Tag: ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ಕಾಂಗ್ರೆಸ್ ನಾಯಕರ ಎದೆ ನಡುಗಿಸುವಂತಿದೆ ಬಿಜೆಪಿ ಪಟ್ಟಿ: ಈಶ್ವರಪ್ಪ

    ಕಾಂಗ್ರೆಸ್ ನಾಯಕರ ಎದೆ ನಡುಗಿಸುವಂತಿದೆ ಬಿಜೆಪಿ ಪಟ್ಟಿ: ಈಶ್ವರಪ್ಪ

    ಶಿವಮೊಗ್ಗ: ಕಾಂಗ್ರೆಸ್ (Congress) ನಾಯಕರ ಎದೆ ನಡುಗಿಸುವಂತಹ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ (BJP) ಬಿಡುಗಡೆ ಮಾಡಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (K.S.Eshwarappa) ಶಿವಮೊಗ್ಗದಲ್ಲಿ ಹೇಳಿದ್ದಾರೆ.

    ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ (BJP candidates list) ಬಿಡುಗಡೆ ಮಾಡಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ (Election) ರಾಜ್ಯದ ಜನರ ಮನಸ್ಸನ್ನು ಗೆದ್ದು ಪೂರ್ಣ ಬಹುಮತದಿಂದ ಬಿಜೆಪಿ ಆಯ್ಕೆಯಾಗಲಿದೆ. ಬಿಡುಗಡೆಯಾದ ಪಟ್ಟಿಯಿಂದ ಬಹಳ ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ: ನಿವೃತ್ತಿ ಘೋಷಣೆ ಮಾಡಲು ಸಿದ್ಧ, ಆದ್ರೆ ಅದು ಗೌರವಯುತವಾಗಿ ಆಗಬೇಕು: ಶೆಟ್ಟರ್

    ಕರ್ನಾಟಕದಲ್ಲಿ ಈವರೆಗೂ ಬಿಜೆಪಿಗೆ ಪೂರ್ಣ ಬಹುಮತ ಬಂದಿಲ್ಲ. ಬಿಜೆಪಿ ಆಡಳಿತ ಮಾಡಲಿ ಎಂದು ಜನ ಆದೇಶ ಕೊಟ್ಟಿದ್ದರು. ಈ ಬಾರಿ ಆದೇಶದೊಂದಿಗೆ ಪೂರ್ಣ ಬಹುಮತವನ್ನು ಕೊಡಿ ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

    ಬಿಜೆಪಿ ನಿಂತ ನೀರಲ್ಲ. ಇಲ್ಲಿ ಹೊಸ ಅಭ್ಯರ್ಥಿಗಳು ಬರುತ್ತಾರೆ. ಜೊತೆಗೆ ಹಳಬರು ಇರುತ್ತಾರೆ. ಎಲ್ಲರಿಗೂ ಅನುಕೂಲವಾಗುವಂತಹ ಪಟ್ಟಿ ಬಿಡುಗಡೆ ಆಗಿದೆ. ಹಿಂದುಳಿದ ವರ್ಗದವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ಪಟ್ಟಿಯಲ್ಲಿ ವೈದ್ಯರು, ನಿವೃತ್ತ ಐಎಎಸ್ ಅಧಿಕಾರಿ ಹಾಗೂ ನಿವೃತ್ತ ಸರ್ಕಾರಿ ನೌಕರರು ಇದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

    ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ್ ಸವದಿ (Laxman Savadi) ಅವರಿಗೆ ಟಿಕೆಟ್ ತಪ್ಪಿದ್ದು, ಸಹಜವಾಗಿ ಬೇಸರ ತರುತ್ತದೆ. ಅವರು ಪಕ್ಷದ ಹಿರಿಯರು, ಪಕ್ಷದ ಮುಖಂಡರು ಅವರನ್ನು ಕರೆದು ಮಾತಾಡಲಿದ್ದಾರೆ. ಬಾಕಿ ಇರುವ ಶಿವಮೊಗ್ಗ ನಗರ ಕ್ಷೇತ್ರಕ್ಕೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು. ಅದಕ್ಕೆ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಟಿಕೆಟ್ – ಜಾತಿವಾರು ಲೆಕ್ಕಾಚಾರ ಏನು?

  • BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

    BJP Candidate First List: ಬಿಜೆಪಿ ಮೊದಲ ಪಟ್ಟಿಯಲ್ಲಿ 8 ಮಹಿಳೆಯರಿಗೆ ಟಿಕೆಟ್

    ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ (Karnataka Election 2023) ಬಿಜೆಪಿ ಮಂಗಳವಾರ ರಾತ್ರಿ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಒಟ್ಟು 189 ಅಭ್ಯರ್ಥಿಗಳ ಪೈಕಿ 8 ಮಹಿಳೆಯರಿಗೆ ಟಿಕೆಟ್‌ (Karnataka BJP Women Candidates) ಘೋಷಿಸಿದೆ.

    ಘೋಷಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹಾಲಿ ಶಾಸಕಿಯರು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶಶಿಕಲಾ ಜೊಲ್ಲೆ, ಪೂರ್ಣಿಮಾ ಶ್ರೀನಿವಾಸ್‌ ಹಾಗೂ ರೂಪಾಲಿ ಸಂತೋಷ್‌ ನಾಯ್ಕ್‌ ಹಾಲಿ ಶಾಸಕರು. ಈ ಬಾರಿ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ. ಇದರೊಂದಿಗೆ 5 ಮಂದಿ ವಕೀಲರು, 9 ಮಂದಿ ವೈದ್ಯರು, ಒಬ್ಬರು ನಿವೃತ್ತ ಐಎಎಸ್‌, ಒಬ್ಬರು ಐಪಿಎಸ್‌ ಅಧಿಕಾರಿಗೆ ಟಿಕೆಟ್‌ ಘೋಷಣೆ ಮಾಡಿದೆ. ಇದನ್ನೂ ಓದಿ: Karnataka Election 2023: ಬಿಜೆಪಿ ಟಿಕೆಟ್‌ ಉಳಿಸಿಕೊಂಡ ಆ 35 ಕ್ಷೇತ್ರಗಳು ಯಾವುವು..?

    ಯಾರಿಗೆ ಎಲ್ಲಿ ಬಿಜೆಪಿ ಟಿಕೆಟ್?
    1. ನಿಪ್ಪಾಣಿ – ಶಶಿಕಲಾ ಜೊಲ್ಲೆ
    2. ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
    3. ಸವದತ್ತಿ – ರತ್ನಾ ವಿಶ್ವನಾಥ್‌ ಮಾಮನಿ
    4. ಕಾರವಾರ – ರೂಪಾಲಿ ನಾಯ್ಕ್
    5. ಸಂಡೂರು – ಶಿಲ್ಪಾ ರಾಘವೇಂದ್ರ
    5. ನಾಗಮಂಗಲ – ಸುಧಾ ಶಿವರಾಮೇಗೌಡ
    6. ಪುತ್ತೂರು – ಆಶಾ ತಿಮ್ಮಪ್ಪ ಗೌಡ
    7. ಸುಳ್ಯ – ಭಾಗೀರಥಿ ಮುರುಳ್ಯ

  • ಅಭ್ಯರ್ಥಿಗಳ ಪಟ್ಟಿ ಪ್ರಕಟ: ಬಿಜೆಪಿ ವೆಬ್‍ಸೈಟ್ ಬಗ್ಗೆ ರಮ್ಯಾ ಲೇವಡಿ

    ಅಭ್ಯರ್ಥಿಗಳ ಪಟ್ಟಿ ಪ್ರಕಟ: ಬಿಜೆಪಿ ವೆಬ್‍ಸೈಟ್ ಬಗ್ಗೆ ರಮ್ಯಾ ಲೇವಡಿ

    ಬೆಂಗಳೂರು: ಬಿಜೆಪಿ ವೆಬ್‍ಸೈಟ್ ನಲ್ಲಿ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗದ್ದಕ್ಕೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

    ಬಹುಶಃ ವಿಜೇತರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಬಹುದು ಎಂದು ಬರೆದು ರಮ್ಯಾ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

    ಬಿಜೆಪಿ ವೆಬ್‍ಸೈಟಿನಲ್ಲಿ,”ನಾವು ಶೀಘ್ರವೇ ವಾಪಸ್ ಬರುತ್ತೇವೆ” ಎಂದು ಸಂದೇಶ ಪೇಜ್ ಲಿಂಕ್ ಓಪನ್ ಮಾಡಿದಾಗ ಕಾಣಸಿಗುತ್ತಿದೆ. ಈ ವಿಚಾರವನ್ನೇ ಮುಂದಿಟ್ಟುಕೊಂಡು ರಮ್ಯಾ ಬಿಜೆಪಿ ವೆಬ್‍ಸೈಟನ್ನು ಲೇವಡಿ ಮಾಡಿದ್ದಾರೆ.

    ಮಾರ್ಚ್ 5 ರಂದು ಬಿಜೆಪಿ ವೆಬ್‍ಸೈಟ್ ಹ್ಯಾಕ್ ಆಗಿತ್ತು. ಹ್ಯಾಕ್ ಆದ ವಿಚಾರವನ್ನು ಟ್ವಿಟ್ಟರ್ ನಲ್ಲಿ ಕಾಂಗ್ರೆಸ್ ಸೋಶಿಯಲ್ ಮೀಡಿಯಾ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಪ್ರಸ್ತಾಪಿಸಿ ಕಾಲೆಳೆದಿದ್ದಾರೆ.

    ಭಾಯಿ ಔರ್ ಬೆಹನೋ.. ಈಗ ಬಿಜೆಪಿ ವೆಬ್ ಸೈಟನ್ನು ಒಂದು ಬಾರಿ ನೋಡಿ ಎಂದು ಹೇಳಿ ಕಾಲೆಳೆದಿದ್ದರು. ಕೂಡಲೇ ಪ್ರತಿಕ್ರಿಯಿಸಿದ ಬಿಜೆಪಿ, ಕೆಲವೇ ಕ್ಷಣಗಳಲ್ಲಿ ಬಿಜೆಪಿ ವೆಬ್ ಸೈಟ್ ಸರಿಹೋಗಲಿದೆ ಎಂದು ಸ್ಪಷ್ಟಪಡಿಸಿತ್ತು.