Tag: ಬಿಜೆಪಿ

  • ಮೋದಿ, ನಿತೀಶ್ ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ವರ್ಕೌಟ್ ಆಗ್ಲಿಲ್ಲ!

    ಮೋದಿ, ನಿತೀಶ್ ಗೆಲ್ಲಿಸಿದ್ದ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ವರ್ಕೌಟ್ ಆಗ್ಲಿಲ್ಲ!

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಿಸಿದ್ದ, ಬಿಹಾರ ಚುನಾವಣೆಯಲ್ಲಿ ಜೆಡಿಯು ಗೆಲುವಿನ ರೂವಾರಿಯಾಗಿದ್ದ ರಾಜಕೀಯ ಸಲಹೆಗಾರ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಉತ್ತರಪ್ರದೇಶಲ್ಲಿ ವಿಫಲವಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಮೋದಿ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ನಂತರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಕ್ಯಾಂಪ್‍ನಲ್ಲಿ ಗುರುತಿಸಿಕೊಂಡು ಗೆಲುವಿನ ರೂವಾರಿಯಾಗಿದ್ರು. ಈ ಕಾರಣಕ್ಕಾಗಿ ಪ್ರಶಾಂತ್ ಕಿಶೋರ್ ಅವರಿಗೆ ರಾಹುಲ್ ಗಾಂಧಿ ಉತ್ತರ ಪ್ರದೇಶ ಚುನಾವಣೆ ಉಸ್ತುವಾರಿ ವಹಿಸಿದ್ದರು.

    ಪ್ರಶಾಂತ್ ಕಿಶೋರ್ ಅವರನ್ನು ನೇಮಿಸಿದ್ದಕ್ಕೆ ಆರಂಭದಲ್ಲೇ ಪಕ್ಷದ ಹಿರಿಯ ನಾಯಕರು ಅಪಸ್ವರ ಎತ್ತಿದ್ದರು. ನಮ್ಮ ಮಾತಿಗೆ ಬೆಲೆ ನೀಡದೇ ಪ್ರಶಾಂತ್ ಕಿಶೋರ್ ಮಾತಿಗೆ ಹೈಕಮಾಂಡ್ ಬೆಲೆ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಹಿರಿಯ ನಾಯಕರೇ ಅಸಮಾಧಾನ ಹೊರ ಹಾಕಿದ್ದರೂ ಎಸ್‍ಪಿ, ಕಾಂಗ್ರೆಸ್ ಮೈತ್ರಿಕೂಟ ಅಧಿಕಾರಕ್ಕೆ ಬರಲು ಪ್ರಶಾಂತ್ ಕಿಶೋರ್ ಸಾಕಷ್ಟು ಕಸರತ್ತು ನಡೆಸಿದ್ದರು. ಆದರೆ ಮೋದಿ ಅಲೆಯಲ್ಲಿ ಎಸ್‍ಪಿ ಮತ್ತು ಕಾಂಗ್ರೆಸ್ ಕೊಚ್ಚಿಕೊಂಡು ಹೋಗಿದೆ. ಈ ಮೂಲಕ ಎರಡು ಚುನಾವಣೆಯಲ್ಲಿ ಯಶಸ್ವಿಯಾಗಿದ್ದ ಪ್ರಶಾಂತ್ ಕಿಶೋರ್‍ಗೆ ಮೂರನೇ ಚುನಾವಣೆಯಲ್ಲಿ ಸೋಲಾಗಿದೆ.

    ಮೇಲ್ವರ್ಗದ ಮತಗಳನ್ನು ಸೆಳೆಯುವ ಉದ್ದೇಶ ಮತ್ತು ಕಾಂಗ್ರೆಸ್ ಯಾವಾಗಲೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಪಕ್ಷ ಎನ್ನುವ ಕಲ್ಪನೆಯಿಂದ ಹೊರಬರಲು ಪ್ರಶಾಂತ್ ಕಿಶೋರ್ ಅವರು ಈ ಬಾರಿ ಬ್ರಾಹ್ಮಣ ಸಮುದಾಯ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಬೇಕೆಂದು ಸಲಹೆ ನೀಡಿದ್ದರು. ಈ ಸಲಹೆಗೆ ಕಾಂಗ್ರೆಸ್ ವಲಯದಲ್ಲಿ ವಿರೋಧ ವ್ಯಕ್ತವಾಗಿತ್ತು ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಕೆಲ ತಿಂಗಳ ಹಿಂದೆ ಪ್ರಕಟವಾಗಿತ್ತು.

    ಲೋಕಸಭಾ ಚುನಾವಣೆಯ ವೇಳೆ ಪ್ರಶಾಂತ್ ಕಿಶೋರ್ ಸಲಹೆಯಂತೆ ಚಾಯ್‍ಪೇ ಚರ್ಚಾ ಬಿಜೆಪಿಗೆ ಭಾರೀ ಯಶಸ್ಸನ್ನು ತಂದುಕೊಟ್ಟಿತ್ತು. ಬಿಹಾರದಲ್ಲಿ ಮಹಾಘಟ್‍ಬಂಧನ್ ಮೈತ್ರಿಕೂಟ ನಡೆಸಿ ನಿತೀಶ್ ಕುಮಾರ್ ಅವರನ್ನು ಪ್ರಶಾಂತ್ ಕಿಶೋರ್ ಗೆಲ್ಲಿಸಿದ್ದರು.

  • ಉತ್ತರಾಖಂಡದಲ್ಲಿ ಗದ್ದುಗೆ ಏರಿದ ಬಿಜೆಪಿ!

    ಉತ್ತರಾಖಂಡದಲ್ಲಿ ಗದ್ದುಗೆ ಏರಿದ ಬಿಜೆಪಿ!

    ನವದೆಹಲಿ: ಭಾರತೀಯ ಜನತಾ ಪಾರ್ಟಿ ಉತ್ತರಾಖಂಡ್ ಗದ್ದುಗೆ ಹಿಡಿಯಲು ಸರ್ವಸನ್ನದ್ಧವಾಗಿದೆ. ಉತ್ತರಾಖಂಡ್ ರಾಜ್ಯದಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದು, ಈಗಾಗಲೇ ಬಿಜೆಪಿ 47 ಕ್ಷೇತ್ರಗಳಲ್ಲಿ ತನ್ನ ಮುನ್ನಡೆಯನ್ನು ಕಾಯ್ದುಕೊಂಡಿದೆ.

    ಉತ್ತರಾಖಂಡ್ ರಾಜ್ಯ ಗದ್ದುಗೆಯನ್ನು ಏರಲು ಕನಿಷ್ಠ 36 ಕ್ಷೇತ್ರಗಳಲ್ಲಿ ಗೆಲವು ಪಡೆದುಕೊಳ್ಳಬೇಕು. ಆದರೆ ಬಿಜೆಪಿ ಪಕ್ಷದ ಅಭ್ಯರ್ಥಿಗಳು 47 ಕ್ಷೇತ್ರಗಳಲ್ಲಿ ಗೆಲವು ಕಂಡುಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷ 11 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳು 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

    ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಹರೀಶ್ ರಾವತ್ ಸೇರಿದಂತೆ ಅನೇಕರು ಹಿನ್ನಡೆಯನ್ನು ಅನುಭವಿಸಿದ್ದಾರೆ. ಹರಿದ್ವಾರ್ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಯತೀಶ್ವರಾನಂದ್ ಅವರ ವಿರುದ್ಧ ಹರೀಶ್ ರಾವತ್ ತೀವ್ರ ಹಿನ್ನೆಡೆಯನ್ನು ಅನುಭವಿಸಿದ್ದಾರೆ.

    2012ರಲ್ಲಿ ಕಾಂಗ್ರೆಸ್ 32, ಬಿಜೆಪಿ 31, ಬಿಎಸ್‍ಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

     

  • ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುನ್ನಡೆ

    ನವದೆಹಲಿ: ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಚುನಾವಣೋತ್ತರ ಸಮೀಕ್ಷೆಯಂತೆ ಬಿಜೆಪಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಬೆಳಗ್ಗೆ 9 ಗಂಟೆಯ ವೇಳೆ ಟ್ರೆಂಡ್ಸ್ ಪ್ರಕಾರ ಬಿಜೆಪಿ 205, ಎಸ್‍ಪಿ ಕಾಂಗ್ರೆಸ್ ಮೈತ್ರಿಕೂಟ 51, ಬಿಎಎಸ್‍ಪಿ 24, ಇತರರು 7 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಒಟ್ಟು 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ 202 ಸ್ಥಾನಗಳನ್ನು ಗೆದ್ದವರು ಅಧಿಕಾರ ಹಿಡಿಯಲಿದ್ದಾರೆ.

    ಪಂಜಾಬ್‍ನಲ್ಲಿ ಕಾಂಗ್ರೆಸ್ 25, ಆಪ್ 8, ಅಕಾಲಿದಳ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

    ಉತ್ತರಾಖಂಡ್‍ನಲ್ಲಿ 20 ಕ್ಷೇತ್ರಗಳಲ್ಲಿ ಬಿಜೆಪಿ, 5ರಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದರೆ ಗೋವಾದ 3 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಮಣಿಪುರದ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್, 1ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

  • ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ಪಂಚರಾಜ್ಯಗಳ ಮಹಾ ಫಲಿತಾಂಶಕ್ಕೆ ಕ್ಷಣಗಣನೆ

    ನವದೆಹಲಿ: ಪಂಚರಾಜ್ಯಗಳ ವಿಧಾನಸಭಾ ಮಹಾ ಫಲಿತಾಂಶಕ್ಕೆ 2 ಗಂಟೆಯಷ್ಟೇ ಬಾಕಿ ಇದೆ. ಕೆಲವೇ ಕ್ಷಣಗಳಲ್ಲಿ ಮತದಾನ ಎಣಿಕೆ ಕಾರ್ಯ ಶುರುವಾಗಲಿದೆ.

    ಸಾವಿರಾರು ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಮೊದಲ ಬಾರಿಗೆ ಉತ್ತರ ಪ್ರದೇಶ, ಮಣಿಪುರದಲ್ಲಿ ಬಿಜೆಪಿ ಬಹುಮತ ಪಡೆಯುತ್ತಾ 4 ದಶಕದ ಬಳಿಕ ಮತ್ತೆ ಉತ್ತರಪ್ರದೇಶದಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸುತ್ತಾ? ಎಂಬುದಕ್ಕೆ ಇಂದು ಉತ್ತರ ಸಿಗಲಿದೆ.

    ಹಾಗೆ ಪಂಜಾಬ್‍ನಲ್ಲಿ 14 ಬಾರಿ ಕಾಂಗ್ರೆಸ್, 8 ಬಾರಿ ಅಕಾಲಿದಳದ ಆಡಳಿತ ಅಂತ್ಯವಾಗುತ್ತಾ? 3ನೇ ಬಾರಿಗೆ ಗೋವಾ, ಉತ್ತರಾಖಂಡ್‍ನಲ್ಲಿ ಮತ್ತೆ ಕಮಲ ಅರಳುತ್ತಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

  • ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಿದ್ದು ಹಣ ವರ್ಗಾವಣೆಗಾ?- ಸಿಟಿ ರವಿ

    ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಿದ್ದು ಹಣ ವರ್ಗಾವಣೆಗಾ?- ಸಿಟಿ ರವಿ

    ಬೆಂಗಳೂರು: ಸೋನಿಯಾ ಗಾಂಧಿ ವಿದೇಶಕ್ಕೆ ಹೋಗಿರುವುದು ವೈದ್ಯಕೀಯ ಚಿಕಿತ್ಸೆಗೋ ಅಥವಾ ತಮ್ಮ ವೈಯಕ್ತಿಕ ಅಕೌಂಟಿನಿಂದ ಸುರಕ್ಷಿತ ಸ್ಥಳಕ್ಕೆ ಹಣ ವರ್ಗಾವಣೆ ಮಾಡುವುದಕ್ಕೋ ಎಂದು ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಜೆಪಿ ಮುಖಂಡ ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

    ಗಾಂಧಿ ಕುಟುಂಬ 6 ದಶಕಗಳವರೆಗೆ ಭಾರತವನ್ನ ಆಳಿದ್ದರೂ ಸೋನಿಯಾ ಗಾಂಧಿ ಚಿಕಿತ್ಸೆ ಪಡೆಯಬಹುದಾದ ಒಂದು ಆಸ್ಪತ್ರೆ ಕಟ್ಟಿಸಲು ಅವರಿಂದ ಸಾಧ್ಯವಾಗಿಲ್ಲ ಎಂದು ಅವರು ಹರಿಹಾಯ್ದಿದ್ದಾರೆ.

    ಅಲ್ಲದೆ ರಾಹುಲ್ ಗಾಂಧಿ ತನ್ನ ತಾಯಿ ಸೋನಿಯಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಯಾಕೆ ದಾಖಲಿಸಬಾರದು? ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿತವಾಗಿಯೂ ಅವರನ್ನು ಚೆನ್ನಾಗಿ ನೋಡಿಕೊಳ್ತಾರೆ ಎಂದು ಸಿಟಿ ರವಿ ಹೇಳಿದ್ದಾರೆ.

    ಸೋನಿಯಾ ಗಾಂಧಿ ವೈದ್ಯರ ಸಲಹೆಯಂತೆ ವೈದ್ಯಕೀಯ ತಪಾಸಣೆಗೆಗಾಗಿ ವಿದೇಶಕ್ಕೆ ತೆರಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
    ಪಂಚ ರಾಜ್ಯಗಳ ಚುನವಣಾ ಫಲಿತಾಂಶ ಶನಿವಾರದಂದು ಹೊರಬೀಳಲಿರುವ ಮಧ್ಯೆಯೇ ಅವರು ವಿದೇಶಕ್ಕೆ ತೆರಳಿದ್ದರೆ. 3-4 ದಿನಗಳ ಬಳಿಕ ಸೋನಿಯಾ ವಾಪಸಾಗಲಿದ್ದಾರೆ ಎಂದು ಹೇಳಲಾಗಿದೆ.

     

  • ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ನಾಲ್ಕು ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್

    ಚುನಾವಣೋತ್ತರ ಸಮೀಕ್ಷೆಯಲ್ಲಿ ಕಮಲ ಕಿಲಕಿಲ
    – ಆನೆ ಜೊತೆ ಸೈಕಲ್ ತುಳಿಯಲು ಅಖಿಲೇಶ್ ಸಿದ್ದ

    ನವದೆಹಲಿ: ದೇಶವೇ ಕುತೂಹಲದಿಂದ ಕಾಯುತ್ತಿದ್ದ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

    ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.

    ಇಂದು ಚುನಾವಣೋತ್ತರ ಸಮೀಕ್ಷೆಯಾದರೂ ಇದೇ 11ಕ್ಕೆ ಫಲಿತಾಂಶ ಅಧಿಕೃತವಾಗಿ ಹೊರಬರಲಿದೆ. ಸಮೀಕ್ಷೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಹಿಗ್ಗಿದ್ದಾರೆ.

    ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ ಇತರೆ ರಾಜ್ಯಗಳ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳೋದು ಗ್ಯಾರಂಟಿ. ಇನ್ನು, ಈ ಫಲಿತಾಂಶ ದೇಶದ ರಾಜಕೀಯ, ಆರ್ಥಿಕ, ಆಡಳಿತಾತ್ಮಕ ವಿಷ್ಯಗಳಲ್ಲಿ ಭಾರೀ ಮಹತ್ವ ಪಡೆದಿದೆ. ಈ ಮಧ್ಯೆ, ಬಿಜೆಪಿಯನ್ನ ಹೊರಗಿಡಲು ಬಿಎಸ್‍ಪಿ ಜೊತೆಗಾದರೂ ಮೈತ್ರಿಗೆ ಸಿದ್ಧ ಅಂತ ಸಿಎಂ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

    ಹೀಗಾಗಿ ಇಲ್ಲಿ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ, ಚುನಾವಣಾ ಪೂರ್ವ ಸಮೀಕ್ಷೆ, 2012ರ ವಿಧಾನಸಭಾ ಚುನಾವಣೆ, 2014ರ ಲೋಕಸಭಾ ಚುನಾವಣಾ ಫಲಿತಾಂಶ ಮಾಹಿತಿಯನ್ನು ನೀಡಲಾಗಿದೆ. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪಡೆದ ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎನ್ನುವ ಮಾಹಿತಿಯೂ ಇದೆ.

    ಉತ್ತರ ಪ್ರದೇಶ
    ಒಟ್ಟು ಕ್ಷೇತ್ರ – 403
    ಸರಳ ಬಹುಮತ – 202
    ಒಟ್ಟು 7 ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 4,843
    ಒಟ್ಟು ಮತದಾರರು – 10.18 ಕೋಟಿ

    ಪಂಜಾಬ್ 
    ಒಟ್ಟು ಕ್ಷೇತ್ರಗಳು – 117 ಕ್ಷೇತ್ರ
    ಸರಳ ಬಹುಮತ – 59
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 1,145
    ಒಟ್ಟು ಮತದಾರರು – 1,98,76,069

    ಗೋವಾ
    ಒಟ್ಟು ಕ್ಷೇತ್ರಗಳು – 40 ಕ್ಷೇತ್ರ
    ಸರಳ ಬಹುಮತ – 21
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 251
    ಒಟ್ಟು ಮತದಾರರು – 11,10,884

    ಉತ್ತರಾಖಂಡ್
    ಒಟ್ಟು ಕ್ಷೇತ್ರಗಳು – 70
    ಒಂದೇ ಹಂತದಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 628
    ಒಟ್ಟು ಮತದಾರರು – 75,12,559

    ಮಣಿಪುರ
    ಒಟ್ಟು ಕ್ಷೇತ್ರಗಳು – 60
    ಎರಡು ಹಂತಗಳಲ್ಲಿ ಮತದಾನ
    ಒಟ್ಟು ಅಭ್ಯರ್ಥಿಗಳು – 266
    ಒಟ್ಟು ಮತದಾರರು – 19.02 ಲಕ್ಷ

     

  • ಉತ್ತರಪ್ರದೇಶದ ಗದ್ದುಗೆ ಯಾರಿಗೆ: ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ

    ಉತ್ತರಪ್ರದೇಶದ ಗದ್ದುಗೆ ಯಾರಿಗೆ: ಸಮೀಕ್ಷೆಗಳ ಫಲಿತಾಂಶ ಇಲ್ಲಿದೆ

    ನವದೆಹಲಿ: ಉತ್ತರಪ್ರದೇಶದಲ್ಲಿ ಈ ಬಾರಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಟೈಮ್ಸ್ ನೌ ಹೊರತು ಪಡಿಸಿ ಉಳಿದ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ 190 ಅಸುಪಾಸಿನಲ್ಲಿ ಸ್ಥಾನಗಳನ್ನು ಗೆಲ್ಲಲ್ಲಿದೆ ಎಂದು ಭವಿಷ್ಯ ನುಡಿದಿದೆ. ಹೀಗಾಗಿ ಇಲ್ಲಿ ಎಲ್ಲ ಸಮೀಕ್ಷೆಗಳ ವಿವರವನ್ನು ನೀಡಲಾಗಿದೆ.

    ಈ ವಿವರದ ಜೊತೆ ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಕ್ಕಿತ್ತು? ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನ ಸಿಕ್ಕಿತ್ತು? ಲೋಕಸಭಾ ಚುನಾವಣೆಯಲ್ಲಿ ಬಿದ್ದಿರುವ ಶೇಕಡಾವಾರು ಮತಗಳನ್ನು ಲೆಕ್ಕ ಹಾಕಿದ್ರೆ ಈಗ ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ಮಾಹಿತಿಯನ್ನು ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

  • ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

    ಲೋಕಸಭಾ ವೋಟ್ ನೋಡಿದ್ರೆ ಉತ್ತರ ಪ್ರದೇಶದಲ್ಲಿ ಯಾರಿಗೆ ಎಷ್ಟು ಸ್ಥಾನ ಸಿಗಬಹುದು?

    ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ ಈ ಬಾರಿ ಗದ್ದುಗೆಯನ್ನು ಯಾರು ಏರಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.

    2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಎಸ್‍ಪಿ ಮೈತ್ರಿಕೂಟದಿಂದಾಗಿ ಬಿಜೆಪಿಗೆ ಸ್ವಲ್ಪ ಮತ ಹಂಚಿಕೆ ಕಡಿಮೆಯಾಗಬಹುದು. ಅಷ್ಟೇ ಅಲ್ಲದೇ ದಲಿತರ ಸಂಖ್ಯೆ ಹೆಚ್ಚು ಇರುವುದರಿಂದ ಲೋಕಸಭೆಯಲ್ಲಿ ಬಿಎಸ್‍ಪಿಗೆ ಯಾವುದೇ ಸ್ಥಾನ ಸಿಗದೇ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಕೆಲವೆಡೆ ಜಯಭೇರಿ ಭಾರಿಸಲಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶ ಹೆಚ್ಚು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹೀಗಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿದ್ದ ಮತಗಳನ್ನು ಲೆಕ್ಕಾಚಾರದಲ್ಲಿ ಈ ಬಾರಿ ಯಾರು ಎಷ್ಟು ಸ್ಥಾನವನ್ನು ಗೆಲ್ಲಬಹುದು ಎನ್ನುವ ವಿಶ್ಲೇಷಣಾ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಉತ್ತರಪ್ರದೇಶದಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳಿದ್ದು, ಬಹುಮತಕ್ಕೆ 202 ಸ್ಥಾನಗಳು ಬೇಕು. 2012ರ ಚುನಾವಣೆಯಲ್ಲಿ ಮುಲಾಯಂ ಸಿಂಗ್ ನೇತೃತ್ವದ ಸಮಾಜವಾದಿ ಪಕ್ಷ 224 ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಮೂಲಕ ಅಖಿಲೇಶ್ ಯಾದವ್ ಮೊದಲ ಬಾರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಪಟ್ಟವನ್ನು ಆಲಂಕರಿಸಿದ್ದರು.

    ಲೋಕಸಭಾ ಚುನಾವಣೆಗೆ ಹೋಲಿಸಿದ್ರೆ ಯಾರಿಗೆ ಎಷ್ಟು ಸ್ಥಾನ ಬರುತ್ತೆ?
    2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದ್ದರೆ, 2014 ಲೋಕಸಭಾ ಚುನಾವಣೆಯ 80 ಕ್ಷೇತ್ರಗಳಲ್ಲಿ 71ರಲ್ಲಿ ಜಯವನ್ನು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು. ಶೇ.42.6 ಮತಗಳನ್ನು ಬಿಜೆಪಿ ಪಡೆಯುವ ಮೂಲಕ ಮೋದಿ, ಅಮಿತ್ ಶಾ ರಣತಂತ್ರ ಯಶಸ್ವಿಯಾಗಿತ್ತು. ಇಷ್ಟೇ ಶೇಕಡವಾರು ಮತಗಳು ಈ ಚುನಾವಣೆಯಲ್ಲಿ ಬಿದ್ದರೆ ಬಿಜೆಪಿ 318 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜಯಭೇರಿ ಬಾರಿಸುವ ಸಾಧ್ಯತೆಯಿದೆ.

    ಎಸ್‍ಪಿ ಶೇ.22.3 ರಷ್ಟು ಮತಗಳನ್ನು ಪಡೆಯುವ ಮೂಲಕ 5 ಸ್ಥಾನವನ್ನು ಗಳಿಸಿತ್ತು. ಈ ಲೆಕ್ಕವನ್ನು ಪರಿಗಣಿಸಿದರೆ ಈ ಬಾರಿ 42 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಶೇ.7.5 ರಷ್ಟು ಮತಗಳನ್ನು ಪಡೆಯುವ ಮೂಲಕ 15 ಸ್ಥಾನವನ್ನು ಗೆಲ್ಲಬಹುದು.

     

  • ಎಸ್‍ಎಂಕೆ ಬಿಜೆಪಿ ಸೇರ್ಪಡೆ ಯಾಗುತ್ತಿರುವುದು ದುರ್ದೈವ: ಮಲ್ಲಿಕಾರ್ಜುನ ಖರ್ಗೆ

    ಎಸ್‍ಎಂಕೆ ಬಿಜೆಪಿ ಸೇರ್ಪಡೆ ಯಾಗುತ್ತಿರುವುದು ದುರ್ದೈವ: ಮಲ್ಲಿಕಾರ್ಜುನ ಖರ್ಗೆ

    ನವದೆಹಲಿ: ಎಸ್‍ಎಂ ಕೃಷ್ಣ ಬಿಜೆಪಿ ಸೇರ್ಪಡೆ ಯಾಗುತ್ತಿರುವುದು ದುರ್ದೈವ ಎಂದು ಕಾಂಗ್ರೆಸ್ ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಕೃಷ್ಣ ಸೋಶಿಯಲಿಸ್ಟ್ ಪಾರ್ಟಿಯಿಂದ ಬಂದಂತಹ ವ್ಯಕ್ತಿ ಐಡಿಯಲಾಜಿ ಮೂಲಕ ರಾಜಕಾರಣ ಮಾಡಿದವರು. ಈಗ ತಮ್ಮ ಚಿಂತನೆಗಳಿಗೆ ತಿಲಾಂಜಲಿ ಇಟ್ಟು ಬಿಜೆಪಿ ಸೇರ್ಪಡೆಯಾಗುತ್ತಿರುವುದು ತಪ್ಪು ಅಂತಾ ಪ್ರತಿಕ್ರಿಯೆ ನೀಡಿದರು.

    ಕೃಷ್ಣ ರಾಜಕೀಯ ಕೊನೆ ಗಳಿಗೆಯಲ್ಲಿ ತಪ್ಪು ನಿರ್ಧಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸೋತರೂ ಅವರನ್ನು ಕಾಂಗ್ರೆಸ್ ನಿರ್ಲಕ್ಷ್ಯ ಮಾಡದೇ ಅವರಿಗೆ ಅಧಿಕಾರ ನೀಡಿದೆ ಎಂದರು.

    ಅಬರೀಷ್ ಬಿಜೆಪಿಗೆ ಹೋಗಲ್ಲ: ಅಂಬರೀಷ್ ಬಿಜೆಪಿ ಹೋಗುವುದಿಲ್ಲ ಅವರ ಜೊತೆ ಇರುವವರು ಯಾರು ಬಿಜೆಪಿ ಸೇರುವುದಿಲ್ಲ ಎನ್ನುವ ನಂಬಿಕೆ ಇದೆ. ಅತೃಪ್ತರು ಅಸಮಾಧಾನವನ್ನು ಸಿಎಂ, ರಾಜ್ಯಾಧ್ಯಕ್ಷರು ಅಥವಾ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಬಳಿ ಹೇಳಿಕೊಳ್ಳಲಿ. ಸಿಎಂಗೂ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ ಎಂದು ತಿಳಿಸಿದರು.

    ಅಂಬರೀಶ್ ತರಾತುರಿ ನಿರ್ಣಯ ತೆಗೆದುಕೊಳ್ಳುದಿಲ್ಲ ಎಂದು ಭಾವಿಸಿದ್ದೇನೆ. ಒಂದು ವೇಳೆ ಕೆಲವರು ಬಿಜೆಪಿ ಸೇರ್ಪಡೆಯಾಗಲೇ ಬೇಕು ಎಂದು ನಿರ್ಧರಿಸಿದರೆ ಯಾರೂ ತಡೆಯಲು ಸಾಧ್ಯವಿಲ್ಲ. ಅವರಿಗೆ ಸ್ವಾತಂತ್ರ್ಯ ಇದೆ ಗಾಳಿ ಬಂದಹಾಗೇ ಕೆಲವರು ತೂರಿಕೊಳ್ತಾರೆ ಅಂತವರು ಪಕ್ಷಾಂತರವಾಗುವುದರಿಂದ ಕಾಂಗ್ರೆಸ್‍ಗೆ ಯಾವುದೇ ನಷ್ಟ ಇಲ್ಲ ಎಂದು

    ಈ ಹಿಂದೆ ಕೂಡಾ ಕಾಂಗ್ರೆಸ್ ನಲ್ಲಿ ಇಂತಹ ಪ್ರಕ್ರಿಯೆ ನಡೆದಿದೆ. ಈಗಿನ ಈ ನಡೆಗಳು ಚುನಾವಣೆಯಲ್ಲಿ ತೊಂದರೆಯಾಗದು ಅಂತಾ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್ ಸಿದ್ಧವಿದೆ: ನಾಳೆಯಿಂದ ಕೇಂದ್ರ ಬಜೆಟ್ ಸಂಸತ್ ಅಧಿವೇಷನ ಪ್ರಾರಂಭವಾಗಲಿದೆ. ದೇಶದಲ್ಲಾಗುತ್ತಿರುವ ಬೆಳವಣಿಗೆಗಳ ಕುರಿತು ಸಮಗ್ರ ಚರ್ಚೆ ನಡೆಸಲು ಕಾಂಗ್ರೆಸ್ ಸಿದ್ದವಾಗಿದೆ. ಈ ಅಧಿವೇಶನ ಸುಮಾರು ನಲವತ್ತು ದಿನಗಳ ಕಾಲ ನಡೆಯಲಿದೆ ಹಾಗಾಗೀ ಹೆಚ್ಚು ವಿಷಯಗಳನ್ನು ಸಮಗ್ರವಾಗಿ ಚರ್ಚೆ ಮಾಡಲಿದ್ದೇವೆ ಎಂದು ತಿಳಿಸಿದರು.

    ಮುಖ್ಯವಾಗಿ ದೆಹಲಿ ವಿವಿಗಳಲ್ಲಿ ಸ್ಟೂಡೆಂಟ್ ಯೂನಿಯನ್ ಗಳಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ದಕ್ಕೆ ಯಾಗಿರುವುದನ್ನು ಹಾಗೂ ಕಾನೂನು ಪರಿಸ್ಥಿತಿ ಬಗ್ಗೆ ಚರ್ಚಿಸಿಲಾಗುವುದು. ನೋಟ್ ರದ್ದತಿಯಿಂದ ಬಳಿಕ ಜಿಡಿಪಿ ಬೆಳವಣಿಗೆಯಾಗಿದೆ ಅಂತಾ ಬಿಜೆಪಿ ಹೇಳುತ್ತಿದೆ ಹೇಗೆ ಎಂಬುದು ಅರಿಯಬೇಕಿದೆ. ಜೊತೆಗೆ ಅಮೆರಿಕದಲ್ಲಿ ಭಾರತೀಯರ ಹತ್ಯೆಗಳು ನಡೆಯುತ್ತಿದೆ. ಕೇಂದ್ರ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ರಾಜ್ಯದಲ್ಲಿ ಬರಗಾಲ ಆವರಿಸಿದೆ ರಾಜ್ಯಕ್ಕೆ ಸರಿಯಾದ ಅನುದಾನ ನೀಡುತ್ತಿಲ್ಲ. ಆರ್‍ಎಸ್‍ಎಸ್ ನಾಯಕರು ಬಾಯಿಗೆ ಬಂದಹಾಗೇ ಮಾತನಾಡಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದ್ದು ಅವರ ಬಾಯಿಗೆ ಬೀಗ ಹಾಕಿಸಬೇಕಿದೆ ಇದಕ್ಕೆಲ್ಲ ಕಾಂಗ್ರೆಸ್ ಸಿದ್ಧವಾಗಿದೆ ಅಂತಾ ಮಲ್ಲಿಕಾರ್ಜುನ ಖರ್ಗೆ ಹೇಳಿದ್ರು.

    ಷರತ್ತು ಹಾಕಬೇಕು: ಮ್ಯಾನ್‍ಹೋಲ್ ನಲ್ಲಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಬೇಸರ ವ್ಯಕ್ತಪಡಿಸಿರುವ ಅವರು ಪ್ರತಿಬಾರಿ ಇಂತಹ ಪ್ರಕರಣಗಳು ನಡೆಯುತ್ತಿವೆ. ಆದರೂ ಎಚ್ಚೆತ್ತುಕೊಳ್ಳುತ್ತಿಲ್ಲ. ಒಂದು ಕಡೆ ಮಲಹೋರುವ ಪದ್ದತಿಯನ್ನು ಸರ್ಕಾರ ನಿಷೇಧ ಮಾಡಿದರೂ ಮತ್ತೊಂದು ಕಡೆ ಮೂಲಕ ಇದಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಮ್ಯಾನ್ ಹೋಲ್ ಗೆ ಇಳಿಯುವಾಗ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿಲ್ಲ. ಹೀಗಾಗಿ ಗುತ್ತಿಗೆದಾರರಿಗೆ ಕಠಿಣ ಷರತ್ತುಗಳು ಹಾಕಬೇಕು. ಬೆಂಗಳೂರು ಅತ್ಯಂತ ದೊಡ್ಡ ಮತ್ತು ತಾಂತ್ರಿಕ ವಾಗಿ ಮುಂದುವರಿದ ಊರಾಗಿದ್ದು ಮ್ಯಾನಹೋಲ್‍ಗೆ ದಲಿತರು ಬಲಿಯಾಗುತ್ತಿರುವದು ವಿಪರ್ಯಾಸ. ಅವರಿಗೆ ಪರಿಹಾರ ಕೊಟ್ಟು ಕೈ ತೊಳೆದುಕೊಂಡ್ರೆ ಸಾಲದು ಮುಂದೆ ಇಂತಹ ಘಟನೆ ಆಗದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ ಎಂದು ಖರ್ಗೆ ಹೇಳಿದರು.

  • ಕಾಂಗ್ರೆಸ್‍ನಿಂದ ಸ್ಪರ್ಧಿಸಲ್ಲ, ಬಿಜೆಪಿ ಸೇರಲ್ಲ- ಜೆಡಿಎಸ್‍ಗೆ ಶಿವರಾಮೇಗೌಡ ಜಂಪ್?

    ಕಾಂಗ್ರೆಸ್‍ನಿಂದ ಸ್ಪರ್ಧಿಸಲ್ಲ, ಬಿಜೆಪಿ ಸೇರಲ್ಲ- ಜೆಡಿಎಸ್‍ಗೆ ಶಿವರಾಮೇಗೌಡ ಜಂಪ್?

    ಮಂಡ್ಯ: ನನಗೆ ಕಾಂಗ್ರೆಸ್‍ನಿಂದ ಟಿಕೆಟ್ ಬೇಡ, ಬಿಜೆಪಿಗೆ ನಮ್ಮಪ್ಪನ ಆಣೆಗೂ ಹೋಗಲ್ಲ. ಆದ್ರೆ ಗೆಲ್ಲುವ ಪಕ್ಷದಿಂದ ನನಗೆ ಟಿಕೆಟ್ ಖಾತ್ರಿ ಆಗಿದೆ ಅಂತ ಕಾಂಗ್ರೆಸ್ ಮುಖಂಡ ಎಲ್‍ಆರ್.ಶಿವರಾಮೇಗೌಡ ಹೇಳಿದ್ದಾರೆ.

    ನಾಗಮಂಗಲದಲ್ಲಿ ಮಾತನಾಡಿದ ಶಿವರಾಮೇಗೌಡ, ಜೆಡಿಎಸ್‍ನಿಂದ ಅಮಾನತ್ತಾದ ಏಳು ಜನ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಖಚಿತ ಎಂದು ಒಂದು ವರ್ಷದ ಹಿಂದೆಯೇ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಮತ್ತು ಡಿಕೆ.ಶಿವಕುಮಾರ್ ಸಮ್ಮಖದಲ್ಲಿ ನನ್ನ ಎದುರೇ ತೀರ್ಮಾನವಾಗಿದೆ. ಆದ್ರೆ ಏಳು ಜನ ಶಾಸಕರು ಮತ ನೀಡಿದ ಜನರನ್ನ ಕೇಳಿ ಆ ನಂತರ ತಮ್ಮ ನಿರ್ಧಾರ ತಿಳಿಸ್ತೀವಿ ಅಂತಾ ಗೊಂಬೆರಾಮರ ನಾಟಕ ಆಡುತ್ತಿದ್ದಾರೆ ಅಂತ ಲೇವಡಿಯಾಡಿದ್ರು.

    ಕಾಂಗ್ರೆಸ್‍ನಿಂದ ಚಲುವರಾಯಸ್ವಾಮಿ ಸೇರಿದಂತೆ ಉಳಿದ ಆರು ಜನರಿಗೆ ಟಿಕೆಟ್ ಖಚಿತವಾಗಿ ವರ್ಷವೇ ಕಳೆದು ಹೋಗಿದೆ. ಈ ಬಗ್ಗೆ ಗೊಂದಲಬೇಡ. ಈ ರೀತಿಯ ನಿರ್ಧಾರಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ. ನನ್ನನ್ನ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡ್ತೇನೆ ಎಂದು ಭರವಸೆ ನೀಡಿದ್ರಿಂದ ನಾನು ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದ್ದೆ. ಆದ್ರೆ ಕಾಂಗ್ರೆಸ್ ಮುಖಂಡರೇ ನನ್ನನ್ನ ಓಡಾಡಿಸಿಕೊಂಡು ಸೋಲಿಸಿದ್ರು. ಹಾಗಾಗಿ 2018ರ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ ಅಂದ್ರು.

    ಆದ್ರೆ ನಮ್ಮಪ್ಪನ ಆಣೆ ನಾನು ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಲ್ಲ. ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡ್ತೇನೆ. ನನಗೆ ಟಿಕೆಟ್ ಬೇಡ. ಚಲುವರಾಯಸ್ವಾಮಿಗೆ ಕೊಡಿ ಅಂತಾ ಹೇಳ್ತೇನೆ. ಯಾಕಂದ್ರೆ ಚಲುವರಾಯಸ್ವಾಮಿ ಈಗಾಗಲೇ ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧೆಗೆ ರೆಡಿಯಾಗಿದ್ದಾರೆ ಎಂದು ಪಕ್ಷದ ಮುಖಂಡರ ತೀರ್ಮಾನದ ವಿರುದ್ಧ ಅಸಮಾಧಾನ ಹೊರಹಾಕಿದ್ರು.

    ನಾಗಮಂಗಲ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗೂ ಭೇಟಿ ನೀಡುತ್ತಿರುವ ಶಿವರಾಮೇಗೌಡ, ಮಾರ್ಚ್ 12 ರಂದು ತೂಬಿನಕೆರೆ ಗ್ರಾಮದ ಪಟ್ಟಲದಮ್ಮ ದೇವಸ್ಥಾನದ ಆವರಣದಲ್ಲಿ ತಮ್ಮ ಬೆಂಬಲಿಗರ ಬೃಹತ್ ಸಭೆ ನಡೆಸೋದಾಗಿ ತಿಳಿಸಿದ್ರು. ಇನ್ನು ನನಗೆ ಕಾಂಗ್ರೆಸ್‍ನಿಂದ ಟಿಕೆಟ್ ಬೇಡ, ಬಿಜೆಪಿಗೆ ನಮ್ಮಪ್ಪನ ಆಣೆಗೂ ಹೋಗಲ್ಲ. ಆದ್ರೆ ಗೆಲ್ಲುವ ಪಕ್ಷದಿಂದ ನನಗೆ ಟಿಕೆಟ್ ಖಾತ್ರಿ ಆಗಿದೆ ಎಂದು ಹೇಳುವ ಮೂಲಕ, ನಾಗಮಂಗಲದಿಂದ ತಾವೇ ಜೆಡಿಎಸ್ ಅಧಿಕೃತ ಅಭ್ಯರ್ಥಿ ಎಂದು ಪರೋಕ್ಷವಾಗಿ ಹೇಳಿದ್ರು.