Tag: ಬಿಜೆಪಿ ಸಂಸ್ಥಾಪನಾ ದಿನ

  • ಹ್ಯಾಪಿ ಬರ್ತ್‌ಡೇ ಬಿಜೆಪಿ- ವಿಶ್‌ ಮಾಡಿ ಕಾಲೆಳೆದ ಶಶಿ ತರೂರ್‌

    ಹ್ಯಾಪಿ ಬರ್ತ್‌ಡೇ ಬಿಜೆಪಿ- ವಿಶ್‌ ಮಾಡಿ ಕಾಲೆಳೆದ ಶಶಿ ತರೂರ್‌

    ನವದೆಹಲಿ: ಬಿಜೆಪಿಯ 42ನೇ ಸಂಸ್ಥಾಪನಾ ದಿನಕ್ಕೆ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಶುಭಾಶಯ ತಿಳಿಸಿದ್ದಾರೆ. ಟ್ವೀಟ್‌ ಮಾಡಿ ಶುಭಾಶಯ ತಿಳಿಸಿರುವ ಅವರು, ಸಿದ್ಧಾಂತ ಮತ್ತು ನಿಯಮಗಳ ವಿಚಾರವಾಗಿ ಬಿಜೆಪಿ ಕಾಲೆಳೆದಿದ್ದಾರೆ.

    ಸಂಸ್ಥಾಪನಾ ದಿನದ ಪ್ರಯುಕ್ತ ಬಿಜೆಪಿ ಟ್ಟಿಟ್ಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿತ್ತು. ಅದರಲ್ಲಿ ʼಬಿಜೆಪಿಯ ಸಂವಿಧಾನ ಮತ್ತು ನಿಯಮಗಳುʼ ಏನು ಎಂಬುದನ್ನು ಉಲ್ಲೇಖಿಸಿತ್ತು. ಇದರ ಸ್ಕ್ರೀನ್‌ಶಾಟ್‌ ತೆಗೆದುಕೊಂಡು ಸಂಸದ ಶಶಿ ತರೂರ್‌, ಬಿಜೆಪಿಗೆ ಶುಭಾಶಯ ತಿಳಿಸಿದ್ದಾರೆ. ಜೊತೆಗೆ ಬಿಜೆಪಿ ಸಂವಿಧಾನ ಮತ್ತು ನಿಯಮಗಳ ವಿಚಾರವನ್ನು ಉಲ್ಲೇಖಿಸಿ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಇಬ್ಬಗೆಯ ರಾಜಕೀಯ: ಪ್ರತಿ ಪಕ್ಷಗಳ ವಿರುದ್ಧ ಮೋದಿ ಕಿಡಿ

    ಟ್ವೀಟ್‌ನಲ್ಲೇನಿದೆ?
    ಹುಟ್ಟುಹಬ್ಬದ ಶುಭಾಶಯಗಳು ಬಿಜೆಪಿ! ನಿಮಗೆ ಇಂದಿಗೆ 42 ವರ್ಷ. ನಿಮ್ಮ ಸ್ವಂತ ಸಂವಿಧಾನಕ್ಕೆ ಅನುಗುಣವಾಗಿ ಬದುಕಲು ಇದು ಸಮಯವಲ್ಲವೇ? ನೀವು ನಂಬುವ ಸಿದ್ಧಾಂತ ಹಾಗೂ ಪ್ರತಿಪಾದಿಸುವ ವಿಚಾರಕ್ಕೂ, ನೀವು ಹಾಕಿರುವ ಪೋಸ್ಟ್‌ಗೂ ತಾಳಮೇಳ ಇಲ್ಲ ಎನಿಸುತ್ತದೆ. ಈ ಡಾಕ್ಯುಮೆಂಟ್ ಕೂಡ ನಿಮ್ಮ ಕಲ್ಪಿತ ಜುಮ್ಲಾಗಳಲ್ಲಿ ಒಂದಾಗಿತ್ತೇ ಎಂದು ಶಶಿ ತರೂರ್‌ ವ್ಯಂಗ್ಯಾತ್ಮವಾಗಿ ಪ್ರಶ್ನಿಸಿದ್ದಾರೆ.

    ಆಧುನಿಕತೆ, ಪ್ರಗತಿಪರ ಮತ್ತು ದೃಷ್ಟಿಕೋನದಲ್ಲಿ ಪ್ರಬುದ್ಧವಾಗಿರುವ ಭಾರತವನ್ನು ಬಲಿಷ್ಠ ಮತ್ತು ಸಮೃದ್ಧ ರಾಷ್ಟ್ರವಾಗಿ ನಿರ್ಮಿಸಲು ಭಾರತೀಯ ಜನತಾ ಪಕ್ಷವು ಪ್ರತಿಜ್ಞೆ ಮಾಡಿದೆ ಎಂದು ಬಿಜೆಪಿಯ ಪೋಸ್ಟ್‌ನಲ್ಲಿದೆ. ಇದರ ಸ್ಕ್ರೀನ್‌ಶಾಟ್‌ನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಶಶಿ ತರೂರ್‌ ವ್ಯಂಗ್ಯ ಮಾಡಿದ್ದಾರೆ. ಇದನ್ನೂ ಓದಿ: ನಾನೇನು ವಿಜಯ್‌ ಮಲ್ಯಾನಾ: ಆಸ್ತಿ ಜಪ್ತಿಗೆ ಸಂಜಯ್‌ ರಾವತ್‌ ಕಿಡಿ

    ಬಿಜೆಪಿಯ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಮ್ಮ ಪ್ರತಿಸ್ಪರ್ಧಿಗಳು ‘ಪರಿವಾರ ಭಕ್ತಿ’ಗಾಗಿ ನಿಂತರೆ ಬಿಜೆಪಿ ‘ರಾಷ್ಟ್ರ ಭಕ್ತಿ’ಗೆ ಸಮರ್ಪಿತವಾಗಿದೆ ಎಂದು ಮೋದಿ ಅವರು ಬುಧವಾರ ಪ್ರತಿಪಾದಿಸಿದ್ದಾರೆ.