Tag: ಬಿಟ್‌ ಕಾಯಿನ್‌ ಕೇಸ್‌

  • ಬಿಟ್‌ಕಾಯಿನ್‌ ಕೇಸ್‌ ತನಿಖೆ IPS ಅಧಿಕಾರಿ ಬುಡಕ್ಕೆ – ಸಂದೀಪ್ ಪಾಟೀಲ್‌ಗೆ ನೋಟಿಸ್!

    ಬಿಟ್‌ಕಾಯಿನ್‌ ಕೇಸ್‌ ತನಿಖೆ IPS ಅಧಿಕಾರಿ ಬುಡಕ್ಕೆ – ಸಂದೀಪ್ ಪಾಟೀಲ್‌ಗೆ ನೋಟಿಸ್!

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪೊಲೀಸರೇ ಹಗರಣದ ದಿಕ್ಕು ತಪ್ಪಿಸಿದ್ದಲ್ಲದೇ ಬಿಟ್‌ಕಾಯಿನ್ ಹಗರಣದಲ್ಲಿ (Bit Coin Case) ಭಾಗಿಯಾಗಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಕಾಂಗ್ರೆಸ್ ಸರ್ಕಾರ (Congress Government) ಬಿಟ್‌ಕಾಯಿನ್‌ ತನಿಖೆಯ ಹೊಣೆಯನ್ನು ಎಸ್‌ಐಟಿ ವಹಿಸಿದ್ದು, ಇದೀಗ ಬಿಟ್‌ಕಾಯಿನ್‌ ತನಿಖೆ ಹಿರಿಯ ಐಪಿಎಸ್ ಅಧಿಕಾರಿಯ ವಿಚಾರಣೆ ಹಂತಕ್ಕೆ ತಲುಪಿದೆ.

    ಬಿಟ್‌ಕಾಯಿನ್ (Bit Coin) ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ. ಈತನನ್ನು ಸಿಸಿಬಿ ಅಧಿಕಾರಿಗಳು (CCB Officers) ಪದೇ ಪದೇ ವಿಚಾರಣೆ ನಡೆಸಿದ್ದಾರೆ. ಎಸ್‌ಐಟಿ ಸಹ ತನಿಖೆಯ ಜವಾಬ್ದಾರಿ ವಹಿಸಿದ ಮೇಲೆ ಶ್ರೀಕಿಯ ವಿಚಾರಣೆಯನ್ನು ಮಾಡಿತ್ತು. ಇದೀಗ ಬಿಟ್‌ಕಾಯಿನ್ ಹಗರಣ ತನಿಖೆಗೆ ಹಾಜರಾಗುವಂತೆ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ಗೆ ಎಸ್‌ಐಟಿ ನೊಟೀಸ್ ನೀಡಿದೆ.

    ಇನ್ನೂ ಬಿಟ್‌ಕಾಯಿನ್ ಹಗರಣದ ತನಿಖೆ ಎಸ್‌ಐಟಿ ಕೈಗೊಳ್ಳುತ್ತಿದ್ದಂತೆ ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು, ಸಂತೋಷ್‌ರನ್ನು ವಿಚಾರಣೆ ಮಾಡಿ ಬಂಧಿಸಲಾಗಿತ್ತು. ಈ ಹಗರಣ ನಡೆದ ವೇಳೆ ಸಿಸಿಬಿಯ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ಗೂ ಹಲವು‌ ಮಾಹಿತಿಗಳು ನೀಡಲಾಗಿತ್ತು ಎನ್ನಲಾಗಿದೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವ್ಳು ಪರಪುರುಷನ ಜೊತೆ ಡೇಟಿಂಗ್- ರೊಚ್ಚಿಗೆದ್ದ ಪತಿ ಮಚ್ಚಿನಿಂದ ಅಟ್ಯಾಕ್

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್‌ ಅವರ ಹೇಳಿಕೆ ಪಡೆಯುವ ಉದ್ದೇಶದಿಂದ ನೊಟೀಸ್ ನೀಡಲಾಗಿದೆ. ಬಿಟ್‌ಕಾಯಿನ್‌ನ ಸತ್ಯಾಂಶ ಏನು ಅನ್ನೋದು ಹೊರಬರಬೇಕಿದೆ. ಇದನ್ನೂ ಓದಿ: 84,000 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದು ಕಣ್ಣೀರಿಟ್ಟ ಮಹಿಳಾ ಅಧಿಕಾರಿ