Tag: ಬಿಜೆಪಿ-ಜೆಡಿಎಸ್‌ ಮೈತ್ರಿ

  • ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

    ಕುಮಾರಸ್ವಾಮಿಗೆ ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ: ಡಾ.ಮಂಜುನಾಥ್‌

    ರಾಮನಗರ: ಕುಮಾರಸ್ವಾಮಿ (HD Kumaraswamy) ಅವರಿಗೆ ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ. ಸಾಮಾನ್ಯ ವೈದ್ಯರಿಗೇ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಅಷ್ಟು ಮಾಹಿತಿ ಇರಲ್ಲ. ಇನ್ನೂ ಇದರ ಬಗ್ಗೆ ಸಾಮಾನ್ಯ ಜನಕ್ಕೆ ಹೇಗೆ ಗೊತ್ತಾಗುತ್ತೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್‌ ಮಂಜುನಾಥ್‌ (CN Manjunath) ತಿರುಗೇಟು ನೀಡಿದ್ದಾರೆ.

    ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ (Ramesh Bandisiddegowda) ಅನುಮಾನ ವ್ಯಕ್ತಪಡಿಸಿದ ವಿಚಾರ ಕುರಿತು ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಸುಮಲತಾ ನಿರ್ಧಾರ ಪ್ರಕಟಕ್ಕೂ ಮುನ್ನವೇ ಆಪ್ತನಿಂದ ಶಾಕ್ – ಹೆಚ್‍ಡಿಕೆ ಪರ ಪ್ರಚಾರಕ್ಕಿಳಿದ ಸಚ್ಚಿದಾನಂದ

    ಹೆಚ್‌ಡಿಕೆಗೆ ಆಪರೇಷನ್ ಮಾಡುವಾಗ ನಾನೂ ಇದ್ದೆ. ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ತಿಳಿದುಕೊಳ್ಳಲು 13 ವರ್ಷ ಓದಬೇಕು. ಕುಮಾರಸ್ವಾಮಿ ಅವರಿಗೆ ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಮಾಡಲಾಗಿದೆ. ಆಧುನಿಕ ತಂತ್ರಜ್ಞಾನದಲ್ಲಿ ಆಪರೇಷನ್ ಮಾಡಲಾಗಿದೆ. ಸಾಮಾನ್ಯ ವೈದ್ಯರಿಗೂ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ಅಷ್ಟು ಮಾಹಿತಿ ಇರಲ್ಲ. ಇನ್ನೂ ಇದರ ಬಗ್ಗೆ ಸಾಮಾನ್ಯ ಜನಕ್ಕೆ ಏನು ಗೊತ್ತಾಗುತ್ತೆ? ಯಾವತ್ತೂ ಯಾವುದೇ ಮಾಹಿತಿ ಇಲ್ಲದೇ ಯಾವುದರ ಬಗ್ಗೆಯೂ ಮಾತನಾಡಬಾರದು. ಜ್ಞಾನಿಗಳು ಜ್ಞಾನಿಗಳಾಗೆಯೇ ಇರಬೇಕು, ಇನ್ನೊಂದು ಆಗಬಾರದು ಎಂದು ಕಾಂಗ್ರೆಸ್ ಶಾಸಕನಿಗೆ ತಿರುಗೇಟು ನೀಡಿದ್ದಾರೆ.

    ಏಪ್ರಿಲ್‌ 2 ರಂದು ನಡೆಯಲಿರುವ ಅಮಿತ್‌ ಶಾ ರೋಡ್‌ ಶೋ ಬಗ್ಗೆ ಮಾತನಾಡಿದ ಮಂಜುನಾಥ್‌, ಅಮಿತ್ ಶಾ ಅವರು ಪ್ರಥಮಬಾರಿಗೆ ಚುನಾವಣಾ ಪ್ರಚಾರಕ್ಕೆ ಬರ್ತಿದ್ದಾರೆ. ರೋಡ್ ಶೋ ರೂಪದಲ್ಲಿ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಲ್ಲಿ ಬೇರೆ-ಬೇರೆ ಕಾರ್ಯಕ್ರಮಗಳಿದ್ದು ಅದನ್ನ ಮುಗಿಸಿಕೊಂಡು ಬರ್ತಾರೆ. ಅವರ ಬರುವಿಕೆ ನಮಗೆ ಹೊಸ ಶಕ್ತಿ ತುಂಬಲಿದೆ. ಇದು ನನ್ನ ಗೆಲುವಿಗೆ ಮತ್ತಷ್ಟು ವಿಶ್ವಾಸ ಮೂಡಲಿದೆ ಎಂದಿದ್ದಾರೆ. ಇದನ್ನೂ ಓದಿ: ಚುನಾವಣೆ ಬಂದ್ರೆ ಸಾಕು ಆಸ್ಪತ್ರೆ ಸೇರ್ತಾರೆ: ಹೆಚ್‌ಡಿಕೆ ಹೃದಯ ಶಸ್ತ್ರಚಿಕಿತ್ಸೆ ಬಗ್ಗೆ ‘ಕೈ’ ಶಾಸಕ ಅನುಮಾನ

    ಏಪ್ರಿಲ್‌ 4ರಂದು ನಾಮಪತ್ರ ಸಲ್ಲಿಕೆ:
    ಇದೇ ಏಪ್ರಿಲ್‌ 4ರಂದು ನಾನು ನಾಪಪತ್ರ ಸಲ್ಲಿಸುತ್ತೇನೆ. ಅಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಬಿಜೆಪಿ-ಜೆಡಿಎಸ್‌ ಎರಡೂ ಪಕ್ಷದ ಕಾರ್ಯಕರ್ತರು, ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ. ಮೆರವಣಿಗೆ, ಸಮಾವೇಶದ ಕುರಿತು ರೂಪುರೇಷೆ ಮಾಡಲಾಗುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಕೊಡ್ತೀವಿ ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ.

  • ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ: ಸುಮಲತಾ ಭಾವುಕ

    ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ: ಸುಮಲತಾ ಭಾವುಕ

    – ಏಪ್ರಿಲ್‌ 3ಕ್ಕೆ ಸಭೆ – ಮಂಡ್ಯದಲ್ಲೇ ನಿರ್ಧಾರ ಪ್ರಕಟಿಸುತ್ತೇನೆ ಎಂದ ಸಂಸದೆ

    ಬೆಂಗಳೂರು: ಮಂಡ್ಯದ ಜನತೆ ನನ್ನ ಶಕ್ತಿ, ಆವತ್ತಿಗೂ ನನ್ನ ಪರ ಇದ್ದರು, ಇವತ್ತಿಗೂ ಇದ್ದಾರೆ. ನಾನು ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ. ಮಂಡ್ಯದಲ್ಲೇ ನನ್ನ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ (Sumalatha Ambareesh) ಹೇಳಿದ್ದಾರೆ.

    ಬೆಂಗಳೂರಿನ (Bengaluru) ಜೆ.ಪಿ ನಗರದಲ್ಲಿರುವ ʻಅಂಬಿ ನಿವಾಸʼದಲ್ಲಿ ಬೆಂಬಲಿಗರ ಸಭೆ ನಡೆಸಿ ಅವರಿಂದು ಮಾತನಾಡಿದರು. ಸಭೆಯಲ್ಲಿ 500ಕ್ಕೂ ಹೆಚ್ಚು ಬೆಂಬಲಿಗರು ಪಾಲ್ಗೊಂಡಿದ್ದರು. ಇದೇ ವೇಳೆ ಮಂಡ್ಯದಿಂದ ಸುಮಲತಾ ಅವರ ಸ್ಪರ್ಧೆಗೆ ಒತ್ತಾಯಿಸಿದರು. ಬಳಿಕ ಬೆಂಬಲಿಗರ ಸಭೆಯನ್ನುದ್ದೇಶಿಸಿ ಮಾತನಾಡಿದ ಸುಮಲತಾ, ಮಂಡ್ಯದ (Mandya) ಘನತೆ ಪಾರ್ಲಿಮೆಂಟ್ ನಲ್ಲೂ ಎತ್ತಿ ಹಿಡಿದಿದ್ದೇನೆ. ಯಾರೂ ಬೊಟ್ಟುಮಾಡಿ ತೋರಿಸುವ ಕೆಲಸ ಮಾಡಿಲ್ಲ. ಇದ್ದರೂ-ಬಿದ್ದರೂ, ಗೆದ್ದರೂ-ಸೋತರೂ ಮಂಡ್ಯ ಬಿಡಲ್ಲ. ಮಂಡ್ಯ ಅಂದ್ರೆ ನಮಗೆ ಭಾವನೆ, ಪ್ರೀತಿ, ಅಭಿಮಾನ ಎಲ್ಲವೂ ಎಂದು ಭಾವುಕರಾಗಿದ್ದಾರೆ.

    ಇವತ್ತಿಗೂ ನನ್ನ ಪರ ಜನ ಇದ್ದಾರೆ:
    ಈ ಐದು ವರ್ಷ ರಾಜಕೀಯ ಜೀವನ ಪ್ರಾರಂಭವಾಗಿದ್ದೇ ನಿಮ್ಮ ಪ್ರೀತಿಯಿಂದ, ಇವತ್ತೂ ಅದೇ ಪ್ರೀತಿಯಿಂದ ಇಲ್ಲಿ ಸೇರಿದ್ದೀರಿ. ಅಂಬರೀಷ್ ಅವರ ರಾಜಕೀಯ ಜೀವನದ ಆರಂಭವಾದ ಮೊದಲ ದಿನದಿಂದ ಈವರೆಗೆ ನನ್ನನ್ನು ಬೆಂಬಲಿಸಿರುವ ನಾಯಕರು ಇಲ್ಲಿದ್ದಾರೆ. ನಮ್ಮ ನೋವನ್ನೂ ಹಂಚಿಕೊಂಡಿದ್ದಾರೆ. ನನಗೆ ರಾಜಕೀಯ ಅನುಭವ ಇಲ್ಲದ ಸಂದರ್ಭದಲ್ಲೂ ಎಲ್ಲರೂ ಜೊತೆಗಿದ್ದರು. ಮಂಡ್ಯದ ಜನರೇ ನನ್ನ ಶಕ್ತಿ, ಆವತ್ತು ಯಾವ ದೊಡ್ಡ ರಾಜಕಾರಣಿಗಳೂ ನನ್ನ ಪರ ಇರಲಿಲ್ಲ. ಇವತ್ತೂ ಜನರೇ ನನ್ನ‌ಪರ ಇರೋದು ಎಂದು ನುಡಿದಿದ್ದಾರೆ.

    ನುಡಿದಂತೆ ನಡೆದಿದ್ದೇನೆ:
    5 ವರ್ಷ ಕಷ್ಟ ಅನುಭವಿಸಿದ ಬಗ್ಗೆ ನೋವಾಗಿರಬಹುದು, ಕಷ್ಟ ಆಗಿರಬಹುದು, ಕಣ್ಣೀರು ಹಾಕಿರಬಹುದು. ನಾನು ನನ್ನ ಸ್ವಾರ್ಥ ನೋಡಿ ತಿರ್ಮಾನ ಮಾಡಿಕೊಳ್ಳಬಹುದಿತ್ತು. ನಾನು, ನನ್ನ ಮಗ, ನಮ್ಮ ರಾಜಕೀಯ ಅಂತ ಯೋಚನೆ ಮಾಡಿದ್ದಿದ್ರೆ ಎಲ್ಲೋ ಇರ್ತಿದ್ದೆ. ಆ ಯೋಚನೆ ಒಂದು ದಿನವೂ ನಾನು ಮಾಡಿಲ್ಲ. ಆವತ್ತಿಂದಲೂ ಇವತ್ತಿನ ವರೆಗೂ ಏನೇ ಮಾತಾಡಿದ್ರೂ ನುಡಿದಂತೆ ನಡೆದಿದ್ದೇನೆ. ಎಲ್ಲೂ ತಪ್ಪು ಹೆಜ್ಜೆ ಹಾಕಿಲ್ಲ ಎಂದು ಹೇಳಿದ್ದಾರೆ.

    ನನಗೆ ಯಾವುದೇ ಸ್ವಾರ್ಥವಿಲ್ಲ. ಮಂಡ್ಯ ಬಿಟ್ಟು ಬೇರೇನೂ ಬೇಡ, ಇವತ್ತು ರಾಜಕೀಯ ಸ್ಥಿತಿ ಬದಲಾಗಿದೆ. ಮಂಡ್ಯದಲ್ಲಿ ಯಾವುದೂ ಸುಲಭವಾಗಿಲ್ಲ. ಕಳೆದ ಚುನಾವಣೆಗಿಂತಲೂ ಹೆಚ್ಚಿನ ಸವಾಲು ಇದೆ. ನಿಮ್ಮನ್ನ ನೋಯಿಸುವ ಯಾವುದೇ ನಿರ್ಧಾರ ನಾನು ತಗೊಳ್ಳಲ್ಲ. ಮಂಡ್ಯದ ಋಣ, ಗುಣ ಎಂದಿಗೂ ಬಿಡಲ್ಲ ಎಂದಿದ್ದಾರೆ.

    ಏಪ್ರಿಲ್‌ 3ಕ್ಕೆ ಸಭೆ: ಇದೇ ಏಪ್ರಿಲ್‌ 3ಕ್ಕೆ ಮತ್ತೆ ಮಂಡ್ಯಕ್ಕೆ ಬರುತ್ತೇನೆ. ಮಂಡ್ಯದಲ್ಲೇ ಆಪ್ತರ ಜೊತೆ ಸಭೆ ಮಾಡುತ್ತೇನೆ. ಎಲ್ಲವನ್ನೂ ಸಮಗ್ರವಾಗಿ ಚರ್ಚಿಸಿ ಮಂಡ್ಯದಲ್ಲೇ ನನ್ನ ನಿರ್ಧಾರ ಪ್ರಕಟ ಮಾಡುತ್ತೇನೆ ಎಂದು ಹೇಳಿದ್ದಾರೆ.

  • ಸುಮಲತಾ ಅಂಬರೀಶ್‌ ಜೊತೆ ಮಾತುಕತೆಗೆ ನಾವು ಸಿದ್ಧ – ನಿಖಿಲ್

    ಸುಮಲತಾ ಅಂಬರೀಶ್‌ ಜೊತೆ ಮಾತುಕತೆಗೆ ನಾವು ಸಿದ್ಧ – ನಿಖಿಲ್

    ಬೆಂಗಳೂರು: ಅಗತ್ಯ ಬಿದ್ದರೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರೊಂದಿಗೆ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ ಅಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ತಿಳಿಸಿದ್ದಾರೆ.

    ಮಾಜಿ ಸಚಿವ ನಾರಾಯಣಗೌಡರ ಮನವೊಲಿಕೆಯಂತೆ ಸುಮಲತಾ (Sumalatha Ambareesh) ಅವರ ಮನವೊಲಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಶ್ವಥ್ ನಾರಾಯಣ್‌ ಮತ್ತು ಪುಟ್ಟರಾಜು ಅವರ ಸಮ್ಮುಖದಲ್ಲಿ ಕುಮಾರಸ್ವಾಮಿ ಅವರು ನಾರಾಯಣಗೌಡ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ನಾರಾಯಣಗೌಡರು (Narayanagowda) ನಮ್ಮ ‌ಪಕ್ಷದಿಂದಲೇ ಶಾಸಕ ಆಗಿದ್ದರು. ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳು ಇರೋದು ಸಹಜ. ಈಗ ಎಲ್ಲವೂ ಸರಿ ಆಗಿದೆ. ವೈಯಕ್ತಿಕವಾಗಿ ಕುಮಾರಸ್ವಾಮಿ ಮೇಲೆ ನಾರಾಯಣಗೌಡರು ಗೌರವ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಪರ ಕೆಲಸ ಮಾಡೋದಾಗಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

    ನಾವು ಸುಮಲತಾ ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡ್ತೀವಿ. ಅಗತ್ಯ ಬಿದ್ದರೆ ಅವರ ಜೊತೆಗೂ ಮಾತುಕತೆ ನಡೆಸುತ್ತೇವೆ. ಒಟ್ಟಾರೆ ನಮಗೆ ಆರೋಗ್ಯರ ಚುನಾವಣೆ ಆಗಬೇಕು‌ ಎನ್ನುವ ಮೂಲಕ ಸುಮಲತಾ ಜೊತೆ ಮಾತುಕತೆಗೂ ಸಿದ್ಧ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಿಂದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್‌; ಅಧಿಕೃತ ಘೋಷಣೆ

    ಕುಮಾರಸ್ವಾಮಿ ಹೆಸರು ಫೈನಲ್‌:
    ಇದೇ ವೇಳೆ ಮಂಡ್ಯದಲ್ಲಿ (Mandya Contestent) ಕುಮಾರಸ್ವಾಮಿ ಅವರ ಸ್ಪರ್ಧೆ ಕುರಿತು ಮಾತನಾಡಿರುವ ಅವರು, ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಅಂತಿಮವಾಗಿದೆ. ಪಕ್ಷದ ವರಿಷ್ಠರೇ ಅಧಿಕೃತವಾಗಿ ಹೆಸರು ಘೋಷಣೆ ಮಾಡ್ತಾರೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

    ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ, ಕೋಲಾರ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಹೆಸರೇ ಅಧಿಕೃತ ಆಗಿದೆ.ಮಂಡ್ಯ ಜಿಲ್ಲೆಯ ಪಕ್ಷದ ಕಾರ್ಯಕರ್ತರ, ನಾಯಕರ ಒತ್ತಾಸೆಗೆ ಬೆಲೆ ಕೊಟ್ಟು ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ.ಮಂಡ್ಯ ಜಿಲ್ಲೆಗೆ ಆದ ಅನ್ಯಾಯ ಸರಿಪಡಿಸಬೇಕು. ಕುಮಾರಸ್ವಾಮಿ ಅವರಿಗೆ ರಾಜ್ಯದ ಪರವಾಗಿ ಬದ್ದತೆ ಇದೆ.ರಾಜ್ಯದ ಪರವಾಗಿ ಕೆಲಸ ಮಾಡ್ತಾರೆ ಅಂತ ಬಿಜೆಪಿ ಹೈಕಮಾಂಡ್ ನಾಯಕರಿಗೂ ಅನ್ನಿಸಿದೆ.ಅಧಿಕೃತವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಆಗೋ ಬಗ್ಗೆ ವರಿಷ್ಠರು ಅಧಿಕೃತ ಘೋಷಣೆ ಮಾಡ್ತಾರೆ ಎಂದು ತಿಳಿಸಿದ್ದಾರೆ.

  • ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಅಂತಿಮವಾಗಿದೆ – ನಿಖಿಲ್ ಕುಮಾರಸ್ವಾಮಿ

    ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ ಅಂತಿಮವಾಗಿದೆ – ನಿಖಿಲ್ ಕುಮಾರಸ್ವಾಮಿ

    – ವರಿಷ್ಠರು ಅಧಿಕೃತ ಹೆಸರು ಘೋಷಣೆ ಮಾಡ್ತಾರೆ ಎಂದ ಪುತ್ರ

    ಬೆಂಗಳೂರು: ಮಂಡ್ಯದಿಂದ ಕುಮಾರಸ್ವಾಮಿ ಅವರ ಸ್ಪರ್ಧೆ ಅಂತಿಮವಾಗಿದೆ. ಪಕ್ಷದ ವರಿಷ್ಠರೇ ಅಧಿಕೃತವಾಗಿ ಹೆಸರು ಘೋಷಣೆ ಮಾಡ್ತಾರೆ ಅಂತ ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಸ್ಪಷ್ಟಪಡಿಸಿದ್ದಾರೆ.

    ಇಲ್ಲಿನ ಜೆಪಿ ನಗರ ನಿವಾಸದ ಬಳಿ ಮಾತನಾಡಿದ ಅವರು, ಕೋರ್ ಕಮಿಟಿ ಸಭೆಯಲ್ಲಿ ಮಂಡ್ಯ, ಕೋಲಾರ ಕ್ಷೇತ್ರಗಳ ಬಗ್ಗೆ ಚರ್ಚೆ ಆಗಿದೆ. ಮಂಡ್ಯಕ್ಕೆ ಕುಮಾರಸ್ವಾಮಿ ಅವರ ಹೆಸರೇ ಅಧಿಕೃತ ಆಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಾಮರಾಜನಗರದಿಂದ ಸಚಿವ ಮಹದೇವಪ್ಪ ಪುತ್ರ ಸುನೀಲ್ ಬೋಸ್‌ಗೆ ಟಿಕೆಟ್‌; ಅಧಿಕೃತ ಘೋಷಣೆ

    ಮಂಡ್ಯದ ಜೆಡಿಎಸ್‌ ಕಾರ್ಯಕರ್ತರ, ನಾಯಕರ ಒತ್ತಾಸೆಗೆ ಬೆಲೆ ಕೊಟ್ಟು ಕುಮಾರಸ್ವಾಮಿ ಸ್ಪರ್ಧೆ ಮಾಡ್ತಿದ್ದಾರೆ. ಮಂಡ್ಯ ಜಿಲ್ಲೆಗೆ ಆದ ಅನ್ಯಾಯ ಸರಿಪಡಿಸಬೇಕು. ಕುಮಾರಸ್ವಾಮಿ ಅವರಿಗೆ ರಾಜ್ಯದ ಪರವಾಗಿ ಬದ್ದತೆ ಇದೆ. ರಾಜ್ಯದ ಪರವಾಗಿ ಕೆಲಸ ಮಾಡ್ತಾರೆ ಅಂತ ಬಿಜೆಪಿ ಹೈಕಮಾಂಡ್ ನಾಯಕರಿಗೂ ಅನ್ನಿಸಿದೆ. ಅಧಿಕೃತವಾಗಿ ಕುಮಾರಸ್ವಾಮಿ ಅವರು ಅಭ್ಯರ್ಥಿ ಆಗೋ ಬಗ್ಗೆ ವರಿಷ್ಠರು ಅಧಿಕೃತ ಘೋಷಣೆ ಮಾಡ್ತಾರೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಕೇಸ್ – ಬೆಂಗ್ಳೂರು, ಶಿವಮೊಗ್ಗ, ಹುಬ್ಬಳಿಯಲ್ಲಿ ಬೆಳ್ಳಂಬೆಳಗ್ಗೆ ಎನ್‌ಐಎ ದಾಳಿ

    ಕೋಲಾರ ಅಭ್ಯರ್ಥಿ ವಿಚಾರವಾಗಿ, ಈಗಾಗಲೇ ದೇವೇಗೌಡರು ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ದೇವೇಗೌಡರ ನಿರ್ಧಾರವೇ ಅಂತಿಮ. ದೇವೇಗೌಡರು ಎಲ್ಲಾ ನಾಯಕರ ಭಾವನೆ ತಿಳಿದುಕೊಂಡು ನಿರ್ಧಾರ ಘೋಷಣೆ ಮಾಡಿರುತ್ತಾರೆ. ಮಲ್ಲೇಶ್ ಬಾಬು ಅವರ ಹೆಸರು ಘೋಷಣೆ ಮಾಡಿದ್ದಾರೆ. ಮಲ್ಲೇಶ್ ಬಾಬು ಮೃದು ಸ್ವಾಭಾವದ ವ್ಯಕ್ತಿ. ಪಕ್ಷಕ್ಕೆ ನಿಷ್ಠೆ ಇರುವ ವ್ಯಕ್ತಿ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತಿದ್ದರು. ಮಲ್ಲೇಶ್ ಬಾಬು ಜೊತೆಗೆ ನಿಸರ್ಗ ನಾರಾಯಣಸ್ವಾಮಿ, ಸಂಮೃದ್ಧಿ ಮಂಜುನಾಥ್ ಕೂಡಾ ಆಕಾಂಕ್ಷಿ ಇದ್ದಾರೆ. ಕೋಲಾರದ ಮುಖಂಡರ ಸಭೆ ಮಾಡ್ತಿದ್ದೇನೆ. ಅಲ್ಲಿ ಚರ್ಚೆ ಮಾಡಿ ಇಂದೇ ಅಂತಿಮ ತೀರ್ಮಾನ ಮಾಡ್ತೀವಿ ಅಂತ ತಿಳಿಸಿದ್ದಾರೆ.

  • ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

    ಲೋಕ ಸಮರ ಗೆಲ್ಲಲು ದಳಪತಿ-ಕಮಲ ಸಾರಥಿ ಇನ್‌ಸೈಡ್‌ ಮೀಟಿಂಗ್!

    ಬೆಂಗಳೂರು: 2024ರ ಲೋಕಸಭಾ ಚುನಾವಣೆ (Lok Sabha Elections) ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಅದಕ್ಕಾಗಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಈಗಾಗಲೇ ರಣತಂತ್ರ ಎಣೆಯುತ್ತಿವೆ. ಬಿಡದಿ ತೋಟದ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (H.D.Kumaraswamy) ಅವರನ್ನು ಭೇಟಿಯಾಗಿರುವುದು ಇದಕ್ಕೆ ಪುಷ್ಠಿ ನೀಡಿದೆ.

    ಬಿಡದಿ ಮನೆಯಲ್ಲಿ ಕುಮಾರಸ್ವಾಮಿ-ವಿಜಯೇಂದ್ರ ದೋಸ್ತಿ ಮಾತುಕತೆ ನಡೆಸಿದ್ದಾರೆ, ಸರ್ಕಾರದ ವಿರುದ್ಧ ಜಂಟಿ ಹೋರಾಟಕ್ಕೆ ಪ್ಲ್ಯಾನ್ ಸಿದ್ಧವಾಗಿದೆ. ಅಲ್ಲದೇ ದೋಸ್ತಿ ಕ್ಷೇತ್ರಗಳ ಸೀಟು ಹಂಚಿಕೆಗಳ ಬಗ್ಗೆಯೂ ಪ್ರಾಥಮಿಕ ಸಭೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು ಕಂಬಳದಲ್ಲಿ ಜೈ ತುಳುನಾಡು ಪುತ್ತೂರು ಬೊಟ್ಯಾಡಿ ಕಿಶೋರ್ ಭಂಡಾರಿ ಕೋಣಗಳು ಜಯ

    ಕುಮಾರ-ವಿಜಯ ಮೀಟಿಂಗ್ ಇನ್ ಸೈಡ್ ಸ್ಟೋರಿ ಏನು?
    ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸೀಟು ಹಂಚಿಕೆ ಬಗ್ಗೆ ಪ್ರಾಥಮಿಕ ಚರ್ಚೆ, ಗೋವಾ ಸಿಎಂ ಪ್ರಮೋದ್ ಸಾವಂತ್ ಬಳಿ ಇಟ್ಟಿರೋ ಸೀಟು ಹಂಚಿಕೆ, ಫಾರ್ಮುಲಾ ಬಗ್ಗೆ ಚರ್ಚೆ, ಲೋಕಸಭೆ ಚುನಾವಣೆಯಲ್ಲಿ 4-6 ಸ್ಥಾನದ ಬೇಡಿಕೆ ಬಗ್ಗೆ ಕುಮಾರಸ್ವಾಮಿರಿಂದ ವಿಷಯ ಪ್ರಸ್ತಾಪವಾಗಿದೆ ಎಂಬುದು ಸದ್ಯದ ಮಾಹಿತಿ. ಇದನ್ನೂ ಓದಿ: ಫಸಲಿಗೆ ಬಂದ 70ಕ್ಕೂ ಹೆಚ್ಚು ತೆಂಗಿನ ಮರಗಳನ್ನು ಕಡಿದ ಕಿಡಿಗೇಡಿಗಳು – ಕಣ್ಣೀರಿಟ್ಟ ರೈತ

    ಅಲ್ಲದೇ ಲೋಕಸಭೆ ಚುನಾವಣೆ ಎಲ್ಲೆಲ್ಲಿ ಜಂಟಿ ಸಮಾವೇಶ ನಡೆಸಬೇಕು? ಬೆಳಗಾವಿ ಅಧಿವೇಶನದಲ್ಲಿ (Belagavi Session) ಸರ್ಕಾರದ ಯಾವ ರೀತಿ ಹೋರಾಟಗಳನ್ನ ನಡೆಸಬೇಕು? ಅದಕ್ಕೆ ರೂಪುರೇಷೆಗಳು ಹೇಗಿರಬೇಕು? ಎನ್ನುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಇದರೊಂದಿಗೆ ಸಚಿವ ಜಮೀರ್ ಅಹ್ಮದ್‌ ಖಾನ್‌ ತೆಲಂಗಾಣ ಚುನಾವಣಾ ಪ್ರಚಾರದ ಬಗ್ಗೆ ನೀಡಿದ ಹೇಳಿಕೆ, ಸಿಎಂ ಪುತ್ರ ಯತೀಂದ್ರ ವಿಡಿಯೋ ವಿಚಾರ, ರೈತರಿಗೆ ಅನ್ಯಾಯ, ಗ್ಯಾರಂಟಿಗಳ ವೈಫಲ್ಯದ ಜಂಟಿ ಹೋರಾಟ ರೂಪಿಸಬೇಕು. ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆದಿರೋ ಪ್ರಕರಣದಲ್ಲಿ ಮೊದಲ ದಿನದಿಂದಲೇ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

  • ದೇವೇಗೌಡರ ಹೇಳಿಕೆ ಸುಳ್ಳು: ಕೇರಳ ಸಿಎಂ

    ದೇವೇಗೌಡರ ಹೇಳಿಕೆ ಸುಳ್ಳು: ಕೇರಳ ಸಿಎಂ

    ತಿರುವನಂತಪುರಂ: ಕೇರಳ ನಾಯಕರು ಜೆಡಿಎಸ್-ಬಿಜೆಪಿ ಮೈತ್ರಿಗೆ (BJP-JDS Alliance) ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು (H.D.Devegowda) ನೀಡಿರುವ ಹೇಳಿಕೆ ಸುಳ್ಳು ಮತ್ತು ಅಸಂಬದ್ಧ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟನೆ ನೀಡಿದ್ದಾರೆ.

    ಕರ್ನಾಟಕದ ಬಿಜೆಪಿ-ಜೆಡಿಎಸ್‌ ಮೈತ್ರಿಗೆ ಕೇರಳದ ಸಿಪಿಐ (ಎಂ) ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೆಚ್‌ಡಿಡಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಣರಾಯ್‌ ವಿಜಯನ್‌ (Pinarayi Vijayan), ಈ ವಿಚಾರ ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲೆಕ್ಷನ್‍ನಲ್ಲೂ ಸಿಎಂ, ಡಿಸಿಎಂ ನಡುವೆ ತೀವ್ರ ಸ್ಪರ್ಧೆ: ಡಿ.ವಿ.ಸದಾನಂದಗೌಡ

    ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಸಿಪಿಐ(ಎಂ) ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇತ್ತೀಚೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್‌ಡಿಎ) ಸೇರ್ಪಡೆಯಾಗಿದೆ. ಈ ನಿರ್ಧಾರವು ರಾಜ್ಯದ ಅನೇಕ ಜೆಡಿಎಸ್ ನಾಯಕರಿಗೆ ಇಷ್ಟವಾಗಲಿಲ್ಲ. ಪಕ್ಷದ ಕೇರಳ ಘಟಕವೂ ಸಹ ಎನ್‌ಡಿಎ ಸೇರುವ ಕೇಂದ್ರ ನಾಯಕತ್ವದ ನಿರ್ಧಾರವನ್ನು ತಿರಸ್ಕರಿಸಿತು.

    ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಜೆಡಿಎಸ್‌ನ ಎಲ್ಲಾ ರಾಜ್ಯ ಘಟಕಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿವೆ ಎಂದು ದೇವೇಗೌಡರು ಗುರುವಾರ ಪ್ರತಿಪಾದಿಸಿದ್ದರೆಂದು ವರದಿಯಾಗಿತ್ತು. ಇದನ್ನೂ ಓದಿ: ಮೈಸೂರಿನಲ್ಲೂ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ

    ಕೇರಳದಲ್ಲಿ ನಾವು ಸರ್ಕಾರದ ಭಾಗವಾಗಿದ್ದೇವೆ. ನಮ್ಮ ಶಾಸಕರು ಅಲ್ಲಿ ಮಂತ್ರಿಯಾಗಿದ್ದಾರೆ. ಈ ಘಟಕಗಳು ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿವೆ. ನಮ್ಮ ನಡೆಯನ್ನು ಬೆಂಬಲಿಸಿವೆ. ಕೇರಳದ ಎಡ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು‌, ಪಕ್ಷವನ್ನು (ಜೆಡಿಎಸ್) ಉಳಿಸಲು ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮುಂದುವರಿಯಲು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂದಿದ್ದರು.

    ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, ಜೆಡಿಎಸ್ ನಾಯಕರ ಹೇಳಿಕೆ ಸುಳ್ಳು ಮತ್ತು ಸಂಪೂರ್ಣ ಅಸಂಬದ್ಧ. ಅವರು ತಮ್ಮ ರಾಜಕೀಯ ಮೇಲಾಟಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ

    ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಗಾದಿಯನ್ನು ಕೊಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಪಕ್ಷದ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ

    ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ.. ನನ್ನದು ಒರಿಜಿನಲ್ ಜೆಡಿಎಸ್: ಸಿಎಂ ಇಬ್ರಾಹಿಂ

    – ನಮ್ಮ ಬೆಂಬಲ ಇಂಡಿಯಾ ಒಕ್ಕೂಟಕ್ಕೆ; ದೇವೇಗೌಡರು ಮೈತ್ರಿ ನಿರ್ಧಾರ ಮಾಡಿಲ್ಲ

    ಬೆಂಗಳೂರು: ಬಿಜೆಪಿ ಜೊತೆ ಜೆಡಿಎಸ್ ಹೋಗಲ್ಲ. ಇದು ನಮ್ಮ ಮೊದಲ ನಿರ್ಧಾರ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೆಚ್.ಡಿ.ದೇವೇಗೌಡರಿಗೆ ಹೇಳುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (C.M.Ibrahim) ತಿಳಿಸಿದರು.

    ಬಿಜೆಪಿ ಜೊತೆ ಮೈತ್ರಿ (BJP-JDS Alliance) ವಿರೋಧಿಸಿ ಇಂದು (ಭಾನುವಾರ) ಬೆಂಬಲಿಗರ ಚಿಂಥನ-ಮಂಥನ ಸಭೆಯನ್ನ ಸಿ.ಎಂ ಇಬ್ರಾಹಿಂ ಕರೆದಿದ್ದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಿ ಮೈತ್ರಿಗೆ ವಿರೋಧ ಘೋಷಣೆ ಮಾಡಿದರು. ಇದನ್ನೂ ಓದಿ: ಮದ್ಯದಂಗಡಿ ಲೈಸೆನ್ಸ್ ವಿವಾದ- ವೇದಿಕೆ ಮೇಲೆಯೇ ಶಿವಲಿಂಗೇಗೌಡ, ಸುರೇಶ್ ಕಿತ್ತಾಟ

    ಈ ಕುರಿತು ಮಾತನಾಡಿರುವ ಅವರು, ಜೆಡಿಎಸ್ ಬಿಜೆಪಿ ಜೊತೆ ಹೋಗುವುದಿಲ್ಲ. ಇದು ನಮ್ಮ ಮೊದಲ ನಿರ್ಧಾರ. ದೇವೇಗೌಡರಿಗೆ ಸಭೆ ನಿರ್ಧಾರ ತಿಳಿಸುತ್ತೇವೆ. ನೀವು ಮೈತ್ರಿಗೆ ಒಪ್ಪಿಗೆ ಕೊಡಬಾರದು ಎಂದು ಮನವಿ ಮಾಡುತ್ತೇವೆ. ಬಿಜೆಪಿ ಜೊತೆ ಹೋಗಬೇಡಿ ಅಂತ ಹೇಳುತ್ತೇವೆ ಎಂದರು.

    ನನ್ನದು ಒರಿಜಿನಲ್ ಜೆಡಿಎಸ್. ನಮ್ಮದು ಜಾತ್ಯತೀತ ಜೆಡಿಎಸ್. ನಮ್ಮ ಪಕ್ಷದ ನಿರ್ಧಾರ ಮೈತ್ರಿಗೆ ಒಪ್ಪಿಗೆ ಇಲ್ಲ. ಶಾಸಕರ ಜೊತೆ ಒನ್ ಟು ಮಾತಾಡ್ತೀನಿ. ಶಾಸಕರು ನನ್ನ ಜೊತೆ ಮಾತಾಡಿದ್ದಾರೆ. ಯಾರ್ ಯಾರು ಅಂತ ಹೇಳೋದಿಲ್ಲ. ಸಮಯ ಬಂದಾಗ ಯಾರು ಯಾರು ಬರ್ತಾರೆ ಅಂತ ಗೊತ್ತಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಐಟಿ ದಾಳಿಯಲ್ಲಿ SST ಟ್ಯಾಕ್ಸ್, ಸಂತೋಷ್ ಮನೆಯಲ್ಲಿ ಸಿಕ್ಕಿದ್ದು YST ಕಲೆಕ್ಷನ್: ಹೆಚ್‍ಡಿಕೆ ಹೊಸ ಬಾಂಬ್

    ನಿಮ್ಮ ನಿಲುವು ಒಪ್ಪದೇ ಹೋದರೆ ಕುಮಾರಸ್ವಾಮಿರನ್ನ ಉಚ್ಚಾಟನೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಚ್ಚಾಟನೆಗೆ ಕಾಲ ಪಕ್ವ ಆಗಿಲ್ಲ. ನಾನೇ ಜೆಡಿಎಸ್ ಬಿಟ್ಟು ಹೋಗ್ತೀನಿ ಅಂತಾರೆ, ಏನ್ ಮಾಡಲಿ. ನಾನು ಜೆಡಿಎಸ್ ಬಿಟ್ಟು ಹೋಗೊಲ್ಲ. ನಮ್ಮ ಮನೆ ಬಿಟ್ಟು ನಾನು ಯಾಕೆ ಹೋಗಲಿ. ನಮ್ಮ ನಿಲುವು ದೇವೇಗೌಡರಿಗೆ ತಿಳಿಸ್ತೀವಿ. ಅವರು ಒಪ್ಪದೇ ಹೋದರೆ ಏನ್ ಮಾಡ್ತೀವಿ ಅಂತ ಕಾದುನೋಡಿ. ಕುಮಾರಸ್ವಾಮಿ ಉಚ್ಚಾಟನೆ ಮಾಡ್ತೀರಾ ಅನ್ನೋ ಪ್ರಶ್ನೆಗೆ ವೇಯ್ಟ್ ಅಂಡ್ ಸಿ ಎಂದು ಪ್ರತಿಕ್ರಿಯಿಸಿದರು.

    ಎನ್‌ಡಿಎ ಸೋಲಿಸಬೇಕು. ಹೀಗಾಗಿ ಐಎನ್‌ಡಿಐಎಗೆ ಬೆಂಬಲ ಕೊಡಬೇಕು ಅಂತ ನಿರ್ಣಯ ಆಗಿದೆ. ಮೈತ್ರಿ ಬಗ್ಗೆ ನಿಲುವು ತಿಳಿಸೋಕೆ ಕೋರ್ ಕಮಿಟಿ ಮಾಡ್ತೀನಿ. ಅದು ಮುಂದಿನ ತೀರ್ಮಾನ ಮಾಡುತ್ತೆ. ನಾನು ದೇವೇಗೌಡರನ್ನ ಭೇಟಿ ಆಗ್ತೀನಿ. ಯಾವಾಗ ಅಂತ ಹೇಳಿ ಹೋಗ್ತೀನಿ. ಸದ್ಯ ಒರಿಜಿನಲ್ ಜೆಡಿಎಸ್ ಇಂಡಿಯಾಗೆ ಬೆಂಬಲ ಕೊಡುತ್ತೆ ಎಂದು ತಮ್ಮ ನಿಲುವು ತಿಳಿಸಿದರು. ಇದನ್ನೂ ಓದಿ: ಐಟಿ, ಇಡಿ, ಸಿಬಿಐ ಎಲ್ಲಾ ಕೇಂದ್ರದ ವ್ಯಾಪ್ತಿಯಲ್ಲಿವೆ; ಅವರು ಆಡಿದ್ದೇ ಆಟ: ಸಂತೋಷ್ ಲಾಡ್

    ಸಭೆಯಲ್ಲಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಾಟೇಲ್, ಜೆಡಿಎಸ್‌ಗೆ ರಾಜೀನಾಮೆ ನೀಡಿರುವ ಸೈಯದ್ ಶಫಿಉಲ್ಲಾ, ಹಾವೇರಿ ಜಿಲ್ಲೆಯ ಜೆಡಿಎಸ್ ಮುಖಂಡ ಮನೋಹರ್ ತಹಶಿಲ್ದಾರ್ ಸೇರಿ ಹಲವು ಮುಸ್ಲಿಂ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2024ಕ್ಕೆ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ: HDK ಭವಿಷ್ಯ

    2024ಕ್ಕೆ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ: HDK ಭವಿಷ್ಯ

    – ಜೋಡೆತ್ತು ಎಂದವರು ನಡುರಸ್ತೆಯಲ್ಲಿ ಕೈ ಬಿಟ್ಟರು-ಮೈತ್ರಿ ಸರ್ಕಾರ ಹೋಗಿದ್ದು ಡಿಕೆಶಿಯಿಂದ್ಲೇ ಎಂದ ಮಾಜಿ ಸಿಎಂ

    ರಾಮನಗರ: ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಬೀಳುತ್ತದೆ. 2024ಕ್ಕೆ ಮತ್ತೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ನಡೆಯುವುದು ಖಚಿತ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಭವಿಷ್ಯ ನುಡಿದಿದ್ದಾರೆ.

    ಬಿಡದಿಯ ತಮ್ಮ ತೋಟದ ಮನೆಯಲ್ಲಿ ನಡೆದ ರಾಮನಗರ ಜಿಲ್ಲಾ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ನನ್ನ ಕೈ ಮೇಲೆ ಎತ್ತಿ ಜೋಡೆತ್ತು ಎಂದು ಹೇಳಿದ ನಯವಂಚಕ ಮಾತುಗಳನ್ನು ನಂಬಿ ಮೋಸ ಹೋದೆ. ಆಮೇಲೆ ಅವರು ನನ್ನನ್ನು ನಡುರಸ್ತೆಯಲ್ಲಿ ಕೈ ಬಿಟ್ಟು ಎತ್ತು, ಗಾಡಿಯೊಂದಿಗೆ ಪಲಾಯನ ಮಾಡಿದರು. 2018 ಸರ್ಕಾರ ಹೋಗಿದ್ದು ಡಿ.ಕೆ ಶಿವಕುಮಾರ್ ಅವರಿಂದಲೇ ಹೊರತು ನನ್ನಿಂದ ಅಲ್ಲ. ನನಗೂ ರಮೇಶ್ ಜಾರಕಿಹೊಳಿ ಅವರಿಗೂ ವೈಷಮ್ಯ ಇತ್ತಾ? ಬೆಳಗಾವಿ ಡಿಸಿಸಿ ಬ್ಯಾಂಕ್ ರಾಜಕೀಯಕ್ಕೆ (Vote Bank Politics) ನಾನು ಬಲಿಪಶುವಾದೆ. ಅವರು ಬೆಳಗಾವಿ ರಾಜಕೀಯಕ್ಕೆ ಕೈಹಾಕಿದ್ದು ಯಾಕೆ? ನಾನು ಕುಮಾರಣ್ಣನ ಸರ್ಕಾರ ಉಳಿಸೋಕೆ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಮೊಸಳೆ ಕಣ್ಣೀರು ಹಾಕಿ ಪ್ರಚಾರ ತೆಗೆದುಕೊಂಡರು. ಆಮೇಲೆ ನೋಡಿದರೆ ಒಳಗೊಳಗೇ ಮಾಡುವುದೆಲ್ಲ ಮಾಡಿದರು ಎಂದು ಅಸಮಾಧಾನ ಹೊರಹಾಕಿದರು.

    ಸಭೆಯಲ್ಲಿ ಕನಕಪುರ ಕ್ಷೇತ್ರದ ಜೆಡಿಎಸ್‌ ಮುಖಂಡರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಅವರನ್ನು ನಂಬಿ ನಾನು ಕುತ್ತಿಗೆ ಕೊಯ್ದುಕೊಂಡಿದ್ದೇನೆ. ನಿಮ್ಮ ಕುತ್ತಿಗೆಯನ್ನು ಕೊಯ್ದಿದ್ದೇನೆ. ಅವರಿಂದ ನನಗೆ, ನಿಮಗೆ ಅನ್ಯಾಯ ಆಗಿದೆ. ಅದನ್ನು ಬಿಟ್ಟರೆ ಕನಕಪುರ ಜನರಿಗೆ ನನ್ನಿಂದ ಎಳ್ಳಷ್ಟೂ ಅನ್ಯಾಯ ಆಗಿಲ್ಲ. ಆಗಿರುವ ಅನ್ಯಾಯ ಸರಿ ಮಾಡುವ ಹೊಣೆ ನನ್ನದು ಎಂದು ಡಿಕೆಶಿ ವಿರುದ್ಧ ಕೆಂಡಕಾರಿದರು. ಇದನ್ನೂ ಓದಿ: ನನ್ನನ್ನು ಸಾಯಿಸ್ಬೇಡಿ- ಬೇಡಿಕೊಂಡ್ರೂ ಬಿಡದೆ ಯುವತಿ ಅಪಹರಿಸಿದ ಹಮಾಸ್ ಉಗ್ರರು

    ಕೋಟೆ ಕಟ್ಟಿ ಮೆರೆದೋರೆಲ್ಲ ಏನೇನೋ ಆಗಿ ಹೋದರು. ಅದು ಇವರಿಗೂ ಅನ್ವಯ ಆಗುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ 2 ರಿಂದ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಬೇಕು. ಅದಕ್ಕೆ ನೀವೆಲ್ಲರೂ ಶ್ರಮ ಹಾಕಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಮೈತ್ರಿಕೂಟದ ಮೂಲಕ ಇಡೀ ರಾಜ್ಯಕ್ಕೆ-ದೇಶಕ್ಕೆ ನಾವು ಒಳ್ಳೆಯ ಸಂದೇಶ ಕೊಡಬೇಕು. ನಾವೆಲ್ಲರೂ ನಂಬಿಕೆ, ವಿಶ್ವಾಸ, ಪ್ರಾಮಾಣಿಕತೆಯಿಂದ ಕೆಲಸ ಮಾಡೋಣ. ಯಾರೇ ಮೈತ್ರಿಕೂಟದ ಅಭ್ಯರ್ಥಿ ಆದರೂ ನಾವು ಒಟ್ಟಾಗಿ ಕೆಲಸ ಮಾಡೋಣ ಎಂದು ಕರೆ ನೀಡಿದರು. ಇದನ್ನೂ ಓದಿ: ದೆಹಲಿ ಐಐಟಿ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರ ವೀಡಿಯೋ ಚಿತ್ರೀಕರಣ – ಸ್ವಚ್ಛತಾ ಸಿಬ್ಬಂದಿ ಬಂಧನ

    ಕಳೆದ ಬಾರಿ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಅವರಿಗೆ ಮೋಸ ಮಾಡಿದ ಹಾಗೆ ಇಲ್ಲಿಯೂ ನಾವು ಮಾಡಿದ್ದಿದ್ದರೆ, ಆ ವ್ಯಕ್ತಿ (ಡಿ.ಕೆ.ಸುರೇಶ್) ಯ ಕಥೆ ಅಂದೇ ಮುಗಿದು ಹೋಗುತ್ತಿತ್ತು. ಆದರೆ, ನಾವು ಮೈತ್ರಿ ಧರ್ಮ ಪಾಲಿಸಿದೆವು. ಅವರು ನಮಗೆ ಕೇಡು ಬಗೆದರು ಎಂದು ಕಿಡಿ ಕಾರಿದರು. ಇದನ್ನೂ ಓದಿ: ಪ್ರಧಾನಿ ಮೋದಿ ಹತ್ಯೆ, ಮೋದಿ ಸ್ಟೇಡಿಯಂ ಸ್ಫೋಟ ಬೆದರಿಕೆ – ಮುಂಬೈ ಪೊಲೀಸರಿಗೆ ಸಂದೇಶ

    ಇಷ್ಟು ಕೆಟ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಆಂತರಿಕ ಕಚ್ಚಾಟದಿಂದ ಈ ಸರ್ಕಾರ ಹೋಗುತ್ತದೆ. 2024ರಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವುದು ಖಚಿತ. ಆ ಚುನಾವಣೆಗೆ ಆ ವ್ಯಕ್ತಿ ಅಭ್ಯರ್ಥಿ ಆಗುವುದೇ ಅನುಮಾನ, ಏನು ಆಗುತ್ತದೆ ಎನ್ನುವುದು ನನಗೆ ಗೊತ್ತಿದೆ. ಜೀವನದಲ್ಲಿ ಡಿಕೆಶಿ ಜೊತೆಗೆ ಇನ್ನೆಂದಿಗೂ ರಾಜಿ ಆಗಿಲ್ಲ. ಒಮ್ಮೆ ಅವರ ಜೊತೆ ಸರ್ಕಾರ ಮಾಡಿದ್ದರಿಂದ ನಾನು ಈಗಲೂ ನೋವು ಅನುಭವಿಸ್ತಾ ಇದ್ದೇನೆ. ಅವರು ಒಮ್ಮೆ ತಿಹಾರ್ ಜೈಲು ನೋಡಿಕೊಂಡು ಬಂದಿದ್ದಾರೆ. ಅವರು ಮತ್ತೆ ಅಲ್ಲಿಗೆ ಪರ್ಮನೆಂಟಾಗಿ ಹೋದರೂ ಅಚ್ಚರಿಯಿಲ್ಲ. ನಮ್ಮನ್ನು ಹಾಸನಕ್ಕೆ ಓಡಿಸಬಹುದು, ಅವರು ತಿಹಾರ್‌ ಜೈಲಿಗೆ ಓಡುವ ಕಾಲ ಹತ್ತಿರದಲ್ಲಿ ಇದೆ ಡಿಕೆಶಿ ವಿರುದ್ಧ ಲೇವಡಿ ಮಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • BJP-JDS ಮೈತ್ರಿಗೆ ಜೆಡಿಎಸ್ ಶಾಸಕರಿಂದ ಸರ್ವಾನುಮತದ ಒಪ್ಪಿಗೆ

    BJP-JDS ಮೈತ್ರಿಗೆ ಜೆಡಿಎಸ್ ಶಾಸಕರಿಂದ ಸರ್ವಾನುಮತದ ಒಪ್ಪಿಗೆ

    – ಸಭೆಗೆ ಸಿಎಂ ಇಬ್ರಾಹಿಂ ಗೈರು

    ರಾಮನಗರ: ಬಿಜೆಪಿ ಜೊತೆಗಿನ ಮೈತ್ರಿಗೆ (BJP-JDS Alliance) ಜೆಡಿಎಸ್‌ ಹಾಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು ಸರ್ವಾನುಮತದ ಒಪ್ಪಿಗೆ ಸೂಚಿಸಿದ್ದಾರೆ.

    ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನ ಸ್ಫೋಟಗೊಂಡ ಹಿನ್ನೆಲೆ, ಪಕ್ಷದ ಡ್ಯಾಮೇಜ್ ಕಂಟ್ರೋಲ್ ಮಾಡಲು ಖುದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡರೇ (HD Devegowda) ಅಖಾಡಕ್ಕಿಳಿದಿದ್ದಾರೆ. ಜೆಡಿಎಸ್‌ ಹಾಲಿ ಶಾಸಕರು, ವಿಧಾನ ಪರಿಷತ್‌ ಸದಸ್ಯರ ಸಭೆ ಕರೆದು ಮೈತ್ರಿಗೆ ಸರ್ವಾನುಮತದಿಂದ ಒಪ್ಪಿಗೆ ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಜೊತೆಗಿನ ಮೈತ್ರಿಯ ಉದ್ದೇಶದ ಕುರಿತು ಪಕ್ಷದ ನಾಯಕರ ಮನವೊಲಿಸುವ ದೇವೇಗೌಡರು ಹಾಗೂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರ ಪ್ರಯತ್ನ ಸಕ್ಸಸ್‌ ಆಗಿದೆ.

    ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿರೋ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ಅಸಮಾಧಾನದ ಬಿಸಿ ತಟ್ಟಿದೆ. ಮೈತ್ರಿಗೆ ಜೆಡಿಎಸ್‌ನ (JDS) ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೈತ್ರಿಯ ಅನಿವಾರ್ಯತೆ ಹಾಗೂ ಪಕ್ಷದಲ್ಲಿನ ಗೊಂದಲ ನಿವಾರಿಸಲು ಖುದ್ದು ದೊಡ್ಡಗೌಡರೇ ಸಭೆ ನಡೆಸಿ ಶಾಸಕರಿಗೆ ಮೈತ್ರಿಯ ಉದ್ದೇಶ ಮನವರಿಕೆ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮುಸ್ಲಿಮರು ಎಚ್ಚರಿಕೆಯಿಂದಿರಿ, ಮತಕ್ಕಾಗಿ ಒಂದು ಸಮಾಜವನ್ನು ಓಲೈಕೆ ಮಾಡುವ ಅವಶ್ಯಕತೆ ನನಗಿಲ್ಲ: HDK

    ಬಿಡದಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಸಂಬಂಧ ನಡೆದ ಸಭೆಯಲ್ಲಿ 19 ಶಾಸಕರ ಪೈಕಿ 17 ಜನ ಶಾಸಕರು ಹಾಜರಾಗಿದ್ದಾರೆ. ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೆಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim), ಹನೂರು ಶಾಸಕ ಮಂಜುನಾಥ್, ಗುರುಮಿಟ್ಕಲ್ ಶಾಸಕ ಶರಣಗೌಡ ಕುಂದಕೂರ್ ಗೈರಾಗಿದ್ದರು. ಇದನ್ನೂ ಓದಿ: ರಾಜ್ಯ ಸರ್ಕಾರದ ನಿಲುವನ್ನು ಸಮರ್ಥಿಸುತ್ತೇನೆ – ಕಾವೇರಿ ಸಮಸ್ಯೆ ಪರಿಹಾರಕ್ಕೆ ಸಂಕಷ್ಟ ಸೂತ್ರ ರಚನೆಯಾಗಬೇಕು: SM ಕೃಷ್ಣ

    ಒಟ್ಟಿನಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಪ್ರಯತ್ನದ ಫಲವಾಗಿ ಮೈತ್ರಿಗೆ ಸರ್ವಾನುಮತದ ಒಪ್ಪಿಗೆ ಪಡೆದಿದ್ದಾರೆ. ಆದ್ರೆ 2024ರ ಲೋಕಸಭಾ ಚುನಾವಣೆಗೆ ಈ ಮೈತ್ರಿ ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನ ಕಾದು ನೋಡಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮುಸ್ಲಿಮರು ಎಚ್ಚರಿಕೆಯಿಂದಿರಿ, ಮತಕ್ಕಾಗಿ ಒಂದು ಸಮಾಜವನ್ನು ಓಲೈಕೆ ಮಾಡುವ ಅವಶ್ಯಕತೆ ನನಗಿಲ್ಲ: HDK

    ಮುಸ್ಲಿಮರು ಎಚ್ಚರಿಕೆಯಿಂದಿರಿ, ಮತಕ್ಕಾಗಿ ಒಂದು ಸಮಾಜವನ್ನು ಓಲೈಕೆ ಮಾಡುವ ಅವಶ್ಯಕತೆ ನನಗಿಲ್ಲ: HDK

    – ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯಕ್ಕೂ ತೊಂದರೆ ಇಲ್ಲವೆಂದ ಮಾಜಿ ಸಿಎಂ

    ರಾಮನಗರ: ಮುಸ್ಲಿಂ ಬಾಂಧವರು ಎಚ್ಚರಿಕೆಯಿಂದ ಇರಿ. ಕೆಲ ಕಾಂಗ್ರೆಸ್‌ ನಾಯಕರು (Congress Leaders) ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.

    ಬಿಜೆಪಿ-ಜೆಡಿಎಸ್‌ ಮೈತ್ರಿ (BJP JDS Alliance) ಸಂಬಂಧ ಬಿಡದಿಯ ತೋಟದ ಮನೆಯಲ್ಲಿ ಭಾನುವಾರ (ಅ.1) ಸಭೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಜೊತೆಗಿನ ಮೈತ್ರಿ ಸಂಬಂಧಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದು ಘೋಷಣೆ ಮಾಡಿದರು. ಇದನ್ನೂ ಓದಿ: Asian Games 2023: 3000 ಮೀ. ಸ್ಟೀಪಲ್‌ ಚೇಸ್‌ನಲ್ಲಿ ದಾಖಲೆಯೊಂದಿಗೆ ಬಂಗಾರಕ್ಕೆ ಮುತ್ತಿಟ್ಟ ಅವಿನಾಶ್‌

    ಬಳಿಕ ಮಾತನಾಡಿ, ಮುಸ್ಲಿಂ ಬಾಂಧವರು (Muslims) ಎಚ್ಚರಿಕೆಯಿಂದ ಇರಿ, ಕೆಲ ಕಾಂಗ್ರೆಸ್‌ ನಾಯಕರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಮತಕ್ಕಾಗಿ ಒಂದು ಸಮಾಜವನ್ನ ಓಲೈಕೆ ಮಾಡುವ ಅವಶ್ಯಕತೆಯಿಲ್ಲ. ಮುಸ್ಲಿಂ ಬಾಂಧವರ ಬಗ್ಗೆ ನಮ್ಮ ಕಮಿಟ್‌ಮೆಂಟ್‌ ಏನು ಅಂತ ಎಲ್ಲರಿಗೂ ಗೊತ್ತು. ಕಳೆದ ಬಾರಿ ಉಂಟಾದ ಸಮಸ್ಯೆ ಬಗ್ಗೆ ಧ್ವನಿ ಎತ್ತಿ ಅವರ ಪರವಾಗಿ ನಿಂತಿದ್ದು ನಾನು. ಹಾಗಾಗಿ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲೋನ್ ಮಸ್ಕ್‌ ವಹಿಸಿಕೊಂಡ ಬಳಿಕ ‘X’ ಬಳಕೆದಾರರ ಸಂಖ್ಯೆ ಕುಸಿಯುತ್ತಿದೆ: ಸಿಇಒ

    ಮುಂದಿನ ಒಂದು ತಿಂಗಳ ಒಳಗೆ 31 ಜಿಲ್ಲೆಗಳಲ್ಲೂ ಸಭೆ ಮಾಡಲಿದ್ದೇವೆ. ಪಕ್ಷದ ಮುಖಂಡರ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗುತ್ತೆ. ಮೈತ್ರಿಯಿಂದ ನಮ್ಮ ಅಭ್ಯರ್ಥಿಗಳಿಗೆ ಟಿಕೆಟ್‌ ಸಮಸ್ಯೆ ಉಂಟಾಗುವುದಿಲ್ಲ. ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ. ಈ ಬಗ್ಗೆ ಮುಕ್ತವಾಗಿ ಮತ್ತೊಮ್ಮೆ ಚರ್ಚೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.

    ಹೊಂದಾಣಿಕೆಯಿಂದ ಯಾರ ರಾಜಕೀಯ ಭವಿಷ್ಯವನ್ನೂ ಹೊಸಕಿಹಾಕಲ್ಲ. ಜಿ.ಟಿ ದೇವೇಗೌಡ ಅವರ ನೇತೃತ್ವದ ಕೋರ್‌ ಕಮಿಟಿ ಇದೆ. ಈ ಸಮಿತಿ ಮೂಲಕ ಸಂಘಟನೆ ಮಾಡ್ತೀವಿ. ಕಾಂಗ್ರೆಸ್‌ ನಾಯಕರು ನನ್ನ ಬಗ್ಗೆ ಏನು ಬೇಕಾದ್ರೂ ಅವಹೇಳನ ಮಾಡಲಿ. ಅದಕ್ಕೆ ನನ್ನ ಕಾರ್ತಕರ್ತರು ಹಾಗೂ ನಾಡಿನ ಜನತೆ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ ಎಂದು ಹೇಳಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]