Tag: ಬಿಟ್ಟಾ ಕರಾಟೆ

  • ಉಗ್ರ ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರು ವಜಾ

    ಉಗ್ರ ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರು ವಜಾ

    ಶ್ರೀನಗರ: ಭಯೋತ್ಪಾದಕ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಬಿಟ್ಟಾ ಕರಾಟೆಯ ಪತ್ನಿ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ಸೇವೆಯಿಂದಲೇ ವಜಾಗೊಳಿಸಿದೆ.

    ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನಿರ್ದೇಶನದ ಮೇರೆಗೆ ಶನಿವಾರ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದೆ. ಭಯೋತ್ಪಾದಕರ ಸಂಪರ್ಕವನ್ನು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬಿಟ್ಟಾ ಕರಾಟೆಯ ಪತ್ನಿ, ಹಿಜ್ಬುಲ್ ಮುಜಾಹಿದ್ದೀನ್‌ನ ಸೈಯದ್ ಸಲಾವುದ್ದೀನ್ ಪುತ್ರ ಸೇರಿದಂತೆ ನಾಲ್ವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಇನ್ನಿಬ್ಬರು ಮಾಜಿ ಎಲ್‌ಇಟಿ ಭಯೋತ್ಪಾದಕ ಮತ್ತು ಕಾಶ್ಮೀರ ವಿಶ್ವವಿದ್ಯಾಲಯದ ವಿಜ್ಞಾನಿಯಾಗಿದ್ದ ಸಹಾಯಕ ಪ್ರಾಧ್ಯಾಪಕರು ಸೇರಿದ್ದಾರೆ. ಈ ಎಲ್ಲಾ ಸರ್ಕಾರಿ ನೌಕರರು ರಾಜ್ಯದ ಹಿತಾಸಕ್ತಿಗಳಿಗೆ ಹಾನಿ ಉಂಟಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಡಾ. ಮುಹೀತ್ ಅಹ್ಮದ್ ಭಟ್- ಕಾಶ್ಮೀರ ವಿವಿಯ ಕಂಪ್ಯೂಟರ್ ಸೈನ್ಸ್‌ನ ಸ್ನಾತಕೋತ್ತರ ವಿಭಾಗದಲ್ಲಿ ವಿಜ್ಞಾನಿ ಆಗಿದ್ದಾನೆ. ಈತ ಪಾಕಿಸ್ತಾನ ಹಾಗೂ ಅದರ ಕೆಲ ಕಾರ್ಯಗಳನ್ನು ಮುಂದಕ್ಕೆ ತರಲು ವಿದ್ಯಾರ್ಥಿಗಳನ್ನು ಆಮೂಲಾಗ್ರಗೊಳಿಸುವ ಮೂಲಕ ಕಾಶ್ಮೀರಿ ವಿವಿಯಲ್ಲಿ ಪ್ರತ್ಯೇಕವಾದು ಭಯೋತ್ಪಾದಕ ಅಜೆಂಡಾವನ್ನು ಪ್ರಚಾರ ಮಾಡುವ ಕೆಲಸದಲ್ಲಿ ತೊಡಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಅರೆಸ್ಟ್ ಮಾಡೋ ಭಯ – ಅಗ್ನಿಪಥ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಆತ್ಮಹತ್ಯೆ

    ಮಾಜಿದ್ ಹುಸೇನ್ ಖಾದ್ರಿ- ಜಮ್ಮು ಕಾಶ್ಮೀರ ವಿಶ್ವ ವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಹಿರಿಯ ಸಹಾಯಕ ಪ್ರೊಫೆಸರ್ ಆಗಿರುವ ಈತ ಎಲ್‌ಇಟಿ ಸೇರಿದಂತೆ ಅನೇಕ ಭಯೋತ್ಪಾದಕ ಸಂಘಟನೆಗಳೊಂದಿಗೆ ಸುದೀರ್ಘ ಸಂಬಂಧವನ್ನು ಹೊಂದಿದ್ದಾನೆ. ಈ ಹಿಂದೆಯೂ ಸಹ ಈತನ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿ ಪ್ರಕರಣ ದಾಖಲಾಗಿತ್ತು.

    ಸೈಯದ್ ಅಬ್ದುಲ್ ಮುಯೀದ್- ಜೆಕೆಇಡಿಐನ ಐಟಿ ಮ್ಯಾನೇಜರ್ ಆಗಿದ್ದಾನೆ. 3 ಭಯೋತ್ಪಾದಕ ದಾಳಿಗಳಲ್ಲಿ ಈತನ ಪಾತ್ರವಿದೆ ಎಂಬುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಈತನಿಂದಾಗಿ ಸಂಸ್ಥೆಯಲ್ಲಿ ಪ್ರತ್ಯೇಕತಾವಾದಿ ಕೂಗುಗಳು ಹೆಚ್ಚಾಗಿವೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಬೆಳಕು ಇಂಪ್ಯಾಕ್ಟ್‌ – ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ನಾರಾಯಣಸ್ವಾಮಿ

    ಅಸ್ಸಾಬಾ ಉಲ್ ಅರ್ಜಮಂಡ್ ಖಾನ್- ಈಕೆ ಕಾಶ್ಮೀರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾಳೆ. ಈಕೆ ಪಾಸ್‌ಪೋರ್ಟ್‌ಗಾಗಿ ತಪ್ಪು ಮಾಹಿತಿಯನ್ನು ಒದಗಿಸುವಲ್ಲಿ ತೊಡಗಿರುವುದು ಕಂಡುಬಂದಿದೆ. ಈಕೆ ಅನೇಕ ವಿದೇಶಿ ಉಗ್ರರೊಂದಿಗೆ ಸಂಪರ್ಕವನ್ನು ಹೊಂದಿರುವುದು ತಿಳಿದುಬಂದಿದೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದೇಶ ವಿರೋಧಿ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಹಣವನ್ನು ಸಾಗಿಸುವಲ್ಲಿ ಆಕೆ ತೊಡಗಿಸಿಕೊಂಡಿದ್ದಾಳೆ.

    ಅಸ್ಸಬಾ ಖಾನ್ ಯಾರಿಕೆ?: ಅಸ್ಸಬಾ ಖಾನ್ 2011ರಲ್ಲಿ ಹಿಂದೂಗಳ ನರಮೇಧದಲ್ಲಿ ತೊಡಗಿದ್ದ ಬಿಟ್ಟಾ ಕರಾಟೆಯನ್ನು ಮದುವೆಯಾಗಿದ್ದಾಳೆ. ಶ್ರೀನಗರದಲ್ಲಿ 1972ರಲ್ಲಿ ಜನಿಸಿದ್ದ ಫರೂಕ್ ಅಹ್ಮದ್ ದಾರ್ ಅಡ್ಡ ಹೆಸರು ಬಿಟ್ಟಾ. ಸಮರ ಕಲೆಗಳಲ್ಲಿ ಪಾಂಡಿತ್ಯ ಪಡೆದಿದ್ದರಿಂದ ಇತನಿಗೆ ಕರಾಟೆ ಎಂಬ ಹೆಸರು ಬಂದಿದೆ. ಈ ಕಾರಣಕ್ಕೆ ಈತ ಬಿಟ್ಟ ಕರಾಟೆ ಎಂದು ಫೇಮಸ್ ಆಗಿದ್ದಾನೆ. 1990ರ ದಶಕದಲ್ಲಿ ಕಣಿವೆ ರಾಜ್ಯದಲ್ಲಿ ಪಂಡಿತರ ಮೇಲೆ ಎಸಗಿದ ಕೃತ್ಯದಿಂದ ಈತ ಕುಖ್ಯಾತನಾಗಿದ್ದಾನೆ.

    1980-1990ರಲ್ಲಿ ಈತ ಪಂಡಿತರನ್ನು ಹುಡುತ್ತಾ ಶ್ರೀನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಪಂಡಿತರೆಂದು ತಿಳಿದ ತಕ್ಷಣ ಆತ ತನ್ನಲ್ಲಿದ್ದ ಪಿಸ್ತೂಲ್‌ನಿಂದ ಗುಂಡಿಕ್ಕಿ ಕೊಲ್ಲುತ್ತಿದ್ದ. ಕನಿಷ್ಠ 20 ಕಾಶ್ಮೀರಿ ಪಂಡಿತರನ್ನು ಕೊಂದಿದ್ದೇನೆ ಎಂದು ವಿಡಿಯೋ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ. ಬಾಲ್ಯ ಸ್ನೇಹಿತ ಸತೀಶ್ ಟಿಕ್ಕೂ ಈತ ಹತ್ಯೆ ಮಾಡಿದ್ದ. ಇದು ಈತ ಹತ್ಯೆ ಮಾಡಿದ ಮೊದಲ ಪ್ರಕರಣ ಆಗಿತ್ತು.

    ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಬಿಟ್ಟಾ ಕರಾಟೆಯ ವಿರುದ್ಧ 31 ವರ್ಷದ ಹಿಂದೆ ನಡೆದ ಪ್ರಕರಣದ ವಿಚಾರಣೆ ನಡೆಸುವಂತೆ ಟಿಕ್ಕೂ ಕುಟುಂಬಸ್ಥರು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

    Live Tv
    [brid partner=56869869 player=32851 video=960834 autoplay=true]

  • ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ

    ಕಾಶ್ಮೀರ ಹತ್ಯಾಕಾಂಡ – 31 ವರ್ಷದ ಬಳಿಕ ಪಾತಕಿ ಬಿಟ್ಟಾ ಕರಾಟೆ ವಿರುದ್ಧ ಅರ್ಜಿ ಸಲ್ಲಿಕೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪಂಡಿತರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಬಿಟ್ಟಾ ಕರಾಟೆಯ ವಿರುದ್ಧ 31 ವರ್ಷದ ಹಿಂದೆ ನಡೆದ ಪ್ರಕರಣದ ವಿಚಾರಣೆ ನಡೆಸುವಂತೆ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ.

    ಫಾರೂಕ್ ಅಹ್ಮದ್ ದಾರ್ ಅಲಿಯಾಸ್ ಬಿಟ್ಟಾ ಕರಾಟೆ ವಿರುದ್ಧ ಮೃತ ಕಾಶ್ಮೀರಿ ಪಂಡಿತ ಸತೀಶ್ ಟಿಕ್ಕೂ ಅವರ ಕುಟುಂಬವು 31 ವರ್ಷಗಳ ಬಳಿಕ ಮರು ವಿಚಾರಣೆ ನಡೆಸಲು ನ್ಯಾಯಾಲಯಕ್ಕೆ ಇಂದು ಮನವಿ ಮಾಡಿದೆ.

    ಬಿಟ್ಟಾ ಕರಾಟೆ ಆಜಾದಿ ಹೆಸರಲ್ಲಿ ಪ್ರಾರಂಭಿಸಿದ್ದ ಕಾಶ್ಮೀರಿ ಪಂಡಿತರ ಮಾರಣಹೋಮದಲ್ಲಿ ಮೊದಲು ಬಲಿಯಾಗಿದ್ದು ಸತೀಶ್ ಟಿಕ್ಕೂ. ಈತ ಬಿಟ್ಟಾನ ಬಾಲ್ಯದ ಸ್ನೇಹಿತನಾಗಿದ್ದ. ಸತೀಶ್ ಟಿಕ್ಕೂ ಅವರನ್ನು ಕೊಲೆ ಮಾಡಿರುವುದಾಗಿ ಬಿಟ್ಟಾ ಖಾಸಗಿ ಚಾನೆಲ್‍ಗೆ ಸಂದರ್ಶನ ನೀಡಿದ್ದ ವೇಳೆ ಒಪ್ಪಿಕೊಂಡಿದ್ದ. ಈ ಸಾಕ್ಷಿಯನ್ನು ಇಟ್ಟುಕೊಂಡು ಕುಟುಂಬ ಕೋರ್ಟ್ ಮೆಟ್ಟಿಲೇರಿದೆ.

    ಇಂದು ಅರ್ಜಿಯ ವಿಚಾರಣೆ ನಡೆಸಿದ ಶ್ರೀನಗರದ ಸೆಷನ್ಸ್ ನ್ಯಾಯಾಲಯವು ಏಪ್ರಿಲ್ 16ರೊಳಗೆ ಸಂದರ್ಶನದ ಹಾಡ್ ಕಾಪಿಯನ್ನು ಸಲ್ಲಿಸುವಂತೆ ಟಿಕೂ ಕುಟುಂಬದ ವಕೀಲ ಉತ್ಸವ್ ಬೈನ್ಸ್‍ಗೆ ಸೂಚಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 16ಕ್ಕೆ ಮುಂದೂಡಿದೆ.

    1990ರ ದಶಕದಲ್ಲಿ ಕಾಶ್ಮೀರಿ ಪಂಡಿತರ ದುಃಸ್ಥಿತಿಯನ್ನು ತೋರಿಸಿದ್ದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಯಶಸ್ಸಿನ ಬೆನ್ನೆಲ್ಲೇ ಈ ಅರ್ಜಿ ಸಲ್ಲಿಸಲಾಗಿದೆ. ಕಳೆದ 31 ವರ್ಷಗಳ ನಂತರದಲ್ಲಿ ಬಿಟ್ಟಾ ಕರಾಟೆ ವಿರುದ್ಧ ಮೊದಲ ಅರ್ಜಿಯಾಗಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಈವರೆಗೂ ಗಳಿಸಿದ್ದು 234.03 ಕೋಟಿ : ಹೇಗೆಲ್ಲ ಲೆಕ್ಕಾಚಾರ

    ಘಟನೆಯೇನು?: ಆಜಾದಿ ಹೆಸರಲ್ಲಿ ಬಿಟ್ಟಾ ಅಲ್ಲಿನ ಕಾಶ್ಮೀರಿ ಪಂಡಿತರ ಮಾರಣ ಹೋಮವನ್ನು ಮಾಡಲು ಪ್ರಾರಂಭಿಸಿದ. ಇವನ ಹಿಂಸಾಚಾರಕ್ಕೆ ಮೊದಲು ಬಲಿಯಾಗಿದ್ದೇ ಕಾಶ್ಮೀರಿ ಪಂಡಿತನಾಗಿದ್ದ ಆತನ ಬಾಲ್ಯದ ಗೆಳೆಯ. ಬಿಟ್ಟಾ ಆತನನ್ನು ತನ್ನ ಮನೆಯ ಮುಂದೆಯೇ ಗುಂಡಿಕ್ಕಿ ಕೊಂದಿದ್ದ.

    1980-1990ರಲ್ಲಿ ಇವರು ಪಂಡಿತರನ್ನು ಹುಡುತ್ತಾ ಶ್ರೀನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಪಂಡಿತರೆಂದು ತಿಳಿದ ತಕ್ಷಣ ಆತ ತನ್ನಲ್ಲಿದ್ದ ಪಿಸ್ತೂಲ್‍ನಿಂದ ಗುಂಡಿಕ್ಕಿ ಕೊಲ್ಲುತ್ತಿದ್ದ. ಕನಿಷ್ಠ 20 ಕಾಶ್ಮೀರಿ ಪಂಡಿತರನ್ನು ಕೊಂದಿದ್ದೇನೆ ಎಂದು ವಿಡಿಯೋ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ. ಇದನ್ನೂ ಓದಿ: ಯಾರೋ ಮಾಡುವ ತಪ್ಪಿಗೆ ಇಡೀ ಸಮಾಜವನ್ನು ದ್ವೇಷಿಸುವಂತಾಗಿದೆ: ಅಬೂಬಕರ್

    ಘಟನೆಗೆ ಸಂಬಂಧಿಸಿದಂತೆ ಭಾರತೀಯ ಸೈನಿಕರು ಬಿಟ್ಟಾನನ್ನು 1990ರ ಜೂನ್‍ನಲ್ಲಿ ಬಂಧಿಸಿದರು. 2006ರವರೆಗೆ ಅಂದರೆ 16 ವರ್ಷಗಳ ಕಾಲ ಆತ ಸೆರೆಮನೆಯಲ್ಲಿದ್ದ. 2006ರಲ್ಲಿ ಜಾಮೀನಿನ ಮೇಲೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಟಾಡಾ ಜಡ್ಜ್ ಎನ್‍ಡಿ ವಾಣಿ ಅವರು, ಆರೋಪಿ ಮಾಡಿರುವ ಅಪರಾಧಗಳು ಗಂಭೀರವಾದದ್ದು ಎಂದು ನ್ಯಾಯಾಲಯಕ್ಕೆ ತಿಳಿದಿದೆ. ಈ ಅಪರಾಧಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ನೀಡಬೇಕಿತ್ತು. ಆದರೆ ಪ್ರಾಸಿಕ್ಯೂಶನ್ ಆರೋಪ ಸಾಬೀತು ಪಡಿಸಲು ವಿಫಲವಾಗಿದೆ ಮತ್ತು ಪ್ರಕರಣ ಭೇದಿಸಲು ಸಂಪೂರ್ಣ ನಿರಾಸಕ್ತಿ ತೋರಿಸಿದೆ ಎಂದಿದ್ದರು. ಹೀಗಾಗಿ 2006ರ ಅಕ್ಟೋಬರ್‌ನಲ್ಲಿ ಬಿಟ್ಟಾಗೆ ಜಾಮೀನು ಸಿಕ್ಕಿತ್ತು.

    ಪುಲ್ವಾಮಾ ದಾಳಿಯಲ್ಲಿ ಈತನ ಕೈವಾಡ ಇರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಈತನನ್ನು ಬಂಧಿಸಿದ್ದು ಸದ್ಯ ಜೈಲಿನಲ್ಲಿದ್ದಾನೆ. 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

  • ಜಸ್ಟ್‌ ಮಿಸ್‌ – ಬಿಟ್ಟಾ ಕರಾಟೆಯಿಂದ ಪಾರಾಗಿ ಇಂದಿಗೂ ಜೀವಂತವಿದ್ದಾರೆ ವ್ಯಕ್ತಿ

    ಜಸ್ಟ್‌ ಮಿಸ್‌ – ಬಿಟ್ಟಾ ಕರಾಟೆಯಿಂದ ಪಾರಾಗಿ ಇಂದಿಗೂ ಜೀವಂತವಿದ್ದಾರೆ ವ್ಯಕ್ತಿ

    – ಬಿಟ್ಟಾನ ಮತ್ತೊಂದು ಕರಾಳ ಮುಖ ಬಹಿರಂಗ
    – ಮಾವ ಪಾರಾದ ರೋಚಕ ಕಥೆ ತಿಳಿಸಿದ ಎನ್‌ಆರ್‌ಐ ವೈದ್ಯ

    ಬೆಂಗಳೂರು: ಕಾಶ್ಮೀರ ಪಂಡಿತರ ಮಾರಣಹೋಮವನ್ನು ಬಿಚ್ಚಿಡುವ ʼ ದಿ ಕಾಶ್ಮೀರ ಫೈಲ್ಸ್‌ʼ ಸಿನಿಮಾ ಬಿಡುಗಡೆಯಾದ ಬಳಿಕ ಬಹಳಷ್ಟು ಪಂಡಿತ ಕುಟುಂಬದ ಸದಸ್ಯರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈಗ ಅಮೆರಿಕದಲ್ಲಿರುವ ವೈದ್ಯರೊಬ್ಬರು ತಮ್ಮ ನೋವನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ.

    ರಾಜೀವ್‌ ಪಂಡಿತ್‌ ತನ್ನ ಮಾವ ಫಾರೂಕ್ ಅಹ್ಮದ್ ದಾರ್ ಅಲಿಯಾಸ್‌ ಬಿಟ್ಟಾ ಕರಾಟೆ ಕೈಯಿಂದ ಪಾರಾದ ಕಥೆಯನ್ನು ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಟ್ವೀಟ್‌ ಗಳನ್ನು ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ರೀಟ್ವೀಟ್‌ ಮಾಡಿದ್ದಾರೆ.

    ರಾಜೀವ್‌ ಪಂಡಿತ್‌ ಹೇಳಿದ್ದು ಏನು?
    ನನ್ನ ಮಾವ ಬಿಟ್ಟಾ ಕರಾಟೆಯ ಗುಂಡೇಟಿನಿಂದ ಪಾರಾಗಿ ಇಂದಿಗೂ ಜೀವಂತವಾಗಿದ್ದಾರೆ. ಈ ಕಥೆಯನ್ನು ನಾನು ಇಲ್ಲಿಯವರೆಗೆ ಹೇಳಿರಲಿಲ್ಲ. ಈಗ ಮೊದಲ ಬಾರಿಗೆ ಬಹಿರಂಗ ಪಡಿಸುತ್ತಿದ್ದೇನೆ.

    ಫಾರೂಕ್ ಅಹ್ಮದ್ ದಾರ್ ಸೈಕೋಪಾತ್ ಭಯೋತ್ಪಾದಕನಾಗುವ ಮೊದಲು ಅವನು ನಮ್ಮ ಕುಟುಂಬದ ಸದಸ್ಯರ ಜೊತೆ ಶ್ರೀನಗರದಲ್ಲಿ ಕ್ರಿಕೆಟ್ ಆಡುತ್ತಿದ್ದ. ಬಾಲ್ಯದಲ್ಲಿ ಆತನನ್ನು ಮುದ್ದಿನಿಂದ ಬಿಟ್ಟಾ ಎಂದು ಕರೆಯಲಾಗುತ್ತಿತ್ತು. ಶಾಲೆಗೆ ಹೋಗುವ ಸಮಯದಲ್ಲಿ ಬಿಟ್ಟಾನಿಗೆ ಮಾವ ಹಣವನ್ನು ಕೊಟ್ಟಿದ್ದರು.

    ಬಿಟ್ಟಾ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆದು ಮರಳಿದ ಬಳಿಕ ನನ್ನ ಮಾವನನ್ನು ಹತ್ಯೆ ಮಾಡಲು ಆದೇಶ ಸಿಕ್ಕಿತು. ಬಿಟ್ಟಾ ಮತ್ತು ಮತ್ತೊಬ್ಬ ಜೆಕೆಎಲ್‌ಎಫ್‌(ಜಮ್ಮು ಕಾಶ್ಮೀರ ಲಿಬರೇಷನ್‌ ಫ್ರಂಟ್‌) ಉಗ್ರ ಮನೆಯಿಂದ ಮಾವ ಹೊರ ಹೋಗುವುದನ್ನೇ ಕಾಯುತ್ತಿದ್ದರು. ಶ್ರೀನಗರದ ಬಳಿಯ ಹಬ ಕಡಲ ಬಳಿ ಬಂದಾಗ ಹಿಂದಿನಿಂದ ಬಂದು ಮಾವನನ್ನು ಶೂಟ್‌ ಮಾಡಿ ಹತ್ಯೆ ಮಾಡಲು ಅವರು ಪ್ಲ್ಯಾನ್‌ ಮಾಡಿದ್ದರು. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು

    1990ರ ಫೆ.16 ರಂದು ಬೆಳಿಗ್ಗೆ 9:30 ಕ್ಕೆ ನನ್ನ ಚಿಕ್ಕಪ್ಪ ಚರ್ಮದ ಜಾಕೆಟ್ ಧರಿಸಿ ಮನೆಯಿಂದ ಹೊರಹೋಗುವುದನ್ನು ಗಮನಿಸಿದ ಉಗ್ರ ಬಿಟ್ಟಾನಿಗೆ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಸಿಕ್ಕಿದ ಕೂಡಲೇ ಬಿಟ್ಟ ಪಿಸ್ತೂಲ್‌ ಸಿದ್ಧ ಪಡಿಸಿಕೊಂಡಿದ್ದಾನೆ. ಈ ಸಂದರ್ಭದಲ್ಲಿ ಮಾವನಿಗೆ ಇವತ್ತು ಅಣ್ಣ ಹುಟ್ಟಿದ ದಿನ ಎಂದು ಥಟ್ಟನೆ ನೆನಪಾಗಿ ಮತ್ತೆ ಪೂಜೆ ಮಾಡಲೆಂದು ಮನೆಗೆ ತೆರಳುತ್ತಾರೆ.

    ಮಾವ ಮನೆಗೆ ಮರಳಿದ ವಿಚಾರವನ್ನು ಮತ್ತೊಬ್ಬ ಉಗ್ರ ಗಮನಿಸಿರಲಿಲ್ಲ. ಈ ಸಮಯದಲ್ಲೇ ಬೆಳಗ್ಗೆ 9:30 ಕ್ಕೆ ನನ್ನ ಮಾವನ ಮನೆಯಿಂದ ಕೆಲ ದೂರದಲ್ಲಿ ಶೀಘ್ರವೇ ಮದುವೆಯಾಗಲಿದ್ದ ಅನಿಲ್‌ ಭಾನ್‌(26) ಹಬಾ ಕಡಲ ಕಡೆಗೆ ನಡೆಯಲು ಆರಂಭಿಸಿದ್ದರು. ಅವರು ಚರ್ಮದ ಜಾಕೆಟ್‌ ಧರಿಸಿದ್ದರು.

    ಈ ವಿಚಾರ ತಿಳಿಯದ ಬಿಟ್ಟಾ ಕರಾಟೆ ಅನಿಲ್‌ ಅವರನ್ನು ನಡೆಯುತ್ತಿರುವುದನ್ನು ನೋಡಿ ಪಿಸ್ತೂಲ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಅನಿಲ್‌ ಮೃತ ದೇಹದ ಮುಂದೆ ತಾಯಿಯ ಕಣ್ಣೀರನ್ನು ಎಂದೂ ಮರೆಯಲು ಸಾಧ್ಯವಿಲ್ಲ.

    ಬಿಟ್ಟಾ ಕರಾಟೆ ನಾನು ತಪ್ಪಾಗಿ ಗುರುತಿಸಿ ವ್ಯಕ್ತಿಯನ್ನು ಕೊಲೆ ಮಾಡಿದ್ದೇನೆ ಎಂದು ನಂತರ ಒಪ್ಪಿಕೊಂಡಿದ್ದ. ಅನಿಲ್ ಅವರ ತ್ಯಾಗದ ಕಾರಣದಿಂದ ನನ್ನ ಮಾವ ಇಂದಿಗೂ ಜೀವಂತವಾಗಿದ್ದಾರೆ. ಇದನ್ನೂ ಓದಿ: 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

    ನಾನು ಈ ಕಥೆಯನ್ನು ಮೊದಲು ಹೇಳಿಲ್ಲ ಯಾಕೆಂದರೆ ಕಾಶ್ಮೀರಿ ಹಿಂದೂಗಳ ಪರವಾಗಿ 30 ವರ್ಷಗಳ ಕಾಲ ಅಮೆರಿಕದಲ್ಲಿ ಕಾಂಗ್ರೆಸ್ ಮತ್ತು ಮಾಧ್ಯಮಗಳಲ್ಲಿ ಮಾತನಾಡುತ್ತಿದ್ದರೂ ಯಾರೂ ಕೇಳುತ್ತಿರಲಿಲ್ಲ. ಈಗ ನೊಂದ ಜನರಿಗೆ ನ್ಯಾಯ ಒದಗಿಸಿದ್ದಕ್ಕೆ ವಿವೇಕ್‌ ಅಗ್ನಿಹೋತ್ರಿ ಅವರಿಗೆ ಧನ್ಯವಾದ ಹೇಳುತ್ತೇನೆ.

  • 20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

    20 ಪಂಡಿತರ ಹತ್ಯೆ, ಕೆಎಎಸ್ ಅಧಿಕಾರಿ ಜೊತೆ ಮದುವೆ – ಕಾಶ್ಮೀರದ ರಕ್ತಪಾತದ ವಿಲನ್ ಬಿಟ್ಟಾ ಕರಾಟೆಯ ಕಥೆಯಿದು

    ವಿವೇಕ್ ಅಗ್ನಿಹೋತ್ರಿ ನಿರ್ಮಾಣದ ನೈಜ ಘಟನೆ ಆಧಾರಿತ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಈ ಚಿತ್ರದಲ್ಲಿ ಬರುವ ವಿಲನ್ ಬಿಟ್ಟಾ ಕರಾಟೆ ಪಾತ್ರ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.

    ಕಾಶ್ಮೀರಿ ಪಂಡಿತರ ಸ್ಥಳಾಂತರ ಅವರು ಅನುಭವಿಸಿದ ಕಷ್ಟ, ಹಾಗೂ ಅವರ ಮೇಲೆ ನಡೆದ ದೌರ್ಜನ್ಯವನ್ನು ದಿ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಕಣ್ಣಿಗೆ ಕಟ್ಟಿದ ರೀತಿಯಲ್ಲಿ ವಿವರಿಸಲಾಗಿದೆ.

    ಯಾರು ಈ ಬಿಟ್ಟಾ ಕರಾಟೆ?:
    ಶ್ರೀನಗರದಲ್ಲಿ 1972ರಲ್ಲಿ ಜನಿಸಿದ್ದ ಫರೂಕ್ ಅಹ್ಮದ್ ದಾರ್ ಅಡ್ಡ ಹೆಸರು ಬಿಟ್ಟಾ. ಸಮರ ಕಲೆಗಳಲ್ಲಿ ಪಾಂಡಿತ್ಯ ಪಡೆದಿದ್ದರಿಂದ ಇತನಿಗೆ ಕರಾಟೆ ಎಂಬ ಹೆಸರು ಬಂದಿದೆ. ಈ ಕಾರಣಕ್ಕೆ ಈತ ಬಿಟ್ಟ ಕರಾಟೆ ಎಂದು ಫೇಮಸ್ ಆಗಿದ್ದಾನೆ. 1990ರ ದಶಕದಲ್ಲಿ ಕಣಿವೆ ರಾಜ್ಯದಲ್ಲಿ ಪಂಡಿತರ ಮೇಲೆ ಎಸಗಿದ ಕೃತ್ಯದಿಂದ ಈತ ಕುಖ್ಯಾತನಾಗಿದ್ದಾನೆ.

    1988ರಲ್ಲಿ ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್(ಜೆಕೆಎಲ್‍ಎಫ್) ಮುಖ್ಯ ಕಮಾಂಡರ್ ಅಶ್ವಾಕ್ ಮಜೀದ್ ವಾನಿ ಈತನನ್ನು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದುಕೊಂಡು ಹೋಗುತ್ತಾನೆ. ಉಗ್ರರ ತರಬೇತಿ ಶಿಬಿರದಲ್ಲಿ 32 ದಿನಗಳ ತರಬೇತಿ ಪಡೆದು ರಕ್ತಪಾತ ಮಾಡಲು ಮರಳಿ ಕಾಶ್ಮೀರಕ್ಕೆ ಬರುತ್ತಾನೆ.

    ಬಿಟ್ಟಾ ‘ಆಜಾದಿ; ಹೆಸರಲ್ಲಿ ಅಲ್ಲಿ ಕಾಶ್ಮೀರಿ ಪಂಡಿತರ ಮಾರಣ ಹೋಮವನ್ನು ಮಾಡಲು ಪ್ರಾರಂಭಿಸಿದ. ಇವನ ಹಿಂಸಾಚಾರಕ್ಕೆ ಮೊದಲು ಬಲಿಯಾಗಿದ್ದೇ ಕಾಶ್ಮೀರಿ ಪಂಡಿತನಾಗಿದ್ದ ಆತನ ಬಾಲ್ಯದ ಗೆಳೆಯ. ಬಿಟ್ಟಾ ಆತನನ್ನು ತನ್ನ ಮನೆಯ ಮುಂದೆಯೇ ಗುಂಡಿಕ್ಕಿ ಕೊಲ್ಲುತ್ತಾನೆ. ನಂತರದ ಸಂದರ್ಶನವೊಂದರಲ್ಲಿ ಮಾತನಾಡಿ, ಆದೇಶ ಬಂದರೆ ತನ್ನ ಸ್ವಂತ ತಾಯಿ ಹಾಗೂ ಸಹೋದರರನನ್ನು ಕೊಲ್ಲಲು ಸಿದ್ಧನಿದ್ದೇನೆ ಎಂದು ಹೇಳಿಕೊಂಡಿದ್ದ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಅಣ್ಣನ ಸ್ಥಾನದಲ್ಲಿ ನಿಂತು ನಮ್ಮಷ್ಟೇ ದುಃಖ ಅನುಭವಿಸಿದ್ದಾರೆ: ಶಿವಣ್ಣ

    1980-1990ರಲ್ಲಿ ಇವರು ಪಂಡಿತರನ್ನು ಹುಡುತ್ತಾ ಶ್ರೀನಗರದ ಬೀದಿಗಳಲ್ಲಿ ಸಂಚರಿಸುತ್ತಿದ್ದ. ಪಂಡಿತರೆಂದು ತಿಳಿದ ತಕ್ಷಣ ಆತ ತನ್ನಲ್ಲಿದ್ದ ಪಿಸ್ತೂಲ್‍ನಿಂದ ಗುಂಡಿಕ್ಕಿ ಕೊಲ್ಲುತ್ತಿದ್ದ. ಕನಿಷ್ಠ 20 ಕಾಶ್ಮೀರಿ ಪಂಡಿತರನ್ನು ಕೊಂದಿದ್ದೇನೆ ಎಂದು ವಿಡಿಯೋ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದ.

    ಭಾರತೀಯ ಸೈನಿಕರು ಬಿಟ್ಟಾನನ್ನು 1990ರ ಜೂನ್‍ನಲ್ಲಿ ಬಂಧಿಸಿದರು. 2006ರವರೆಗೆ ಅಂದರೆ 16 ವರ್ಷಗಳ ಕಾಲ ಆತ ಸೆರೆಮನೆಯಲ್ಲಿದ್ದ. 2006ರಲ್ಲಿ ಜಾಮೀನಿನ ಮೇಲೆ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಟಾಡಾ ಜಡ್ಜ್ ಎನ್‍ಡಿ ವಾಣಿ ಅವರು, ಆರೋಪಿ ಮಾಡಿರುವ ಅಪರಾಧಗಳು ಗಂಭೀರವಾದದ್ದು ಎಂದು ನ್ಯಾಯಾಲಯಕ್ಕೆ ತಿಳಿದಿದೆ. ಈ ಅಪರಾಧಕ್ಕೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ನೀಡಬೇಕಿತ್ತು. ಪ್ರಾಸಿಕ್ಯೂಶನ್ ಆರೋಪ ಸಾಬೀತು ಪಡಿಸಲು ವಿಫಲವಾಗಿದೆ ಮತ್ತು ಪ್ರಕರಣ ಭೇದಿಸಲು ಸಂಪೂರ್ಣ ನಿರಾಸಕ್ತಿ ತೋರಿಸಿದೆ ಎಂದಿದ್ದರು. ಹೀಗಾಗಿ 2006ರ ಅಕ್ಟೋಬರ್‍ನಲ್ಲಿ ಬಿಟ್ಟಾಗೆ ಜಾಮೀನು ಸಿಕ್ಕಿತ್ತು. ಇದನ್ನೂ ಓದಿ: ಅಪ್ಪು ಇಲ್ಲ ಅಂತ ನೋವು ಪಡ್ಬೇಡಿ, ಅಪ್ಪು ನಮ್ಮ ಜೊತೆಯಲ್ಲೇ ಇರ್ತಾರೆ: ಜ್ಯೂ.ಎನ್‍ಟಿಆರ್

    ಜೈಲಿನಿಂದ ಹೊರಬಂದಾಗ ಆತನನ್ನು ಮೆರವಣಿಗೆ ಮಾಡಲಾಗಿತ್ತು. ಬಿಡುಗಡೆಯಾದ ಬಳಿಕ ಆತ ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್‍ಗೆ ಸೇರಿದ್ದ. 2019ರ ಪುಲ್ವಾಮಾ ದಾಳಿಯಲ್ಲಿ ಈತನ ಕೈವಾಡ ಇರುವ ಹಿನ್ನೆಲೆಯಲ್ಲಿ ಭಯೋತ್ಪಾದನೆ ಸಂಬಂಧಿತ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಬಂಧಿಸಿದೆ.

    ಬಿಟ್ಟಾ ಕರಾಟೆ 2011ರಲ್ಲಿ ಕಾಶ್ಮೀರ ಆಡಳಿತ ಸೇವೆ(ಕೆಎಎಸ್) ಅಧಿಕಾರಿ ಅಸ್ಪಾ ಖಾನ್‍ಮನ್ನು ಮದುವೆಯಾಗಿದ್ದಾನೆ. ಅಸ್ಪಾ ಖಾನ್ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, 2009ರಲ್ಲಿ ಅಸ್ಬಾ ಕೆಎಎಸ್ ಪರೀಕ್ಷೆ ತೇರ್ಗಡೆಯಾಗಿ ಸರ್ಕಾರ ಸಾಮಾನ್ಯ ಆಡಳಿತ ಇಲಾಖೆಯಲ್ಲಿ ಅಧಿಕಾರಿಯಾಗಿ ನೇಮಿಸಿತ್ತು. 48 ವರ್ಷದ ಅಸ್ಬಾ ಖಾನ್ ಕಾಶ್ಮೀರದ ಗ್ರಾಮೀಣಾಭಿವೃದ್ಧಿ ಇಲಾಖೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ.