Tag: ಬಿಟ್ ಕಾಯಿನ್ ಹಗರಣ

  • ಹ್ಯಾಕರ್ ಶ್ರೀಕಿ ಪೊಲೀಸರಿಗಿಂತ ಬಹಳ ಬುದ್ಧಿವಂತ: ಗೃಹ ಸಚಿವ

    ಹ್ಯಾಕರ್ ಶ್ರೀಕಿ ಪೊಲೀಸರಿಗಿಂತ ಬಹಳ ಬುದ್ಧಿವಂತ: ಗೃಹ ಸಚಿವ

    ಚಿಕ್ಕಬಳ್ಳಾಪುರ: ಬಿಟ್ ಕಾಯಿನ್ ಹಗರಣದಲ್ಲಿ ಆರೋಪಿತನಾಗಿದ್ದ ಹ್ಯಾಕರ್ ಶ್ರೀಕಿ ಪೊಲೀಸರಗಿಂತ ಬಹಳ ಬುದ್ಧಿವಂತ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟಿದ್ದಾರೆ.

    ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಂತರ ಉತ್ತಮ ಕೆಲಸ ಮಾಡಿದ ಸಿಬ್ಬಂದಿಗೆ ಪ್ರಶಸ್ತಿ ಪ್ರದಾನ ಮಾಡುವ ವೇಳೆ ಮಾತನಾಡಿದ ಅವರು, ಶ್ರೀಕಿ ಅರೆಸ್ಟ್ ಆಗೋವರೆಗೂ ಅಂತ ತುಂಬಾ ಬುದ್ಧಿವಂತ ಎಂಬುದು ನಮಗೆ ಗೊತ್ತಿರಲಿಲ್ಲ. ಈ ವಿಚಾರ ಆತ ಆರೆಸ್ಟ್‌ ಆದ ನಂತರವೇ ತಿಳಿಯಿತು. ಆದರೆ ಬುದ್ಧಿವಂತಿಕೆಯಲ್ಲಿ ಆತನಿಗಿಂತ ನಮ್ಮ ಪೊಲೀಸರು ಮುಂದೆ ಇರಬೇಕು. ಅಂತಹ ತಂತ್ರಜ್ಞರು ಪೊಲೀಸ್ ಇಲಾಖೆಗೆ ಅಗತ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೋಕರ್ ವೆಬ್‍ಸೈಟ್ ಹ್ಯಾಕ್ – ಕೋಟ್ಯಂತರ ಹಣ ಮಾಡಿದ್ದ ಕುಖ್ಯಾತ ಹ್ಯಾಕರ್ ಅರೆಸ್ಟ್

    ಈ ವೇಳೆ ನಮ್ಮ ಇಲಾಖೆಯಲ್ಲಿ ಯಾರಾದರೂ ಅಂತಹವರು ಇದ್ದಾರಾ ಅಂತ ಕೇಂದ್ರ ವಲಯ ಐಜಿಪಿಯನ್ನು ಕೇಳಿದರು. ಅಂತಹವರು ಇಲಾಖೆಯಲ್ಲಿ ಇಲ್ಲ, ಹೊರಗೆ ಇದ್ದಾರೆ ಎಂದು ಐಜಿಪಿ ಉತ್ತರಿಸಿದರು. ನಂತರ ಮಾತನಾಡಿದ ಸಚಿವರು, ಪೊಲೀಸ್ ಇಲಾಖೆಯಲ್ಲಿ ಅಂತಹ ನಿಪುಣರ ಅವಶ್ಯಕತೆ ಇದೆ. ಅಂತಹವರನ್ನು ತಯಾರು ಮಾಡಬೇಕು ಎಂದು ತಿಳಿಸಿದ್ದಾರೆ.

    ಶ್ರೀಕೃಷ್ಣ (ಶ್ರೀಕಿ) ಬೆಂಗಳೂರಿನ ನಿವಾಸಿಯಾಗಿದ್ದು, 2014 ರಿಂದ 2017ರವರೆಗೆ ಈತ ನೆದರ್‌ಲ್ಯಾಂಡ್‌ ಆಮ್‌ಸ್ಟರ್‌ಡ್ಯಾಮ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‍ಸಿ ಪದವಿ ಪಡೆದ ಬಳಿಕ ವೆಬ್‍ಸೈಟ್ ಹ್ಯಾಕ್ ಮಾಡಲು ಆರಂಭಿಸಿದ್ದ. ಆರಂಭದಲ್ಲಿ ಸಣ್ಣ ಪಟ್ಟ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಅನುಭವ ಪಡೆದ ಬಳಿಕ ದೊಡ್ಡ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿ ಇದನ್ನೇ ಉದ್ಯೋಗ ಮಾಡಿಕೊಂಡಿದ್ದ. ಇದನ್ನೂ ಓದಿ: ಹ್ಯಾಕಿಂಗ್‌ ಮಾಡಲು ಏಕಾಗ್ರತೆ ಬೇಕು, ಅದಕ್ಕಾಗಿ ಭಗವದ್ಗೀತೆ ಓದುತ್ತೇನೆ – ಹ್ಯಾಕರ್‌ ಶ್ರೀಕಿ

    ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ಆತ ಬಿಟ್‍ಕಾಯಿನ್ ಬಳಸಿ ಹಣವನ್ನು ಪಡೆಯುತ್ತಿದ್ದ. ಈ ಎಲ್ಲ ಕೆಲಸಕ್ಕೆ ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ. ಡಾರ್ಕ್ ವೆಬ್ ಬಳಕೆ ಮಾಡುತ್ತಿದ್ದ ಕಾರಣ ಈತನ ಮಾಹಿತಿಗಳು ಸಿಗುತ್ತಿರಲಿಲ್ಲ. ಬಿಟ್ ಕಾಯಿನ್ ಮೂಲಕ ಡ್ರಗ್ಸ್ ತರಿಸಿಕೊಂಡು ಬೇಕಾದ ವ್ಯಕ್ತಿಗಳಿಗೆ ನೀಡುತ್ತಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

  • ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ನವದೆಹಲಿ: ಬಸವರಾಜ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ. ಬಹುಕೋಟಿ ಹಗರಣದಲ್ಲಿ ಕರ್ನಾಟಕ ಸರ್ಕಾರವೇ ಭಾಗಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಗಂಭೀರ ಆರೋಪ ಮಾಡಿದ್ದಾರೆ.

    ದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಬಳಿಕದ ಅತಿದೊಡ್ಡ ಹಗರಣ ಇದಾಗಿದೆ. ಒಂದು ಕಾಯಿನ್ ಬೆಲೆ 51 ಲಕ್ಷ ರೂ. ಇದೆ. ಕರ್ನಾಟಕ ಸರ್ಕಾರ ಕೂಡ ಈ ಹಗರಣದಲ್ಲಿ ಭಾಗಿಯಾಗಿದೆ. ಇಷ್ಟು ದೊಡ್ಡ ಹಗರಣ ನಡೆದರೂ ಇಂಟರ್ ಪೋಲ್, ಎನ್‍ಐಎ, ಇಡಿ ಎಲ್ಲವೂ ಸುಮ್ಮನೆ ಇವೆ. ಇದೆಲ್ಲವನ್ನೂ ಗಮನಿಸಿದರೆ ಸರ್ಕಾರ ಹಗರಣವನ್ನು ಮುಚ್ಚಿಡುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ್ದಾರೆ.

    ಈ ಹಗರಣದಲ್ಲಿ ತನಿಖಾ ಸಂಸ್ಥೆಗಳ ದಾರಿ ತಪ್ಪಿಸಲಾಗುತ್ತಿದೆ. ನವೆಂಬರ್ 14ರಂದು ಹ್ಯಾಕರ್ ಶ್ರೀಕಿ ಬಂಧನವಾಗಿತ್ತು. ಆಗ ಶ್ರೀಕಿ ತಾನು ಕದ್ದಿದ್ದ ಒಂದು ಬಿಟ್ ಕಾಯಿನ್ ವರ್ಗಾವಣೆ ಮಾಡಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿ ಇದೆಲ್ಲ ನಡೆಯಲು ಹೇಗೆ ಸಾಧ್ಯ? 5,240 ಕೋಟಿ ಮೊತ್ತದ ಬಿಟ್ ಕಾಯಿನ್ ವರ್ಗಾವಣೆ ಆಗಿದೆ. ಅಧಿಕಾರದಲ್ಲಿ ಇರುವವರ ಪಾತ್ರದ ಬಗ್ಗೆ ಅನುಮಾನ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

    ಇಷ್ಟು ದೊಡ್ಡ ಹಗರಣ ನಡೆದರೂ ಕರ್ನಾಟಕ ಸರ್ಕಾರ ಯಾಕೆ ಸುಮ್ಮನಿದೆ. ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ಅವರು ಏಕೆ ಮೌನವಹಿಸಿದ್ದಾರೆ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಸಿಎಂಗೆ ಪ್ರಧಾನಿ ಯಾಕೆ ಹೇಳಿದ್ದಾರೆ ಎಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.

    ಕರ್ನಾಟಕ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ ಆಡಳಿತ ಹಾಗೂ ಪ್ರತಿಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ.

  • ಬಿಟ್ ಕಾಯಿನ್ ಹಗರಣದಲ್ಲಿ ನನ್ನ ಹೆಸ್ರು ಬೇಕಾದ್ರೆ ಹೇಳಲಿ: ಡಿ.ಕೆ ಶಿವಕುಮಾರ್

    ಬಿಟ್ ಕಾಯಿನ್ ಹಗರಣದಲ್ಲಿ ನನ್ನ ಹೆಸ್ರು ಬೇಕಾದ್ರೆ ಹೇಳಲಿ: ಡಿ.ಕೆ ಶಿವಕುಮಾರ್

    ಬೆಂಗಳೂರು: ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಕೂಡ ಇದ್ದಾರೆ ಎಂಬ ಬಿಜೆಪಿ ಆರೋಪಕ್ಕೆ, ನನ್ನ ಹೆಸರನ್ನು ಕೂಡ ಹೇಳಲಿ ಯಾರು ಬೇಡ ಎನ್ನುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

    ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಭಾರೀ ಚರ್ಚೆಯಾಗುತ್ತಿದ್ದು, ಆರೋಪಿ ಶ್ರೀಕಿ ಒಂದಷ್ಟು ಹೆಸರುಗಳನ್ನು ಬಹಿರಂಗ ಪಡಿಸಿದ್ದಾರೆ. ಅವುಗಳಲ್ಲಿ ಉಮರ್ ನಲಪಾಡ್ ಹೆಸರು ರಿವೀಲ್ ಆಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲಾ ಹೆಸರು ಹೇಳುತ್ತಿರುವುದು ಓಲ್ಡ್ ಕೇಸ್, ಓಲ್ಡ್ ಸ್ಟೋರಿ. ಮೂರು ವರ್ಷದ ಹಳೆಯ ಪ್ರಕರಣವನ್ನ ಈಗ ಮುನ್ನಲೆಗೆ ತಂದಿದ್ದಾರೆ. ಆದರೆ ಅದನ್ನು ಬಿಟ್ಟಾಕಿ ಈಗೀನ ಸುದ್ದಿ ಬಗ್ಗೆ ಮಾತನಾಡಿ, ನಾವು ದಾಖಲೆಗಳನ್ನ ಸಂಗ್ರಹಿಸುತ್ತಿದ್ದೇವೆ. ಎಲ್ಲಾ ದಾಖಲೆ ಸಿಕ್ಕ ಮೇಲೆ ಮಾತನಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಯಾವುದೇ ಕಾಯಿನ್ ವಿಚಾರಕ್ಕೂ, ನನ್ನ ಮಗನಿಗೂ ಸಂಬಂಧ ಇಲ್ಲ: ಎನ್.ಎ.ಹ್ಯಾರಿಸ್

    ದಾಖಲೆಯನ್ನು ಬಿಡುಗಡೆಗೊಳಿಸುವ ಮೊದಲು ಕಾಂಗ್ರೆಸ್ ನಾಯಕರು ಚಿಂತೆ ಮಾಡಬೇಕು ಎಂಬ ಬಿಜೆಪಿ ಅವರ ಹೇಳಿಕೆಗೆ, ನಾನು ಚಿಂತೆ ಮಾಡುತ್ತಾ ಇರುತ್ತೇನೆ. ನನ್ನ ಹೆಸರನ್ನು ಬೇಕಾದರೂ ಹೇಳಲಿ ಯಾರು ಬೇಡ ಅಂತಾರೆ. ಇದನ್ನು ದಾಖಲೆ ಸಹಿತ ಹೊರ ತರುವುದು ಬಾರ್ನ್ ಡ್ಯೂಟಿ ಆಫ್ ಎವರಿ ಪೊಲಿಟೀಶಿಯನ್ ಸಿಎಂ, ಎಕ್ಸ್ ಸಿಎಂ, ವೈ, ಜೆಡ್ ಎಲ್ಲರದಾಗಿದೆ. ಲಮಾಣಿ ಮಗನ ಬೋಗಸ್ ಡ್ರಗ್ಸ್ ಕೇಸಲ್ಲಿ ಸಿಕ್ಕಿಹಾಕಿಸಿ ಈಗ ಪೊಲಿಕಲ್ ಕರಿಯರ್ ಡ್ಯಾಮೇಜ್ ಮಾಡಬೇಕು ಅಂದುಕೊಂಡರೆ ಯಾರೂ ಯಾವ ಡ್ಯಾಮೇಜ್ ಕೂಡ ಮಾಡಲು ಆಗುವುದಿಲ್ಲ. ಸತ್ಯ ಹೊರ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – ಹ್ಯಾರಿಸ್, ಲಮಾಣಿ ಪುತ್ರರ ಹೆಸರು ಹೇಳಿರೋ ಹ್ಯಾಕರ್ ಶ್ರೀಕಿ