ನವದೆಹಲಿ: ರಾಜಸ್ಥಾನ (Rajasthan) ಜನತೆ ಪ್ರತಿಬಾರಿಯಂತೆ ಈ ಬಾರಿಯೂ ಸರ್ಕಾರವನ್ನು ಬದಲಾಯಿಸುವುದು ನಿಶ್ಚಿತ. ಚುನಾವಣೋತ್ತರ ಸಮೀಕ್ಷೆಗಳು (Exit Poll) ಈ ಬಾರಿ ಕಾಂಗ್ರೆಸ್ (Congress) ಸೋಲಲಿದೆ ಎಂದು ಹೇಳಿವೆ.
ಸಿಎಂ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ಮಧ್ಯೆ ಸಂಘರ್ಷದಿಂದಾಗಿ ಈ ಬಾರಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿವೆ. ಒಟ್ಟು 199 ಸ್ಥಾನಗಳಿರುವ ರಾಜಸ್ಥಾನದಲ್ಲಿ ಸರಳ ಬಹುಮತಕ್ಕೆ 100 ಸ್ಥಾನಗಳ ಅಗತ್ಯವಿದೆ.
ಯಾವ ಸಮೀಕ್ಷೆ ಏನು ಹೇಳಿವೆ? ಜನ್‌ಕೀ ಬಾತ್: ಬಿಜೆಪಿ 100-122, ಕಾಂಗ್ರೆಸ್ 62-85 ಟೈಮ್ಸ್ ನೌ: ಬಿಜೆಪಿ 108-128, ಕಾಂಗ್ರೆಸ್ 56-72 ಪೂಲ್‌ಸ್ಟಾರ್ಟ್ : ಬಿಜೆಪಿ 100-110, ಕಾಂಗ್ರೆಸ್ 90-100 ಇಂಡಿಯಾ ಟುಡೇ: ಬಿಜೆಪಿ 80-100, ಕಾಂಗ್ರೆಸ್ 86-106, ಬಿಎಸ್‌ಪಿ 1-2
ಕಾಂಗ್ರೆಸ್ ಅಧಿಕಾರ ಹಿಡಿದ ಬಳಿಕ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪಿಸಿಸಿ ಆಧ್ಯಕ್ಷರಾಗಿದ್ದ ಸಚಿನ್ ಪೈಲಟ್ ಹಾಗೂ ಸಿಎಂ ಗೆಹ್ಲೋಟ್ ನಡುವೆ ಅಧಿಕಾರಕ್ಕಾಗಿ ಶೀತಲ ಸಮರ ನಡೆಯುತ್ತಲೇ ಇತ್ತು. ಸರ್ಕಾರದ ವಿರುದ್ಧವೇ ಸಚಿನ್ ಪೈಲಟ್ ಧರಣಿ ನಡೆಸಿದ್ದರು. ಈ ಕಿತ್ತಾಟದ ಪರಿಣಾಮ ಬಿಜೆಪಿ ಈ ಬಾರಿ ಅಧಿಕಾರಕ್ಕೆ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ನವದೆಹಲಿ: ಕಂಡೀಷನ್‌ಗಳ (Conditions) ಬಗ್ಗೆ ಮೊದಲೇ ಹೇಳದ ಕಾಂಗ್ರೆಸ್ (Congress) ಈಗ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಗ್ಯಾರಂಟಿಗಳ (Guarantee) ವಿಚಾರದಲ್ಲಿ ಷರತ್ತುಗಳನ್ನು ವಿಧಿಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳಿಗೆ ಕಂಡೀಷನ್ ಹಾಕುವ ಮೂಲಕ ಯೋಜನೆಗಳು ಜನರಿಗೆ ತಲುಪದಂತೆ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಹಿಂದೆ ಎಲ್ಲರಿಗೂ ಫ್ರೀ ಅಂದವರು ಈಗ ಕಂಡೀಷನ್ ಹಾಕುತ್ತಿದ್ದಾರೆ. ಯುವನಿಧಿ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಸೇರಿದಂತೆ ಎಲ್ಲ ಗ್ಯಾರಂಟಿಗಳಿಗೆ ಕಂಡೀಷನ್ ಹಾಕಿದ್ದಾರೆ ಎಂದು ಕಿಡಿಕಾರಿದರು.
ಎಲ್ಲ ಯೋಜನೆಗಳಿಗೂ ಆನ್‌ಲೈನ್ ಅರ್ಜಿ ಹಾಕುವುದು ಕಡ್ಡಾಯವಾಗಿದೆ. ಈ ಮೂಲಕ ವೆರಿಫಿಕೇಷನ್ ಹೆಸರಿನಲ್ಲಿ ಯೋಜನೆಯನ್ನು ಜನರಿಗೆ ಮತ್ತಷ್ಟು ವಿಳಂಬ ಮಾಡುವ ಲೆಕ್ಕಾಚಾರ ಕಾಂಗ್ರೆಸ್ ಹಾಕಿದೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ಗೆ ಜನರು ಉತ್ತರ ನೀಡಲಿದ್ದಾರೆ ಎಂದರು. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಮತ್ತು ಆರ್‌ಎಸ್‌ಎಸ್ ನಿಷೇಧದ ಬಗ್ಗೆ ಮಾತನಾಡಿ, ಎಮ್ಮೆ ಹತ್ಯೆ ಮಾಡಿ ಎಂದು ನಾವು ಹೇಳಿಲ್ಲ. ಕೋಟ್ಯಂತರ ಜನರ ಮತ್ತು ಬಹುಸಂಖ್ಯಾತ ಜನರ ಭಾವನೆಗಳಿಗೆ ಧಕ್ಕೆಯಾಗಬಾರದು ಎನ್ನುವ ಕಾರಣಕ್ಕೆ ಗೋ ಹತ್ಯೆ ಬೇಡ ಎಂದು ಹೇಳಿದ್ದೇವೆ. ನಾವು ತಂದಿರುವ ಕಾನೂನು ಸೂಕ್ತವಾಗಿದೆ. ಅದನ್ನು ಅವರು ಮುಟ್ಟಬಾರದು ಎನ್ನುವುದು ನಮ್ಮ ಆಗ್ರಹ. ಆರ್‌ಎಸ್‌ಎಸ್ ಬ್ಯಾನ್ ಮಾಡುವ ಪ್ರಯತ್ನ ಅವರ ಮುತ್ತಾತ, ಅಜ್ಜಿ ಎಲ್ಲ ಮಾಡಿದ್ದಾರೆ ಅದಕ್ಕೆ ಪ್ರತಿಫಲ ಅನುಭವಿಸಿದ್ದಾರೆ. ಇವರು ಅನುಭವಿಸುತ್ತಾರೆ ಎಂದು ತಿರುಗೇಟು ನೀಡಿದರು.
2-3 ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ:
ಇನ್ನು 2-3 ದಿನಗಳಲ್ಲಿ ವಿಪಕ್ಷ ನಾಯಕರು ಯಾರು ಎಂಬುದು ಗೊತ್ತಾಗಲಿದೆ. ನನ್ನ ಪ್ರಕಾರ ಇಷ್ಟೊತ್ತಿಗೆ ನಿರ್ಧಾರವಾಗಬೇಕಾಗಿತ್ತು. ಒಡಿಶಾದಲ್ಲಿ ರೈಲು ದುರ್ಘಟನೆ ಹಿನ್ನೆಲೆ ನಮ್ಮ ಕೇಂದ್ರ ನಾಯಕರು ಆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಇನ್ನು 2-3 ದಿನದಲ್ಲಿ ವಿಪಕ್ಷ ನಾಯಕನ ಆಯ್ಕೆಯಾಗಲಿದೆ. ರಾಜ್ಯಾಧ್ಯಕ್ಷರ ಅವಧಿಯೂ ಈಗಾಗಲೇ ಮುಗಿದಿದೆ. ಪಕ್ಷ ಆ ವಿಚಾರದಲ್ಲೂ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಜೋಶಿ ಹೇಳಿದರು. ಇದನ್ನೂ ಓದಿ: IAS ವರ್ಸಸ್ IPS: ರೂಪಾ ಮೌದ್ಗಿಲ್‌ಗೆ ಜಾಮೀನು
ಶಿವಮೊಗ್ಗ: ಬಿಜೆಪಿಗೆ (BJP) ವೋಟ್ ಹಾಕಿದ್ದೆ ಎಂದು ಹೇಳಿದ್ದಕ್ಕೆ ಇಬ್ಬರು ಮುಸ್ಲಿಂ ಯುವಕರು ತನ್ನ ಮೇಲೆ ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದರು ಎಂದು ಹಲ್ಲೆಗೊಳಗಾಗಿದ್ದ ಆಟೋ ಚಾಲಕ (Auto Driver) ಹರೀಶ್ ರಾವ್ ಮಾಜಿ ಸಚಿವ ಈಶ್ವರಪ್ಪ (KS Eshwarappa) ಎದುರು ಕಣ್ಣೀರಿಡುತ್ತಾ ಗೋಳಾಡಿದ್ದ. ಆದರೆ ಈಗ ಈ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.
ಸೋಮವಾರ ಮುಂಜಾನೆ ಶಿವಮೊಗ್ಗ (Shivamogga) ಎಸ್‌ಪಿ ಮಿಥುನ್ ಕುಮಾರ್ ಕಚೇರಿ ಬಳಿ ಆಟೋದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಅದೇ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಈಶ್ವರಪ್ಪನವರ ಬಳಿ ತನ್ನ ಆಟೋ ಜಖಂ ಮಾಡಿದ್ದು ಹಾಗೂ ತನಗೆ ಹಲ್ಲೆ ಮಾಡಿದ್ದರ ಬಗ್ಗೆ ಅಳಲು ತೋಡಿಕೊಂಡಿದ್ದ. ಬಿಜೆಪಿಗೆ ಏಕೆ ವೋಟ್ ಹಾಕಿದೆ ಎಂದು ಹಲ್ಲೆ ಮಾಡಿದ್ದಾಗಿ ಆತ ತಿಳಿಸಿದ್ದ. ಈ ವೇಳೆ ಆಟೋ ಜಖಂ ಆಗಿದೆ. ಅದಕ್ಕೆ ವಿಮೆ ಬರುತ್ತಾ ಎಂದು ಪ್ರಶ್ನಿಸಿದ ಕೆಎಸ್ ಈಶ್ವರಪ್ಪ ಆತನಿಗೆ ಸ್ವಲ್ಪ ಹಣ ಕೊಟ್ಟು ಇದನ್ನು ಇಟ್ಕೊ, ಆಟೋ ರೀಪೇರಿ ಮಾಡಿಸಿಕೋ ಎಂದಿದ್ದರು.
ಘಟನೆ ಬಗ್ಗೆ ಎಸ್‌ಪಿ ಮಿಥುನ್ ಕುಮಾರ್ ಅವರಿಗೆ ಕರೆ ಮಾಡಿ ತಿಳಿಸಿದ ಈಶ್ವರಪ್ಪ, ಈತನ ಬಗ್ಗೆ ವಿಚಾರಿಸಿ ಎಂದಾಗ ಎಸ್‌ಪಿಯವರು ತಮ್ಮ ಕಚೇರಿಗೆ ಆತನನ್ನು ಕಳುಹಿಸುವಂತೆ ತಿಳಿಸಿದ್ದರು. ಈ ಘಟನೆ ರಾಜಕೀಯ ತಿರುವು ಪಡೆದುಕೊಳ್ಳುವುದನ್ನು ಅರಿತ ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಹೆಚ್‌ಸಿ ಯೋಗೀಶ್ ವಿನೋಬನಗರ ಠಾಣೆಗೆ ತೆರಳಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಅಲ್ಲದೇ ಆಟೋ ಚಾಲಕನಿಂದಲೂ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇದನ್ನೂ ಓದಿ: ಬಿಜೆಪಿಗೆ ವೋಟ್ ಹಾಕಿದ್ದಕ್ಕೆ ಚಾಲಕನಿಗೆ ಥಳಿತ, ಆಟೋ ಜಖಂ
ಈ ವೇಳೆ ಆಟೋ ಚಾಲಕ ನಾನು ಹಾಗೂ ಹಲ್ಲೆ ನಡೆಸಿದ ಅಬ್ರಾರ್, ನಸ್ರುಲ್ಲಾ ಮೂವರು ಸ್ನೇಹಿತರು. ನಾನು ಬಾರೊಂದರಲ್ಲಿ ಮದ್ಯ ಸೇವಿಸಿ ಹೊರ ಬಂದೆ. ನಾನು ಆಟೋ ರಿವರ್ಸ್ ತೆಗೆಯುವಾಗ ನನ್ನ ಆಟೋ ಆತನ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದು ಹಾನಿಯಾಯಿತು. ಹೀಗಾಗಿ ಆತ ತನ್ನ ಮೇಲೆ ಹಲ್ಲೆ ನಡೆಸಿ, ಆಟೋ ಜಖಂಗೊಳಿಸಿದ ಎಂದಿದ್ದಾನೆ.
ಒಟ್ಟಿನಲ್ಲಿ ಕೋಮು ಸಂಘರ್ಷಕ್ಕೆ ತಿರುಗುತ್ತಿದ್ದ ಘಟನೆ ಪೊಲೀಸರ ಸಂಧಾನದಿಂದ ಶಾಂತಿ ರೂಪ ಪಡೆದುಕೊಂಡಿದೆ. ಆಟೋ ಚಾಲಕ ಹರೀಶ್‌ನ ದ್ವಂದ್ವ ಹೇಳಿಕೆಗಳು ಘಟನೆಯ ನಿಜ ಸ್ವರೂಪವನ್ನೇ ಬದಲಿಸಿಬಿಟ್ಟಿದೆ. ಇದನ್ನೂ ಓದಿ: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಷರತ್ತು ಅನ್ವಯ: ಪರಮೇಶ್ವರ್
ಹುಬ್ಬಳ್ಳಿ: ಯಡಿಯೂರಪ್ಪ (BS Yediyurappa) ನನ್ನ ಟಿಕೆಟ್ ಸಲುವಾಗಿ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಆದರೆ ಅವರು ಅಸಹಾಯಕರಾದರು. ಈಗ ನನ್ನ ಮೇಲೆ ಯಡಿಯೂರಪ್ಪ ಮಾಡಿರುವ ಟೀಕೆಗಳನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಯಡಿಯೂರಪ್ಪ ಎಂಬ ಹಿರಿಯ ಮತ್ತು ಲಿಂಗಾಯತ ನಾಯಕರಿಂದ ನನ್ನ ಬೈಯಿಸಲಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಆರೋಪ ಮಾಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಯಡಿಯೂರಪ್ಪ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸಲಾಗುತ್ತಿದೆ. ಇದೇ ಯಡಿಯೂರಪ್ಪನವರು ಕೆಜೆಪಿ ಕಟ್ಟಿದಾಗ ಬಸವರಾಜ ಬೊಮ್ಮಾಯಿ ಹೋಗಲಿಲ್ಲ ಅಂತ ಹಿಗ್ಗಾಮುಗ್ಗಾ ಬೈದಿದ್ದರು. ಆದರೆ ಬಸವರಾಜ ಬೊಮ್ಮಾಯಿಯವರು ಬಿಜೆಪಿಯಲ್ಲಿ (BJP) ಗೆಲುವು ಸಾಧಿಸಿದ್ದರು. ನಾನು ಕೂಡಾ ಅತಿ ಹೆಚ್ಚು ಲೀಡ್‌ನಿಂದ ಗೆಲುವು ಸಾಧಿಸುತ್ತೇನೆ. ಯಡಿಯೂರಪ್ಪ ಎಷ್ಟೇ ಬೈದರು ಅದು ಅವರ ಆಶೀರ್ವವಚನ ಎಂದು ಭಾವಿಸುತ್ತೆನೆ ಎಂದು ಹೇಳಿದರು.
ಒಬ್ಬ ಲಿಂಗಾಯತ ನಾಯಕನಿಂದ ಮತ್ತೊಬ್ಬ ಲಿಂಗಾಯತ ನಾಯಕನನ್ನು ಬೈಯಿಸಲಾಗುತ್ತಿದೆ. ಯಡಿಯೂರಪ್ಪನವರು ಅಸಹಾಯಕರಾಗಿದ್ದಾರೆ. ಯಡಿಯೂರಪ್ಪನವರು ರಕ್ತದಲ್ಲಿ ಬರೆದು ಕೊಡಲಿ ಅಥವಾ ಯಾವುದರಿಂದಾದಲೂ ಬರೆದು ಕೊಡಲಿ. ನೇರವಾಗಿ ಯುದ್ಧಕ್ಕೆ ಬರೋರು ನೀವೇ ಬನ್ನಿ, ಯಡಿಯೂರಪ್ಪರನ್ನು ಯಾಕೆ ನಡುವೆ ತರುತ್ತಿರಿ? 50-60 ಜನ ಲಿಂಗಾಯತರ ಜೊತೆಗೆ ಸೇರಿ ಸಭೆ ಮಾಡಿದರೆ ಇಡೀ ಲಿಂಗಾಯತ ಸಮುದಾಯದ ಸಭೆ ಆಗಲ್ಲ ಎಂದರು. ಇದನ್ನೂ ಓದಿ: ಬೆನ್ನಿಗೆ ಚೂರಿ ಹಾಕಿದ ಶೆಟ್ಟರ್, ಸವದಿ ಸೋಲಿಸುವ ಹೊಣೆ ನನ್ನದು- ಯಡಿಯೂರಪ್ಪ
ಸೆಂಟ್ರಲ್ ಕ್ಷೇತ್ರ ಬರೀ ಹುಬ್ಬಳ್ಳಿ ಧಾರವಾಡಕ್ಕೆ ಸೀಮಿತವಲ್ಲಾ. ಇದು ರಾಷ್ಟ್ರೀಯ ಸೆಂಟ್ರಲ್ ಆಗಿದೆ. ಅಮಿತ್ ಶಾ ಹುಬ್ಬಳ್ಳಿ ಮತ್ತು ಯಾದಗಿರಿಯಲ್ಲಿ ಜಗದೀಶ್ ಶೆಟ್ಟರ್ ಸೋಲಿಸಬೇಕು ಅಂತ ಭಾಷಣ ಮಾಡುತ್ತಿದ್ದಾರೆ. ಸ್ಮೃತಿ ಇರಾನಿ, ಯಡಿಯೂರಪ್ಪ ಮತ್ತು ಜೆಪಿ ನಡ್ಡಾ ಸಹ ನನ್ನ ಸೋಲಿಸಲು ಕರೆ ನೀಡಿದ್ದಾರೆ. ನನ್ನ ಮೇಲೆ ಎಲ್ಲರೂ ಮುಗಿ ಬಿದ್ದಿದ್ದಾರೆ. ಈ ಬಡಪಾಯಿ ಮೇಲೆ ಯಾಕೆ ಎಲ್ಲರೂ ಬಿದ್ದಿದ್ದಾರೆ ಗೊತ್ತಿಲ್ಲ. ಇವರೆಲ್ಲರೂ ಸೇರಿ ಸೆಂಟ್ರಲ್ ಕ್ಷೇತ್ರವನ್ನು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ್ದಾರೆ. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ದೊಡ್ಡ ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಬಿಜೆಪಿಗೆ ದ್ರೋಹ ಮಾಡಿದ್ದೆ ಎಂದು ಹೇಳುತ್ತಾರೆ. ಈ ಬಗ್ಗೆ ಮಾತನಾಡಲು ಯಾರಿಗೂ ನೈತಿಕತೆ ಇಲ್ಲ. ಜಗದೀಶ್ ಶೆಟ್ಟರ್ ಎಂದೂ ಪಕ್ಷ ದ್ರೋಹ ಮಾಡಿಲ್ಲ. ನಾನು ಎಂದೂ ಬಿಜೆಪಿಗೆ ಮೋಸ ಮಾಡಿಲ್ಲ ಎಂದರು.
ಇದೇ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಹರಿಹಾಯ್ದ ಶೆಟ್ಟರ್, ಧರ್ಮೇಂದ್ರ ಪ್ರಧಾನ್ ಕರೆ ಮಾಡಿದ ವೇಳೆಯಲ್ಲಿ ಜೋಶಿ ಕರೆದು ಮಾತನಾಡಬೇಕಿತ್ತು. ಆದರೆ ಎಲ್ಲಾ ಮುಗಿದ ಮೇಲೆ ಈಗ ಯಾಕೆ ಮಾತನಾಡುತ್ತಿರಿ? ಜೋಶಿ ಅವರೇ ಇದು ಬಹಳ ದಿನ ನಡೆಯೋದಿಲ್ಲ ಈ ರೀತಿಯ ರಾಜಕಾರಣ ನಡೆಯೋದಿಲ್ಲ. ಈ ರಾಜಕಾರಣ ಬಿಡಿ ಎಂದು ಕಿಡಿಕಾರಿದರು.
ಬಿಜೆಪಿಗರೇ ಏನು ನಿಮ್ಮ ಐಡಿಯಾ? ನಿನ್ನೆ ಮೊನ್ನೆ ಬಂದೋರಿಗೆ, ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಟ್ಟಿದ್ದೀರಿ. ಒಂದು ಸಣ್ಣ ಟಿಕೆಟ್ ನಮಗೆ ಕೊಡಿಸೋಕೆ ಆಗಿಲ್ಲ. ನನಗೆ ಟಿಕೆಟ್ ಕೈ ತಪ್ಪಿದಾಗ ಯಾರು ನನ್ನ ಮಾತನಾಡಿಸಲಿಲ್ಲ. ನಾನು ರೆಬಲ್ ಆದಮೇಲೆ ರಾಜ್ಯಸಭಾ ಸದಸ್ಯ ಮಾಡುತ್ತೇವೆ, ಕೇಂದ್ರದಲ್ಲಿ ದೊಡ್ಡ ಹುದ್ದೆ ಕೊಡುತ್ತೇವೆ ಎಂದರು. ತತ್ವ ಮತ್ತು ಸಿದ್ಧಾಂತದ ಬಗ್ಗೆ ಮಾತನಾಡುವವರು, ಸಿಡಿ ಭಯದಿಂದ ಕೋರ್ಟ್‌ನಲ್ಲಿ ಸ್ಟೇ ತಂದೋರಿಗೆ, 80 ಪ್ರಕರಣಗಳಲ್ಲಿ ಭಾಗಿಯಾದವರಿಗೆ ಟಿಕೆಟ್ ನೀಡಿದ್ದಾರೆಂದು ಆರೋಪಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ, ಕರ್ನಾಟಕಕ್ಕೆ ದೇವ ರಾಮ- ಭಕ್ತ ಹನುಮರ ಸಂಬಂಧವಿದೆ – ಯೋಗಿ ಆದಿತ್ಯನಾಥ್
ಚಿತ್ರದುರ್ಗ: ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ (Molakalmuru constituency) ಬಿಜೆಪಿ (BJP) ಅಭ್ಯರ್ಥಿಯಾಗಿ ಮಾಜಿ ಶಾಸಕ ತಿಪ್ಪೇಸ್ವಾಮಿ (Thippeswamy), ಕಾಂಗ್ರೆಸ್‌ನಿಂದ (Congress) ಕೂಡ್ಲಿಗಿ ಮಾಜಿ ಶಾಸಕ ಎನ್‌ವೈ ಗೋಪಾಲಕೃಷ್ಣ (NY Gopalakrishna) ಹಾಗೂ ಜೆಡಿಎಸ್‌ನಿಂದ (JDS) ವೀರಭದ್ರ ಬಾಬು (Veerabhadra Babu) ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಹಾಗೂ ತಿಪ್ಪೇಸ್ವಾಮಿ ಹಿಂದಿನಿಂದಲೂ ಬದ್ಧ ವೈರಿಗಳಾಗಿದ್ದು, ಇಬ್ಬರು ಸಹ ಸಮಬಲದ ಹೋರಾಟ ನಡೆಸುತಿದ್ದಾರೆ. ಆದರೆ ಜೆಡಿಸ್‌ನ ಅಭ್ಯರ್ಥಿ ವಲಸಿಗರಾಗಿದ್ದು, ಕ್ಷೇತ್ರದಲ್ಲಿ ಅಷ್ಟು ಪರಿಚಯವಿಲ್ಲ.
ಈ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಗೆದ್ದು ಸಚಿವರಾಗಿದ್ದ ಶ್ರೀರಾಮುಲು ಅವರ ಎದುರಾಳಿಯಾಗಿದ್ದ ತಿಪ್ಪೇಸ್ವಾಮಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸಿ, ಅವರನ್ನು ಗೆಲ್ಲಿಸಲು ಬೆಂಗಾವಲಾಗಿ ನಿಂತಿದ್ದಾರೆ. ಈ ಮಧ್ಯೆ ಕೂಡ್ಲಿಗಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರ್ಪಡೆಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಗೋಪಾಲಕೃಷ್ಣ ಕೂಡಾ ಸತತ 6 ಬಾರಿ ಶಾಸಕರಾಗಿದ್ದು, ತಿಪ್ಪೇಸ್ವಾಮಿ ವಿರುದ್ಧ ಭಾರೀ ಕಸರತ್ತು ಆರಂಭಿಸಿದ್ದಾರೆ.
ಇಬ್ಬರು ನಾಯಕರು ಸಹ ಸ್ಥಳೀಯರಾಗಿದ್ದು, ದಿಗ್ಗಜರ ಮಧ್ಯೆ ಜಿದ್ದಾಜಿದ್ದಿನ 50:50 ಸ್ಪರ್ಧೆ ನಡೆಯುತ್ತಿದೆ. ಈ ಕ್ಷೇತ್ರವು ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದು, ಇಲ್ಲಿ ಬುಡಕಟ್ಟು ಸಂಪ್ರದಾಯದ ಮ್ಯಾಸನಾಯಕ ಸಮುದಾಯ ಹೆಚ್ಚಾಗಿದೆ. ಅವರೇ ಫಲಿತಾಂಶದ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇಲ್ಲಿ ಊರು ನಾಯಕ ಸಮುದಾಯ ಅವರಿಗಿಂತ ಕಡಿಮೆ ಇದೆ. ಹೀಗಾಗಿ ಈ ಇಬ್ಬರು ಸ್ಪರ್ಧಿಗಳಲ್ಲಿ ತಿಪ್ಪೇಸ್ವಾಮಿ ಮ್ಯಾಸನಾಯಕ ಬೇಡರ ಸಮುದಾಯದವರಾಗಿದ್ದು, ಗೋಪಾಲಕೃಷ್ಣ ಊರು ನಾಯಕರಾಗಿರುವುದು ಬಿಜೆಪಿಗೆ ವರದಾನವಾಗಿದೆ.
ಕಾಂಗ್ರೆಸ್ ಟಿಕೆಟ್ ವಂಚಿತ ಯೋಗೇಶ್ ಬಾಬು ಸಹ ಮ್ಯಾಸನಾಯಕ ಬುಡಕಟ್ಟಿನವರಾಗಿದ್ದು, ಗೋಪಾಲಕೃಷ್ಣ ಜೊತೆ ಗುರುತಿಸಿಕೊಂಡಿರುವುದು ಬಿಜೆಪಿಗೆ ತೀವ್ರ ಪೈಪೋಟಿ ಎನಿಸಿದೆ. ಈ ಜಿದ್ದಾಜಿದ್ದಿನ ಕಣದಲ್ಲಿ ಇಬ್ಬರು ಸ್ಪರ್ಧಿಗಳು ಸಹ ಭಾರೀ ಪೈಪೋಟಿಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾದ ತಿಪ್ಪೇಸ್ವಾಮಿ ಪರ ಕಳೆದ ಬಾರಿ ಸೋತಿರುವ ಅನುಕಂಪ ಹಾಗೂ ಇತ್ತೀಚೆಗೆ ಅವರ ಏಕೈಕ ಪುತ್ರನ ಅಕಾಲಿಕ ಸಾವು ಸಹ ಮತದಾರರ ಮನ ಕರಗಿಸಿದೆ.
ಕ್ಷೇತ್ರದಲ್ಲಿನ ಮತದಾರರೊಂದಿಗಿನ ಒಡನಾಟ ವರ್ಕೌಟ್ ಆದರೆ ಬಿಜೆಪಿ ಗೆಲುವು ಸುಲಭವಾಗಲಿದೆ. ಆದರೆ ತುಂಬಾ ಬುದ್ಧಿವಂತ ಹಾಗೂ ಚುನಾವಣಾ ತಂತ್ರಗಾರಿಕೆ ಬಲ್ಲ ಕಾಂಗ್ರೆಸ್ ಅಭ್ಯರ್ಥಿ ಗೋಪಾಲಕೃಷ್ಣ ವಿರುದ್ಧ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ ಎಂಬ ಚರ್ಚೆ ಸಹ ಕ್ಷೇತ್ರದಲ್ಲಿದೆ.
ಇನ್ನು ಮಾಜಿ ಶಾಸಕ ತಿಪ್ಪೇಸ್ವಾಮಿ ಪರ ಮಾಜಿ ಸಚಿವ ಶ್ರೀರಾಮುಲು ಆಪ್ತ ಪಾಪೇಶ್ ನಾಯಕ ಓಡಾಡುತ್ತಿರುವುದು ಬಿಜೆಪಿಗೆ ಹಿನ್ನಡೆಯಾಗುತ್ತಿದೆ. ಕಳೆದ ಬಾರಿ ಗೆದ್ದಿದ್ದ ಶ್ರೀ ರಾಮುಲು ಪರ ಎಲ್ಲಾ ಕೆಲಸಗಳನ್ನು ಪಾಪೇಶ್ ನಾಯಕ ನೆರವೇರಿಸುತ್ತಿದ್ದು, ಕ್ಷೇತ್ರದಲ್ಲಿ ಜನವಿರೋಧಿ ಅಲೆ ಪರಿಣಾಮ ರಾಮುಲು ಕ್ಷೇತ್ರ ಬದಲಾವಣೆ ಮಾಡಿದ್ದರು. ಹೀಗಾಗಿ ಅದರ ಎಫೆಕ್ಟ್ ತಿಪ್ಪೇಸ್ವಾಮಿ ಮೇಲೆ ತಟ್ಟಿದರೆ ಬಿಜೆಪಿ ಗೆಲುವು ಕಷ್ಟವಾಗಲಿದೆ. ಇದನ್ನೂ ಓದಿ: ‘ಕೈ’, ‘ಕಮಲ’ದ ನಡುವೆ ಟಫ್ ಫೈಟ್ – ಕಾಗವಾಡ ಅಖಾಡ ಹೇಗಿದೆ?
ಮತದಾರರು ಎಷ್ಟಿದ್ದಾರೆ?
ಒಟ್ಟು ಮತದಾರರು: 2,43,027
ಪುರುಷರು: 1,22,622
ಮಹಿಳೆಯರು: 1,20,393
ಬೆಂಗಳೂರು: ವಿಶ್ವಾಸಮತ ಮಂಡಿಸದೆ ಕಾಲಹರಣ ಮಾಡುವ ಮೂಲಕ ಸಿಎಂ ಹಾಗೂ ಸ್ಪೀಕರ್ ನಾಟಕವಾಡುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ವಿಶ್ವಾಸಮತಯಾಚನೆ ಮಾಡುತ್ತೇನೆಂದು ಅಧಿವೇಶನ ಆರಂಭಿಸಿದರು. ಆದರೆ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸಮಯ ಮುಂದೂಡುವ ಕೆಲಸ ಮಾಡಿ, ಸದನದಲ್ಲಿ ಗಲಭೆ ಏಳುವಂತೆ ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಒಂದೆಡೆ ಸಂವಿಧಾನಾತ್ಮಕವಾಗಿ ಹಾಗೂ ನಿಯಮಬದ್ಧವಾಗಿ ನೀಡಿದ ಶಾಸಕರ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಿಲ್ಲ. ಇನ್ನೊಂದೆಡೆ ಸದನದಲ್ಲಿ ವಿಶ್ವಾಸಮತಯಾಚನೆಗೆ ಅವಕಾಶ ನೀಡದೆ, ಕಾಲಹರಣ ಮಾಡುತ್ತಿದ್ದಾರೆ. ಈ ಮೂಲಕ ಸ್ಪೀಕರ್ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.
ಸದನದಲ್ಲಿ ವಿಶ್ವಾಸಮತಯಾಚೆನೆಗೆ ಅವಕಾಶ ನೀಡದೆ, ಸ್ಪೀಕರ್ ಮುಖ್ಯಮಂತ್ರಿ ಸೇರಿ ನಾಟಕ ಆಡುತ್ತಿದ್ದಾರೆ. ಸ್ಪೀಕರ್ ಕಾಂಗ್ರೆಸ್ ಏಜೆಂಟ್‍ರಂತೆ ವರ್ತಿಸುತ್ತಿದ್ದಾರೆ. ಸ್ಪೀಕರ್ ಪ್ರಮಾಣಿಕವಾಗಿ ಇಂದೇ ವಿಶ್ವಾಸಮತ ಸಾಬೀತು ಮಾಡಲು ನಿರ್ದೇಶನ ನೀಡಬೇಕು ಎಂದರು.
ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯರ ಮೊಮ್ಮಗಳ ಬಗ್ಗೆ ಅಗೌರವದಿಂದ ಮಾತನಾಡಿದ ಬಿಜೆಪಿ ನಾಯಕ ಈಶ್ವರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೆಂಡಾಮಂಡಲರಾಗಿದ್ದಾರೆ.
ಈಶ್ವರಪ್ಪನ ಕೊಳಕು ಮನಸ್ಥಿತಿ ಅರ್ಥವಾಗುತ್ತಿಲ್ಲ. ಬಿಜೆಪಿಯವರು ಯಾಕೆ ಇನ್ನು ಅವರನ್ನ ಇಟ್ಟುಕೊಂಡಿದ್ದಾರೆ ಅಂತ ಗೊತ್ತಿಲ್ಲ. ಈ ಮಟ್ಟದಲ್ಲಿ ಬಿಜೆಪಿಯವರು ಇವತ್ತು ಮಾತಾಡ್ತಾರೆ ಅಂದರೆ ಅವರಿಗೆ ಯಾವ ಸಂಸ್ಕೃತಿ, ಸಂಸ್ಕಾರನು ಇಲ್ಲ. ಇದೇನು ಮಾತಾಡುವಂತಹ ಮಾತುಗಳಾ? ಈಶ್ವರಪ್ಪನಿಗೆ ಮಾನ ಮರ್ಯಾದೆ ಏನಾದರೂ ಇದೇಯಾ ಅಂತ ಆಶ್ಚರ್ಯ ಆಗುತ್ತೆ. ಜನ ಇದನ್ನ ಗಮನಿಸ್ತಾರೆ ಬಿಜೆಪಿ ಏನು ಅಂತ ಇದರಲ್ಲೇ ಗೊತ್ತಾಗುತ್ತಿದೆ. ರಾಜಕೀಯವಾಗಿ ಎದುರಾಳಿಗಳನ್ನ ಟೀಕೆ ಮಾಡಬೇಕು ಆದ್ರೆ ವ್ಯಕ್ತಿಗತವಾಗಿ ಟೀಕೆ ಮಾಡಬಾರದು ಎಂದು ಕಿಡಿಕಾರಿದ್ದಾರೆ.
ಯಾರದ್ದೇ ಮಗಳಾಗಲಿ ಹೆಣ್ಣು ಮಕ್ಕಳ ಬಗ್ಗೆ ಈ ರೀತಿಯ ಟೀಕೆ ಮಾಡಬಾರದು. ಈಶ್ವರಪ್ಪ ಹೇಳಿಕೆ ನೋಡಿದರೆ ಹೆಣ್ಣುಮಕ್ಕಳ ಬಗ್ಗೆ ಇರುವ ಅಗೌರವತನ ತೋರಿಸುತ್ತೆ. ಭಾರತ ಮಾತೆ ಅಂತ ಹೇಳುವ ಇವರು ಭಾರತ ಮಾತೆಗೆ ಅಗೌರವ ತೋರಿಸುತ್ತಿದ್ದಾರೆ. ಬಿಜೆಪಿಗೆ ನೈತಿಕತೆ ಇದ್ದರೆ ಯಡಿಯೂರಪ್ಪ ಈಶ್ವರಪ್ಪ ಅವರಿಗೆ ಛೀಮಾರಿ ಹಾಕಬೇಕು. ಯಡಿಯೂರಪ್ಪನವರಿಗೆ ತಾಖತ್ ಇದ್ರೆ ಕ್ರಮಕೈಗೊಳ್ಳಿ ಇಲ್ಲಾ ಅಂದರೆ ಬಾಯಿ ಮುಚ್ಚುಕೊಂಡು ಇರಬೇಕು ಎಂದು ಹರಿಹಾಯ್ದರು.
ಈಶ್ವರಪ್ಪ ಹೇಳಿದ್ದೇನು?
ಕುಂದಗೋಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ನಿನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾಗಿದ್ದರೆ ಏನ್ಮಾಡ್ತೀಯಾ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸುವ ಮೂಲಕ ನಾಲಿಗೆ ಹರಿಬಿಟ್ಟಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರವಾಗಿತ್ತು. ಈ ಘಟನೆಯಿಂದ ನನಗೆ ತುಂಬಾ ದುಃಖ ತಂದಿತ್ತು. ನನ್ನ ಮೊಮ್ಮಗಳ ಮೇಲೆ ಅತ್ಯಾಚಾರವಾದಷ್ಟು ನೋವಾಗಿತ್ತು. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದೆ. ಆದರೆ ಸಿದ್ದರಾಮಯ್ಯ ಏನ್ ಮಾಡಬೇಕು ಈವಾಗ ಅಂದಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.