Tag: ಬಿಜೆಪಿ ಮುಖಂಡ

  • ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಟೋಲ್ ಸಿಬ್ಬಂದಿ ಮೇಲೆ ಪುತ್ರನಿಂದ ಹಲ್ಲೆ – ನನ್ನ ಮಗನ ತಪ್ಪಿದ್ದರೆ ಕ್ಷಮೆ ಕೇಳಿಸ್ತೀನಿ: ವಿಜೂಗೌಡ ಪಾಟೀಲ್‌

    ಬೆಂಗಳೂರು: ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ನನ್ನ ಮಗನಿಂದ ತಪ್ಪಾಗಿದ್ದರೆ ಕ್ಷಮೆ ಕೇಳಿಸುತ್ತೇನೆ ಎಂದು ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಹೇಳಿದ್ದಾರೆ.

    ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್ ಬಳಿ ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಿದ ಪ್ರಕರಣದ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಟೋಲ್ ಬಳಿ ಹೋಗಿದ್ದು ನಿಜ. ಟೋಲ್‌ನಲ್ಲಿದ್ದ ಸಿಬ್ಬಂದಿ ಯಾರ ವಾಹನ ಅಂತ ಕೇಳಿದ್ದಾರೆ. ನಾನು ವಿಜೂಗೌಡ ಅವರ ಮಗ ಅಂತ ಹೇಳಿದ್ದಾನೆ. ಯಾವ ವಿಜೂಗೌಡ? ಅವರ ಮಗ ಆದ್ರೆ ಏನಂತೆ ಟೋಲ್ ಕಟ್ಟಿ ಹೋಗಬೇಕು ಅಂತ ಹೇಳಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ನಾವು ಅಲ್ಲಿ ದಿನ ಹೋಗೋದು ಬರೋದು ಮಾಡುತ್ತೇವೆ. ನಮ್ಮನ್ನ ಗುರುತು ಹಿಡಿಬೇಕು ಅಂತ ಹೇಳಿದ್ದಾನೆ. ನನ್ನ ಮಗ ಹೊಡೆದಿಲ್ಲ. ಹಿಂದಿನಿಂದ ಬಂದು ಅವನ ಸ್ನೇಹಿತರೆಲ್ಲ ಸೇರಿ ಹೊಡೆದಿದ್ದಾರೆ. ನನ್ನ ಮಗ ಜಗಳ ಬಿಡಿಸಲು ಹೋಗಿದ್ದಾನೆ ಅಷ್ಟೆ ಎಂದು ಸಮರ್ಥಿಸಿಕೊಂಡಿದ್ದಾರೆ.

    ಎಲ್ಲರೂ ಟೋಲ್ ಕಟ್ಟಲೇಬೇಕು. ಕಟ್ಟುವುದಿಲ್ಲ ಅಂತ ನನ್ನ ಮಗ ಹೇಳಿಲ್ಲ. ಆದರೆ ಯಾರದ್ರೂ ತಂದೆ ಬಗ್ಗೆ ಮಾತನಾಡಿದರೆ ಕೋಪ ಬರುತ್ತದೆ ಅಲ್ವಾ? ಹಾಗಾಗಿ ನನ್ನ ಮಗ ಕೋಪದಿಂದ ಮಾತನಾಡಿದ್ದಾನೆ. ಈ ವಿಚಾರದಲ್ಲಿ ನಾನು ನನ್ನ ಮಗನನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.

    ಯಾರೆಲ್ಲ ಹಲ್ಲೆ ಮಾಡಿದ್ದಾರೆ ಅವರೆಲ್ಲರಿಗೂ ನಾನು ಬೈದಿದ್ದೇನೆ. ಅಲ್ಲದೇ ಕ್ಷಮಾಪಣೆ ಕೇಳಬೇಕು ಅಂತ ಹೇಳಿದ್ದೇನೆ. ಯಾರೂ ತಪ್ಪು ಮಾಡಿದ್ರೂ ಕ್ಷಮೆ ಕೇಳಬೇಕು. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.

    ಉಪ್ಪು ತಿಂದವರೂ ನೀರು ಕುಡಿಯಲೇ ಬೇಕು. ತಪ್ಪು ಯಾರೇ ಮಾಡಿದ್ರೂ ಅದು ತಪ್ಪೇ. ನನ್ನ ಮಗ ತಪ್ಪು ಮಾಡಿದ್ರೆ ಕ್ಷಮೆ ಕೇಳಿಸುತ್ತೇನೆ. ನನ್ನ ಮಗ ತಪ್ಪು ಮಾಡಿರುವ ಬಗ್ಗೆ ನನಗೆ ಇನ್ನೂ ಸಂಶಯವಿದೆ. ನಾನೇ ಖುದ್ದು ಸ್ಥಳಕ್ಕೆ ಹೋಗಿ ಯಾರು ತಪ್ಪು ಮಾಡಿದ್ದಾರೆ ಎಂದು ತಿಳಿದುಕೊಳ್ಳುತ್ತೇನೆ ಎಂದಿದ್ದಾರೆ.

  • ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ವಿಜಯಪುರ | ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ ಮುಖಂಡನ ಪುತ್ರನಿಂದ ಹಲ್ಲೆ

    ವಿಜಯಪುರ: ಟೋಲ್ ಹಣ ಪಾವತಿಸಲು ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಬಿಜೆಪಿ (BJP) ಮುಖಂಡ ವಿಜೂಗೌಡ ಪಾಟೀಲ್ (Vijugouda Patil) ಪುತ್ರ ಹಲ್ಲೆ ನಡೆಸಿರುವ ಘಟನೆ ವಿಜಯಪುರ-ಕಲಬುರಗಿ ಟೋಲ್‌ನಲ್ಲಿ ನಡೆದಿದೆ.

    ಬಿಜೆಪಿ ಮುಖಂಡ ವಿಜೂಗೌಡ ಪಾಟೀಲ್ ಅವರ ಪುತ್ರ ಸಮರ್ಥಗೌಡ ಪಾಟೀಲ್ ಹಾಗೂ ಸ್ನೇಹಿತರು ವಿಜಯಪುರದಿಂದ ಕಪ್ಪು ಬಣ್ಣದ ಥಾರ್‌ನಲ್ಲಿ ಸಿಂದಗಿ ಕಡೆ ಹೊರಟಿದ್ದರು. ಈ ವೇಳೆ ಜಿಲ್ಲೆಯ ಕನ್ನೊಳ್ಳಿ ಗ್ರಾಮದ ಬಳಿಯಿರುವ ಟೋಲ್‌ನಲ್ಲಿ ಹಣ ಪಾವತಿಸಲು ಕೇಳಿದ್ದಾರೆ. ಆಗ ಸಮರ್ಥಗೌಡ ನಾನು ವಿಜೂಗೌಡ ಪಾಟೀಲ್ ಪುತ್ರ ಎಂದು ಹೇಳಿದ್ದಾನೆ. ಆಗ ಟೋಲ್ ಸಿಬ್ಬಂದಿ ಯಾವ ವಿಜೂಗೌಡ ಎಂದು ಕೇಳಿದ್ದಾರೆ. ಇದರಿಂದ ಕೋಪಗೊಂಡ ಸಮರ್ಥಗೌಡ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಯನಾಡು ಪ್ರಮೋಷನ್: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

    ಸಮರ್ಥಗೌಡ ಮಾತ್ರವಲ್ಲದೇ ಆತನ ಸ್ನೇಹಿತರು ಕೂಡ ಹಲ್ಲೆ ನಡೆಸಿದ್ದಾರೆ. ಇದರಿಂದ ಟೋಲ್ ಸಿಬ್ಬಂದಿ ಹಣ ತೆಗೆದುಕೊಳ್ಳದೇ ಹಾಗಾಯೇ ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಹಲ್ಲೆ ನಡೆಸಿದ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಸದ್ಯ ಗಾಯಾಳು ಸಂಗಪ್ಪ ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲಾಗಿದ್ದು, ಟೋಲ್ ಸಿಬ್ಬಂದಿ ದೂರು ದಾಖಲಿಸಲು ಮುಂದಾಗಿದ್ದಾರೆ.ಇದನ್ನೂ ಓದಿ: ಚಿತ್ತಾಪುರ RSS ಪಥಸಂಚಲನ ವಿವಾದ – ನ.5ಕ್ಕೆ ಬೆಂಗಳೂರಲ್ಲಿ ಶಾಂತಿಸಭೆ, ನ.7ಕ್ಕೆ ಮತ್ತೆ ವಿಚಾರಣೆ

  • ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ – ಎಫ್‌ಐಆರ್ ದಾಖಲು

    ಯುವತಿಗೆ ಮದ್ಯ ಕುಡಿಸಿ ಬಿಜೆಪಿ ಮುಖಂಡನಿಂದ ಅತ್ಯಾಚಾರ – ಎಫ್‌ಐಆರ್ ದಾಖಲು

    – ಮದುವೆಗೆ ಸಾಲ ಕೊಡುವುದಾಗಿ ಕರೆಸಿಕೊಂಡು ಕೃತ್ಯ

    ಬೆಂಗಳೂರು: ಮದುವೆಗೆ ಸಾಲ ಕೊಡುವುದಾಗಿ ಯುವತಿಯನ್ನು ಫ್ಲ್ಯಾಟ್‌ಗೆ ಕರೆದೊಯ್ದು ಮದ್ಯ ಕುಡಿಸಿ ಆಕೆಯ ಮೇಲೆ ಬಿಜೆಪಿ ಮುಖಂಡನೋರ್ವ ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    26 ವರ್ಷದ ಯುವತಿ ನೀಡಿದ ದೂರಿನ ಆಧಾರದ ಮೇಲೆ ಬಿಜೆಪಿ (BJP) ಮುಖಂಡ ಜಿಮ್ ಸೋಮ ಅಲಿಯಾಸ್ ಸೋಮಶೇಖರ್ ಮೇಲೆ ಅಶೋಕನಗರ (Ashoknagar) ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸಂತ್ರಸ್ತ ಯುವತಿಗೆ ಆಕೆಯ ಸ್ನೇಹಿತೆ ಮೂಲಕ ಸೋಮಶೇಖರ್ ಪರಿಚಯವಾಗಿತ್ತು. ಕಳೆದ ವರ್ಷ ಯುವತಿಗೆ ಮದುವೆ ಫಿಕ್ಸ್ ಆಗಿತ್ತು. ಈ ಸಮಯದಲ್ಲಿ ಯುವತಿ ಮದುವೆಗಾಗಿ ಸೋಮಶೇಖರ್ ಬಳಿ ಸುಮಾರು 6 ಲಕ್ಷ ಹಣದ ಸಹಾಯ ಕೇಳಿದ್ದರು. ಇದನ್ನೂ ಓದಿ: ಚೀನಿ ವೈರಸ್‌ ಪತ್ತೆಯಾದ 8 ತಿಂಗಳ ಮಗು ಇಂದು ಡಿಸ್ಚಾರ್ಜ್‌

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಣ ಕೊಡುವುದಾಗಿ ಸಂತ್ರಸ್ತೆಯನ್ನು ಪಿಜಿಯಿಂದ ಲ್ಯಾಂಗ್ ಫೋರ್ಡ್ ರಸ್ತೆಯ ತನ್ನ ಫ್ಲಾಟ್‌ಗೆ ಕರೆದೊಯ್ದು ಇಚ್ಚೆಗೆ ವಿರುದ್ಧವಾಗಿ ಮದ್ಯಕುಡಿಸಿ ಅತ್ಯಾಚಾರವೆಸಗಿದ್ದಾನೆ. ಈ ವಿಚಾರ ಹೊರಗಡೆ ಹೇಳಿದರೆ ಪ್ರಾಣ ತೆಗೆಯೋದಾಗಿ ಬೆದರಿಕೆ ಹಾಕಿದ್ದು, ಮಾನ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾಳೆ. ಇದನ್ನೂ ಓದಿ: Tumakuru| ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ – ಅರಣ್ಯ ಇಲಾಖೆ ಸಿಬ್ಬಂದಿ ಶಾಕ್

    ಘಟನೆ ನಡೆದು ಮೂರು ತಿಂಗಳ ಬಳಿಕ ಸಂತ್ರಸ್ತೆ ಅಶೋಕನಗರ ಠಾಣೆಗೆ ದೂರು ನೀಡಿದ್ದಾಳೆ. ಸಕಲೇಶಪುರ ಕ್ಷೇತ್ರದಿಂದ ಶಾಸಕ ಸ್ಥಾನಕ್ಕೆ ಸ್ಫರ್ಧಿಸಿ ಪರಾಜಯಗೊಂಡಿದ್ದ ಸೋಮಶೇಖರ್ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಇಂದು ಮಧ್ಯಾಹ್ನ 2 ಗಂಟೆಗೆ ದೆಹಲಿ ಚುನಾವಣಾ ದಿನಾಂಕ ಪ್ರಕಟ

  • ಬಿಜೆಪಿ ಹಿರಿಯ ಮುಖಂಡನ ಮನೆ ಮೇಲೆ ಐಟಿ ದಾಳಿ – 5 ಕೋಟಿ ನಗದು, 7 ಕೆಜಿ ಚಿನ್ನಾಭರಣ ಜಪ್ತಿ!

    ಬಿಜೆಪಿ ಹಿರಿಯ ಮುಖಂಡನ ಮನೆ ಮೇಲೆ ಐಟಿ ದಾಳಿ – 5 ಕೋಟಿ ನಗದು, 7 ಕೆಜಿ ಚಿನ್ನಾಭರಣ ಜಪ್ತಿ!

    ಬೆಂಗಳೂರು: ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆಗೆ ಕ್ಷಣಗಣನೆ ಬಾಕಿಯಿರುವ ಹೊತ್ತಿನಲ್ಲಿ ಐಟಿ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಇಲ್ಲಿನ ನೆಲಮಂಗಲದಲ್ಲಿರುವ ಬಿಜೆಪಿ ಹಿರಿಯ ಮುಖಂಡ (BJP Leader) ಗೋವಿಂದಪ್ಪ ಅವರ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ನಗದು ಹಣ ಹಾಗೂ ಚಿನ್ನಾಭರಣಗಳನ್ನು ಜಪ್ತಿ ಮಾಡಿದೆ.

    ಮಾದಾವಾರದ ಗೋವಿಂದಪ್ಪ (Govindappa) ಅವರ ಮನೆ ಮೇಲೆ 15ಕ್ಕೂ ಹೆಚ್ಚು ಐಟಿ ಅಧಿಕಾರಿಗಳ ತಂಡ ದಾಳಿ ನಡೆದಿದ್ದು, 5 ಕೋಟಿ ನಗದು ಹಣ, 7 ಕೆಜಿ ಚಿನ್ನಾಭರಣವನ್ನು (Gold Seized) ವಶಕ್ಕೆ ಪಡೆದುಕೊಂಡಿದೆ. ಇದನ್ನೂ ಓದಿ: ಉದ್ಯಮಿ ಮನೆ ಮೇಲೆ ಐಟಿ ದಾಳಿ; ಸೀಕ್ರೆಟ್‌ ರೂಮಿನಲ್ಲಿದ್ದ 22 ಕೆಜಿ ಚಿನ್ನ, 6.50 ಕೋಟಿ ಹಣ ಜಪ್ತಿ!

    ಖಚಿತ ಮಾಹಿತಿ ಮೇರೆಗೆ ಗುರುವಾರ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು, ವಿವಿಧ ದಾಖಲೆಗಳನ್ನೂ ಪರಿಶೀಲಿಸಿದ್ದರು. ಸದ್ಯ ಗೋವಿಂದಪ್ಪ ಅವರಿಂದ ಜಪ್ತಿ ಮಾಡಲಾದ 4 ಬ್ಯಾಗ್‌ನಷ್ಟು ನಗದು ಹಣ ಹಾಗೂ ಚಿನ್ನಾಭರಣಗಳನ್ನು ಐಟಿ ಕಚೇರಿಗೆ ರವಾನೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

    ಬಿಜೆಪಿ ಪಾಳಯದಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿರುವ ಗೋವಿಂದಪ್ಪ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ್ ನಡುವೆ ಸಂಧಾನ ಮಾಡಿಸಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: Lok Sabha Election 2024: 14 ಕ್ಷೇತ್ರದಲ್ಲಿ 3 ದಿನ ಮದ್ಯ ಮಾರಾಟ ಬಂದ್

  • ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ: ಮೃತ ಬಿಜೆಪಿ ಮುಖಂಡನ ಸಹೋದರ ಆರೋಪ

    ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ: ಮೃತ ಬಿಜೆಪಿ ಮುಖಂಡನ ಸಹೋದರ ಆರೋಪ

    ಕಲಬುರಗಿ: ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ ಎಂದು ಮೃತ ಬಿಜೆಪಿ ಮುಖಂಡ ಗರೀಶ್‌ ಚಕ್ರ ಸಹೋದರ ಸದಾಶಿವ ಚಕ್ರ ಕಿಡಿಕಾರಿದ್ದಾರೆ.

    ಕೊಲೆ ಸಂಬಂಧ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಅವರು, ನನ್ನ ತಮ್ಮ ರಾಜಕೀಯದಲ್ಲಿ ಬೆಳೆಯುವುದನ್ನು ನೋಡಲು ಆಗದೇ ಕೊಲೆ ಮಾಡಲಾಗಿದೆ. ಇದರಲ್ಲಿ‌ ನಮ್ಮ ಜಾತಿಯ ಕೆಲ ನಾಯಕರು ಸಹ ಭಾಗಿ ಆಗಿದ್ದಾರೆ ಎಂದು ಆರೋಪಿಸಿದ್ದಾರೆ.

    ನನ್ನ ತಮ್ಮನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ರಾತ್ರಿ 10 ಗಂಟೆಗೆ ಸಚಿನ್ ಹಾಗೂ ಸ್ನೇಹಿತರು ಸನ್ಮಾನ‌ ಮಾಡುವುದಾಗಿ ಕರೆದುಕೊಂಡು ಹೋಗಿದ್ದರು. ಕೊಲೆಗೂ‌ ಮುನ್ನಾ ಸನ್ಮಾನ ಮಾಡಿ ನಂತರ ಅತನನ್ನು‌ ಕೊಲೆ ಮಾಡಲಾಗಿದೆ. ನನ್ನ ತಮ್ಮನ‌ ಕೊಲೆಗೆ ಸುಪಾರಿ ನೀಡಿದವರ ಹೆಸರು ಪೊಲೀಸರ ಮುಂದೆ ಹೇಳುತ್ತೇನೆ ಎಂದರು. ಇದನ್ನೂ ಓದಿ:  ಕಣ್ಣಿಗೆ ಖಾರದ ಪುಡಿ ಎರಚಿ ಸಂಸದ ಉಮೇಶ್ ಜಾಧವ್ ಬೆಂಬಲಿಗನ ಬರ್ಬರ ಹತ್ಯೆ

    ಪ್ರಕರಣ: ಕಳೆದ ನಾಲ್ಕು ದಿನಗಳ ಹಿಂದೆ ಕಲಬುರಗಿ ಬಿ.ಎಸ್ ಎನ್ ಎಲ್ ಸಲಹಾ ಸಮಿತಿಗೆ ನಿರ್ದೇಶಕರಾಗಿ ಸಂಸದ ಜಾಧವ್ ಆಯ್ಕೆ ಮಾಡಿದ್ದರು. ಸಲಹಾ ಸಮಿತಿ ನಿರ್ದೇಶಕ ನೇಮಕ ಹಿನ್ನೆಲೆ ಪಾರ್ಟಿ ಕೊಡುವುದಾಗಿ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿಗೆ ಕರೆಸಿ ಕಣ್ಣಿಗೆ ಖಾರದ ಪುಡಿ ಎರಚಿ ನಂತರ ಹತ್ಯೆಗೈಯಲಾಗಿದೆ ಎನ್ನಲಾಗಿದೆ.

    ಸಾಗನೂರ ಗ್ರಾಮದ ಸಚಿನ್&ಗ್ಯಾಂಗ್ ನಿಂದ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

  • ರಾಡ್, ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೆ ಬಿಜೆಪಿ ಮುಖಂಡ ಸಾವು

    ರಾಡ್, ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೆ ಬಿಜೆಪಿ ಮುಖಂಡ ಸಾವು

    ಕಲಬುರಗಿ: ಹಿರಿಯ ಬಿಜೆಪಿ ಮುಖಂಡ (BJP Leader) ಮಹಾಂತಪ್ಪಾ ಆಲೂರೆ ಅವರನ್ನು ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಹೊರವಲಯದ ಬಳಿ ಮೂವರು ಅಪರಿಚಿತರು ರಾಡ್, ತಲ್ವಾರ್‌ನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸೋಲಾಪುರ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಸಾವನ್ನಪ್ಪಿದ್ದಾರೆ.

    ಗುರುವಾರ ಬೆಳಿಗ್ಗೆ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದ ಹೊರವಲಯದಲ್ಲಿ ಏಕಾಏಕಿ ಮೂವರು ಅಪರಿಚಿತರು ಬಂದು ಬಿಜೆಪಿ ಮುಖಂಡ ಮಹಾಂತಪ್ಪಾ ಆಲೂರೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆದ ತಕ್ಷಣವೇ ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಬಿಜೆಪಿ ಮುಖಂಡನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್ ಘಟನೆ ಕುರಿತು ಮಾತನಾಡಿದ್ದಾರೆ. ಮಹಾಂತಪ್ಪ ಆಲೂರೆ ನಮ್ಮ ಕುಟುಂಬದ ಒಬ್ಬ ಸದಸ್ಯರಂತಿದ್ದರು. ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಸೌಮ್ಯ ಸ್ವಭಾವದ ವ್ಯಕ್ತಿತ್ವ, ಸಹಕಾರ ಸಂಘದ ಮೂಲಕ ಬಡವರಿಗೆ ಸಹಾಯ ಮಾಡಿದ್ದಾರೆ ಎಂದು ಸ್ಮರಿಸಿದ್ದಾರೆ. ಇದನ್ನೂ ಓದಿ: ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ – ಜಾತಿಗಣತಿ ಸ್ವೀಕಾರಕ್ಕೆ ಹೆಬ್ಬಾಳ್ಕರ್ ಆಕ್ಷೇಪ

    ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ:
    ಈ ಘಟನೆ ನೋಡಿದಾಗ ಆಳಂದ ತಾಲ್ಲೂಕಿನಲ್ಲಿ ಹಾಗೂ ಜಿಲ್ಲೆಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಏನೂ ಬೇಕಾಗಿಲ್ಲ. ಪೊಲೀಸ್ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಒಳಗಾಗದೇ ಕೊಲೆ ಮಾಡಿದ ರಾಕ್ಷಸರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಸಿಲುಕಿದ್ದಾರೆ 20 ಭಾರತೀಯರು – ವಾಪಸ್‌ ಕರೆತರಲು ಹರಸಾಹಸ

  • ಕಾಲು ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ `ಪಬ್ಲಿಕ್ ಬೆಳಕು’ ಆಧಾರ!

    ಕಾಲು ಕಳೆದುಕೊಂಡ ವ್ಯಕ್ತಿಯ ಕುಟುಂಬಕ್ಕೆ `ಪಬ್ಲಿಕ್ ಬೆಳಕು’ ಆಧಾರ!

    ಕಲಬುರಗಿ: ನಿಮ್ಮ `ಪಬ್ಲಿಕ್ ಟಿವಿ’, `ಬೆಳಕು’ (Public TV Belaku) ಕಾರ್ಯಕ್ರಮದ ಮೂಲಕ ಸಮಾಜಮುಖಿ ಕೆಲಸಗಳನ್ನ ಮುಂದುವರಿಸಿದ್ದು, ನೊಂದ ಬಡ ಕುಟುಂಬಕ್ಕೆ ಆಧಾರವಾಗಿದೆ. ಕಲಬುರಗಿ (Kalaburagi) ಜಿಲ್ಲೆ ಆಳಂದ ತಾಲೂಕಿನ ದಣ್ಣೂರ ಗ್ರಾಮದ ಕುಟುಂಬದ ಕಥೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಹೌದು. ಆಳಂದ ತಾಲೂಕಿನ ದಣ್ಣೂರ ಗ್ರಾಮದ ಅಂಗವಿಕಲ ಕುಟುಂಬದ ಸಂಕಷ್ಟದ ಕುರಿತು ʻಪಬ್ಲಿಕ್ ಟಿವಿʼ ಬೆಳಕು ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ಕುಟುಂಬ ತನ್ನ ಕಷ್ಟವನ್ನು ನಾಡಿನ ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. `ಪಬ್ಲಿಕ್’ ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡ (BJP Leader), ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ್ ನೊಂದ ಕುಟುಂಬಕ್ಕೆ ನೇರವಾಗಿದ್ದಾರೆ. ಚಿಕ್ಕದಾಗಿ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಟ್ಟು, ನೊಂದ ಕುಟುಂಬಕ್ಕೆ ಆಸರೆಯಾಗಿದ್ದಾರೆ.

    ಕುಟುಂಬದ ಕಥೆ-ವ್ಯಥೆ:
    ದಣ್ಣೂರ ಗ್ರಾಮದ ನಿವಾಸಿ ಪ್ರಭು ಬೈಕ್ ಅಪಘಾತದಲ್ಲಿ (Bike Accident) ಕಾಲು ಕಳೆದುಕೊಂಡು ಜೀವನ ನಡೆಸಲಾರದಷ್ಟು ಸಮಸ್ಯೆಗೀಡಾಗಿದ್ದರು. ತಮ್ಮ ಪತ್ನಿ ಹಾಗೂ ಮೂರು ಮಕ್ಕಳ ಪ್ರತಿದಿನ ಕಷ್ಟದ ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದರು. ಈ ಬಗ್ಗೆ ನಿಮ್ಮ `ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ಇದನ್ನೂ ಓದಿ: ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ

    ಹೆಚ್.ಆರ್ ರಂಗನಾಥ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬೆಳಕು ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಆಗ ಪ್ರಭು ಹಾಗು ಅವರ ಪತ್ನಿ ಮಲ್ಲಮ್ಮ ತಮ್ಮ ಕುಟುಂಬ ನಿರ್ವಹಣೆಗೆ ಗ್ರಾಮದಲ್ಲಿಯೇ ಒಂದು ಚಿಕ್ಕ ಕಿರಾಣಿ ಅಂಗಡಿ ಮಾಡಿಕೊಟ್ಟರೇ ಕುಟುಂಬದ ನಿರ್ವಹಣೆಗೆ ಸಹಾಯವಾಗುತ್ತದೆ. ದಾನಿಗಳು ಯಾರಾದರೂ ಸಹಾಯ ಮಾಡಿದ್ರೆ ತುತ್ತು ಅನ್ನ ಸಿಗುತ್ತದೆ ಅಂತಲೂ ಅಳಲು ತೋಡಿಕೊಂಡಿದ್ದರು. ಇದನ್ನೂ ಓದಿ: UCC ಬಿಲ್‌ ಪಾಸ್‌ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ

    ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರ ಮನವಿಗೆ ಆಳಂದ ತಾಲೂಕಿನ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ್ ಅವರು ಪ್ರಭು ಅವರ ಕುಟುಂಬಕ್ಕೆ ನೇರವಿನ ಹಸ್ತ ಚಾಚಿದ್ದಾರೆ. ಪ್ರಭು ಅವರ ಕುಟುಂಬದ ಬೇಡಿಕೆಯಂತೆ 30 ಸಾವಿರ ರೂ. ವೆಚ್ಚದಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಟ್ಟು ಜೀವನಕ್ಕೆ ನೆರವಾಗಿದ್ದಾರೆ. ಇದರಿಂದ ಸಂತಸಗೊಂಡಿರುವ ಕುಟುಂಬ `ಪಬ್ಲಿಕ್ ಟಿವಿ’ಗೆ ಧನ್ಯವಾದ ಹೇಳಿದೆ.

  • 6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್

    6,000 ಕ್ವಿಂಟಾಲ್ ಪಡಿತರ ಅಕ್ಕಿ ಕಳ್ಳತನ ಕೇಸ್ – ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಸಹೋದರ ಅರೆಸ್ಟ್

    ಯಾದಗಿರಿ: ಯಾದಗಿರಿ (Yagdiri) ಜಿಲ್ಲೆಯ ಶಹಾಪುರದ ಗೋದಾಮಿನಲ್ಲಿದ್ದ 6 ಸಾವಿರ ಕ್ವಿಂಟಾಲ್ ಪಡಿತರ ಅಕ್ಕಿ (Ration Rice) ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಮುಖಂಡ ಮಣಿಕಂಠ ರಾಠೋಡ್ (Manikanta Rathod) ಅವರ ಸಹೋದರ ರಾಜು ರಾಠೋಡ್‌ನನ್ನ (Raju Rathod) ಬಂಧಿಸಲಾಗಿದೆ.

    ರಾಜು ರಾಠೋಡ್‌ಗೆ ಸೇರಿದ ಗುರುಮಠಕಲ್‌ನಲ್ಲಿನ ಲಕ್ಷ್ಮಿ ತಿಮ್ಮಪ್ಪ ವೇರ್ ಹೌಸ್ ಗೋಡೌನ್‌ನಲ್ಲಿ 550 ಕ್ವಿಂಟಾಲ್ ಪಡಿತರ ಅಕ್ಕಿ ಸೀಜ್ ಮಾಡಿದ ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಹಾಗೂ ಸುರಪುರ ಸಿಪಿಐ ಎಸ್.ಎಂ ಪಾಟೀಲ್ ನೇತೃತ್ವದ ತಂಡ ತಡರಾತ್ರಿ ರಾಜು ರಾಠೋಡ್‌ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದನ್ನೂ ಓದಿ: ಚಿತ್ರದುರ್ಗದಲ್ಲಿಂದು ಶೋಷಿತ ಸಮುದಾಯಗಳ ಬೃಹತ್ ಸಮಾವೇಶ – 2 ಲಕ್ಷಕ್ಕೂ ಅಧಿಕ ಜನ ಭಾಗಿ ನಿರೀಕ್ಷೆ

    ಕಳೆದ 15 ದಿನಗಳ ಹಿಂದೆ ಇದೇ ರಾಜು ರಾಠೋಡ್ ಒಡೆತನದ ಲಕ್ಷ್ಮಿ ವೆಂಕಟೇಶ್ವರ ರೈಸ್ ಮಿಲ್‌ನಲ್ಲಿ ಬರೋಬ್ಬರಿ 700 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಈ ಘಟನೆಯ ನಂತರ ತಲೆ ಮರೆಸಿಕೊಂಡಿದ್ದ ರಾಜು ರಾಠೋಡ್ ವಾರದ ಹಿಂದೆ ಬೇಲ್ ಪಡೆದಿದ್ದ. ಶನಿವಾರ ತಡರಾತ್ರಿ ಮತ್ತೆ ದಾಳಿ ಮಾಡಿದ ಪೊಲೀಸರಿಗೆ ವೇರ್‌ಹೌಸ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ ಪತ್ತೆಯಾಗಿದೆ. ಇದನ್ನೂ ಓದಿ: ಕಾರ್ಯಕ್ರಮದ ನಡುವೆ ಯತೀಂದ್ರ ಸಿದ್ದರಾಮಯ್ಯಗೆ ಅವಾಚ್ಯ ಶಬ್ದಗಳಿಂದ ನಿಂದನೆ – ವ್ಯಕ್ತಿ ಬಂಧನ

    ಈ ಹಿಂದೆ ಇದೇ ಅಕ್ಕಿ ಕಳ್ಳತನ ಕೇಸ್ ನಲ್ಲಿ ಶಹಾಪುರ ಪೊಲೀಸರು ತನ್ನನ್ನ ಬಂಧಿಸಿದ್ದಾರೆ ಎಂದು ದೆಹಲಿಯಿಂದಲೇ ಹೇಳಿಕೊಂಡಿದ್ದ ಮಣಿಕಂಠ ರಾಠೋಡ್ ತದನಂತರ ಬಂಧನಕ್ಕೆ ಒಳಗಾಗದೇ ನೇಪಾಳದ ಕಠ್ಮಂಡುವಿಗೆ ಪ್ರಯಾಣ ಬೆಳೆಸಿದ್ದ. ಇದೀಗ ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್ ನನ್ನ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಜಾಗದಲ್ಲಿ ಸಿಕ್ಕ ಶಾಸನಕ್ಕೂ, ಕೋಲಾರಮ್ಮ ದೇವಾಲಯದ ಶಾಸನಕ್ಕೂ ಇದೆ ಲಿಂಕ್!

  • ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಖಾಸಗಿ ಆಸ್ಪತ್ರೆ ಮಾಲೀಕನೂ ಆಗಿರುವ ಬಿಜೆಪಿ ಮುಖಂಡನಿಗೆ ಕೊರೊನಾ ಪಾಸಿಟಿವ್

    ಚಿಕ್ಕಬಳ್ಳಾಪುರ: ನಗರದ ಖಾಸಗಿ ಆಸ್ಪತ್ರೆಯ ಮಾಲೀಕ ಹಾಗೂ ಬಿಜೆಪಿ ಮುಖಂಡರೊಬ್ಬರಿಗೆ ಕೊರೊನಾ ಪಾಸಿಟಿವ್ (Coron Positive) ಧೃಡವಾಗಿದೆ.

    ಇತ್ತೀಚೆಗಷ್ಟೇ ದೆಹಲಿ ಹಾಗೂ ತಮಿಳುನಾಡಿಗೆ ಹೋಗಿ ಬಂದಿದ್ದ 69 ವರ್ಷದ ಬಿಜೆಪಿ ಮುಖಂಡನಿಗೆ ಜ್ವರ ಕಾಣಿಸಿಕೊಂಡಿತ್ತು. ಸತತ 5 ದಿನಗಳ ನಿರಂತರ ಜ್ವರ ಹಿನ್ನೆಲೆಯಲ್ಲಿ ಕೋವಿಡ್ ಟೆಸ್ಟ್ ಗೆ ಮಾಡಿಸಿದ್ದಾರೆ. ಇದನ್ನೂ ಓದಿ: ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಾಫಿಕ್‌ ಜಾಮ್‌ – 3 ಕಿಮೀ ವರೆಗೆ ನಿಂತ ವಾಹನಗಳು; 2 ಗಂಟೆ ಪ್ರಯಾಣಿಕರ ಪರದಾಟ

    ಕೊರೊನಾ ಟೆಸ್ಟ್ ನ ವರದಿ ಇಂದು ಬಂದಿದ್ದು ಪಾಸಿಟಿವ್ ಎಂಬುದು ಧೃಡವಾಗಿದೆ. ಸದ್ಯ ಬಿಜೆಪಿ ಮುಖಂಡ ಹೋಂ ಕ್ವಾರಂಟೈನಲ್ಲಿದ್ದಾರೆ.

    ಹೊಸ ತಳಿ ಜೆಎನ್.1 ಆತಂಕ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ಸೂಚನೆ ನೀಡಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರಸಲ್ಲಿ ಹಳೆಯ ಆಸ್ಪತ್ರೆಯನ್ನ ಕೋವಿಡ್ 19 ಆಸ್ಪತ್ರೆಯಾಗಿ ಮಾರ್ಪಾಡು ಮಾಡಲಾಗಿದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆ ಸಹಯೋಗದೊಂದಿಗೆ ಕೋವಿಡ್ ಆಸ್ಪತ್ರೆಗೆ ಮರುಚಾಲನೆ ನೀಡಲು ಸಕಲ ಸಿದ್ದತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಹಳೆಯ ಆಸ್ಪತ್ರೆಯಲ್ಲಿ 130 ಬೆಡ್ ಗಳನ್ನ ಸಿದ್ಧ ಮಾಡಿಕೊಳ್ಳಲಾಗುತ್ತಿದ್ದು, ಆಕ್ಸಿಜನ್ ವ್ಯವಸ್ಥೆ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

  • ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ

    ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಮಾರಣಾಂತಿಕ ಹಲ್ಲೆ

    ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ (Manikanta Rathod) ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

    ಮಣಿಕಂಠ ರಾಠೋಡ್ ಅವರು ಚಿತ್ತಾಪೂರ ಕ್ಷೇತ್ರದ ಬಿಜೆಪಿಯ (BJP Leader) ಪರಾಜಿತ ಅಭ್ಯರ್ಥಿಯಾಗಿದ್ದಾರೆ. ಇವರು ಚಿತ್ತಾಪೂರದಿಂದ ಕಲಬುರಗಿಗೆ ಬರುತ್ತಿರುವಾಗ ಶಹಾಬಾದ ಬಳಿ ಅಪರಿಚಿತರು ದಾಳಿ ಮಾಡಿದ್ದಾರೆ.

    ಮಣಿಕಂಠ ರಾಠೋಡ್ ವಾಹನ ತಡೆದು ಬಿಯರ್ ಬಾಟ್ಲಿಗಳಿಂದ ತಲೆಗೆ ಹೊಡೆದು ಪರಾರಿಯಾಗಿದ್ದಾರೆ. ಘಟನೆಯಿಂದ ಮಣಿಕಂಠ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಬಿಗ್‌ಬಾಸ್ ಮನೆಯಿಂದ ಇಶಾನಿ ಔಟ್- ‌ಇಂದು ಇನ್ನೊಬ್ಬರಿಗೆ ಕಾದಿದೆ ಶಾಕ್