Tag: ಬಿಜೆಪಿ ನಾಯಕರು

  • ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ, ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ: ಪ್ರಿಯಾಂಕ್ ಖರ್ಗೆ ಕಿಡಿ

    ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ, ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ: ಪ್ರಿಯಾಂಕ್ ಖರ್ಗೆ ಕಿಡಿ

    ಬೆಂಗಳೂರು: ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ. ದೇಶಾದ್ಯಂತ ಜನ ಉದ್ಯೋಗ ಹುಡುಕಿಕೊಂಡು ಬೆಂಗಳೂರಿಗೆ ಬರ್ತಿದ್ದಾರೆ. ಪುಣೆ, ಮುಂಬೈನಲ್ಲಿ ಸಮಸ್ಯೆಗಳು ಇಲ್ವಾ? ಲೇವಡಿ ಏಕೆ ಮಾಡ್ತಿರಾ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಖಾರವಾಗಿ ಪ್ರಶ್ನಿಸಿದ್ದಾರೆ.

    ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರದಿಂದ ಹತ್ತು ರೂಪಾಯಿ ಹಣ ತನ್ನಿ. ಸ್ಟೀಲ್ ಫ್ಲೈಓವರ್ ಬೇಡ ಎಂದು ರಾಜೀವ್ ಚಂದ್ರಶೇಖರ್ ಅಭಿಯಾನ ಮಾಡಿದ್ರು. ಈಗ ಕರ್ನಾಟಕದಿಂದ ಓಡಿ ಹೋಗಿದ್ದಾರೆ‌. ಕೇಂದ್ರ ಸರ್ಕಾರದಿಂದ ಒಂದು ರೂಪಾಯಿ ತರುವ ಯೋಗ್ಯತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಿಎಂ ಸಾಹೇಬ್ರು ನಾಟಿ ಕೋಳಿ ತಿನ್ನಿಸ್ತಾರೆ, ಮುದ್ದೆ ಸೊಪ್ಪು ಸಾರು ಹಾಕಿದ್ರು ಓಕೆ: ಪ್ರಿಯಾಂಕ್ ಖರ್ಗೆ

    32 ಕಿಲೋ‌ ಮೀಟರ್ ಡಬಲ್ ಡೆಕ್ಕರ್ ಮಾಡ್ತಿದ್ದೇವೆ.‌ ಇದೆಲ್ಲವನ್ನ ಮಾಡ್ತಿರೋದು ಟ್ರಾಫಿಕ್ ಕಂಟ್ರೋಲ್‌ಗೆ ಅಲ್ವಾ? ವಾಹನ ದಟ್ಟಣೆ ಟ್ರಾಫಿಕ್ ಎಲ್ಲವೂ ಬೆಂಗಳೂರು ಪ್ರಗತಿಯ ಜೊತೆ ಇರುತ್ತೆ ಅಲ್ವಾ? ಸಮಸ್ಯೆ ಇರೋದನ್ನ ಇದೆ ಅನ್ನೋದು ತಪ್ಪಾ. ಪರಿಹರಿಸೋದು ತಪ್ಪಾ? ಬಾಂಬೆ, ಡೆಲ್ಲಿ, ಚೆನ್ನೈ, ಪುಣೆಯಲ್ಲಿ‌ ಏನೂ ಸಮಸ್ಯೆ ಇಲ್ಲವಾ‌? ಸಮಸ್ಯೆ ಗುರುತಿಸಿ ಪರಿಹಾರ ಕೊಡಬೇಕು ಅಲ್ವಾ ಎಂದು ತಿರುಗೇಟು ನೀಡಿದ್ದಾರೆ.

    ಶಾಸಕ ವೀರೇಂದ್ರ ಪಪ್ಪಿಯಿಂದ ಬಿಹಾರ ಎಲೆಕ್ಷನ್‌ಗೆ ಹಣ ಕಲೆಕ್ಷನ್ ನಡೆಯುತ್ತಿತ್ತು ಎಂಬ ಬಿಜೆಪಿ-ಜೆಡಿಎಸ್ ಆರೋಪ ವಿಚಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಅಶೋಕ್ 100 ಕೋಟಿ ಕೊಟ್ಟಿದ್ದಾರೆ. ಇದನ್ನ ನೀವು ಹಾಕ್ತೀರಾ? ವಿಜಯೇಂದ್ರ ದುಬೈಗೆ ಹೋಗಿ ಬರ್ತಾರೆ. ವಿಜಯೇಂದ್ರ, ಅಮಿತ್ ಶಾಗೆ ಬಿಟ್‌ಕಾಯಿನ್ ಕೊಟ್ಟಿದ್ದಾರೆ ಅಂದ್ರೆ ನೀವು ನಂಬುತ್ತೀರಾ? ಸಿಎಂ ಆಗಿ ಬರಬೇಕು ಅಂದ್ರೆ ಸುಮ್ಮನೇನಾ? ಕಪ್ಪ ಕೊಡಬೇಕು ಅಂತ ಯಡಿಯೂರಪ್ಪ ಅನಂತ್ ಕುಮಾರ್ ಕಿವಿಯಲ್ಲಿ ಹೇಳಿಲ್ವಾ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಜೊತೆಗಿನ ಫೋಟೊ ಶೇರ್ – ರಾಜಕೀಯ ಎಂಟ್ರಿಗೆ ಸಿದ್ದರಾಮಯ್ಯ ಮೊಮ್ಮಗ ಸಿದ್ಧತೆ?

    ಆರ್.ಅಶೋಕ್, ವಿಜಯೇಂದ್ರ ದುಡ್ಡು ಕೊಟ್ಟು ಅವರ ಸ್ಥಾನ ಉಳಿಸಿಕೊಂಡಿದ್ದಾರೆ. ನಾನೂ ಈ ರೀತಿ ಹೇಳಬಹುದು ಅಲ್ವಾ? ಇದು ಅವರ ಪಾರ್ಟಿ ವಿಚಾರ‌. ಇಡಿ ಯಾರ ಕೈಯಲ್ಲಿ ಇದೆ? ಕೇಂದ್ರದ ಕೈಯಲ್ಲಿ ಅಲ್ವಾ? ಅಮಿತ್‌ ಶಾರಿಂದ ದಾಖಲೆ ತರಿಸಲಿ. ಸುಮ್ಮನೆ ಚಪಲಕ್ಕೆ ಮಾತಾಡುವುದಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ ಎಂದು ಕಿಡಿಕಾರಿದ್ದಾರೆ.

  • ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

    ಯತ್ನಾಳ್‌ ಉಚ್ಛಾಟನೆ ಬೆನ್ನಲ್ಲೇ ಬಿಜೆಪಿಯ ಮತ್ತೊಬ್ಬ ಮುಖಂಡ ರಾಜೀನಾಮೆ – ಬೆಂಬಲಿಗರಿಂದ ಪ್ರತಿಭಟನೆಗೆ ಸಜ್ಜು!

    – ಉಚ್ಛಾಟನೆ ಬೆನ್ನಲ್ಲೇ ಕಲಬುರಗಿಗೆ ಯತ್ನಾಳ್‌ ನೇರ ಭೇಟಿ

    ವಿಜಯಪುರ: ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೇರಿದಂತೆ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಿದ ಬೆನ್ನಲ್ಲೇ ಇಂದು ಜಿಲ್ಲಾ ಕಾರ್ಯದರ್ಶಿ ಸಿದ್ದು ಹೆಬ್ಬಾಳ ಸಹ ರಾಜೀನಾಮೆ ನೀಡಿದ್ದಾರೆ.

    ಹಿಂದೂ ಫೈರ್‌ಬ್ರಾಂಡ್, ಹಿಂದೂತ್ವದ ಗಟ್ಟಿಧ್ವನಿಯ ಉಚ್ಛಾಟನೆಯನ್ನ ಖಂಡಿಸುತ್ತೇವೆ ಎಂದಿರುವ ಸಿದ್ದು ಹೆಬ್ಬಾಳ ಅವರು, ರಾಜೀನಾಮೆ ಪತ್ರ ಬರೆದು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ರವಾನಿಸಿದ್ದಾರೆ. ಇದನ್ನೂ ಓದಿ: ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

    ಪ್ರತಿಭಟನೆಗೆ ಸಜ್ಜು:
    ಇನ್ನೂ ಯತ್ನಾಳ್‌ ಅವರ ಉಚ್ಛಾಟನೆ ಮಾಡಿರುವ ಹೈಕಮಾಂಡ್‌ ನಿರ್ಧಾರವನ್ನು ತೀವ್ರವಾಗಿ ಖಂಡಿಸಿರುವ ಯತ್ನಾಳ್‌ ಬೆಂಬಲಿಗರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪ್ರತಿಭಟನೆ ಬಳಿಕ ಸಭೆ ಸೇರಿ ಮುಂದಿನ ಹೋರಾಟದ ಬಗ್ಗೆಯೂ ಚರ್ಚೆ ನಡೆಸುವುದಕ್ಕೂ ತಯಾರಿ ಮಾಡಿಕೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯತ್ನಾಳ್‌ ಉಚ್ಛಾಟನೆ – ವಿಜಯಪುರದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು

    ಯತ್ನಾಳ್‌ ಎಲ್ಲಿದ್ದಾರೆ?
    ಇಂದು ಬೆಳಗ್ಗೆ ಹೈದ್ರಾಬಾದ್ ಮೂಲಕ ಕಲಬುರಗಿಯ ಚಿಂಚೋಳಿಗೆ ಆಗಮಿಸಿರುವ ಯತ್ನಾಳ್‌, ತಮ್ಮ ಒಡೆತನದ ಎಥೆನಾಲ್ ಕಾರ್ಖಾನೆಯ ಗೇಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದನ್ನೂ ಓದಿ: 2ನೇ ಬಾರಿ ಬಿಜೆಪಿಯಿಂದ ಯತ್ನಾಳ್‌ ಉಚ್ಛಾಟನೆ

  • ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

    ಯತ್ನಾಳ್ ಉಚ್ಚಾಟನೆ ಬೆನ್ನಲ್ಲೇ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರು

    – `ಐ ಸ್ಟಾಂಡ್ ವಿಥ್ ಯತ್ನಾಳ್’ ರಾಜೀನಾಮೆ ಪತ್ರ ರವಾನೆ

    ವಿಜಯಪುರ: ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಉಚ್ಚಾಟನೆ ಬೆನ್ನಲ್ಲೇ ವಿಜಯಪುರ (Vijayapura) ಜಿಲ್ಲಾ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಜಿಲ್ಲಾ ಬಿಜೆಪಿ ನಗರ ಮಂಡಲ ಅಧ್ಯಕ್ಷ ಸೇರಿದಂತೆ ಅನೇಕ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ.

    ಶಾಸಕ ಯತ್ನಾಳ್ ಅಭಿವೃದ್ಧಿ ಹರಿಕಾರ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ಮಾತನಾಡಿದ್ದು ತಪ್ಪಾ? ಯತ್ನಾಳ್ ಉಚ್ಚಾಟನೆ ಈ ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ನಾಳೆ ಅನೇಕರು ಸೇರಿ ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ ಎಂದು ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ್ ‘ಪಬ್ಲಿಕ್ ಟಿವಿ’ಗೆ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಾತಿ ಕೇಳಿ, ಮತ ಬ್ಯಾಂಕಿನಡಿ ಮಣೆ ಹಾಕುವುದು ಕಾಂಗ್ರೆಸ್ಸಿನ ನೀತಿ, ಮೋದಿ ನೀತಿಯಲ್ಲ: ಈದ್ ಕಿಟ್ ಟೀಕೆಗೆ ಸಿ.ಟಿ.ರವಿ ಟಕ್ಕರ್

    ಜಿಲ್ಲಾ ಬಿಜೆಪಿ ನಗರ ಒಬಿಸಿ ಮೋರ್ಚಾ ಉಪಾಧ್ಯಕ್ಷ ಭೀಮು ಮಾಶ್ಯಾಳ್ ಹಾಗೂ ನಗರ ಮಂಡಳ ಅಧ್ಯಕ್ಷ ಶಂಕರ್ ಹೂಗಾರ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದರು. ಬಿಜೆಪಿ ನಗರ ಮಂಡಲ ರೈತ ಮೋರ್ಚಾ ಅಧ್ಯಕ್ಷ ರಾಚು ಬಿರಾದಾರ್ ಕೂಡ ರಾಜೀನಾಮೆ ನೀಡಿದ್ದು, `ಐ ಸ್ಟಾಂಡ್ ವಿಥ್ ಯತ್ನಾಳ್’ ಎಂದು ರಾಜೀನಾಮೆ ಪತ್ರ ಬರೆದು ವಾಟ್ಸಪ್‌ನಲ್ಲಿ ರವಾನಿಸಿದ್ದರು. ಇದನ್ನೂ ಓದಿ: ಬಿಜೆಪಿ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ – ಯತ್ನಾಳ್ ಉಚ್ಛಾಟನೆ, ಮುಂದೇನು?

  • ಕಾರಿಗೆ ಟ್ರಕ್‌ ಡಿಕ್ಕಿ – ಕಾರಿನಲ್ಲಿದ್ದ ಇಬ್ಬರು ಬಿಜೆಪಿ ನಾಯಕರು ಸಾವು

    ಕಾರಿಗೆ ಟ್ರಕ್‌ ಡಿಕ್ಕಿ – ಕಾರಿನಲ್ಲಿದ್ದ ಇಬ್ಬರು ಬಿಜೆಪಿ ನಾಯಕರು ಸಾವು

    ಭುವನೇಶ್ವರ: ಕಾರಿಗೆ ಟ್ರಕ್‌ ಡಿಕ್ಕಿ ಹೊಡೆದು, ಕಾರಿನಲ್ಲಿದ್ದ ಇಬ್ಬರು ಬಿಜೆಪಿ ನಾಯಕರು ಸಾವಿಗೀಡಾಗಿರುವ ಘಟನೆ ಒಡಿಶಾದ (Odisha) ಸಂಬಲ್‌ಪುರ್ ಜಿಲ್ಲೆಯಲ್ಲಿ ನಡೆದಿದೆ.

    ಮೃತರನ್ನು ದೇಬೇಂದ್ರ ನಾಯಕ್ ಮತ್ತು ಮುರಳೀಧರ್ ಚುರಿಯಾ ಎಂದು ಗುರುತಿಸಲಾಗಿದೆ. ನಾಯಕ್ ಬಿಜೆಪಿಯ ಗೋಶಾಲಾ ಮಂಡಲ ಅಧ್ಯಕ್ಷರಾಗಿದ್ದರೆ, ಚುರಿಯಾ ಮಾಜಿ ಸರಪಂಚ್ ಆಗಿದ್ದರು. ಇವರಿಬ್ಬರೂ ಬಿಜೆಪಿಯ ಹಿರಿಯ ನಾಯಕಿ ನೌರಿ ನಾಯ್ಕ್‌ಗೆ ಆಪ್ತರಾಗಿದ್ದರು. ಇದನ್ನೂ ಓದಿ: ಗುಜರಾತ್‌ನ ಪೋರಬಂದರ್‌ನಲ್ಲಿ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ, 3 ಸಾವು

    ಬುರ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಎನ್‌ಎಚ್ 53ನಲ್ಲಿ ಮುಂಜಾನೆ 1:30 ರ ಸುಮಾರಿಗೆ ಈ ಘಟನೆ ನಡೆದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಆರು ಜನರಿದ್ದರು. ಭುವನೇಶ್ವರದಿಂದ ಕಾರ್ಡೋಲಾದಲ್ಲಿ ಮನೆಗೆ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಎಲ್ಲಾ ಆರು ಜನರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಗಾಯಾಳುಗಳು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಭದ್ರತಾ ಪಡೆ ಗುಂಡಿನ ದಾಳಿಗೆ ನಾಲ್ವರು ಮಾವೋವಾದಿಗಳು ಬಲಿ – ಓರ್ವ ಸಿಬ್ಬಂದಿ ಸಾವು

    ವಾಹನವು ನಮ್ಮ ಕಾರಿಗೆ ಎರಡು ಬಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಯಾರೋ ಉದ್ದೇಶಪೂರ್ವಕವಾಗಿ ನಮ್ಮ ವಾಹನವನ್ನು ಡಿಕ್ಕಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಶಂಕಿಸಿದ ಚಾಲಕ, ಕಾಂತಪಲ್ಲಿ ಚೌಕದ ಬಳಿ ಹೆದ್ದಾರಿಯಿಂದ ಗ್ರಾಮಾಂತರ ರಸ್ತೆಯ ಕಡೆಗೆ ಕಾರನ್ನು ತಿರುಗಿಸಿದನು. ಟ್ರಕ್‌ ಚಾಲಕ ನಮ್ಮ ವಾಹನವನ್ನು ಹಿಂಬಾಲಿಸಿದ. ಈ ವೇಳೆ ಕಾರು ಪಲ್ಟಿಯಾಯಿತು. ಹೆದ್ದಾರಿಯಲ್ಲಿ ನಮ್ಮ ಕಾರಿಗೆ ಟ್ರಕ್‌ ಚಾಲಕ ಮೂರನೇ ಬಾರಿ ಡಿಕ್ಕಿ ಹೊಡೆದಾಗ ನನಗೆ ಪ್ರಜ್ಞೆಯೇ ತಪ್ಪಿತು ಎಂದು ಅಪಘಾತದಲ್ಲಿ ಗಾಯಗೊಂಡ ಸುರೇಶ ಚಂದಾ ತಿಳಿಸಿದ್ದಾರೆ.

    ಯಾರೋ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿದ್ದಾರೆ ಎಂದು ನನಗೆ ಖಾತ್ರಿಯಿದೆ. ತಪ್ಪಾಗಿ ಒಮ್ಮೆ ವಾಹನಕ್ಕೆ ಡಿಕ್ಕಿ ಹೊಡೆಯಬಹುದು. ಯಾರದರು ಹಿಂದಿನಿಂದ ಮೂರು ಬಾರಿ ಡಿಕ್ಕಿ ಹೊಡೆಯುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಗಾಯಾಳುಗಳನ್ನು ಭೇಟಿ ಮಾಡಿದ ನಂತರ ಮಾಜಿ ಶಾಸಕ ರೆಂಗಾಳಿ ನಾಯ್ಕ್ ಮಾತನಾಡಿ, ಇದು ಅಪಘಾತವಲ್ಲ, ಉದ್ದೇಶಪೂರ್ವಕ ಯಾರೋ ಪಿತೂರಿ ಮಾಡಿದ್ದಾರೆಂದು ಆರೋಪಿಸಿದ್ದಾರೆ.

  • ವಕ್ಫ್ ಆಸ್ತಿ ಅಕ್ರಮ ವರದಿ ಮಂಡನೆಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರ ಆಗ್ರಹ

    ವಕ್ಫ್ ಆಸ್ತಿ ಅಕ್ರಮ ವರದಿ ಮಂಡನೆಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರ ಆಗ್ರಹ

    ಬೆಂಗಳೂರು: ವಕ್ಫ್ ಆಸ್ತಿ (Waqf Board) ಕಬಳಿಕೆ ಪ್ರಕರಣ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಿ ಆಡಳಿತ ಪಕ್ಷದ ಸದಸ್ಯರೇ ಸದನದಲ್ಲಿ ಆಗ್ರಹಿಸಿ ಗದ್ದಲವೆಬ್ಬಿಸಿದ ಘಟನೆ ಇಂದು ವಿಧಾನ ಪರಿಷತ್ (Legislative Council) ಕಲಾಪದಲ್ಲಿ ನಡೆಯಿತು.

    ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ (Raghupati rao Malkapure) ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು. ಈ ವೇಳೆ ಸದನದಲ್ಲಿ ದಿಢೀರ್ ಎದ್ದು ನಿಂತ ಬಿಜೆಪಿಯ ಸದಸ್ಯ ಸಚೇತಕ ನಾರಾಯಣಸ್ವಾಮಿ, ವಕ್ಫ್ ಆಸ್ತಿ ಕಬಳಿಕೆ ಕುರಿತ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಸಬರ್ಬನ್ ರೈಲ್ವೇ ಯೋಜನೆಗೆ ದಿ.ಅನಂತ್ ಕುಮಾರ್ ಹೆಸರು: ಸೋಮಣ್ಣ

    ವರದಿ ಸಲ್ಲಿಸಿ ಎರಡು ವರ್ಷವಾಗಿದೆ. ಆ ವರದಿ ಸದನದಲ್ಲಿ ಮಂಡಿಸುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದರು. ಇದಕ್ಕೆ ಬಿಜೆಪಿಯ ಸದಸ್ಯರಾದ ರವಿಕುಮಾರ್, ತೇಜಸ್ವಿನಿಗೌಡ ಸೇರಿದಂತೆ ಇತರ ಕೆಲ ಸದಸ್ಯರು ಸಾತ್ ನೀಡಿದರು. ಕೂಡಲೇ ವರದಿಯನ್ನು ಕಂದಾಯ ಸಚಿವರು ಮಂಡಿಸಬೇಕು ಎಂದು ಒತ್ತಾಯಿಸಿದರು.

    ಈ ವೇಳೆ ಮಾತನಾಡಿದ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ, ವಿರೋಧ ಪಕ್ಷದ ಕೆಲಸ ನೀವೇ ಮಾಡಿದರೆ ಅವರೇನು ಮಾಡಬೇಕು? ಆಡಳಿತ ಪಕ್ಷದ ಸದಸ್ಯರಾಗಿ ನೀವೇ ಹೀಗೆ ಮಾಡಿದರೆ ಹೇಗೆ? ಒಬ್ಬೊಬ್ಬರಾಗಿ ಮಾತನಾಡಿ ಎಂದರು.

    ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷ ನಾಯಕ ಹರಿಪ್ರಸಾದ್ (Hariprasad) ಮಾತನಾಡಿ, ಸರ್ಕಾರ ಅವರದ್ದೇ. ಯಾರು ತನಿಖೆ ಮಾಡುವುದು ಬೇಡ ಎಂದಿದ್ದಾರೆ. ಆದರೆ ಮೊದಲು ಪ್ರಶ್ನೋತ್ತರ ತೆಗೆದುಕೊಳ್ಳಿ ನಂತರ ಅವರ ಮಾತು ಆಲಿಸಿ ಎಂದರು. ಆಡಳಿತ ಪಕ್ಷದ ಸದಸ್ಯರ ಮಾತಿಗೆ ಅವಕಾಶ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಸರ್ಕಾರಿ ಜಮೀನು ಅಕ್ರಮವಾಗಿ ಒತ್ತುವರಿಯಾಗಿದೆ – ಒಪ್ಪಿಕೊಂಡ ಸರ್ಕಾರ

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾಪತಿಗಳು, ನಮ್ಮ ಕಾರ್ಯ ಪದ್ದತಿ ಪ್ರಕಾರ ಪ್ರಶ್ನೋತ್ತರ ತೆಗೆದುಕೊಳ್ಳಲಿದ್ದೇವೆ. ನೀವು ಯಾವುದೇ ನೋಟಿಸ್ ಕೂಡ ನೀಡಿಲ್ಲ ಎಂದು ಬಿಜೆಪಿ ಸದಸ್ಯರಿಗೆ ಸೂಚಿಸಿ ಪ್ರಶ್ನೋತ್ತರ ಕಲಾಪ ಆರಂಭಿಸಲು ಮುಂದಾದರು. ಆದರೂ ಇದಕ್ಕೆ ಅವಕಾಶ ನೀಡದೆ ಬಿಜೆಪಿ ಸದಸ್ಯ ರವಿಕುಮಾರ್, ಪ್ರಾಣೇಶ, ನಾರಾಯಣಸ್ವಾಮಿ, ತೇಜಸ್ವಿನಿಗೌಡ ವರದಿ ಮಂಡಿಸಲು ಸರ್ಕಾರದಕ್ಕೆ ಆದೇಶ ಮಾಡಿ ಎಂದು ಆಗ್ರಹಿಸಿದರು.

    ಈ ವೇಳೆ ಮಾತನಾಡಿದ ಹರಿಪ್ರಸಾದ್, ಸರ್ಕಾರವೇ ಅಲ್ಲಿ ಇಲ್ಲ ಅದಕ್ಕೆ ನೀವು ಹೇಳುತ್ತಿದ್ದೀರಿ. ನಿಮಗೆ ಧಮ್ಮು ತಾಕತ್ತು ಇಲ್ಲ. ಧಮ್ಮಿರುವುದು 40 ಪರ್ಸೆಂಟ್‌ಗೆ ಮಾತ್ರ. ವಕ್ಫ್ ಬೋರ್ಡ್‌ನಲ್ಲಿ ಇವರಿಗೆ 40 ಪರ್ಸೆಂಟ್ ಸಿಕ್ಕಿಲ್ಲ. ಅದಕ್ಕೆ ಈಗ ಈ ರೀತಿ ಮಾಡುತ್ತಿದ್ದಾರೆ ಎಂದರು.

    ಇದಕ್ಕೆ ಟಾಂಗ್ ನೀಡಿದ ಸರ್ಕಾರಿ ಮುಖ್ಯ ಸಚೇತಕ ನಾರಾಯಣಸ್ವಾಮಿ, ನಿಮ್ಮದು 85 ಪರ್ಸೆಂಟ್ ಸರ್ಕಾರ. ರಾಜೀವ್ ಗಾಂಧಿಯೇ ಹೇಳಿದ್ದರು ಎನ್ನುವುದನ್ನು ಉಲ್ಲೇಖಿಸಿದರು.‌ ಈ ವೇಳೆ ಬಿಜೆಪಿ ಸದಸ್ಯರಾದ ತೇಜಸ್ವಿನಿ, ರವಿಕುಮಾರ್ ಯಾವಾಗ ವರದಿ ಮಂಡಿಸುತ್ತೀರಾ ಅಂತ ಸರ್ಕಾರದಿಂದ ಭರವಸೆ ಕೊಡಿಸಿ ಎಂದರು. ಇದನ್ನೂ ಓದಿ: ಕಾಂಗ್ರೆಸ್ ವಿರೋಧ ಪಕ್ಷ ಆಗಿರಲು ನಾಲಾಯಕ್: ನಳಿನ್ ಕುಮಾರ್ ಕಟೀಲ್

    ಈ ವೇಳೆ ಪ್ರಶ್ನೋತ್ತರ ಕಲಾಪವನ್ನು ಆರಂಭಿಸಲಾಯಿತು. ಆದರೆ ಪ್ರಶ್ನೆಯೇ ಕೇಳಿಸದಂತೆ ಬಿಜೆಪಿ ಸದಸ್ಯರು ಗದ್ದಲ ಮಾಡಿದ್ದರಿಂದ ಕುಪಿತರಾದ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಇದೇನು ಮಾರುಕಟ್ಟೆಯಾ? ಇವರನ್ನು ಕೂರಿಸಿ ಎಂದರು. ಗದ್ದಲ ಹೆಚ್ಚಾಗಿದ್ದರಿಂದ ಸದನದಕ್ಕೆ ಮಾಹಿತಿ ನೀಡಲು ಎದ್ದುನಿಂತ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ (Shashikala jolle) ಮಾಣಿಪ್ಪಾಡಿ ವರದಿ ಕುರಿತು ಮಾತು ಆರಂಭಿಸಿದರು. ಆದರೆ ಇದಕ್ಕೆ ಸಚಿವ ಅಶ್ವತ್ಥ ನಾರಾಯಣ (Ashwath Narayan) ಬೇಡವೆಂದು ಸೂಚಿಸಿದ್ದರಿಂದ ಉತ್ತರ ಮೊಟಕುಗೊಳಿಸಿದರು. ನಂತರ ಸಭಾಪತಿ ಪ್ರಶ್ನೋತ್ತರ ಕಲಾಪ ಆರಂಭಿಸಿ ಗದ್ದಲಕ್ಕೆ ತೆರೆ ಎಳೆದರು.

    Live Tv
    [brid partner=56869869 player=32851 video=960834 autoplay=true]

  • ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್

    ಬಾಬರಿ ಮಸೀದಿ ಧ್ವಂಸ ಪ್ರಕರಣ; ನ್ಯಾಯಂಗ ನಿಂದನೆ ಪ್ರಕರಣ ಕೈಬಿಟ್ಟ ಸುಪ್ರೀಂ – BJP ನಾಯಕರಿಗೆ ಬಿಗ್ ರಿಲೀಫ್

    ನವದೆಹಲಿ: 1992ರ ಬಾಬರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನ್ಯಾಯಂಗ ನಿಂದನೆಯ ಎಲ್ಲ ಅರ್ಜಿಗಳನ್ನು ವಿಚಾರಣೆಯಿಂದ ಸುಪ್ರೀಂ ಕೋರ್ಟ್ ಕೈಬಿಟ್ಟಿದೆ. ಇಂದು ಈ ಬಗ್ಗೆ ಮಹತ್ವದ ತೀರ್ಪು ನೀಡಿದ ನ್ಯಾಯಾಲಯ ರಾಮ ಮಂದಿರಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಪ್ರಕಟವಾಗಿರುವ ಹಿನ್ನೆಲೆ ಈ ಎಲ್ಲ ಅರ್ಜಿಗಳು ಅಪ್ರಸುತ್ತ ಎಂದು ಹೇಳಿದೆ.

    ಬಾಬರಿ ಮಸೀದಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು. ಅದನ್ನು ನೆಲಸಮಗೊಳಿಸಬೇಡಿ ಎಂದು 1991ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ಆದೇಶ ರಾಜ್ಯ ಸರ್ಕಾರ, ಅಧಿಕಾರಿಗಳು, ರಾಜಕಾರಣಿಗಳು ಎಲ್ಲರಿಗೂ ಅನ್ವಯ ಆಗಿತ್ತು. ಈ ಆದೇಶ ಬಳಿಕ 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಲಾಗಿತ್ತು. ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ಮಹಿಳೆಯೊಂದಿಗೆ ಚಕ್ಕಂದ – ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ASI

    ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಹಿನ್ನೆಲೆ ಮುಹಮ್ಮದ್ ಅಸ್ಲಾಮ್ ಭುರೆ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಮಾಜಿ ಸಿಎಂ ಕಲ್ಯಾಣ ಸಿಂಗ್, ಬಿಜೆಪಿ ನಾಯಕರಾದ ಎಲ್‌.ಕೆ ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಹಲವು ನಾಯಕರ ವಿರುದ್ಧ ನ್ಯಾಯಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

    ಅರ್ಜಿದಾರ ಮಹಮ್ಮದ್ ಅಸ್ಲಾಮ್ 2010ರಲ್ಲಿ ಮೃತಪಟ್ಟ ಹಿನ್ನೆಲೆ ಈ ಅರ್ಜಿ ಹೆಚ್ಚು ವಿಚಾರಣೆಗೆ ಬಂದಿರಲಿಲ್ಲ. 2019ರಲ್ಲಿ ಅಯೋಧ್ಯೆ ವಿವಾದಿತ ಜಮೀನಿನ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇಂದು ಈ ಅರ್ಜಿ ಇತ್ಯರ್ಥಪಡಿಸಿದ ಕೋರ್ಟ್, ಪ್ರಕರಣ ಸಂಪೂರ್ಣ ಇತ್ಯರ್ಥವಾಗಿರುವ ಹಿನ್ನೆಲೆ ವಿಚಾರಣೆ ಅಗತ್ಯವಿಲ್ಲ. ಮುಖ್ಯ ಅರ್ಜಿ ವಿಚಾರಣೆ ವೇಳೆ ಈ ಬಗ್ಗೆ ಪ್ರಸ್ತಾಪಿಸಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿತು‌. ಇದನ್ನೂ ಓದಿ: ವರದಕ್ಷಿಣೆಗಾಗಿ ಸೊಸೆಯನ್ನು ಹೊರಹಾಕಿದವರ ಮನೆ ಮುಂದೆ ಘರ್ಜಿಸಿತು ಬುಲ್ಡೋಜರ್‌ – ಮುಂದೇನಾಯ್ತು?

    ಈಗ ಈ ಕೇಸುಗಳ ಪ್ರಸ್ತುತತೆ ಇಲ್ಲದ ಕಾರಣ ಎಲ್ಲ ನ್ಯಾಯಾಂಗ ನಿಂದನೆ ಕೇಸುಗಳನ್ನು ಕೈಬಿಡುತ್ತಿದ್ದೇವೆ ಎಂದು ಕೋರ್ಟ್ ಆದೇಶಿಸಿತು. ಸುಪ್ರೀಂ ಕೋರ್ಟ್‌ನ ಈ ಆದೇಶದಿಂದಾಗಿ ಎಲ್‌.ಕೆ.ಅಡ್ವಾಣಿ, ಮುರುಳಿ ಮನೋಹರ್ ಜೋಶಿ, ಉಮಾ ಭಾರತಿ ಸೇರಿದಂತೆ ಬಿಜೆಪಿಯ ಹಲವು ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

    ಜೆಡಿಎಸ್ ಅನ್ನು ರಾಜಕೀಯವಾಗಿ 1 ಕಿ.ಮೀ, 1 ಮೀಟರ್ ದೂರ ಇಡಬೇಕು: ಪ್ರೀತಂಗೌಡ

    – ಆರ್‌ಎಸ್‌ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ

    ಹಾಸನ: ಅಧಿಕಾರಕ್ಕಾಗಿ ಜೆಡಿಎಸ್ ಜೊತೆ ರಾಜಿಯಾಗಿ, ಅವರ ಮುಲಾಜಿಗೆ ಒಳಗಾಗಿ ಅವರು ಹೇಳಿದ್ದನ್ನೆಲ್ಲಾ, ಕೇಳುವಂತಹ ಪರಿಸ್ಥಿತಿ ನಮ್ಮ ಪಕ್ಷಕ್ಕೆ ಆಗಲಿ, ನಾಯಕರಿಗಾಗಲಿ, ಸಂಘಟನೆಗಾಗಲಿ ಬರಬಾರದು ಎನ್ನುವುದು ನನ್ನ ದಿಟ್ಟ ನಿಲುವು ಎಂದು ಶಾಸಕ ಪ್ರೀತಂಗೌಡ ಸ್ವಪಕ್ಷದ ನಾಯಕರಿಗೇ ಕಿವಿಮಾತು ಹೇಳಿದ್ದಾರೆ.

    ಆರ್‌ಎಸ್‌ಎಸ್ ಬಗ್ಗೆ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಟೀಕೆ ಮಾಡಿರುವ ವಿಚಾರಕ್ಕೆ ಹಾಸನದಲ್ಲಿ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ದೇಶವನ್ನು ಕಟ್ಟಲು ಯುವಕರನ್ನು ಬೆಳೆಸುವ ಕಾರ್ಖಾನೆ. ದೇಶ ಕಟ್ಟುವುದೇ ತಪ್ಪು ಎನ್ನುವುದಾದರೆ ಸಾರ್ವಜನಿಕರು ಯೋಚನೆ ಮಾಡಬೇಕಾದ ಸಮಯ ಇದು. ಇದರಲ್ಲಿ ಯಾರ್ಯಾರ ಮನಸ್ಥಿತಿ ಏನು ಎಂಬುದು ಗೊತ್ತಾಗುತ್ತೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ:  ನಿಮ್ಮ ಪಕ್ಷದ ಫ್ಯಾಮಿಲಿ ಬ್ಯುಸಿನೆಸ್‍ಗೆ ಸಂಘದಲ್ಲಿಯೇ ತರಬೇತಿ ನೀಡಲಾಗ್ತಿದೆಯೇ: ಕಟೀಲ್‍ಗೆ ಹೆಚ್.ಕೆ.ಕುಮಾರಸ್ವಾಮಿ ಪ್ರಶ್ನೆ

    ಇದೇ ವೇಳೆ ಮುಖ್ಯಮಂತ್ರಿ ಸೇರಿದಂತೆ ಸ್ವಪಕ್ಷದ ಕೆಲವು ನಾಯಕರು ಜೆಡಿಎಸ್ ಜೊತೆ ಸಾಫ್ಟ್ ಕಾರ್ನರ್ ಹೊಂದಿರುವ ಬಗ್ಗೆಯೂ ವಿರೋಧಿಸಿದ ಅವರು, ಬಿಜೆಪಿ ಯಾವುದೋ ಒಂದು ಭಾಗದಲ್ಲಿ ಅಧಿಕಾರ ಹಿಡಿಯಲು ಸಾಫ್ಟ್ ಕಾರ್ನರ್ ತೋರಿಸಿದೆ. ಜೆಡಿಎಸ್ ಅನ್ನು ರಾಜಕೀಯವಾಗಿ ಒಂದು ಮೈಲಿ, ಒಂದು ಕಿಲೋಮೀಟರ್, ಒಂದು ಮೀಟರ್ ದೂರ ಇಡಬೇಕು. ನಮ್ಮನ್ನು ಬಳಸಿಕೊಂಡು ಅವರ ಬೇಳೆಯನ್ನು ಬೇಯಿಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

    ಕಲಬುರಗಿಯಲ್ಲಿ ಅಧಿಕಾರ ಹಿಡಿಯಲು ಅವರನ್ನು ಓಲೈಕೆ ಮಾಡಲು ಹೋದ್ರೆ ನಮ್ಮ ಬುಡಕ್ಕೆ ಬರುತ್ತೆ. ಅಧಿಕಾರ ಹಿಡಿಯಲು ಐದಲ್ಲ ಹತ್ತು ವರ್ಷ ಕಾಯೋಣ. ನಮ್ಮ ರಾಜ್ಯ ನಾಯಕರು, ರಾಜ್ಯಾಧ್ಯಕ್ಷರು, ಮಂತ್ರಿಗಳು, ಮುಖ್ಯಮಂತ್ರಿಗಳು ಯಾವ್ಯಾವ ಸಂದರ್ಭದಲ್ಲಿ ಜೆಡಿಎಸ್ ಬಗ್ಗೆ ಮೃದು ಧೋರಣೆ ತೋರಿದ್ದರು ಅವರಿಗೆ ಕುಮಾರಸ್ವಾಮಿ ಅವರು ಒಂದು ಸಂದೇಶ ನೀಡಿದ್ದಾರೆ ಎಂದರು. ಇದನ್ನೂ ಓದಿ:  ರಾಷ್ಟ್ರೀಯ ಹಸಿರು ನ್ಯಾಯಾಲಯಕ್ಕೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಅಧಿಕಾರವಿದೆ: ಸುಪ್ರೀಂಕೋರ್ಟ್

    ಯಾವುದೋ ಹಾಸನ ಮುನ್ಸಿಪಾಲಿಟಿ ಅಧಿಕಾರಕ್ಕೋಸ್ಕರ ನಾನು ಹೊಂದಾಣಿಕೆ ರಾಜಕೀಯ ಮಾಡಲ್ಲ. ಜೆಡಿಎಸ್ ಅವರ ಮಿಷನ್ ಎಂದರೆ ಬಿಜೆಪಿ-ಕಾಂಗ್ರೆಸ್ ನೂರರ ಮೇಲೆ ಬರಬಾರದು. ಆಗ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳೋದು ಅವರ ಗುಣ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಬೇರೆಯವರು ಮಾತನಾಡಲ್ಲ, ಪ್ರೀತಂಗೌಡ ನೇರವಾಗಿ ಮಾತನಾಡುತ್ತಾನೆ ಎಂದು ಶಾಸಕರು ಕಿಡಿಕಾರಿದ್ದಾರೆ.

    ಆರ್‌ಎಸ್‌ಎಸ್  ಪರ, ವಿರುದ್ಧ ರಾಜಕೀಯ ನಾಯಕರ ಹೇಳಿಕೆಗಳಿಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

  • ನಮ್ಮ ಸರ್ಕಾರದಲ್ಲಿ ಬಿಜೆಪಿಗೆ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡ್ತೇವೆ – ಕಾಂಗ್ರೆಸ್

    ನಮ್ಮ ಸರ್ಕಾರದಲ್ಲಿ ಬಿಜೆಪಿಗೆ ನಾಯಕರಿಗೆ ಕಳಚಲಾಗದ ‘ಪ್ಯಾಂಟ್ ಭಾಗ್ಯ’ ನೀಡ್ತೇವೆ – ಕಾಂಗ್ರೆಸ್

    ಬೆಂಗಳೂರು: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ನಾಯಕರಿಗೆ ‘ಕಳಚಲಾಗದ ಪ್ಯಾಂಟ್’ ಭಾಗ್ಯ ನೀಡುತ್ತೇವೆ ಎಂದು ಕಾಂಗ್ರೆಸ್ ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರನ್ನು ವ್ಯಂಗ್ಯ ಮಾಡಿದೆ.

    ಸದನದಲ್ಲಿ ಸಿದ್ದರಾಮಯ್ಯನವರ ಪಂಚೆ ಆಕಸ್ಮಿಕವಾಗಿ ಕಳಚಿದೆ. ಆದರೆ ಬಿಜೆಪಿ ನಾಯಕರು ತಮ್ಮ ಪಂಚೆಯನ್ನು ಕಳಚುವುದು ಅಸಹ್ಯ, ಕಳಚಿದ ಪಂಚೆಯನ್ನು ತಾವೇ ವಿಡೀಯೊ ಮಾಡಿಕೊಳ್ಳವುದು ಹಾಗೂ ಸಿಡಿ ಬಿಡುಗಡೆಗೆ ಕೋರ್ಟ್‍ನಲ್ಲಿ ತಡೆಯಾಜ್ಞೆ ತರುವುದು ಇನ್ನೂ ಅಸಹ್ಯವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದೆ. ಇದನ್ನೂ ಓದಿ: ಹೆಲಿಕಾಪ್ಟರ್ ಲ್ಯಾಂಡಿಂಗ್‍ಗೆ ಅನುಮತಿ ಇಲ್ಲ- ಸಿದ್ದರಾಮಯ್ಯ ದಾವಣಗೆರೆ ಪ್ರವಾಸ ರದ್ದು

    ಪಂಚೆ ಈ ನೆಲದ ಸಂಸ್ಕøತಿಯ ಪ್ರತೀಕ, ಶ್ರಮಜೀವಿಗಳ ಸಂಗಾತಿ, ಪಂಚೆ ಕಳಚುವುದು ಎತ್ತಿ ಕಟ್ಟುವುದೂ ಸಹಜ, ಅದೇ ಕರುನಾಡ ಮಣ್ಣಿನ ಮಕ್ಕಳ ಗತ್ತು. ಕಂಡ ಕಂಡಲ್ಲಿ ತಮ್ಮ ಪ್ಯಾಂಟ್ ಕಳಚಿ ಸಿಡಿ ಮಾಡಿಕೊಳ್ಳುವ ಬಿಜೆಪಿ ನಾಯಕರಿಗೆ, ಅವರ ಪಂಚೆಯ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೊದಲು ತಮ್ಮ ಚಡ್ಡಿಯ ಲಾಡಿ ಭದ್ರಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ಹೇಳಿದೆ. ಇದನ್ನೂ ಓದಿ: ಪಂಜಾಬ್ ಕಾಂಗ್ರೆಸ್‍ಗೆ ನಡುಕ- ಸಿಧು ಬೆನ್ನಲ್ಲೇ ನಾಲ್ವರು ರಾಜೀನಾಮೆ

    ಸಿಎಂ ಬೊಮ್ಮಾಯಿ ಅವರು ಅನೈತಿಕ ಪೆÇಲೀಸ್‍ಗಿರಿಯನ್ನು ಸಹಿಸುವುದಿಲ್ಲ ಎಂದಿದ್ದರು, ಆದರೆ ಸುರತ್ಕಲ್‍ನಲ್ಲಿ ಬಿಜೆಪಿಯ ಭಯೋತ್ಪಾದಕ ಪಡೆ ನಡೆಸಿದ ಅನೈತಿಕ ಪೆÇಲೀಸ್‍ಗಿರಿಯ ಬಗ್ಗೆ ತುಟಿ ಬಿಚ್ಚದೆ ಆರೋಪಿಗಳಿಗೆ ಸ್ಟೇಶನ್ ಬೇಲ್ ನೀಡಿ ತಕ್ಷಣವೇ ಬಿಟ್ಟು ಕಳಿಸಿದ್ದೇಕೆ? ರಾಜ್ಯವನ್ನು ತಾಲಿಬಾನಿಕರಣ ಮಾಡಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದೆ.

     

  • ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ ಉಗ್ರರು- ಬಲಿಯಾಗಿದ್ದು 3 ವರ್ಷದ ಕಂದಮ್ಮ

    ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ ಉಗ್ರರು- ಬಲಿಯಾಗಿದ್ದು 3 ವರ್ಷದ ಕಂದಮ್ಮ

    ಜಮ್ಮು ಕಾಶ್ಮೀರ: ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ ಭಯೋತ್ಪಾದಕರ ದಾಳಿಗೆ 3 ವರ್ಷದ ಕಂದ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ನಡೆದಿದೆ.

    ರಾಜೌರಿಯಲ್ಲಿ ಭಯೋತ್ಪಾದಕರು ಬಿಜೆಪಿ ನಾಯಕ ಜಸ್ಬೀರ್ ಸಿಂಗ್ ನಿವಾಸವನ್ನು ಟಾರ್ಗೆಟ್ ಮಾಡಿ ನಿನ್ನೆ ರಾತ್ರಿ ಗ್ರೆನೇಡ್ ಎಸೆದಿದ್ದಾರೆ. ಈ ದಾಳಿಯ ಪರಿಣಾಮ ಜಸ್ಬೀರ್ ಸಿಂಗ್ ಅವರ ಕುಟುಂಬದ ಏಳು ಮಂದಿ ಸದಸ್ಯರಿಗೆ ಗಾಯಗಳಾಗಿವೆ. ಆದರೆ ವೀರ್(3) ಮಗುವಿನ ಸ್ಥಿತಿ ಗಂಭೀರವಾಗಿದ್ದು, ರಾಜೌರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೀರ್ ಸಾವನ್ನಪ್ಪಿದ್ದಾನೆ. ಮಗುವಿನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

    ಶ್ರೀ ಸಿಂಗ್ ಅವರಿಗೂ ಗಾಯಗಳಾಗಿದ್ದು, ಸರಿಯಾಗಿ ಅವರಿಗೆ ಭದ್ರತೆಯನ್ನು ಕೊಟ್ಟಿಲ್ಲ. ಅದಕ್ಕೆ ಈ ರೀತಿ ಕೃತ್ಯ ಸಂಭವಿಸಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇದನ್ನೂ ಓದಿ: ತಾತನ ಮೃತದೇಹವನ್ನೇ ಫ್ರಿಡ್ಜ್‌ನಲ್ಲಿಟ್ಟ ಮೊಮ್ಮಗ – ಕಾರಣವೇನು ಗೊತ್ತಾ?

    ಬಿಜೆಪಿ ನಾಯಕರ ಮೇಲೆ ಭಯೋತ್ಪಾದಕ ದಾಳಿಗಳನ್ನು ಪಾಕಿಸ್ತಾನ ನಡೆಸುತ್ತಿದೆ. ಇದು ಹೇಡಿತನದ ಕೃತ್ಯ. ನಾವು ದಾಳಿಯನ್ನು ಖಂಡಿಸುತ್ತೇವೆ. ಅದಕ್ಕೆ ಕಾರಣರಾದ ಭಯೋತ್ಪಾದಕರನ್ನು ಪೊಲೀಸರು ತಕ್ಷಣವೇ ಬಂಧಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಆಗ್ರಹಿಸಿದ್ದಾರೆ.

    ಈ ಪ್ರಕರಣ ಕುರಿತು ಪರಿಣಾಮಕಾರಿಯಾಗಿ ತನಿಖೆ ಮಾಡುಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ಏಸು ಪ್ರತಿಮೆ ವಿವಾದ – ಜನವರಿ 13ಕ್ಕೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಡದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ವಿರೋಧಿಸಿ ಜನವರಿ 13ರಂದು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸುವುದಾಗಿ ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ರಾಮನಗರದಲ್ಲಿ ತಿಳಿಸಿದ್ದಾರೆ.

    ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಕ್ರಿಸ್ತನ ಪ್ರತಿಮೆ ಇದೀಗ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಈಗಾಗಲೇ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ವರದಿ ನೀಡುವಂತೆ ಸಹ ಸೂಚನೆ ನೀಡಲಾಗಿದೆ. ಇದೀಗ ದಿನದಿಂದ ದಿನಕ್ಕೆ ವಿವಾದ ರಂಗೇರುತ್ತಿದ್ದು ಬಿಜೆಪಿ ನಾಯಕರು ಬೆಟ್ಟಕ್ಕೆ ಭೇಟಿ ನೀಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

    ರಾಮನಗರದಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದರು. ನಗರದ ಕೆಂಪೇಗೌಡ ಸರ್ಕಲ್‍ನಿಂದ ಆರಂಭವಾದ ಜಾಗೃತಿ ಜಾಥಾ ಮೆರವಣಿಗೆ ಜೂನಿಯರ್ ಕಾಲೇಜ್ ಮೈದಾನದವರೆಗೆ ನಡೆಸಲಾಯಿತು. ಸಿಎಎ ಬೆಂಬಲದ ಅಭಿಯಾನದಲ್ಲಿ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ. ರುದ್ರೇಶ್ ಸೇರಿದಂತೆ ಹಲವರು ಭಾಗಿಯಾಗಿದ್ದರು.

    ಈ ವೇಳೆ ಮಾಜಿ ಸಚಿವ ಸಿ.ಪಿ ಯೋಗೇಶ್ವರ್‍ರವರು, ಕಪಾಲ ಬೆಟ್ಟ ಅರಣ್ಯ ಪ್ರದೇಶದಲ್ಲಿ ಬರುತ್ತೆ, ಅದು ಗೋಮಾಳದ ಜಮೀನು. ಅಲ್ಲಿ ಅನಧಿಕೃತವಾಗಿ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡ್ತಿರುವುದು ತಪ್ಪು ಎಂದರು. ಅಲ್ಲದೆ ಅನಧಿಕೃತವಾಗಿ ಪ್ರತಿಮೆ ನಿರ್ಮಾಣವಾಗುತ್ತಿರುವ ದೃಷ್ಟಿಯಿಂದ ಇದೇ ಜನವರಿ 13ರಂದು ಜಿಲ್ಲೆಯಾದ್ಯಂತ ಕಾರ್ಯಕ್ರಮ ರೂಪಿಸಿದ್ದೇವೆ. ಕಪಾಲ ಬೆಟ್ಟಕ್ಕೆ ಭೇಟಿ ನೀಡುತ್ತೇವೆ, ಕನಕಪುರದಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದರು.

    ನಾವು ಶಾಂತಿ ಪ್ರಿಯರಾಗಿದ್ದು, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇವೆ. ಕಪಾಲ ಬೆಟ್ಟಕ್ಕೆ ಹೋಗಿ ಬಂದ ಬಳಿಕ ಕನಕಪುರದಲ್ಲಿ ಪ್ರತಿಭಟನೆ ಮೂಲಕ ಜನಜಾಗೃತಿ ಮೂಡಿಸುವಂತಹ ಕೆಲಸ ಮಾಡುವುದಾಗಿ ತಿಳಿಸಿದರು.