂತಿದೆ ಎಂದು ವಾಗ್ದಾಳಿ ನಡೆಸಿದರು.

  • ಕೊನೆಗೂ ಶಾಸಕ ಕಂಪ್ಲಿ ಗಣೇಶ್ ಬಂಧನ

    ಕೊನೆಗೂ ಶಾಸಕ ಕಂಪ್ಲಿ ಗಣೇಶ್ ಬಂಧನ

    ರಾಮನಗರ: ಈಗಲ್ಟನ್ ರೆಸಾರ್ಟ್ ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಂಪ್ಲಿ ಶಾಸಕ ಗಣೇಶ್‍ರನ್ನು ಕೊನೆಗೂ ಬಿಡದಿ ಪೊಲೀಸರು ಬಂದಿದ್ದಾರೆ.

    ಗುಪ್ತ ಸ್ಥಳದಲ್ಲಿ ಪೊಲೀಸರು ಗಣೇಶ್ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಅಲ್ಲಿಂದ ಬೆಂಗಳೂರಿಗೆ ಕರೆ ತರಲಾಗುತ್ತದೆ. ಬಂಧನದ ಬಗ್ಗೆ ಪಬ್ಲಿಕ್ ಟಿವಿಗೆ ಐಜಿಪಿ ದಯಾನಂದ್ ಖಚಿತ ಪಡಿಸಿದ್ದಾರೆ.

    ಗಣೇಶ್ ರನ್ನು ಬಂಧಿಸಿರುವ ಪೊಲೀಸರು ಗುರುವಾರ ಬೆಳಗ್ಗೆ ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಾರೆ ಎಂಬ ಮಾಹಿತಿ ಲಭಿಸಿದೆ. ನ್ಯಾಯಾಲಯದಲ್ಲಿ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡುತ್ತಾರಾ ಎಂಬ ಅಂಶ ಕುತೂಹಲ ಮೂಡಿಸಿದೆ. ಇಂದು ಸಂಜೆ ಗಣೇಶ್ ಬೆಂಗಳೂರಿಗೆ ಕರೆತರುವ ನಿರೀಕ್ಷೆ ಇದ್ದು, ಜನಪ್ರತಿನಿಧಿ ಆಗಿರುವ ಕಾರಣ ವಿಶೇಷ ನ್ಯಾಯಾಲಯಕ್ಕೆ ಗುರುವಾರ ಹಾಜರು ಪಡಿಸಲಾಗುತ್ತದೆ.

    ಬರೋಬ್ಬರಿ ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಗಣೇಶ್‍ರನ್ನು ಬಂಧಿಸಲು ಬಿಡದಿ ಪೊಲೀಸರು 3 ವಿಶೇಷ ತಂಡಗಳನ್ನು ರಚನೆ ಮಾಡಿ ಹುಡುಕಾಟ ನಡೆಸಿದ್ದರು. ಈ ಕೃತ್ಯದಿಂದ ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಭಾರೀ ತೀವ್ರ ಮುಜುಗರ ಆಗಿತ್ತು. ಅಲ್ಲದೇ ಪ್ರಕರಣದಲ್ಲಿ ರಾಜಿ ಸಂಧಾನ ನಡೆಸಲು ಸಚಿವ ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ನಾಯಕರು ಪ್ರಯತ್ನ ನಡೆಸಿದ್ದರು. ಈ ಸಂಧಾನಕ್ಕೆ ಶಾಸಕ ಆನಂದ್ ಸಿಂಗ್ ಪತ್ನಿ ಹಾಗೂ ಕುಟುಂಬ ಒಪ್ಪಿಗೆ ನೀಡದ ಕಾರಣ ನಾಯಕರಿಗೆ ತೀವ್ರ ಮುಜುಗರ ಉಂಟಾಗಿತ್ತು.

    ರಾಜ್ಯ ಗೃಹ ಇಲಾಖೆ ಗಣೇಶ್ ಅವರನ್ನು ಬಂಧನ ಮಾಡಲು ಹಿಂದೇಟು ಹಾಕಿತ್ತು ಎಂಬ ಅನುಮಾನ ಕೂಡ ವ್ಯಕ್ತವಾಗಿತ್ತು. ಈಗಾಗಲೇ ನ್ಯಾಯಾಲಯದಲ್ಲಿ ಶಾಸಕ ಜಾಮೀನು ಅರ್ಜಿ ಸಲ್ಲಿಸಿದ್ದು, ಸದ್ಯ ಆನಂದ್ ಸಿಂಗ್ ಆಸ್ಪತ್ರೆಯಿಂದ ಮನೆಗೆ ತೆರಳಿರುವ ಕಾರಣ ಜಾಮೀನು ಲಭಿಸುವುದು ಸುಲಭ ಎಂಬ ಹಿನ್ನೆಲೆಯಲ್ಲಿ ಗಣೇಶ್ ಅವರ ಬಂಧನವಾಗಿದ್ಯಾ ಎನ್ನುವ ಪ್ರಶ್ನೆ ಎದ್ದಿದೆ.

    ಮಂಗಳವಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಗಣೇಶ್ ಅವರ ಕುಟುಬವನ್ನು ಭೇಟಿ ಮಾಡಿ ಮಾತುಕೆ ನಡೆಸಿದ್ದರು. ಆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಗಣೇಶ್ ಶಾಸಕರಾಗುತ್ತಾರೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ರು. ಈ ಹೇಳಿಕೆ ಬೆನ್ನಲ್ಲೇ ಸದ್ಯ ಪೊಲೀಸರು ಗಣೇಶ್ ಅವರನ್ನು ಬಂಧಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆಗೈದ ಶಾಸಕ ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 324(ದೊಣ್ಣೆಯಿಂದ ಹಲ್ಲೆ), 307(ಕೊಲೆ ಯತ್ನ), 504(ಉದ್ದೇಶ ಪೂರ್ವಕ ಶಾಂತಿ ಕದಡುವುದು) 506(ಜೀವ ಬೆದರಿಕೆ) ಅಡಿ ಪ್ರಕರಣ ದಾಖಲಾಗಿದೆ. ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಶಾಸಕ ಗಣೇಶ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಟಿ ಆಮಿಷ ಒಡ್ಡಿದ್ದರೂ ಪಕ್ಷದ ಜೊತೆ ಇದ್ದಿದ್ದಕ್ಕೆ ಖುಷಿ : ಅತೃಪ್ತರಿಗೆ ಮಾಜಿ ಸಿಎಂ ರಾಜಕೀಯ ಪಾಠ

    ಕೋಟಿ ಆಮಿಷ ಒಡ್ಡಿದ್ದರೂ ಪಕ್ಷದ ಜೊತೆ ಇದ್ದಿದ್ದಕ್ಕೆ ಖುಷಿ : ಅತೃಪ್ತರಿಗೆ ಮಾಜಿ ಸಿಎಂ ರಾಜಕೀಯ ಪಾಠ

    ಬೆಂಗಳೂರು: `ಆಪರೇಷನ್ ಕಮಲ’ ಭೀತಿಯಲ್ಲಿ ರಾತ್ರೋರಾತ್ರಿ ರೆಸಾರ್ಟ್ ಸೇರಿಕೊಂಡಿರುವ ಕೈ ಶಾಸಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಪಾಠ ಮಾಡಿದ್ದಾರೆ.

    ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ವಿಧಾನಸೌಧದಿಂದ ಸೀದಾ ಬಿಡದಿಯ ಈಗಲ್‍ಟನ್ ರೆಸಾರ್ಟ್ ನಲ್ಲಿ ಕೈ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಸಚಿವ ಡಿಕೆ ಶಿವಕುಮಾರ್ ಅವರ ತಮ್ಮ ಸಂಸದ ಡಿಕೆ ಸುರೇಶ್‍ಗೆ ಕೈ ಶಾಸಕರನ್ನು ಕಾಯುವ ಹೊಣೆಯನ್ನು ಕಾಂಗ್ರೆಸ್ ಒಪ್ಪಿಸಿದೆ. ಶುಕ್ರವಾರ ರಾತ್ರಿ ಅತೃಪ್ತ ಶಾಸಕರನ್ನು ಕೂರಿಸಿಕೊಂಡು ಊಟದ ಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಪಾಠವನ್ನು ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಪಾಠದಲ್ಲಿ ಏನಿತ್ತು?
    ನಾವು ಹೇಳುವ ತನಕ ನೀವು ರೆಸಾರ್ಟ್ ನಲ್ಲೇ ಇರಬೇಕಾಗುತ್ತದೆ. ಸದ್ಯ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಿಲ್ಲ. ಒಂದು ವೇಳೆ ನೀವು ಈಗ ಇಲ್ಲಿಂದ ಹೊರಗೆ ಹೋದರೆ ಮತ್ತೆ ಪಕ್ಷಕ್ಕೆ ಕಷ್ಟ ಆಗುತ್ತದೆ. ಹೀಗಾಗಿ ಆಪರೇಷನ್ ಕಮಲ ತಣ್ಣಗಾಗುವರೆಗೆ ರೆಸಾರ್ಟ್ ನಲ್ಲೇ ಉಳಿದುಕೊಳ್ಳಬೇಕು. ನಮ್ಮ ಶಾಸಕರ ರಾಜೀನಾಮೆ ಕೊಡಿಸಲು ಬಿಜೆಪಿಯವರು ಯತ್ನಿಸಿದ್ದಾರೆ. ಅತೃಪ್ತ ಶಾಸಕರಿಗೆ ಬಿಜೆಪಿಯವರು ಕೋಟಿ-ಕೋಟಿ ಆಮಿಷ ಒಡ್ಡಿ ಸೆಳೆಯಲು ಯತ್ನಿಸಿದ್ದಾರೆ. ಆದರೂ ಆಮಿಷಕ್ಕೆ ಒಳಗಾಗದೇ ನೀವೆಲ್ಲರೂ ಪಕ್ಷದ ಜೊತೆಗೆ ಇರುವುದಕ್ಕೆ ಖುಷಿಯಾಗುತ್ತಿದೆ.

    ಭಾನುವಾರ ಮುಕ್ತಾಯ?: ಬಿಜೆಪಿ ಶಾಸಕರು ಶನಿವಾರವೇ ಬೆಂಗಳೂರಿಗೆ ಬಂದರೂ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಇವತ್ತಿಗೆ ಮುಗಿಯುವುದಿಲ್ಲ. ಬೆಳಗ್ಗೆ 11 ಗಂಟೆ ನಂತರ ಶಾಸಕರ ಜೊತೆ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಎಲ್ಲಾ ಬಿಜೆಪಿ ಶಾಸಕರು ಇಂದು ಬೆಂಗಳೂರಿಗೆ ತಲುಪಿದ್ದು ಖಚಿತವಾದರೆ, ಭಾನುವಾರ ಮಧ್ಯಾಹ್ನದ ಬಳಿಕ ಕಾಂಗ್ರೆಸ್ ಶಾಸಕರು ರೆಸಾರ್ಟ್ ಹೊರಡುವ ಸಾಧ್ಯತೆಯಿದೆ.

    ಬಹುತೇಕ ಎಲ್ಲಾ ಸಚಿವರಿಗೆ ರೆಸಾರ್ಟ್ ನಲ್ಲೇ ಇರಬೇಕು ಎಂಬ ಯಾವುದೇ ಷರತ್ತು ಇಲ್ಲ. ಬೆಂಗಳೂರಿನ ಹೆಚ್ಚಿನ ಶಾಸಕರು ರಾತ್ರಿಯೇ ತಮ್ಮ ತಮ್ಮ ನಿವಾಸಕ್ಕೆ ತೆರಾಳಿದ್ದಾರೆ. ಸದ್ಯ ಈಗ 48 ಶಾಸಕರು ಮಾತ್ರ ಈಗಲ್ ಟನ್ ರೆಸಾರ್ಟ್ ನಲ್ಲಿದ್ದು, ಉಳಿದ ಶಾಸಕ ಹಾಗೂ ಸಚಿವರು ಬೆಳಗ್ಗಿನ ಸಭೆಗೆ ರೆಸಾರ್ಟ್ ಗೆ ಆಗಮಿಸಲಿದ್ದಾರೆ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೈ ಶಾಸಕರು ಬಿಡದಿಗೆ ಶಿಫ್ಟ್ – ಬಿಜೆಪಿಯ ಪ್ಲಾನ್ ಬಿ ಆಟ ಇಂದಿನಿಂದ ಆರಂಭ?

    ಕೈ ಶಾಸಕರು ಬಿಡದಿಗೆ ಶಿಫ್ಟ್ – ಬಿಜೆಪಿಯ ಪ್ಲಾನ್ ಬಿ ಆಟ ಇಂದಿನಿಂದ ಆರಂಭ?

    ಬೆಂಗಳೂರು: ಹೇಗಾದ್ರೂ ಮಾಡಿ ಸರ್ಕಾರವನ್ನು ಬೀಳಿಸಿಯೇ ಬಿಡಬೇಕು ಅನ್ನೋ ಹಠಕ್ಕೆ ಬಿದ್ದಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕ್ಷಣಕ್ಕೊಂದು ದಾಳ ಉರುಳಿಸುತ್ತಲೇ ಇದ್ದಾರೆ. ಒಂದು ಪ್ಲ್ಯಾನ್ ಫ್ಲಾಪ್ ಆದ್ರೆ ಮತ್ತೊಂದು. ಈಗ ಮತ್ತೊಂದು ಅಸ್ತ್ರ ಅದೇ ಅವಿಶ್ವಾಸ ನಿರ್ಣಯ.

    ಹೌದು. ಈಗಾಗಲೇ ನಾಲ್ವರು ಶಾಸಕರು ಶುಕ್ರವಾರದ ಶಾಸಕಾಂಗ ಸಭೆಗೆ ಗೈರಾಗಿರುವ ಜೊತೆಗೆ ಇನ್ನೂ ಐವರು ಕಾಂಗ್ರೆಸ್‍ನಿಂದ ಜಂಪ್ ಆಗಬಹುದು ಎನ್ನುವ ನಿರೀಕ್ಷೆ ಬಿಜೆಪಿಯದ್ದು. ಬಜೆಟ್ ಅಧಿವೇಶನಕ್ಕೆ ಇನ್ನೂ 15 ದಿನವಿದೆ. ಫೆ. 6ರಿಂದ ಬಜೆಟ್ ಅಧಿವೇಶನ ನಡೆಯಲಿದ್ದು, ಈ ಅವಧಿಯ ಒಳಗಡೆ ಅವಿಶ್ವಾಸ ನಿರ್ಣಯ ಮಂಡಿಸುವ ವೇಳೆ ಸಂಖ್ಯಾ ಬಲವಿಲ್ಲದೇ ಸರ್ಕಾರ ಪತನವಾಗಲಿದೆ ಎನ್ನುವ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ ಎನ್ನಲಾಗಿದೆ. ಇತ್ತ ಹರಿಯಾಣದ ರೆಸಾರ್ಟ್ ನಲ್ಲಿ ಉಳಿದುಕೊಂಡಿರುವ ಬಿಜೆಪಿ ಶಾಸಕರು ಇವತ್ತು ಬೆಂಗಳೂರಿಗೆ ವಾಪಸ್ ಆಗುವ ಸಾಧ್ಯತೆ ಇದೆ.

    ಪ್ಲಾನ್ ಬಿ ಏನು?
    1. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ರಾಜ್ಯಪಾಲರಿಗೆ ದೂರು ಸಾಧ್ಯತೆ
    2. ಈ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಬಹುಮತ ಸಾಬೀತಿಗೆ ಸೂಚಿಸುವಂತೆ ರಾಜ್ಯಪಾಲರಿಗೆ ದುಂಬಾಲು ಸಾಧ್ಯತೆ
    3. ಭಾನುವಾರ ಅಥವಾ ಸೋಮವಾರ ರಾಜ್ಯಪಾಲರನ್ನ ಭೇಟಿಯಾಗಿ ಬಿಜೆಪಿ ನಿಯೋಗದಿಂದ ದೂರು ನಿರೀಕ್ಷೆ
    4. ಬಂಡೆದ್ದಿರುವ ನಾಲ್ವರು ಕಾಂಗ್ರೆಸ್ ಶಾಸಕರು ಇವತ್ತೇ ರಾಜೀನಾಮೆ ಕೊಡ್ತಾರಾ ಎಂಬುದೇ ಯಕ್ಷ ಪ್ರಶ್ನೆ
    5. ಶಾಸಕರು ರಾಜೀನಾಮೆ ಕೊಟ್ಟರೆ ಆಗ ಸರ್ಕಾರ ಬಹುಮತ ಇಲ್ಲ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಬಹುದು


    6. ನಾಲ್ವರು ಶಾಸಕರು ರಾಜೀನಾಮೆ ಕೊಟ್ಟರೆ 3ನೇ ಹಂತದಲ್ಲಿ ಇನ್ನಷ್ಟು ಶಾಸಕರಿಂದ ರಾಜೀನಾಮೆ ಕೊಡಿಸಬಹುದು
    7. ಬಹುಮತ ಯಾಚನೆ ವೇಳೆ ಶಾಸಕರಿಗೆ ಪಕ್ಷದಿಂದ ವಿಪ್ ಜಾರಿ ಆಗುತ್ತೆ, ಆಗ ಅಡ್ಡ ಮತದಾನಕ್ಕೆ ಅವಕಾಶವಿಲ್ಲ
    8. ಒಂದು ವೇಳೆ ವಿಪ್ ಉಲ್ಲಂಘಿಸಿ ಪಕ್ಷಕ್ಕೆ ವಿರುದ್ಧವಾಗಿ ಮತ ಹಾಕಿದ್ರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿ ಅನರ್ಹ
    9. ಶಾಸಕರು ಅನರ್ಹಗೊಂಡು 6 ವರ್ಷ ನಿಷೇಧಕ್ಕೆ ಒಳಗಾದರೂ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡುವ ಭರವಸೆ

    ಪಕ್ಷಾಂತರ ಕಾಯ್ದೆ ಏನು ಹೇಳುತ್ತೆ?
    ಪಕ್ಷಾಂತರ ನಿಷೇಧ ಕಾಯ್ದೆಯಡಿ ಪಕ್ಷದ ಆದೇಶ ಉಲ್ಲಂಘಿಸಿದರೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತೆಗೆದು ಹಾಕಬಹುದು. ಆಗ ಸಹಜವಾಗಿಯೇ ಶಾಸಕರು ಅನರ್ಹರಾಗುತ್ತಾರೆ. ಅನರ್ಹ ಶಾಸಕರು ವಿಧಾನಸಭೆ ಅವಧಿ ಮುಗಿಯುವವರೆಗೆ ಬೇರೆ ಪಕ್ಷಕ್ಕೆ ಸೇರುವಂತಿಲ್ಲ. ಹಾಲಿ ವಿಧಾನಸಭೆ ಅವಧಿ ಮುಗಿಯುವವರೆಗೂ ಉಪ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ. ಅನರ್ಹಗೊಂಡ ಶಾಸಕರು ಮಂತ್ರಿ ಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದುವಂತಿಲ್ಲ.

    ಅನರ್ಹಗೊಂಡ ದಿನದಿಂದ ಅವರ ಶಾಸಕತ್ವ ಅವಧಿ ಯಾವಾಗ ಮುಗಿಯುತ್ತೋ ಅಲ್ಲಿವರೆಗೆ ಹುದ್ದೆಗಳನ್ನು ಹೊಂದುವಂತಿಲ್ಲ. ಪಕ್ಷದ ಒಟ್ಟು ಶಾಸಕರಲ್ಲಿ 2/3ರಷ್ಟು ಶಾಸಕರು ಗುಂಪಾಗಿ ಪಕ್ಷಾಂತರ ಮಾಡಿದರಷ್ಟೇ ಅನರ್ಹತೆ ಅನ್ವಯಿಸಲ್ಲ. ಶಾಸಕರನ್ನು ಅನರ್ಹಗೊಳಿಸುವ ಅಧಿಕಾರ ವಿಧಾನಸಭೆ ಸ್ಪೀಕರ್ ಕೈಯಲ್ಲಿದ್ದು, ಅನರ್ಹತೆ ಪ್ರಶ್ನಿಸಿ ಸ್ಪೀಕರ್ ಅವರಿಗೂ ಮನವಿ, ಕಾನೂನು ಹೋರಾಟವನ್ನೂ ಮಾಡಬಹುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಪತ್ನಿಗೆ ಮಾತ್ರ ಸಲಹೆ ನೀಡ್ಬೇಡಿ- ನಿತ್ಯಾನಂದ ವಿಡಿಯೋ ಸಖತ್ ವೈರಲ್

    ಪತ್ನಿಗೆ ಮಾತ್ರ ಸಲಹೆ ನೀಡ್ಬೇಡಿ- ನಿತ್ಯಾನಂದ ವಿಡಿಯೋ ಸಖತ್ ವೈರಲ್

    ಬೆಂಗಳೂರು: ಮಾಡರ್ನ್ ಸ್ವಾಮೀಜಿ ಎಂದೇ ಖ್ಯಾತರಾಗಿರೋ ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ಭಾಷಣದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ತಾಗಿ ಹರಿದಾಡುತ್ತಿದೆ.

    ಇತ್ತೀಚೆಗಷ್ಟೇ ನಿತ್ಯಾನಂದ ಅವರು ಹೆಂಡತಿ ಬಗ್ಗೆ ಉಪನ್ಯಾಸ ನೀಡಿದ್ದರು. ಈ ಉಪನ್ಯಾಸದ ವಿಡಿಯೋ ತುಣುಕೊಂದು ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ಶೇರ್ ಆಗುತ್ತಿದೆ. ಹೆಂಡತಿ ಕಾಟಕ್ಕೆ ಬೇಸತ್ತ ಗಂಡಸರು ಈ ವಿಡಿಯೋವನ್ನು ತಮ್ಮ ಸಾಮಾಜಿಕ ತಾಣಗಳಲ್ಲಿ ಅಪ್ ಲೋಡ್ ಮಾಡಿಕೊಳ್ಳುತ್ತಿದ್ದಾರೆ.

    ವಿಡಿಯೋದಲ್ಲೇ ನಿತ್ಯಾನಂದ ಹೇಳಿದ್ದೇನು?
    ಯಾವುದೇ ಕಾರಣಕ್ಕೂ ಹೆಂಡತಿಗೆ ಸಲಹೆ ಕೊಡಲು ಹೋಗಬೇಡಿ. ಬೇರೆ ಯಾರಿಗೆ ಬೇಕಾದ್ರ ಅಡ್ವೈಸ್ ಮಾಡಿ. ಆದ್ರೆ ನಿಮ್ಮ ಪತ್ನಿಯರಿಗೆ ಮಾತ್ರ ಮಾಡಬೇಡಿ. ಇದು ನಾನು ನಿಮಗೆ ಕೊಡುತ್ತಿರುವ ಸಲಹೆ.

    ಮಹಾದೇವ ಕೂಡ ಆತನ ಹೆಂಡತಿಗೆ ಸಲಹೆ ನೀಡಲು ಸಾಧ್ಯವಾಗಿಲ್ಲ. ಮತ್ತೆ ನೀವು ಯಾಕೆ ಸಲಹೆ ಕೊಡುತ್ತೀರಿ. ಮಹಾದೇವ ಕೊನೆಗೆ ದಕ್ಷನನ್ನು ಕೊಲ್ಲಲು ವೀರಭದ್ರನನ್ನು ಕಳುಹಿಸಬೇಕಾಯಿತು. ಆದ್ರೆ ತನ್ನ ಸತಿಗೆ ಸಲಹೆ ನೀಡಲು ಆತನಿಂದ ಸಾಧ್ಯವಾಗಿಲ್ಲ. ಹೀಗಾಗಿ ಸರಿಯಾಗಿ ಅರ್ಥ ಮಾಡಿಕೊಳ್ಳಿ. ಪತ್ನಿಯನ್ನು ಮನವೊಲಿಸಲು ನಿಮ್ಮಿಂದ ಮಾತ್ರವಲ್ಲ ಮಹಾದೇವನಿಂದಲೂ ಸಾಧ್ಯವಾಗಿಲ್ಲ ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ.

    ಇದೀಗ ಗಂಡಂದಿರುವ ವಿಡಿಯೋವನ್ನು ವಾಟ್ಸಾಪ್ ಮೂಲಕ ತಮ್ಮ ಪತ್ನಿಯಂದಿರಿಗೆ ಕಳುಹಿಸಿ ನೋಡಿ ಅಂತ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಿತ್ಯಾನಂದರ ಈ ವಿಡಿಯೋಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.

    2.39 ನಿಮಿಷದ ವಿಡಿಯೋದಲ್ಲಿ 1.56 ಸೆಕೆಂಡ್ ನಿಂದ ಪತ್ನಿಗೆ ಸಲಹೆ ನೀಡ್ಬೇಡಿ ಎಂಬ ವಿಚಾರ ಪ್ರಸ್ತಾಪವಾಗಿದೆ.

    https://www.youtube.com/watch?v=WxG81DHBfq4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜ್ಞಾನ ಪುಸ್ತಕಕ್ಕೆ ಸಿಮೀತವಾಗದೆ ಸಮಾಜಕ್ಕೆ ಕೊಡುಗೆ ನೀಡಬೇಕು: ರಾಮನಾಥ್ ಕೋವಿಂದ್

    ಜ್ಞಾನ ಪುಸ್ತಕಕ್ಕೆ ಸಿಮೀತವಾಗದೆ ಸಮಾಜಕ್ಕೆ ಕೊಡುಗೆ ನೀಡಬೇಕು: ರಾಮನಾಥ್ ಕೋವಿಂದ್

    ರಾಮನಗರ: ಬಿಡದಿ ಸಮೀಪದ ಅಮೃತ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಸೈನ್ಸ್ ಕಾಲೇಜಿನ ನೂತನ ಕ್ಯಾಂಪಸ್ ಕಟ್ಟಡ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ 111 ನೇ ವಾರ್ಷಿಕೋತ್ಸವ ಕಾರ್ಯಕ್ರಮವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಿದರು.

    ಬಿಡದಿಯ ತಿಮ್ಮೇಗೌಡನದೊಡ್ಡಿ ಬಳಿಯಿರುವ ಕಾಲೇಜು ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ರಾಷ್ಟ್ರಪತಿಗಳು, ವಿದ್ಯಾರ್ಥಿಗಳು ರಾಷ್ಟ್ರದ ಭವಿಷ್ಯ ರೂಪಿಸುವ ಶಕ್ತಿಯಾಗಿದ್ದು, ತಾಂತ್ರಿಕ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು, ಉದ್ಯೋಗವನ್ನು ಅರಸದೇ ಉದ್ಯೋಗ ಸೃಷ್ಠಿಸುವ ಶಕ್ತಿಯಾಗಿ ರೂಪುಗೊಳ್ಳಬೇಕು. ಜ್ಞಾನ ಎಂಬುದು ಪುಸ್ತಕಕ್ಕೆ ಸೀಮಿತವಾಗದೆ ಜ್ಞಾನವನ್ನು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು. ರಾಷ್ಟ್ರ ಕಟ್ಟುವ ಕೆಲಸಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಕರೆ ನೀಡಿದರು.

     

    ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಇತಿಹಾಸದಲ್ಲಿಯೇ ಮೊದಲ ಸಂಸತ್‍ನ್ನು ರಚಿಸಿದ ಬಸವಣ್ಣನವರ ಕೊಡುಗೆಯಾಗಿ ಬಸವೇಶ್ವರ ವಿದ್ಯಾವರ್ಧಕ ಸಂಘವು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಿದೆ ಎಂದು ತಿಳಿಸಿದರು. ಇನ್ನು ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ, ಸಂಸದ ಡಿ.ಕೆ ಸುರೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

  • ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ರಾಸಲೀಲೆ ಪ್ರಕರಣದಲ್ಲಿ ನಿತ್ಯಾನಂದ ಸ್ವಾಮಿಗೆ ಸಂಕಷ್ಟ

    ಬೆಂಗಳೂರು: ಬಿಡದಿ ಧ್ಯಾನಪೀಠ ಮಠದ ನಿತ್ಯಾನಂದ ಸ್ವಾಮಿಗೆ 7 ವರ್ಷ ಹಿಂದಿನ ರಾಸಲೀಲೆ ಪ್ರಕರಣದಲ್ಲಿ ಸಂಕಷ್ಟ ಎದುರಾಗಿದೆ.

    2010ರಲ್ಲಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿರುವುದು ನಿತ್ಯಾನಂದ ಸ್ವಾಮಿಯೇ ಎಂಬುದು ಇದೀಗ ಖಚಿತವಾಗಿದೆ. ಸ್ವಾಮಿ ನಿತ್ಯಾನಂದ ಅವರೇ ರಾಸಲೀಲೆ ಸಿಡಿಯಲ್ಲಿರೋದು ಅನ್ನೋ ವಿಚಾರವನ್ನು ದೆಹಲಿಯ ವಿಧಿವಿಜ್ಞಾನ ಪ್ರಯೋಗಾಲಯ(ಎಫ್‍ಎಸ್‍ಎಲ್) ವರದಿ ದೃಢಪಡಿಸಿದೆ. ಈಗ ಇದೇ ಎಫ್‍ಎಸ್‍ಎಲ್ ವರದಿ ನ್ಯಾಯಾಲಯದಲ್ಲಿ ಪ್ರಮುಖ ಸಾಕ್ಷಿಯಾಗಲಿದೆ.

    2010ರಲ್ಲಿ ಅಂದಿನ ಸಿಐಡಿ ಡಿವೈಎಸ್‍ಪಿ ಚರಣ್ ರೆಡ್ಡಿ ಈ ವರದಿ ಸಲ್ಲಿಕೆ ಮಾಡಿದ್ದರು. ಸಿಐಡಿ ಸಿಡಿಯಲ್ಲಿರುವುದು ನಿತ್ಯಾನಂದ ಎಂದು ಖಚಿತ ಪಡಿಸಿಕೊಳ್ಳಲು ಸಿಡಿಯನ್ನ ದೆಹಲಿಯ ಎಫ್‍ಎಸ್‍ಎಲ್‍ಗೆ ಕಳುಹಿಸಲಾಗಿತ್ತು. ಆ ಸಂದರ್ಭದಲ್ಲಿ ಸಿಡಿಯಲ್ಲಿರುವುದು ನಾನಲ್ಲ ಅಂತ ನಿತ್ಯಾನಂದ ಸ್ವಾಮಿ ವಾದ ಮಂಡಿಸಿದ್ದರು. ಆದರೆ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದಿದ್ದು, ಸಿಡಿಯಲ್ಲಿರುವುದು ನಿತ್ಯಾನಂದ ಅವರೇ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಸಿಕ್ಕಿದಂತಾಗಿದೆ.

    ಇದರಿಂದಾಗಿ ಪ್ರಕರಣದಲ್ಲಿ ನಿತ್ಯಾನಂದಗೆ ಶಿಕ್ಷೆಯಾಗುವ ಸಾಧ್ಯತೆ ಹೆಚ್ಚಿದ್ದು, ಇದೀಗ ಸ್ವಾಮೀಜಿ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

    ವಿಶ್ವಾದಾದ್ಯಂತ ಸ್ವಾಮಿ ನಿತ್ಯಾನಂದ ಅವರಿಗೆ ಲಕ್ಷಾಂತರ ಮಂದಿ ಭಕ್ತಾದಿಗಳಿದ್ದು, 2010ರಲ್ಲಿ ಸ್ವಾಮೀಜಿ ತಮಿಳು ನಟಿಯೊಂದಿಗೆ ರಾಸಲೀಲೆಯಲ್ಲಿ ತೊಡಗಿದ್ದಾರೆಂಬ ಸುದ್ದಿ ವಿಶ್ವದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಲು ಆದೇಶ ನೀಡಿತ್ತು.

  • ಬಿಗ್ ಬಾಸ್ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಐಟಿ ದಾಳಿ

    ಬಿಗ್ ಬಾಸ್ ನಡೆಯುತ್ತಿರುವ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಐಟಿ ದಾಳಿ

    ರಾಮನಗರ: ಇಲ್ಲಿನ ಬಿಡದಿ ಸಮೀಪ ಇರೋ ಇನ್ನೋವೇಟಿವ್ ಫಿಲಂ ಸಿಟಿ ಮೇಲೆ ಇಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಪ್ರತಿಷ್ಠಿತ ಮನರಂಜನಾ ತಾಣಗಳಲ್ಲಿ ಒಂದಾಗಿರುವ ಫಿಲಂ ಸಿಟಿ ಮೇಲೆ ಈ ದಾಳಿ ನಡೆದಿದ್ದು, 5 ಕ್ಕೂ ಹೆಚ್ಚು ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಅಧಿಕಾರಿಗಳು ಫಿಲಂ ಸಿಟಿಯ ಸಿಇಓ ಉಪಾಸನರವರ ವಿಚಾರಣೆ ನಡೆಸಿದ್ದಾರೆ.

    ಸುಮಾರು 500 ಎಕರೆ ಪ್ರದೇಶದಲ್ಲಿ ಫಿಲಂ ಸಿಟಿಯನ್ನು ನಿರ್ಮಾಣ ಮಾಡಲಾಗಿದೆ. ಕನ್ನಡದ ಆರಂಭದ ಎರಡು ಬಿಗ್ ಬಾಸ್ ರಿಯಾಲಿಟಿ ಶೋ ಲೋನಾವಾಲದಲ್ಲಿ ನಡೆದಿದ್ದರೆ, ನಂತರ ಆಯೋಜನೆಗೊಂಡ ಎಲ್ಲ ಶೋಗಳು ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ನಡೆದಿತ್ತು.