ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರವು ಕಮಿಷನ್ ದಂಧೆಯಲ್ಲಿ ತೊಡಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಕಿಡಿಕಾರಿದ್ದಾರೆ.
ಗುತ್ತಿಗೆದಾರರು ಸಿಎಂ ಸಿದ್ದರಾಮಯ್ಯಗೆ (Siddaramaiah) ಪತ್ರ ಬರೆದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ರಾಜ್ಯ ಸರ್ಕಾರದ ನಿಜ ಬಣ್ಣವನ್ನು ಬಯಲು ಮಾಡಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ನೇತೃತ್ವದಲ್ಲಿ ಅವೈಜ್ಞಾನಿಕ ಗ್ಯಾರಂಟಿಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ರಾಜ್ಯದ ಸಂಪತ್ತನ್ನೇ ಹಾಳು ಮಾಡಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದೋಚುತ್ತ ಅಧಃಪತನದತ್ತ ನೂಕುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಯುದ್ಧೋಪಾದಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಹಕ್ಕೆ ಸರ್ಕಾರ ಸ್ಪಂದಿಸಬೇಕು: ಸಿ.ಟಿ ರವಿ
ರಾಜ್ಯ ಸರ್ಕಾರ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಹಳ್ಳಕ್ಕೆ ತಳ್ಳಿದೆ. ಅಲ್ಲದೇ, ಕೈಗೊಂಡಿರುವ ಕಾಮಗಾರಿಗಳ ಬಗೆಗಿನ ಮೊತ್ತವನ್ನೂ ಗುತ್ತಿಗೆದಾರರಿಗೆ ನೀಡದೇ ಅವರ ಜೀವನವನ್ನು ಕಷ್ಟಕ್ಕೆ ತಳ್ಳಿದೆ. ಅಭಿವೃದ್ಧಿ ಕಾಮಗಾರಿಗಳು ನಡೆದು ವರ್ಷಗಳೇ ಕಳೆದರೂ ಹಣ ನೀಡದೇ ಸತಾಯಿಸುತ್ತಿದೆ. ಕಮಿಷನ್ ದಂಧೆಯಲ್ಲಿ ತೊಡಗಿ ವ್ಯಾಪಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದರ ವಿರುದ್ಧ ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದರೂ ಕಿಮ್ಮತ್ತಿಲ್ಲದಂತಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಗುತ್ತಿಗೆದಾರರು ಮಾಡಿರೋ ಕಮಿಷನ್ ಆರೋಪದ ಹೊಣೆ ಹೊತ್ತು ಸಿಎಂ ರಾಜೀನಾಮೆ ಕೊಡಬೇಕು: ಸಿ.ಟಿ ರವಿ ಆಗ್ರಹ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದುರಾಡಳಿತ ನಡೆಸುತ್ತಿದೆ. ಒಂದೆಡೆ ಬೆಲೆ ಏರಿಕೆಯ ಬರೆ ಎಳೆದು ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದು, ಮತ್ತೊಂದೆಡೆ ಗ್ಯಾರೆಂಟಿಗಳ ನೆಪದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿದೆ. ಅಲ್ಲದೇ ವರ್ಗಾವಣೆಯನ್ನು ಒಂದು ದಂಧೆಯನ್ನಾಗಿ ಮಾಡಿಕೊಂಡಿದೆ ಎಂದು ದೂರಿದ್ದಾರೆ.
ಬೆಂಗಳೂರು: ಬಿಜೆಪಿ (BJP) ಜಾತಿಗಣತಿಗೆ (Caste Census) ವಿರೋಧ ಮಾಡುವುದಿಲ್ಲ ಎಂದು ಬಿಜೆಪಿ ನಾಯಕ ಸಿ.ಟಿ ರವಿ (CT Ravi) ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಿಜೆಪಿಗೆ ವಿರೋಧ ಮಾಡುತ್ತಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಜಾತಿಗಣತಿ ವಿರೋಧ ಮಾಡಲ್ಲ ಎಂದರು. ಜಾತಿಗಣತಿಗೆ ಬಿಜೆಪಿಯ ವಿರೋಧ ಇಲ್ಲ. ಜಾತಿಗಣತಿ ಹೆಸರಿನಲ್ಲಿ ಸಮಾಜ ಒಡೆಯೋಕೆ ಮಾತ್ರ ನಮ್ಮ ವಿರೋಧ ಇದೆ. ಜಾತಿ ಒಡೆಯೋದು, ಹೊಸ ಜಾತಿ ಸೃಷ್ಟಿ ಮಾಡೋದು, ಹಿಂದೂ ಜಾತಿಗಳನ್ನ ಕ್ರಿಶ್ಚಿಯನ್ ಜಾತಿಗೆ ಸಮೀಕರಣ ಮಾಡೋದು. ಹಿಂದೂಗಳನ್ನ ಒಡೆಯುವುದು, ಒಳ ಜಾತಿ ಒಡೆಯೋದಕ್ಕೆ ನಮ್ಮ ವಿರೋಧ ಇದೆ. ಸಮೀಕ್ಷೆಗೆ ವಿರೋಧ ಇಲ್ಲ ಎಂದರು. ಇದನ್ನೂ ಓದಿ: ಮಲ್ಟಿಪ್ಲೆಕ್ಸ್‌ಗಳು ಟಿಕೆಟ್ ಮಾರಾಟದ ಲೆಕ್ಕ ಇಡಬೇಕು: ಹೈಕೋರ್ಟ್ ಸೂಚನೆ
ನಾವು ಸಾಮಾಜಿಕ ನ್ಯಾಯದ ಪರ ಇದ್ದೇವೆ. ನಿಮಗೆ ಅದರ ಬದ್ಧತೆ ಇಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇಲ್ಲ. ಕಾಂಗ್ರೆಸ್‌ನವರಿಗೆ ಬದ್ಧತೆ ಇದ್ದಿದ್ದರೆ ಕಾಂತರಾಜು ವರದಿ ಯಾಕೆ ಕಸದ ಬುಟ್ಟಿಗೆ ಹಾಕುತ್ತಿದ್ದರು? ನಾಗಮೋಹನ್ ದಾಸ್ ವರದಿ ಯಾಕೆ ತಿಪ್ಪೇಗುಂಡಿಗೆ ಸೇರುತ್ತಿತ್ತು? ನಿಮಗೆ ಬದ್ಧತೆ ಇಲ್ಲ. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳೋದು ಬಿಡೋದು ಅವರಿಗೆ ಬಿಟ್ಟಿದ್ದು. ಆದರೆ ಬಿಜೆಪಿ ನಿರ್ಣಯ ತೆಗೆದುಕೊಂಡಿದೆ, ಜಾತಿಗಣತಿಗೆ ನಮ್ಮ ವಿರೋಧ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್‌ಗೆ ಹಾಸಿಗೆ, ದಿಂಬು ಅರ್ಜಿ – ಅ.9ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಬಹಿಷ್ಕಾರಕ್ಕೆ ಬಿಜೆಪಿ (BJP) ನಾಯಕರು ಕರೆ ನೀಡುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಕಿಡಿಕಾರಿದ್ದಾರೆ.
ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ನಾಯಕರ ನಿಜ ಬಣ್ಣ ಬಯಲಾಗುತ್ತಿದೆ. ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ಬಂದು ಸಮೀಕ್ಷೆ ಬಹಿಷ್ಕಾರದ ಕರೆ ನೀಡುತ್ತಿದ್ದಾರೆ. ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?
ಸಮೀಕ್ಷೆ ಯಾವುದೇ ಒಂದು ಜಾತಿ ಧರ್ಮಕ್ಕೆ ಸೀಮಿತ ಅಲ್ಲ. ಯಾರ ವಿರುದ್ಧವೂ ಅಲ್ಲ, ಎಲ್ಲರ ಪರವಾಗಿರುವ ಸಮೀಕ್ಷೆಯಿದು. ವರ್ಣ ಮತ್ತು ವರ್ಗಗಳ ನಡುವಿನ ಅಸಮಾನತೆ ಮುಂದುವರಿಯಬೇಕು ಎನ್ನುವುದು ಮನುವಾದ. ಬಿಜೆಪಿಯ ನಾಯಕರ ಅಂತರಂಗದಲ್ಲಿರುವುದು ಇದೇ ಮನುವಾದಿ ಮನಸ್ಥಿತಿ. ನಮ್ಮ ಸರ್ಕಾರ ನಡೆಸುವ ಸಮೀಕ್ಷೆಯಿಂದ ಕೇವಲ ದಲಿತ, ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸ್ಥಿತಿ-ಗತಿ ಮಾತ್ರವಲ್ಲ. ಮುಂದುವರಿದ ಜಾತಿಗಳೊಳಗಿನ ಬಡವರು ಮತ್ತು ಅವಕಾಶ ವಂಚಿತರ ಸ್ಥಿತಿಗತಿಯೂ ಗೊತ್ತಾಗಲಿದೆ. ಈ ವಾಸ್ತವಸ್ಥಿತಿ ಅರಿವಾಗುವುದು ಬಿಜೆಪಿಯವರಿಗೆ ಬೇಡವಾಗಿದೆ. ಬಿಹಾರದಲ್ಲಿ ಇವರದ್ದೇ ಮೈತ್ರಿ ಸರ್ಕಾರ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿದೆ. ಇದನ್ನೂ ಓದಿ: ಸರ್ಕಾರದಲ್ಲಿ ಬಾಕಿ ಬಿಲ್ ಪಾವತಿಗೆ ದುಪ್ಪಟ್ಟು ಕಮಿಷನ್ ಆರೋಪ – ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ
ಇದೇ ರೀತಿ ತೆಲಂಗಾಣದಲ್ಲಿಯೂ ನಡೆದಿದೆ. ಅಲ್ಲಿಯೂ ಬಿಜೆಪಿ ನಾಯಕರು ಬಾಯಿ ಮುಚ್ಚಿಕೊಂಡಿದ್ದಾರೆ. ಇವೆಲ್ಲಕ್ಕಿಂತಲೂ ಮಿಗಿಲಾಗಿ ಈಗ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಜಾತಿ ಗಣತಿ ಮಾಡಲು ಹೊರಟಿದೆ. ಕರ್ನಾಟಕದಲ್ಲಿ ಜಾತಿಗಳನ್ನು ಪರಿಗಣಿಸಿ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರೇ ನೀವು ಕೇಂದ್ರ ಸರ್ಕಾರದ ಜಾತಿ ಗಣತಿಯನ್ನೂ (Caste Survey) ವಿರೋಧಿಸುತ್ತೀರಾ? ಹಾಗೆ ವಿರೋಧಿಸುವುದಾದರೆ ಅದನ್ನು ಗಟ್ಟಿ ದನಿಯಲ್ಲಿ ಈಗಲೇ ಹೇಳಿಬಿಡಿ. ಪ್ರಧಾನಿಯ ಎದುರು ತಲೆ ಎತ್ತಿ ಮಾತನಾಡುವ ದಮ್ಮು-ತಾಕತ್ತು ಇಲ್ಲದ ನಿಮಗೆ ಇದನ್ನು ವಿರೋಧಿಸುವ ಧೈರ್ಯ ಇದೆಯೇ? ಯಾಕೆ ತಮ್ಮ ಮೂರ್ಖತನದ ಹೇಳಿಕೆಗಳ ಮೂಲಕ ರಾಜ್ಯದ ಪ್ರಜ್ಞಾವಂತ ಜನರ ಎದುರು ನಗೆಪಾಲಿಗೀಡಾಗುತ್ತಿದ್ದೀರಿ? ಬಿಜೆಪಿ ನಾಯಕರ ಈ ಆತ್ಮವಂಚಕ ನಡವಳಿಕೆಯನ್ನು ರಾಜ್ಯದ ಜನತೆ ಅರ್ಥಮಾಡಿಕೊಳ್ಳಬೇಕು. ಅವರ ರಾಜಕೀಯ ಪ್ರೇರಿತ ಠಕ್ಕುತನದ ಹೇಳಿಕೆಗಳನ್ನು ಮನೆಯ ಕಸದ ಬುಟ್ಟಿಗೆ ಎಸೆಯಿರಿ.
ರಾಜ್ಯ ಬಿಜೆಪಿ ನಾಯಕರ ತಲೆಬುಡವಿಲ್ಲದ ಸಲಹೆಯನ್ನು ಕಸದ ಬುಟ್ಟಿಗೆ ಎಸೆದು, ಜನಪರ ಕಾಳಜಿಯ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿಗೆ ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ನಾಡಿನ ಏಳು ಕೋಟಿ ಜನರಲ್ಲಿ ಮನವಿ ಮಾಡುತ್ತೇನೆ. #SocialJusticepic.twitter.com/60e8lIYn9X
ಎಲ್ಲರೂ ಈಗ ನಡೆಯುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡಬೇಕು. ಈ ಮೂಲಕ ನಾವೆಲ್ಲರೂ ಸೇರಿ ಸಮ ಸಮಾಜವನ್ನು ನಿರ್ಮಾಣ ಮಾಡೋಣ. ಕರ್ನಾಟಕವನ್ನು ಸರ್ವಜನಾಂಗದ ಶಾಂತಿಯ ತೋಟವನ್ನು ಮಾಡೋಣ. ನಾನು ವಿನಯಪೂರ್ವಕವಾಗಿ ಅರಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಬೀದರ್: ರೈತರ ವಿಚಾರದಲ್ಲಿ ತಾತ್ಸಾರ ಬೇಡ, ಸಿಎಂ ಸಿದ್ದರಾಮಯ್ಯ (CM Siddaramaiah) ಬೆಂಗಳೂರಿಗೆ (Bengaluru) ಮಾತ್ರ ಸೀಮಿತರಾಗಿದ್ದಾರೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಕಿಡಿಕಾರಿದ್ದಾರೆ.
“ನೆರೆ ಸಂಕಷ್ಠಿತ ರೈತರ ನೆರವಿಗೆ ರಾಜ್ಯ ಸರ್ಕಾರ ಕೂಡಲೇ ಧಾವಿಸಲಿ-ಸೂಕ್ತ ತುರ್ತು ಪರಿಹಾರ ತಕ್ಷಣ ಘೋಷಿಸಲಿ”
ನೆರೆ ಪ್ರದೇಶಗಳ ಪ್ರವಾಸದ ಹಿನ್ನಲೆಯಲ್ಲಿಂದು ಬೀದರ್ ದಕ್ಷಿಣ ಹಾಗೂ ಬೀದರ್ ವಿಧಾನಸಭಾ ಕ್ಷೇತ್ರಗಳ ಮಳೆ ಹಾನಿಗೊಳಗಾದ ವಿವಿಧ ಭಾಗಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೇಳೆ ಹಾನಿ ಪರಿಶೀಲನೆ ನಡೆಸಿ ಸರ್ಕಾರ ಶೀಘ್ರ ಪರಿಹಾರ ಬಿಡುಗಡೆ… pic.twitter.com/IzdoBHOcod
ಬೀದರ್ (Bidar) ಸೇರಿದಂತೆ ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಬಿವೈ ವಿಜಯೇಂದ್ರ ಸೇರಿದಂತೆ ಬಿಜೆಪಿ ತಂಡ ನೆರೆ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಿಎಂಗೆ ಕಲ್ಯಾಣ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ, ಈ ಭಾಗದಲ್ಲಿ ರೈತರ ಬೆಳೆಗಳು ಸಂಪೂರ್ಣವಾಗಿ ಸರ್ವನಾಶವಾಗಿದೆ. ಕಳೆದ ಒಂದು ತಿಂಗಳಿಂದ ಮಳೆಯಾಗಿ ಎಲ್ಲಾ ಬೆಳೆಗಳು ನಾಶವಾಗಿದೆ. ರೈತರ ವಿಚಾರದಲ್ಲಿ ಸಿಎಂ ತಾತ್ಸಾರ ಬೇಡ, ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಇಂತಹ ಸಮಯದಲ್ಲಿ ಸಿಎಂ ಹಾಗೂ ಸಚಿವರ ಹುಡುಗಾಟ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ 3,000 ಕೋಟಿ ಪ್ರವಾಹ ಪರಿಹಾರ ನೀಡಬೇಕು – ಅಶೋಕ್ ಆಗ್ರಹ
“ನೆರೆ ಸಂಕಷ್ಠಿತ ಅನ್ನದಾತರನ್ನು ಸಂಪೂರ್ಣ ನಿರ್ಲಕ್ಷಿಸಿರುವ ರೈತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ”
ನೆರೆ ಪೀಡಿತ ಪ್ರದೇಶಗಳ ಪ್ರವಾಸದ ಹಿನ್ನಲೆಯಲ್ಲಿಂದು ಬೀದರ್ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ನಿಟ್ಟೂರು ಹಾಗೂ ಔರಾದ್ ವಿಧಾನಸಭಾ ಕ್ಷೇತ್ರದ ಸವಳಿಸಂಗಮದಲ್ಲಿ ಮಳೆ ಹಾನಿಗೊಳಗಾದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬೆಳೆ ಹಾನಿ… pic.twitter.com/pH8jZ1FqNZ
ರಾಜ್ಯ ಸರ್ಕಾರ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ. ಬಿಎಸ್‌ವೈ ಮನೆ ಕಳೆದುಕೊಂಡವರಿಗೆ ಕೇಂದ್ರದ ಕಡೆ ನೋಡದೆ ಪರಿಹಾರ ಕೊಟ್ಟಿದ್ದರು. ಇನ್ನು ತಡಮಾಡದೇ ನೀವು, ನಿಮ್ಮ ಸಚಿವರು ಇಲ್ಲಿಗೆ ಧಾವಿಸಿ ಎಂದು ಆಕ್ರೋಶ ಹೊರಹಾಕಿದ್ದಾರೆ.
-ರಿಯಲ್ ಎಸ್ಟೇಟ್ ದಂಧೆಗಾಗಿ ರೈತ ವಿರೋಧಿ ಯೋಜನೆ ಎಂದು ಕಿಡಿ
ಬೆಂಗಳೂರು: ಬಿಡದಿ ಟೌನ್‌ಶಿಪ್ (Bidadi Township) ವಿರುದ್ಧ ಜೆಡಿಎಸ್ (JDS) ಹೋರಾಟ ಬೆನ್ನಲ್ಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಟೌನ್‌ಶಿಪ್ ವಿಚಾರದಲ್ಲಿ ಬಿಜೆಪಿ ನಾಯಕರು ಡಿಕೆಶಿ (DK Shivakumar) ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಬಿಡದಿ ಟೌನ್‌ಶಿಪ್‌ಗೆ ಪ್ರಾಥಮಿಕ ನೋಟಿಫಿಕೇಷನ್ ಹೊರಡಿಸಿದ್ದೇ ಡಿಕೆಶಿ. ಈಗ ಗೊಂದಲ ಮೂಡಿಸುವ ಹೇಳಿಕೆ ಕೊಡ್ತಿರೋದು ಸರಿಯಲ್ಲ. ಡಿಕೆಶಿಯವರು ಇದರಲ್ಲಿ ಎಷ್ಟು ಹಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ನಮಗೆ ಮುಖ್ಯ ಅಲ್ಲ. ಆದ್ರೆ ಬೇಡಿಕೆ ಆಧರಿಸಿ ಮುಂದುವರೆಯಿರಿ, ಯಾವ ಕಂಪೆನಿಗಳು ಭೂಮಿ ಕೇಳಿದ್ದಾರೆ? ಎಷ್ಟು ಕೃಷಿ ಭೂಮಿ ಬೇಕು? ಪರಿಹಾರ ಎಷ್ಟು ಕೊಡುತ್ತೀರಿ? ಇದೆಲ್ಲದರ ಸ್ಪಷ್ಟತೆ ಕೊಡಿ ಮೊದಲು ಎಂದು ಡಿಕೆಶಿಗೆ ಕೌಂಟರ್ ಕೊಟ್ಟರು. ಇದನ್ನೂ ಓದಿ: ಸರ್ಕಾರದಿಂದ ಉತ್ತರ ಕರ್ನಾಟಕಕ್ಕೆ 3,000 ಕೋಟಿ ಪ್ರವಾಹ ಪರಿಹಾರ ನೀಡಬೇಕು – ಅಶೋಕ್ ಆಗ್ರಹ
ರೈತರು ಟೌನ್‌ಶಿಪ್ ಮಾಡಬೇಡಿ ಅಂತ ಹೇಳುತ್ತಿಲ್ಲ. ಎಲ್ಲಿ ಅಗತ್ಯ ಇದೆಯೋ ಅಲ್ಲಿ ಮಾಡಬೇಕು. ಜವಾಬ್ದಾರಿಯಿಂದ ಎಷ್ಟು ಬೇಕೋ ಅಷ್ಟೇ ಭೂಸ್ವಾಧೀನ ಮಾಡಿ. ಸೂಕ್ತ ಪರಿಹಾರ ಕೊಡಿ. ಯಾರೋ ಕೆಲವರ ಅನುಕೂಲಕ್ಕಾಗಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಬೇಡ ಎಂದು ಕಿಡಿಕಾರಿದರು. ರಿಯಲ್ ಎಸ್ಟೇಟ್ ದಂಧೆ ಮಾಡೋದು, ಕೃಷಿ ಭೂಮಿ ಸ್ವಾಧೀನ ಮಾಡೋದು, ಇದೇನಾ ಸರ್ಕಾರ ನಡೆಸುವ ರೀತಿ? ವ್ಯಾಪಾರ, ಹಣ, ಲಾಭ, ಅವರ ಅನುಕೂಲಕ್ಕೆ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದಸರಾ ಆನೆ ಬಳಿ ರೀಲ್ಸ್ ನಿಷೇಧ, ಕಮಾಂಡೋ ಕಾವಲು: ಈಶ್ವರ್ ಖಂಡ್ರೆ
ಇನ್ನು ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, 2009ರಲ್ಲಿ ಬಿಜೆಪಿ ಅವಧಿಯಲ್ಲಿ ಬಿಡದಿ ಟೌನ್‌ಶಿಪ್ ಪ್ರಾಜೆಕ್ಟ್ ಕೈಬಿಟ್ಟಿದ್ದೆವು. ರೈತರಿಗೆ ಸಮಸ್ಯೆ ಆಗುತ್ತೆ ಅನ್ನೋ ಕಾರಣಕ್ಕೆ ಯೋಜನೆ ಕೈಬಿಟ್ಟಿದ್ದೆವು. ನಮ್ಮ ಅವಧಿಯಲ್ಲಿ ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗಿರಲಿಲ್ಲ, ಡಿಕೆಶಿ ಆರೋಪ ಸುಳ್ಳು. ಬಿಡದಿ ಟೌನ್‌ಶಿಪ್ ಸತ್ತು ಹೋಗಿದ್ದ ಪ್ರಾಜೆಕ್ಟ್. ಈಗ ಡಿಕೆಶಿ ಅವರು ರಿಯಲ್ ಎಸ್ಟೇಟ್ ದಂಧೆಗಾಗಿ ಯೋಜನೆಗೆ ಜೀವ ಕೊಟ್ಟಿದ್ದಾರೆ. ಯಾರಿಗೋಸ್ಕರ ಈ ಯೋಜನೆ, ಯಾರಿಗೆ ಸೈಟ್ ಹಂಚ್ತೀರ? ಡಿಕೆಶಿ ಹೇಳಲಿ. 20 ವರ್ಷಗಳ ಹಿಂದೆಯೇ ಈ ಪ್ರಾಜೆಕ್ಟ್ ಕೈಬಿಡಲಾಗಿತ್ತು. ನಾವು, ಜೆಡಿಎಸ್ ಇದ್ದಾಗ ಈ ಯೋಜನೆ ಮುಟ್ಟಿಲ್ಲ. ಈಗ ಡಿಕೆಶಿ ಯಾಕೆ ಈ ಯೋಜನೆಗೆ ಕೈಹಾಕಿದ್ದಾರೆ? ರಿಯಲ್ ಎಸ್ಟೇಟ್‌ಗಾಗಿ ಡಿಕೆಶಿ ಆಸಕ್ತಿ ತೋರುತ್ತಿದ್ದಾರೆ ಎಂದು ಆರೋಪ ಮಾಡಿದರು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ
ಬೆಂಗಳೂರು: ಉತ್ತರ ಕರ್ನಾಟಕದ (Uttara Karnataka) ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸರ್ಕಾರ 3,000 ಕೋಟಿ ರೂ. ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರ್ಕಾರ ಬದುಕಿಲ್ಲ. ಬದುಕಿದ್ದಿದ್ರೆ ಪ್ರವಾಹಕ್ಕೂ ಮುನ್ನ ತಯಾರಿ ಮಾಡಿಕೊಳ್ತಿದ್ದರು. ಆದ್ರೆ ಸರ್ಕಾರ ಏನೂ ತಯಾರಿ ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿದೆ. ಸಿಎಂ ನಾಳೆ (ಸೆ.30) ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ಕೊಡ್ತಿದ್ದಾರೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೋಗೋ ಮುನ್ನ ಸಂತ್ರಸ್ತರಿಗೆ ಪರಿಹಾರ ಘೋಷಿಸಿ ಹೋಗಲಿ. ಉತ್ತರ ಕರ್ನಾಟಕ ಪ್ರವಾಹ ಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ತುರ್ತಾಗಿ 3 ಸಾವಿರ ಕೋಟಿ ರೂ. ಬಿಡುಗಡೆ ಮಾಡಬೇಕು. ಪ್ರತಿಯೊಂದಕ್ಕೂ ಕೇಂದ್ರಕ್ಕೆ ಕಾಯಬೇಡಿ, ನೀವೇನು ಕೊಡ್ತೀರಿ ಅದನ್ನು ಘೋಷಿಸಲಿ ಎಂದರು. ಇದನ್ನೂ ಓದಿ: 1 ಗಂಟೆ ಹೈಡ್ರಾಮಾ, ಟ್ರೋಫಿ ಜೊತೆ ಓಡಿದ ನಖ್ವಿ – ಮಧ್ಯರಾತ್ರಿ ಏನಾಯ್ತ? ಇಲ್ಲಿದೆ ಪೂರ್ಣ ವಿವರ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಬಂದು ಸಾವು ನೋವು ಉಂಟಾಗಿದೆ. ಕಲಬುರಗಿ ಹಾಗೂ ಬೀದರ್‌ನಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಈವರೆಗೆ ಯಾವುದೇ ಸಚಿವರು ಕ್ರಮ ವಹಿಸಿಲ್ಲ. ಬಿಜೆಪಿ ಅವಧಿಯಲ್ಲಿ ಡಬಲ್ ಪರಿಹಾರ ನೀಡಲಾಗಿತ್ತು. ಸರ್ಕಾರದ ಬಳಿ ಹಣವಿದ್ದರೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದರು. ಹಣವಿಲ್ಲದೆ ಸಚಿವರು ಹಾಗೂ ಸಿಎಂ ಮುಖ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಸಂಪೂರ್ಣ ಗಮನ ಜಾತಿ ಸಮೀಕ್ಷೆಯ ಕಡೆಗಿದೆ. ಮನೆ ಹಾನಿಗೆ ಹಾಗೂ ಬೆಳೆ ಹಾನಿಗೆ ಎಷ್ಟು ಪರಿಹಾರ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದರು.
ಕೇಂದ್ರ ಸರ್ಕಾರ ತನ್ನ ಪಾಲಿನ ಪರಿಹಾರದ ಹಣವನ್ನು ನೀಡುತ್ತದೆ. ರಾಜ್ಯ ಸರ್ಕಾರದಿಂದ ತಕ್ಷಣ 3,000 ಕೋಟಿ ರೂ. ಪರಿಹಾರ ಘೋಷಿಸಿ ವಿತರಣೆ ಮಾಡಬೇಕು. ಬಿಜೆಪಿ ಅವಧಿಯಲ್ಲಿ 30 ದಿನಕ್ಕಾಗುವಷ್ಟು ದಿನಸಿ ನೀಡಲಾಗಿತ್ತು. ಈ ಸರ್ಕಾರ ಅರ್ಧ ಕೆ.ಜಿ ಅಕ್ಕಿಯೂ ಕೊಟ್ಟಿಲ್ಲ. ಬಿಜೆಪಿ ವತಿಯಿಂದ ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುತ್ತಿದೆ. ನಾನು ಕೂಡ ಪ್ರವಾಸ ಮಾಡಿ, ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಇನ್ನೂ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಜೆಪಿ 40% ಕಮಿಶನ್ ಪಡೆಯುತ್ತಿದೆ ಎಂದು ಸುಳ್ಳು ಆರೋಪ ಮಾಡಿದ್ದರು. ಈಗ ಗುತ್ತಿಗೆದಾರರ ಸಂಘದವರು, ಕಾಂಗ್ರೆಸ್ ಸರ್ಕಾರ ದುಪ್ಪಟ್ಟು ಕಮಿಷನ್ ಪಡೆಯುತ್ತಿದೆ ಎಂದು ಹೇಳಿ ಸಿಎಂಗೆ ಪತ್ರ ಬರೆದಿದ್ದಾರೆ. ಅಂದರೆ ಇದು 80 ಪರ್ಸೆಂಟ್ ಸರ್ಕಾರ ಎಂದು ತಿಳಿದುಬಂದಿದೆ. ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಎಲ್ಲರೂ ರಾಜೀನಾಮೆ ನೀಡಬೇಕು. ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕು ಎಂದು ಕಿಡಿಕಾರಿದರು.
ಸಚಿವರು ಲಂಚ ಪಡೆದಿಲ್ಲ ಎಂದಾದರೆ ಸ್ಪಷ್ಟನೆ ನೀಡಲಿ. ಇಲ್ಲವೆಂದರೆ ಎಲ್ಲರೂ ಲಂಚ ಪಡೆದಿದ್ದಾರೆ ಎಂದು ತಿಳಿಯಬೇಕಾಗುತ್ತದೆ. ನ್ಯಾ.ನಾಗಮೋಹನ ದಾಸ್ ಸಮಿತಿಯನ್ನು ಸರ್ಕಾರ ರದ್ದು ಮಾಡಿದೆ. ಭ್ರಷ್ಟಾಚಾರ ಬಯಲಾಗುವುದೆಂಬ ಕಾರಣಕ್ಕೆ ಈ ಕ್ರಮ ವಹಿಸಲಾಗಿದೆ. ಬಿಜೆಪಿ ಅವಧಿಯಲ್ಲಿ ಪೇ ಸಿಎಂ ಎಂಬ ಪೋಸ್ಟರ್ ಅಂಟಿಸಿದ್ದರು. ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.ಇದನ್ನೂ ಓದಿ: ಸಿಂಪಲ್ ಸುನಿ ಗತವೈಭದ ಟೀಸರ್ ರಿಲೀಸ್
ಬಿಡದಿಯಲ್ಲಿ ಅಭಿವೃದ್ಧಿಗಾಗಿ ಪಡೆದ ಜಮೀನನ್ನು ಹೆಚ್.ಡಿ.ಕುಮಾರಸ್ವಾಮಿ ಕೈ ಬಿಟ್ಟಿದ್ದರು. ನಾವು ಕೂಡ ಆ ಯೋಜನೆ ಕೈ ಬಿಟ್ಟಿದ್ದೆವು. ಈಗ ರಿಯಲ್ ಎಸ್ಟೇಟ್ ಮೂಲಕ ದುಡ್ಡು ಹೊಡೆಯಲು ಡಿ.ಕೆ.ಶಿವಕುಮಾರ್ ಈ ಯೋಜನೆ ಮತ್ತೆ ತಂದಿದ್ದಾರೆ. ಆನೇಕಲ್, ಯಲಹಂಕ ಮೊದಲಾದ ಭಾಗಗಳಲ್ಲಿ ನಿವೇಶನ ಮಾಡಿದ ನಂತರ ಬಿಡದಿಗೆ ಏಕೆ ಹೋಗುತ್ತಿದ್ದಾರೆ? ಈಗಾಗಲೇ ಅನೇಕ ನಿವೇಶನಗಳು ಖಾಲಿ ಇದೆ. ಬಿಡದಿಯಲ್ಲಿ ರೈತರ ಜಮೀನುಗಳಿವೆ. ಅಂತಹ ಫಲವತ್ತಾದ ಭೂಮಿಯಲ್ಲಿ ರಿಯಲ್ ಎಸ್ಟೇಟ್ ಮಾಡಬಾರದು ಎಂದರು.
ಜಾತಿ ಸಮೀಕ್ಷೆಯಲ್ಲಿ ಸಂಬಂಧವಿಲ್ಲದ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದ ಜಾತಿಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಸಮೀಕ್ಷೆಗೆ ಪೂರ್ವ ತಯಾರಿ ಮಾಡಿಲ್ಲ. ಕೇವಲ ಹದಿನೈದು ದಿನಗಳಲ್ಲಿ ಮುಗಿಸಿ ಎಂದು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ. ಸಾಕಷ್ಟು ಸಮಯ ಇಟ್ಟುಕೊಂಡು ಸಮೀಕ್ಷೆ ಮಾಡಬೇಕು. ಇದು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಇಷ್ಟಪಡಿಸಲು ಮಾಡುತ್ತಿರುವ ಸಮೀಕ್ಷೆ ಎಂದರು.
ಹಬ್ಬದ ಸಮಯದಲ್ಲಿ ಬಸ್ ದರ ಹೆಚ್ಚಳ ಮೂಲಕ ಸರ್ಕಾರ ಹಿಂದೂಗಳಿಗೆ ಬರೆ ಎಳೆದಿದೆ. ಇದು ಹಿಂದೂಗಳನ್ನು ಟಾರ್ಗೆಟ್ ಮಾಡುವ ಸರ್ಕಾರ. ಧರ್ಮಸ್ಥಳ, ಚಾಮುಂಡಿ ಬೆಟ್ಟವನ್ನು ಈಗಾಗಲೇ ಟಾರ್ಗೆಟ್ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯನವರು ಮತಾಂತರದ ರಾಯಭಾರಿ ಎಂದರು.ಇದನ್ನೂ ಓದಿ: ಮಳೆಯಲ್ಲಿ ರೋಷನ್ ಜೊತೆಯಲಿ ಅನುಶ್ರೀ ಜಾಲಿ ಟ್ರಿಪ್
– RSS ಎಂದಿಗೂ ಹಿಂದುಳಿದ ಜನರನ್ನ ಗೌರವದಿಂದ ನೋಡಿಲ್ಲ ಎಂದ ಕೈ ನಾಯಕ
ನವದೆಹಲಿ: ಕ್ರಿಕೆಟ್‌ನಿಂದ (Cricket) ದೇಶಭಕ್ತಿ ಅಳೆಯಲು ಸಾಧ್ಯವಿಲ್ಲ. ಕ್ರಿಕೆಟ್ ಗೆದ್ದರೆ ಯುದ್ಧವನ್ನೇ ಗೆದ್ದಂತಾಗಿಬಿಡ್ತಾ? ಅಂತ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ (BK Hariprasad) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪಾಕ್ ವಿರುದ್ಧ ಭಾರತ ಏಷ್ಯಾಕಪ್ ಗೆದ್ದ ಬಗ್ಗೆ ದೆಹಲಿಯಲ್ಲಿ (Delhi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ಘಟನೆ ಜನರ ಮನಸ್ಸಿನಿಂದ ಇನ್ನೂ ಅಳಿಸಿಲ್ಲ, ನೋವು ಹಾಗೇ ಇದೆ. ಈ ಸಂದರ್ಭದಲ್ಲಿ ಪಾಕ್ ಜೊತೆಗೆ ಕ್ರಿಕೆಟ್ ಆಡೋದು ಬೇಕಿತ್ತಾ? ನಿಜವಾದ ದೇಶಭಕ್ತಿ ಇದ್ರೆ ಕ್ರಿಕೆಟ್ ಅಲ್ಲ ಯಾವುದೇ ಸಂಬಂಧ ಇಟ್ಕೊಬಾರ್ದು ಎಂದು ತಿವಿದರು.
ಈ ಆಟದಲ್ಲಿ ಸಾವಿರಾರು ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತೆ. ಅಮಿತ್ ಶಾ (Amit Shah) ಮಗಾ ಜಯ್ ಶಾ ಬ್ಯುಸಿನೆಸ್ ಮಾಡೋಕೆ ಪಂದ್ಯ ಆಯೋಜಿಸ್ತಿದ್ದಾರೆ. ಇವರಿಗೆ ಕಾಂಗ್ರೆಸ್ ದೇಶಭಕ್ತಿ ಬಗ್ಗೆ ಮಾತನಾಡುವ ಅರ್ಹತೆ ಇಲ್ಲ. ಕ್ರಿಕೆಟ್ ಗೆದ್ದರೇ ಯುದ್ಧ ಗೆದ್ದಂತಾಗಿಬಿಡ್ತಾ ಅಂತ ಲೇವಡಿ ಮಾಡಿದ್ದಾರೆ.
RSS ಹಿಂದುಳಿದ ಜನರ ಗೌರವದಿಂದ ನೋಡಿಲ್ಲ
ಇನ್ನೂ ಜಾತಿ ಜನಗಣತಿಗೆ ಮಾಹಿತಿ ನೀಡಬೇಡಿ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಇದು ಕೇಂದ್ರ ಸಚಿವರ, ಸಂಸದರ ಹೇಳಿಕೆ ಅನಾರೋಗ್ಯ ಮನಸ್ಥಿತಿಯ ಹೇಳಿಕೆಯಾಗಿದೆ. ಇವರ ಪಿತೃಪಕ್ಷ ಆರ್‌ಎಸ್‌ಎಸ್, ಆರ್‌ಎಸ್‌ಎಸ್ ಎಂದಿಗೂ ಹಿಂದುಳಿದ ಜನರು, ಶೂಧ್ರರನ್ನು, ಪಂಚಮರನ್ನ ಗೌರವದಿಂದ ನೋಡಿಲ್ಲ. ಅವರನ್ನು ಕಾಲಾಳುಗಳಾಗಿ ಬಳಸಿಕೊಂಡಿದೆ. ಓಬಿಸಿಗಳಿಗೆ ಅವಕಾಶಗಳು ಸಿಕ್ಕರೇ ಅವರು ಸಮಾಜದಲ್ಲಿ ಮೇಲೆ ಬರುತ್ತಾರೆ ಎಂಬ ದುರುದ್ದೇಶದಿಂದ ಈ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಉದ್ದೇಶವನ್ನು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಜಾನಗಣತಿ ಗಣತಿ ಮಾಡುತ್ತದೆ. ನಾವು ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡುತ್ತಿದ್ದೇವೆ. ಸಮಾಜದಲ್ಲಿ ತುಳಿತಕ್ಕೊಳಾದ ಜನರ ಅಭಿವೃದ್ಧಿಗೆ ಮಾಡುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಸಭೆ ಮಾಡಿದ್ದಾರೆ. ಬಿಜೆಪಿ ನಾಯಕರು ಪ್ರಚೋಧನೆ ನೀಡಿ ಸರ್ಕಾರಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಇನ್ನೂ ಕುರುಬರನ್ನು ಎಸ್ಟಿಗೆ ಸೇರಿಸುವ ವಿಚಾರದ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಯಾವ ಜಾತಿಯನ್ನು ಎಲ್ಲಿ ಸೇರಿಸಬೇಕು ಎಂದು ಕೇಳುವ ಹಕ್ಕಿದೆ. ಇದನ್ನು ಎಸ್ಟಿ-ಎಸ್ಟಿ ಕಮಿಷನ್ ನಿರ್ಧಾರ ಮಾಡುತ್ತೆ, ಬಳಿಕ ಸಂಸತ್‌ನಲ್ಲಿನ ಇದು ನಿರ್ಧಾರವಾಗುತ್ತದೆ ಎಂದು ಹೇಳಿದರು.
ನವದೆಹಲಿ: ಟಿ.ವಿ ವಾಹಿನಿಯೊಂದರ ಚರ್ಚೆಯಲ್ಲಿ ಬಿಜೆಪಿಯ ಮಾಧ್ಯಮ ವಕ್ತಾರರೊಬ್ಬರು ‘ರಾಹುಲ್ ಗಾಂಧಿಯ ಎದೆಗೆ ಗುಂಡಿಕ್ಕಬೇಕು’ ಎಂಬ ಹೇಳಿಕೆಗೆ ಕಾಂಗ್ರೆಸ್ (Congress) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದಿರುವ ಕಾಂಗ್ರೆಸ್, ರಾಹುಲ್ ಗಾಂಧಿಯ (Rahul Gandhi) ಎದೆಗೆ ಗುಂಡು ಹಾರಿಸಲಾಗುವುದು ಎಂದು ಕೇರಳ ಬಿಜೆಪಿ ವಕ್ತಾರ ಪಿಂಟು ಮಹಾದೇವ್ ಅವರು ಹೇಳಿದ್ದು, ಈ ಕುರಿತು ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಇದನ್ನೂ ಓದಿ: ಬರೇಲಿಯ ‘ಐ ಲವ್ ಮುಹಮ್ಮದ್’ ಪ್ರತಿಭಟನೆಯಲ್ಲಿ ಹಿಂಸಾಚಾರ – ಮಾಸ್ಟರ್ ಮೈಂಡ್ ನದೀಮ್ ಅರೆಸ್ಟ್
ಪಕ್ಷದ ತಳಹಂತದ ಪದಾಧಿಕಾರಿಯೊಬ್ಬರು ನೀಡಿರುವ ಕ್ಷುಲ್ಲಕ ಹೇಳಿಕೆ ಇದು ಎಂದು ಅಸಡ್ಡೆ ತೋರಬಾರದು. ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನೀಡಿರುವ ದ್ವೇಷದ ಹೇಳಿಕೆ ಇದಾಗಿದೆ’ ಎಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಲೈಂಗಿಕ ಕಿರುಕುಳ ಕೇಸ್ | ನನ್ಗೆ ಪ್ರಧಾನಿ ಗೊತ್ತು – ಪೊಲೀಸರಿಗೇ ಬೆದರಿಕೆ ಹಾಕಿದ ಸ್ವಾಮಿ ಚೈತನ್ಯಾನಂದ ಸರಸ್ವತಿ
‘ಬಿಜೆಪಿಯ ಮಾಧ್ಯಮ ವಕ್ತಾರರಾಗಿ ಟಿ.ವಿ. ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸುವ ಎಬಿವಿಪಿಯ ಮಾಜಿ ಕಾರ್ಯಕರ್ತ ಪಿಂಟು ಮಹಾದೇವ್ ಹೇಳಿಕೆಯನ್ನು ನಿರ್ಲಕ್ಷ್ಯದಿಂದ ನೋಡಬಾರದು. ಅದು ಜೀವ ಬೆದರಿಕೆ’ ಎಂದಿರುವ ವೇಣುಗೋಪಾಲ್, ಆತನ ವಿರುದ್ಧ ತ್ವರಿತವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹಿರಿಯ ರಂಗಕರ್ಮಿ ಯಶವಂತ್ ಸರದೇಶಪಾಂಡೆ ಹೃದಯಾಘಾತದಿಂದ ನಿಧನ
ರಾಜಕೀಯ ಭಿನ್ನಾಭಿಪ್ರಾಯಗಳನ್ನು ಸಾಂವಿಧಾನಿಕ ಚೌಕಟ್ಟಿನೊಳಗೆ ಪರಿಹರಿಸಿಕೊಳ್ಳಬೇಕು. ಆದರೆ ಬಿಜೆಪಿ ನಾಯಕರು ತಮ್ಮ ವಿರೋಧಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ
ಚೆನ್ನೈ: ಡಿಎಂಕೆಗೆ ಮತ ಹಾಕಿದರೆ ಬಿಜೆಪಿಗೇ ಮತ ಹಾಕಿದಂತೆ. ಹೀಗಾಗಿ, ಬಿಜೆಪಿ ಜೊತೆ ಯಾವ ಕಾರಣಕ್ಕೂ ಕೈಜೋಡಿಸಲ್ಲ ಎಂದು ನಟ ಹಾಗೂ ಟಿವಿಕೆ ಮುಖ್ಯಸ್ಥ ವಿಜಯ್ ದಳಪತಿ ಅಭಿಪ್ರಾಯಪಟ್ಟಿದ್ದಾರೆ.
ಪಶ್ಚಿಮ ಕೊಂಗು ಪ್ರದೇಶದಲ್ಲಿ ಮೊದಲ ಬಾರಿಗೆ ಪ್ರಚಾರ ಆರಂಭಿಸಿದ ಟಿವಿಕೆ ಮುಖ್ಯಸ್ಥ ವಿಜಯ್, 2026 ರ ವಿಧಾನಸಭಾ ಚುನಾವಣೆಯಲ್ಲಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆಗೆ ಮತ ಹಾಕುವುದು ಬಿಜೆಪಿಗೆ ಮತ ಹಾಕಿದಂತೆ ಎಂದು ಹೇಳಿದ್ದಾರೆ. ಕೇಸರಿ ಪಕ್ಷದೊಂದಿಗಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ ಮೈತ್ರಿ ಅವಕಾಶವಾದಿತನದಿಂದ ಕೂಡಿದೆ ಎಂದು ಟೀಕಿಸಿದ್ದಾರೆ.
2021ರ ಚುನಾವಣೆ ವೇಳೆ ಡಿಎಂಕೆ ಹಲವಾರು ಭರವಸೆಗಳನ್ನು ನೀಡಿತ್ತು. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ತರುವಂತಹ ಭರವಸೆಗಳನ್ನು ಕಾರ್ಯಗತಗೊಳಿಸಿದ್ದಾರೆಯೇ? ಇತ್ತ ಅಮ್ಮನ (ಜಯಲಲಿತಾ) ಹೆಸರು ಜಪಿಸುತ್ತಿದ್ದರೂ, ಅವರ ಆದರ್ಶನಗಳನ್ನು ಎಐಎಡಿಎಂಕೆ ಮರೆತಿದೆ. ಬಿಜೆಪಿ ಜೊತೆ ಸೂಕ್ತವಲ್ಲದ ಮೈತ್ರಿ ಮಾಡಿಕೊಂಡಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ತಮಿಳುನಾಡಿನ ಕಲ್ಯಾಣಕ್ಕಾಗಿ ಇಂತಹ ಮೈತ್ರಿ ಏರ್ಪಟ್ಟಿತ್ತು ಎಂದು ಎಐಎಡಿಎಂಕೆ ಹೇಳಿಕೊಂಡಿದೆ. ಆದರೆ, ಟಿವಿಕೆ ಅಂತಹ ಅವಕಾಶವಾದಿ ರಾಜಕೀಯ ನಿಲುವನ್ನು ತೆಗೆದುಕೊಳ್ಳುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ತಮಿಳುನಾಡಿಗೆ ಏನು ಮಾಡಿದೆ? ಅದು ತಮಿಳುನಾಡಿಗೆ ನೀಟ್ ವ್ಯಾಪ್ತಿಯಿಂದ ವಿನಾಯಿತಿ ನೀಡಿದೆಯೇ? ಟಿವಿಕೆ ಸಾಮಾನ್ಯ ಜನರ ಧ್ವನಿಯಾಗಿದ್ದರೆ, ಡಿಎಂಕೆ ತಮಿಳುನಾಡನ್ನು ಲೂಟಿ ಮಾಡುತ್ತಿದೆ. 2026 ರ ವಿಧಾನಸಭಾ ಚುನಾವಣಾ ಹೋರಾಟ ಟಿವಿಕೆ ಮತ್ತು ಡಿಎಂಕೆ ನಡುವೆ ಎಂದು ಮಾತನಾಡಿದ್ದಾರೆ.
ಪಶ್ಚಿಮ ಕೊಂಗು ಪ್ರದೇಶದ ಭಾಗವಾಗಿರುವ ನಾಮಕ್ಕಲ್, ದಶಕಗಳಿಂದ ಎಐಎಡಿಎಂಕೆಯ ಭದ್ರಕೋಟೆಯಾಗಿತ್ತು. ಕೊಂಗು ಪ್ರದೇಶದಾದ್ಯಂತ ಬಿಜೆಪಿ ಪ್ರಭಾವ ಹೊಂದಿದೆ.
– ನನಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ, ನಾನು ಕೂಡ ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ: ಬಿಜೆಪಿ ಸಂಸದ
ಬೆಂಗಳೂರು: ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಹಾಗಾಗಿ, ಜಾತಿಗಣತಿ ಬಹಿಷ್ಕರಿಸಿ ಎಂದು ಜನತೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಕರೆ ಕೊಟ್ಟಿದ್ದಾರೆ.
ಜಾತಿಗಣತಿ (Caste Census) ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಜಾತಿಗಣತಿಯಲ್ಲಿ ಪಾಲ್ಗೊಳ್ಳಲ್ಲ. ನಂಗೆ ನನ್ನ ಮಾಹಿತಿ ಸುರಕ್ಷಿತವಾಗಿರುತ್ತೆ ಅನ್ನೋ ನಂಬಿಕೆ ಇಲ್ಲ. ಹೀಗಾಗಿ, ಸರ್ಕಾರದ ಮೇಲೆ ನಂಬಿಕೆ ಇರದೇ ಇರೋದ್ರಿಂದ ಇದರಲ್ಲಿ ಪಾಲ್ಗೊಳ್ಳಲ್ಲ. ನಿಮ್ಮ ಮಾಹಿತಿ ಸುರಕ್ಷಿತವಾಗಿರಲ್ಲ. ಜಾತಿ ಜಾತಿ ಮಧ್ಯೆ ಗಲಾಟೆ ತರಲು ಮಾತ್ರ ಇದನ್ನು ಮಾಡುತ್ತಿದ್ದಾರೆ. ದಯವಿಟ್ಟು ನೀವು ಇದರಲ್ಲಿ ಪಾಲ್ಗೊಳ್ಳಬೇಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಮೀಕ್ಷೆಗೆ ಸಿದ್ಧತೆ ಸರಿಯಾಗಿ ಮಾಡದೇ ಸರ್ಕಾರದಿಂದ ಗೊಂದಲ: ನಿಖಿಲ್
ಬೆಂಗಳೂರು ರಸ್ತೆ ಗುಂಡಿ ವಿಚಾರವಾಗಿ ಮಾತನಾಡಿ, ದೆಹಲಿಯಲ್ಲಿ ಗುಂಡಿ ಇದ್ಯೋ ಇಲ್ವೋ ಯಾಕೆ ಬೇಕು? ಬೆಂಗಳೂರು ಸರಿ ಮಾಡ್ಸಿ ಮೊದಲು. ದೆಹಲಿಯಲ್ಲಿ ಅದ್ಭುತ ಮೆಟ್ರೋ ಕನೆಕ್ಟಿವಿಟಿ ಇದೆ. ಬೆಂಗಳೂರಿನಲ್ಲಿ ಯಾಕಿಲ್ಲ? ಹೋಲಿಕೆ ಮಾಡೋದು ಯಾಕೆ? ಏಳು ಕಿಮೀ ನಡೆದುಕೊಂಡು ಹೋಗಿದ್ದೀನಿ. 100 ಮೀಟರ್‌ಗೊಂದು ರಾಶಿ ರಾಶಿ ಗುಂಡಿಗಳು ಇವೆ. ಅಧಿಕಾರಿಗಳು ನಮ್ ಮಾತು ಕೇಳೋದಾ? ಸಿಎಂ ಡಿಸಿಎಂ ಮಾತು ಕೇಳ್ತಾರಾ ಎಂದು ಪ್ರಶ್ನಿಸಿದ್ದಾರೆ.
ರಸ್ತೆ ಗುಂಡಿ ಮುಚ್ಚಿಸೋದು ದೊಡ್ಡ ದುಡ್ಡು ಕೊಡೋ ಕಾಮಧೇನು. ಈ ವಿಚಾರದಲ್ಲಿ ದೊಡ್ಡ ಸ್ಕ್ಯಾಮ್ ಇದೆ. ಎರಡು ಮೂರು ಮಳೆ ಬಂದ್ರೆ ರಸ್ತೆ ಕಿತ್ತೋಗುತ್ತೆ. ಜಿಬಿಐ ಹಳೆ ವೈನ್ ಹೊಸ ಬಾಟಲ್ ನಲ್ಲಿ ಹಾಕಿದ್ದಾರೆ. ಕಾಂಟ್ರ್ಯಾಕ್ಟರ್, ಅಧಿಕಾರಿಗಳು, ರಾಜಕೀಯ ನಾಯಕರು ಇವರೆಲ್ಲರೂ ಈ ಸ್ಕ್ಯಾಮ್‌ನಲ್ಲಿ ಭಾಗಿದಾರರು. ಕೆಟ್ಟದನ್ನು ಮಾತ್ರ ಹೋಲಿಕೆ ಮಾಡೋದು ಅಧಿಕಾರನಾ? 100 ಕಿಮೀ ಫ್ಲೈಓವರ್ ಅಂತಾರೆ. ಮೊದಲು 100 ಮೀಟರ್ ಗುಂಡಿಯಿಲ್ಲದ ರಸ್ತೆ ಕೊಡಿ ಸ್ವಾಮಿ. ರಸ್ತೆ ಹಾಕಿದ್ರೆ ಬೇರೆ ಕಡೆ ಎಂಟತ್ತು ವರ್ಷ ಬಾಳಿಕೆ ಬರುತ್ತೆ. ನಮ್ಮಲ್ಲಿ ಯಾಕೆ ತಿಂಗಳು ಬಾಳಿಕೆ ಬರುತ್ತೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಬಸವ ಧರ್ಮದ ಪರ ಇರೋನು, ಧರ್ಮದ ಕಾಲಮ್‌ನಲ್ಲಿ ಲಿಂಗಾಯತ ಧರ್ಮ ಅಂತನೇ ಬರೆಸ್ತೀನಿ: ಎಂ.ಬಿ ಪಾಟೀಲ್
ಬೆಂಗಳೂರು-ಮುಂಬೈ ಪ್ರಮುಖ ವ್ಯಾಪಾರದ ಹಬ್ ಆಗಲಿದೆ. ಇದುವರೆಗೆ ಒಂದು ಟ್ರೈನ್ ಇತ್ತು. ಬಹಳ ದೀರ್ಘಕಾಲದ ಪ್ರಯಾಣ. ಹೀಗಾಗಿ, ಸೂಪರ್ ಫಾಸ್ಟ್ ಟ್ರೈನ್‌ಗೆ ನಾಲ್ಕು ವರ್ಷದಿಂದ ಶ್ರಮ ಪಡುತ್ತಿದ್ದೆ. ಮೂರು ನಾಲ್ಕು ವಾರಗಳಲ್ಲಿ ಸೂಪರ್ ಫಾಸ್ಟ್ ಟ್ರೈನ್ ಓಡಾಡಲಿದೆ. ಟೈಂಟೇಬಲ್ ಫಿಕ್ಸ್ ಆಗಲಿದೆ. ಜರ್ನಿ ಅವರ್‌ನ್ನು ಸಂಪೂರ್ಣ ಕಡಿತ ಮಾಡುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.