Tag: ಬಿಜೆಪಿ

  • RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ PDO ಅಮಾನತು – ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಬಿಜೆಪಿ ಶಾಸಕ ಒತ್ತಾಯ

    RSS ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ PDO ಅಮಾನತು – ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಬಿಜೆಪಿ ಶಾಸಕ ಒತ್ತಾಯ

    ರಾಯಚೂರು: ಆರ್‌ಎಸ್‌ಎಸ್ (RSS) ಪಥಸಂಚಲನದಲ್ಲಿ ಭಾಗವಹಿಸಿದ್ದಕ್ಕೆ ಪಿಡಿಓ (PDO) ಅಮಾನತು ಮಾಡಿದ್ದ ಸರ್ಕಾರದ ಕ್ರಮ ಖಂಡಿಸಿ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಕಿಡಿಕಾರಿದ್ದಾರೆ.

    ಆರ್‌ಎಸ್‌ಎಸ್ ಹಾಗೂ ಕಾಂಗ್ರೆಸ್ ಜಟಾಪಟಿಯಲ್ಲಿ ಅಮಾನತಾಗಿರುವ ರಾಯಚೂರಿನ ಸಿರವಾರ ತಾಲೂಕಿನ ಪಿಡಿಓ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಆಪ್ತ ಸಹಾಯಕ ಪ್ರವೀಣ ಕುಮಾರ್ ವಿಚಾರ ಈಗ ಅತ್ಯಂತ ಚರ್ಚೆಗೆ ಗ್ರಾಸವಾಗಿದೆ. ಲಿಂಗಸುಗೂರಿನಲ್ಲಿ ಪಿಡಿಓ ಪ್ರವೀಣ್ ಕುಟುಂಬ ಕಣ್ಣೀರಾಕಿ ಸರ್ಕಾರದ ಕ್ರಮಕ್ಕೆ ಅಸಮಧಾನ ವ್ಯಕ್ತಪಡಿಸಿದೆ.ಇದನ್ನೂ ಓದಿ: ಯಾದಗಿರಿ | ಅನ್ನಭಾಗ್ಯ ಅಕ್ಕಿ ಬಳಿಕ ಜೋಳ, ಅವಧಿ ಮೀರಿದ ಹಾಲಿನ ಪೌಡರ್ ಪ್ಯಾಕೆಟ್ ಸೇರಿ ಅಕ್ರಮ ಜಾಲ ಪತ್ತೆ

    ಪ್ರವೀಣ್ ತಾಯಿ, ಪತ್ನಿ ನಮಗೆ ಅನ್ಯಾಯವಾಗಿದೆ ಅಂತ ಕಣ್ಣೀರಾಕಿದ್ದಾರೆ. ಪ್ರವೀಣ್ ಯಾವುದೇ ಅವ್ಯವಹಾರ ಮಾಡಿಲ್ಲ, ಪಥಸಂಚಲನಕ್ಕೆ ಹೋಗಿದ್ದೇ ದೊಡ್ಡ ತಪ್ಪಾ, ಈಗ ಮಾನಸಿಕವಾಗಿ ನೊಂದಿದ್ದಾನೆ. ನಮ್ಮ ಸಂಪರ್ಕಕ್ಕೂ ಸಿಗುತ್ತಿಲ್ಲ. ಈ ಹಿಂದೆಯೂ ಪಥಸಂಚಲನದಲ್ಲಿ ಭಾಗವಹಿದ್ದರು ಅದರಲ್ಲಿ ತಪ್ಪೇನಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿಲ್ಲ. ಪಥಸಂಚಲನ ಭಾಗವಹಿಸಿದ್ದಕ್ಕೆ ಕ್ರಮಾನಾ.. ಕೂಡಲೇ ಅಮಾನತು ಹಿಂಪಡೆಯಬೇಕು ಅಂತ ಪ್ರವೀಣ್ ತಾಯಿ ಸುರೇಖಾ ಪತ್ನಿ ಶ್ರೀದೇವಿ ಒತ್ತಾಯಿಸಿದ್ದಾರೆ.

    ಇನ್ನೂ ಪಿಡಿಓ ಅಮಾನತನ್ನ ಶಾಸಕ ಮಾನಪ್ಪ ವಜ್ಜಲ್ ಖಂಡಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಗುಬ್ಬಿ ಮೇಲೆ ಬ್ರಹ್ಮಾಸ್ತç ಬಿಟ್ಟಿದ್ದಾರೆ. ಯಾವುದೇ ನೋಟಿಸ್ ಕೊಡದೇ ಬಿಜೆಪಿ ಶಾಸಕನ ಪಿಎ ಅಂತ ಪ್ರವೀಣನ್ನ ಅಮಾನತು ಮಾಡಲಾಗಿದೆ. ನಾಲ್ಕು ವೋಟು ಬರ್ತವೆ ಅಂದ್ರೆ ಆರ್‌ಎಸ್‌ಎಸ್‌ನವರನ್ನ ಕಾಂಗ್ರೆಸ್ ತನ್ನ ಪಕ್ಷಕ್ಕೆ ಸೆಳೆಯುತ್ತೆ. ಆರ್‌ಎಸ್‌ಎಸ್ ಕಾರ್ಯಕರ್ತ ಗೋವಿಂದ ನಾಯಕ್‌ನನ್ನ ಕಾಂಗ್ರೆಸ್‌ನವರು ಲಿಂಗಸುಗೂರು ತಾಲೂಕು ಅಧ್ಯಕ್ಷ ಮಾಡಿದ್ದಾರೆ. ಆದ್ರೆ ನನ್ನ ಆಪ್ತ ಸಹಾಯಕನನ್ನ ಅಮಾನತು ಮಾಡಿದ್ದಾರೆ. ಇನ್ನೂ ಎಂಟು ದಿನದಲ್ಲಿ ಅಮಾನತು ಆದೇಶ ವಾಪಸ್ ಪಡೆಯಬೇಕು ಅಂತ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಆರೆಸ್ಸೆಸ್, ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?: ಶಾಸಕ ಮಂಜುನಾಥ ಭಂಡಾರಿ

  • ಆರೆಸ್ಸೆಸ್, ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?: ಶಾಸಕ ಮಂಜುನಾಥ ಭಂಡಾರಿ

    ಆರೆಸ್ಸೆಸ್, ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್ ಟ್ರೈನಿಂಗ್ ಕೊಡ್ತಿಲ್ಲ?: ಶಾಸಕ ಮಂಜುನಾಥ ಭಂಡಾರಿ

    ಮಂಗಳೂರು: ಆರ್‌ಎಸ್‌ಎಸ್‌ (RSS), ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾಕೆ ಲಾಠಿ, ಗನ್‌ ಟ್ರೈನಿಂಗ್‌ ಕೊಡ್ತಿಲ್ಲ ಎಂದು ಶಾಸಕ ಮಂಜುನಾಥ ಭಂಡಾರಿ (Manjunath Bhandary) ಪ್ರಶ್ನಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ (BJP) ಒಂದು ಪಾಕಿಸ್ತಾನ, ಇನ್ನೊಂದು ಮುಸ್ಲಿಂ ಇವೆರಡು ಬಿಟ್ರೆ ಏನೂ ಗೊತ್ತಿಲ್ಲ. ಬಿಜೆಪಿ 10 ವರ್ಷಗಳಲ್ಲಿ ನಡೆಸಿರುವ ಆಡಳಿತದಲ್ಲಿ ಯಾವುದನ್ನು ಹಿಡ್ಕೊಂಡು ಮತ ಕೇಳಿದ್ರಿ? ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೆಸ್ಸೆಸ್ ಬಗ್ಗೆ ಮಾತಾಡಿದ್ರೆ ದೇಶದ್ರೋಹಿ ಪಟ್ಟ ಕಟ್ಟುತ್ತೀರಿ. ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ರಲ್ಲಿ ಏನು ತಪ್ಪಿದೆ? ಆರೆಸ್ಸೆಸ್ ಹಿಂದುಳಿದ ವರ್ಗದ ಮಕ್ಕಳನ್ನು ಲಾಠಿ, ಗನ್ನು ಕೊಟ್ಟು ಕೊಡ್ತಾ ಇರೋ ತರಬೇತಿ ಏನು? ಸರ್ಕಾರ ಹೇಳಿದ್ದು ಆರೆಸ್ಸೆಸ್ ಸಹಿತ ಖಾಸಗಿ ಸಂಘಟನೆಗಳಿಗೆ ಸರ್ಕಾರಿ ಮೈದಾನ, ರಸ್ತೆ, ಶಾಲೆಗಳಲ್ಲಿ ಕಾರ್ಯಚಟುವಟಿಕೆ ನಡೆಸಲು ಅನುಮತಿ ಬೇಕು ಎಂದು ಅಷ್ಟೇ. ನಿಮಗೆ ಅನುಮತಿ ಪಡೆಯಲು ಏನು ಸಮಸ್ಯೆಯಿದೆ? ಆರೆಸ್ಸೆಸ್ ಸಂಘಟನೆಗೆ 100 ವರ್ಷಗಳು ಆಯ್ತು ಅಂತ ದೇಶಾದ್ಯಂತ ಪಥಸಂಚಲನ ನಡೆಸ್ತೀರಿ. ಇಷ್ಟು ವರ್ಷಗಳಲ್ಲಿ ಯಾಕೆ ಸಂಘಟನೆಯನ್ನು ನೋಂದಣಿ ಮಾಡಿಸಿಕೊಂಡಿಲ್ಲ? ನೋಂದಣಿ ಮಾಡಿಸಿಕೊಳ್ಳದ ಸಂಘಟನೆಗೆ ಎಲ್ಲಿಂದ ಹಣ ಬರುತ್ತದೆ? ಖಾತೆಯಲ್ಲಿ ಎಷ್ಟು ಹಣ ಇದೆ? ಇದರ ತರಬೇತಿ ಯಾವ ರೀತಿ ನಡೆಯುತ್ತೆ? ಅಂತ ಸಂವಿಧಾನದಲ್ಲಿ ಯಾಕೆ ಕೇಳಬಾರದು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈದ್ಗಾ ಮೈದಾನ ಬಳಿ ರಸ್ತೆಯಲ್ಲೇ ನಮಾಜ್ ಮಾಡ್ತಾರಪ್ಪ, ಪರ್ಮಿಷನ್ ತಗೋತಾರ ಅವ್ರು?: ಕೆ.ಎನ್.ರಾಜಣ್ಣ

    ಆರೆಸ್ಸೆಸ್ ಒಂದು ಸಂಘಟನೆಯೇ ಅಲ್ಲ. ಅದೊಂದು ಸಂಘಟನೆ ಆಗಿದ್ದರೆ ಅದಕ್ಕೆ ಕೆಲವೊಂದು ಮಾನದಂಡಗಳಿವೆ. ಮುಖ್ಯವಾಗಿ ನೋಂದಣಿ ಮಾಡಿರಬೇಕು. ಅದ್ಯಾವುದೂ ಇಲ್ಲದ ಆರೆಸ್ಸೆಸ್ ಮತ್ತು ಇತರ ಖಾಸಗಿ ಸಂಘಟನೆಗಳಿಗೆ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಸರ್ಕಾರ ನಿಷೇಧ ಹೇರಿದೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರ ಈ ನಿರ್ಧಾರ ಸರಿಯಾಗಿಯೇ ಇದೆ. ಅದನ್ನು ನಾನು ಸಹಿತ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಒಪ್ಪಿಕೊಳ್ಳುತ್ತೇವೆ ಎಂದರು.

    ವಿದ್ಯಾರ್ಥಿ ಜೀವನದಿಂದಲೇ ನಾನು ಆರೆಸ್ಸೆಸ್ ಬಿಜೆಪಿ ವಿರುದ್ಧ ಹೋರಾಟ ಮಾಡಿದವನು. ಯಡಿಯೂರಪ್ಪ ವಿರುದ್ಧ ಮಾತಾಡಿ ಎದುರು ಹಾಕಿಕೊಂಡವನು ನಾನು. ನಾವು ಕರಾವಳಿ ಕಾಂಗ್ರೆಸ್ಸಿಗರು ಪ್ರತಿಯೊಬ್ಬರೂ ಖರ್ಗೆ ಅವರ ಜೊತೆಗಿದ್ದೇವೆ. ಇಲ್ಲಿ ಆರೆಸ್ಸೆಸ್ ಬ್ಯಾನ್ ಆಗಿದೆ ಎಂದು ಬೊಬ್ಬೆ ಹೊಡೆಯುವವರು ಜನಸಾಮಾನ್ಯರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಇಲ್ಲಿ ಆರೆಸ್ಸೆಸ್ ಮಾತ್ರವಲ್ಲ ಯಾವುದೇ ಖಾಸಗಿ ಸಂಘಟನೆಗಳಿಗೆ ಸರ್ಕಾರಿ ಜಾಗ ಬಳಸುವುದಕ್ಕೆ ಅನುಮತಿ ಪಡೆಯಲೇಬೇಕಾಗಿದೆ. ಮಡಿಕೇರಿಯಲ್ಲಿ ಮಕ್ಕಳಿಗೆ ಗನ್ ತರಬೇತಿ ಕೊಟ್ಟಿದ್ದು, ನಾವೆಲ್ಲರೂ ನೋಡಿದ್ದೇವೆ. ಬಿಜೆಪಿ ಆರೆಸ್ಸೆಸ್ ನಾಯಕರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಶಿಕ್ಷಣಕ್ಕೆ ಉದ್ಯೋಗಕ್ಕೆ ಕಳುಹಿಸಿ ಇಲ್ಲಿ ಹಿಂದುಳಿದ ವರ್ಗಗಳ ಮಕ್ಕಳಿಗೆ ಶಸ್ತ್ರ ಕೊಟ್ಟು ಪ್ರಚೋದನೆ ಮಾಡುವುದು ಎಲ್ಲಿಯ ನ್ಯಾಯ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಾಳೆ RSS ಪಥ ಸಂಚಲನ – ಚಿತ್ತಾಪುರದಲ್ಲಿ ಹಾಕಿದ್ದ ಬ್ಯಾನರ್‌, ಬಂಟಿಂಗ್‌ ತೆರವು

    ದಿನೇಶ್ ಅಮೀನ್ ಮಟ್ಟು ಆರೋಪ ಮಾಡಿರುವಂತೆ ನಮ್ಮ ಕಾಲೇಜಿನಲ್ಲಿ ಆರೆಸ್ಸೆಸ್‌ನ ಯಾವುದೇ ರೀತಿಯ ಕಾರ್ಯಕ್ರಮ ಇಲ್ಲಿನವರೆಗೆ ನಡೆದಿಲ್ಲ. ಸೃಷ್ಟಿ ಅಂತ ಒಂದು ಪ್ರಾಜೆಕ್ಟ್ ಕಾರ್ಯಕ್ರಮ ನಡೆದಿತ್ತು. ಅದು ರಾಜ್ಯದ ಎಲ್ಲ ಇಂಜಿನಿಯರಿಂಗ್ ಕಾಲೇಜುಗಳ ಒಟ್ಟು ಸೇರುವಿಕೆಯಲ್ಲಿ ನಡೆದಿದ್ದ ವಿಜ್ಞಾನ ಮಾಡೆಲ್ ಕಾರ್ಯಕ್ರಮ. ಅದರಲ್ಲಿ ಎಬಿವಿಪಿ ಕೂಡ ಪಾಲು ಪಡೆದಿತ್ತು. ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ ಅದರಲ್ಲಿ ಪಾಲ್ಗೊಂಡ ಕಾರಣ ನಾನು ಭಾಗವಹಿಸಿದ್ದೆ. ಎಬಿವಿಪಿ ಸಮ್ಮೇಳನ, ಬೈಠಕ್ ನಡೆದಿದೆ ಎನ್ನುವವರು ಅದಕ್ಕೆ ಆಧಾರ ತೋರಿಸಲಿ. ಹೀಗೆ ಹೇಳುವವರು ಯಾವ ನೈತಿಕ ಆಧಾರದಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿದ್ರು? ಇಂದಿರಾ ಗಾಂಧಿ ಬಗ್ಗೆ ಬರೆದ್ರು, ರಾಜೀವ್ ಗಾಂಧಿ ಬಗ್ಗೆ ಬರೆದ್ರು ಆದ್ರೂ ಸಿದ್ಧಾಂತ ಗೊತ್ತಿಲ್ಲದೇ ಎಂಎಲ್‌ಸಿ ಟಿಕೆಟ್ ಕೊಡಿ ಅಂತ ಕೇಳಿದ್ರು? ಮುಂದೆ ಇಂತಹ ಆರೋಪ ಮಾಡಿದರೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಿಳಾ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ವಿಕಾಸ್ ಶೆಟ್ಟಿ, ನೀರಜ್ ಪಾಲ್, ಆರ್.ಪದ್ಮರಾಜ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

  • 24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

    24 ಗಂಟೆಯಲ್ಲಿ 300 ನಕ್ಸಲರ ಶರಣಾಗತಿ – ಭಯೋತ್ಪಾದನೆ ಮುಕ್ತ ಪ್ರದೇಶಗಳಲ್ಲಿ ಈ ಬಾರಿ ಶಾಂತಿಯ ದೀಪಾವಳಿ: ಮೋದಿ

    – ವಿಶ್ವದ ಮುಂದೆ ನನ್ನ ನೋವು ಹೇಳಿಕೊಳ್ತಿರೋದು ಇದೇ ಮೊದಲು; ಭಾವುಕ

    ಬೆಂಗಳೂರು: 24 ಗಂಟೆಯಲ್ಲಿ 300 ಮಾವೋವಾದಿಗಳು (Maoists Surrendered) ಶರಣಾಗಿದ್ದಾರೆ. ಒಂದು ಕಾಲದಲ್ಲಿ ಬಾಂಬ್‌ ಸ್ಫೋಟಿಸಿ ಹತ್ಯೆಗೈಯುತ್ತಿದ್ದ ಸ್ಥಳದಲ್ಲಿ ಈಗ ʻಒಲಿಂಪಿಕ್ಸ್‌ ಕ್ರೀಡಾಕೂಟʼದ ತಯಾರಿ ನಡೆಯುತ್ತಿದೆ. ಇದು ಅತಿದೊಡ್ಡ ಬೆಳವಣಿಗೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ನಕ್ಸಲರ ಶರಣಾಗತಿ ಬಗ್ಗೆ ಹೇಳಿದರು.

    ಖಾಸಗಿ ಸುದ್ದಿವಾಹಿನಿಯ ಜಾಗತಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 24 ಗಂಟೆಗಳಲ್ಲಿ 300 ಮಾವೋವಾದಿಗಳು ಸೇರಿ 75 ಗಂಟೆಗಳಲ್ಲಿ ಒಟ್ಟು 303 ನಕ್ಷಲರು ಶರಣಾಗಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ನಕ್ಸಲ್‌ (Naxals) ಕಾರ್ಯಾಚರಣೆ ವಿರುದ್ಧ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿದರು.

    ಇದೇ ಮೊದಲು ನನ್ನ ನೋವು ಹೇಳಿಕೊಳ್ತಿದ್ದೇನೆ
    ಮಾವೋವಾದಿಗಳು ಕಳೆದ 50-55 ವರ್ಷಗಳಲ್ಲಿ ಸಾವಿರಾರು ಜನರನ್ನ ಕೊಂದಿದ್ದಾರೆ. ಅಲ್ಲದೇ ಶಾಲೆಗಳನ್ನಾಗಲಿ, ಆಸ್ಪತ್ರೆಗಳನ್ನಾಗಲಿ ನಿರ್ಮಿಸಲು ಬಿಡಲಿಲ್ಲ. ವೈದ್ಯರನ್ನ ಚಿಕಿತ್ಸಾಲಯಗಳಿಗೆ ಹೋಗದಂತೆ ತಡೆದರು. ಹಲವು ಸಂಸ್ಥೆಗಳ ಮೇಲೆ ದಾಳಿ ಮಾಡ್ತಿದ್ದರು. ಮಾವೋವಾದಿಗಳ ಭಯೋತ್ಪಾದನೆಯಿಂದ ಯುವಜನರಿಗೆ ಅನ್ಯಾಯವಾಗಿತ್ತು. ಇದೆಲ್ಲದರಿಂದ ನಾನು ಬಹಳ ಕೋಪಗೊಂಡಿದ್ದೆ ಎನ್ನುತ್ತಾ. ಇದೇ ಮೊದಲಬಾರಿಗೆ ಜಗತ್ತಿನ ಮುಂದೆ ನನ್ನ ನೋವನ್ನ ಹೇಳಿಕೊಳ್ಳುತ್ತಿದ್ದೇನೆ ಎಂದು ಭಾವುಕರಾದರು.

    303 ಮಂದಿ ಶರಣಾಗತಿ
    ನಮ್ಮ ಸರ್ಕಾರ ಅನ್ಯಾಯಕ್ಕೆ ಒಳಗಾದ ಹಾಗೂ ದಾರಿ ತಪ್ಪಿದ ಯುವಜನರನ್ನ ತಲುಪಿ, ಮತ್ತೆ ಅವರನ್ನ ಮುಖ್ಯವಾಹಿನಿಗೆ ತರಲು ವಿಶೇಷ ಪ್ರಯತ್ನಗಳನ್ನ ನಡೆಸಿದೆ. ಇಡೀ ದೇಶ ಇಂದು ಈ ಪ್ರಯತ್ನಗಳ ಫಲಿತಾಂಶ ನೋಡುತ್ತಿದೆ. ಈಗ 303 ನಕ್ಸಲರು ಶರಣಾಗಿದ್ದಾರೆ. ಛತ್ತೀಸ್‌ಗಢದಲ್ಲಿ ಗುರುವಾರ ಒಂದೇ ದಿನ 170 ನಕ್ಸಲರು ಶರಣಾಗಿದ್ದಾರೆ. ಇವರು ಸಾಮಾನ್ಯ ಜನರಾಗಿರಲಿಲ್ಲ. ಇವರ ತಲೆಗೆ ಬಹುಮಾನ ನಿಗದಿ ಮಾಡಲಾಗಿತ್ತು. ಈಗ ಅವರೇ ಮುಕ್ತವಾಗಿ ಶರಣಾಗಿದ್ದು, ಅವರಿಂದ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

    ಸಾಮೂಹಿಕ ಶರಣಾಗತಿಯ ಪರಿಣಾಮವಾಗಿ ನಕ್ಸಲ್‌ ಪೀಡಿತ ಜಿಲ್ಲೆಗಳ ಸಂಖ್ಯೆ ಇಳಿಕೆಯಾಗಿದೆ. ಹಿಂದೆ 125 ಇದ್ದ ನಕ್ಸಲ್‌ ಪೀಡಿತ ಜಿಲ್ಲೆಗಳು ಈಗ 11ಕ್ಕೆ ಇಳಿಕೆಯಾಗಿದೆ. ನಕ್ಸಲ್‌ ಚಟುವಟಿಕೆಗಳನ್ನ ತಡೆಯುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ. ಈ ಹಿಂದೆ ಬಸ್ತಾರ್‌ನಲ್ಲಿ (ತೀವ್ರವಾಗಿ ಬಾಧಿತವಾದ ಜಿಲ್ಲೆ) ಮಾವೋಗಳು ವಾಹನಗಳನ್ನ ಸ್ಫೋಟಿಸಿ ಭದ್ರತಾ ಸಿಬ್ಬಂದಿಗಳನ್ನ ಹತ್ಯೆಗೈದಿದ್ದರು. ಇಂದು ಅಲ್ಲಿನ ಯುವಕರು ʻಬಸ್ತಾರ್‌ ಒಲಿಂಪಿಕ್ಸ್‌ʼ ಆಯೋಜಿಸುತ್ತಿದ್ದಾರೆ. ಇದು ಅತಿದೊಡ್ಡ ಬದಲಾವಣೆ. ಈಗ ಶಾಂತಿಯ ದೀಪಾವಳಿ ಆಚರಿಸಲು ಸಾಧ್ಯವಾಗುತ್ತದೆ ಎಂದು ಹರ್ಷವ್ಯಕ್ತಪಡಿಸಿದರು ಮೋದಿ.

    ಕಾಂಗ್ರೆಸ್‌ ಅವರನ್ನ ಗಮನಿಸಲಿಲ್ಲ. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ, ಈ ಪರಿಸರ ವ್ಯವಸ್ಥೆಯ ಕುರಿತು ಚರ್ಚೆಸೋದನ್ನೇ ಸಂಪೂರ್ಣವಾಗಿ ನಿಗ್ರಹಿಸಲಾಗಿತ್ತು ಎಂದು ವಾಗ್ದಾಳಿ ನಡೆಸಿದರು.

  • ಗುಜರಾತ್‌ ಸಿಎಂ ಹೊರತು ಪಡಿಸಿ ಎಲ್ಲಾ 16 ಸಚಿವರ ರಾಜೀನಾಮೆ

    ಗುಜರಾತ್‌ ಸಿಎಂ ಹೊರತು ಪಡಿಸಿ ಎಲ್ಲಾ 16 ಸಚಿವರ ರಾಜೀನಾಮೆ

    ಗಾಂಧಿನಗರ: ಅಚ್ಚರಿಯ ಬೆಳವಣಿಗೆಯಲ್ಲಿ ಗುಜರಾತ್‌ (Gujarat) ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ (Bhupendra Patel) ಹೊರತುಪಡಿಸಿ ಎಲ್ಲಾ 16 ಸಚಿವರು ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.

    ಬಿಜೆಪಿ (BJP) ಪಕ್ಷವು ಎಲ್ಲಾ 16 ಸಚಿವರ ರಾಜೀನಾಮೆಗಳನ್ನು ತೆಗೆದುಕೊಂಡಿದೆ. ಮುಖ್ಯಮಂತ್ರಿ ಪಟೇಲ್ ಹೊರತುಪಡಿಸಿ ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ಶುಕ್ರವಾರ ಬೆಳಿಗ್ಗೆ 11:30 ಕ್ಕೆ ಭೂಪೇಂದ್ರ ಪಟೇಲ್ ಅವರ ಸಚಿವ ಸಂಪುಟ ಪುನರ್‌ಚನೆ ಕಾರ್ಯಕ್ರಮ ನಿಗದಿಯಾಗಿದೆ. ಈ ಕಾರ್ಯಕ್ರಮದ ಒಂದು ದಿನ ಮುಂಚಿತವಾಗಿ ಸಚಿವರಿಂದ ರಾಜೀನಾಮೆಗಳನ್ನು ತೆಗೆದುಕೊಳ್ಳಲಾಗಿದೆ.  ಇದನ್ನೂ ಓದಿ:  ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ರಾಜಧಾನಿ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ರಾಜ್ಯಪಾಲ ಆಚಾರ್ಯ ದೇವವ್ರತ್‌ಜಿ ಅವರು ಸಂಪುಟದ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಗುಜರಾತ್‌ ಸಚಿವ ಸಂಪುಟದಲ್ಲಿ ಸಿಎಂ ಪಟೇಲ್ ಸೇರಿದಂತೆ 17 ಮಂದಿ ಸಚಿವರಿದ್ದರು. ಇವರಲ್ಲಿ ಎಂಟು ಮಂದಿ ಕ್ಯಾಬಿನೆಟ್ ದರ್ಜೆಯ ಮಂತ್ರಿಗಳಾಗಿದ್ದರೆ, ಇತರರು ರಾಜ್ಯ ಸಚಿವರಾಗಿದ್ದರು.  ಇದನ್ನೂ ಓದಿ:  ನಾಮಪತ್ರ ಸಲ್ಲಿಕೆಗೆ ನಾಳೆ ಡೆಡ್‌ಲೈನ್‌| ಇನ್ನೂ ಅಂತಿಮಗೊಳ್ಳದ ಸೀಟ್‌ ಹಂಚಿಕೆ – ಲಾಲೂಗೆ ರಾಹುಲ್‌ ಕರೆ

    ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಬುಡಕಟ್ಟು ಶಾಸಕರನ್ನು ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಲು ಬಿಜೆಪಿ ಮುಂದಾಗಿದೆ. ಆಪ್‌ ಬುಡಕಟ್ಟು ಜನರನ್ನು ಸೆಳೆಯುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

    ಹೊಸ ಸಂಪುಟವು 23 ಸದಸ್ಯರನ್ನು ಹೊಂದುವ ಸಾಧ್ಯತೆಯಿದೆ. ಜಾತಿ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಮಾಡಿ ಹೊಸ ಸಂಪುಟ ರಚನೆಗೆ ಬಿಜೆಪಿ ಈಗ ಕೈಹಾಕಿದೆ. 182 ಸದಸ್ಯರ ವಿಧಾನಸಭೆಯನ್ನು ಹೊಂದಿರುವ ಗುಜರಾತ್‌ನಲ್ಲಿ ಗರಿಷ್ಠ 27 ಮಂತ್ರಿಗಳಿರಬಹುದು. ಹೊಸ ಸಂಪುಟದಲ್ಲಿ ಯುವ ಮತ್ತು ಮಹಿಳಾ ನಾಯಕಿಯರಿಗೆ ಹೆಚ್ಚಿನ ಪ್ರಾತಿನಿಧ್ಯ ದೊರೆಯುವ ಸಾಧ್ಯತೆಯಿದೆ.

  • Bihar Elections 2025 | ಬಿಜೆಪಿಯ 101 ಅಭ್ಯರ್ಥಿಗಳ ಪಟ್ಟಿ ಪ್ರಕಟ; ಸಿಂಗರ್‌ ಮೈಥಿಲಿ ಠಾಕೂರ್‌ಗೂ ಟಿಕೆಟ್‌

    Bihar Elections 2025 | ಬಿಜೆಪಿಯ 101 ಅಭ್ಯರ್ಥಿಗಳ ಪಟ್ಟಿ ಪ್ರಕಟ; ಸಿಂಗರ್‌ ಮೈಥಿಲಿ ಠಾಕೂರ್‌ಗೂ ಟಿಕೆಟ್‌

    ಪಾಟ್ನಾ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 18 ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಬುಧವಾರ ತಡ ರಾತ್ರಿ ಬಿಡುಗಡೆ ಮಾಡಿದೆ. ಒಟ್ಟಾರೆ 3 ಹಂತಗಳಲ್ಲಿ 101 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಹಲವು ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿದೆ.

    ಬಿಜೆಪಿ ಮೊದಲ ಪಟ್ಟಿಯಲ್ಲಿ 71 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿತ್ತು. 2ನೇ ಪಟ್ಟಿಯಲ್ಲಿ 12 ಹಾಗೂ 3ನೇ ಪಟ್ಟಿಯಲ್ಲಿ 18 ಅಭ್ಯರ್ಥಿಗಳ ಹೆಸರನ್ನ ಪ್ರಕಟಿಸಿದೆ. ಅಂತಿಮ ಪಟ್ಟಿಯಲ್ಲಿ ಖ್ಯಾತ ಗಾಯಕಿ ಮೈಥಿಲಿ ಠಾಕೂ‌ರ್ (Maithili Thakur)ರಿಗೆ ಆಲಿನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    pm modi road show bihar

    ಬಿಜೆಪಿ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, 17 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಇನ್ನೂ ಜೆಡಿಯು ಕೂಡ 101 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಉಳಿದಂತೆ ಚಿರಾಗ್‌ ಪಾಸ್ವಾನ್‌ ನೇತೃತ್ವದ ಎಲ್‌ಜೆಪಿ 29, ಎಚ್‌ಎಎಂ 6 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಇದನ್ನೂ ಓದಿ: Bihar Elections | 57 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಜೆಡಿಯು

    ಇಂಡಿಯಾ ಮೈತ್ರಿಕೂಟದ ಕಾಂಗ್ರೆಸ್, ಆರ್‌ಜೆಡಿ ಪಕ್ಷಗಳು ಅಧಿಕೃತವಾಗಿ ಯಾವುದೇ ಅಭ್ಯರ್ಥಿಗಳನ್ನ ಘೋಷಣೆ ಮಾಡಿಲ್ಲ. ಇನ್ನೂ ಸೀಟು ಹಂಚಿಕೆ ಕಸರತ್ತು ನಡೆಯುತ್ತಿದೆ. ಆದ್ರೆ ಕಾಂಗ್ರೆಸ್‌ ಸೀಟು ಹಂಚಿಕೆಗೆ ಮುನ್ನವೇ 16 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ ಎಂದು ತಿಳಿದುಬಂದಿದೆ.

    ಈ ಬಾರಿ ಬಿಹಾರದಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್‌ 6ರಂದು ಮೊದಲ ಹಾಗೂ ನವೆಂಬರ್‌ 11 ರಂದು 2ನೇ ಹಂತದ ಮತದಾನ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ಪವರ್‌ ಕಟ್‌ ಸಮಸ್ಯೆಯಿದೆ: ಆಂಧ್ರ ಐಟಿ ಸಚಿವ

    ಈ ಬಾರಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ಕುಮಾರ್‌ (Nitish Kumar) ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿ (RJD) ನೇತೃತ್ವದ ಮಹಾಘಟಬಂಧನ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಎನ್‌ಡಿಎ ಪ್ರಸ್ತುತ 131 ಸ್ಥಾನಗಳನ್ನು ಹೊಂದಿದ್ದರೆ ವಿರೋಧ ಪಕ್ಷ 111 ಸ್ಥಾನಗಳನ್ನು ಹೊಂದಿದೆ. ಇನ್ನುಳಿದಂತೆ ಬಿಜೆಪಿ 80, ಜೆಡಿ(ಯು) 45, ಎಚ್‌ಎಎಂ(ಎಸ್) 4 ಮತ್ತು ಇಬ್ಬರು ಸ್ವತಂತ್ರರು ಎನ್‌ಡಿಎಗೆ ಬಲ ನೀಡಿದರೆ ಆರ್‌ಜೆಡಿ 77, ಕಾಂಗ್ರೆಸ್ 19, ಸಿಪಿಐ(ಎಂಎಲ್) 11, ಸಿಪಿಐ(ಎಂ) 2 ಮತ್ತು ಸಿಪಿಐ 2 ಸ್ಥಾನ ಹೊಂದಿದೆ.

  • ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

    ಹಿಂದಿ ಸಿನಿಮಾ, ಹಾಡುಗಳನ್ನು ನಿಷೇಧಿಸುವ ಮಸೂದೆಗೆ ವಿರೋಧ- ಯೂಟರ್ನ್‌ ಹೊಡೆದ ತಮಿಳುನಾಡು ಸರ್ಕಾರ

    ಚೆನ್ನೈ: ಭಾರೀ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಿಂದಿ ಹೇರಿಕೆಯನ್ನು (Hindi Impostion) ನಿಷೇಧಿಸುವ ಮಸೂದೆಯನ್ನು ಮಂಡನೆ ಮಾಡದೇ ಇರಲು ತಮಿಳುನಾಡು (Tamil Nadu) ಸರ್ಕಾರ ನಿರ್ಧರಿಸಿದೆ.

    ರಾಜ್ಯದ್ಯಂತ ಹಿಂದಿ ಹೋರ್ಡಿಂಗ್‌ಗಳು, ಬೋರ್ಡ್‌ಗಳು, ಚಲನಚಿತ್ರಗಳು ಮತ್ತು ಹಾಡುಗಳನ್ನು ನಿಷೇಧಿಸುವ ಮಸೂದೆ ಮಂಡಿಸಲು ತಮಿಳುನಾಡು ಸರ್ಕಾರ ಮುಂದಾಗಿತ್ತು.

    ಈ ಪ್ರಸ್ತಾವಿತ ಮಸೂದೆ ಸಂವಿಧಾನ ವ್ಯಾಪ್ತಿಯ ಒಳಗಡೆ ಇರಲಿದೆ. ಮಸೂದೆಯ ಬಗ್ಗೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ನಡೆಸಲಾಗಿತ್ತು ಎಂದು ಸರ್ಕಾರ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದವು.

    ಮಸೂದೆಯ ಕುರಿತು ಪ್ರತಿಕ್ರಿಯಿಸಿದ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ನಾವು ಅದನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ಕರ್ನಾಟಕದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ಪವರ್‌ ಕಟ್‌ ಸಮಸ್ಯೆಯಿದೆ: ಆಂಧ್ರ ಐಟಿ ಸಚಿವ

    ತಮಿಳುನಾಡು ಬಿಜೆಪಿಯೂ (BJP) ಸರ್ಕಾರದ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದೆ.ಬಿಜೆಪಿಯ ವಿನೋಜ್ ಸೆಲ್ವಂ ಸರ್ಕಾರದ ಕ್ರಮವನ್ನು ಇದೊಂದು ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ. ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದಿದ್ದಾರೆ.  ಇದನ್ನೂ ಓದಿ:  ಬೆಂಗಳೂರು | ಆರೋಗ್ಯ ಸಮಸ್ಯೆ ಮುಚ್ಚಿಟ್ಟು ಮದುವೆಯಾದ ಪತ್ನಿಗೆ ಇಂಜೆಕ್ಷನ್‌ ಕೊಟ್ಟು ಕೊಂದ ಕಿಲ್ಲರ್‌ ಡಾಕ್ಟರ್‌

    ತಿರುಪರಾನುಕುಂದ್ರಂ, ಕರೂರ್ ಸಿಬಿಐ ತನಿಖೆ ಮತ್ತು ಆರ್ಮ್‌ಸ್ಟ್ರಾಂಗ್ ವಿಷಯಗಳು ಸೇರಿದಂತೆ ಇತ್ತೀಚಿನ ನ್ಯಾಯಾಲಯದ ಪ್ರಕರಣಗಳಲ್ಲಿ ಆಡಳಿತಾರೂಢ ಡಿಎಂಕೆಗೆ ಹಿನ್ನಡೆಯಾಗಿದೆ. ವಿವಾದಾತ್ಮಕ ಫಾಕ್ಸ್‌ಕಾನ್ ಹೂಡಿಕೆ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಈ ವಿಚಾರವನ್ನು ಮುನ್ನೆಲೆಗೆ ತಂದಿದೆ ಪ್ರತಿಪಕ್ಷಗಳು ದೂರಿವೆ. ಇದನ್ನೂ ಓದಿ:  ತಮಿಳುನಾಡಿನಲ್ಲಿ ಹಿಂದಿ ಹೋರ್ಡಿಂಗ್ಸ್‌, ಸಿನಿಮಾ, ಹಾಡುಗಳ ನಿಷೇಧ?

    ಈ ವರ್ಷದ ಮಾರ್ಚ್‌ನಲ್ಲಿ ಎಂಕೆ ಸ್ಟಾಲಿನ್ ಸರ್ಕಾರವು 2025–26 ರ ರಾಜ್ಯ ಬಜೆಟ್ ಲೋಗೋದಲ್ಲಿ ರಾಷ್ಟ್ರೀಯ ರೂಪಾಯಿ ಚಿಹ್ನೆಅನ್ನು ತಮಿಳು ಅಕ್ಷರ ರೂ.ನೊಂದಿಗೆ ಬದಲಾಯಿಸಿತ್ತು. ಈ ಬದಲಾವಣೆಯನ್ನು ಬಿಜೆಪಿ ನಾಯಕರು ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟೀಕಿಸಿದ್ದರು. ಆದರೂ ಡಿಎಂಕೆ ತಮಿಳು ಭಾಷೆಯನ್ನು ಉತ್ತೇಜಿಸಿಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.

  • ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ ಬಿಜೆಪಿ – ಸ್ಪೀಕರ್‌ಗೆ ಕೊಟ್ಟಿಲ್ಲ ಟಿಕೆಟ್

    ಪಾಟ್ನಾ: ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ದ ಸೀಟು ಹಂಚಿಕೆ ಒಪ್ಪಂದದಲ್ಲಿ ಬಿಕ್ಕಟ್ಟು ಮುಂದುವರಿದಿದೆ. ಈ ನಡುವೆಯೇ, ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಮಂಗಳವಾರ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಪಟ್ಟಿಯಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಇಬ್ಬರೂ ಇದ್ದಾರೆ. ಆದರೆ, ಪಕ್ಷವು ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರನ್ನು ಪಾಟ್ನಾ ಸಾಹಿಬ್ ಸ್ಥಾನದಿಂದ ಕೈಬಿಟ್ಟಿದೆ. ಅವರು 2010 ರಿಂದ ಪ್ರತಿನಿಧಿಸುತ್ತಿದ್ದಾರೆ.

    ಚೌಧರಿ ತಾರಾಪುರದಿಂದ ಸ್ಪರ್ಧಿಸಿದರೆ, ಸಿನ್ಹಾ ಲಖಿಸರಾಯ್‌ನಿಂದ ಸ್ಪರ್ಧಿಸಲಿದ್ದಾರೆ. ದಾನಪುರದಿಂದ ಸ್ಪರ್ಧಿಸಲಿರುವ ಪಕ್ಷದ ಹಿರಿಯ ನಾಯಕ ರಾಮ್ ಕೃಪಾಲ್ ಯಾದವ್, ಗಯಾದಿಂದ ಪ್ರೇಮ್ ಕುಮಾರ್, ಕತಿಹಾರ್‌ನಿಂದ ಮಾಜಿ ಉಪಮುಖ್ಯಮಂತ್ರಿ ತಾರ್ಕಿಶೋರ್ ಪ್ರಸಾದ್, ಸಹರ್ಸಾದಿಂದ ಅಲೋಕ್ ರಂಜನ್ ಝಾ ಮತ್ತು ಸಿವಾನ್‌ನಿಂದ ಮಂಗಲ್ ಪಾಂಡೆ ಸೇರಿದಂತೆ ಇತರ ಕೆಲವು ಪ್ರಮುಖ ಹೆಸರುಗಳು ಸೇರಿವೆ.

    ಏತನ್ಮಧ್ಯೆ, ಪಕ್ಷವು ಹಿಸುವಾ ಸ್ಥಾನವನ್ನು ಉಳಿಸಿಕೊಂಡಿದೆ. ಅನಿಲ್ ಕುಮಾರ್ ಅವರನ್ನು ತನ್ನ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಿದೆ. ಮಹತ್ವದ ಬದಲಾವಣೆಯೊಂದರಲ್ಲಿ, ಬಿಹಾರ ವಿಧಾನಸಭಾ ಸ್ಪೀಕರ್ ನಂದ ಕಿಶೋರ್ ಯಾದವ್ ಅವರನ್ನು ಕೈಬಿಡಲಾಗಿದೆ. ರತ್ನೇಶ್ ಕುಶ್ವಾಹ ಅವರನ್ನು ಪಾಟ್ನಾ ಸಾಹಿಬ್‌ನಿಂದ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

    ಬಿಜೆಪಿ ಪಟ್ಟಿಯನ್ನು ಪ್ರಕಟಿಸುವ ಕೆಲವೇ ಗಂಟೆಗಳ ಮೊದಲು, ಚೌಧರಿ ಸಾಮಾಜಿಕ ಮಾಧ್ಯಮದಲ್ಲಿ ಎನ್‌ಡಿಎ ಪಕ್ಷಗಳ ನಡುವಿನ ಸೀಟು ಹಂಚಿಕೆ ಬಿಕ್ಕಟ್ಟನ್ನು ‘ಸೌಹಾರ್ದಯುತ ಚರ್ಚೆಯ ಮೂಲಕ ಪರಿಹರಿಸಲಾಗಿದೆ’ ಎಂದು ಘೋಷಿಸಿದ್ದಾರೆ. ಆಡಳಿತಾರೂಢ ಮೈತ್ರಿಕೂಟವು ತನ್ನ ಸೀಟು ಹಂಚಿಕೆ ಸೂತ್ರವನ್ನು ಘೋಷಿಸಿತ್ತು. ಅದರಡಿಯಲ್ಲಿ ಬಿಜೆಪಿ ಮತ್ತು ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

    243 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಮೊದಲ ಹಂತದಲ್ಲಿ ಚುನಾವಣೆಗೆ ನಡೆಯುವ 121 ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಕೊನೆಯ ದಿನಾಂಕವಾಗಿದ್ದರೆ, ಎರಡನೇ ಹಂತದಲ್ಲಿ 122 ಸ್ಥಾನಗಳಿಗೆ ಅಕ್ಟೋಬರ್ 20 ಕೊನೆಯ ದಿನಾಂಕವಾಗಿದೆ.

  • ಬಿಜೆಪಿಯಲ್ಲೂ ʻನವೆಂಬರ್‌ ಕ್ರಾಂತಿʼ ಇದೆ – ನಿತಿನ್ ಗಡ್ಕರಿ ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ: ಸಂತೋಷ್‌ ಲಾಡ್‌ ಬಾಂಬ್‌

    ಬಿಜೆಪಿಯಲ್ಲೂ ʻನವೆಂಬರ್‌ ಕ್ರಾಂತಿʼ ಇದೆ – ನಿತಿನ್ ಗಡ್ಕರಿ ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ: ಸಂತೋಷ್‌ ಲಾಡ್‌ ಬಾಂಬ್‌

    – ಸಚಿವ ಸಂಪುಟ ಪುನಾರಚನೆ ಮಾಡುವುದಾದ್ರೆ ಸಿಎಂ-ಡಿಸಿಎಂಗೆ ಪೂರ್ಣ ಅಧಿಕಾರ
    – 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ, RSSಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ; ಲೇವಡಿ

    ಬೀದರ್‌: ಕೇಂದ್ರ ಬಿಜೆಪಿಯಲ್ಲೂ ʻನವೆಂಬರ್‌ ಕ್ರಾಂತಿʼ ಇದೆ. ನಿತಿನ್‌ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಸಚಿವ ಸಂತೋಷ್‌ ಲಾಡ್‌ (Santosh Lad) ಹೊಸ ಬಾಂಬ್‌ ಸಿಡಿಸಿದ್ದಾರೆ.

    ಬೀದರ್‌ನಲ್ಲಿ (Bidar) ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿನ್ನರ್‌ ಮೀಟಿಂಗ್‌ನಲ್ಲಿ ಸಂಪುಟ ಪುನರ್‌ ರಚನೆ (Cabinet reshuffle) ಬಗ್ಗೆ ಮಾತನಾಡಿಲ್ಲ. ಸಂಪುಟ ಪುನರ್‌ರಚನೆ ಮಾಡುವುದಾದ್ರೆ ಸಿಎಂ ಡಿಸಿಎಂಗೆ ಪೂರ್ಣ ಅಧಿಕಾರ ಇದೆ, ಮಾಡಲಿ. ಅಲ್ಲದೇ ನಮಗೂ ಕೇಂದ್ರದ ʻನವಂಬರ್ ಕಾಂತ್ರಿʼ ಬಗ್ಗೆ ಕುತೂಹಲವಿದೆ. ನಿತಿನ್ ಗಡ್ಕರಿ ಅವರು ಪ್ರಧಾನಿ ಆಗ್ತಾರೆ ಅನ್ನೋ ಮಾಹಿತಿ ಇದೆ ಎಂದು ಹೇಳಿದ್ದಾರೆ.

    RSSಗೆ ವಿಶೇಷ ದೇಶಪ್ರೇಮ ಇಲ್ಲ:
    ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಿಂದ ಆರ್‌ಎಸ್‌ಎಸ್‌ ಬ್ಯಾನ್‌ ಬಗ್ಗೆ ಮಾತನಾಡಿ, 145 ಕೋಟಿ ಭಾರತೀಯರೂ ದೇಶ ಪ್ರೇಮಿಗಳೇ ಆರ್‌ಎಸ್‌ಎಸ್‌ಗೆ ವಿಶೇಷವಾಗಿ ದೇಶ ಪ್ರೇಮ ಇಲ್ಲ. ಈ ಹಿಂದೇ 3 ಸಾವಿರ ಕೋಟಿ ಖರ್ಚು ಮಾಡಿ ಸರ್ದಾರ್ ವಲ್ಲಭಭಾಯ್ ಪಟೇಲ್ ಪ್ರತಿಮೆ ನಿರ್ಮಾಣ ಮಾಡಿದ್ದು ಅವರು ಕಾಂಗ್ರೆಸ್‌ನಲ್ಲಿ ಇದ್ದಾಗ ಪ್ರತಿಮೆ ಮಾಡಲು ಬಿಜೆಪಿ ವಿರೋಧ ಮಾಡಿದ್ರು ಎಂದು ಕುಟುಕಿದರು.

    ಇನ್ನೂ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಗ್ಯಾರೆಂಟಿ ಹೊರೆಯಿಂದ ಅಭಿವೃದ್ಧಿ ಕುಂಟಿತ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಲಾಡ್, ನಮ್ಮ ಗ್ಯಾರಂಟಿಗಳನ್ನ ಹಿಡಿದುಕೊಂಡು ಮೋದಿ ಓಡಾಡುತ್ತಿದ್ದಾರೆ. ಬಿಹಾರ್ ಎಲೆಕ್ಷನ್‌ನಲ್ಲಿ ಮಹಿಳೆಯರಿಗೆ ಒಂದು ಮತಕ್ಕೆ 10 ಸಾವಿರ ರೂ. ಕೊಡುತ್ತಿದ್ದಾರೆ. ಮೋದಿ ಸಾಹೇಬ್ರು ನಮ್ಮ ಗ್ಯಾರಂಟಿಗಳನ್ನ ಬಿಹಾರ ಚುನಾವಣೆಯಲ್ಲಿ ಬಳಸುತ್ತಿದ್ದಾರೆ ಎಂದು ಕಿಡಿ ಕಾರಿದರು.

  • RSS ಬಗ್ಗೆ ಖರ್ಗೆಗೆ ಏನೂ ಕಿಸಿಯೋಕೆ ಆಗ್ಲಿಲ್ಲ, ಪ್ರಿಯಾಂಕ್‌ಗೆ ಆಗುತ್ತಾ? – ಯತ್ನಾಳ್ ಕಿಡಿ

    RSS ಬಗ್ಗೆ ಖರ್ಗೆಗೆ ಏನೂ ಕಿಸಿಯೋಕೆ ಆಗ್ಲಿಲ್ಲ, ಪ್ರಿಯಾಂಕ್‌ಗೆ ಆಗುತ್ತಾ? – ಯತ್ನಾಳ್ ಕಿಡಿ

    -ಬಿಹಾರ ಚುನಾವಣೆಗೆ ಫಂಡಿಂಗ್‌ಗಾಗಿ ಸಿಎಂ ಡಿನ್ನರ್ ಕರೆದಿದ್ದಾರೆ

    ಬೆಂಗಳೂರು: RSS ಬಗ್ಗೆ ಖರ್ಗೆಗೆ ಏನೂ ಕಿಸಿಯೋಕೆ ಆಗ್ಲಿಲ್ಲ, ಇನ್ನೂ ಪ್ರಿಯಾಂಕ್‌ಗೆ ಆಗುತ್ತಾ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕಿಡಿಕಾರಿದ್ದಾರೆ.

    ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಉರಿಯುತ್ತಿರುವ ಬೆಂಕಿಯ ಮನೆಯಾಗಿದೆ. ಅಲ್ಲಿ ದಲಿತರಿಗೆ ಸ್ಥಾನ ಇಲ್ಲ ಅಂದ್ರೆ ಅಂಬೇಡ್ಕರ್ ಅನುಯಾಯಿಗಳು ಕಾಂಗ್ರೆಸ್‌ನಲ್ಲಿ ಇರಬಾರದು. ಅಂಬೇಡ್ಕರ್ ವಿರುದ್ಧ ಇರುವ ಖರ್ಗೆ ದಲಿತ ನಾಯಕರಲ್ಲ. ಖರ್ಗೆ ಕುಟುಂಬ ಅಂಬೇಡ್ಕರ್ ವಿಚಾರಗಳಿಂದ ದೂರವಿದ್ದು, ತಾಲಿಬಾನಿಯರನ್ನು ಬೆಂಬಲಿಸುತ್ತಾರೆ. ಗಾಂಧಿ ಕುಟುಂಬದ ಚೇಲಾ ಪ್ರಿಯಾಂಕ್ ಖರ್ಗೆ. ಅವರ ತಂದೆ, ಇಂದಿರಾ ಗಾಂಧಿ, ನೆಹರೂ ಅವರಿಗೂ ಸಂಘದ ಬಗ್ಗೆ ಏನೂ ಕಿಸಿಯಲು ಆಗಿಲ್ಲ. ಇನ್ನೂ ಪ್ರಿಯಾಂಕ್ ಖರ್ಗೆಗೆ ಏನು ಕಿಸಿಯಲು ಆಗುತ್ತೆ? ಬಿಜೆಪಿ ಬಗ್ಗೆ, ಆರ್‌ಎಸ್‌ಎಸ್ ಬಗ್ಗೆ ಮಾತಾಡುವಷ್ಟು ಪ್ರಿಯಾಂಕ್ ಖರ್ಗೆ ಪರಿಪಕ್ವ ಆಗಿಲ್ಲ. ಯಾವ ಶಾಖೆ ಬಂದ್ ಮಾಡ್ತಾರೋ ನೋಡೋಣ. ಮುಂದೆ ನಮ್ಮ ಸರ್ಕಾರ ಬಂದಾಗ ಬಡ್ಡಿ ಸಮೇತ ನೋಡಿಕೊಳ್ತೇವೆ. ಅಕ್ರಮ ಮಸೀದಿಗಳನ್ನು ಮೊದಲು ತೆಗೆದು ಹಾಕಿ ನಂತರ ಆರ್‌ಎಸ್‌ಎಸ್ ಬಗ್ಗೆ ಮಾತಾಡಲಿ. ಇನ್ನೆರಡು ವರ್ಷ ಹಾರಾಡಿಕೊಳ್ಳಲಿ, ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಸಿಎಂ ಡಿನ್ನರ್ ಪಾರ್ಟಿಗೂ ಅಧಿಕಾರ ಹಸ್ತಾಂತರಕ್ಕೂ ಸಂಬಂಧ ಇಲ್ಲ – ಪರಮೇಶ್ವರ್‌

    ಇನ್ನೂ ಬಿಹಾರ ಚುನಾವಣೆಗೆ ಫಂಡಿಂಗ್ ಬೇಕಾಗಿದೆ. ಅದಕ್ಕೆ ಫಂಡ್ ಸಂಗ್ರಹಿಸಲು ಸಿಎಂ ಡಿನ್ನರ್ ಕರೆದಿದ್ದಾರೆ. ಇತ್ತ ಡಿಕೆಶಿ ಬೆಂಗಳೂರಿನಲ್ಲಿ ಚದರಡಿಗೆ 75 ರೂ. ಕಲೆಕ್ಟ್ ಮಾಡ್ತಿದ್ದಾರೆ, ಅದರಲ್ಲಿ 50 ರೂ. ಬಿಹಾರ ಚುನಾವಣೆಗೆ ಕೊಡಿ ಅಂತ ಕೇಳಿದ್ದಾರೆ. ಹೈಕಮಾಂಡ್‌ಗೆ ಸಿದ್ದರಾಮಯ್ಯ ಜಾಸ್ತಿ ಫಂಡ್ ಕೊಡ್ತಾರೋ ಅಥವಾ ಡಿಕೆಶಿ ಜಾಸ್ತಿ ಫಂಡ್ ಕೊಡ್ತಾರೋ ಅಂತ ಪೈಪೋಟಿ ಇದೆ. ಯಾರು ಹೆಚ್ಚು ಫಂಡ್ ಕೊಡ್ತಾರೆ ಅನ್ನೋದರ ಮೇಲೆ ನವೆಂಬರ್ ಕ್ರಾಂತಿ ನಡೆಯುತ್ತದೆ. ಯಾರು ಎಷ್ಟು ಫಂಡ್ ಕೊಡ್ತಾರೆ ಅದರ ಮೇಲೆ ಸಿಎಂ ಸ್ಥಾನ ನಿಂತಿದೆ ಎಂದು ಬಾಂಬ್ ಸಿಡಿಸಿದ್ದಾರೆ.

    ಇದೇ ವೇಳೆ ಹೆಚ್‌ಡಿಡಿ ಆರೋಗ್ಯದ ಬಗ್ಗೆ ಮಾತನಾಡಿ, ದೇವೇಗೌಡರು ಆರೋಗ್ಯವಾಗಿದ್ದಾರೆ, ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಅವರ ಸ್ಮರಣ ಶಕ್ತಿ, ಕ್ರಿಯಾಶೀಲತೆ ದೇಶಕ್ಕೆ ಮಾದರಿ. ಅತ್ಯಂತ ಆತ್ಮೀಯತೆಯಿಂದ ಅವರು ನಮ್ಮನ್ನು ಮಾತಾಡಿಸಿದರು. ಅವರು ದೇಶಕ್ಕೆ ಆಸ್ತಿ, ಅವರು ಶತಾಯುಷಿ ಆಗಲಿ. ಅವರ ಹಿರಿತನ ದೊಡ್ಡದು, ಅವರ ದರ್ಶನ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

    ಯಡಿಯೂರಪ್ಪ ಬಗ್ಗೆ ನಾನು ಸಾಫ್ಟ್ ಆಗಿಲ್ಲ. ಅದು ನಿಮ್ಮ ಡಿಕ್ಷನರಿಯಲ್ಲಿ ಇದ್ರೆ ತೆಗೆದುಬಿಡಿ. ನನ್ನನ್ನು ಬಿಜೆಪಿಗೆ ಸೇರಿಸಿಕೊಳ್ಳದಿದ್ರೂ ಪರವಾಗಿಲ್ಲ. ನಾನು ಅವರ ಮೇಲೆ ಸಾಫ್ಟ್ ಆಗಲ್ಲ, ಅವರ ಜೊತೆ ನಾನು ರಾಜೀನೂ ಆಗಲ್ಲ. ಯಡಿಯೂರಪ್ಪ ಬಳಿ ಹೋಗಿ ಕ್ಷಮೆ ಕೇಳಿ ಅಂತ ಹೈಕಮಾಂಡ್ ಹೇಳಿದರೆ ನಾನು ಕ್ಷಮೆ ಕೇಳಲ್ಲ. ಬಿಜೆಪಿಗೆ ಹಿಂದುತ್ವ ಬೇಕಾಗಿದ್ರೆ, ಭವಿಷ್ಯ ಬೇಕಾಗಿದ್ರೆ ಯಡಿಯೂರಪ್ಪ ಹಿಡಿತದಿಂದ ಬಿಜೆಪಿ ಮುಕ್ತವಾಗಬೇಕು ಎಂದು ಹೇಳಿದ್ದಾರೆ.ಇದನ್ನೂ ಓದಿ: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

     

  • ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

    ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ

    ಬಾಗಲಕೋಟೆ: ಆರ್‌ಎಸ್‌ಎಸ್‌ (RSS) ವಿರುದ್ಧ ತಮಿಳುನಾಡಿನಲ್ಲಿ (Tamil Nadu) ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಆ ರೀತಿ ಕ್ರಮವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    ಬಂಡಿಗಣಿಯಲ್ಲಿ ಮಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಕಾರ್ಯಕ್ರಮಕ್ಕೆ ಅನುಮತಿ ನೀಡದಂತೆ ಪ್ರಿಯಾಂಕ್‌ ಖರ್ಗೆ ಪತ್ರ ಬರೆದಿದ್ದಾರೆ. ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದರು. ಇದನ್ನೂ ಓದಿ:  ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ

     

    ಇಂದು ರಾತ್ರಿ ನಡೆಯಲಿರುವ ಡಿನ್ನರ್ ಪಾರ್ಟಿಗೂ ಸಂಪುಟ ಪುನಾರಚನೆಗೂ ಯಾವುದೇ ಸಂಬಂಧವಿಲ್ಲ. ನಾನು ಆಗಾಗ ಊಟ ನೀಡುತ್ತಿರುತ್ತೇನೆ. ಊಟದಲ್ಲಿ ಏನೂ ಸ್ಪೆಷಲ್ ಇಲ್ಲ. ಮಾಧ್ಯಮದವರಿಗೆ ಮತ್ತು ಬಿಜೆಪಿಯವರಿಗೆ ಮಾತ್ರ ವಿಶೇಷ ಎಂದು ತಿಳಿಸಿದರು. ಇದನ್ನೂ ಓದಿ:  ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್‌ಎಸ್‌ಎಸ್‌ ಎಲ್ಲಾ ಚಟುವಟಿಕೆ ಬ್ಯಾನ್‌?

    ದೇವೇಗೌಡರ ಆರೋಗ್ಯ ಚೆನ್ನಾಗಿದೆ, ಚೇತರಿಕೆ ಆಗುತ್ತಿದೆ. ವೈದ್ಯ ಸತ್ಯನಾರಾಯಣ ಅವರ ಜೊತೆ ಮಾತನಾಡಿದ್ದೇನೆ. ಎರಡ್ಮೂರು ದಿನಗಳಲ್ಲಿ ಚೇತರಿಕೆ ಆಗುತ್ತಾರೆ ಎಂದಿದ್ದಾರೆ ಎಂದು ನುಡಿದರು.