Tag: ಬಿಜೆಪಿ ಕೌನ್ಸಿಲರ್

  • ಭಯೋತ್ಪಾದಕರ ಗುಂಡಿನ ದಾಳಿಗೆ ಬಿಜೆಪಿ ಕೌನ್ಸಿಲರ್ ಬಲಿ

    ಭಯೋತ್ಪಾದಕರ ಗುಂಡಿನ ದಾಳಿಗೆ ಬಿಜೆಪಿ ಕೌನ್ಸಿಲರ್ ಬಲಿ

    ಶ್ರೀನಗರ: ಬಿಜೆಪಿ ಪುರಸಭೆಯ ಸದಸ್ಯನನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ.

    ತನ್ನ ಸ್ನೇಹಿತನನ್ನು ಭೇಟಿಯಾಗಲು ಟ್ರಾಲ್ ಮುನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್ ಟ್ರಾಲ್‍ಪಯೀನ್‍ಗೆ ಬಂದಿದ್ದ ವೇಳೆ ಮೂವರು ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ರಾಕೇಶ್ ಪಂಡಿತ್ ಗುಂಡಿನ ದಾಳಿಗೆ ಬಲಿಯಾದ್ದು, ಅವರ ಸ್ನೇಹಿತನ ಪುತ್ರಿ ಗಂಭೀರವಾಗಿ ಗಾಯಗೊಂಡಿದ್ದಾರೆ.

    ರಾಕೇಶ್ ಪಂಡಿತ್ ಶ್ರೀನಗರದ ವಸತಿ ಗೃಹದಲ್ಲಿ ವಾಸಿಸುತ್ತಿದ್ದು, ಅವರಿಗೆ ಇಬ್ಬರು ಭದ್ರತಾ ಪಡೆಗಳನ್ನು ಒದಗಿಸಲಾಗಿತ್ತು. ಆದರೆ ಟ್ರಾಲ್‍ಗೆ ಹೋಗುತ್ತಿದ್ದ ವೇಳೆ ಭದ್ರತಾ ಪಡೆಗಳನ್ನು ರಾಕೇಶ್ ಪಂಡಿತ್‍ರವರು ಕರೆದೊಯ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸದ್ಯ ಪ್ರಕರಣ ಕುರಿತಂತೆ ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದು, ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಬಿಜೆಪಿ ಕಾರ್ಯಕರ್ತ ರಾಕೇಶ್ ಪಂಡಿತ್ ಅವರ ಬಲಿಯನ್ನು ವ್ಯರ್ಥವಾಗಲು ಬಿಡುವುದಿಲ್ಲ. ಕಾಶ್ಮೀರದ ಕಣಿವೆಯಲ್ಲಿ ರಕ್ತದೋಕುಳಿಯನ್ನುಂಟು ಮಾಡುವ ಭಯೋತ್ಪಾದಕರ ನಿರ್ಮೂಲನೆ ಮಾಡಲಾಗುವುದು. ಇದು ಮಾನವೀಯತೆ ಮತ್ತು ಕಾಶ್ಮೀರದ ಹತ್ಯೆಯಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಹೇಳಿದ್ದಾರೆ. ಇದನ್ನು ಓದಿ:  ಫೇರ್‌ವೆಲ್‌ಗೆ ಅನುಮತಿ ನೀಡಿ, ನೇಹಾಳನ್ನ ಸೀರೆಯಲ್ಲಿ ನೋಡಬೇಕು: ಪ್ರಧಾನಿಗೆ ವಿದ್ಯಾರ್ಥಿಯ ಮನವಿ

    ಕೇಂದ್ರ ಸಚಿವ ಜಿತೇಂದ್ರ ಸಿಂಗ್‍ರವರು, ಪುಲ್ವಾಮಾದ ಟ್ರಾಲ್ ಮಿನ್ಸಿಪಲ್ ಕೌನ್ಸಿಲರ್ ರಾಕೇಶ್ ಪಂಡಿತ್‍ರವರ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ವಿಚಾರ ತೀವ್ರ ಆಘಾತವನ್ನುಂಟು ಮಾಡಿದೆ. ತಳಮಟ್ಟದ ಪ್ರಜಾಪ್ರಭುತ್ವವನ್ನು ಕಾಶ್ಮೀರ ಕಣಿವೆಯಲ್ಲಿ ನೆಲಸಮಮಾಡಲು ಬಯಸಿದವರು ಅಪಾಯಕಾರಿ ಮತ್ತು ಅಮಾನವೀಯ ಕೃತ್ಯಕ್ಕೆ ಬಲಿಯಾಗಿದ್ದಾರೆ. ಅವರ ಕುಟುಂಬಕ್ಕೆ ನನ್ನ ಸಂತಾಪ ಎಂದು ಟ್ವೀಟ್ ಮಾಡಿದ್ದಾರೆ.

  • ಮನೆಯ ಬಳಿ ಬಂದು ಕರೆದ್ರು – ಹತ್ತಿರ ಬರ್ತಿದ್ದಂತೆ ಗುಂಡಿಕ್ಕಿ ಬಿಜೆಪಿ ಕೌನ್ಸಿಲರ್ ಹತ್ಯೆ

    ಮನೆಯ ಬಳಿ ಬಂದು ಕರೆದ್ರು – ಹತ್ತಿರ ಬರ್ತಿದ್ದಂತೆ ಗುಂಡಿಕ್ಕಿ ಬಿಜೆಪಿ ಕೌನ್ಸಿಲರ್ ಹತ್ಯೆ

    – ಓಡಿದ್ರೂ ಬಿಡದೆ ಬೆನ್ನಟ್ಟಿ ಗುಂಡು ಹಾರಿಸಿದ ದುಷ್ಕರ್ಮಿಗಳು

    ಡೆಹ್ರಾಡೂನ್: ಬಿಜೆಪಿ ಕೌನ್ಸಿಲರ್ ಒಬ್ಬರನ್ನು ಇಂದು ಬೆಳಗ್ಗೆ ಅವರ ಮನೆಯ ಮುಂದೆಯೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯಲ್ಲಿ ನಡೆದಿದೆ.

    ಪ್ರಕಾಶ್ ಧಾಮಿ (40) ಮೃತ ಬಿಜೆಪಿ ಕೌನ್ಸಿಲರ್. ರುದ್ರಪುರ ಮಹಾನಗರ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿದ್ದರು. ಇಂದು ಬೆಳಗ್ಗೆ 8 ಗಂಟೆಗೆ ಈ ಹತ್ಯೆ ನಡೆದಿದ್ದು, ಕೆಲವು ಅಪರಿಚಿತರು ಕಾರಿನಲ್ಲಿ ಬಂದು ಏಕಾಏಕಿ ಗುಂಡಿನ ದಾಳಿ ಮಾಡಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರಿನಲ್ಲಿ ಕೆಲ ದುಷ್ಕರ್ಮಿಗಳು ಕೌನ್ಸಿಲರ್ ಪ್ರಕಾಶ್ ಧಾಮಿ ಮನೆಗೆ ಬಂದಿದ್ದಾರೆ. ನಂತರ ಅವರನ್ನು ಮನೆಯ ಹೊರಗೆ ಬರುವಂತೆ ಕರೆದಿದ್ದಾರೆ. ಈ ವೇಳೆ ಪ್ರಕಾಶ್ ಧಾಮಿ ಕಾರಿನ ಹತ್ತಿರ ತಲುಪುತ್ತಿದ್ದಂತೆ ದುಷ್ಕರ್ಮಿಗಳು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರಕಾಶ್ ಧಾಮಿ ರಕ್ಷಣೆಗಾಗಿ ಓಡಲು ಪ್ರಯತ್ನಿಸಿದ್ದಾರೆ. ಆದರೆ ದುಷ್ಕರ್ಮಿಗಳು ಅವರನ್ನ ಬೆನ್ನಟ್ಟಿ ಮತ್ತೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.

    ಕೂಡಲೇ ಪ್ರಕಾಶ್ ಧಾಮಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಷ್ಟರಲ್ಲಿಯೇ ಪ್ರಕಾಶ್ ಧಾಮಿ ಮೃತಪಟ್ಟಿದ್ದರು.

    ಇದು ಹಳೆಯ ದ್ವೇಷದಿಂದ ಸಂಭವಿಸಿರಬಹುದು. ಸದ್ಯಕ್ಕೆ ನಾವು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಗಾಗಿ ಪೊಲೀಸ್ ತಂಡಗಳನ್ನು ರಚಿಸಿದ್ದೇವೆ. ಶೀಘ್ರದಲ್ಲೇ ಎಲ್ಲ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರಕಾಶ್ ಧಾಮಿ 13ನೇ ವಾರ್ಡ್ ನಿಂದ 2018ರಲ್ಲಿ ಅವಿರೋಧವಾಗಿ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ ಅವರು ಬಿಜೆಪಿಗೆ ಸೇರಿದ್ದರು.