Tag: ಬಿಜೆಪಿ

  • ಯೋಗೀಶ ಗೌಡ ಕೊಲೆ ಪ್ರಕರಣ: ಸಿಬಿಐಗೆ ವಹಿಸುವಂತೆ ಬಿಜೆಪಿ ಪ್ರತಿಭಟನೆ

    ಯೋಗೀಶ ಗೌಡ ಕೊಲೆ ಪ್ರಕರಣ: ಸಿಬಿಐಗೆ ವಹಿಸುವಂತೆ ಬಿಜೆಪಿ ಪ್ರತಿಭಟನೆ

    ಧಾರವಾಡ: ಕಳೆದ ಜೂನ್ 15 ರಂದು ದುಷ್ಕರ್ಮಿಗಳಿಂದ ಬರ್ಬರವಾಗಿ ಕೊಲೆಯಾದ ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ ಗೌಡನ ಕೊಲೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.

    ಈ ವೇಳೆ ಧಾರವಾಡ ಜಿಲ್ಲಾ ಉಸ್ತವಾರಿ ಸಚಿವರೇ ಈ ಕೊಲೆಗೆ ಕಾರಣ ಎಂದು ಆರೋಪ ಮಾಡಿದ ಕೊಲೆಯಾದ ಯೋಗೀಶಗೌಡ ಪತ್ನಿ ಮಲ್ಲಮ್ಮ, ಕೊಲೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಆರೋಪಿಸಿದರು. ಕೊಲೆಯ ಹಿಂದೆ ಜಮೀನು ವಿವಾದ ಎಂದು ಹೇಳಲಾಗುತ್ತಿದೆ. ಆದರೆ ಇದರಲ್ಲಿ ಯಾವುದೇ ಹುರುಳಿಲ್ಲ. ಈ ಕೊಲೆಹೆ ರಾಜಕೀಯ ಕಾರಣವಿದೆ ಹಾಗೂ ನಮಗೆ ಬೆದರಿಕೆ ಪತ್ರ ಬರುತ್ತಿದ್ದು, ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಇನ್ನು ಪ್ರತಿಭಟನೆ ವೇಳೆ ಯೋಗೀಶ ಗೌಡ ಪತ್ನಿ ಮಲ್ಲಮ್ಮ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆಯೂ ನಡೆಯಿತು.

     

  • ಮರೆವಿನ ಕಾಯಿಲೆಗೆ ತುತ್ತಾದ ಕೆ.ಎಸ್.ಈಶ್ವರಪ್ಪ: ಆಯನೂರು ವ್ಯಂಗ್ಯ

    ಮರೆವಿನ ಕಾಯಿಲೆಗೆ ತುತ್ತಾದ ಕೆ.ಎಸ್.ಈಶ್ವರಪ್ಪ: ಆಯನೂರು ವ್ಯಂಗ್ಯ

    ಶಿವಮೊಗ್ಗ: ಈಶ್ವರಪ್ಪ ಅವರಿಗೆ 70 ವರ್ಷ ಆಗ್ತಾ ಬಂದಿದೆ. ಅವರಿಗೆ ಮರೆವಿನ ಕಾಯಿಲೆ ಆರಂಭವಾಗಿದೆ. ಅವರು ಏನು ಹೇಳುತ್ತಿದ್ದೇನೆ ಎಂಬ ಬಗ್ಗೆ ಅವರಿಗೇ ಸ್ಪಷ್ಟತೆ ಇರುವುದಿಲ್ಲ. ಹೀಗಾಗಿ ಅವರ ಮಾತನ್ನು ಗಂಭೀರವಾಗಿ ಪರಿಗಣಿಸುವ ಅತ್ಯವಿಲ್ಲ. ಹೀಗೆ ಹೇಳಿದವರು ಕಾಂಗ್ರೆಸ್ ಅಥವಾ ಜೆಡಿಎಸ್ ನಾಯಕರಲ್ಲ. ಬಿಜೆಪಿ ಮಾಜಿ ಸಂಸದ ಆಯನೂರು ಮಂಜುನಾಥ್.

    ರಾಜ್ಯ ಬಿಜೆಪಿಯಲ್ಲಿ ರಾಯಣ್ಣ ಬ್ರಿಗೇಡ್ ವಿಷಯ ಮುಗಿದಿದೆ. ಈಗ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ವಿವಾದ ಆರಂಭಗೊಂಡಿದೆ. ಈ ಕ್ಷೇತ್ರದ ಪ್ರಬಲ ಆಕಾಂಕ್ಷಿ ನಾನು ಎಂದು ಮಾಜಿ ಸಂಸದ ಆಯನೂರು ಮಂಜುನಾಥ್ ಹೇಳಿದ್ದರು. ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಕೆ.ಎಸ್.ಈಶ್ವರಪ್ಪ ಈ ಹೇಳಿಕೆಗೆ ಪ್ರತಿಯಾಗಿ, ಹಾದಿ-ಬೀದೀಲಿ ಹೋಗೋರಿಗೆಲ್ಲಾ ಟಿಕೆಟ್ ಕೊಡೋಕೆ ಆಗೊಲ್ಲ ಎಂದಿದ್ದರು.

    ಈ ಮಾತಿಗೆ ಇಂದು ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಆಯನೂರು ಮಂಜುನಾಥ್, ಈಶ್ವರಪ್ಪ ಅವರ ಹೇಳಿಕೆ ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ತಮ್ಮ ಹೇಳಿಕೆಗೆ ಬದ್ಧರಾಗಿ ಇರುವುದಿಲ್ಲ. ಅವರೀಗ 70ಕ್ಕೆ ಬಂದಿದಾರೆ. ಸಹಜವಾಗಿಯೇ ಅವರಿಗೆ ಮರೆವಿನ ಕಾಯಿಲೆ ಪ್ರಾರಂಭವಾಗುತ್ತಿದೆ. ತಮ್ಮ ಮಗನ ಜಿಪಂ ಚುನಾವಣೆ ಸಂದರ್ಭದಲ್ಲಿ ಅವರಿಗೆ ನನ್ನ ಪರಿಚಯ ಗೊತ್ತಿತ್ತು, ಆದರೆ ಈಗ ಮರೆತಿದ್ದಾರೆ. ತಮ್ಮ ಮಗನ ಬಳಿ ಕೇಳಿ ತಿಳಿದುಕೊಳ್ಳಲಿ ಎಂದು ವ್ಯಂಗ್ಯವಾಡಿದರು. ನಾನು ಹಾದಿ ಬೀದಿಯವನು ಎಂದಿದ್ದಾರೆ. ನನ್ನ ಮನೆಗೆ ಅವರು ಬರುವ ಪರಿಸ್ಥಿತಿ ಬಂದೇ ಬರುತ್ತದೆ. ಆಗ ನಾನು ಯಾರು ಅಂತ ಹೇಳುವೆ ಎಂದರು.

    ಯಡಿಯೂರಪ್ಪ ಮತ್ತು ಅವರ ನಡುವಿನ ಸಂಬಂಧ ಏನೂ ಅನ್ನೋದೂ ಅವರಿಗೆ ಸ್ಪಷ್ಟವಿಲ್ಲ. ಕೆಲವೊಮ್ಮೆ ಅಣ್ಣ-ತಮ್ಮ ಅಗ್ತಾರೆ, ಕೆಲವೊಮ್ಮೆ ಕಂಸ- ಕೀಚಕ ಆಗ್ತಾರೆ, ಚಿಕ್ಕಪ್ಪ-ದೊಡ್ಡಪ್ಪ ಅಗ್ತಾರೆ. ಸದಾ ಕನ್ಫ್ಯೂಷನ್‍ನಲ್ಲಿ ಇರ್ತಾರೆ. ರಾಯಣ್ಣ ಬ್ರಿಗೇಡ್‍ನಲ್ಲಿ ಇದೀನಿ ಅಂತಾರೆ, ಇಲ್ಲಾ ಅಂತಾರೆ. ಇಂಥ ಈಶ್ವರಪ್ಪ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳವ ಅಗತ್ಯವಿಲ್ಲ. ನಾನು ಹೋರಾಟಗಳನ್ನು ಮಾಡುತ್ತಾ ಹಾದಿ-ಬೀದಿಯಲ್ಲೇ ಬೆಳೆದವನು. ಆಟೋದವರು, ಹಮಾಲರು, ಕಾರ್ಮಿಕರ ಹೋರಾಟ ಮಾಡುತ್ತಾ ಬಂದವನು. ನಾನು ಹಾದಿ-ಬೀದಿಯವನು ಎಂಬುದರಲ್ಲಿ ಯಾವುದೇ ವಿಶೇಷವಿಲ್ಲ ಎಂದರು. ಈಗಲೂ ಹೇಳುತ್ತಿದ್ದೇನೆ- ‘ಶಿವಮೊಗ್ಗ ವಿಧಾನಸಭಾ ಕ್ಷೇತ್ರಕ್ಕೆ ನಾನು ಪ್ರಬಲ ಆಕಾಂಕ್ಷಿ’ ಎಂದು ಸ್ಪಷ್ಟಪಡಿಸಿದರು.

  • ಮಂಡ್ಯ ಸ್ಥಳೀಯ ಉಪಚುನಾವಣೆ: ಠೇವಣಿ ಕಳೆದುಕೊಂಡ ಕಾಂಗ್ರೆಸ್, ಬಿಜೆಪಿ

    ಮಂಡ್ಯ ಸ್ಥಳೀಯ ಉಪಚುನಾವಣೆ: ಠೇವಣಿ ಕಳೆದುಕೊಂಡ ಕಾಂಗ್ರೆಸ್, ಬಿಜೆಪಿ

    -ಕಾಂಗ್ರೆಸ್‍ಗೆ 5 ಮತ, ಬಿಜೆಪಿಗೆ 3 ಮತ

    ಮಂಡ್ಯ: ಜಿಲ್ಲೆಯ ನಾಗಮಂಗಲದ ಪಟ್ಟಣ ಪಂಚಾಯಿತಿಯ 13 ನೇ ವಾರ್ಡ್‍ಗೆ ನಡೆದ ಉಪಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಠೇವಣಿ ಕಳೆದುಕೊಂಡು ಮುಜುಗರ ಅನುಭವಿಸಿವೆ. ಜೆಡಿಎಸ್ ಮಾತ್ರ ಅಭ್ಯರ್ಥಿಯನ್ನು ಕಣಕ್ಕಳಿಸದೇ ಬುದ್ಧಿವಂತಿಕೆ ಪ್ರದರ್ಶಿಸಿದೆ.

    ಜೆಡಿಎಸ್ ಪಕ್ಷದಿಂದ ಅಮಾನತ್ತಾದ ಶಾಸಕ ಚಲುವರಾಯಸ್ವಾಮಿ ಸ್ವಕ್ಷೇತ್ರವಾದ ನಾಗಮಂಗಲ ಪಟ್ಟಣ ಪಂಚಾಯಿತಿ 13ನೇ ವಾರ್ಡ್‍ನ ಸದಸ್ಯರಾಗಿದ್ದ ಎನ್‍ಸಿ.ಕೇಶವ್ ಕಳೆದ ಮೂರು ತಿಂಗಳ ಹಿಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ರು. ಈ ಹಿನ್ನೆಲೆಯಲ್ಲಿ 13 ನೇ ವಾರ್ಡ್‍ಗೆ ಫೆಬ್ರವರಿ 12 ರಂದು ಚುನಾವಣೆ ನಡೆದಿತ್ತು.

    13ನೇ ವಾರ್ಡ್‍ನ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಅಬ್ದುಲ್ ಅಜೀಜ್ ಸ್ಪರ್ಧಿಸಿದ್ರೆ, ಬಿಜೆಪಿಯಿಂದ ಶ್ರೀನಿವಾಸ್ ಎಂಬವರು ಸ್ಪರ್ಧಿಸಿದ್ದರು. ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಶಾಸಕ ಸುರೇಶ್‍ಗೌಡ ಪಕ್ಷದಿಂದ ನಿಲ್ಲಿಸಲಾಗಿದ್ದ ಅಭ್ಯರ್ಥಿಗೆ ಬದಲಾಗಿ ಗಿರೀಶ್ ಎಂಬವರನ್ನ ಬೆಂಬಲಿಸಿ ಚುನಾವಣೆಗೆ ನಿಲ್ಲಿಸಿದ್ದರು. ಚಲುವರಾಯಸ್ವಾಮಿ ವಿನಯ್ ಕುಮಾರ್ ಎಂಬ ಅಭ್ಯರ್ಥಿಯ ಪರ ವ್ಯಾಪಕ ಪ್ರಚಾರ ಮಾಡಿದ್ರು.

    ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು 615 ಮತಗಳ ಪೈಕಿ 547 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಸುರೇಶ್ ಗೌಡ ಬೆಂಬಲಿತ ಅಭ್ಯರ್ಥಿ ಗಿರೀಶ್ 304 ಮತ ಪಡೆದು ಗೆಲುವು ಸಾಧಿಸಿದ್ರೆ, ಚೆಲುವರಾಯಸ್ವಾಮಿ ಬೆಂಬಲಿತ ಅಭ್ಯರ್ಥಿ ವಿನಯ್ ಕುಮಾರ್ 235 ಮತ ಪಡೆದು ಸೋಲನ್ನಪ್ಪಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ಐದು ಮತ ಪಡೆದಿದ್ರೆ, ಬಿಜೆಪಿ ಅಭ್ಯರ್ಥಿ ಮೂರು ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಆಡಳಿತಾರೂಢ ಪಕ್ಷವೊಂದು ಸ್ಥಳೀಯ ಸಂಸ್ಥೆಗೆ ನಡೆದ ಚುನಾವಣೆಯೊಂದರಲ್ಲಿ ಕೇವಲ ಐದು ಮತ ಪಡೆದು ನಗೆಪಾಟಲಿಗೀಡಾಗಿದೆ.

     

  • ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ ಮೆಗಾ ಸರ್ವೇ

    ಬೆಂಗಳೂರು: 2013ರಲ್ಲಿ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ ಸರ್ಕಾರ ನಾಲ್ಕನೇ ವರ್ಷದ ಅಂತಿಮ ಚರಣದಲ್ಲಿದೆ . ಇನ್ನು ಮೂರು ತಿಂಗಳು ಅಂದರೇ , ಮೇ 13ಕ್ಕೆ ಭರ್ತಿ ನಾಲ್ಕು ವರ್ಷ ಪೂರೈಸಿ , ಐದಕ್ಕೆ ಕಾಲಿಡುತ್ತದೆ. ಹೀಗಾಗಿ ಚುನಾವಣಾ ರಣಕಣಕ್ಕೆ ಇನ್ನೊಂದೇ ವರ್ಷ ಮಾತ್ರ ಬಾಕಿ ಉಳಿದಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಮೂರೂ ಪ್ರಮುಖ ಪಕ್ಷಗಳು ಈಗಾಗಲೇ ಪೂರ್ವಭಾವಿ ತಯಾರಿಯಲ್ಲಿ ತೊಡಗಿವೆ.

    ಚುನಾವಣಾ ರಣತಂತ್ರ, ಚಿಂತನ ಮಂಥನ ಬೈಠಕ್ ಗಳು ಅಲ್ಲಲ್ಲಿ ನಡೆಯುತ್ತಿವೆ. ಜೊತೆಗೆ ಮೂರೂ ಪಕ್ಷಗಳಲ್ಲೂ ರಾಜಕೀಯ ಸ್ಥಿತ್ಯಂತರಗಳು ಘಟಿಸುತ್ತಿವೆ. ಕಾಂಗ್ರೆಸ್ ನಲ್ಲಿ ಮೂಲ ಮತ್ತು ವಲಸಿಗರ ಮಧ್ಯೆ ರಾಜಕೀಯ ಸಮರ ಜೋರಾಗಿದ್ದರೆ , ಬಿಜೆಪಿಯಲ್ಲಿ ಬ್ರಿಗೇಡ್ ರಾಜಕಾರಣ ವಿಚಾರವಾಗಿ ಯಡಿಯೂರಪ್ಪ ಹಾಗೂ ಈಶ್ವರಪ್ಪ ಮೊನ್ನೆ ಮೊನ್ನೆವರೆಗೂ ಪರಸ್ಪರ ಬೈದಾಡಿಕೊಂಡಿದ್ರು. ಈಗಲೂ ಕೇಸರಿ ಪಾಳಯದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಇನ್ನು ಜೆಡಿಎಸ್ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಕೆಲ ಶಾಸಕರ ಬಹಿರಂಗ ಬಂಡಾಯ , ಪಕ್ಷದ ನಾಯಕರನ್ನು ಚಿಂತೆಯ ಕೂಪಕ್ಕೆ ದೂಡಿದೆ.

    ರಾಜ್ಯ ರಾಜಕಾರಣದ ವಾಸ್ತವ ಚಿತ್ರಣ ಈ ರೀತಿ ಇರಬೇಕಾದರೆ, ಮತದಾರರು ತಮ್ಮ ತಮ್ಮಲ್ಲೇ ಚುನಾವಣಾ ಲೆಕ್ಕಾಚಾರ ಹಾಕ್ತಿದ್ದಾರೆ. ಎಲೆಕ್ಷನ್ ವಾರ್ ಗೆ ಇನ್ನೊಂದು ವರ್ಷ ಇರುವಾಗಲೇ ಯಾರು ಗೆಲ್ತಾರೆ ಯಾರು ಸೋಲ್ತಾರೆ ಎಂಬ ಮತ ಗಣಿತ ಈಗಾಗಲೇ ರಾಜ್ಯದಲ್ಲಿ ಪ್ರಚಲಿತದಲ್ಲಿದೆ. ಈ ಕದನ ಕುತೂಹಲಕ್ಕೆ ತೆರೆ ಎಳೆಯಲು ಹಾಗೂ ಮತದಾರ ಪ್ರಭುಗಳ ಮನದಾಳ ಅರಿಯಲು ನಿಮ್ಮ ಪಬ್ಲಿಕ್ ಟಿವಿ ಅತ್ಯಂತ ವಿಶ್ವಾಸಾರ್ಹ ಯುಬಿಕಾ ರಿಸರ್ಚ್ ಸಂಸ್ಥೆಯ ಸಹಯೋಗದೊಂದಿಗೆ ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದೆ. ಈಗ ಚುನಾವಣೆ ನಡೆದರೆ ಯಾವ ಫಲಿತಾಂಶ ಹೊರಬೀಳಬಹುದು ಎಂಬ ಆಲೋಚನೆಗೆ ಸಮೀಕ್ಷೆಯ ಕನ್ನಡಿ ಹಿಡಿದಿದೆ ನಿಮ್ಮ ಪಬ್ಲಿಕ್ ಟಿವಿ.

    ಇದು ವಿಶ್ವಸನೀಯ, ಪ್ರಾಮಾಣಿಕ ಹಾಗೂ ನಿಷ್ಪಕ್ಷಪಾತ ಸಮೀಕ್ಷೆ ಎಂಬುದರಲ್ಲಿ ಎರಡು ಮಾತಿಲ್ಲ. ನಂಬಿಕೆಗೆ ಯೋಗ್ಯವಾದ ಸಮೀಕ್ಷೆಗಳ ಸಿದ್ಧ ಸೂತ್ರ ಹಾಗೂ ಶಿಸ್ತಿನ ಮಾನದಂಡವನ್ನು ಅನುಸರಿಸಲಾಗಿದೆ. ಕ್ಷೇತ್ರ ಕ್ಷೇತ್ರಗಳಿಗೆ ತೆರಳಿ ಜನ ಮನ ಅರಿಯುವ ನಿಯತ್ತಿನ ಪ್ರಯತ್ನ ಮಾಡಿದ್ದೇವೆ . ನಗರ, ಪಟ್ಟಣ , ಗ್ರಾಮೀಣ ಭಾಗಗಳಲ್ಲಿ ಸರ್ವೇಕ್ಷಣಾ ಕಾರ್ಯ ಮಾಡಿದ್ದೇವೆ. ಸಮಾಜದ ಎಲ್ಲಾ ಸ್ಥರದ ಪ್ರಜೆಗಳನ್ನು ಮಾತನಾಡಿಸಿ ಅವರ ಅಭಿಪ್ರಾಯ ಸಂಗ್ರಹಿಸಿದ್ದೇವೆ. ಸಮೀಕ್ಷೆಗಳಲ್ಲಿ ಬಹು ಮುಖ್ಯವಾಗಿ ಬೇಕಾಗಿರುವ ಜಾತಿ ಧರ್ಮ ಆಧಾರಿತ ಅಳತೆಗೋಲನ್ನೂ ಅನುಸರಿಸಿದ್ದೇವೆ. ವಯಸ್ಸು , ಲಿಂಗ , ಉದ್ಯೋಗ , ಜಾತಿ , ಧರ್ಮ , ವಿದ್ಯಾಭ್ಯಾಸ , ಕ್ಷೇತ್ರದ ವಿವರ.., ಹೀಗೆ ಅಗತ್ಯ ನಿರ್ಣಾಯಕ ಅಂಶಗಳನ್ನು ತುಲನಾತ್ಮಕವಾಗಿ ಅಳವಡಿಸಿದ್ದೇವೆ. ಹೀಗಾಗಿ ಪಬ್ಲಿಕ್ ಟಿವಿಯ ಈ ಸಮೀಕ್ಷೆ ಅತ್ಯಂತ ಗುಣಮಟ್ಟದ್ದು ಅಂತ ಹೇಳಲು ನಾವು ಹೆಮ್ಮೆ ಪಡುತ್ತೇವೆ. ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದ ವಿಡಿಯೋವನ್ನು ಕೊನೆಯಲ್ಲಿ ನೀಡಲಾಗಿದೆ.

    1. ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿಯನ್ನು ಹೇಗೆ ರೇಟ್ ಮಾಡುವಿರಿ..?
    ಸಮಗ್ರ ಕರ್ನಾಟಕ
    ಅತ್ಯುತ್ತಮ -17%
    ಚೆನ್ನಾಗಿದೆ – 31%
    ಸುಮಾರು – 31%
    ಕಳಪೆ – 19%
    ತೀರಾ ಕಳಪೆ -1%

    ಮುಂಬೈ ಕರ್ನಾಟಕ
    ಅತ್ಯುತ್ತಮ – 29%
    ಚೆನ್ನಾಗಿದೆ – 11%
    ಸುಮಾರು – 25%
    ಕಳಪೆ – 35%
    ತೀರಾ ಕಳಪೆ – 0%

    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ – 36%
    ಚೆನ್ನಾಗಿದೆ – 21%
    ಸುಮಾರು – 23%
    ಕಳಪೆ – 19%
    ತೀರಾ ಕಳಪೆ – 1%

    ಕರಾವಳಿ & ಮಧ್ಯ
    ಅತ್ಯುತ್ತಮ – 23%
    ಚೆನ್ನಾಗಿದೆ – 29%
    ಸುಮಾರು – 27%
    ಕಳಪೆ – 21%
    ತೀರಾ ಕಳಪೆ – 1%

    ಹಳೆ ಮೈಸೂರು
    ಅತ್ಯುತ್ತಮ – 4%
    ಚೆನ್ನಾಗಿದೆ – 44%
    ಸುಮಾರು – 39%
    ಕಳಪೆ – 13%
    ತೀರಾ ಕಳಪೆ – 1%

    2. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ಅಭಿಪ್ರಾಯವೇನು..?
    ಸಮಗ್ರ ಕರ್ನಾಟಕ
    ಸಂಪೂರ್ಣ ತೃಪ್ತಿಕರ – 25%
    ಸ್ವಲ್ಪಮಟ್ಟಿಗೆ ತೃಪ್ತಿಕರ – 41%
    ಅತೃಪ್ತಿಕರ – 31%
    ಅತೃಪ್ತಿಕರ ಮತ್ತು ಸಿಟ್ಟು -3%

    ಮುಂಬೈ ಕರ್ನಾಟಕ
    ಸಂಪೂರ್ಣ ತೃಪ್ತಿಕರ -37%
    ಸ್ವಲ್ಪಮಟ್ಟಿಗೆ ತೃಪ್ತಿಕರ- 19%
    ಅತೃಪ್ತಿಕರ- 35%
    ಅತೃಪ್ತಿಕರ ಮತ್ತು ಸಿಟ್ಟು -8%

    ಹೈದರಾಬಾದ್ ಕರ್ನಾಟಕ
    ಸಂಪೂರ್ಣ ತೃಪ್ತಿಕರ- 30%
    ಸ್ವಲ್ಪಮಟ್ಟಿಗೆ ತೃಪ್ತಿಕರ- 40%
    ಅತೃಪ್ತಿಕರ- 27%
    ಅತೃಪ್ತಿಕರ ಮತ್ತು ಸಿಟ್ಟು- 1%

    ಕರಾವಳಿ& ಮಧ್ಯ ಕರ್ನಾಟಕ
    ಸಂಪೂರ್ಣ ತೃಪ್ತಿಕರ- 32%
    ಸ್ವಲ್ಪಮಟ್ಟಿಗೆ ತೃಪ್ತಿಕರ- 31%
    ಅತೃಪ್ತಿಕರ- 34%
    ಅತೃಪ್ತಿಕರ ಮತ್ತು ಸಿಟ್ಟು- 3%

    ಹಳೆ ಮೈಸೂರು –
    ಸಂಪೂರ್ಣ ತೃಪ್ತಿಕರ – 15%
    ಸ್ವಲ್ಪಮಟ್ಟಿಗೆ ತೃಪ್ತಿಕರ – 53%
    ಅತೃಪ್ತಿಕರ- 30%
    ಅತೃಪ್ತಿಕರ ಮತ್ತು ಸಿಟ್ಟು – 1%

    3. ಸಿದ್ದರಾಮಯ್ಯ ಸರ್ಕಾರದ ಆಡಳಿತದಲ್ಲಿ ಇಷ್ಟವಾಗದೇ ಇದ್ದಿದ್ದು..?
    ಸಮಗ್ರ ಕರ್ನಾಟಕ
    ಕಾಳಜಿ ಇಲ್ಲ – 35%
    ಜಾತಿ ಆಧರಿತ ಆಡಳಿತ – 37%
    ಉತ್ತಮ ಅಭಿವೃದ್ಧಿಯಾಗಿಲ್ಲ – 23%
    ಏನನ್ನು ಇಷ್ಟಪಡಲಿಲ್ಲ – 5%

    ಮುಂಬೈ ಕರ್ನಾಟಕ
    ಕಾಳಜಿ ಇಲ್ಲ – 44%
    ಜಾತಿ ಆಧರಿತ ಆಡಳಿತ -22%
    ಉತ್ತಮ ಅಭಿವೃದ್ಧಿಯಾಗಿಲ್ಲ -29%
    ಏನನ್ನು ಇಷ್ಟಪಡಲಿಲ್ಲ -5%

    ಹೈದರಾಬಾದ್ ಕರ್ನಾಟಕ
    ಕಾಳಜಿ ಇಲ್ಲ -40%
    ಜಾತಿ ಆಧರಿತ ಆಡಳಿತ -41%
    ಉತ್ತಮ ಅಭಿವೃದ್ಧಿಯಾಗಿಲ್ಲ – 19%
    ಏನನ್ನು ಇಷ್ಟಪಡಲಿಲ್ಲ – 0%

    ಕರಾವಳಿ ಮಧ್ಯಕರ್ನಾಟಕ
    ಕಾಳಜಿ ಇಲ್ಲ – 42%
    ಜಾತಿ ಆಧರಿತ ಆಡಳಿತ- 33%
    ಉತ್ತಮ ಅಭಿವೃದ್ಧಿಯಾಗಿಲ್ಲ – 25%
    ಏನನ್ನು ಇಷ್ಟಪಡಲಿಲ್ಲ -1%

    ಹಳೆ ಮೈಸೂರು
    ಕಾಳಜಿ ಇಲ್ಲ -27%
    ಜಾತಿ ಆಧರಿತ ಆಡಳಿತ 44%
    ಉತ್ತಮ ಅಭಿವೃದ್ಧಿಯಾಗಿಲ್ಲ 21%
    ಏನನ್ನು ಇಷ್ಟಪಡಲಿಲ್ಲ 8%

    4. ರಾಜ್ಯ ಸರ್ಕಾರದ ಯೋಜನೆಗಳು ಜನರನ್ನು ಸರಿಯಾಗಿ ತಲುಪಿವೆಯಾ..?
    ಸಮಗ್ರ ಕರ್ನಾಟಕ
    ಹೌದು – 57%
    ಇಲ್ಲ – 35%
    ಹೇಳಲಾಗದು – 7%

    ಮುಂಬೈ ಕರ್ನಾಟಕ
    ಹೌದು -46%
    ಇಲ್ಲ- 53%
    ಹೇಳಲಾಗದು -1%

    ಹೈದರಾಬಾದ್ ಕರ್ನಾಟಕ
    ಹೌದು- 67%
    ಇಲ್ಲ – 29%
    ಹೇಳಲಾಗದು- 5%

    ಕರಾವಳಿ& ಮಧ್ಯ
    ಹೌದು- 62%
    ಇಲ್ಲ – 38%
    ಹೇಳಲಾಗದು – 1%

    ಹಳೆ ಮೈಸೂರು
    ಹೌದು -57%
    ಇಲ್ಲ -30 %
    ಹೇಳಲಾಗದು 13%

    5. ಅನ್ನಭಾಗ್ಯ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು..?
    ಸಮಗ್ರ ಕರ್ನಾಟಕ
    ಅತ್ಯುತ್ತಮ – 23%
    ಚೆನ್ನಾಗಿದೆ – 34%
    ಸುಮಾರು – 27%
    ಕಳಪೆ – 15%
    ತೀರಾ ಕಳಪೆ – 1%

    ಮುಂಬೈ ಕರ್ನಾಟಕ
    ಅತ್ಯುತ್ತಮ- 30%
    ಚೆನ್ನಾಗಿದೆ – 15%
    ಸುಮಾರು -21%
    ಕಳಪೆ – 32%
    ತೀರಾ ಕಳಪೆ – 0%

    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ -32%
    ಚೆನ್ನಾಗಿದೆ – 29%
    ಸುಮಾರು – 25%
    ಕಳಪೆ -14%
    ತೀರಾ ಕಳಪೆ- 0%

    ಕರಾವಳಿ& ಮಧ್ಯ ಕರ್ನಾಟಕ
    ಅತ್ಯುತ್ತಮ – 25%
    ಚೆನ್ನಾಗಿದೆ – 37%
    ಸುಮಾರು – 21%
    ಕಳಪೆ – 17%
    ತೀರಾ ಕಳಪೆ – 0

    ಹಳೆ ಮೈಸೂರು
    ಅತ್ಯುತ್ತಮ – 16%
    ಚೆನ್ನಾಗಿದೆ – 42%
    ಸುಮಾರು -33%
    ಕಳಪೆ – 8%
    ತೀರಾ ಕಳಪೆ -1%

    6. ರಾಜ್ಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯ ನಿರ್ವಹಿಸಿವೆಯೇ..?
    ಸಮಗ್ರ ಕರ್ನಾಟಕ
    ಹೌದು – 54%
    ಇಲ್ಲ -36%
    ಹೇಳಲಾಗದು -10%

    ಮುಂಬೈ ಕರ್ನಾಟಕ
    ಹೌದು -51%
    ಇಲ್ಲ – 45 %
    ಹೇಳಲಾಗದು- 4%

    ಹೈದರಾಬಾದ್ ಕರ್ನಾಟಕ
    ಹೌದು – 50%
    ಇಲ್ಲ – 38%
    ಹೇಳಲಾಗದು – 12%

    ಕರಾವಳಿ ಕರ್ನಾಟಕ
    ಹೌದು – 62%
    ಇಲ್ಲ – 37%
    ಹೇಳಲಾಗದು- 1%

    ಹಳೆ ಮೈಸೂರು
    ಹೌದು -52 %
    ಇಲ್ಲ -31%
    ಹೇಳಲಾಗದು -16%

    7. ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು ಎಂದು ಬಯಸುವಿರಿ..?
    ಸಮಗ್ರ
    ಸಿದ್ದರಾಮಯ್ಯ- 37%
    ಮಲ್ಲಿಕಾರ್ಜುನ ಖರ್ಗೆ -8%
    ಬಿಎಸ್‍ಯಡಿಯೂರಪ್ಪ -33%
    ಜಗದೀಶ್ ಶೆಟ್ಟರ್ – 1%
    ಎಚ್‍ಡಿ ಕುಮಾರಸ್ವಾಮಿ -19%
    ಇತರರು -0

    ಮುಂಬೈ ಕರ್ನಾಟಕ
    ಸಿದ್ದರಾಮಯ್ಯ -40 %
    ಮಲ್ಲಿಕಾರ್ಜುನ ಖರ್ಗೆ – 8%
    ಬಿಎಸ್‍ಯಡಿಯೂರಪ್ಪ – 38%
    ಜಗದೀಶ್ ಶೆಟ್ಟರ್ -1%
    ಎಚ್‍ಡಿ ಕುಮಾರಸ್ವಾಮಿ- 13%
    ಇತರರು- 0%

    ಹೈದರಾಬಾದ್ ಕರ್ನಾಟಕ
    ಸಿದ್ದರಾಮಯ್ಯ – 38%
    ಮಲ್ಲಿಕಾರ್ಜುನ ಖರ್ಗೆ- 26%
    ಬಿಎಸ್‍ಯಡಿಯೂರಪ್ಪ -25%
    ಜಗದೀಶ್ ಶೆಟ್ಟರ್- 2 %
    ಎಚ್‍ಡಿ ಕುಮಾರಸ್ವಾಮಿ -8%
    ಇತರರು 0%

    ಕರಾವಳಿ& ಮಧ್ಯ ಕರ್ನಾಟಕ
    ಸಿದ್ದರಾಮಯ್ಯ -42%
    ಮಲ್ಲಿಕಾರ್ಜುನ ಖರ್ಗೆ- 4%
    ಬಿಎಸ್‍ಯಡಿಯೂರಪ್ಪ -42%
    ಜಗದೀಶ್ ಶೆಟ್ಟರ್ -0%
    ಎಚ್‍ಡಿ ಕುಮಾರಸ್ವಾಮಿ -12%
    ಇತರರು -0%

    ಹಳೆ ಮೈಸೂರು
    ಸಿದ್ದರಾಮಯ್ಯ – 34%
    ಮಲ್ಲಿಕಾರ್ಜುನ ಖರ್ಗೆ -4%
    ಬಿಎಸ್‍ಯಡಿಯೂರಪ್ಪ -31%
    ಜಗದೀಶ್ ಶೆಟ್ಟರ್- 1%
    ಎಚ್‍ಡಿ ಕುಮಾರಸ್ವಾಮಿ -28%
    ಇತರರು – 0%

    8. ಈಗಿನ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭ್ರಷ್ಟ ಅನಿಸುವುದಾ..?
    ಸಮಗ್ರ
    ಹೌದು ಹೆಚ್ಚು ಭ್ರಷ್ಟ – 55%
    ಇಲ್ಲ ಕಡಿಮೆ ಭ್ರಷ್ಟ – 40%
    ಹೇಳಲಾಗದು -4%

    ಮುಂಬೈ ಕರ್ನಾಟಕ
    ಹೌದು ಹೆಚ್ಚು ಭ್ರಷ್ಟ – 62%
    ಇಲ್ಲ ಕಡಿಮೆ ಭ್ರಷ್ಟ – 37%
    ಹೇಳಲಾಗದು  – 1%

    ಹೈದರಾಬಾದ್ ಕರ್ನಾಟಕ
    ಹೌದು ಹೆಚ್ಚು ಭ್ರಷ್ಟ – 57%
    ಇಲ್ಲ ಕಡಿಮೆ ಭ್ರಷ್ಟ – 32%
    ಹೇಳಲಾಗದು -12%

    ಕರಾವಳಿ& ಮಧ್ಯ
    ಹೌದು ಹೆಚ್ಚು ಭ್ರಷ್ಟ – 67%
    ಇಲ್ಲ ಕಡಿಮೆ ಭ್ರಷ್ಟ – 25%
    ಹೇಳಲಾಗದು- 8%

    ಹಳೆ ಮೈಸೂರು
    ಹೌದು ಹೆಚ್ಚು ಭ್ರಷ್ಟ – 47%
    ಇಲ್ಲ ಕಡಿಮೆ ಭ್ರಷ್ಟ- 51%
    ಹೇಳಲಾಗದು – 2%

    9. ಕಾವೇರಿ ವಿವಾದವನ್ನು ರಾಜ್ಯ ಸರ್ಕಾರ ನಿರ್ವಹಿಸಿದ ರೀತಿ ಹೇಗಿತ್ತು..?
    ಸಮಗ್ರ –
    ಅತ್ಯುತ್ತಮ – 12%
    ಚೆನ್ನಾಗಿದೆ – 25%
    ಸುಮಾರು -33%
    ಕಳಪೆ – 25%
    ತೀರಾ ಕಳಪೆ -5%

    ಮುಂಬೈ ಕರ್ನಾಟಕ
    ಅತ್ಯುತ್ತಮ – 25%
    ಚೆನ್ನಾಗಿದೆ -25%
    ಸುಮಾರು – 28%
    ಕಳಪೆ – 23%
    ತೀರಾ ಕಳಪೆ- 0

    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ – 26%
    ಚೆನ್ನಾಗಿದೆ -36%
    ಸುಮಾರು -28%
    ಕಳಪೆ – 11%
    ತೀರಾ ಕಳಪೆ – 0

    ಕರಾವಳಿ & ಮಧ್ಯ
    ಅತ್ಯುತ್ತಮ – 14%
    ಚೆನ್ನಾಗಿದೆ -32%
    ಸುಮಾರು -40%
    ಕಳಪೆ – 13%
    ತೀರಾ ಕಳಪೆ – 0%

    ಹಳೆ ಮೈಸೂರು
    ಅತ್ಯುತ್ತಮ -1%
    ಚೆನ್ನಾಗಿದೆ -18%
    ಸುಮಾರು -34%
    ಕಳಪೆ – 36%
    ತೀರಾ ಕಳಪೆ 11%

    10. ಮೋದಿ ಸರ್ಕಾರ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿದೆ ಎಂದು ನಿಮಗನಿಸುವುದೇ..?
    ಸಮಗ್ರ
    ಹೌದು – 50%
    ಇಲ್ಲ -43%
    ಹೇಳಲಾಗದು -7%

    ಮುಂಬೈ ಕರ್ನಾಟಕ
    ಹೌದು – 36%
    ಇಲ್ಲ – 64%
    ಹೇಳಲಾಗದು -1%

    ಹೈದರಾಬಾದ್ ಕರ್ನಾಟಕ
    ಹೌದು -45%
    ಇಲ್ಲ – 47%
    ಹೇಳಲಾಗದು- 7%

    ಕರಾವಳಿ ಮತ್ತು ಮಧ್ಯ
    ಹೌದು -54%
    ಇಲ್ಲ – 40%
    ಹೇಳಲಾಗದು-6%

    ಹಳೆ ಮೈಸೂರು
    ಹೌದು -56%
    ಇಲ್ಲ -35%
    ಹೇಳಲಾಗದು -9%

    11. ಬರ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಕ್ರಮಗಳನ್ನು ಹೇಗೆ ರೇಟ್ ಮಾಡುವಿರಿ?
    ಸಮಗ್ರ
    ಅತ್ಯುತ್ತಮ – 13%
    ಚೆನ್ನಾಗಿದೆ -21%
    ಸುಮಾರು -30%
    ಕಳಪೆ -30%
    ತೀರಾ ಕಳಪೆ -6%

    ಮುಂಬೈ ಕರ್ನಾಟಕ
    ಅತ್ಯುತ್ತಮ – 23%
    ಚೆನ್ನಾಗಿದೆ – 23%
    ಸುಮಾರು -24%
    ಕಳಪೆ – 31%
    ತೀರಾ ಕಳಪೆ-0%

    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ – 28%
    ಚೆನ್ನಾಗಿದೆ – 36%
    ಸುಮಾರು -24%
    ಕಳಪೆ – 11%
    ತೀರಾ ಕಳಪೆ-0%

    ಕರಾವಳಿ ಕರ್ನಾಟಕ
    ಅತ್ಯುತ್ತಮ – 22%
    ಚೆನ್ನಾಗಿದೆ – 19%
    ಸುಮಾgರು – 40%
    ಕಳಪೆ – 18%
    ತೀರಾ ಕಳಪೆ- 1%

    ಹಳೆ ಮೈಸೂರು
    ಅತ್ಯುತ್ತಮ – 1%
    ಚೆನ್ನಾಗಿದೆ – 16%
    ಸುಮಾರು -30%
    ಕಳಪೆ – 42%
    ತೀರಾ ಕಳಪೆ-12%

    12. ಹುಬ್ಲೋಟ್ ವಾಚ್ ಪ್ರಕರಣದಿಂದ ಸಿದ್ದರಾಮಯ್ಯ ಇಮೇಜ್‍ಗೆ ಧಕ್ಕೆಯಾಯಿತು ಎಂದು ನೀವು ಭಾವಿಸುವಿರಾ..?
    ಸಮಗ್ರ
    ಹೌದು – 58%
    ಇಲ್ಲ- 33%
    ಹೇಳಲಾಗದು -9%

    ಮುಂಬೈ ಕರ್ನಾಟಕ
    ಹೌದು -41%
    ಇಲ್ಲ -53%
    ಹೇಳಲಾಗದು- 6%

    ಹೈದರಾಬಾದ್ ಕರ್ನಾಟಕ
    ಹೌದು – 31%
    ಇಲ್ಲ – 40%
    ಹೇಳಲಾಗದು -29

    ಕರಾವಳಿ& ಮಧ್ಯ
    ಹೌದು – 60%
    ಇಲ್ಲ -34%
    ಹೇಳಲಾಗದು -6%

    ಹಳೆ ಮೈಸೂರು
    ಹೌದು – 73%
    ಇಲ್ಲ-22%
    ಹೇಳಲಾಗದು 5%

    13. ಪರಮೇಶ್ವರ್ ನಾಯಕ್, ಹೆಚ್.ವೈ.ಮೇಟಿ, ಕೆ.ಜೆ.ಜಾರ್ಜ್ ವಿರುದ್ಧದ ಪ್ರಕರಣಗಳು-ವಿವಾದಗಳು ಸರ್ಕಾರದ ಮೇಲೆ ನಕಾರಾತ್ಮಕ ಪ್ರಭಾವ ಬೀರಿತೇ..?

    ಸಮಗ್ರ
    ಹೌದು – 72%
    ಇಲ್ಲ – 24%
    ಹೇಳಲಾಗದು -4%

    ಮುಂಬೈ ಕರ್ನಾಟಕ
    ಹೌದು 60%
    ಇಲ್ಲ 39%
    ಹೇಳಲಾಗದು 1%

    ಹೈದರಾಬಾದ್ ಕರ್ನಾಟಕ

    ಹೌದು 56%
    ಇಲ್ಲ 36%
    ಹೇಳಲಾಗದು 8%

    ಕರಾವಳಿ ಮಧ್ಯ
    ಹೌದು 62%
    ಇಲ್ಲ 32%
    ಹೇಳಲಾಗದು 6%

    ಹಳೆ ಮೈಸೂರು
    ಹೌದು 87%
    ಇಲ್ಲ 10%
    ಹೇಳಲಾಗದು 3%

    14. ಮೋದಿ ಸರ್ಕಾರ ನೋಡಿ 2018ರಲ್ಲಿ ನೀವು ರಾಜ್ಯದಲ್ಲಿ ಬಿಜೆಪಿಗೆ ಮತ ನೀಡುವಿರಾ..?
    ಸಮಗ್ರ
    ಹೌದು – 45%
    ಇಲ್ಲ – 45%
    ಹೇಳಲಾಗದು -10%

    ಮುಂಬೈ ಕರ್ನಾಟಕ
    ಹೌದು – 38%
    ಇಲ್ಲ – 58%
    ಹೇಳಲಾಗದು -4%

    ಹೈದರಾಬಾದ್ ಕರ್ನಾಟಕ
    ಹೌದು -27%
    ಇಲ್ಲ – 56%
    ಹೇಳಲಾಗದು 18%

    ಕರಾವಳಿ & ಮಧ್ಯ
    ಹೌದು -55%
    ಇಲ್ಲ -44%
    ಹೇಳಲಾಗದು -1%

    ಹಳೆ ಮೈಸೂರು
    ಹೌದು -50%
    ಇಲ್ಲ – 38%
    ಹೇಳಲಾಗದು – 13%

    15. ರಾಹುಲ್ ಗಾಂಧಿಯ ಕಾರ್ಯಕ್ಷಮತೆ ನೋಡಿ 2018ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಮತ ನೀಡುವಿರಾ..?
    ಸಮಗ್ರ ಕರ್ನಾಟಕ
    ಹೌದು- 40%
    ಇಲ್ಲ – 53%
    ಹೇಳಲಾಗದು -6%

    ಮುಂಬೈ ಕರ್ನಾಟಕ
    ಹೌದು -56%
    ಇಲ್ಲ -43%
    ಹೇಳಲಾಗದು -1%

    ಹೈದರಾಬಾದ್ ಕರ್ನಾಟಕ
    ಹೌದು – 60%
    ಇಲ್ಲ -33%
    ಹೇಳಲಾಗದು -8%

    ಕರಾವಳಿ& ಮಧ್ಯ
    ಹೌದು – 45%
    ಇಲ್ಲ -54 %
    ಹೇಳಲಾಗದು -1%

    ಹಳೆ ಮೈಸೂರು
    ಹೌದು – 25%
    ಇಲ್ಲ – 64%
    ಹೇಳಲಾಗದು -11%

    16. ಬಿಎಸ್‍ವೈ ನಾಯಕತ್ವಕ್ಕೆ ವಯಸ್ಸು, ಹಿಂದಿನ ಭ್ರಷ್ಟಾಚಾರ ಅಡ್ಡಿಯಾಗುವುದಾ..?
    ಸಮಗ್ರ
    ಹೌದು 34%
    ಇಲ್ಲ 53%
    ಹೇಳಲಾಗದು 12%

    ಮುಂಬೈ ಕರ್ನಾಟಕ
    ಹೌದು 36%
    ಇಲ್ಲ -61%
    ಹೇಳಲಾಗದು 3%

    ಹೈದರಾಬಾದ್ ಕರ್ನಾಟಕ
    ಹೌದು – 34%
    ಇಲ್ಲ – 48%
    ಹೇಳಲಾಗದು – 18%

    ಕರಾವಳಿ & ಮಧ್ಯ
    ಹೌದು -49%
    ಇಲ್ಲ -44%
    ಹೇಳಲಾಗದು -7%

    ಹಳೆ ಮೈಸೂರು
    ಹೌದು 28%
    ಇಲ್ಲ 56%
    ಹೇಳಲಾಗದು 16%

    17. ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ಓಟು ಹಾಕುತ್ತೀರಾ..?
    ಸಮಗ್ರ
    ಹೌದು 37%
    ಇಲ್ಲ 57%
    ಹೇಳಲಾಗದು 5%

    ಮುಂಬೈ ಕರ್ನಾಟಕ
    ಹೌದು – 37%
    ಇಲ್ಲ – 58%
    ಹೇಳಲಾಗದು -5%

    ಹೈದರಾಬಾದ್ ಕರ್ನಾಟಕ
    ಹೌದು 36%
    ಇಲ್ಲ 45%
    ಹೇಳಲಾಗದು 20%

    ಕರಾವಳಿ & ಮಧ್ಯ
    ಹೌದು – 44%
    ಇಲ್ಲ – 56%
    ಹೇಳಲಾಗದು -1%

    ಹಳೆ ಮೈಸೂರು
    ಹೌದು -35%
    ಇಲ್ಲ -63%
    ಹೇಳಲಾಗದು -2%

    18. ಹೆಚ್.ಡಿ. ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕೆಂದು ಬಯಸುವಿರಾ..?
    ಸಮಗ್ರ
    ಹೌದು -32%
    ಇಲ್ಲ -63%
    ಹೇಳಲಾಗದು- 5%

    ಮುಂಬೈ ಕರ್ನಾಟಕ
    ಹೌದು 23%
    ಇಲ್ಲ 74%
    ಹೇಳಲಾಗದು 3%

    ಹೈದರಾಬಾದ್ ಕರ್ನಾಟಕ
    ಹೌದು 40%
    ಇಲ್ಲ 53%
    ಹೇಳಲಾಗದು 7%

    ಕರಾವಳಿ ಮಧ್ಯ
    ಹೌದು 26%
    ಇಲ್ಲ 74%
    ಹೇಳಲಾಗದು 0%

    ಹಳೆ ಮೈಸೂರು
    ಹೌದು 35%
    ಇಲ್ಲ 59%
    ಹೇಳಲಾಗದು 6%

    19. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಬಹುದು ಅನಿಸುವುದಾ..?
    ಸಮಗ್ರ
    ಹೌದು 28%
    ಇಲ್ಲ 61%
    ಹೇಳಲಾಗದು 10%

    ಮುಂಬೈ ಕರ್ನಾಟಕ
    ಹೌದು 23%
    ಇಲ್ಲ 75%
    ಹೇಳಲಾಗದು 3%

    ಹೈದರಾಬಾದ್ ಕರ್ನಾಟಕ
    ಹೌದು 32%
    ಇಲ್ಲ 57%
    ಹೇಳಲಾಗದು 11%

    ಕರಾವಳಿ& ಮಧ್ಯ ಕರ್ನಾಟಕ
    ಹೌದು 26%
    ಇಲ್ಲ 73%
    ಹೇಳಲಾಗದು 1%

    ಹಳೆ ಮೈಸೂರು
    ಹೌದು 30%
    ಇಲ್ಲ 53%
    ಹೇಳಲಾಗದು 17%

    20.ಜೆಡಿಎಸ್ ಮುಂದಿನ ಸರ್ಕಾರದಲ್ಲಿ ಕಿಂಗ್ ಮೇಕರ್ ಆಗುವುದಾ..?
    ಸಮಗ್ರ
    ಹೌದು – 32%
    ಇಲ್ಲ – 49%
    ಹೇಳಲಾಗದು -20%

    ಮುಂಬೈ ಕರ್ನಾಟಕ
    ಹೌದು – 33%
    ಇಲ್ಲ – 64%
    ಹೇಳಲಾಗದು -3%

    ಹೈದರಾಬಾದ್ ಕರ್ನಾಟಕ
    ಹೌದು -40%
    ಇಲ್ಲ – 49%
    ಹೇಳಲಾಗದು -11%

    ಕರಾವಳಿ& ಮಧ್ಯ
    ಹೌದು – 25%
    ಇಲ್ಲ – 74%
    ಹೇಳಲಾಗದು -1%

    ಹಳೆ ಮೈಸೂರು
    ಹೌದು – 31%
    ಇಲ್ಲ – 32%
    ಹೇಳಲಾಗದು -37%

    21.ಸಮ್ಮಿಶ್ರ ಸರ್ಕಾರ ಅನಿವಾರ್ಯವೇ? ಹಾಗಾದ್ರೆ ಯಾವ ಸಮ್ಮಿಶ್ರ ಸರ್ಕಾರ ಬಯಸುವಿರಿ?
    ಸಮಗ್ರ
    ಬಿಜೆಪಿ + ಜೆಡಿಎಸ್ -32%
    ಕಾಂಗ್ರೆಸ್ +ಜೆಡಿಎಸ್ -30%
    ಬಿಜೆಪಿ + ಕಾಂಗ್ರೆಸ್ -10%
    ಯಾವುದು ಇಲ್ಲ – 28%

    ಮುಂಬೈ ಕರ್ನಾಟಕ
    ಬಿಜೆಪಿ + ಜೆಡಿಎಸ್ – 24%
    ಕಾಂಗ್ರೆಸ್ +ಜೆಡಿಎಸ್ -18%
    ಬಿಜೆಪಿ + ಕಾಂಗ್ರೆಸ್ -1%
    ಯಾವುದು ಇಲ್ಲ – 56%

    ಹೈದರಾಬಾದ್ ಕರ್ನಾಟಕ
    ಬಿಜೆಪಿ + ಜೆಡಿಎಸ್ – 27%
    ಕಾಂಗ್ರೆಸ್ +ಜೆಡಿಎಸ್ -41%
    ಬಿಜೆಪಿ + ಕಾಂಗ್ರೆಸ್ -4%
    ಯಾವುದು ಇಲ್ಲ- 28%

    ಕರಾವಳಿ& ಮಧ್ಯ
    ಬಿಜೆಪಿ + ಜೆಡಿಎಸ್ – 39%
    ಕಾಂಗ್ರೆಸ್ +ಜೆಡಿಎಸ್ – 29%
    ಬಿಜೆಪಿ + ಕಾಂಗ್ರೆಸ್ – 2%
    ಯಾವುದು ಇಲ್ಲ – 30%

    ಹಳೆ ಮೈಸೂರು
    ಬಿಜೆಪಿ + ಜೆಡಿಎಸ್ – 34%
    ಕಾಂಗ್ರೆಸ್ +ಜೆಡಿಎಸ್ -37%
    ಬಿಜೆಪಿ + ಕಾಂಗ್ರೆಸ್ -1%
    ಯಾವುದು ಇಲ್ಲ – 28%

    22. ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ಮೈಸೂರಿಗೆ ಒಳಿತಾಗುವುದೇ..?
    ಹಳೆ ಮೈಸೂರು
    ಹೌದು- 37%
    ಇಲ್ಲ – 55%
    ಹೇಳಲಾಗದು – 8%

    23. ಮಹದಾಯಿ ಪ್ರಕರಣವನ್ನು ಸರ್ಕಾರ ನಿರ್ವಹಿಸಿದ ರೀತಿ ಹೇಗಿತ್ತು..?
    ಮುಂಬೈ ಕರ್ನಾಟಕ
    ಅತ್ಯುತ್ತಮ – 5%
    ಚೆನ್ನಾಗಿದೆ – 30%
    ಸುಮಾರು – 30%
    ಕಳಪೆ – 33%
    ತೀರಾ ಕಳಪೆ -1%

    24. ವಿಶೇಷ ಸ್ಥಾನಮಾನದ ನಂತರ ಹೈ.ಕ. ಅಭಿವೃದ್ಧಿಯನ್ನು ಹೇಗೆ ರೇಟ್ ಮಾಡುವಿರಿ..?
    ಹೈದರಾಬಾದ್ ಕರ್ನಾಟಕ
    ಅತ್ಯುತ್ತಮ – 15%
    ಚೆನ್ನಾಗಿದೆ – 43%
    ಸುಮಾರು -26%
    ಕಳಪೆ -16%
    ತೀರಾ ಕಳಪೆ -0%

    25. ಎತ್ತಿನಹೊಳೆ ಯೋಜನೆಯಲ್ಲಿ ರಾಜಕೀಯ ಪಕ್ಷಗಳು ಜನರನ್ನು ತಪ್ಪು ದಾರಿಗೆ ಎಳೆಯುತ್ತಿವೆಯೇ..?
    ಕರಾವಳಿ & ಮಧ್ಯ
    ಹೌದು – 80%
    ಇಲ್ಲ – 18%
    ಹೇಳಲಾಗದು -2%

    26. 2018ರ ಚುನಾವಣೆಯಲ್ಲಿ ನೀವು ಯಾವ ಆಧಾರದ ಮೇಲೆ ಮತ ಚಲಾಯಿಸುವಿರಿ..?
    ಸಮಗ್ರ
    ಪಕ್ಷ – 39%
    ಪಕ್ಷದಲ್ಲಿರುವ ನಾಯಕ – 36%
    ಪಕ್ಷದ ಸ್ಥಳೀಯ ಮುಖಂಡ -18%
    ಜಾತಿ/ ಧರ್ಮ -2%
    ಅಭ್ಯರ್ಥಿತನ – 5%

    ಮುಂಬೈ ಕರ್ನಾಟಕ
    ಪಕ್ಷ – 56%
    ಪಕ್ಷದಲ್ಲಿರುವ ನಾಯಕ -21%
    ಪಕ್ಷದ ಸ್ಥಳೀಯ ಮುಖಂಡ – 10%
    ಜಾತಿ/ ಧರ್ಮ -3%
    ಅಭ್ಯರ್ಥಿತನ -9%

    ಹೈದರಾಬಾದ್ ಕರ್ನಾಟಕ
    ಪಕ್ಷ -44%
    ಪಕ್ಷದಲ್ಲಿರುವ ನಾಯಕ – 29%
    ಪಕ್ಷದ ಸ್ಥಳೀಯ ಮುಖಂಡ – 19%
    ಜಾತಿ/ ಧರ್ಮ – 5%
    ಅಭ್ಯರ್ಥಿತನ – 4%

    ಕರಾವಳಿ & ಮಧ್ಯ
    ಪಕ್ಷ -39%
    ಪಕ್ಷದಲ್ಲಿರುವ ನಾಯಕ -30%
    ಪಕ್ಷದ ಸ್ಥಳೀಯ ಮುಖಂಡ -29%
    ಜಾತಿ/ ಧರ್ಮ -1%
    ಅಭ್ಯರ್ಥಿತನ -0%

    ಹಳೆ ಮೈಸೂರು
    ಪಕ್ಷ -31 %
    ಪಕ್ಷದಲ್ಲಿರುವ ನಾಯಕ -47%
    ಪಕ್ಷದ ಸ್ಥಳೀಯ ಮುಖಂಡ -16%
    ಜಾತಿ/ ಧರ್ಮ -0%
    ಅಭ್ಯರ್ಥಿತನ -6%

    27. ಇಂದೇ ಚುನಾವಣೆ ನಡೆದರೆ ನೀವು ಯಾವ ಪಕ್ಷಕ್ಕೆ ಮತ ನೀಡುತ್ತೀರಿ..?
    ಸಮಗ್ರ
    ಕಾಂಗ್ರೆಸ್ – 30%
    ಬಿಜೆಪಿ – 37%
    ಜೆಡಿಎಸ್ -28%
    ಇತರೆ – 5%

    ಮುಂಬೈ ಕರ್ನಾಟಕ
    ಕಾಂಗ್ರೆಸ್ – 30%
    ಬಿಜೆಪಿ -45%
    ಜೆಡಿಎಸ್ -19%
    ಇತರೆ -6%

    ಹೈದರಾಬಾದ್ ಕರ್ನಾಟಕ
    ಕಾಂಗ್ರೆಸ್ – 36%
    ಬಿಜೆಪಿ -33%
    ಜೆಡಿಎಸ್ -26%
    ಇತರೆ -4%

    ಕರಾವಳಿ & ಮಧ್ಯ
    ಕಾಂಗ್ರೆಸ್ -38%
    ಬಿಜೆಪಿ -38%
    ಜೆಡಿಎಸ್ -14%
    ಇತರೆ -10%

    ಹಳೆ ಮೈಸೂರು
    ಕಾಂಗ್ರೆಸ್ -26%
    ಬಿಜೆಪಿ -25%
    ಜೆಡಿಎಸ್ – 42%
    ಇತರೆ – 7%

    27(ಎ) ಕಳೆದ ಚುನಾವಣೆ ಹಾಗೂ ಈ ಬಾರಿಯ ಮತಗಳ ಶೇಕಡಾವಾರು ಪ್ರಮಾಣ
    ಸಮಗ್ರ
    ಕಾಂಗ್ರೆಸ್ – 30%(2017), 37%(2013)
    ಬಿಜೆಪಿ – 37%(2017), 20%(2013)
    ಕೆಜೆಪಿ – 10%(2013)
    ಬಿಎಸ್‍ಆರ್‍ಸಿ -3%(2013)
    ಜೆಡಿಎಸ್ – 28%(2017), 20%(2013)
    ಇತರೆ- 5(2017), 11(2013)

    ಮುಂಬೈ ಕರ್ನಾಟಕ
    ಕಾಂಗ್ರೆಸ್ -30%(2017), 38%(2013)
    ಬಿಜೆಪಿ – 45%(2017), 27%(2013)
    ಕೆಜೆಪಿ – 10%(2013)
    ಬಿಎಸ್‍ಆರ್‍ಸಿ -3%(2013)
    ಜೆಡಿಎಸ್ -19%(2017), 11%(2013)
    ಇತರೆ -6%(2017), 10%(2013)

    ಹೈದರಾಬಾದ್ ಕರ್ನಾಟಕ
    ಕಾಂಗ್ರೆಸ್ -36%(2017), 34%(2013)
    ಬಿಜೆಪಿ – 33%(2017), 16%(2013)
    ಕೆಜೆಪಿ -15%(2013)
    ಬಿಎಸ್‍ಆರ್‍ಸಿ -8%(2013)
    ಜೆಡಿಎಸ್ – 26%(2017) 14%(2013)
    ಇತರೆ – 4%(2017), 11%(2013)

    ಕರಾವಳಿ & ಮಧ್ಯ
    ಕಾಂಗ್ರೆಸ್ – 38%(2017), 39%(2013)
    ಬಿಜೆಪಿ -38%(2017), 22%(2013)
    ಕೆಜೆಪಿ – 12%(2013)
    ಬಿಎಸ್‍ಆರ್‍ಸಿ -2%(2013)
    ಜೆಡಿಎಸ್ -14%(2017), 15%(2013)
    ಇತರೆ – 10%(2017), 10%(2013)

    ಹಳೆ ಮೈಸೂರು
    ಕಾಂಗ್ರೆಸ್ -26%(2017), 34%(2013)
    ಬಿಜೆಪಿ -25%(2017), 12%(2013)
    ಕೆಜೆಪಿ -8%(2013)
    ಬಿಎಸ್‍ಆರ್‍ಸಿ -1%(2013)
    ಜೆಡಿಎಸ್ -42%(2017), 32%(2013)
    ಇತರೆ – 7%(2017), 13%(2013)

    28. ರಾಜ್ಯ ಸರ್ಕಾರದ ಯಾವ ಯೋಜನೆ ನಿಮಗೆ ತಕ್ಷಣ ನೆನಪಿಗೆ ಬರುತ್ತದೆ..?
    ಸಮಗ್ರ
    ಅನ್ನಭಾಗ್ಯ -71%
    ಕ್ಷೀರಭಾಗ್ಯ – 10%
    ಶಾದಿಭಾಗ್ಯ -5%
    ವಿದ್ಯಾ ಸಿರಿ -2%
    ಯಾವುದು ಇಲ್ಲ -8%
    ಇತರೆ -4%

    ಮುಂಬೈ ಕರ್ನಾಟಕ
    ಅನ್ನಭಾಗ್ಯ- 66%
    ಕ್ಷೀರಭಾಗ್ಯ – 4%
    ಶಾದಿಭಾಗ್ಯ – 1%
    ವಿದ್ಯಾ ಸಿರಿ – 0%
    ಯಾವುದು ಇಲ್ಲ – 17%
    ಇತರೆ – 11%

    ಹೈದರಾಬಾದ್ ಕರ್ನಾಟಕ
    ಅನ್ನಭಾಗ್ಯ- 61%
    ಕ್ಷೀರಭಾಗ್ಯ – 2%
    ಶಾದಿಭಾಗ್ಯ – 0%
    ವಿದ್ಯಾ ಸಿರಿ – 0%
    ಯಾವುದು ಇಲ್ಲ -25%
    ಇತರೆ – 12%

    ಕರಾವಳಿ &ಮಧ್ಯ
    ಅನ್ನಭಾಗ್ಯ- 69%
    ಕ್ಷೀರಭಾಗ್ಯ – 4%
    ಶಾದಿಭಾಗ್ಯ – 3%
    ವಿದ್ಯಾ ಸಿರಿ – 9%
    ಯಾವುದು ಇಲ್ಲ 0%
    ಇತರೆ – 16%

    ಹಳೆ ಮೈಸೂರು
    ಅನ್ನಭಾಗ್ಯ- 73%
    ಕ್ಷೀರಭಾಗ್ಯ – 17%
    ಶಾದಿಭಾಗ್ಯ – 8%
    ವಿದ್ಯಾ ಸಿರಿ – 0
    ಯಾವುದು ಇಲ್ಲ -0
    ಇತರೆ – 2%

    29. ಇಂದೇ ಚುನಾವಣೆ ನಡೆದರೆ ಪಕ್ಷಗಳ ಬಲಾಬಲ
    ಸಮಗ್ರ ಕರ್ನಾಟಕ
    ಕಾಂಗ್ರೆಸ್ 67-87
    ಬಿಜೆಪಿ 75-95
    ಜೆಡಿಎಸ್ 43-63
    ಇತರೆ 5-15

    30. ನೋಟ್ ಬ್ಯಾನ್ ಮಾಡಿದ್ದು ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಹಕಾರಿಯಾಗುತ್ತಾ..?
    ಸಮಗ್ರ
    ಹೌದು -73%
    ಇಲ್ಲ -22%
    ಹೇಳಲಾಗದು -5%

    ಮುಂಬೈ ಕರ್ನಾಟಕ
    ಹೌದು 60%
    ಇಲ್ಲ – 37%
    ಹೇಳಲಾಗದು 3%

    ಹೈದರಾಬಾದ್ ಕರ್ನಾಟಕ
    ಹೌದು 50%
    ಇಲ್ಲ -27%
    ಹೇಳಲಾಗದು – 22%

    ಕರಾವಳಿ &ಮಧ್ಯ
    ಹೌದು 78%
    ಇಲ್ಲ -22%
    ಹೇಳಲಾಗದು – 0%

    ಹಳೇ ಮೈಸೂರು
    ಹೌದು -84%
    ಇಲ್ಲ -15%
    ಹೇಳಲಾಗದು – 1%

    31. ನೋಟ್ ಬ್ಯಾನ್ ಮಾಡಿದ್ದರಿಂದ ನಿಮಗೆ ಸಮಸ್ಯೆಯಾಯಿತೇ?
    ಸಮಗ್ರ –
    ಹೌದು -60%
    ಇಲ್ಲ -35%
    ಹೇಳಲಾಗದು -4%

    ಮುಂಬೈ ಕರ್ನಾಟಕ
    ಹೌದು 42%
    ಇಲ್ಲ 55%
    ಹೇಳಲಾಗದು 3%

    ಹೈದರಾಬಾದ್ ಕರ್ನಾಟಕ
    ಸಮಗ್ರ
    ಹೌದು 52%
    ಇಲ್ಲ 33%
    ಹೇಳಲಾಗದು 14%

    ಕರಾವಳಿ & ಮಧ್ಯ
    ಸಮಗ್ರ –
    ಹೌದು -56%
    ಇಲ್ಲ -41%
    ಹೇಳಲಾಗದು 3%

    ಹಳೆ ಮೈಸೂರು
    ಹೌದು 72%
    ಇಲ್ಲ 27%
    ಹೇಳಲಾಗದು 1%

     


    https://www.youtube.com/watch?v=JdKyWbqqiRQ

    https://www.youtube.com/watch?v=8EpEzasa2pk

    https://www.youtube.com/watch?v=E4QtftJ3VaE

    https://www.youtube.com/watch?v=S559LP64AyM

     

  • ಮತಗಟ್ಟೆಗೆ ಪಿಸ್ತೂಲ್ ತಗೊಂಡೋದ ಬಿಜೆಪಿ ಅಭ್ಯರ್ಥಿ ಸಹೋದರ ವಶಕ್ಕೆ

    ಲಕ್ನೋ: ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗಿನಿಂದಲೇ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಮತಗಟ್ಟೆಗೆ ಪಿಸ್ತೂಲ್ ತೆಗೆದುಕೊಂಡು ಹೋದ ಬಿಜೆಪಿ ಮುಖಂಡ ಸಂಗೀತಾ ಸೋಮ್ ಸಹೋದರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಗಗನ್ ಸೋಮ್ ಇದೀಗ ಪೊಲೀಸರ ವಶದಲ್ಲಿದ್ದು, ಇವರು ಸಾರ್ಧನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ಮಧ್ಯೆಯೂ ಮೀರತ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಗೀತ್ ಸೋಮ್ ಸಹೋದರ ಗಗನ್ ಸೋಮ್ ಪಿಸ್ತೂಲ್‍ನೊಂದಿಗೆ ಮತಗಟ್ಟೆ ಪ್ರವೇಶಿಸಿದ್ದರು. ಕೂಡಲೇ ಮಾಹಿತಿ ಪಡೆದ ಪೊಲೀಸರು ಗಗನ್ ಸೋಮ್ ಅವರನ್ನು ವಶಕ್ಕೆ ಪಡೆದಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಮತದಾನದಲ್ಲಿ ಇಂದು 73 ವಿಧಾನಸಭಾ ಕ್ಷೇತ್ರಗಳಲ್ಲಿ 2.6 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುಂದಿನ 6 ಹಂತದ ಮತದಾನ ಫೆಬ್ರವರಿ 15, 19, 23 ಹಾಗೂ 27 ಮತ್ತು ಮಾರ್ಚ್ 4 ಹಾಗೂ 8ರಂದು ನಡೆಯಲಿದೆ.

  • ಸಿಎಂ ಆಪ್ತ, ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿಯಲ್ಲಿ ಏನಿದೆ ಗೊತ್ತಾ?

    – ಬಿಎಸ್‍ವೈ ಆರೋಪ ಹಿನ್ನೆಲೆಯಲ್ಲಿ ಬೆನ್ನು ಬಿದ್ದ ಪಬ್ಲಿಕ್ ಟಿವಿಗೆ ಸಿಕ್ಕಿದೆ ಸ್ಫೋಟಕ ಮಾಹಿತಿ

    ಬೆಂಗಳೂರು: ಸಿಎಂ ಆಪ್ತ ಎಂಎಲ್‍ಸಿ ಗೋವಿಂದ್‍ರಾಜು ಕೇಂದ್ರದ ಕಾಂಗ್ರೆಸ್ ಮುಖಂಡರಿಗೆ ಸಾವಿರ ಕೋಟಿಗೂ ಹೆಚ್ಚಿನ ದುಡ್ಡು ಕೊಟ್ಟಿದ್ದಾರೆ. ಇಂದೋ ನಾಳೆಯೋ ಈ ಸತ್ಯ ಹೊರಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಶುಕ್ರವಾರದಂದು ಆರೋಪ ಮಾಡಿದ್ದರು. ಈ ವಿಚಾರ ಈಗ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಯಡಿಯೂರಪ್ಪ ಸುಮ್ನೆ ಆರೋಪ ಮಾಡಿದ್ದಾರೆ ಅಂತ ಕೆಲವರು ಅಂದುಕೊಂಡಿದ್ರು. ಆದ್ರೆ, ಆರೋಪದ ಬೆನ್ನು ಹತ್ತಿ ಹೋದ ಪಬ್ಲಿಕ್ ಟಿವಿಗೆ ಈಗ ಆ ಡೈರಿ ಜಾರಿ ನಿರ್ದೇಶನಾಲಯದ ಬಳಿಯಿಲ್ಲ. ಬದಲಿಗೆ ಆದಾಯ ತೆರಿಗೆ ಅಧಿಕಾರಿಗಳ ಬಳಿ ಇದೆ ಅನ್ನೋದು ಗೊತ್ತಾಗಿದೆ.

    ಆ ಡೈರಿ ಬೇರೆ ಯಾವುದೂ ಅಲ್ಲ. ಎಂಎಲ್‍ಸಿ ಗೋವಿಂದರಾಜು ಮನೆಯಲ್ಲಿ ಸಿಕ್ಕ ಬ್ಲಾಕ್ ಡೈರಿ. ಆರು ತಿಂಗಳ ಹಿಂದೆಯಷ್ಟೇ ಇಂದಿರಾನಗರದ ಮನೆಯಲ್ಲಿ ಈ ಡೈರಿ ಸಿಕ್ಕಿತ್ತು.

    ಬ್ಲಾಕ್‍ಡೈರಿಯಲ್ಲಿ ಸಚಿವರ ಬಂಡವಾಳ!: ಕಾಂಗ್ರೆಸ್ ಸರ್ಕಾರದಲ್ಲಿ ಸಾಕಷ್ಟು ಜನ ಸಿಕ್ಕಿ ಬೀಳ್ತಾರೆ ಅಂತ ಹೇಳಿದ್ದ ಯಡಿಯೂರಪ್ಪ ಮಾತಿಗೆ ಪುಷ್ಟಿಕೊಟ್ಟಿದ್ದೆ ಈ ಬ್ಲಾಕ್ ಡೈರಿ. ಸಿದ್ದರಾಮಯ್ಯ ಆಪ್ತ ಎಂಎಲ್‍ಸಿ ಗೋವಿಂದ ರಾಜು ಮನೆಯ ಮೇಲೆ ದಾಳಿ ಮಾಡಿದ ಆದಾಯ ತೆರಿಗೆ ಇಲಾಖೆ ಒಂದು ಬ್ಲಾಕ್ ಡೈರಿಯನ್ನು ವಶಪಡಿಸಿಕೊಂಡಿತ್ತು. ಆಶ್ಚರ್ಯ ಅಂದ್ರೆ ಸಹಸ್ರ ಕೋಟಿ ವ್ಯವಹಾರದ ಪಿನ್ ಟು ಪಿನ್ ಡಿಟೈಲ್ಸ್ ಆ ಡೈರಿಯಲ್ಲಿ ಇತ್ತು. ಅದರ ಆಧಾರದ ಮೇಲೆ ಐಎಎಸ್ ಅಧಿಕಾರಿಗಳು, ಚೀಫ್ ಎಂಜಿನಿಯರ್‍ಗಳು, ಕೆಲ ಅಧಿಕಾರಿಗಳು ಸೇರಿದಂತೆ ಸಚಿವರಿಗೆ ನೋಟಿಸ್ ನೀಡಿತ್ತು.

    ಯಡಿಯೂರಪ್ಪ ಹೇಳಿದಂತೆ ಸಹಸ್ರ ಕೋಟಿ ಹಣ ಕಾಂಗ್ರೆಸ್ ಹೈಕಮಾಂಡ್, ಸೋನಿಯಾ ಗಾಂಧಿ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್, ಹಿರಿಯ ನಾಯಕ ಮೋತಿಲಾಲ್ ವೋರಾ, ದಿಗ್ವಿಜಯ್ ಸಿಂಗ್ ಮತ್ತಿತರರ ಹೆಸರಿಗೆ ಹೋಗಿ ಸೇರಿದೆ ಅಂತ ಡೈರಿಯಲ್ಲಿ ಉಲ್ಲೇಖ ಆಗಿದೆ ಅಂತ ಹೇಳಲಾಗಿದೆ. ಈ ಉಲ್ಲೇಖವನ್ನು ಹಿಡಿದುಕೊಂಡು ಮತ್ತಿತರರ ಬಗ್ಗೆ ಈಗ ಮಾಹಿತಿ ಕಲೆ ಹಾಕಲಾಗ್ತಿದೆ.

    ಪ್ರಭಾವಿ ಸಚಿವರೇ ಡೈರಿಯ ತಿರುಳು!: ಹೌದು, ಬ್ಲಾಕ್‍ಡೈರಿಯಲ್ಲಿ ಸಿಕ್ಕ ಮಾಹಿತಿಯ ಪ್ರಕಾರ ಪ್ರಭಾವಿ ಸಚಿವರಾದ ಡಿ.ಕೆ. ಶಿವಕುಮಾರ್, ಮಹದೇವಪ್ಪ, ಕೆ.ಜೆ. ಜಾರ್ಜ್, ಎಂ.ಬಿ ಪಾಟೀಲ್ ಅವರ ಹೆಸರು ಸೇರಿದಂತೆ 12 ಕ್ಕೂ ಹೆಚ್ಚು ಸಚಿವರ ಹೆಸರು ಐಟಿ ಅಧಿಕಾರಿಗಳ ಲಿಸ್ಟ್ ಸೇರಿತ್ತು. ಗೃಹ ಇಲಾಖೆಯನ್ನೇ ನಿಯಂತ್ರಣ ಮಾಡೋ ಕೆಂಪಯ್ಯ ಮತ್ತು ಅಧಿಕಾರಿಗಳು ಐಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ರು. ಅದೇ ರೀತಿ, ಡಿಕೆಶಿ ಸೇರಿದಂತೆ ಎಲ್ಲಾ ಸಚಿವರು ಐಟಿ ಮುಂದೆ ಹೇಳಿಕೆ ಕೊಟ್ಟಿದ್ದರು. ಯಾವುದೋ ಒಂದು ಡೈರಿ ಇಟ್ಕೊಂಡು ನಮ್ಮನ್ನೆಲ್ಲಾ ಪ್ರಶ್ನೆ ಮಾಡಿದ್ದೀರಿ. ನಿಮ್ಮ ಪ್ರಶ್ನೆಗೆ ದಾಖಲೆಗಳೇ ಇಲ್ಲ ಅಂತ ಹೇಳಿ ವಾಪಸ್ಸು ಬಂದಿದ್ರು. ಆದ್ರೆ, ಇದೇ ಮಾಹಿತಿಯನ್ನು ಆಧರಿಸಿ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಸೇರಿದಂತೆ ಕಾಂಗ್ರೆಸ್ ಜೊತೆ ಗುರುತಿಸಿಕೊಂಡವರ ಮೇಲೆ ದಾಳಿ ಮಾಡಿದ್ದಾರೆ ಅನ್ನೋ ಮಾಹಿತಿಯೂ ಇದೆ.

    ಇನ್ಯಾರ ಬುಡಕ್ಕೆ ಬಿಸಿನೀರು?: ಈಗಾಗ್ಲೇ ಸಿದ್ದರಾಮಯ್ಯ ಅವರ ಆಪ್ತ ಗೋವಿಂದರಾಜು ಡೈರಿಯಲ್ಲಿರೋ ಮತ್ತಷ್ಟು ಮಾಹಿತಿ ಆಧರಿಸಿ ತನಿಖೆ ನಡೆಸ್ತಾ ಇರೋ ಐಟಿ ಅಧಿಕಾರಿಗಳು ಎಲ್ಲಾ ಸಚಿವರನ್ನು ವಿಚಾರಣೆಗೆ ಕರೆದುಕೊಂಡು ಹೋಗುವ ಸಾಧ್ಯತೆ ಹೆಚ್ಚಾಗಿವೆ. ಸಚಿವ ಕೆ.ಜೆ. ಜಾರ್ಜ್ ಬಲಗೈಬಂಟ ಅನ್ನಿಸಿಕೊಂಡಿರೋ ಗನ್ ಮರ್ಚೆಂಟ್ ಇಸ್ಮಾಯಿಲ್ ಎಂಬವರ ಹೆಸರು ಕೂಡ ಡೈರಿಯಲ್ಲಿದೆ ಎನ್ನಲಾಗಿದೆ.

    ಒಟ್ಟಿನಲ್ಲಿ, ಐಟಿ ಅಧಿಕಾರಿಗಳ ಅಂಗಳಕ್ಕೆ ಸೇರಿರೋ ಡೈರಿ ಇದೀಗ ಸಿದ್ದರಾಮಯ್ಯ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ. ಆದರೆ, ಯಡಿಯೂರಪ್ಪ ಅವರ ಆರೋಪಕ್ಕೆ ಶುಕ್ರವಾರದಂದು ಸಿದ್ದರಾಮಯ್ಯ ಕೆರಳಿ ಕೆಂಡವಾಗಿದ್ದರು. ವಿಧಾನಸೌಧದ ಬಳಿ ಖಾರವಾಗೇ ಮಾತನಾಡಿ, ಇದನ್ನ ಸಾಬೀತು ಮಾಡಬೇಕು. ಇಲ್ಲಾಂದ್ರೆ, ರಾಜಕೀಯದಿಂದ ನಿವೃತ್ತಿಯಾಗಬೇಕು. ಅವರೊಬ್ಬ ಬೇಜಾವಾಬ್ದಾರಿ ಮನುಷ್ಯ ಅಂದಿದ್ರು.

    ಈ ಮೊದಲು ಹೇಳಿದಂತೆ ಗೋವಿಂದರಾಜು ಮನೆಯಲ್ಲಿ ಸಿಕ್ಕ ಡೈರಿ ಆಧರಿಸಿಯೇ ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಐಟಿ ರೇಡ್ ಆಗಿದ್ಯಾ ಅನ್ನೋ ಸಂಶಯ ದಟ್ಟವಾಗ್ತಿದೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ಐಟಿ ದಾಳಿಗಳು ಹೀಗಿವೆ:

    > ಚಿಕ್ಕರಾಯಪ್ಪ ( ಕಾವೇರಿ ನೀರಾವರಿ ನಿಗಮ ಎಂಡಿ)
    > ಜಯಚಂದ್ರ ( ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಮುಖ್ಯಾಧಿಕಾರಿ)
    > ಕೆಂಪಯ್ಯ ವಿಚಾರಣೆ (ಗೃಹ ಇಲಾಖೆ ಸಲಹೆಗಾರ ರಾತ್ರೋ ರಾತ್ರಿ ತನಿಖೆಗೆ ಹೋಗಿದ್ದು ಸುದ್ದಿಯಾಗಿತ್ತು)
    > ರಮೇಶ್ ಜಾರಕಿಹೊಳಿ
    > ಲಕ್ಷ್ಮಿ ಹೆಬ್ಬಾಳ್ಕರ್
    > ಎಂಟಿಬಿ ನಾಗರಾಜ್ (ಹೊಸಕೋಟೆ ಕಾಂಗ್ರೆಸ್ ಶಾಸಕ, ಸಿದ್ದರಾಮಯ್ಯ ಸಮುದಾಯದ ಶಾಸಕ)

  • ಉತ್ತರಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

    ಲಕ್ನೋ: ಉತ್ತರ ಪ್ರದೇಶದಲ್ಲಿ 7 ಹಂತಗಳ ಚುನಾವಣೆ ಇಂದಿನಿಂದ ಶುರುವಾಗ್ತಿದೆ.

    ಮೊದಲ ಹಂತದ ಮತದಾನದಲ್ಲಿ ಇಂದು 73 ವಿಧಾನಸಭಾ ಕ್ಷೇತ್ರಗಳಲ್ಲಿ 2.6ಕೋಟಿಗೂ ಹೆಚ್ಚು ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಶಾಮ್ಲಿ, ಮುಝಾಫರ್‍ನಗರ್, ಭಾಗ್‍ಪತ್, ಮೀರತ್, ಘಜಿಯಾಬಾದ್, ಗೌತಮ್ ಬುದ್ಧ ನಗರ್, ಹಾಪುರ್, ಬುಲಂದ್‍ಶಹರ್, ಆಲಿಘರ್, ಮಥುರಾ, ಹತ್ರಾಸ್, ಆಗ್ರಾ, ಫಿರೋಝಾಬಾದ್, ಇಟಾ ಹಾಗೂ ಕಾಸ್‍ಗಂಜ್ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

    ಈ ಬಾರಿ ಬಿಜೆಪಿ, ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೃತ್ರಿ ಹಾಗೂ ಬಿಎಸ್‍ಪಿ ನಡುವೆ ನೇರ ಹಣಾಹಣಿ ಇರಲಿದೆ ಎಂದು ಹೇಳಲಾಗಿದೆ. ಇನ್ನು ಇದೇ ಮೊದಲ ಬಾರಿ ಚುನಾವಣಾ ಪ್ರಚಾರ ಅಖಾಡಕ್ಕೆ ಧುಮಕಲಿರುವ ಪ್ರಿಯಾಂಕಾ ಗಾಂಧಿ, ಫೆಬ್ರವರಿ 13ರಿಂದ ಅಮೇಥಿ ಹಾಗೂ ರಾಯ್ ಬರೇಲಿಯಲ್ಲಿ ಸಹೋದರ ರಾಹುಲ್ ಜೊತೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಮುಂದಿನ 6 ಹಂತದ ಮತದಾನ ಫೆಬ್ರವರಿ 15, 19,23 ಹಾಗೂ 27 ಮತ್ತು ಮಾರ್ಚ್ 4 ಹಾಗೂ 8ರಂದು ನಡೆಯಲಿದೆ

  • ರಜನಿಕಾಂತ್ ಬಿಜೆಪಿಗೆ ಸೇರುತ್ತಾರಾ? ಹೊಸ ಪಕ್ಷ ಕಟ್ಟುತ್ತಾರಾ?

    ಚೆನ್ನೈ: ಶಶಿಕಲಾ ಹಾಗೂ ಪನ್ನೀರ್ ಸೆಲ್ವಂ ನಡುವಿನ ರಾಜಕೀಯ ಗುದ್ದಾಟವನ್ನು ಬಿಜೆಪಿ ಎನ್‍ಕ್ಯಾಶ್ ಮಾಡಿಕೊಳ್ಳಲು ಮುಂದಾದಂತೆ ಕಾಣುತ್ತಿದ್ದು, ಸೂಪರ್‍ಸ್ಟಾರ್ ರಜನಿಕಾಂತ್‍ಗೆ ಗಾಳ ಹಾಕಿದೆ.

    ಪಕ್ಷಕ್ಕೆ ಸೇರ್ಪಡೆಯಾದರೆ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನಿಮ್ಮನ್ನು ಬಿಂಬಿಸುತ್ತೇವೆ ಎಂದು ಬಿಜೆಪಿ ನಾಯಕರು ರಜನಿಕಾಂತ್ ಅವರಲ್ಲಿ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

    ಆರ್‍ಎಸ್‍ಎಸ್ ಒಲವುಳ್ಳ, ಸ್ವದೇಶಿ ಜಾಗರಣ್ ಮಂಚ್ ಸಹ ಸಂಚಾಲಕ ಗುರುಮೂರ್ತಿ ರಜನಿಕಾಂತ್ ಅವರನ್ನು ಭೇಟಿ ಮಾಡಿ ಹೊಸ ಪಕ್ಷವನ್ನು ಕಟ್ಟುವಂತೆ ಸಲಹೆ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯ ಬೆಂಬಲಿಗರು ಕೂಡಾ ರಜನಿಕಾಂತ್ ರಾಜಕೀಯಕ್ಕೆ ಬರಬೇಕೆಂದು ಆಗ್ರಹಿಸುತ್ತಿದ್ದಾರೆ.

    ಈ ನಡುವೆ ರಜನಿಕಾಂತ್ ರಾಜಕೀಯ ಎಂಟ್ರಿಗೆ ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಜಿನಿಕಾಂತ್ ರಾಜಕೀಯಕ್ಕೆ ಬರೋದು ಬೇಡ ಅಂತ ಸಲಹೆ ನೀಡಿದ್ದಾರೆ.

    ರಜನಿಕಾಂತ್ ಸಹೋದರ ಸತ್ಯನಾರಾಯಣ ರಾವ್ ಪ್ರತಿಕ್ರಿಯಿಸಿ, ರಜನಿ ರಾಜಕೀಯಕ್ಕೆ ಬರಲು ಈಗ ಕಾಲ ಕೂಡಿಬಂದಿದೆ. ತಮಿಳುನಾಡು ರಾಜಕೀಯದಲ್ಲಿ ಏನು ಆಗುತ್ತಿದೆ ಎನ್ನುವುದನ್ನು ಅವರು ನೋಡಲಿದ್ದಾರೆ ಎಂದು ಹೇಳಿದ್ದಾರೆ.

    ಒಂದ್ವೇಳೆ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿಯಾದ್ರೆ ತಮಿಳುನಾಡಲ್ಲಿ ಸರ್ಕಾರ ಛಿದ್ರವಾಗಿ ರಾಷ್ಟ್ರಪತಿ ಆಡಳಿತ ಬಂದ್ರೂ ಅಚ್ಚರಿಯಿಲ್ಲ ಎನ್ನಲಾಗಿದೆ.

    ಶುಕ್ರವಾರ ಸಂಜೆ ಗುರುಮೂರ್ತಿ,ನಾನು ಕೇಳಿದ್ದಕ್ಕೆ ರಜನಿಕಾಂತ್ ರಾಜಕೀಯಕ್ಕೆ ಸೇರುತ್ತಾರೆ ಎನ್ನುವ ಸುದ್ದಿ ಸುಳ್ಳು. ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಕಟವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ಉತ್ತರಪ್ರದೇಶದಲ್ಲಿ ನಾಳೆ ಮೊದಲ ಹಂತದ ಚುನಾವಣೆ: ಅಖಾಡ ಹೇಗಿದೆ?

    ನವದೆಹಲಿ: ಉತ್ತರ ಪ್ರದೇಶ ಎಂದ ಕೂಡಲೇ ತಕ್ಷಣ ನೆನಪಾಗೋದು ಭಾರತದ ಅತಿದೊಡ್ಡ ರಾಜ್ಯ, ಅಷ್ಟೇ ಅಲ್ಲ ರಾಷ್ಟ್ರ ರಾಜಕಾರಣ ವನ್ನ ನಿರ್ಧರಿಸುವ ಸಮರ ಭೂಮಿ. ಇಲ್ಲಿ ಗೆದ್ದವರು ದೇಶವನ್ನೇ ಆಳ್ತಾರೆ ಅನ್ನೂ ಅಲಿಖಿತ ನಿಯಮ. ಜೊತೆಗೆ ದೇಶದ ಅತಿ ಹೆಚ್ಚು ಮತದಾರರು ಇರುವ ರಾಜ್ಯ ಅನ್ನೂ ಹೆಗ್ಗಳಿಕೆ ಉತ್ತರ ಪ್ರದೇಶದು. ಈ ಕಾರಣಕ್ಕೆ ಉತ್ತರ ಪ್ರದೇಶ ರಾಜಕೀಯ ವಿಚಾರದಲ್ಲಿ ರಾಷ್ಟ್ರದಲ್ಲಿ ಹೆಚ್ಚು ಸುದ್ದಿಯಾಗುತ್ತೆ.

    ಇಂತಹ ರಾಜಕೀಯ ರಾಜ್ಯದಲ್ಲಿ ಕಳೆದ ಒಂದು ತಿಂಗಳಿನಿಂದ ಚುನಾವಣಾ ಕಾವು ಜೋರಾಗಿದೆ. ಏಳು ಹಂತದಲ್ಲಿ ನಡೆಯುವ ಚುನಾವಣೆಗೆ ಮುನ್ನುಡಿ  ಎನ್ನುವುಂತೆ ಶನಿವಾರ ಮೊದಲ ಹಂತದ ಚುನಾವಣೆಗೆ ಮತದಾನ ನಡೆಯಲಿದೆ.

    ಮೊದಲ ಹಂತದಲ್ಲಿ 15 ಜಿಲ್ಲೆಗಳ ಪೈಕಿ 73 ವಿಧಾನ ಸಭೆ ಕ್ಷೇತ್ರಗಳಿಗೆ ಚುನಾವಣೆ ಕಸರತ್ತು ನಡೆಯಲಿದೆ. ಶಾಮಲಿ, ಮಥುರಾ, ಮುಝಪ್ಫರ್ ನಗರ ಬಾಗ್ಫತ್, ಅಲಿಗಡ್ ಸೇರಿದಂತೆ ಹಲವು ಮತ ಕ್ಷೇತ್ರಗಳು ಭಾರಿ ನಿರೀಕ್ಷೆ ಮತ್ತು ಕುತೂಹಲ ಮೂಡಿಸುನ ಕ್ಷೇತ್ರಗಳಳಾಗಿದ್ದು ಇದೇ 15 ರಂದು 11 ಜಿಲ್ಲೆಗಳ ಪೈಕಿ 67 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು ಎರಡು ಹಂತದಲ್ಲಿ ಉತ್ತರ ಪ್ರದೇಶದ ಪಶ್ಚಿಮ ಭಾಗದ ಚುನಾವಣೆ ಮಾಡಿ ಮುಗಿಸಲು  ಆಯೋಗ ನಿರ್ಧರಿಸಿದೆ.

    ಜಾತಿ ಲೆಕ್ಕಾಚಾರ: ಉತ್ತರ ಪ್ರದೇಶದ ರಾಜಕಾರಣ ನಿಂತಿರುವುದು ಜಾತಿ ಲೆಕ್ಕಾಚಾರದಲ್ಲಿ ಹಾಗಾಗೀ ಯಾದವ, ಜಾಟ್, ಮುಸ್ಲಿಂ, ದಲಿತರು ನಿರ್ಣಾಯಕ ಪಾತ್ರ ವನ್ನು ವಹಿಸ್ತಾರೆ. ಹಾಗಾಗೀ ಈ ಬಾರಿಯ ಮತದಾರರು ಎಷ್ಟಿದ್ದಾರೆ? ಜೊತೆಗೆ ಜಾತಿ ಲೆಕ್ಕಾಚಾರ ಹೇಗಿದೆ ಎಂದು ನೋಡುವುದಾದರೆ,

    ಉತ್ತರ ಪ್ರದೇಶ ದ ಒಟ್ಟು ಮತದಾರರ ಸಂಖ್ಯೆ -14.05 ಕೋಟಿ
    ಪುರುಷರು ಮತದಾರರು – 7.7 ಕೋಟಿ
    ಮಹಿಳಾ ಮತದಾರರು – 6.3 ಕೋಟಿ
    ತೃತೀಯ ಲಿಂಗ ಮತದಾರರು – 6,983
    ಒಟ್ಟು ಮತದಾರರ ಪೈಕಿ – 4.4 ಕೋಟಿಯಷ್ಟು ಯುವ ಮತದಾರರು ಉತ್ತರ ಪ್ರದೇಶದಲ್ಲಿದ್ದಾರೆ

    ಇನ್ನೂ ಜಾತಿ ಲೆಕ್ಕಚಾರ ನೋಡುವುದಾದ್ರೆ
    ದಲಿತರು – 21.5% (ಜಾಟ್ ದಲಿತರು 11% )
    ಮುಸ್ಲಿಂಮರು – 19. 3%
    ಮೆಲ್ವವರ್ಗದ ಜಾತಿಗಳು – 22%
    ಕ್ರಿಶ್ಚಿಯನ್ನರು -0.18%
    ಹಿಂದುಳಿದ ವರ್ಗ – 40% ರಷ್ಟಿದ್ದು ಅದರಲ್ಲಿ (ಯಾದವ – 8% , ಲೋಧಿ -7%, ಜಾಟ್ – 1.7% , ಗುಜ್ಜರ್ – 1.3%, ಹೀಗೆ ಹಲವು ಉಪ ಪಂಗಡಗಳಿವೆ)

    ಉತ್ತರ ಪ್ರದೇಶದ ಪಶ್ಚಿಮ ವಲಯ ಅತಿ ಹೆಚ್ಚು ಮುಸ್ಲಿಂ, ದಲಿತ ಹಾಗೂ ಹಿಂದೂಳಿದ ವರ್ಗದ ಮತದಾರರಿದ್ದಾರೆ. ಹಾಗಾಗೀ ಈಬಾರಿ 99 ಸೀಟುಗಳನ್ನು ಮುಸ್ಲಿಂರಿಗೆ ನೀಡುವ ಮೂಲಕ ದಲಿತ ಮತ್ತು ಮುಸ್ಲಿಮರಿಗೆ ಬಿಎಸ್ಪಿಯ ನಾಯಕಿ ಮಾಯಾವತಿ ಮಣೆ ಹಾಕಿದ್ರೆ, ಎಸ್ಪಿ ಕೂಡಾ 59 ಸೀಟುಗಳನ್ನು ಮುಸ್ಲಿಂ ರಿಗೆ ನೀಡಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮುಸ್ಲಿಂ ಓಟ್ ಇಬ್ಭಾಗವಾಗದಂತೆ ಯಾದವ- ಮುಸ್ಲಿಂ ಧೃವೀಕರಣ ಮಾಡಿಕೊಂಡಿದ್ದಾರೆ.

    ಕಳೆದ ಲೋಕಸಭೆಯಲ್ಲಿ ಅತಿ ಹೆಚ್ಚು ಸೀಟುಗಳು ಗೆಲ್ಲುವ ಮೂಲಕ ಸದ್ದು ಮಾಡಿದ ಬಿಜೆಪಿ ಈ ಬಾರಿ ವಿಧಾನ ಸಭೆಯಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ. ನೋಟ್ ಬ್ಯಾನ್ ಎಫೆಕ್ಟ್, ಮೋದಿ ಅಲೆ ಮುಖ್ಯವಾಗಿದ್ದು ಸ್ವತಃ ಪ್ರಧಾನ ಮಂತ್ರಿ ಅಖಾಡಕ್ಕೆ ಇಳಿದು ಪ್ರಚಾರದಲ್ಲಿ ಭಾಗವಹಿಸುತ್ತಿದ್ದು,  ಜೊತೆಗೆ ರಾಮ ಮಂದಿರ ನಿರ್ಮಾಣದ ಆಸೆ ತೋರಿಸುವ ಬಿಜೆಪಿ ಗೆಲ್ಲುವ ತಂತ್ರ ಹೆಣೆದಿದೆ. ಇದರ ಜೊತೆಗೆ ಪಶ್ಚಿಮ ಭಾಗದಲ್ಲಿ ಅತಿ ಹೆಚ್ಚು ಪ್ರಭಾವಶಾಲಿಯಾದ ಪಕ್ಷ ಪಕ್ಷ ಆರ್‍ಎಲ್‍ಡಿ. ಆರ್‍ಎಲ್‍ಡಿ ಪ್ರತಿನಿಧಿಸುವ ಜಾಟ್ ಸಮುದಾಯದ ಸಂಖ್ಯೆ ಕಡಿಮೆ ಇದ್ದರೂ ಇತರರ ಮೇಲೆ ಪರಿಣಾಮ ಬೀರುವ ಪ್ರಭಾವ ಜಾಸ್ತಿ. ಮಾಜಿ ಪ್ರಧಾನಿ ಚೌದರಿ ಚರಣ್ ಸಿಂಗ್ ನೇತೃತ್ವದಲ್ಲಿ ಸಾಕಷ್ಟು ರಣ ತಂತ್ರಗಳನ್ನು ಹೂಡಿ ಒಂದಿಷ್ಟು ಸೀಟುಗಳು ಬಾಚ್ಚಿಕೊಳ್ಳುವ ಸಾಧ್ಯತೆಯಿದೆ.

    ಒಟ್ಟಿನಲ್ಲಿ ಮೊದಲ ಹಂತದಲ್ಲಿ ಹೆಚ್ಚು ಖಾತೆಗಳನ್ನು ತೆಗೆಯಲು ಹರ ಸಾಹಸಪಟ್ಟು ಪಕ್ಷಗಳು ಈಗಾಗಲೇ ಸಾಕಷ್ಟು ಪ್ರಚಾರ ಮಾಡಿದೆ. ಅಖಿಲೇಶ್ ಮತ್ತು ರಾಹುಲ್ ಗಾಂಧಿ ಯುವ ನಾಯಕರು, ಯುವಕರ ಮತ ತೆಕ್ಕೆಗೆ ತೆಗೆದುಕೊಳ್ಳುವುವರ ಅಥವಾ ಮೋದಿ ಅಲೆಯಲ್ಲಿ ಆನೆಯೂ ಕೂಡಾ ತೂರಿ ಹೋಗುತ್ತಾ ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದಾರೆ.

  • ಎಸ್‍ಎಂ ಕೃಷ್ಣ ಬಿಜೆಪಿ ಸೇರೋದು ಯಾವಾಗ?: ಬಿಎಸ್‍ವೈ ನೀಡಿದ ಉತ್ತರ ಇದು

    ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ತೊರೆದ ಹಿರಿಯ ಮುಖಂಡ ಎಸ್‍ಎಂ ಕೃಷ್ಣ ಬಿಜೆಪಿ ಸೇರೋ ಬಗ್ಗೆ ಈ ಹಿಂದೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈಗ ಉಲ್ಟಾ ಹೊಡೆದಿದ್ದಾರೆ. ಎಸ್‍ಎಂಕೆ ಬಿಜೆಪಿ ಸೇರುವುದು ಖಚಿತವಿಲ್ಲ ಎಂದು ಬಿಎಸ್‍ವೈ ಹೇಳಿದ್ದಾರೆ.

    ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಬಿಎಸ್‍ವೈ, ಇದರ ಬಗ್ಗೆ ಇನ್ನೂ ಅಧಿಕೃತವಾಗಿಲ್ಲ. ಅವರು ಯಾವಾಗ ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ. ಕೃಷ್ಣರನ್ನು ನಾನಂತೂ ಭೇಟಿಯಾಗಿಲ್ಲ ಅಂದ್ರು.

    ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಮುಂದುವರಿಕೆ ವಿಚಾರವಾಗಿ ಮಾತನಾಡಿದ ಬಿಎಸ್‍ವೈ, ಈಶ್ವರಪ್ಪ ಮತ್ತು ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಇಬ್ಬರೂ ಅಣ್ಣ ತಮ್ಮಂದಿರಾಗಿ ಒಟ್ಟಾರೆ ಕೆಲಸ ಮಾಡ್ತಿದ್ದೀವಿ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತರುವ ಪ್ರಯತ್ನ ಮಾಡ್ತಿದ್ದೀವಿ ಅಂದ್ರು.