Tag: ಬಿಜೆಪಿ-ಜೆಡಿಎಸ್‌ ಮೈತ್ರಿ

  • ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    ಮಹಿಳೆಯರಿಗೆ ಫ್ರೀ ಬಸ್‌ ಕೊಟ್ಟರು, ಪಾಪ ಪುರುಷರಿಗೆ ಏನ್‌ ಮಾಡಿದ್ರು? – ಸರ್ಕಾರಕ್ಕೆ ನಟಿ ತಾರಾ ಪ್ರಶ್ನೆ

    – ವಕ್ಫ್‌ ವಿಚಾರ ತಂದು ಸರ್ಕಾರ ಹಿಂದೂ-ಮುಸ್ಲಿಮರನ್ನು ಒಡೆಯುತ್ತಿದೆ
    – ನಿಖಿಲ್‌ರನ್ನ ಗೆಲ್ಲಿಸದಿದ್ರೆ ನಾವೆಲ್ಲ ಪಾಪ ಮಾಡಿದಂತೆ ಎಂದ ನಟಿ

    ರಾಮನಗರ: ಕಾಂಗ್ರೆಸ್‌ನವರು ಮಹಿಳೆಯರಿಗಾಗಿ ಫ್ರೀ ಬಸ್‌ ಮಾಡಿದ್ರು, ಪಾಪ ಪುರುಷರು ಏನ್‌ ಮಾಡಿದ್ರು? ಪುರುಷರ ಜೇಬಿಗೆ ಕತ್ತರಿ ಹಾಕಿ, ಮಹಿಳೆಯರಿಗೆ ಕೊಟ್ಟರು. ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರನ್ನ ಈಗಲೂ ಶಾಸಕರಾಗಿ ನಾವು ಆಯ್ಕೆ ಮಾಡದಿದ್ದರೆ, ನಾವೆಲ್ಲ ಪಾಪ ಮಾಡಿದಂತೆ ಎಂದು ನಟಿ ತಾರಾ ಅನುರಾಧ (Tara Anuradha) ಹೇಳಿದರು.

    ಚನ್ನಪಟ್ಟಣದಲ್ಲಿಂದು ನಡೆದ ಬಿಜೆಪಿ-ಜೆಡಿಎಸ್‌ ನಾಯಕರ (BJP JDS Leaders) ಮೈತ್ರಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಅಘೋಷಿತ ಕಾನೂನು ಜಾರಿ ಆದಂತಿದೆ: ಛಲವಾದಿ ನಾರಾಯಣಸ್ವಾಮಿ

    ಹಿಂದೂ-ಮುಸ್ಲಿಮರನ್ನು ಸರ್ಕಾರ ಒಡೆಯುತ್ತಿದೆ:
    ಚನ್ನಪಟ್ಟಣದ (Channapatna) ಜನ ಬಂಗಾರದ ಗೊಂಬೆಯಾಗಿ ಮಾಡಿ ನಿಖಿಲ್ ರನ್ನ ಶಾಸಕರಾಗಿ ಮಾಡ್ತೀರೆಂಬ ನಂಬಿಕೆಯಿದೆ. ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಮರು ಭಾಯಿ ಭಾಯಿಯಂತಿದ್ದಾರೆ, ಎಲ್ಲ ಹಬ್ಬಗಳಲ್ಲಿ ಒಂದಾಗಿರ್ತಾರೆ. ಆದ್ರೆ ವಕ್ಫ್ ವಿಚಾರ ತಂದು ಹಿಂದೂ-ಮುಸ್ಲಿಮರನ್ನ ಒಡೆಯುವ ಕೆಲಸ ಸರ್ಕಾರ ಮಾಡ್ತಿದೆ ಎಂದು ಕಿಡಿ ಕಾರಿದರು.

    ನಿಖಿಲ್ ಎರಡು ಅಗ್ನಿಪರೀಕ್ಷೆ ಎದುರಿಸಿದ್ದಾರೆ. ಈ ಪರೀಕ್ಷೆಯಲ್ಲಿ ಗೆಲ್ಲಿಸದಿದ್ರೆ ನಾವು ಪಾಪ ಮಾಡಿದಂತೆ. ನಿಖಿಲ್ ಕೈ ಹಿಡಿದು ಮೇಲೆತ್ತಿ ನನ್ನ ಅಣ್ಣನ ಮಗ ನಿಖಿಲ್ ರನ್ನ ಗೆಲ್ಲಿಸಿ ಅಂತ ತಾರಾ ಮನವಿ ಮಾಡಿದರು.

    ಇದೇ ವೇಳೆ ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿ, ಚನ್ನಪಟ್ಟಣದಲ್ಲಿ ನಿಖಿಲ್ ಪರ ದೊಡ್ಡ ಗಾಳಿ ಬೀಸ್ತಿದೆ. ಸರ್ಕಾರದ ವಿರುದ್ಧ ಅಲೆ ಇದೆ, ಯೋಗೇಶ್ವರ್ ಕಾಂಗ್ರೆಸ್‌ ಸೇರಿ ತಮ್ಮ ಮೈಮೇಲೆ ತಾವೇ ಗಾಯ ಮಾಡ್ಕೊಂಡು ಔಷಧಿ ಇಲ್ಲದೇ ಪರದಾಡ್ತಿದ್ದಾರೆ. ಗುತ್ತಿಗೆದಾರರರಿಂದ ಸಂಗ್ರಹಿಸಿದ ಹಣ ತಂದು ಕಾಂಗ್ರೆಸ್‌ನವ್ರು ಚುನಾವಣೆ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: Chikkaballapura | ಪುರಾತನ ಆಂಜನೇಯಸ್ವಾಮಿ ದೇವಾಲಯವೂ ವಕ್ಫ್ ಆಸ್ತಿ!

    ನಿಖಿಲ್ ಎರಡು ಸಲ ಏನೂ ತಪ್ಪು ಮಾಡದೇ ನೋವು ಅನುಭವಿಸಿದ್ದಾರೆ. ನಿಖಿಲ್ ರಾಮನಗರದಲ್ಲಿ, ಮಂಡ್ಯದಲ್ಲಿ ಸೋತಿರಬಹುದು, ಆದರೆ ಚನ್ನಪಟ್ಟಣದ ಜನ ನಿಖಿಲ್‌ಗೆ ಜನ ದೊಡ್ಡಮಟ್ಟದಲ್ಲಿ ಆಶೀರ್ವಾದ ಮಾಡ್ತಾರೆ ಅಂತ ಭವಿಷ್ಯ ನುಡಿದರು.

  • ಚನ್ನಪಟ್ಟಣ ಟಿಕೆಟ್‌ ಕಗ್ಗಂಟು – ದೆಹಲಿಗೆ ಹೊರಟ ವಿಜಯೇಂದ್ರ

    ಚನ್ನಪಟ್ಟಣ ಟಿಕೆಟ್‌ ಕಗ್ಗಂಟು – ದೆಹಲಿಗೆ ಹೊರಟ ವಿಜಯೇಂದ್ರ

    – ಸೋಮವಾರ ಹೈಕಮಾಂಡ್‌ಗೆ ಗ್ರೌಂಡ್‌ ರಿಪೋರ್ಟ್‌ ಸಲ್ಲಿಕೆ

    ಬೆಂಗಳೂರು: ರಾಜ್ಯದಲ್ಲಿ ಬೈ ಎಲೆಕ್ಷನ್ ಪಾಲಿಟಿಕ್ಸ್ ಜೋರಾಗಿದೆ. ಅದ್ರಲ್ಲೂ ಚನ್ನಪಟ್ಟಣ ವಿಚಾರವೇ ಹೆಚ್ಚು ಸದ್ದು ಮಾಡ್ತಿದೆ. ಮೈತ್ರಿ ಟಿಕೆಟ್ ವಿಚಾರವಾಗಿ ಬಿಜೆಪಿ-ಜೆಡಿಎಸ್ (BJP JDS Alliance) ನಡುವೆ ಇನ್ನೂ ಒಮ್ಮತ ಮೂಡಿಲ್ಲ. ಇತ್ತ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಚನ್ನಪಟ್ಟಣ ಟಿಕೆಟ್‌ ಬೇಕೆಂದು ಪಟ್ಟು ಹಿಡಿದಿದ್ದರೆ, ಮತ್ತೊಂದೆಡೆ ಟಿಕೆಟ್‌ ಆಕಾಂಕ್ಷಿಯಾಗಿರುವ ಸಿ.ಪಿ ಯೋಗೇಶ್ವರ್‌ (CP Yogeshwara) ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

    ಈ ನಡುವೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (BY Vijayendra) ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಭಾನುವಾರ ಸಂಜೆ 5:30ರ ವಿಮಾನದಲ್ಲಿ ದೆಹಲಿಗೆ ಹೊರಟಿದ್ದು, ಸೋಮವಾರ (ಅ.21) ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದನ್ನೂ ಓದಿ: ಮೀಸಲು ಅರಣ್ಯ ಪ್ರದೇಶದಲ್ಲಿ ಎತ್ತಿನಹೊಳೆ ಯೋಜನೆ ಕಾಮಗಾರಿಗೆ ತಡೆ – ಅರಸೀಕೆರೆ ಕೆರೆಗಳಿಗೆ ಹರಿಯದ ನೀರು

    ಹೈಕಮಾಂಡ್‌ಗೆ ಉಪಚುನಾವಣೆ (By Election) ಗ್ರೌಂಡ್ ರಿಪೋರ್ಟ್ ನೀಡಿದ ಬಳಿಕ ಚುನಾವಣಾ ತಯಾರಿ, ಕ್ಷೇತ್ರದ ಚಿತ್ರಣ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಚನ್ನಪಟ್ಟಣ ಟಿಕೆಟ್‌ ಜಟಾಪಟಿ, ಸಿಪಿವೈ ಹಠದ ಬಗ್ಗೆಯೂ ಮಾಹಿತಿ ಕೊಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದನ್ನೂ ಓದಿ: 6 ಇಂಡಿಗೋ ವಿಮಾನಗಳಲ್ಲಿ 12 ಬಾಂಬ್‌ – ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಬೆದರಿಕೆ

    ಕಾಂಗ್ರೆಸ್‌ನಲ್ಲೂ ಟಿಕೆಟ್‌ ಕಗ್ಗಂಟು:
    ಇನ್ನೂ ಮತ್ತೊಂದೆಡೆ ಚನ್ನಪಟ್ಟಣದಿಂದ ಅಭ್ಯರ್ಥಿಯಾಗಿ ಯಾರನ್ನ ಕಣಕ್ಕಿಳಿಸಬೇಕು ಅನ್ನೋ ಬಗ್ಗೆ ಕಾಂಗ್ರೆಸ್ ಕೂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದೆ. ಈ ಕ್ಷೇತ್ರದ ವಿಚಾರದಲ್ಲಿ ಸ್ಪೆಷಲ್ ಇಂಟ್ರೆಸ್ಟ್ ತೋರಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಮೇಲಿಂದ ಮೇಲೆ ಸಭೆ ಮಾಡ್ತಿದ್ದು, ಅಭಿಪ್ರಾಯ ಸಂಗ್ರಹ ಮಾಡ್ತಿದ್ದಾರೆ. ಈ ಹೊತ್ತಲ್ಲೇ ಇಂಟ್ರೆಸ್ಟಿಂಗ್ ಬೆಳವಣಿಗೆ ನಡೆದಿದೆ. ನಿನ್ನೆಯವರೆಗೂ ನಾನು ಸ್ಪರ್ಧೆ ಮಾಡಲ್ಲ ಅಂತಿದ್ದ ಡಿಕೆ ಸುರೇಶ್ ಇದೀಗ ರಾಗ ಬದಲಿಸಿದ್ದಾರೆ. ಪಕ್ಷ ತೀರ್ಮಾನ ಮಾಡಿದ್ರೆ ಸ್ಪರ್ಧೆ ಮಾಡೋ ಸುಳಿವು ನೀಡಿದ್ದಾರೆ. ಜೊತೆಗೆ ರಘುನಂದನ್ ರಾಮಣ್ಣ, ಮಾಜಿ ಎಂಎಲ್‌ಎ ಅಶ್ವಥ್ ಹೆಸರು ಕೂಡ ಕೇಳಿಬರ್ತಿದೆ. ಆದ್ರೆ, ಮೈತ್ರಿ ಪಕ್ಷದ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದರ ಮೇಲೆ ಯಾರನ್ನು ಅಭ್ಯರ್ಥಿ ಮಾಡ್ಬೇಕು ಎಂದು ಕಾಂಗ್ರೆಸ್ ತೀರ್ಮಾನ ತೆಗೆದುಕೊಳ್ಳಲಿದೆ. ಇನ್ನು ನಾವೇನು ಶಸ್ತ್ರ ಸನ್ಯಾಸ ಮಾಡಿಲ್ಲ ಎಂದು ಕುಮಾರಸ್ವಾಮಿ ಹೇಳುವ ಮೂಲಕ ಡಿಸಿಎಂಗೆ ಕೌಂಟರ್ ಕೊಟ್ಟಿದ್ದಾರೆ.

  • ಚಪ್ಪಲಿ ಹಾರ ಸಿದ್ದರಾಮಯ್ಯಗೆ ಹಾಕ್ಬೇಕಾ? ಇನ್ಯಾರಿಗೆ ಹಾಕ್ತಿರಿ? – ಹೆಚ್‌ಡಿಕೆ ನಿಗಿನಿಗಿ ಕೆಂಡ

    ಚಪ್ಪಲಿ ಹಾರ ಸಿದ್ದರಾಮಯ್ಯಗೆ ಹಾಕ್ಬೇಕಾ? ಇನ್ಯಾರಿಗೆ ಹಾಕ್ತಿರಿ? – ಹೆಚ್‌ಡಿಕೆ ನಿಗಿನಿಗಿ ಕೆಂಡ

    – ಕರ್ನಾಟಕದಲ್ಲಿರೋದು ದರೋಡೆಕೋರರ ಸರ್ಕಾರ ಎಂದ ಕೇಂದ್ರ ಸಚಿವ
    – ರಾಷ್ಟ್ರ ರಾಜಧಾನಿಯಲ್ಲೂ ಮುಡಾ ಹಗರಣ ಸದ್ದು

    ನವದೆಹಲಿ: ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಪ್ರತಿಭಟನೆ ಮಾಡಿದ್ರಿ, ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ದಹನ ಮಾಡಿದ್ರಿ. ಈಗ ಹೈಕೋರ್ಟ್‌ ಆದೇಶ ಆಗಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ (Siddaramaiah) ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy), ಕಾಂಗ್ರೆಸ್‌ ನಾಯಕರ ವಿರುದ್ಧ ಲೇವಡಿ ಮಾಡಿದ್ದಾರೆ.

    ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್‌ಡಿಕೆ, ಸಿದ್ದರಾಮಯ್ಯ ಅವರಿಗೆ ವಕೀಲರಾಗಿರುವ ಅನುಭವ ಇದೆ. ನೈತಿಕತೆ ಉಳಿಸಿಕೊಂಡು ಬಂದವರಲ್ಲವೇ? ಲೋಕಾಯಕ್ತ ತನಿಖೆಗೆ ಆದೇಶ ಮಾಡಿದಾಗ ಅಧಿಕಾರದಲ್ಲಿ ಉಳಿಬೇಕಾ ಅಂತ ಅವರೇ ಹೇಳಬೇಕು. ಹೈಕೋರ್ಟ್ (Karnataka Highcourt) ಆದೇಶ ನೀಡಿದೆಯಲ್ಲ, ಈಗ ಚಪ್ಪಲಿ ಹಾರ ಯಾರಿಗೆ ಹಾಕಬೇಕು? ಸಿದ್ದರಾಮಯ್ಯ ಅವರಿಗೆ ಹಾಕಬೇಕಾ? ಇನ್ಯಾರಿಗೆ ಹಾಕ್ತಿರಿ? ಎಂದು ಲೇವಡಿ ಮಾಡಿದ್ದಾರೆ.

    ಮೂಡಾ ಹಗರಣ (MUDA Scam) ದೇಶದ್ಯಾಂತ ಪ್ರಾಮುಖ್ಯತೆ ಪಡೆದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ನಿನ್ನೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಪ್ರಕರಣ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ. ಕಾನೂನು ತಜ್ಞರು ಅನುಭವದ ಆಧಾರದ ಮೇಲೆ ವಿಶ್ಲೇಷಣೆ ಮಾಡ್ತಿದ್ದಾರೆ. ಆದೇಶದ ಪ್ರತಿ ಎಲ್ಲರಿಗೂ ಸಿಕ್ಕಿದೆ. ಆದರೆ ಸಿಎಂಗೆ ಮಾತ್ರ ತೀರ್ಪಿನ ಪ್ರತಿ ಸಿಕ್ಕಿಲ್ಲ, ಓದಿಲ್ಲ ಅಂತಿದ್ದಾರೆ. ಅಲ್ಲದೇ ಕುಮಾರಸ್ವಾಮಿ ರಾಜೀನಾಮೆಯನ್ನೂ ಸಿಎಂ ಕೇಳಿದ್ದಾರೆ. ಅವರೂ ಜಾಮೀನಿನ ಮೇಲೆ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

    ನನ್ನ ಪ್ರಕರಣಕ್ಕೂ, ಸಿದ್ದರಾಮಯ್ಯ ಪ್ರಕರಣಕ್ಕೂ ಬಹಳ ವ್ಯತಾಸ ಇದೆ. ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರವನ್ನು ಅಸ್ಥಿರ ಮಾಡಲು, ನನ್ನ ವರ್ಚಸ್ಸಿಗೆ ಕಪ್ಪು ಮಸಿ ಬಳೆಯಲು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಹೇಳ್ತಿದ್ದಾರೆ. ನಾನು ಆರೋಪದಿಂದ ಮುಕ್ತನಾಗಿ ಮಾತನಾಡುತ್ತೇನೆ ಎಂದಿದ್ದೆ. ಆದ್ರೆ ಇವತ್ತು ನಿಮ್ಮ ಭಂಡತನ ಏನೂ ಅನ್ನೋದು ತೋರಿಸುತ್ತಿದ್ದೀರಿ ಎಂದು ಲೇವಡಿ ಮಾಡಿದ್ದಾರೆ.

    ನನ್ನ ಮೇಲೆ 2 ಕೇಸ್‌ ಇದೆ:
    ಕುಮಾರಸ್ವಾಮಿ ಸರ್ಕಾರಿ ಭೂಮಿ ಹೊಡೆದಿದ್ದೀರಿ ಎಂದು ಎಂದು ಆರೋಪ ಮಾಡ್ತಾರೆ. ಹೀಗಾಗೀ ನನ್ನ ಮೇಲಿನ ಕೇಸ್ ಬಗ್ಗೆ ಹೇಳ್ತಿನಿ. ನನ್ನ ಮೇಲೆ ಎರಡು ಪ್ರಕರಣ ಇದೆ. ಸಾಯಿ ವೆಂಕಟೇಶ್ವರ ಮಿನರಲ್ಸ್ ಪ್ರಕರಣ ಇದೆ ಮತ್ತೊಂದು ಕಾನೂನು ಬಾಹಿರವಾಗಿ ಭೂಮಿ ಹಂಚಿಕೆ ಮಾಡಿದ್ದೆ ಎಂದು ಆರೋಪಿಸಿದ್ದಾರೆ. ಆದರೆ ನಾನು ಅರ್ಜಿ ಹಾಕಿದವರಿಗೆ ಭೂಮಿ ನೀಡಿದ್ದೆ. ಮುಖ್ಯವಾಗಿ ಇನ್ನೂ ಭೂಮಿ ಹಂಚಿಕೆ ಆಗಿಲ್ಲ. ಅಧಿಕಾರಿಗಳು ಮಾಡಿರುವ ತಪ್ಪಿಗೆ ಕುಮಾರಸ್ವಾಮಿ ಮೇಲೆ ಅರ್ಜಿ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿ ಹಾಕಿದ್ದ ಕೇಸ್ ಮೇಲೆ ಅರ್ಜಿ ಹಾಕಿಸಿದ್ರು:
    ಸಿದ್ದರಾಮಯ್ಯ ಹುಟ್ಟು ಹೋರಾಟಗಾರರಂತೆ. ಅವರು ಯಾವ ಹೋರಾಟ ಮಾಡಿದ್ದಾರೆ ಇವರು. ಬಳ್ಳಾರಿ ಪಾದಯಾತ್ರೆ ಬಿಟ್ಟು ಇನ್ನೇನು ಹೋರಾಟ ಮಾಡಿದ್ದಾರೆ? ವಿರೋಧ ಪಕ್ಷದ ನಾಯಕರಾಗಿ ಅವರು ಯಾವ ಹೋರಾಟ ಮಾಡಿದ್ದಾರೆ? ನಾನು ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದಕ್ಕೆ ಅವರು ಹಾಕಿಸಿದ್ದ ಕೇಸ್ ಇದು. ಸಿದ್ದರಾಮಯ್ಯ ಬಂದ ಮೇಲೆ ನನ್ನ ಮೇಲಿನ ದ್ವೇಷಕ್ಕೆ ಕೇಸ್ ದಾಖಲಿಸಿದರು. ಬಿಜೆಪಿ ಹಾಕಿದ್ದ ಕೇಸ್ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಸಿದ್ದರಾಮಯ್ಯ ಅರ್ಜಿ ಹಾಕಿಸಿದರು. ಅದನ್ನು ಇಟ್ಟುಕೊಂಡು ಈಗ ರಾಜೀನಾಮೆ ಕೇಳ್ತಿದ್ದಾರೆ. ನಾನೇನು ಸರ್ಕಾರದ ಆಸ್ತಿ ಹೊಡೆದಿದ್ದಿನಾ? ಈಗ ಗಂಗೇನಹಳ್ಳಿ ಪ್ರಕರಣದ ಬಗ್ಗೆ ಮಾತನಾಡುತ್ತಿದ್ದಾರೆ. ಇದರಲ್ಲಿ ಯಡಿಯೂರಪ್ಪ ಮತ್ತು ನನ್ನನ್ನು ಸೇರಿಸಿದ್ದಾರೆ. ಇದರಲ್ಲಿ ಕುಮಾರಸ್ವಾಮಿ ಪಾತ್ರ ಏನು? ಗಂಗೇನಹಳ್ಳಿ ಡಿ ನೋಟಿಫಿಕೇಷನ್‌ನಲ್ಲಿ ರಾಜೀನಾಮೆ ಕೇಳ್ತಿದ್ದಾರೆ. ಪ್ರಕರಣ ದಾಖಲಾದಾಗ ಲೋಕಾಯುಕ್ತ ಏನ್ ಮಾಡ್ತಿತ್ತು? ಆ ನಂತರ ನಿಮ್ಮ ಕೇಸ್‌ಗಳನ್ನ ಮುಚ್ಚಿಕೊಳ್ಳಲು ಎಸಿಬಿಗಳನ್ನ ಶುರು ಮಾಡಿದ್ರಿ ಎಂದು ತಿರುಗೇಟು ನೀಡಿದ್ದಾರೆ.

    ಗಂಗೇನಹಳ್ಳಿ ಡಿನೋಟಿಕೇಷನ್ ಮಾಡಿಲ್ಲ. ಸತ್ತವರ ಹೆಸರಿನಲ್ಲಿ ಡಿನೋಟಿಫಿಕೇಷನ್ ಮಾಡಿದ್ದೆ ಎಂದು ಕೃಷ್ಣಭೈರೇಗೌಡ ಆರೋಪ ಮಾಡ್ತಾರೆ. ಇದೇಲ್ಲ ಗೊತ್ತಿದ್ದು ನನ್ನ ಮಂತ್ರಿ ಮಂಡಲದಲ್ಲಿ ಯಾಕೆ ಸಚಿವರಾಗಿದ್ದರು? ಈಗ ಜನಪ್ರತಿನಿಧಿಗಳ ನ್ಯಾಯಲಯ ಏನ್ ಹೇಳಿದೆ? 90 ದಿನಗಳಲ್ಲಿ ತನಿಖಾ ವರದಿ ನೀಡಲು ಹೇಳಿದೆ. ನಿನ್ನೆ ಹೈಕೋರ್ಟ್ ತೀರ್ಪಿನಲ್ಲಿ ಟ್ರಯಲ್ ಮುಗಿದು ಚಾರ್ಜ್ ಶೀಟ್ ಫೈಲ್ ಆಗಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ, ಇದು ಕಾನೂನು ಹೋರಾಟ ಮೂಲಕವೇ ಆಗಬೇಕು ಎಂದು ಹೇಳಿದ್ದೆ. ತಪ್ಪು ಮಾಡಿಲ್ಲ ಅಂದರೆ ಕಾನೂನಿನಲ್ಲಿ ರಕ್ಷಣೆ ಪಡೆಯಬಹುದು ಎಂದು ಹೇಳಿದೆ. ನಾನು ರಾಜೀನಾಮೆ ಈಗಲೂ ಕೇಳಿಲ್ಲ. ನಾನು ರಾಜೀನಾಮೆ ಕೇಳುವ ನೈತಿಕತೆ ಇಟ್ಟುಕೊಂಡಿದ್ದೇನೆ ಸಿದ್ದರಾಮಯ್ಯ ಅವರೇ ಎಂದು ಕುಟುಕಿದ್ದಾರೆ.

    ನನ್ನ ನೈತಿಕತೆ ಪ್ರಶ್ನೆ ಮಾಡ್ತಿರಾ, ರಿಡೂ ನಲ್ಲಿ ಏನ್ ಮಾಡಿದ್ದಿರಿ? ಅದರಲ್ಲಿ ಎಷ್ಟು ಜನರಿಗೆ ಭೂ ಮಾಲೀಕರಿಗೆ ವಾಪಸ್ ಹೋಗಿದೆ? ಎಷ್ಟು ಜನ ಬಿಲ್ಡರ್ ಗಳಿಗೆ ಭೂಮಿ ಹೋಗಿದೆ? ಇದ್ಯಾವ ನೈತಿಕತೆ? ನಾನು ಆರೋಪದಿಂದ ಮುಕ್ತವಾಗಿ ಬಂದ ಮೇಲೆ ಈ ವಿಷಯದ ಮೇಲೆ ಮಾತನಾಡ್ತಿನಿ. ನಾನು ನೈತಿಕತೆ ಕಳೆದುಕೊಂಡಿದ್ದೇನೆ ಎಂದು ಹೇಳಿಲ್ಲ. ನಿಮ್ಮ ಥರಕ್ಕೆ ಡಿನೋಟಿಫಿಕೇಷನ್ ಮಾಡಿಲ್ಲ. ಬಾಮೈದನ ಹೆಸರಿನಲ್ಲಿ ಭೂಮಿ ತಗೊಂಡಿಲ್ಲ ಎಂದು ಲೇವಡಿ ಮಾಡಿದ್ದಾರೆ.

    ಕರ್ನಾಟಕದಲ್ಲಿರೋದು ದರೋಡೆಕೋರರ ಸರ್ಕಾರ:
    ಕರ್ನಾಟಕದಲ್ಲಿ ಸರ್ಕಾರ ಇದಿಯಾ, ದರೋಡೆಕೋರರ ಸರ್ಕಾರ ಇದು. ಸಿದ್ದರಾಮಯ್ಯ ಸರ್ಕಾರ ಹಿಂದಿನ ಅವಧಿಯಲ್ಲೂ ದರೋಡೆ ಮಾಡಿದೆ. ಈ ಸರ್ಕಾರದಿಂದ ಆಡಳಿತ ನಿರೀಕ್ಷೆ ಮಾಡ್ತಿದ್ದೀರಾ? ನೈತಿಕತೆ ಇಲ್ಲ ಅಂತ ರಾಜೀನಾಮೆ ಕೇಳಿಲ್ಲ ಅಂತ ಅಲ್ಲ. ನಾನು ರಾಜೀನಾಮೆ ಕೇಳುವ ನೈತಿಕತೆ ಇಟ್ಟುಕೊಂಡಿದ್ದೇನೆ. ನಾನು ಆರೋಪ ಮುಕ್ತನಾಗಬೇಕು ಅಂತಾ ಸುಮ್ನೆ ಇದ್ದೇನೆ. ನಾನು ಹಿಟ್ ಆಂಡ್ ರನ್ ಅಲ್ಲ, ವರ್ಗಾವಣೆಗೆ ಎಷ್ಟೇಷ್ಟು ಹಣ ತಗೊಬೇಕು ಎನ್ನುವ ಚರ್ಚೆ ನಡೆದಿದೆ. ಅದರದ್ದೇ ಪೆನ್ ಡ್ರೈವ್ ಇದೆ, ಅದನ್ನೇ ತೋರಿಸಿದ್ದು ಎಂದು ಮತ್ತೆ ಪೆನ್‌ಡ್ರೈವ್‌ ವಿಚಾರ ಪ್ರಸ್ತಾಪಿಸಿದ್ದಾರೆ.

  • `ಕೈʼ ನಾಯಕರು ಕುಮಾರಣ್ಣನನ್ನ ಹೇಗೆ ಕಟ್ಟಿ ಹಾಕ್ಬೇಕು ಅಂತ ದೆಹಲಿಯಲ್ಲಿ ಚರ್ಚಿಸಿದ್ದಾರೆ: ನಿಖಿಲ್‌ ಕಿಡಿ

    `ಕೈʼ ನಾಯಕರು ಕುಮಾರಣ್ಣನನ್ನ ಹೇಗೆ ಕಟ್ಟಿ ಹಾಕ್ಬೇಕು ಅಂತ ದೆಹಲಿಯಲ್ಲಿ ಚರ್ಚಿಸಿದ್ದಾರೆ: ನಿಖಿಲ್‌ ಕಿಡಿ

    – ಜೆಡಿಎಸ್ ಪಕ್ಷದಿಂದ ಜಿಪಂ, ತಾಪಂ ಚುನಾವಣೆಗೆ ಸಿದ್ಧತೆ ಕುರಿತು ಸಭೆ
    – ಚನ್ನಪಟ್ಟಣ ಜೆಡಿಎಸ್‌ನ ಭದ್ರಕೋಟೆ ಎಂದ ನಿಖಿಲ್‌

    ಬೆಂಗಳೂರು: ಜಿಪಂ, ತಾಪಂ ಚುನಾವಣೆ ಸಿದ್ಧತೆ ಕುರಿತು ಬೆಂಗಳೂರಿನ ಜೆಪಿ ಭವನದಲ್ಲಿಂದು ಜೆಡಿಎಸ್ ಪಕ್ಷದಿಂದ (JDS Party) ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ನೂರಾರು ಜೆಡಿಎಸ್‌ ಮುಖಂಡರು (JDS Leader) ಪಾಲ್ಗೊಂಡು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚಿಸಿದರು.

    ಸಭೆಯ ಬಳಿಕ ಮಾಧ್ಯಮಗಳ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ನಮ್ಮ ನಾಯಕರಾದ ಕುಮಾರಸ್ವಾಮಿ ಸಮ್ಮುಖದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭ ಮೊದಲ ಸಭೆ ಮುಗಿದಿದೆ. ಸಂಘಟನೆ ಇನ್ನು ಚುರುಕು ಆಗಬೇಕು. ಹಲವಾರು ಜಿಲ್ಲೆ, ತಾಲ್ಲೂಕುಗಳಲ್ಲಿ ಪ್ರವಾಸ ಮಾಡಬೇಕು. ಅದರ ಬಗ್ಗೆ ಈಗಾಗಲೇ ಚರ್ಚೆ ಆಗಿದೆ. ಜಿಲ್ಲಾವಾರು, ತಾಲ್ಲೂಕುವಾರು ಉಸ್ತುವಾರಿಗಳ ನೇಮಕ ಮಾಡಬೇಕಿದೆ ಹಾಗಾಗಿ ಈ ಸಭೆ ಕರೆದಿದ್ದೇವೆ ಎಂದರು. ಇದನ್ನೂ ಓದಿ: ಮಾಜಿ ಸಚಿವ ಎನ್ ಮಹೇಶ್ ಮನೆಯಲ್ಲಿ ಕಳ್ಳತನ – 50 ಸಾವಿರ ಹಣ ದೋಚಿದ ಕಳ್ಳರು

    ಶೀಘ್ರದಲ್ಲೇ ಚನ್ನಪಟ್ಟಣ ಅಭ್ಯರ್ಥಿ ಘೋಷಣೆ:
    ಚನ್ನಪಟ್ಟಣ ಉಪಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ (HD Kumaraswamy) ಅವರ ಸ್ವಕ್ಷೇತ್ರ ಕಳೆದ 2 ಬಾರಿ ಜನ ಆಶೀರ್ವಾದ ಮಾಡಿ ಗೆಲ್ಲಿಸಿದ್ದಾರೆ. ಹಾಗಾಗಿ ಪಕ್ಷದ ಧ್ವನಿಯಾಗಿ ಪಕ್ಷ ಕಾರ್ಯಕರ್ತನಾಗಿ ಕೆಲಸ ಮಾಡುವುದು ನನ್ನ ಜವಾಬ್ದಾರಿ. ಸಂಡೂರು, ಶಿಗ್ಗಾಂವಿ, ಚನ್ನಪಟ್ಟಣ ಉಪಚುನಾವಣೆ (Channapatna By Election 2024) ಶೀಘ್ರದಲ್ಲೇ ಘೋಷಣೆ ಆಗಲಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನಾಯಕರು, ಮುಖಂಡರಿಗೆ ಜವಾಬ್ದಾರಿ ಕೊಟ್ಟು ಕೆಲಸ ಮಾಡಬೇಕು. ಕಾರ್ಯಕರ್ತರ ಬಯಕೆ ಆ ನಿಟ್ಟಿನಲ್ಲಿ ಕೆಲಸ ಮಾಡ್ತಾ ಇದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಪಕ್ಷ ಒಟ್ಟಾಗಿ ಕೆಲಸ ಮಾಡಿದ್ದೇವೆ. ಅಂತಿಮವಾಗಿ ದೆಹಲಿಯ ಬಿಜೆಪಿ ಹೈಕಮಾಂಡ್ ತೀರ್ಮಾನ ಮಾಡ್ತಾರೆ. ಈಗಾಗಲೇ ವರದಿ ಸಹ ಹೈಕಮಾಂಡ್ ಕೈಸೇರಿದೆ. ಕೆಲವೇ ದಿನಗಳಲ್ಲಿ ಎನ್‌ಡಿಎ ಅಭ್ಯರ್ಥಿ ಘೋಷಣೆ ಮಾಡ್ತಾರೆ ಎಂದು ವಿವರಿಸಿದರು.

    ಚನ್ನಪಟ್ಟಣ ಕಾಂಗ್ರೆಸ್‌ ಭದ್ರಕೋಟೆ:
    ಇನ್ನೂ ಜೆಡಿಎಸ್, ಬಿಜೆಪಿಗೆ ಸ್ಥಾನ ಬಿಟ್ಟು ಕೊಡುತ್ತಾ? ಅನ್ನೋ ಪ್ರಶ್ನೆಗೆ ಉತ್ತರಿಸಿದ ನಿಖಿಲ್‌, ಇಲ್ಲಿ ಪ್ರಶ್ನೆ ಯಾವುದೇ ತೀರ್ಮಾನ, ಚರ್ಚೆ ಬೀದಿಯಲ್ಲಿ ಮಾಡೋದು ಸೂಕ್ತ ಅಲ್ಲ. ಏನೇ ಇದ್ದರೂ ಅಧಿಕೃತ ತೀರ್ಮಾನ ಆಗಬೇಕು. ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಗೆಲ್ಲಬೇಕು. ದೆಹಲಿ ನಾಯಕರು, ನಮ್ಮ ನಾಯಕರು ತೀರ್ಮಾನ ಮಾಡ್ತಾರೆ ಎಂದು ತಿಳಿಸಿದರು. ಟಿಕೆಟ್ ಗೊಂದಲ ಕಾಂಗ್ರೆಸ್‌ಗೆ ಲಾಭ ಆಗುವ ವಿಚಾರ ಕುರಿತು ಮಾತನಾಡಿ, ಚನ್ನಪಟ್ಟಣ ತಾಲ್ಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ, ವರದೇಗೌಡರಂತ ಸಾಮಾನ್ಯ ವ್ಯಕ್ತಿಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್‌ನ 60 ಸಾವಿರ ಮತಗಳಿವೆ. ಕಾಂಗ್ರೆಸ್‌ಗೆ ಚನ್ನಪಟ್ಟಣದಲ್ಲಿ ನೆಲೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ವಲ್ಪ ಮತಗಳು ಬಂದಿರಬಹುದು. ನಾವು ಡೇಟಾ ಇತಿಹಾಸ ನೋಡಿದಾಗ ತಿಳಿಯುತ್ತೆ. ಸಿ.ಪಿ ಯೋಗಿಶ್ವರ್ ಅವರು ಸಹ ವೈಯಕ್ತಿಕ ವರ್ಚಸ್ಸು ಇಟ್ಟುಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ತಮಿಳಿನ ಖ್ಯಾತ ನಿರ್ದೇಶಕ ಪವಿತ್ರನ್ ಸಾರಥ್ಯದಲ್ಲಿ ಮೂಡಿಬಂದ ‘ಕರ್ಕಿ’: ಜೆಪಿ ನಾಯಕ

    2018ರಲ್ಲಿ ಕುಮಾರಣ್ಣನನ್ನ ಸಿಎಂ ಮಾಡ್ದಾಗ ಏನ್‌ ಮಾಡ್ತಿದ್ರು?
    ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಲೋಕಾಯುಕ್ತಕ್ಕೆ ಪತ್ರ ಬರೆದಿರುವ ಬಗ್ಗೆ ಮಾತನಾಡಿದ ನಿಖಿಲ್, ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಅವರ ನಾಯಕತ್ವದ ಶಕ್ತಿ ಹೆಚ್ಚಾಗಿದೆ. ಹಳೇ ಮೈಸೂರು ಪ್ರಾಂತ್ಯ ಅಲ್ಲದೇ, ಉತ್ತರ ಕರ್ನಾಟಕದಲ್ಲೂ ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ದುಡಿದಿದ್ದಾರೆ. ನಿನ್ನೆ-ಮೊನ್ನೆ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ರು. ಅಲ್ಲಿ ಮುಖ್ಯವಾದ ಚರ್ಚೆ ಕುಮಾರಸ್ವಾಮಿ ಅವರನ್ನ ಯಾವ ರೀತಿ ಕಟ್ಟಿ ಹಾಕಬೇಕು ಅಂತ ಚರ್ಚೆ ಆಗಿದೆ. ಗಣಿಗಾರಿಕೆ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿದೆ. ನಾನು ಕಾಂಗ್ರೆಸ್ ನಾಯಕರಿಗೆ ಒಂದು ಪ್ರಶ್ನೆ ಕೇಳ್ತೀನಿ.. 2018 ರಲ್ಲಿ ಕುಮಾರಸ್ವಾಮಿ ಅವರನ್ನ ಸಿಎಂ ಮಾಡೋಕೆ ಬಂದ್ರು. ಆಗ ಇವರಿಗೆ ಮಾಹಿತಿ ಇರಲಿಲ್ವ? ಈಗ ಯಾಕೆ ಇದನ್ನ ಪ್ರಶ್ನೆ ಮಾಡ್ತಾ ಇದ್ದಾರೆ? ಗೌರ್ನರ್ ವಿರುದ್ಧ ಪ್ರತಿಟನೆ ಮಾಡಿದ್ರು, ಮುಡಾ ವಿಚಾರ ದೇಶಾದ್ಯಂತ ಚರ್ಚೆ ಆಗ್ತಾ ಇದೆ. ಮುಡಾದು ಪ್ರತಿದಿನ ಒಂದಲ್ಲ ಒಂದು ದಾಖಲೆ ಹೊರಗಡೆ ಬರ್ತಾನೆ ಇದೆ ಎಂದು ಕೈ ನಾಯಕರಿಗೆ ತಿಳಿದರು.

    ಕುಮಾರಸ್ವಾಮಿ ಗಣಿಗಾರಿಕೆಗೆ ಸಹಿ ಹಾಕಿಲ್ಲ. ಇವರ‍್ಯಾರು ಸಹ ಕುಮಾರಸ್ವಾಮಿ ಅವರನ್ನ ಕೇಂದ್ರ ಸಚಿವ ಸ್ಥಾನದಿಂದ ಇಳಿಸೋಕೆ ಆಗಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರೋದು ಜನರನ್ನ ದಿಕ್ಕು ತಪ್ಪಿಸುವ ಕೆಲಸ ಅಷ್ಟೇ. ಮುಡಾ ಹಗರಣ ಮುಚ್ಚಿಹಾಕಲು ಪ್ಲಾನ್‌ ಅಷ್ಟೇ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಸರ್ಕಾರ ಕೆಡವಲು ಶಾಸಕರಿಗೆ 100 ಕೋಟಿ ರೂ. ಆಫರ್: ಗಣಿಗ ರವಿಕುಮಾರ್ ಆರೋಪ

  • ಹಾಸನದಲ್ಲಿ ಪ್ರೀತಂಗೌಡಗೆ ಸ್ವರೂಪ್ ಠಕ್ಕರ್ – ನಗರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ!

    ಹಾಸನದಲ್ಲಿ ಪ್ರೀತಂಗೌಡಗೆ ಸ್ವರೂಪ್ ಠಕ್ಕರ್ – ನಗರಸಭೆ ಆಡಳಿತ ಜೆಡಿಎಸ್ ತೆಕ್ಕೆಗೆ!

    – ಚಂದ್ರೇಗೌಡರಿಗೆ ಒಲಿದ ಅದೃಷ್ಟ – ಲತಾದೇವಿ ಉಪಾಧ್ಯಕ್ಷೆ!
    – ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ಅಧಿಕಾರ

    ಹಾಸನ: ನಗರದಲ್ಲಿ ಮತ್ತೆ ಜೆಡಿಎಸ್-ಬಿಜೆಪಿ (BJP-JDS) ಸಂಘರ್ಷ ಮುಂದುವರಿದಿದೆ. ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯ ಪ್ರೀತಂಗೌಡ (Preetham Gowda) -ಜೆಡಿಎಸ್‌ನ ಸ್ವರೂಪ್ ಪ್ರಕಾಶ್ ಬೆಂಬಲಿಗರ ಮಧ್ಯೆ ಜಿದ್ದಾಜಿದ್ದಿ ನಡೆದಿದೆ. ಅಂತಿಮವಾಗಿ ಜೆಡಿಎಸ್‌ನ ಸ್ವರೂಪ್‌ಗೌಡ ಬೆಂಬಲಿಗರು ಮೇಲುಗೈ ಸಾಧಿಸಿದ್ದು, ಹಾಸನ ನಗರಸಭೆ (Hassan Municipality) ಜೆಡಿಎಸ್ ಪಾಲಾಗಿದೆ.

    ಅಧ್ಯಕ್ಷರಾಗಿ ಜೆಡಿಎಸ್ (JDS) ಚಂದ್ರೇಗೌಡ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಮತ ಹಾಕದೇ ಬಿಜೆಪಿ ಸದಸ್ಯರು ತಟಸ್ಥವಾಗಿ ಉಳಿದಿದ್ದಾರೆ. ಇನ್ನು, ಬಿಜೆಪಿಯ ಲತಾದೇವಿ ಜೆಡಿಎಸ್‌ನಲ್ಲಿ ಗುರುತಿಸಿಕೊಂಡು ಉಪಾಧ್ಯಕ್ಷೆಯಾಗಿದ್ದಾರೆ. ಮೈತ್ರಿಯಂತೆ ಉಪಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಬಿಜೆಪಿ, ಶಿಲ್ಪಾವಿಕ್ರಮ್‌ರನ್ನು ಇಳಿಸಿತ್ತು. ಆದರೆ, ವಿಪ್ ಜಾರಿ ಹಿನ್ನೆಲೆಯಲ್ಲಿ ಶಿಲ್ಪಾವಿಕ್ರಂಗೆ ಕೈ ಎತ್ತುವ ಮೂಲಕ ತಮ್ಮ ವಿರುದ್ಧವೇ ಲತಾದೇವಿ ಮತ ಹಾಕಿದ್ದರು. ಆದರೆ, ಲತಾದೇವಿಗೆ ಜೆಡಿಎಸ್‌ನವರು ಹೆಚ್ಚು ವೋಟ್‌ ಹಾಕಿ ಗೆಲ್ಲಿಸಿಕೊಂಡಿದ್ದಾರೆ. ಇದನ್ನೂ ಓದಿ: ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ – ಭುಗಿಲೆದ್ದ ಹಿಂಸಾಚಾರ; 72 ಮಂದಿ ಅರೆಸ್ಟ್‌!

    ಕೊನೇ ಕ್ಷಣದಲ್ಲಿ ಗಿರೀಶ್ ಚನ್ನವೀರಪ್ಪರನ್ನು ಅಧ್ಯಕ್ಷ ಸ್ಥಾನಕ್ಕೆ ರೇವಣ್ಣ ಅಖಾಡಕ್ಕೆ ಇಳಿಸಿದ್ದರು. ಆದರೆ, ಶಾಸಕ ಸ್ವರೂಪ್ ಪ್ರಕಾಶ್ ತಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಂಡಿದ್ದು, ಹೆಚ್.ಡಿ.ರೇವಣ್ಣ, ಪ್ರೀತಂಗೌಡಗೂ ಟಾಂಗ್ ಕೊಟ್ಟಿದ್ದಾರೆ. ಮೈತ್ರಿ ಧರ್ಮ ಪಾಲಿಸಿಲ್ಲ ಅಂತ ಸ್ವರೂಪ್ ವಿರುದ್ಧ ಪ್ರೀತಂಗೌಡ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನ್ಯಾಯ ಒದಗಿಸುವುದಕ್ಕಿಂತ ಅಪರಾಧ ಮರೆಮಾಚಲು ಹೆಚ್ಚಿನ ಪ್ರಯತ್ನ – ರಾಗಾ ಆಕ್ರೋಶ

    ಮತ್ತೊಂದುಕಡೆ, ಕಾರವಾರ ನಗರಸಭೆಯಲ್ಲಿ ಮೈತ್ರಿ ಅಭ್ಯರ್ಥಿಗಳಿಗೆ ಜಯವಾಗಿದೆ. ಬಿಜೆಪಿಯ ರವಿರಾಜ್ ಅಂಕೋಲೇಕರ್ ಅಧ್ಯಕ್ಷರಾದರೆ. ಜೆಡಿಎಸ್‌ನ ಪ್ರೀತಿ ಮಧುಕರ್ ಜೋಶಿ ಉಪಾಧ್ಯಕ್ಷರಾಗಿದ್ದರೆ. ಹಾಸನ, ಕಾರವಾರ ಎರಡೂ ಕಡೆ ಕಾಂಗ್ರೆಸ್‌ಗೆ ಸೋಲಾಗಿದೆ. ಆದರೆ, ವಿಜಯೇಂದ್ರ ಸ್ವಕ್ಷೇತ್ರ ಶಿಕಾರಿಪುರದ ಶಿರಾಳಕೊಪ್ಪ ಪುರಸಭೆಯಲ್ಲಿ 25 ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಇದನ್ನೂ ಓದಿ: ಅಗತ್ಯಬಿದ್ದರೇ ಮುಲಾಜಿಲ್ಲದೇ ಕುಮಾರಸ್ವಾಮಿ ಅರೆಸ್ಟ್‌ – ಸಿದ್ದರಾಮಯ್ಯ ವಾರ್ನಿಂಗ್‌

  • Who Is That Preetham Gowda? ಎಂದ ಹೆಚ್‌ಡಿಕೆಗೆ ಪ್ರೀತಂ ಗೌಡ ಕೊಟ್ಟ ಉತ್ತರ ಏನು?

    Who Is That Preetham Gowda? ಎಂದ ಹೆಚ್‌ಡಿಕೆಗೆ ಪ್ರೀತಂ ಗೌಡ ಕೊಟ್ಟ ಉತ್ತರ ಏನು?

    ಹಾಸನ: Who Is That Preetham Gowda? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿರುದ್ಧ ಪ್ರಶ್ನೆ ಮಾಡಿದ್ದ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರ ಪ್ರಶ್ನೆಗೆ ಪ್ರೀತಂ ಗೌಡ (Preetham Gowda) ಉತ್ತರ ಕೊಟ್ಟಿದ್ದಾರೆ.

    ಹಾಸನದಲ್ಲಿ (Hassan) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೀತಂಗೌಡ ಯಾರು ಎಂಬ ಪ್ರಶ್ನೆಗೆ ನಮ್ಮ ನಾಯಕರು ಉತ್ತರ ಕೊಟ್ಟಿದ್ದಾರೆ. ಪ್ರೀತಂ ಗೌಡ ಓರ್ವ ಸಾಮಾನ್ಯ ಕಾರ್ಯಕರ್ತ ಅನ್ನೋದನ್ನ ಅವರ ಗಮನಕ್ಕೆ ತಂದಿದ್ದಾರೆ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚೇನು ಹೇಳುವುದಿಲ್ಲ ಎಂದು ಉತ್ತರಿಸಿದ್ದಾರೆ.

    ಕೆಂಡಾಮಂಡಲವಾಗಿದ್ದ ಹೆಚ್‌ಡಿಕೆ:
    ಹಾಸನದ ಮಾಜಿ ಶಾಸಕ ಪ್ರೀತಂಗೌಡರನ್ನು ಪಾದಯಾತ್ರೆ ಸಭೆಗೆ ಕರೆಸಿದ್ದ ಬಗ್ಗೆ ಇತ್ತೀಚೆಗೆ ಹೆಚ್‌ಡಿ ಕುಮಾರಸ್ವಾಮಿ ಮಾತನಾಡಿದ್ದರು. ದೇವೇಗೌಡರ (Devegowda) ಕುಟುಂಬಕ್ಕೆ ವಿಷ ಇಟ್ಟವನೊಂದಿಗೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ? ಯಾರದು ಪ್ರೀತಂ ಗೌಡ? ದೇವೇಗೌಡರ ಕುಟುಂಬವನ್ನು ನಾಶ ಮಾಡಲು ಹೊರಟವನನ್ನ ಸಭೆಯಲ್ಲಿ ಕೂರಿಸಿಕೊಂಡು, ನನ್ನನ್ನ ಸಭೆಗೆ ಕರೆಯುತ್ತೀರಾ? ಪೆನ್ ಡ್ರೈವ್ ಗಳನ್ನು ಹಂಚಿವರು ಯಾರು ಎಂದು ಗೊತ್ತಿಲ್ಲವೇ? ಚುನಾವಣಾ ಮೈತ್ರಿಯೇ ಬೇರೆ. ರಾಜಕೀಯವೇ ಬೇರೆ. ಸಹಿಸಿಕೊಳ್ಳೋದಕ್ಕೆ ಒಂದು ಮಿತಿಯಿದೆ ಎಂದು ಕಿಡಿಕಾರಿದ್ದರು.

    ಸುದ್ದಿಗೋಷ್ಠಿಯಲ್ಲಿ ಮುಂದುವರಿದು ಮಾತನಾಡಿದ ಪ್ರೀತಂ ಗೌಡ, ಮೈತ್ರಿ ಧರ್ಮ ಪಾಲನೆ ಮಾಡುಬೇಕು ಅನ್ನೋದು ರಾಷ್ಟ್ರೀಯ, ರಾಜ್ಯ ನಾಯಕರ ಸದುದ್ದೇಶ. ಅಧಿಕಾರ ಸಮಬಲವಾಗಿ ಹಂಚಿಕೆಯಾಗಬೇಕು. ಮೈತ್ರಿ ಧರ್ಮವನ್ನು ಎಲ್ಲರೂ ಪಾಲನೆ ಮಾಡಬೇಕು. ಎಲ್ಲಾ ಸದಸ್ಯರ ಅಭಿಪ್ರಾಯದೊಂದಿಗೆ ಪಾಲನೆ ಮಾಡಬೇಕು. ಎರಡು ಪಕ್ಷಕ್ಕೆ ಬಹುಮತ ಇಲ್ಲದಿರುವುದರಿಂದ ಅಧಿಕಾರ ಹಂಚಿಕೆಯಾಗಬೇಕು. ಕಾರ್ಯಕರ್ತರ ಚುನಾವಣೆ, ವೈಯಕ್ತಿಕ ಪ್ರತಿಷ್ಠೆಗೆ ಆಸ್ಪದ ಕೊಡಬಾರದು ಎಂದು ಹೇಳಿದ್ದಾರೆ.

    ಮೈತ್ರಿ ಆಗಿರುವುದು ರಾಷ್ಟ್ರೀಯ ಮಟ್ಟದಲ್ಲಿ, ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಅವರಿಗೂ ಕೂಡ ಬದ್ಧತೆ ಇರಬೇಕು. ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಆಗಿರುವ ಮೈತ್ರಿ, ಇದರಲ್ಲಿ ಯಾವುದೇ ಗೊಂದಲ ಬೇಡ. ಹಾಸನ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಮೈತ್ರಿ ಧರ್ಮ ಪಾಲಿಸಲಾಗುವುದು. ಅಧಿಕಾರ ಸಮಾನಾಗಿ ಹಂಚಿಕೆಯಾಗಲಿದೆ. ಹಾಸನ ನಗರಸಭೆಯಲ್ಲಿ ಮೊದಲ ಹತ್ತು ತಿಂಗಳು ಬಿಜೆಪಿ ಅಧಿಕಾರ ಕೊಡಬೇಕು ಎನ್ನುವ ಭಾವನೆ ಇದೆ. ಅದನ್ನು ಬಿಜೆಪಿ ಜಿಲ್ಲಾಧ್ಯಕ್ಷರು ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.

    ನನ್ನಿಂದ ತಪ್ಪಾಗಬಾರದು ಅಂತ ಸಹಮತ ನೀಡುತ್ತಿದ್ದೇನೆ:
    ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಕಡಿಮೆ ಮತಗಳು ಬಂದ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿಧಾನ ಪರಿಷತ್ ಚುನಾವಣೆ ಆಯ್ತು. ವಿವೇಕಾನಂದ ಅವರು ನಮ್ಮ ಮನೆಗೆ ಭೇಟಿ ನೀಡಿ ಸಹಕಾರ ಕೇಳಿದ್ರು. ಕೋರ್ ಕಮಿಟಿ ಅಧ್ಯಕ್ಷರಾದ ಜಿ.ಟಿ ದೇವೇಗೌಡರು ಫೋನ್ ಮಾಡಿದ್ರು. ನಮ್ಮ ರಾಜ್ಯಾಧ್ಯಕ್ಷರ ಸೂಚನೆಯು ಇತ್ತು. ಪ್ರಾಮಾಣಿಕವಾಗಿ ವಿವೇಕಾನಂದರ ಗೆಲುವಿಗೆ ಕೆಲಸ ಮಾಡಿದ್ರು. ಆದ್ರೆ ಇದು ಕಾರ್ಯಕರ್ತರ ಚುನಾವಣೆ, ವೈಯುಕ್ತಿಕ ಪ್ರತಿಷ್ಠಿಗೆ ಆಸ್ಪದ ಕೊಡಬಾರದು. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಧಿಕಾರ ಹಂಚಿಕೆಯಾಗಬೇಕು. ನನ್ನಿಂದ ಯಾವುದೇ ತರಹದ ತಪ್ಪುಗಳು ಆಗಬಾರದೆಂದು ಸಹಮತ ನೀಡುತ್ತಿದ್ದೇನೆ ಎಂದಿದ್ದಾರೆ.

    ನನ್ನಿಂದ ಯಾವುದೇ ರೀತಿಯ ಚಿಕ್ಕ ಲೋಪವಾಗಬಾರದು. ಸಾಂದರ್ಭಿಕ ಸಮಯದಲ್ಲಿ ಕೆಲವು ಸಾಂದರ್ಭಿಕ ಮತಗಳನ್ನು ಪಡೆದು ಹಾಸನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಾಂದರ್ಭಿಕ ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಾಂದರ್ಭಿಕ ಶಾಸಕರು ವಿಫಲರಾಗಿದ್ದಾರೆ. ಅವರಿಗೆ ಯಾವ ಸಂದರ್ಭದಲ್ಲಿ ಯಾರು ವೋಟು ಹಾಕಿದ್ರು ಅಂತ ಎಲ್ಲರಿಗೂ ಗೊತ್ತಿದೆ. ಆ ವೋಟುಗಳನ್ನು ಅವರು ಹಿಡಿದು ಇಟ್ಟುಕೊಳ್ಳಬೇಕಿತ್ತು. ಸಾಂದರ್ಭಿಕ ಮತಗಳು ಗಟ್ಟಿ ಇಲ್ಲದ ಸಂದರ್ಭದಲ್ಲಿ ಬೇರೆ ಬೇರೆ ಪಕ್ಷಗಳಿಗೆ ಹೋಗುತ್ತೆ. ಸಾಂದರ್ಭಿಕ ಸಂದರ್ಭದಲ್ಲಿ ಸಾಂಪ್ರದಾಯಿಕವಾಗಿ ಚುನಾಯಿತರಾದವರಿಗೆ ಅವರ ಶಕ್ತಿ ಈ ಚುನಾವಣೆಯಲ್ಲಿ ಗೊತ್ತಾಗಿದೆ. ಶಾಸಕರು 84 ಸಾವಿರ ಮತಗಳನ್ನು ಪಡೆದಿದ್ದರು. ಲೋಕಸಭಾ ಚುನಾವಣೆಯಲ್ಲಿ 68 ಸಾವಿರ ಮತಗಳು ಬಂದಿವೆ. ಮೈತ್ರಿ ಧರ್ಮ ಪಾಲನೆ ಮಾಡಿದ್ದಕ್ಕೆ 68 ಸಾವಿರ ಮತಗಳು ಬಂದಿವೆ. ಶ್ರಮಪಟ್ಟು ಮತಗಳಿಸಿರುವುದು ಗಟ್ಟಿಯಾಗಿರುತ್ತೆ. ಇದರಿಂದ ನಗರಸಭೆ ಚುನಾವಣೆಯ ಮೈತ್ರಿ ಅನಿವಾರ್ಯತೆ ಏನು ಎಂಬುದು ಗೊತ್ತಾಗುತ್ತೆ ಎಂದು ತಿಳಿಸಿದ್ದಾರೆ.

    ಇನ್ನೂ ಪಾದಯಾತ್ರೆಯಲ್ಲಿ ಕಡಗಣನೆ ವಿಚಾರ ಕುರಿತು ಮಾತನಾಡಿ, ಪಾದಯಾತ್ರೆಯಲ್ಲಿ ಎಲ್ಲಾ ಕಡೆ ಕಾಣಿಸಿಕೊಂಡಿದೆ. ಅದಕ್ಕೆ ಸೂಕ್ತ ಸಮಯದಲ್ಲಿ ಸೂಕ್ತವಾದ ಉತ್ತರ ಸಿಗುತ್ತೆ. ನನ್ನ ರಾಜಕಾರಣ ಲಾಂಗ್ ಟರ್ಮ್. ನಮ್ಮ ಪಕ್ಷದ ಹಿರಿಯರು ಮಾರ್ಗದರ್ಶನ ಕೊಟ್ಟಿದ್ದಾರೆ. ನಮ್ಮ ಮನೆಯ ಹಿರಿಯರು ಬುದ್ಧಿ ಮಾತು ಹೇಳ್ತಾರೆ. ಅದನ್ನು ಆಶೀರ್ವಾದ ಅಂತ ತಗೋತಿನಿ. ನನ್ನದು ಬಹಳ ದೀರ್ಘವಾದ ರಾಜಕಾರಣ. ಸಾಂದರ್ಭಿಕವಾಗಿ ನಡೆಯುವ ಘಟನೆಗಳಿಗೆ, ಸಾಂದರ್ಭಿಕವಾಗಿ ದೃತಿಗೆಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

  • ಮಂಡ್ಯದ ನೂತನ ಸಂಸದ ಹೆಚ್‌ಡಿಕೆಗೆ ಸುಮಲತಾ ಅಭಿನಂದನೆ!

    ಮಂಡ್ಯದ ನೂತನ ಸಂಸದ ಹೆಚ್‌ಡಿಕೆಗೆ ಸುಮಲತಾ ಅಭಿನಂದನೆ!

    – ಪುಗಸಟ್ಟೆ ಭಾಗ್ಯಗಳಿಂದ ಮಂಡ್ಯದ ಜನತೆಗೆ ಮೋಸ ಮಾಡೋಕಾಗಲ್ಲ
    – ಕಾಂಗ್ರೆಸ್‌ ಗ್ಯಾರಂಟಿ ವಿರುದ್ಧ ವಾಗ್ದಾಳಿ

    ಮಂಡ್ಯ: ನೂತನ ಸಂಸದರಾಗಿ ಆಯ್ಕೆಯಾದ‌ ಹೆಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ನಿರ್ಗಮಿತ ಸಂಸದರಾದ ಸುಮಲತಾ ಅಂಬರೀಶ್‌ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಈ ಕುರಿತು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಮಂಡ್ಯದ ಜನತೆಯ ಮತಗಳು ಯಾವುದೇ ಆಮಿಷಗಳಿಗೆ ಮಾರಾಟಕ್ಕಿಲ್ಲ ಎಂಬುದನ್ನು ನಮ್ಮ ಜನತೆ ತೋರಿಸಿದ್ದಾರೆ. ಹಲವು ಆಮಿಷಗಳು, ಪುಗಸಟ್ಟೆ ಭಾಗ್ಯಗಳ ಭರವಸೆ, ಮುಂತಾದ ಅಡ್ಡದಾರಿಗಳ ಮೂಲಕ ನಮ್ಮ ಮಂಡ್ಯದ ಜನತೆಗೆ ಮೋಸ ಮಾಡಲು ಸಾಧ್ಯವಿಲ್ಲ ಎಂದು ಸಾಬೀತು ಪಡಿಸಿದ ನಮ್ಮ ಮಂಡ್ಯದ ಜನತೆಗೆ ಅಭಿನಂದನೆಗಳು. ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಕೆಲಸ ಮಾಡಲು, ನಮ್ಮ ಮಂಡ್ಯದ ನೂತನ ಸಂಸದರಾಗಿ ಆಯ್ಕೆಯಾದ ಹೆಚ್‌.ಡಿ ಕುಮಾರಸ್ವಾಮಿ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.

    2024ರ ಲೋಕಸಭಾ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ಬಿಜೆಪಿ-ಜೆಡಿಎಸ್‌ (BJP- JDS) ಮೈತ್ರಿ ಅಭ್ಯರ್ಥಿ ಹೆಚ್‌.ಡಿ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. 8,51,881 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು (Star Chandru) 5,67,261 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

  • ಧಾರವಾಡದಲ್ಲಿ ಮತ್ತೆ ಕಮಲ ಕಿಲಕಿಲ – ಜೋಶಿಗೆ ʻಪಂಚʼ ಜಯ!

    ಧಾರವಾಡದಲ್ಲಿ ಮತ್ತೆ ಕಮಲ ಕಿಲಕಿಲ – ಜೋಶಿಗೆ ʻಪಂಚʼ ಜಯ!

    ಧಾರವಾಡ: ಪ್ರಸ್ತುತ ಲೋಕಸಭಾ ಕ್ಷೇತ್ರದಲ್ಲಿ ಸತತ 5 ಬಾರಿ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೊಸ ಇತಿಹಾಸ ನಿರ್ಮಿಸಿದ್ದಾರೆ.

    2004, 2009, 2014, 2019ರಲ್ಲಿ ಗೆಲುವು ಸಾಧಿಸಿದ್ದ ಜೋಶಿ 2024ರಲ್ಲಿ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದೇ ಧಾರವಾಡ ಕ್ಷೇತ್ರದಿಂದ (Dharwad Constituency) ಈ ಹಿಂದೆ ಸರೋಜಿನಿ ಮಹಿಶಿ ಹಾಗೂ ಡಿ.ಕೆ ನಾಯ್ಕರ್‌ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದರು. ಡಿ.ಪಿ ಕರ್ಮಾಕರ್ ಒಮ್ಮೆ ಹಾಗೂ ವಿಜಯ ಸಂಕೇಶ್ವರ್‌ ಮೂರು ಬಾರು ಗೆದ್ದಿದ್ದರು. ಆದ್ರೆ ಪ್ರಹ್ಲಾದ್‌ ಜೋಶಿ 5ನೇ ಬಾರಿಗೆ ಗೆಲುವು ಸಾಧಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌; ಜನರ ಹೃದಯ ಗೆದ್ದ ಡಾಕ್ಟರ್‌ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್‌?

    2009ರಲ್ಲಿ 4,46,786 ಮತಗಳು, 2014ರಲ್ಲಿ 5,45,395 ಮತಗಳು ಹಾಗೂ 2019ರಲ್ಲಿ 6,84,837 ಮತಗಳನ್ನು ಪಡೆದಿದ್ದ ಜೋಶಿ 2024ರಲ್ಲಿ 7,16,231 ಮತಗಳನ್ನು ಪಡೆಯುವ ಮೂಲಕ 97,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನೋದ್ ಅಸೂತಿ 6,18,907 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ:
    ಸದ್ಯ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಹ್ಲಾದ್‌ ಜೋಶಿ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಕೃಷಿ ವಿವಿ ಮುಖ್ಯ ದ್ವಾರದ ಎದುರು ಪಟಾಕಿ ಸಿಡಿಸಿದ್ದಾರೆ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

  • ಶ್ರೇಯಸ್‌ಗೆ ಸಿಂ`ಹಾಸನ’ – ಎರಡೂವರೆ ದಶಕಗಳ ಬಳಿಕ ಐತಿಹಾಸಿಕ ಗೆಲುವು!

    ಶ್ರೇಯಸ್‌ಗೆ ಸಿಂ`ಹಾಸನ’ – ಎರಡೂವರೆ ದಶಕಗಳ ಬಳಿಕ ಐತಿಹಾಸಿಕ ಗೆಲುವು!

    – ಪ್ರಜ್ವಲ್ ರೇವಣ್ಣ ಸೋಲನ್ನು ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

    ಹಾಸನ: 25 ವರ್ಷಗಳ ಬಳಿಕ ಹಾಸನ ಲೋಕಸಭಾ ಕ್ಷೇತ್ರ (Hassan Lok Sabha Constituency) ಕಾಂಗ್ರೆಸ್ ತೆಕ್ಕೆಗೆ ವಾಲಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರನ್ನು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ (Shreyas Patel) ಮಣಿಸಿದ್ದಾರೆ.

    ಪೆನ್‌ಡ್ರೈವ್‌ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್ ರೇವಣ್ಣ (Prajwal Revanna) ಅವರೀಗ ಸಂಸದ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಶ್ರೇಯಸ್ ಸೋಲಿಸುವ ಮೂಲಕ ಶ್ರೇಯಸ್‌ ಹೊಸ ಇತಿಹಾಸ ಬರೆದಿದ್ದಾರೆ. ಇಡೀ ಹಾಸನ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಶ್ರೇಯಸ್ ಗೆಲುವನ್ನು ಕೊಂಡಾಡಿದ್ದಾರೆ. ಶ್ರೇಯಸ್ ಅವರನ್ನು ಹೊತ್ತುಕೊಂಡು ಮೆರವಣಿಗೆ ನಡೆಸಿದರಲ್ಲದೇ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದ್ದಾರೆ.

    ಪ್ರತಿ ಸುತ್ತಿನಲ್ಲೂ ಮತಗಳ ಅಂತರ ಹೆಚ್ಚಿಸಿಕೊಳ್ಳುತ್ತಲೇ ಇದ್ದ ಶ್ರೇಯಸ್ ಪಟೇಲ್ ಅಂತಿಮವಾಗಿ 6,32,090 ಮತಗಳನ್ನು ಪಡೆದುಕೊಳ್ಳುವ ಮೂಲಕ 42,261 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಇನ್ನೂ 5,89,829 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. 8,098 ನೋಟಾ ಮತಗಳು ಚಲಾವಣೆಯಾಗಿವೆ. ಇದನ್ನೂ ಓದಿ: ಅಂಜಲಿ ನಿಂಬಾಳ್ಕರ್‌ ವಿರುದ್ಧ ಕಾಗೇರಿಗೆ ಗೆಲುವು- ಉತ್ತರ ಕನ್ನಡದಲ್ಲಿ ಸಂಭ್ರಮಾಚರಣೆ

    1999ರಲ್ಲಿ ಹೆಚ್.ಡಿ ದೇವೇಗೌಡರಿಂದ ಸೋತಿದ್ದ ಪುಟ್ಟಸ್ವಾಮಿ ಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಎರಡೂವರೆ ದಶಕಗಳ ಬಳಿಕ ದೇವೇಗೌಡರ ಮೊಮ್ಮಗ ಪ್ರಜ್ವಲ್‌ನನ್ನ ಸೋಲಿಸಿದ್ದಾರೆ.

    ಇನ್ನೂ ಮಗನ ಗೆಲುವಿನ ಸಂತಸವನ್ನು ಪಬ್ಲಿಕ್ ಟಿ.ವಿಯೊಂದಿಗೆ ಹಂಚಿಕೊಂಡ ಶ್ರೇಯಸ್ ಪಟೇಲ್ ತಾಯಿ ಅನುಪಮಾ, ಇದು ನಮ್ಮ ಗೆಲುವಲ್ಲ ಮತದಾರರ ಗೆಲುವು. ನಮಗೆ ಎಲ್ಲಾ ಪಕ್ಷದ ಕಾರ್ಯಕರ್ತರು ಪಕ್ಷಾತೀತವಾಗಿ ಬೆಂಬಲ ನೀಡಿದ್ದಾರೆ. ಹಾಸನ ಜಿಲ್ಲೆ ಮತದಾರರಿಗೆ ಹಾಗೂ ಎಲ್ಲ ಪಕ್ಷಗಳ ನಾಯಕರಿಗೆ ಧನ್ಯವಾದ ಹೇಳುತ್ತೇನೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಜಯದ ಮಾಲೆ

    ಬಿಜೆಪಿ ಕಾರ್ಯಕರ್ತರಿಂದಲೂ ಸಂಭ್ರಮ:
    ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಪ್ರಜ್ವಲ್ ರೇವಣ್ಣ ಅವರ ಸೋಲನ್ನು ಸಂಭ್ರಮಿಸಿದ್ದಾರೆ. ಹಾಸನ ನಗರದ ಡೈರಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

  • ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್‌ ಹಣದ ಹೊಳೆಯನ್ನೇ ಹರಿಸುತ್ತಿದೆ: ಹೆಚ್‌ಡಿಕೆ

    ವಿಧಾನ ಪರಿಷತ್ ಚುನಾವಣೆಯಲ್ಲೂ ಕಾಂಗ್ರೆಸ್‌ ಹಣದ ಹೊಳೆಯನ್ನೇ ಹರಿಸುತ್ತಿದೆ: ಹೆಚ್‌ಡಿಕೆ

    ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಮಾಡಿದಂತೆ ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲೂ (Vidhan Parishad Election) ಕಾಂಗ್ರೆಸ್ ಉಡುಗೊರೆಗಳನ್ನು ಹಂಚಿ ಗೆಲುವು ಸಾಧಿಸಲು ಹೊರಟಿದೆ. ಹಣದ ಹೊಳೆಯನ್ನೇ ಹರಿಸುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಆರೋಪಿಸಿದರು.

    ಜೆಡಿಎಸ್ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಭಾನುವಾರ ನಡೆದ ಬೆಂಗಳೂರು ಪದವೀಧರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಕುರಿತ ಜೆಡಿಎಸ್-ಬಿಜೆಪಿ (BJP JDS Alliance) ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದನ್ನೂ ಓದಿ: ಬ್ರ್ಯಾಂಡ್ ಬೆಂಗಳೂರು ಹೆಸರಲ್ಲಿ ಲೂಟಿ ನಡೀತಿದೆ: ಡಿಕೆಶಿ ವಿರುದ್ಧ ಹೆಚ್‌ಡಿಕೆ ಕಿಡಿ

    ಶಿಕ್ಷಕರು, ಪದವೀಧರರು ಮತ ಹಾಕುವ ಈ ಚುನಾವಣೆಯನ್ನು ಕಾಂಗ್ರೆಸ್ ಕಲುಷಿತಗೊಳಿಸುತ್ತಿದೆ. ಹಣ, ಗಿಫ್ಟ್ ಕೂಪನ್ ಹಂಚುವ ಕೆಲಸವನ್ನು ಯಥೇಚ್ಛವಾಗಿ ಮಾಡುತ್ತಿದೆ. ಈಗಾಗಲೇ ಅಧಿಕಾರಿಗಳು ಅನೇಕ ಕಡೆ ದಾಳಿ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಹಂಚುತ್ತಿದ್ದ ಗಿಫ್ಟ್ ಬಾಕ್ಸ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

    ಹಣದ ಆಮಿಷ ಒಡ್ಡಿ ಮತ ಪಡೆಯುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ (Congress Party) ಪದವೀಧರರು ತಕ್ಕ ಪಾಠ ಕಲಿಸಬೇಕು. ಎರಡೂ ಪಕ್ಷಗಳ ಕಾರ್ಯಕರ್ತರು ಈ ಷಡ್ಯಂತ್ರವನ್ನು ಒಗ್ಗಟ್ಟಿನಿಂದ ಎದುರಿಸಬೇಕು ಎಂದು ಕರೆ ಕೊಟ್ಟರು. ಇದನ್ನೂ ಓದಿ: ಚನ್ನಗಿರಿ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ: ಪರಮೇಶ್ವರ್

    ಜೆಡಿಎಸ್ -ಬಿಜೆಪಿ ಮೈತ್ರಿ ಐತಿಹಾಸಿಕ. ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ದೇವೇಗೌಡರ (HD Devegowda) ನೇತೃತ್ವದಲ್ಲಿ ಆಗಿರುವ ಈ ಮೈತ್ರಿಯನ್ನು ಎರಡೂ ಪಕ್ಷಗಳ ಕಾರ್ಯಕರ್ತರು ಮುಕ್ತವಾಗಿ ಸ್ವಾಗತಿಸಿದ್ದಾರೆ. ಈ ಚುನಾವಣೆಯಲ್ಲಿ ಒಳ್ಳೆಯ ಫಲಿತಾಂಶ ಬರುತ್ತದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ಗೆ ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ವಿರುದ್ಧ ಕಿರಿ ಕಾರಿದರು.