Tag: ಬಿಜೆಪಿ ಮಾಜಿ ಸಂಸದ

  • ಬಿಜೆಪಿಯ ಮಾಜಿ ಸಂಸದ ನಿಧನ – ಕಂಬನಿ ಮಿಡಿದ ಮೋದಿ

    ಬಿಜೆಪಿಯ ಮಾಜಿ ಸಂಸದ ನಿಧನ – ಕಂಬನಿ ಮಿಡಿದ ಮೋದಿ

    ನವದೆಹಲಿ: ಬಿಜೆಪಿಯ ಮಾಜಿ ಸಂಸದ ಶರದ್ ತ್ರಿಪಾಠಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

    ಲಿವರ್ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ ತ್ರಿಪಾಠಿ(49) ಬುಧವಾರ ರಾತ್ರಿ ಮೃತಪಟ್ಟಿದ್ದಾರೆ ಹರ್ಯಾಣದ ಮೇದಾಂತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತ್ರಿಪಾಠಿ 2014ರಲ್ಲಿ ಉತ್ತರ ಪ್ರದೇಶದ ಸಂತ ಕಬೀರ್ ನಗರದ ಲೋಕಸಭಾ ಸ್ಥಾನದಿಂದ ಸಂಸತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು.

    2019ರ ಲೋಕಸಭಾ ಚುನಾವಣೆಗೆ ಮುನ್ನ ಸಭೆ ನಡೆಯುತ್ತಿದ್ದಾಗ ಮೆನ್ಡಾವಲ್ ಬಿಜೆಪಿ ಶಾಸಕ ರಾಕೇಶ್ ಸಿಂಗ್ ಶೂನಿಂದ ಹೊಡೆದಿದ್ದರಿಂದ ಇವರ ಹೆಸರು ಚರ್ಚೆಯಾಗಿತ್ತು. ಸದ್ಯ ತ್ರಿಪಾಠಿಯವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ.

    ಶರದ್ ತ್ರಿಪಾಠಿಯವರ ಅಕಾಲಿಕ ನಿಧನವು ನನ್ನನ್ನು ಮಾತ್ರವಲ್ಲದೇ ಇನ್ನೂ ಅನೇಕರಿಗೆ ದುಃಖ ತರಿಸಿದೆ. ಅವರು ಸಮಾಜಕ್ಕೆ ಸೇವೆ ಸಲ್ಲಿಸುವ ಹಾಗೂ ದೀನ ದಲಿತರಿಗಾಗಿ ಕೆಲಸ ಮಾಡಲು ಇಷ್ಟಪಟ್ಟವರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ಅವರ ನಿಧನವನ್ನು ತಡೆಕೊಳ್ಳುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡುವ ಮೂಲಕ ಮೋದಿ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್‍ನ್ಯೂಸ್ – ಇಂದಿನಿಂದ ದಿನವಿಡೀ ಸಂಚಾರ