Tag: ಬಿಜೆಪಿ ಬಾವುಟ

  • ಒಂದು ಧ್ವಜ ತೆಗೆಸಿದ್ರೆ ಲಕ್ಷಾಂತರ ಧ್ವಜ ಹಾರಿಸುತ್ತೇವೆ: ಡಿಸಿಎಂಗೆ ಬಿಜೆಪಿ ನಾಯಕ ಎಚ್ಚರಿಕೆ

    ಒಂದು ಧ್ವಜ ತೆಗೆಸಿದ್ರೆ ಲಕ್ಷಾಂತರ ಧ್ವಜ ಹಾರಿಸುತ್ತೇವೆ: ಡಿಸಿಎಂಗೆ ಬಿಜೆಪಿ ನಾಯಕ ಎಚ್ಚರಿಕೆ

    ಶಿವಮೊಗ್ಗ: ನೀವು ಒಂದು ಧ್ವಜ ತೆಗೆಸಿದರೆ ನಾವು ಲಕ್ಷಾಂತರ ಧ್ವಜ ಹಾರಿಸುತ್ತೇವೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಉಪಮೇಯರ್ ಚನ್ನಬಸಪ್ಪ ಅವರು ಡಿಸಿಎಂ ಪರಮೇಶ್ವರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಕೊರಟಗೆರೆಯಲ್ಲಿ ಬಿಜೆಪಿ ಧ್ವಜ ತೆಗೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಗ್ರಾಮ ವಾಸ್ತವ್ಯ, ಜನ ಸಂಪರ್ಕ ಮಾಡಿಕೊಳ್ಳಿ ಆದರೆ ಬಿಜೆಪಿ ಧ್ವಜ ಕೀಳಿಸುವ ಕೆಲಸ ಮಾಡಬೇಡಿ ಎಂದು ದೋಸ್ತಿ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಇಷ್ಟು ವರ್ಷಗಳ ಕಾಲ ಅಲ್ಲಿನ ಶಾಸಕರಾಗಿದ್ದು, ಜನರ ಸಮಸ್ಯೆಗಳ ಅರಿವು ನಿಮಗಿಲ್ಲ. ಈಗ ರಾಜಕೀಯಕ್ಕಾಗಿ ಕಾರ್ಯಕ್ರಮ ಮಾಡಲು ಹೊರಟಿದ್ದೀರಿ. ನೀವು ಒಂದು ಧ್ವಜ ತೆಗೆಸಿದರೆ ನಾವು ಲಕ್ಷಾಂತರ ಧ್ವಜ ಹಾರಿಸುತ್ತೇವೆ ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದರು.

    ನೀವು ಹೋಗುವ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತರು ಕಾಣಬಾರದು, ಬಿಜೆಪಿ ಧ್ವಜ ಕಾಣಬಾರದು ಎಂದರೆ ಏನರ್ಥ? ಧ್ವಜ ಕೀಳಿಸುವುದಕ್ಕಾಗಿಯೇ ಜನಸಂಪರ್ಕ ಸಭೆ ಮಾಡುತ್ತೀದ್ದೀರಾ? ಇದು ಸರ್ವಾಧಿಕಾರಿ ಧೋರಣೆ ದಬ್ಬಾಳಿಕೆ ನೀತಿ ಎಂದು ವಾಗ್ದಾಳಿ ನಡೆಸಿದರು.

    ಏನಿದು ಪ್ರಕರಣ?
    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿರುವ ಪ್ರಧಾನಮಂತ್ರಿ ಜನರಿಕ್ ಔಷಧ ಅಂಗಡಿ ಮಾಲೀಕ ಕೆ.ಎನ್ ರವಿ ಎಂಬುವವರು ತಮ್ಮ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದಾರೆ. ಇದಕ್ಕೆ ಶನಿವಾರ ಡಿಸಿಎಂ ಪರಮೇಶ್ವರ್ ಅವರು ತೋವಿನಕೆರೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಕೆಸ್ತೂರು ರಸ್ತೆಯಲ್ಲಿರುವ ಔಷಧಿ ಅಂಗಡಿಯ ಮುಂದೆ ಡಿಸಿಎಂ ವಾಹನ ಹೋಗಬೇಕಿತ್ತು. ಹೀಗಾಗಿ ಅಂಗಡಿಯ ಮುಂದೆ ಇದ್ದ ಬಾವುಟವನ್ನು ನೋಡಿ ಡಿಸಿಎಂ ಮುಜಗರಗೊಂಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬಾವುಟ ತೆರವು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ನೋಟಿಸ್ ನೀಡುವಂತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು.

    ನೋಟಿಸ್‍ನಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಬಾವುಟ ಹಾಕಿದ್ದಕ್ಕೆ ತೆರವು ಮಾಡಿ ಎಂದು ತಿಳಿಸಲಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಬರುವ ಮಾರ್ಗದಲ್ಲಿ ಬಾವುಟ ಹಾಕಬಾರದು. ಒಂದು ವೇಳೆ ಬಾವುಟ ತೆರವುಗೊಳಿಸಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಡಿಸಿಎಂ ಬರುವಾಗ ಬಾವುಟ ತೆಗೆದಿಟ್ಟುಕೊಂಡು ಅವರು ಹೋದ ಮೇಲೆ ಮತ್ತೆ ಹಾಕಿಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸುಳ್ಳು ಸುದ್ದಿ ಮಾಡೋದನ್ನ ನಿಲ್ಲಿಸಿ – ಮಾಧ್ಯಮದವರ ಮೇಲೆ ಪರಮೇಶ್ವರ್ ಗರಂ

    ಸುಳ್ಳು ಸುದ್ದಿ ಮಾಡೋದನ್ನ ನಿಲ್ಲಿಸಿ – ಮಾಧ್ಯಮದವರ ಮೇಲೆ ಪರಮೇಶ್ವರ್ ಗರಂ

    ತುಮಕೂರು: ಈ ಹಿಂದೆ ಸಿಎಂ ಮಾಧ್ಯಮಗಳ ವಿರುದ್ಧ ಮುನಿಸಿಕೊಂಡಿದ್ದರು. ಈಗ ತನ್ನ ವಿರುದ್ಧ ಸುದ್ದಿ ಮಾಡಿದ್ದಕ್ಕೆ ಡಿಸಿಎಂ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.

    ಬಿಜೆಪಿ ಬಾವುಟ ತೆರವುಗೊಳಿಸಲು ನೋಟಿಸ್ ಜಾರಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಸುಳ್ಳು ಸುದ್ದಿ ಮಾಡುವುದನ್ನು ನಿಲ್ಲಿಸಿ ಎಂದು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

    ಕೊರಟಗೆರೆಯ ಚಿನ್ನಹಳ್ಳಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಯಾರಿಗೂ ನೋಟಿಸ್ ನೀಡಿಲ್ಲ. ಆ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಆ ಬಾವುಟ ನಾನು ನೋಡೇ ಇಲ್ಲ ಎಂದು ಹೇಳಿದರು.

    ಗ್ರಾಮ ಪಂಚಾಯತಿ ಪಿಡಿಓ ನೀಡಿದ ನೋಟಿಸ್ ಇದ್ದರೂ ಅದನ್ನು ನಿರಾಕರಿಸಿದ ಪರಮೇಶ್ವರ್, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಬಾವುಟ ಹಾಕಿಕೊಳ್ಳಬಹುದು. ಅದಕ್ಕೆ ಯಾರು ಏನು ಮಾಡೋಕೆ ಆಗಲ್ಲ. ನಮ್ಮ ಪಕ್ಷದವರು ಬಾವುಟ ಹಾಕಿಕೊಳ್ಳುತ್ತಾರೆ ಅದಕ್ಕೆ ಏನ್ ಮಾಡಕ್ಕೆ ಆಗುತ್ತೆ. ಈ ವಿಚಾರದಲ್ಲಿ ಯಾರೂ ನೋಟಿಸ್ ಕೊಟ್ಟಿಲ್ಲ. ಈ ರೀತಿಯ ಘಟನೆ ನಡೆಯದೇ ಇದ್ದರೂ ಸುಳ್ಳು ಸುದ್ದಿ ಮಾಡಿದ್ದು ಸರಿಯಿಲ್ಲ ಎಂದು ಹೇಳಿದರು.

    ಇದೇ ವೇಳೆ ಕೆ.ಎನ್ ರಾಜಣ್ಣರ ಪುತ್ರ ಆರ್.ರಾಜೇಂದ್ರ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ ವಿಚಾರ ಬಗ್ಗೆ ಕೇಳಿದಾಗ, ಅದಕ್ಕೂ ನನಗೂ ಸಂಬಂಧ ಇಲ್ಲ. ಆ ವಿಚಾರದಲ್ಲಿ ನಾನು ಏನೂ ಹೇಳಲ್ಲ ಎಂದು ಹೇಳಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪರಮೇಶ್ವರ್ ಡಿಸಿಎಂ ಹುದ್ದೆಗೆ ತಕ್ಕ ಕೆಲಸ ಮಾಡಬೇಕು – ಶಿವನಗೌಡ ನಾಯಕ್

    ಪರಮೇಶ್ವರ್ ಡಿಸಿಎಂ ಹುದ್ದೆಗೆ ತಕ್ಕ ಕೆಲಸ ಮಾಡಬೇಕು – ಶಿವನಗೌಡ ನಾಯಕ್

    ರಾಯಚೂರು: ಡಿಸಿಎಂ ಪರಮೇಶ್ವರ್ ಹೋಗುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾಕಿದಕ್ಕೆ ನೋಟಿಸ್ ನೀಡಿರುವ ವಿಚಾರಕ್ಕೆ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಸೇರಿ ರಾಯಚೂರಿನ ಬಿಜೆಪಿ ನಾಯಕರು ಬೇಸರ ವ್ಯಕ್ತಪಡಿಸಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಶಿವನಗೌಡ ನಾಯಕ್ ಅವರು, ಪರಮೇಶ್ವರ್ ಡಿಸಿಎಂ ಹುದ್ದೆಗೆ ತಕ್ಕ ಕೆಲಸ ಮಾಡಬೇಕು. ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುವವರ ಮೇಲೆ ದರ್ಪ ತೋರುವುದು ಸರಿಯಲ್ಲ. ಲೋಕಸಭಾ ಚುನಾವಣೆಯ ಸೋಲಿನಿಂದ ಅವರು ಇನ್ನೂ ಹೊರಗೆ ಬಂದಿಲ್ಲ, ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಿದರು.

    ಪ್ರಧಾನಮಂತ್ರಿ ಜನರಿಕ್ ಔಷಧಿ ಮಳಿಗೆ ಯಾವ ಸರ್ಕಾರದ್ದು ಅಲ್ಲ. ಅಂಗಡಿಯ ಮಾಲೀಕ ಬಿಜೆಪಿ ಪಕ್ಷದ ಮೇಲಿನ ಅಭಿಮಾನದಿಂದ ಬಾವುಟ ಹಾಕಿಕೊಂಡಿದ್ದಾರೆ ಅಷ್ಟೇ. ಸರ್ಕಾರಿ ಕಚೇರಿ ಮೇಲೆ ಬಾವುಟ ಹಾಕಿದ್ದರೆ ಕ್ರಮ ತೆಗೆದುಕೊಳ್ಳಬೇಕು. ಖಾಸಗಿಯವರು ಬಾವುಟ ಹಾಕಿಕೊಂಡರೆ ತಪ್ಪು ಏನು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಡೆದಿದ್ದೇನು?
    ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ತೋವಿನಕೆರೆಯಲ್ಲಿರುವ ಪ್ರಧಾನಮಂತ್ರಿ ಜನರಿಕ್ ಔಷಧ ಅಂಗಡಿ ಮಾಲೀಕ ಕೆ.ಎನ್ ರವಿ ಎಂಬುವವರು ತಮ್ಮ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದಾರೆ. ಇದಕ್ಕೆ ಶನಿವಾರ ಡಿಸಿಎಂ ಪರಮೇಶ್ವರ್ ಅವರು ತೋವಿನಕೆರೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಕೆಸ್ತೂರು ರಸ್ತೆಯಲ್ಲಿರುವ ಔಷಧಿ ಅಂಗಡಿಯ ಮುಂದೆ ಡಿಸಿಎಂ ವಾಹನ ಹೋಗಬೇಕಿತ್ತು. ಹೀಗಾಗಿ ಅಂಗಡಿಯ ಮುಂದೆ ಇದ್ದ ಬಾವುಟವನ್ನು ನೋಡಿ ಡಿಸಿಎಂ ಮುಜಗರಗೊಂಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬಾವುಟ ತೆರವು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ನೋಟಿಸ್ ನೀಡುವಂತೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ, ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ – ಖಾದರ್

    ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ, ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ – ಖಾದರ್

    ಬಳ್ಳಾರಿ: ಡಿಸಿಎಂ ಪರಮೇಶ್ವರ್ ಅವರು ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಡಿಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ.

    ಡಿಸಿಎಂ ಪರಮೇಶ್ವರ್ ಅವರು ತೆರಳುತ್ತಿದ್ದ ದಾರಿಯಲ್ಲಿ ಬಿಜೆಪಿ ಬಾವುಟ ಹಾಕಿದವರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಅಧಿಕಾರಿಗಳು ನೋಟಿಸ್ ಕೊಟ್ಟಿರಬಹುದು. ಅದನ್ನು ಡಿಸಿಎಂ ಮೇಲೆ ಹಾಕುವುದು ಸರಿಯಲ್ಲ. ಡಿಸಿಎಂ ಸಣ್ಣತನದ ಮನುಷ್ಯ ಅಲ್ಲ. ಅವರು ಬಹಳ ವಿಶಾಲ ಆಲೋಚನೆ ಹೊಂದಿರುವ ವ್ಯಕ್ತಿ. ಈ ಬಗ್ಗೆ ಹೆಚ್ಚು ವಿಚಾರ ನನಗೆ ಗೊತ್ತಿಲ್ಲ ಎಂದು ಡಿಸಿಎಂ ಅವರನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ಡಿಸಿಎಂ ಬರುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾರುವಂತಿಲ್ಲ

    ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಮಾತೇ ಇಲ್ಲ. ಈ ಸರ್ಕಾರ ಭದ್ರವಾಗಿ ಇರುತ್ತದೆ. ಅದರಲ್ಲಿ ಯಾವುದೇ ಅನುಮಾನ ಬೇಡ. ಸಿಎಂ ಆಗಿ ಹೆಚ್.ಡಿ ಕುಮಾರಸ್ವಾಮಿ ಅವರೇ ಇರುತ್ತಾರೆ. ಡಿಸಿಎಂ ಪರಮೇಶ್ವರ್ ಅವರೇ ಆಗಿರುತ್ತಾರೆ ಎಂದರು. ನಮ್ಮ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಹಾಗೂ ಹಿರಿಯರ ನೇತೃತ್ವದಲ್ಲಿ ಈ ಸರ್ಕಾರ ಮುನ್ನಡೆಯುತ್ತದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಜೆಡಿಎಸ್ ವರಿಷ್ಠರಾದ ದೇವೇಗೌಡರ ಒಪ್ಪಂದದ ಮೇಲೆ ಮೈತ್ರಿ ಸರ್ಕಾರ ರಚನೆಯಾಗಿದೆ ಎಂದರು.

    ದೇವೇಗೌಡರು ಹಾಗೂ ವೀರಪ್ಪ ಮೊಯ್ಲಿ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ನಾಯಕರೆಲ್ಲ ವಿರೋಧಿಗಳಲ್ಲ. ಆದರೆ ಅವರ ಸಿದ್ಧಾಂತಗಳಿಗೆ ವಿರೋಧವಿದೆ. ನಾವೆಲ್ಲ ಜೊತೆಯಾಗಿಯೇ ಇದ್ದೇವೆ. ನೀವು ನಮ್ಮನ್ನು ಬೇರೆ, ಬೇರೆ ಮಾಡಬೇಡಿ ಎಂದು ಕೊನೆಗೆ ಹಾಸ್ಯ ಚಟಾಕಿ ಹಾರಿಸಿದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಡಿಸಿಎಂ ಬರುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾರುವಂತಿಲ್ಲ

    ಡಿಸಿಎಂ ಬರುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾರುವಂತಿಲ್ಲ

    ತುಮಕೂರು: ಜಿಲ್ಲೆಯಲ್ಲಿ ಡಿಸಿಎಂ ಪರಮೇಶ್ವರ್ ಅವರ ದರ್ಬಾರ್ ಜೋರಾಗಿದ್ದು, ಉಪಮುಖ್ಯಮಂತ್ರಿಗಳು ಹೋಗುವ ಮಾರ್ಗದಲ್ಲಿ ಬಿಜೆಪಿ ಬಾವುಟ ಹಾಕಿದ್ದಕ್ಕೆ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಲಾಗಿದೆ.

    ಜಿಲ್ಲೆ ಕೊರಟಗೆರೆ ತಾಲೂಕಿನ ತೋವಿನಕೆರೆ ಅಂಗಡಿ ಮಾಲೀಕ ಕೆ.ಎನ್.ರವಿ ಎಂಬವರಿಗೆ ನೋಟಿಸ್ ನೀಡಲಾಗಿದೆ. ತಮ್ಮ ಅಂಗಡಿ ಮುಂದೆ ಬಿಜೆಪಿ ಬಾವುಟ ಹಾಕಿದ್ದಕ್ಕೆ ಗ್ರಾಮ ಪಂಚಾಯತಿಯ ಪಿಡಿಓ ನೋಟಿಸ್ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರಿಂದ ತಾನು ನಡೆಸುತ್ತಿದ್ದ ಪ್ರಧಾನಮಂತ್ರಿ ಜನರಿಕ್ ಔಷಧ ಮಳಿಗೆ ಮುಂದೆ ರವಿ ಬಿಜೆಪಿ ಬಾವುಟ ಹಾಕಿಕೊಂಡಿದ್ದರು. ಆದರೆ ಅದನ್ನು ಕೂಡಲೇ ತೆರವುಗೊಳಿಸುವಂತೆ ನೋಟಿಸ್ ನಲ್ಲಿ ಸೂಚನೆ ನೀಡಲಾಗಿದೆ.

    ಶನಿವಾರ ಡಿಸಿಎಂ ಪರಮೇಶ್ವರ್ ಅವರು ತೋವಿನಕೆರೆಯಲ್ಲಿ ಜನಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲು ಬಂದಿದ್ದರು. ಈ ಸಂದರ್ಭದಲ್ಲಿ ತುಮಕೂರಿನ ಕೆಸ್ತೂರು ರಸ್ತೆಯಲ್ಲಿರುವ ಔಷದಿ ಅಂಗಡಿಯ ಮುಂದೆ ಡಿಸಿಎಂ ವಾಹನ ಹೋಗಬೇಕಿತ್ತು. ಹೀಗಾಗಿ ಅಂಗಡಿಯ ಮುಂದೆ ಇದ್ದ ಬಾವುಟವನ್ನು ನೋಡಿ ಡಿಸಿಎಂ ಮುಜಗರಗೊಂಡಿದ್ದರು ಎಂದು ತಿಳಿದು ಬಂದಿದೆ. ಇದರಿಂದ ಬಾವುಟ ತೆರವು ಮಾಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    ನೋಟಿಸ್‍ನಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಇಲ್ಲದೇ ಬಾವುಟ ಹಾಕಿದ್ದಕ್ಕೆ ತೆರವು ಮಾಡಿ ಎಂದು ತಿಳಿಸಲಾಗಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಬರುವ ಮಾರ್ಗದಲ್ಲಿ ಬಾವುಟ ಹಾಕಬಾರದು. ಒಂದು ವೇಳೆ ಬಾವುಟ ತೆರವುಗೊಳಿಸಿದ್ದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಡಿಸಿಎಂ ಬರುವಾಗ ಬಾವುಟ ತೆಗೆದಿಟ್ಟುಕೊಂಡು ಅವರು ಹೋದ ಮೇಲೆ ಮತ್ತೆ ಹಾಕಿಕೊಳ್ಳಿ ಎಂದು ಸಲಹೆಯನ್ನು ನೀಡಿದ್ದಾರೆ.

    ತುಮಕೂರಿನ ಕಾಂಗ್ರೆಸ್ ಕಾರ್ಯಕರ್ತರು ಡಿಸಿಎಂ ಅವರನ್ನು ಒಲೈಸಿಕೊಳ್ಳಲು ಈ ರೀತಿಯ ನೋಟಿಸ್ ಕೊಟ್ಟಿದ್ದಾರೆ. ಡಿಸಿಎಂ ಬರುತ್ತಾರೆ ಎಂದು ಬಿಜೆಪಿ ಬಾವುಟ ತೆಗೆಯುವುದು ಎಷ್ಟು ಸರಿ? ಎಂದು ಅಂಗಡಿ ಮಾಲೀಕ ಪ್ರಶ್ನೆ ಮಾಡಿದ್ದಾರೆ.