Tag: ಬಿಜೆಪಿ ಟ್ವೀಟ್

  • ಡಿಎಂಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮಿಳುನಾಡಿಗೆ ಪಾದಯಾತ್ರೆ ಯಾವಾಗ: ಡಿಕೆಶಿಗೆ ಬಿಜೆಪಿ ಪ್ರಶ್ನೆ

    ಡಿಎಂಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ತಮಿಳುನಾಡಿಗೆ ಪಾದಯಾತ್ರೆ ಯಾವಾಗ: ಡಿಕೆಶಿಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡುನಲ್ಲಿರುವ ತಮ್ಮದೇ ಸರ್ಕಾರ ಕೈಗೊಂಡಿರುವ ತೀರ್ಮಾನದ ಬಗ್ಗೆ ಡಿ.ಕೆ.ಶಿವಕುಮಾರ್ ಅವರು ಮೌನವಾಗಿರುವುದೇಕೆ ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕರಿಗೆ ಪ್ರಶ್ನಿಸಿದೆ.

    ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್‌ನಲ್ಲಿ, ಮೇಕೆದಾಟು ಯೋಜನೆಯನ್ನು ಜಾರಿಗೊಳಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದೆ. ತಮ್ಮದೇ ಮೈತ್ರಿ ಪಕ್ಷದ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಏಕೆ ಮೌನವಾಗಿದ್ದಾರೆ? ತಮಿಳುನಾಡಿಗೆ ಪಾದಯಾತ್ರೆ ಮಾಡುವುದು ಯಾವಾಗ ಎಂದು ಕೇಳಿದೆ. ಇದನ್ನೂ ಓದಿ:  ಚುನಾವಣೆವರಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ

    ರಾಹುಲ್ ಗಾಂಧಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆ ಇತ್ತೀಚೆಗೆ ವೇದಿಕೆ ಹಂಚಿಕೊಂಡಿದ್ದರು. ಆದರೆ ಅಧಿಕಾರದ ದಾಹದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಕರ್ನಾಟಕದ ಪರವಾಗಿ ಮಾತನಾಡಲು ಹಿಂಜರಿದರು. ಡಿಕೆಶಿವಕುಮಾರ್ ಅವರೇ, ಇಲ್ಲಿ ಪಾದಯಾತ್ರೆ ಮಾಡುವ ಬದಲು ತಮಿಳುನಾಡಿನ ಕಡೆಗೆ ಪಾದ ಬೆಳೆಸಿದ್ದರೆ ಏನಾದರೂ ಲಾಭವಾಗುತ್ತಿತ್ತಲ್ಲವೇ ಎಂದಿದ್ದಾರೆ.

    ರಾಜಕೀಯ ಲಾಭಕ್ಕಾಗಿ ಡಿಕೆಶಿ ಅವರು ಒಂದಲ್ಲ ಎರಡು ಬಾರಿ ಮೇಕೆದಾಟು ಪಾದಯಾತ್ರೆ ಮಾಡಿದ್ದಾರೆ. ಎರಡು ಬಾರಿ ಸುಳ್ಳಿನ ಜಾತ್ರೆ ಮಾಡಿ ಅಭ್ಯಾಸವಿರುವ ಡಿಕೆಶಿ ಅವರಿಗೆ ಮತ್ತೊಂದು ಬಾರಿ ಪಾದಯಾತ್ರೆ ಮಾಡುವುದು ಕಷ್ಟವೇನಲ್ಲ. ಮೂರನೇ ಬಾರಿ ರಾಜ್ಯದ ಹಿತದೃಷ್ಟಿಯಿಂದ ತಮಿಳುನಾಡು ಕಡೆಗೆ ಪಾದಯಾತ್ರೆ ಮಾಡಿ. ನಿರೀಕ್ಷಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ

    ಮೇಕೆದಾಟು ಪಾದಯಾತ್ರೆಯ ಮೂಲಕ ಬೆಂಗಳೂರಿನ 15ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪಾದಯಾತ್ರೆ ಮಾಡಿರುವುದಾಗಿ ಡಿಕೆಶಿ ಹೇಳಿದ್ದಾರೆ. ಅದು ನೀರಿಗಾಗಿ ಅಲ್ಲ, ರಾಜಕೀಯ ಲಾಭಕ್ಕಾಗಿ ಎಂಬುದು ಡಿಕೆಶಿ ಅವರ ಹೇಳಿಕೆಯಲ್ಲೇ ಸ್ಪಷ್ಟವಾಗುತ್ತದೆ. ಹೋಳಿ ಹಬ್ಬ ಮುಗಿದಿದೆ, ಕಾಂಗ್ರೆಸ್ಸಿಗರ ನಿಜ ಬಣ್ಣ ಬಯಲಾಗುತ್ತಿದೆ.

  • ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

    ನೀವು ಲಂಚ ಪಡೆದಿಲ್ಲ ಅಂದ್ರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು – ಸಿದ್ದುಗೆ ಬಿಜೆಪಿ ಪ್ರಶ್ನೆ

    ಬೆಂಗಳೂರು: ಸಿದ್ದರಾಮಯ್ಯ ಅವರೇ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಅಂದರೆ ಹ್ಯೂಬ್ಲೋಟ್ ವಾಚ್ ಎಲ್ಲಿಂದ ಬಂತು ಎಂದು ಬಿಜೆಪಿ ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.

    ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನಿರಪೇಕ್ಷಣಾ ಪತ್ರಕ್ಕಾಗಿ (ಎನ್‍ಒಸಿ) ಗುತ್ತಿಗೆದಾರರು ಒಂದು ರೂಪಾಯಿ ಕೊಟ್ಟಿಲ್ಲ. ಯಾರೂ ಕೂಡ ಹಣವನ್ನು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದಾರೆಂದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದರು. ಇದನ್ನೂ ಓದಿ: ಪೊಲೀಸರು ಪ್ರಾಮಾಣಿಕರಾಗಿಲ್ಲದಿದ್ದರೆ, ನಾಗರೀಕರು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ: ಆರಗ ಜ್ಞಾನೇಂದ್ರ

    ಈ ಹೇಳಿಕೆ ಕುರಿತಂತೆ ಬಿಜೆಪಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರೇ, ರಾಜಕೀಯ ನಿವೃತ್ತಿ ನೀಡಬೇಡಿ. ದೇಶಾದ್ಯಂತ ಕಾಂಗ್ರೆಸ್ ಹಡಗನ್ನು ಮುಳುಗಿಸಲು ನಿಮ್ಮಂತಹ ನಾಯಕರ ಅಗತ್ಯವಿದೆ. ಅಂದ ಹಾಗೆ ನೀವು ನಯಾಪೈಸೆ ಲಂಚ ತೆಗೆದುಕೊಂಡಿಲ್ಲ ಎಂದು ಹೇಳಿದ್ದೀರಿ. ಹಾಗಾದರೆ ಹ್ಯೂಬ್ಲೋಟ್ ವಾಚ್ ಬಂದಿದ್ದೆಲ್ಲಿಂದ ಎಂದು ಟ್ವೀಟ್ ಮಾಡುವ ಮೂಲಕ ಪ್ರಶ್ನಿಸಿದೆ.

    ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ತಮ್ಮ ಸುತ್ತಲೂ ಭ್ರಷ್ಟರ ದಂಡನ್ನೇ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯ ಅವರ ಆತ್ಮೀಯರೆಲ್ಲರ ಮೇಲೂ ಕಪ್ಪು ಹಣ ಸಂಗ್ರಹಣೆ ಆರೋಪವಿತ್ತು. ಸಿದ್ದರಾಮಯ್ಯನವರೇ ನಿಮ್ಮ ಸಲಹೆಗಾರರೊಬ್ಬರ ಮೇಲೆ ಐಟಿ ದಾಳಿಯಾದಾಗ ರಾತ್ರಿ ಬಂದು ನಿಮ್ಮ ಮುಂದೆ ಕಣ್ಣೀರು ಸುರಿಸಿದ್ದು ನೆನಪಿದೆಯೇ? ಅದಕ್ಕೇನು ಹೇಳುತ್ತೀರಿ? ಎಂದು ಕೇಳಿದೆ. ಇದನ್ನೂ ಓದಿ: ಮೊದ್ಲು ಜನ್ರಿಗೆ ಆದಾಯ ಬರುವಂತೆ ಮಾಡಿ, ಆಮೇಲೆ ದರ ಏರಿಕೆ ಮಾಡಿ : ಡಿಕೆಶಿ

    ಜಾರ್ಜ್, ಎಚ್‌.ಸಿ.ಮಹಾದೇವಪ್ಪ, ಗೋವಿಂದರಾಜು, ಕೆಂಪಯ್ಯ ಇವರೆಲ್ಲ ನಿಮ್ಮ ಅತ್ಯಾಪ್ತರಲ್ಲವೇ? ಇವರೆಲ್ಲರ ಮೇಲೆ ಐಟಿ ದಾಳಿ ನಡೆದಿದ್ದನ್ನು ನೆನಪಿಸಿಕೊಳ್ಳಿ. ನೀವು ಭ್ರಷ್ಟಾಚಾರ ನಡೆಸಿಲ್ಲವೆಂದು ಎದೆತಟ್ಟಿ ಹೇಳಿರಬಹುದು. ಆದರೆ ಭ್ರಷ್ಟ ಹಣ ಸಂಗ್ರಹಕ್ಕೆ ಸುತ್ತಲೂ ವ್ಯವಸ್ಥೆ ರೂಪಿಸಿಕೊಂಡಿಲ್ಲವೆಂದು ಹೇಳುವ ಧೈರ್ಯವಿದೆಯೇ ಎಂದು ವಾಗ್ದಾಳಿ ನಡೆಸಿದೆ.

  • ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದೆ, ನನಗೆ ಕಳವಳ ಆಗಿದೆ: ಗೋವಿಂದ ಕಾರಜೋಳ

    ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದೆ, ನನಗೆ ಕಳವಳ ಆಗಿದೆ: ಗೋವಿಂದ ಕಾರಜೋಳ

    ಬೆಂಗಳೂರು: ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದೆ, ನನಗೆ ಕಳವಳ ಆಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.

    ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುಮಾರು ನಾಲ್ಕು ಕಿ.ಮೀ. ನಡೆದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮೈಕೈ ನೋವು, ಸುಸ್ತು ಕಾಣಿಸಿಕೊಂಡಿದೆ. ಹೀಗಾಗಿ ವಿಶ್ರಾಂತಿಗಾಗಿ ಅವರು ಬೆಂಗಳೂರಿಗೆ ವಾಪಸ್ ಆಗಿದ್ದರು. ಇದನ್ನೂ ಓದಿ: ಮೈ ಕೈ ನೋವು, ಸುಸ್ತಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸ್‌

    ಈ ವಿಚಾರವಾಗಿ ಗೋವಿಂದ ಕಾರಜೋಳ ಅವರು, ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಜ್ವರ ಕಾಣಿಸಿಕೊಂಡಿದೆ. ನನಗೆ ಕಳವಳ ಆಗಿದೆ. ಸಿದ್ದರಾಮಯ್ಯನವರೇ ದಯವಿಟ್ಟು ವಿಶ್ರಾಂತಿ ತೆಗೆದುಕೊಳ್ಳಿ. ತಮ್ಮ ಆರೋಗ್ಯ ರಕ್ಷಣೆ ಮಹತ್ವದ್ದು ಎಂದು ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆ ವಿಚಾರದಲ್ಲಿ ಅವರಿಗೇಕೆ ಮಾಹಿತಿ ನೀಡಬೇಕು? – ಚರಣ್‍ಜಿತ್ ಸಿಂಗ್ ಚನ್ನಿ ವಿರುದ್ಧ ಬಿಜೆಪಿ ಕಿಡಿ

    ಮತ್ತೊಂದೆಡೆ ಬಿಜೆಪಿ, ಕಾಂಗ್ರೆಸ್ಸಿಗರೇ ನಿಮ್ಮದು ಬೆಂಗಳೂರಿಗೆ ನೀರು ಕೊಡುವ ಯಾತ್ರೆಯೋ ಅಥವಾ ಬೆಂಗಳೂರಿಗರಿಗೆ ಕೊರೊನಾ ಹಬ್ಬಿಸುವ ಜಾತ್ರೆಯೋ? ಈಗಾಗಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜ್ವರದ ಲಕ್ಷಣದಿಂದ ಪಾದಯಾತ್ರೆಯಿಂದ ಹಿಂದೆ ಸರಿದಿದ್ದಾರೆ. ಇನ್ನೆಷ್ಟು ಜನರಿಗೆ ಕೋವಿಡ್ ಹಬ್ಬಿಸುವ ಯೋಜನೆ ಹಾಕಿಕೊಂಡಿದ್ದೀರಿ ಎಂದು ಪ್ರಶ್ನಿಸಿದೆ.

    ಮೇಕೆದಾಟು ಯೋಜನೆ ಕುರಿತಂತೆ ಕಾಂಗ್ರೆಸ್ ಇಂದು ಪಾದಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ವೇಳೆ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ಅವರು ಹೆಗ್ಗನೂರು ತಲುಪಿದ ಬಳಿಕ ಭೋಜನ ವಿರಾಮ ಪಡೆದುಕೊಂಡರು. ಎರಡು ದಿನದ ಹಿಂದೆಯಷ್ಟೇ ಬೂಸ್ಟರ್ ಡೋಸ್ ಸ್ವೀಕರಿಸಿದ್ದ ಸಿದ್ದರಾಮಯ್ಯ ಅವರಿಗೆ ಈ ವೇಳೆ ಸುಸ್ತು ಹಾಗೂ ಮೈಕೈ ನೋವು ಕಾಣಿಸಿಕೊಂಡಿದ್ದು, ವೈದ್ಯರು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು.  ಇದನ್ನೂ ಓದಿ: ರಾಜ್ಯದಲ್ಲಿ 2ನೇ ದಿನದ ವೀಕೆಂಡ್ ಕರ್ಫ್ಯೂ ಬಹುತೇಕ ಯಶಸ್ವಿ


    Siddaramaiah, Govinda Karajola, BJP Tweet, Bengaluru

  • ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಬೆಂಗಳೂರು: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ.

    ಕುಂದಾನಗರಿ ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮುಖದ ಭಾಗ, ಮೂಗು ಮತ್ತು ಕತ್ತಿಯನ್ನು ಕಿಡಿಗೇಡಿಗಳು ಶನಿವಾರದ ಮುಂಜಾವಿನಲ್ಲಿ ವಿರೂಪಗೊಳಿಸಿದ್ದರು. ರಾಯಣ್ಣ ಹಿಡಿದಿದ್ದ ಕಠಾರಿಯನ್ನು ರಸ್ತೆಯ ಬದಿಗೆ ಎಸೆದಿದ್ದರು. ಜೊತೆಗೆ ಬಸ್ ಹಾಗೂ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿ, ಹೋಟೆಲ್‍ವೊಂದರ ಮುಂದೆ ಇದ್ದ ಕನ್ನಡ ನಾಮಫಲಕವನ್ನು ಕೆಳಕ್ಕುರುಳಿಸಿದ್ದರು. ಇದರಿಂದ ಸ್ಥಳೀಯರು, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಮೂಲಕ ಹಿಂಸಾಚಾರ ಕೃತ್ಯವೆಸಗಿದ ಎಂಇಎಸ್ ಪುಂಡರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಕ್ರೋಶಹೊರಹಾಕಿದ್ದರು. ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಪ್ರತಿಷ್ಠಾಪನೆ

    ಇದೀಗ ಈ ಘಟನೆ ಸಂಬಂಧ ಬಿಜೆಪಿ ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಕೆಂಡಕಾರಿದೆ. ರಾಜ್ಯ ಸರ್ಕಾರದ ವಿರುದ್ಧ ವಿವಿಧ ಆಯಾಮಗಳಲ್ಲಿ ಕಾಂಗ್ರೆಸ್ ಅಪಪ್ರಚಾರದ ಸಂಚು ನಡೆಸುವುದಕ್ಕಾಗಿಯೇ ಕಾಂಗ್ರೆಸ್ ಬೆಳಗಾವಿ ಅಧಿವೇಶನದ ಸಮಯ ಬಳಸಿಕೊಳ್ಳುತ್ತಿಯೇ? ಹೌದು, ಮೊದಲ ದಿನದಿಂದ ಇಲ್ಲಿಯವರೆಗೆ ಕಾಂಗ್ರೆಸ್ ಪಕ್ಷ ನಡೆದುಕೊಂಡ ರೀತಿ ಹಾಗೂ ಘಟನಾವಳಿಗಳು ಇದನ್ನೇ ಹೇಳುತ್ತಿವೆ ಎಂದು ಹರಿಹಾಯ್ದಿದೆ.

    ಕೆಂಪುಕೋಟೆಗೆ ಖಲಿಸ್ತಾನಿಗಳು, ನಗರ ನಕ್ಸಲರು ದಾಳಿ ನಡೆಸಿದ ರೀತಿ ಬೆಳಗಾವಿ ಅಧಿವೇಶನಕ್ಕೆ ಟ್ರ್ಯಾಕ್ಟರ್ ಮೂಲಕ ಪ್ರವೇಶಿಸಲು ಕಾಂಗ್ರೆಸ್ಸಿಗರು ಯತ್ನಿಸಿದರು. ಒಂದೊಮ್ಮೆ ನಾಡದ್ರೋಹಿ ಕಾಂಗ್ರೆಸ್ ಪ್ರಯತ್ನ ಸಫಲವಾಗಿ, ಕಾಂಗ್ರೆಸ್ ಕಾರ್ಯಕರ್ತರ ಮುಖವಾಡ ಧರಿಸಿ ಸಮಾಜ ವಿಘಟಕರು ಗುಂಪಿನಲ್ಲಿ ಸೇರಿಸಿದ್ದರೆ ಅಧಿವೇಶನದ ಕತೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿದೆ.

    ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಬೆಳಗಾವಿಯಲ್ಲಿ ಅಧಿವೇಶನ ಆಯೋಜಿಸಲಾಗಿತ್ತು. ಆದರೆ ನಾಡದ್ರೋಹಿ ಕಾಂಗ್ರೆಸ್ ಒಂದು ದಿನವೂ ಕಲಾಪ ನಡೆಯುವುದಕ್ಕೂ ಅವಕಾಶ ನೀಡಲಿಲ್ಲ. ಪ್ರಶ್ನೋತ್ತರ ಕಲಾಪವನ್ನೂ ತಮ್ಮ ಪ್ರತಿಷ್ಠೆಗೆ ಬಲಿ ಪಡೆಯಲು ಮುಂದಾದರು. ಉತ್ತರ ಕರ್ನಾಟಕದ ಬಗ್ಗೆ ನಿಮಗಿರುವ ಬದ್ಧತೆಯೇ ಪ್ರಶ್ನಾರ್ಹವಾಗಿದೆ ಎಂದಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ದಾಂಧಲೆ – ರಾತ್ರಿ ಏನೇನು ಮಾಡಿದ್ದಾರೆ?

    ಮಹಾರಾಷ್ಟ್ರದಲ್ಲಿ ಪುಂಡರೊಂದಿಗೆ ಸೇರಿಕೊಂಡು ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಕಾರ್ಯಕರ್ತರು. ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿದ್ದು, ಕಾಂಗ್ರೆಸ್ ಮಿತ್ರಪಕ್ಷ ಎಂಇಎಸ್. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದೂ ಕಾಂಗ್ರೆಸ್ ಕಾರ್ಯಕರ್ತರು. ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶವಾಗಿದೆ ಎಂದು ಆಕ್ರೋಶ ಹೊರಹಾಕಿದೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರೇ, ನಿಮ್ಮ ಹೋರಾಟಕ್ಕೆ ಜನ ಬೆಂಬಲ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಂಚು ರೂಪಿಸುತ್ತಿದ್ದೀರಾ? ಭಾಷೆ ಹಾಗೂ ಸ್ವಾತಂತ್ರ್ಯ ವೀರರಿಗೆ ಅಪಮಾನ ಮಾಡುವ ಷಡ್ಯಂತ್ರ ರೂಪುಗೊಂಡಿದ್ದು ಕಾಂಗ್ರೆಸ್ ವಾರ್ ರೂಮಿನಲ್ಲೇ? ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ

    ಭಾಷೆ ಹಾಗೂ ಭಾವನೆಗಳ ಮಧ್ಯೆ ಬೆಂಕಿ ಹಚ್ಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕಾಂಗ್ರೆಸ್ ಹವಣಿಸುತ್ತಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸಂಯಮ ಮೆರೆಯಬೇಕಿದೆ. ಇಲ್ಲವಾದರೆ ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂದು ಸಿದ್ದರಾಮಯ್ಯ ಅವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುವ ಅಪಾಯವಿದೆ ಎಚ್ಚರಿಕೆ ನೀಡಿದೆ.

  • ಸಿದ್ದರಾಮಯ್ಯ ಅವ್ರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ: ಕುಟುಕಿದ ಬಿಜೆಪಿ

    ಸಿದ್ದರಾಮಯ್ಯ ಅವ್ರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ: ಕುಟುಕಿದ ಬಿಜೆಪಿ

    ಬೆಂಗಳೂರು: ಬಿಟ್ ಕಾಯಿನ್ ಹಗರಣ ವಿಚಾರವಾಗಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ವಾಗ್ಬಾಣ ಮುಂದುವರಿದಿದೆ. ಇದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಟ್ವಿಟರ್‌ನಲ್ಲಿ ಹರಿಹಾಯ್ದಿದೆ.

    ಶಂಕಿತ ಬಿಟ್ ಕಾಯಿನ್ ಹಗರಣದಿಂದ ಸಿದ್ದರಾಮಯ್ಯ ಅವರು ಒಂದೇ ಕಲ್ಲಿನಲ್ಲಿ ಹಲವು ಹಕ್ಕಿ ಹೊಡೆದಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಕುಟುಕಿದೆ. ಇದನ್ನೂ ಓದಿ: ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಆಭರಣಗಳನ್ನು ಪ್ರಯಾಣಿಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಂಡಕ್ಟರ್!

    ತಮ್ಮನ್ನು ಸುತ್ತಿಕೊಂಡ ದಲಿತ ವಿರೋಧಿ ಆರೋಪದಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಅವರು ಬಿಟ್ ಕಾಯಿನ್ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ. ಬಿಜೆಪಿ ವಿರುದ್ಧ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದೆ.

    ಡಿ.ಕೆ.ಶಿವಕುಮಾರ್ ವಿರುದ್ಧ ಮಾತನಾಡಿದ್ದ ತಮ್ಮ ಆಪ್ತ ಉಗ್ರಪ್ಪ ಅವರನ್ನು ಶಿಸ್ತುಕ್ರಮದಿಂದ ರಕ್ಷಿಸುವುದು, ಮೊಹಮ್ಮದ್ ನಲಪಾಡ್ ಅವರಿಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸುವುದು ಹಾಗೂ ಡಿಕೆಶಿ ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವುದು ಸಿದ್ದರಾಮಯ್ಯ ಅವರ ಉದ್ದೇಶವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದನ್ನೂ ಓದಿ: ಕೀಳು ರಾಜಕೀಯದ ಆಲೋಚನೆಗಳು ಯಾರನ್ನು ಮೆಚ್ಚಿಸಲು ಗೊತ್ತಿದೆ ಖರ್ಗೆಗೆ ಸುಧಾಕರ್ ಟಾಂಗ್

    ಜನವರಿಯಲ್ಲಿ ನನಗೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂಬ ಕಾರಣಕ್ಕೆ ನನ್ನನ್ನು ಸಿಲುಕಿಸಲಾಗುತ್ತಿದೆ ಎಂದು ನಲಪಾಡ್ ಆರೋಪಿಸಿದ್ದಾರೆ. ತಮ್ಮ ಆಪ್ತನ ಪುತ್ರ ರಕ್ಷಾ ರಾಮಯ್ಯಗಾಗಿ ಸಿದ್ದರಾಮಯ್ಯ ಅವರು ನಲಪಾಡ್ ವಿರೋಧಿಸಿದ್ದು ರಾಜ್ಯಕ್ಕೆ ತಿಳಿದಿದೆ. ಹಾಗಾದರೆ ಇದರ ಹಿಂದಿರುವುದೇನು ಎಂದು ಬಿಜೆಪಿ ಪ್ರಶ್ನಿಸಿದೆ.

    ಬಿಟ್ ಕಾಯಿನ್ ವಿಚಾರವನ್ನು ಮೊದಲು ಪ್ರಸ್ತಾಪಿಸಿದ್ದು ಸಿದ್ದರಾಮಯ್ಯ. ಡಿಕೆಶಿ ಬಣದ ನಲಪಾಡ್‍ಗೆ ಅಧಿಕಾರ ತಪ್ಪಿಸುವುದು, ವಿನಾಕಾರಣ ಒಂದು ರಾಜಕೀಯ ಹುಯಿಲೆಬ್ಬಿಸುವುದೇ ಇದರ ಉದ್ದೇಶ. ಬಿಟ್ ಕಾಯಿನ್ ವಿಚಾರ ಕಾಂಗ್ರೆಸ್ ನಾಯಕರಿಬ್ಬರ ನಡುವೆ ಇರುವ ರಾಜಕೀಯ ವೈಷಮ್ಯದ ಪ್ರತಿಫಲವಷ್ಟೇ, ಅದರಿಂದೀಚೆಗೆ ಬೇರೇನಿಲ್ಲ ಎಂದು ತಿಳಿಸಿದೆ.