Tag: ಬಿಜೆಪಿ

  • ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

    ಸುಪ್ರೀಂ ಆದೇಶದ ಮೇಲೆ ನಿಂತಿದೆ ಪರಿಕ್ಕರ್ ಸಿಎಂ ಭವಿಷ್ಯ: ಮತ್ತೊಮ್ಮೆ ಜೇಟ್ಲಿಗೆ ‘ರಕ್ಷಣೆ’ಯ ಹೊಣೆ

    ಪಣಜಿ: ಸುಪ್ರೀಂ ಕೋರ್ಟ್ ರಾಜ್ಯಪಾಲರ ನಿರ್ಧಾರದ ಪರವಾಗಿ ಮಂಗಳವಾರ ಆದೇಶ ನೀಡಿದರೆ, ಸಂಜೆ 5 ಗಂಟೆಗೆ ಮನೋಹರ್ ಪರಿಕ್ಕರ್ ಗೋವಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    13 ಶಾಸಕರಿರುವ ಬಿಜೆಪಿಯವರು, ಎಂಜಿಪಿಯ ಮೂವರು, ಜಿಎಫ್‍ಪಿಯ ಮೂವರು ಹಾಗೂ ಇಬ್ಬರು ಪಕ್ಷೇತರರನ್ನ ತನ್ನತ್ತ ಸೆಳೆದುಕೊಂಡಿದ್ದಾರೆ. ಪರಿಕ್ಕರ್ ಜೊತೆ 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

    ಸುಪ್ರೀಂ ನಲ್ಲಿ ಅರ್ಜಿ: ಸೋಮವಾರ ಸಂಜೆ ಹೊತ್ತಿಗೆ ಪರಿಕ್ಕರ್ ಸಿಎಂ ಆಗುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಅರ್ಜಿಯಲ್ಲಿ ರಾಜ್ಯಪಾಲರು ಸರ್ಕಾರ ರಚನೆಗೆ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೋರ್ಟ್ ತುರ್ತು ಅರ್ಜಿಯನ್ನು ವಿಚಾರಣೆಗೆ ಮಾನ್ಯ ಮಾಡಿದ್ದು ಮಂಗಳವಾರ ಬೆಳಗ್ಗೆ ಅರ್ಜಿ ವಿಚಾರಣೆ ನಡೆಸಲಿದೆ.

    ಬಿಜೆಪಿಯ ಹೈಜಾಕ್ ಕ್ರಮವನ್ನು ಕಂಡಿಸಿರುವ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಜನಬಲದ ಎದುರು ಹಣ ಬಲ ಗೆದ್ದಿದೆ ಅಂದ್ರು. ಇನ್ನು ಮಣಿಪುರ ಹಾಗೂ ಗೋವಾದಲ್ಲಿ ಬಿಜೆಪಿ ಚುನಾವಣೆಯನ್ನ ಕದ್ದಿದ್ದಾರೆ ಅಂತ ಪಿ.ಚಿದಂಬರಂ ಆರೋಪಿಸಿದ್ದಾರೆ. ಗೋವಾ ರಾಜ್ಯಪಾಲರು ಬಿಜೆಪಿ ಏಜೆಂಟಂತೆ ವರ್ತಿಸಿದ್ದಾರೆ ಅಂತಾ ಮಾರ್ಗರೆಟ್ ಆಳ್ವಾ ಆರೋಪಿಸಿದ್ದಾರೆ.

    ಈ ನಡುವೆ ಮಾತಾಡಿರುವ ಒಮರ್ ಅಬ್ದುಲ್ಲಾ, 2002ರಲ್ಲಿ ನ್ಯಾಷನಲ್ ಕಾಂಗ್ರೆಸ್ ದೊಡ್ಡ ಪಕ್ಷವಾಗಿತ್ತು. ಆದ್ರೆ ರಾಜ್ಯಪಾಲರು ಪಿಡಿಪಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡಿದ್ದರು ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್‍ಗೆ ಟಾಂಗ್ ನೀಡಿದ್ದಾರೆ.

    ಜೇಟ್ಲಿಗೆ ಮತ್ತೊಮ್ಮೆ ಖಾತೆ: ರಕ್ಷಣಾ ಖಾತೆಗೆ ಪರಿಕ್ಕರ್ ನೀಡಿದ ರಾಜೀನಾಮೆಯನ್ನ ರಾಷ್ಟ್ರಪತಿ ಅಂಗೀಕರಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿಗೆ ರಕ್ಷಣಾ ಖಾತೆಯನ್ನ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಹಿಂದೆ ಅರುಣ್ ಜಟ್ಲಿ 2014ರ ಮೇ 26ರಿಂದ ನವೆಂಬರ್ 14ರ ವರೆಗೆ ರಕ್ಷಣಾ ಖಾತೆಯ ಸಚಿವರಾಗಿದ್ದರು.

    ಬಹುಮತಕ್ಕೆ ಎಷ್ಟು ಬೇಕು?
    40 ಸದಸ್ಯರ ಗೋವಾ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 21 ಶಾಸಕರ ಬೆಂಬಲ ಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ 17ರಲ್ಲಿ ವಿಜಯಿ ಆಗಿದ್ದರೆ, ಬಿಜೆಪಿ 13 ಸ್ಥಾನವನ್ನು ಗೆದ್ದುಕೊಂಡಿದೆ. ಇತರೆ ಪಕ್ಷದವರು 10 ಸ್ಥಾನವನ್ನು ಗೆದ್ದುಕೊಂಡಿದ್ದು, ಸರಳ ಬಹುಮತಕ್ಕೆ ಸರ್ಕಾರಕ್ಕೆ 21 ಶಾಸಕರ ಬೆಂಬಲ ಅನಿವಾರ್ಯವಾಗಿದೆ.

  • ಇಂದು ಮಲೆಮಹದೇಶ್ವರ ಬೆಟ್ಟಕ್ಕೆ ಎಸ್‍ಎಂ ಕೃಷ್ಣ ಭೇಟಿ- ಮಾ. 15ರಂದು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ

    ಇಂದು ಮಲೆಮಹದೇಶ್ವರ ಬೆಟ್ಟಕ್ಕೆ ಎಸ್‍ಎಂ ಕೃಷ್ಣ ಭೇಟಿ- ಮಾ. 15ರಂದು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ

    ಬೆಂಗಳೂರು: ಮಾಜಿ ಸಿಎಂ ಎಸ್ ಎಂ ಕೃಷ್ಣ ಇಂದು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿ ಮಹದೇಶ್ವರ ದರ್ಶನ ಪಡೆಯಲಿದ್ದಾರೆ.

    ಯಾವುದೇ ಮಹತ್ವದ ಹೊಸ ಕಾರ್ಯ ಆರಂಭಿಸುವ ಮೊದಲು ಮಲೆ ಮಹದೇಶ್ವರನ ದರ್ಶನವನ್ನು ಎಸ್‍ಎಂಕೆ ಪಡೆಯುತ್ತಾರೆ. ಹೀಗಾಗಿ ಇದೇ 15 ರಂದು ಬಿಜೆಪಿ ಸೇರ್ಪಡೆ ಆಗ್ತಿರುವ ಹಿನ್ನೆಲೆಯಲ್ಲಿ ಮನೆ ದೇವರ ದರ್ಶನ ಪಡೆಯಲು ತೆರಳಿದ್ದಾರೆ.

    ಮಂಗಳವಾರ ಸಂಜೆ ಎಸ್.ಎಂ ಕೃಷ್ಣ ದೆಹಲಿಗೆ ತೆರಳಲಿದ್ದು, ಬುಧವಾರದಂದು ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಪತ್ನಿ ಹಾಗೂ ಪುತ್ರಿಯರ ಹೆಚ್‍ಎಎಲ್ ಏರ್‍ಪೋರ್ಟ್ ಮೂಲಕ ಎಸ್‍ಎಂಕೆ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದಾರೆ. ದೇವರ ದರ್ಶನ ಪಡೆದು ಮಧ್ಯಾಹ್ನ ಹಿಂದಿರುಗಲಿದ್ದಾರೆ.

  • ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ಬಿಜೆಪಿ ಅಭ್ಯರ್ಥಿಯೇ ರಾಷ್ಟ್ರಪತಿ ಆಗ್ತಾರಾ? ಎಷ್ಟು ಮತ ಬೇಕು? ಈಗ ಎಷ್ಟು ಮತ ಇದೆ?

    ನವದೆಹಲಿ: ಉತ್ತರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಗೆದ್ದಿರುವ ಬಿಜೆಪಿ ವಿಧಾನಸಭೆಯಲ್ಲಿ ಪಕ್ಷದ ಸ್ಥಾನಗಳನ್ನಷ್ಟೇ ಹೆಚ್ಚಿಕೊಂಡಿಲ್ಲ. ಬದಲಾಗಿ ಮುಂಬರುವ ರಾಷ್ಟ್ರಪತಿ ಚುನಾವಣೆಯ ಮೇಲೂ ಬಿಜೆಪಿಯ ಈ ಗೆಲುವು ಭಾರೀ ಪ್ರಭಾವ ಬೀರಲಿದೆ.

    ಉತ್ತರಪ್ರದೇಶದಲ್ಲಿ 325 ಸ್ಥಾನ, ಉತ್ತರಾಖಂಡ್‍ನಲ್ಲಿ 56 ಸ್ಥಾನ, ಮಣಿಪುರದಲ್ಲಿ 21, ಪಂಜಾಬ್‍ನಲ್ಲಿ 18 ಹಾಗೂ ಗೋವಾದಲ್ಲಿ 13 ಸ್ಥಾನಗಳನ್ನು ಗೆಲ್ಲುವ ಮೂಲಕ ಎನ್‍ಡಿಎ ರಾಷ್ಟಪತಿ ಚುನಾವಣೆಗೆ ಹಾದಿ ಸುಗಮಗೊಳಿಸಿಕೊಂಡಿದೆ. ರಾಷ್ಟ್ರಪತಿ ಆಯ್ಕೆಗೆ ಮೋದಿ ಪಡೆ ಬಹುಮತದ ಸನಿಹದಲ್ಲಿ ಬಂದು ನಿಂತಿದೆ. ಜುಲೈಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವಧಿ ಅಂತ್ಯವಾಗುತ್ತಿರುವ ಹನ್ನೆಲೆಯಲ್ಲಿ ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರ ಗರಿಗೆದರಿದೆ.

    ಎಷ್ಟು ಮತ ಬೇಕು?
    ದೇಶದ ರಾಷ್ಟ್ರಪತಿಯನ್ನು 29 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಪುದುಚೆರಿ ಹಾಗೂ ರಾಜಧಾನಿ ದೆಹಲಿಯ ಎಲ್ಲಾ ಸಂಸದರು ಹಾಗೂ ಶಾಸಕರನ್ನೊಳಗೊಂಡ ಎಲೆಕ್ಟೋರಲ್ ಕಾಲೇಜ್ ಆಯ್ಕೆ ಮಾಡುತ್ತದೆ. ಎಲೆಕ್ಟೋರಲ್ ಕಾಲೇಜ್‍ನ ಒಟ್ಟು ಮತಗಳ ಸಂಖ್ಯೆ 10,98,882. ಇದರಲ್ಲಿ ರಾಷ್ಟಪತಿ ಆಯ್ಕೆಗೆ ಬೇಕಿರುವುದು 5,49,442 ಮತಗಳು.

    ಎನ್‍ಡಿಎ ಬಳಿ ಎಷ್ಟಿದೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. ಇವರ ಎಲ್ಲ ಮತಗಳು ಸೇರಿದರೆ 10,98,882 ಮತಗಳು ಆಗುತ್ತದೆ. ಹೀಗಾಗಿ ರಾಷ್ಟ್ರಪತಿ ಅಭ್ಯರ್ಥಿ ವಿಜಯಿ ಆಗಲು ಒಟ್ಟು ಮತದ ಅರ್ಧಭಾಗಕ್ಕಿಂತ ಹೆಚ್ಚು ಅಂದರೆ 5,49,442 ಮತಗಳ ಅವಶ್ಯಕತೆಯಿದೆ.

    ಉತ್ತರಪ್ರದೇಶದ ಗೆಲುವಿನಿಂದ ಎಲೆಕ್ಟೋರಲ್ ಕಾಲೇಜ್‍ನಲ್ಲಿ ರಾಜ್ಯದ ಬಿಜೆಪಿ ಮತಗಳ ಸಂಖ್ಯೆ 67,600ಕ್ಕೆ ಏರಿದೆ. ಹೀಗಾಗಿ ಸದ್ಯ ಎನ್‍ಡಿಎ ಬಳಿ ಒಟ್ಟು 5,24,920 ಮತಗಳಿವೆ. ರಾಷ್ಟ್ರಪತಿ ಆಯ್ಕೆಗೆ ಎನ್‍ಡಿಎಗೆ ಕೇವಲ 24,522 ಮತಗಳು ಕಡಿಮೆ ಬೀಳಲಿದೆ.

    ಒಂದು ವೇಳೆ ಬಿಜು ಜನತಾ ದಳ ಹಾಗೂ ಎಐಎಡಿಎಂಕೆ ಪಕ್ಷಗಳು ಬೆಂಬಲ ನೀಡಿದರೆ ಎನ್‍ಡಿಎ ಅಭ್ಯರ್ಥಿಯೇ ರಾಷ್ಟ್ರಪತಿಯಾಗಿ ಆಯ್ಕೆಯಾಗೋದು ಬಹುತೇಕ ಖಚಿತವಾಗಲಿದೆ.

    ಇದನ್ನೂ ಓದಿ:ರಾಷ್ಟ್ರಪತಿ ರೇಸ್‍ನಲ್ಲಿ ಇನ್ಫಿ ನಾರಾಯಣಮೂರ್ತಿ!

  • ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ- ನಮ್ಗೂ ಟಿಕೆಟ್ ಬೇಕು ಅಂತಿರೋ ಸಂಸದರು

    ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ- ನಮ್ಗೂ ಟಿಕೆಟ್ ಬೇಕು ಅಂತಿರೋ ಸಂಸದರು

    ಬೆಂಗಳೂರು: ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ನಡೆಯುತ್ತಿದೆ. ನಮಗೂ ಟಿಕೆಟ್ ಬೇಕು ಅಂತಾ ಕೆಲ ಸಂಸದರು ಕ್ಯೂ ನಿಲ್ತಿದ್ದಾರೆ.

    ಸಂಸತ್ತಿನಿಂದ ವಿಧಾನಸಭೆಗೆ ಬರಲು ಸಂಸದರು ಪ್ಲಾನ್ ಮಾಡಿದ್ದಾರೆ. ಕ್ಷೇತ್ರ ಹುಡುಕಿದ್ದೇವೆ, ನಮಗೂ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿ ಅಂತ ಕೆಲ ಸಂಸದರು ಬಿಜೆಪಿ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಸಂಸದರ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು, ಸದ್ಯಕ್ಕೆ ಎಂಪಿಗಳಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಯಾರಿಗೆ ಯಾವ ಕ್ಷೇತ್ರ ಬೇಕಂತೆ?
    > ಶೋಭಾ ಕರಂದ್ಲಾಜೆ – ಪುತ್ತೂರು ಕ್ಷೇತ್ರ
    > ಅನಂತಕುಮಾರ್ ಹೆಗಡೆ- ಯಲ್ಲಾಪುರ ಕ್ಷೇತ್ರ
    > ಕರಡಿಸಂಗಣ್ಣ – ಕೊಪ್ಪಳ ಕ್ಷೇತ್ರ
    > ಶ್ರೀರಾಮುಲು- ಬಳ್ಳಾರಿ ಗ್ರಾಮಾಂತರ ಕ್ಷೇತ್ರ, ಸಂಡೂರು ಕ್ಷೇತ್ರ
    > ಪಿ.ಸಿ.ಮೋಹನ್- ಗಾಂಧಿನಗರ ಕ್ಷೇತ್ರ

  • ರಂಗೇರಿದ ನಂಜನಗೂಡು ಉಪಚುನಾವಣೆ- ವೋಟಿಗಾಗಿ ಕಾಂಗ್ರೆಸ್‍ನ ಟಾರ್ಗೆಟ್ ಆದ ಬಿಎಸ್‍ವೈ

    ರಂಗೇರಿದ ನಂಜನಗೂಡು ಉಪಚುನಾವಣೆ- ವೋಟಿಗಾಗಿ ಕಾಂಗ್ರೆಸ್‍ನ ಟಾರ್ಗೆಟ್ ಆದ ಬಿಎಸ್‍ವೈ

    ಮೈಸೂರು: ನಂಜನಗೂಡು ಉಪಚುನಾವಣೆಗೆ ಪ್ರಚಾರ ಜೋರಾಗೇ ನಡೀತಿದೆ. ಕಾಂಗ್ರೆಸ್‍ನವರು ಮಾತಿನುದ್ದಕ್ಕೂ ಅಭ್ಯರ್ಥಿಯನ್ನ ಬಿಟ್ಟು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ಇದ್ರಿಂದ ನಂಜನಗೂಡಿನಲ್ಲಿ ನಿರ್ಣಾಯಕ ಪಾತ್ರ ವಹಿಸುವ ಲಿಂಗಾಯತ ಸಮುದಾಯ ಬಿಜೆಪಿಯತ್ತ ವಾಲುತ್ತೆ ಅನ್ನೋದು ರಾಜಕೀಯ ಪರಿಣಿತರ ಲೆಕ್ಕಾಚಾರವಾಗಿದೆ.

    ನಂಜನಗೂಡು ಮೀಸಲು ಕ್ಷೇತ್ರದಲ್ಲಿ ದಲಿತ ಮತದಾರರು ಸುಮಾರು 40 ಸಾವಿರದಷ್ಟಿದ್ದಾರೆ. ಅಷ್ಟೇ ಪ್ರಮಾಣದಲ್ಲಿ ಲಿಂಗಾಯತರು ಪ್ರಾಬಲ್ಯ ಇಟ್ಟುಕೊಂಡಿದ್ದಾರೆ. 2008ರ ಚುನಾವಣೆಯಲ್ಲಿ 2ನೇ ಸ್ಥಾನಕ್ಕೇರಿದ್ದ ಬಿಜೆಪಿ ಅಲ್ಪ ಮತದಿಂದ ಸೋತಿತ್ತು. ಈ ಬಾರಿಯ ಉಪಚುನಾವಣೆಯಲ್ಲಿ ಯಡಿಯೂರಪ್ಪ ಹಳೇ ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಪ್ರವಾಸ ಮಾಡ್ತಿದ್ದು ನಂಜನಗೂಡಿನಲ್ಲಿ ಲಿಂಗಾಯತರೇ ನಿರ್ಣಾಯಕ ಅನ್ನೋ ಹಂತಕ್ಕೆ ಬಂದಿದೆ.

    ಹೀಗಿರುವಾಗ್ಲೇ ಕಾಂಗ್ರೆಸ್‍ನವರು ಯಡಿಯೂರಪ್ಪರನ್ನ ನಿಂದಿಸೋ ಮೂಲಕ ಲಾಭ ಮಾಡಿಕೊಡಲು ಹೊರಟಿದ್ದಾರೆ. ಗೆಲ್ಲೋದಕ್ಕೆ ಕಾಂಗ್ರೆಸ್ ತೆಗಳಿಕೆ ಎಂಬ ಅಸ್ತ್ರ ಬಿಡ್ತಿದೆ. ಆದ್ರೆ ಅದೇ ತೆಗಳಿಕೆ ಬಿಜೆಪಿಯವ್ರಿಗೆ ಲಾಭವಾದ್ರೂ ಅಚ್ಚರಿಯಿಲ್ಲ ಅನ್ನೋ ಮಾತು ರಾಜಕೀಯ ವಲಯದಲ್ಲಿ ಕೇಳಿಬರ್ತಿದೆ.

     

  • ರೈತರ ಸಂಪೂರ್ಣ ಸಾಲ ಮನ್ನಾಗೆ ಸರ್ಕಸ್ – ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯಲು ಸಿಎಂ ಪ್ಲಾನ್

    ರೈತರ ಸಂಪೂರ್ಣ ಸಾಲ ಮನ್ನಾಗೆ ಸರ್ಕಸ್ – ಒಂದೇ ಕಲ್ಲಿಗೆ 2 ಹಕ್ಕಿ ಹೊಡೆಯಲು ಸಿಎಂ ಪ್ಲಾನ್

    -ಕುತೂಹಲ ಮೂಡಿಸಿದ ಬುಧವಾರದ ರಾಜ್ಯ ಬಜೆಟ್

    ಬೆಂಗಳೂರು: ಇನ್ನೆರಡು ದಿನ ಕಳೆದರೆ ಸಿದ್ದರಾಮಯ್ಯನವರ ಲೆಕ್ಕ ಅಂದ್ರೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಈ ಬಾರಿಯ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಪ್ರಮುಖ ವಿಷಯವಾಗಿದೆ. ಈಗಾಗ್ಲೇ ಹೆಚ್ಚು ಹಣ ಮೀಸಲಿಡುವಂತೆ ಸ್ವತಃ ಹೈಕಮಾಂಡ್ ಕೂಡ ಸಿಎಂಗೆ ಒತ್ತಾಯಿಸಿದೆ. ಜೊತೆಗೆ ಚುನಾವಣಾ ದೃಷ್ಟಿಯಿಂದಲೂ ರೈತರ ಸಾಲ ಮನ್ನಾ ಮಾಡುವ ಸಾಧ್ಯತೆಯಿದೆ.

    ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಆರ್ಭಟ ಜೋರಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಟೇಕ್ ಆಫ್ ಆಗಿಲ್ಲ ಅಂತಿದ್ದು, ಬಜೆಟ್‍ನಲ್ಲಿ ಜನಪರ ಘೋಷಣೆ ನೀಡಬೇಕು. ಆ ಮೂಲಕ ಜನರಿಗೆ ಅಚ್ಚರಿ ನೀಡಿ ಕಾಂಗ್ರೆಸ್‍ನತ್ತ ಜನರನ್ನ ಸೆಳೆಯಬೇಕು. ಇದಕ್ಕಾಗಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಅನ್ನೋ ಒತ್ತಾಯ ಕೇಳಿಬಂದಿದೆ.

    11 ಸಾವಿರ ಕೋಟಿ ರೈತರ ಸಾಲ ಮನ್ನಾಗೆ ರಾಜ್ಯ ಸರ್ಕಾರ ನಿರ್ಧಾರ ಮಾಡುವ ಸಾಧ್ಯತೆಯಿದೆ. ಇದ್ರಿಂದ ಸಂಕಷ್ಟದಲ್ಲಿರುವ 14 ಲಕ್ಷದ 72 ಸಾವಿರ ರೈತರಿಗೆ ಸಹಾಯವಾಗಲಿದೆ. ಕೇಂದ್ರ ಸರ್ಕಾರದಿಂದಲೂ ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಲು ನಿರ್ಧಾರವಾಗಿದೆ.

    ರೈತರ ಸಾಲ ಮನ್ನಾ ಬಗ್ಗೆ ರಾಜ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಮಧ್ಯೆ ರಾಜಕೀಯ ತಂತ್ರಗಾರಿಕೆ ನಡೀತಿದೆ. ಈಗ ರೈತರ ಸಾಲ ಮನ್ನಾ ಮಾಡಿ ಕೇಂದ್ರ ಬಿಜೆಪಿ ಸರ್ಕಾರದ ಮೇಲೂ ಒತ್ತಡ ತರಲು ಕಾಂಗ್ರೆಸ್ ರಣತಂತ್ರ ಹೆಣದಿದೆ.

    * ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್‍ಗಳಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡಿದೆ.
    * ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾಗೆ ಬಿಜೆಪಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ.
    * ರೈತರ ಸಾಲ ಮನ್ನಾ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ್ದೇ ಬಿಜೆಪಿ.
    * ಸದನದಲ್ಲಿ ಶೆಟ್ಟರ್ – ಸಿಎಂ ಮಧ್ಯೆ ಸವಾಲ್ ನಡೆದಿತ್ತು.
    * ಕೇಂದ್ರದಿಂದ ಅರ್ಧ ಸಾಲ ಮನ್ನಾ ಮಾಡಿಸಿ, ರಾಜ್ಯ ಅರ್ಧ ಭರಿಸಲಿದೆ ಅಂತಾ ಸಿಎಂ ತಿರುಗೇಟು ನೀಡಿದ್ರು.
    * ಮೊದಲು ನೀವು ಘೋಷಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಿರಿ. ಕೇಂದ್ರದಿಂದ ಶೇ 50 ರಷ್ಟು ಸಾಲ ಮನ್ನಾ ಮಾಡಿಸುವ ಹೊಣೆ ನಮ್ಮದು ಅಂದಿದ್ರು ಶೆಟ್ಟರ್.
    * ವಾರದ ಹಿಂದಷ್ಟೇ ಪ್ರಧಾನಿ ಮೋದಿ ಅವರಿಗೆ ಸಿದ್ದರಾಮಯ್ಯ ಪತ್ರ ಕೂಡ ಬರೆದಿದ್ರು.
    * ಶೇ. 50 ರಷ್ಟು ಸಾಲ ಮನ್ನಾ ಮಾಡಿದ್ರೆ ರಾಜ್ಯ ಸರ್ಕಾರ ಉಳಿದ ಹಣ ಭರಿಸುತ್ತೆ ಅಂತ ಪತ್ರದಲ್ಲಿ ಬರೆದಿದ್ರು.
    * ಬಜೆಟ್‍ಗೂ ಮುನ್ನ ಪತ್ರ ಬರೆದಿರುವ ಸಿಎಂ, ರಾಜಕೀಯ ತಂತ್ರಗಾರಿಕೆ ತಂದ ಕುತೂಹಲ.

    ಇದೇ 15 ರಂದು ಸಿದ್ದರಾಮಯ್ಯ ಮಹತ್ವದ ಬಜೆಟ್ ಮಂಡಿಸಲಿದ್ದಾರೆ. ನಿರೀಕ್ಷೆಯಂತೆ 11 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ಬಿಜೆಪಿ ಮೇಲೆ ಬೊಟ್ಟು ಮಾಡಲು ಪ್ಲಾನ್ ಹಾಕಿದ್ದಾರೆ.

     

  • ಗೋವಾ ಸಿಎಂ ಆಗಿ ಪರಿಕ್ಕರ್ ನೇಮಕ – 15 ದಿನಗಳಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ಗೋವಾ ಸಿಎಂ ಆಗಿ ಪರಿಕ್ಕರ್ ನೇಮಕ – 15 ದಿನಗಳಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ

    ನವದೆಹಲಿ: ಉತ್ತರ ಪ್ರದೇಶ, ಉತ್ತರಾಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ನಿಚ್ಚಳ ಬಹುಮತ ಬಂದಿದ್ದು ಈಗಾಗ್ಲೇ ಅಧಿಕಾರ ಹಿಡಿಯಲು ಸನ್ನದ್ಧವಾಗಿದೆ. ಆದ್ರೆ ಗೋವಾ ಮತ್ತು ಮಣಿಪುರದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಸಣ್ಣಪುಟ್ಟ ಪಕ್ಷಗಳ ಬೆಂಬಲ ಪಡೆದು ಎರಡೂ ಕಡೆ ಸರ್ಕಾರ ರಚಿಸಲು ಸರ್ಕಸ್ ಮಾಡ್ತಿದೆ.

    ಗೋವಾದಲ್ಲಿ 13 ಸ್ಥಾನ ಗೆದ್ದಿರುವ ಬಿಜೆಪಿ ಹೊಸ ಸರ್ಕಾರ ರಚಿಸಲು ಅವಕಾಶ ಕೋರಿ ರಾಜ್ಯಪಾಲರಾದ ಮೃದುಲಾ ಸಿನ್ಹಾರಿಗೆ ಮನವಿ ಸಲ್ಲಿಸಿದೆ. ಮನವಿ ಪುರಸ್ಕರಿಸಿರುವ ರಾಜ್ಯಪಾಲರು ಮನೋಹರ್ ಪರಿಕ್ಕರ್ ಅವರನ್ನು ಗೋವಾ ಮುಖ್ಯಮಂತ್ರಿ ಎಂದು ಘೋಷಿಸಿದ್ದಾರೆ. ಜೊತೆಗೆ ಪ್ರಮಾಣ ವಚನ ಸ್ವೀಕರಿಸಿದ 15 ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ಪರಿಕ್ಕರ್ ಅವರಿಗೆ ಸೂಚಿಸಿದ್ದಾರೆ.

    ಗೋವಾದಲ್ಲಿ ಬಹುಮತಕ್ಕೆ ಬೇಕಾಗಿರುವುದು 21 ಸದಸ್ಯರ ಸಂಖ್ಯಾಬಲ. ಎನ್‍ಸಿಪಿ 1, ಎಂಜಿಪಿ 3, ಜಿಎಫ್‍ಪಿ 3, ಇಬ್ಬರು ಪಕ್ಷೇತರರನ್ನು ಸೇರಿಸಿಕೊಂಡು ಸರ್ಕಾರ ರಚಿಸಲು ಬಿಜೆಪಿ ಮುಂದಾಗಿದೆ. ಇನ್ನು ಗೋವಾದಲ್ಲಿ 17 ಸ್ಥಾನಗಳನ್ನು ಪಡೆದು ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದೆ ಅಂತ ಉನ್ನತ ಮೂಲಗಳು ತಿಳಿಸಿವೆ.

    ಮಣಿಪುರದಲ್ಲಿ 21 ಸ್ಥಾನಗಳನ್ನ ಗೆದ್ದಿರುವ ಬಿಜೆಪಿಗೆ ಬಹುಮತ ಸಾಬೀತುಪಡಿಸಲು 31 ಸದ್ಯಸರ ಅಗತ್ಯವಿದೆ. ಇತರೆ ಪಕ್ಷದ 10 ಮಂದಿ ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಸರ್ಕಸ್ ಮಾಡ್ತಿದೆ. ಇಲ್ಲಿಯೂ ಬಿಜೆಪಿಗೆ ಸ್ಪಷ್ಟ ಬೆಂಬಲ ಸಿಕ್ಕಿದ್ರೆ ನಾಲ್ಕು ರಾಜ್ಯಗಳಲ್ಲಿ ಅಧಿಕಾರ ಹಿಡಿದಂತಾಗುತ್ತದೆ.

  • ಮನೋಹರ್ ಪರಿಕ್ಕರ್ ಗೋವಾದ ಮುಂದಿನ ಮುಖ್ಯಮಂತ್ರಿ!

    ಮನೋಹರ್ ಪರಿಕ್ಕರ್ ಗೋವಾದ ಮುಂದಿನ ಮುಖ್ಯಮಂತ್ರಿ!

    ಪಣಜಿ: ಗೋವಾ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವ ಉದ್ದೇಶದಿಂದ ಮನೋಹರ್ ಪರಿಕ್ಕರ್ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ.

    ಪರಿಕ್ಕರ್ ಸಿಎಂ ಆಗುವುದಾದರೆ ಬೆಂಬಲ ನೀಡೋದಾಗಿ ಇತರೆ ಪಕ್ಷ ಹಾಗೂ ಪಕ್ಷೇತರ ಶಾಸಕರು ಪಟ್ಟು ಹಿಡಿದಿದ್ದಾರೆ. ಆದರೆ ಅವರು ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

    ಎಂಜಿಪಿಯ 3, ಜಿಎಫ್‍ಪಿಯ 3, ಇಬ್ಬರು ಪಕ್ಷೇತರು, ಏಕೈಕ ಎನ್‍ಸಿಪಿ ಶಾಸಕ ಪರಿಕ್ಕರ್‍ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ 22 ಶಾಸಕರ ಬೆಂಬಲ ಪರಿಕ್ಕರ್‍ಗೆ ಸಿಕ್ಕಿದೆ. 17 ಸ್ಥಾನ ಗೆದ್ರೂ ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ. ಬಿಜೆಪಿ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

    ಅತ್ತ ಮಣಿಪುರದಲ್ಲೂ ಬಿಜೆಪಿಗೆ 31 ಶಾಸಕರ ಬೆಂಬಲ ಇದ್ದು ನಾವೇ ಸರ್ಕಾರ ರಚಿಸ್ತೇವೆ ಅಂತ ಮಣಿಪುರ ಬಿಜೆಪಿ ಉಸ್ತುವಾರಿ ರಾಮ್ ಮಾಧವ್ ಹೇಳಿದ್ದಾರೆ. ಬಹುಮತಕ್ಕೆ 31 ಸ್ಥಾನಗಳ ಅಗತ್ಯ ಇದೆ. ಕಾಂಗ್ರೆಸ್ 28 ಸ್ಥಾನಗಳನ್ನ ಗೆದ್ರೆ ಬಿಜೆಪಿ 21ರಲ್ಲಿ ಗೆಲುವು ಸಾಧಿಸಿದೆ.

    ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಗೋವಾ ಹಾಗೂ ಮಣಿಪುರದಲ್ಲಿ ಸರ್ಕಾರ ರಚನೆ ಹಾಗೂ ಉತ್ತರಪ್ರದೇಶ ಹಾಗೂ ಉತ್ತರಾಖಂಡ್‍ನ ಸಿಎಂ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ.

  • ಯಾವುದೇ ಮರವಾದರೂ ಬಾಗಲೇಬೇಕು. ನಮಗೆ ಬಾಗುವ ಸಮಯ ಬಂದಿದೆ: ಮೋದಿ

    ಯಾವುದೇ ಮರವಾದರೂ ಬಾಗಲೇಬೇಕು. ನಮಗೆ ಬಾಗುವ ಸಮಯ ಬಂದಿದೆ: ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದಿನ ತಮ್ಮ ವಿಜಯೋತ್ಸವ ಭಾಷಣದಲ್ಲಿ ಬಿಜೆಪಿಯ ಹಿರಿಯ ನಾಯಕರ ಕಾರ್ಯವನ್ನು ನೆನಪಿಸಿ ಗೌರವಿಸಿದ್ದಾರೆ.

    ಪಕ್ಷದ ಕಚೇರಿಯಲ್ಲಿನ ಭಾಷಣದಲ್ಲಿ, ಅಧಿಕಾರ ಜನಸೇವೆಗೆ ಇರುವ ಅವಕಾಶ. ನಮಗೆ ಹಲವು ಬಾರಿ ಗೆಲುವು ಸಿಕ್ಕಿದೆ. ಈ ಗೆಲುವಿನ ಹಿಂದೆ 4 ತಲೆಮಾರುಗಳು ಈ ಕೆಲಸ ಮಾಡಿದೆ. ಅಟಲ್, ಅಡ್ವಾಣಿ ತಮ್ಮ ಜೀವನವನ್ನು ಬಿಜೆಪಿಗಾಗಿ ಮುಡಿಪಾಗಿಟ್ಟಿದ್ದರು. ಅವರಿಂದಲೇ ಇಂದು ಬಿಜೆಪಿ ಹೆಮ್ಮರವಾಗಿದೆ. ಯಾವುದೇ ಮರವಾದರೂ ಬಾಗಲೇಬೇಕು. ನಮಗೆ ಬಾಗುವ ಸಮಯ ಬಂದಿದೆ ಎಂದು ಹೇಳುವ ಮೂಲಕ ಹಿರಿಯರ ಸೇವೆಯನ್ನು ಸ್ಮರಿಸಿಕೊಂಡರು.

    ಜನಸಂಘ ಎನ್ನಿ, ಬಿಜೆಪಿ ಎನ್ನಿ. ಇದು ಬಿಜೆಪಿ ಸುವರ್ಣ ಸಮಯ. ಈ ಸಮಯ ಅಚಾನಕ್ ಆಗಿ ಸಿಕ್ಕಿದ್ದಲ್ಲ. ಹಿರಿಯ ನಾಯಕರ ಕಠೋರ ಪರಿಶ್ರಮದಿಂದಲೇ ಇದು ಸಿಕ್ಕಿದೆ ಎಂದರು.

    ಈ ಫಲಿತಾಂಶ ನಮಗೆ ಭಾವನಾತ್ಮಕವೂ ಹೌದು. ಈ ವರ್ಷ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಜನ್ಮ ಶತಮಾನೋತ್ಸವ ವರ್ಷ. ದೀನ್ ದಯಾಳ್ ಉಪಾಧ್ಯಾಯ  ಅವರ ಜನ್ಮ ಸ್ಥಳ  ಉತ್ತರ ಪ್ರದೇಶ. ಈ ವೇಳೆಯಲ್ಲೇ ಈ ಗೆಲುವು ಸಂತಸದ ವಿಷಯವಾಗಿದೆ ಎಂದು ಹೇಳಿದರು.

    ಬಡವರಲ್ಲಿ ಸಾಮರ್ಥ್ಯ ನನಗೆ ಕಾಣಿಸುತ್ತಿದೆ. ಅವರ ಶಕ್ತಿಯನ್ನು ನಾನು ಗುರುತಿಸುತ್ತೇನೆ. ರಾಷ್ಟ್ರ ನಿರ್ಮಾಣದಲ್ಲಿ ಬಡವರ ಕೊಡುಗೆ ಅಪಾರವಾಗಿದ್ದು, ಈ ದೇಶದ ದೊಡ್ಡ ಬಲ ಇಲ್ಲಿನ ಬಡವರು. ಬಿಜೆಪಿಯ ವಿಜಯಯಾತ್ರೆ ಮುಂದುವರಿಯುತ್ತಿದೆ. ಮೊದಲಿಗಿಂತ ಉತ್ತಮ ಫಲಿತಾಂಶವನ್ನು ಬಿಜೆಪಿ ಗಳಿಸುತ್ತಿದೆ. ಅಮಿತ್ ಶಾ ಬಿಜೆಪಿಯನ್ನು ಬಲು ದೊಡ್ಡ ಪಕ್ಷವಾಗಿ ಮಾಡಿದ್ದಾರೆ.ಇದಕ್ಕಾಗಿ ಅಮಿತ್ ಶಾ ಮತ್ತು ತಂಡಕ್ಕೆ ಮೋದಿ ಅಭಿನಂದನೆ ಸಲ್ಲಿಸಿದರು.

  • ಗೆಲುವಿನ ಸಂಭ್ರಮದಲ್ಲೇ ಬಿಜೆಪಿ ಹೈಕಮಾಂಡ್ ‘ಟಾರ್ಗೆಟ್ ಕರ್ನಾಟಕ’!

    ಗೆಲುವಿನ ಸಂಭ್ರಮದಲ್ಲೇ ಬಿಜೆಪಿ ಹೈಕಮಾಂಡ್ ‘ಟಾರ್ಗೆಟ್ ಕರ್ನಾಟಕ’!

    ನವದೆಹಲಿ: ಪಂಚ ರಾಜ್ಯ ಚುನಾವಣೆಯ ವಿಜಯೋತ್ಸವ ಸಮಾವೇಶದಲ್ಲಿ ಬಿಜೆಪಿ ಹೈಕಮಾಂಡ್ ತನ್ನ ಮುಂದಿನ ಗುರಿ ಕರ್ನಾಟಕ ಎಂದು ಘೋಷಿಸಿದೆ. ಈ ಮೂಲಕ ಮುಂದಿನ 2018ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಗೆಲುವು ಸಾಧಿಸುವುದೇ ನಮ್ಮ ಮುಂದಿನ ಗುರಿ ಎಂದು ಹೇಳಿದೆ.

    ಉತ್ತರಪ್ರದೇಶದ ಅಭೂತಪೂರ್ವ ಗೆಲುವಿನ ಬಳಿಕ ಇಂದು ದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ ಹಮ್ಮಿಕೊಳ್ಳಲಾಗಿತ್ತು. ಪ್ರಧಾನಿ ಮೋದಿ ಭಾಷಣಕ್ಕೂ ಮುನ್ನ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮುಂದಿನ ದಿನಗಳಲ್ಲಿ ಬಿಜೆಪಿಯ ವಿಜಯಯಾತ್ರೆ ಹಿಮಾಚಲ ಪ್ರದೇಶ, ಗುಜರಾತ್, ಕರ್ನಾಟಕದಲ್ಲೂ ಮುಂದುವರಿಯಲಿದೆ. ಪೂರ್ವ ಹಾಗೂ ದಕ್ಷಿಣ ರಾಜ್ಯಗಳಲ್ಲಿ ಭಾಜಪ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

    2019ರ ಲೋಕಸಭೆ ಚುನಾವಣೆಯಲ್ಲಿ ಕಳೆದ ಬಾರಿಯ ಬಹುಮತಕ್ಕಿಂತ ಹೆಚ್ಚಿನ ಬಹುಮತದೊಂದಿಗೆ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಇನ್ನುಳಿದ 2 ವರ್ಷದಲ್ಲಿ ಚುನಾವಣೆಗೂ ಮುನ್ನ ಘೋಷಿಸಿದ ಬಾಕಿ ಇರುವ ಕೆಲಸ ಮುಗಿಸಿದ ಮತ್ತೆ ಚುನಾವಣೆಯಲ್ಲಿ ಬಹುಮತ ಪಡೆದು ವಾಪಸ್ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. ಪಂಚರಾಜ್ಯಗಳ ಚುನಾವಣೆ ಫಲಿತಾಂಶ 2014ರ ಚುನಾವಣೆಗಿಂತ ಬಿಜೆಪಿಯನ್ನು 2 ಹೆಜ್ಜೆ ಮುಂದಕ್ಕೆ ಕರೆದೊಯ್ದಿದೆ ಎಂದೂ ಅಮಿತ್ ಶಾ ಹೇಳಿದರು.