Tag: ಬಿಜೆಪಿ ಯುವಮೋರ್ಚಾ

  • ಯಾರೋ ಇಬ್ಬರು ರಾಜೀನಾಮೆ ನೀಡ್ತಾರೆ ಅಂದಾಕ್ಷಣ ಪಕ್ಷವೇ ಮುಳುಗಿ ಹೋಗಲ್ಲ: ಸಂಸದ ಸಿದ್ದೇಶ್ವರ

    ಯಾರೋ ಇಬ್ಬರು ರಾಜೀನಾಮೆ ನೀಡ್ತಾರೆ ಅಂದಾಕ್ಷಣ ಪಕ್ಷವೇ ಮುಳುಗಿ ಹೋಗಲ್ಲ: ಸಂಸದ ಸಿದ್ದೇಶ್ವರ

    ದಾವಣಗೆರೆ: ಯಾರೋ ಇಬ್ಬರು ರಾಜೀನಾಮೆ ನೀಡ್ತಾರೆ ಅಂದ ಮಾತ್ರಕ್ಕೆ ಪಕ್ಷವೇ ಮುಳುಗಿ ಹೋಗಲ್ಲ. 11 ಕೋಟಿ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ನಮ್ಮದು ಎಂದು ದಾವಣಗೆರೆಯ ಸಂಸದ ಜಿ.ಎಂ.ಸಿದ್ದೇಶ್ವರ ಉಡಾಫೆ ಉತ್ತರ ನೀಡಿದ್ದಾರೆ.

    ದಾವಣಗೆರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರ ಸರಣಿ ರಾಜೀನಾಮೆ ನೀಡಿದ ವಿಚಾರವಾಗಿ ಮಾತನಾಡಿದ ಅವರು, ರಾಜೀನಾಮೆ ಕೊಡುವ ಮುನ್ನ ಜಿಲ್ಲಾಧ್ಯಕ್ಷರು, ಶಾಸಕರೊಂದಿಗೆ ಮಾತನಾಡಬೇಕು. ಆದರೆ ಇದುವರೆಗೆ ಯಾರೊಬ್ಬರೂ ಪಕ್ಷಕ್ಕೆ ರಾಜೀನಾಮೆ ಕೊಟ್ಟಿಲ್ಲ. ಟಿವಿಯಲ್ಲಿ ಬರಬೇಕಂತಲೇ ರಾಜೀನಾಮೆ ಕೊಟ್ಟಿದ್ದೇವೆ ಎಂದು ಹೇಳಿರಬೇಕು. ಎಲ್ಲರನ್ನು ಮಾತನಾಡಿಸಿ ಸಮಾಧಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 32 ಹತ್ಯೆಗಳಾಗಿದ್ದವು. ನಮ್ಮ ಸರ್ಕಾರದಲ್ಲಿ ಇಬ್ಬರ ಹತ್ಯೆಯಾಗಿದೆ. ಮುಖ್ಯಮಂತ್ರಿಗಳು ಕಾನೂನುಬದ್ಧವಾಗಿ, ಸಂವಿಧಾನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತಾರೆ. ಯಾರೋ ಹೇಳಿದ್ದಾರೆಂದು ಎನ್ಕೌಂಟರ್ ಮಾಡಿದ್ರೆ ನೀವೇ ಗುಂಡಿಕ್ಕಿ ಕೊಂದದ್ದು ಎಂದು ಸುದ್ದಿ ಮಾಡಿ ಸರ್ಕಾರ ಬೀಳಿಸುತ್ತೀರಾ? ಹಾಗಾಗಿ ಕಾನೂನುಬದ್ಧವಾಗಿಯೇ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಪದಗ್ರಹಣ

    ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಪದಗ್ರಹಣ

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ತೇಜಸ್ವಿ ಸೂರ್ಯ ಇಂದು ಪದಗ್ರಹಣ ಮಾಡಿದರು.

    ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಿರ್ಗಮಿತ ಅಧ್ಯಕ್ಷೆ ಪೂನಂ ಮಹಾಜನ್ ಅವರಿಂದ ಅಧಿಕಾರ ಸ್ವೀಕರಿಸಿದರು. ಪ್ರದಗ್ರಹಣಕ್ಕೂ ಮುನ್ನ ರಾಷ್ಟ್ರೀಯ ಅಂಬೇಡ್ಕರ್ ಭವನಕ್ಕೆ ಭೇಟಿ ನೀಡಿದ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಬಳಿಕ ಅಲ್ಲಿಂದ ಬಿಜೆಪಿ ಪ್ರಧಾನ ಕಚೇರಿಗೂ ರೋಡ್ ಶೋ ಮಾಡಿದರು.

    ಪದಗ್ರಹಣದ ಬಳಿಕ ಮಾತನಾಡಿದ ಅವರು, ಹಿರಿಯರ ಆರ್ಶಿವಾದದಿಂದ ಅಧ್ಯಕ್ಷನಾಗಿ ನೇಮಕವಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸಲಿದ್ದೇವೆ ವಿಶ್ವದ ದೊಡ್ಡ ಶಕ್ತಿ ಮಾಡಲು ಪ್ರಯತ್ನ ಮಾಡಿತ್ತೇವೆ. ಡಾ.ಬಿಆರ್ ಅಂಬೇಡ್ಕರ್ ಆರ್ಶಿವಾದ ಪಡೆದಿದ್ದೇನೆ ಸಮಾಜದ ಕಟ್ಟ ಕಡೆಯ ವರ್ಗವನ್ನು ಮುನ್ನಲೆಗೆ ತರುವ ಪ್ರಯತ್ನ ಮಾಡುತ್ತೇವೆ. ದೇಶದ ಯುವ ನಾಯಕರನ್ನಾಗಿ ರೂಪಿಸುತ್ತೇವೆ ಎಂದರು. ಇದೇ ವೇಳೆ ಬೆಂಗಳೂರು ದಕ್ಷಿಣದ ಜನರಿಗೆ, ಕರ್ನಾಟಕದ ಜನರಿಗೆ ಧನ್ಯವಾದ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ನಿರ್ಗಮಿತ ಅಧ್ಯಕ್ಷೆ ಪೂನಂ ಮಹಾಜನ್, ಯುವಮೋರ್ಚಾಗೆ ಕನ್ನಡಿಗರು ಅಧ್ಯಕ್ಷರಾಗುತ್ತಿರುವುದು ಇದೇ ಮೊದಲು. ನನ್ನ ತಮ್ಮನಂತಿರುವ ತೇಜಸ್ವಿಗೆ ಅಧಿಕಾರ ಹಸ್ತಾಂತರಿಸುವುದು ಖುಷಿ ಇದೆ. ಭವಿಷ್ಯದ ರಾಜಕಾರಣಕ್ಕೆ ಒಳಿತಾಗಲಿ ಎಂದು ಅಧಿಕಾರ ಹಸ್ತಾಂತರದ ಬಳಿಕ ಹೇಳಿದರು.