ಪಾಟ್ನಾ: ಬಿಹಾರ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಉಭಯ ಮೈತ್ರಿಕೂಟಗಳ ಪ್ರಚಾರದ ಬಿರುಸು ಜೋರಾಗುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿರುವ ಎನ್‌ಡಿಎ ಮೈತ್ರಿಕೂಟ ಅ.31 ರಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ.
ಬೆಳಗ್ಗೆ 9:30ರ ಸುಮಾರಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈತ್ರಿಕೂಟದ ಎಲ್ಲಾ ನಾಯಕರ ಸಮ್ಮುಖದಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ.
ಏನಿದೆ ನಿರೀಕ್ಷೆ?
ವರದಿಗಳ ಪ್ರಕಾರ, ಎನ್‌ಡಿಎ ಮೈತ್ರಿಕೂಟದ ಪ್ರಣಾಳಿಕೆಯು ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ಉದ್ಯೋಗ, ಮಹಿಳಾ ಸಬಲೀಕರಣ ಮೇಲೆ ಕೇಂದ್ರೀಕೃತವಾಗಿದೆ. ಅಲ್ಲದೇ ಮೂಲ ಸೌಕರ್ಯ, ಗ್ರಾಮೀಣ ಅಭಿವೃದ್ಧಿಗಳಿಗೂ ವಿಶೇಷ ಒತ್ತು ನೀಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಮಹಾಘಟಬಂಧನ್ ಭರವಸೆ ಏನಿದೆ?
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ‘ಬಿಹಾರ ಕಾ ತೇಜಸ್ವಿ ಪ್ರಾಣ್’ ಎಂಬ ಶೀರ್ಷಿಕೆಯಡಿ ಈಗಾಗಲೇ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
* ಸರ್ಕಾರ ರಚಿಸಿದ 20 ದಿನಗಳಲ್ಲಿ ರಾಜ್ಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ.
* ‘ಮೈ-ಬೆಹಿಂ ಮಾನ್ ಯೋಜನೆ’ ಅಡಿಯಲ್ಲಿ, ಡಿಸೆಂಬರ್ 1 ರಿಂದಲೇ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವು.
* ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರುವ ಭರವಸೆ
* ವಕ್ಫ್ (ತಿದ್ದುಪಡಿ) ಕಾಯ್ದೆ ಕಸದ ಬುಟ್ಟಿಗೆ
* ಪಂಚಾಯಿತಿ ಪ್ರತಿನಿಧಿಗಳ ವಿಮೆ ಭತ್ಯೆ ಡಬಲ್ ಸೇರಿದಂತೆ ಹಲವು ಭರವಸೆಗಳನ್ನ ನೀಡಿದೆ.
ಇದೇ ನವೆಂಬರ್ 6 ಮತ್ತು 11 ರಂದು 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.
ಪಾಟ್ನಾ: ಸರ್ದಾರ್ ವಲ್ಲಭಭಾಯಿ ಪಟೇಲ್‌ರಂತಹ (Sardhar Vallabhi Pattel) ಮಹಾನ್ ವ್ಯಕ್ತಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ ಪಕ್ಷ 41 ವರ್ಷ ವಿಳಂಬ ಮಾಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ವಾಗ್ದಾಳಿ ನಡೆಸಿದ್ದಾರೆ.
ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಅಮಿತ್ ಶಾ ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಲಕ್ಷದ್ವೀಪದಲ್ಲಿ ತ್ರಿವರ್ಣ ಧ್ವಜ ಹಾರಿಸಲು ಸರ್ದಾರ್ ಪಟೇಲ್ ಕಾರಣರಾಗಿದ್ದರು. ಆದರೆ ದುರದೃಷ್ಟವಶಾತ್, ಅಂತಹ ಮಹಾನ್ ವ್ಯಕ್ತಿಗೆ ಭಾರತ ರತ್ನ ನೀಡಲು ಕಾಂಗ್ರೆಸ್ (Congress) 41 ವರ್ಷ ಕಾಲ ವಿಳಂಬ ಮಾಡಿತ್ತು ಎಂದು ದೂರಿದ್ದಾರೆ. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್
ಪಟೇಲ್ ಅವರ ಮರಣದ ನಂತರ ಕಾಂಗ್ರೆಸ್ಸಿನವರು ಅವರ ಸಮಾಧಿಯಾಗಲಿ, ಸ್ಮಾರಕವಾಗಲಿ ಯಾವುದನ್ನೂ ನಿರ್ಮಿಸಿರಲಿಲ್ಲ. ನರೇಂದ್ರ ಮೋದಿ, ಗುಜರಾತ್ ಸಿಎಂ ಆದಾಗ, ಅವರ ಏಕತಾ ಪ್ರತಿಮೆಯ ನಿರ್ಮಾಣಕ್ಕೆ ಚಾಲನೆ ನೀಡಿದರು. ಇದು ಈಗ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ ಎಂದಿದ್ದಾರೆ.
182 ಮೀ. ಎತ್ತರದ ಏಕತಾ ಪ್ರತಿಮೆಯನ್ನು ನಿರ್ಮಿಸಲು ರೈತರಿಂದ ಕಬ್ಬಿಣವನ್ನು ಸಂಗ್ರಹಿಸಲಾಯಿತು. ಇಂದು, ಇದು ಪ್ರಮುಖ ಪ್ರವಾಸಿ ತಾಣವಾಗಿದೆ. ಇದನ್ನು ನೋಡಲು ಭಾರತ ಮತ್ತು ವಿದೇಶಗಳಿಂದ ಕೋಟ್ಯಂತರ ಜನರು ಬರುತ್ತಿದ್ದಾರೆ ಎಂದು ಹೇಳಿದ್ದಾರೆ.
-ಧರ್ಮಸ್ಥಳ ಕ್ಷೇತ್ರಕ್ಕೆ ಅಪಮಾನ ಮಾಡಿರೋರನ್ನ ಜೈಲಿಗೆ ಹಾಕಬೇಕು
ಬೆಂಗಳೂರು: ಚಡ್ಡಿ ಹಾಕುತ್ತಿದ್ದಾಗ ಇದ್ದ ಆರ್‌ಎಸ್‌ಎಸ್ (RSS) ಈಗ ಬಿಜೆಪಿ ಪುಡಾರಿಗಳು ಬಂದ ಮೇಲೆ ಬದಲಾವಣೆ ಆಗಿದೆ ಅಂತ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ (Belur Gopalakrishna) ಆರ್‌ಎಸ್‌ಎಸ್ ಮತ್ತು ಬಿಜೆಪಿ (BJP) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್‌ಎಸ್‌ಎಸ್ ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಓ ಅಮಾನತಿಗೆ KAT ತಡೆ ನೀಡಿದ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಹಜವಾಗಿ ಸರ್ಕಾರಿ ಅಧಿಕಾರಗಳು ಹೀಗೆ ಭಾಗವಹಿಸಿ ಗೊಂದಲ ಸೃಷ್ಟಿ ಮಾಡಬಾರದು. ಇಂತಹದ್ರಲ್ಲಿ ಭಾಗಿಯಾಗದೇ ಸುಮ್ಮನೆ ಇರಬೇಕು. ಕೋರ್ಟ್ ಆದೇಶಕ್ಕೆ ನಾವು ತಲೆ ಬಾಗಬೇಕಾಗಿದೆ ಎಂದರು. ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯಿಂದ ವಯನಾಡು ಪ್ರಮೋಷನ್: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಯಾವುದೇ ಸಂಸ್ಥೆ ಕಾರ್ಯಕ್ರಮ ಮಾಡಬೇಕಾದರೆ ಪರ್ಮಿಷನ್ ತೆಗೆದುಕೊಳ್ಳಬೇಕು ಅಂತ ಪ್ರಿಯಾಂಕ್ ಖರ್ಗೆ ಹೇಳಿದ್ದರು. ಇದರಲ್ಲಿ ತಪ್ಪೇನು ಇಲ್ಲ. ಶಾಲಾ ಆವರಣದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ಕೊಡಬಾರದು. ಈಗ ಕೋರ್ಟ್ ಆದೇಶ ಮಾಡಿದೆ, ನಾವು ಪಾಲನೆ ಮಾಡುತ್ತೇವೆ. ಆದರೆ ಮುಂದೆ ಹೀಗೆ ಅನೇಕರು ಬಂದು ಕಾರ್ಯಕ್ರಮ ಮಾಡುತ್ತೇವೆ ಅಂದರೆ ಸಮಸ್ಯೆ ಆಗುತ್ತದೆ. ಶಾಲೆಗಳಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಕೊಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಚೀನಾ ಮೇಲಿನ ಟ್ಯಾರಿಫ್ ಶೇ. 57ರಿಂದ 47ಕ್ಕೆ ಇಳಿಸಿದ ಟ್ರಂಪ್
ಇನ್ನು ಧರ್ಮಸ್ಥಳ ಕೇಸ್‌ನಲ್ಲಿ ಬುರುಡೆ ಗ್ಯಾಂಗ್‌ನಿಂದ ಕೇಸ್ ವಾಪಸ್‌ಗೆ ಅರ್ಜಿ ಹಾಕಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳದ ಕೇಸ್ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಇದು ಸಾಮಾನ್ಯ ವಿಚಾರ ಅಲ್ಲ. ದುಷ್ಟ ಶಕ್ತಿ ಸೇರಿಕೊಂಡು ದೇವಸ್ಥಾನಕ್ಕೆ ಹಾನಿ ಮಾಡಿದ್ದವು. ಅದರಂತೆ ಎಸ್‌ಐಟಿ ರಚನೆ ಮಾಡಲಾಗಿತ್ತು. ಈಗ ರಿಪೋರ್ಟ್ ನೋಡಿ ಮುಂದಿನ ತೀರ್ಮಾನ ಅಂತ ಹೋಮ್ ಮಿನಿಸ್ಟರ್ ಹೇಳಿದ್ದಾರೆ. ಆದರೆ ಈ ವಿಷ್ಯದಲ್ಲಿ ಯಾರು ಶಾಮೀಲು ಆಗಿದ್ದಾರೆ ಅವರನ್ನು ಜೈಲಿಗೆ ಕಳುಹಿಸಬೇಕು ಎಂದರು. ಇದನ್ನೂ ಓದಿ: ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ
ಬೆಂಗಳೂರು: ಕೆಎಸ್‌ಟಿಡಿಸಿಯಿಂದ (KSTDC) ವಯನಾಡು (Wayanad) ಪ್ರವಾಸ ಪ್ಯಾಕೇಜ್ ಘೋಷಿಸಿರುವುದಕ್ಕೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.
ನಮ್ಮ KSTDC ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ! ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಹೆಚ್.ಕೆ.ಪಾಟೀಲ್ ಅವರೇ, ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ? ವಯನಾಡಿನ ಜನರಿಗೆ ಮನೆ, ಆನೆ ದಾಳಿಯಿಂದ ಸತ್ತವರಿಗೆ ಪರಿಹಾರ, ಇಷ್ಟೆಲ್ಲಾ ಮಾಡಿದ ಮೇಲೆ ಈಗ ವಯನಾಡನ್ನೇ ಕರ್ನಾಟಕಕ್ಕೆ ಸೇರಿಸಲು ಹೇಳಿ. ಏಕೆಂದರೆ ನಿಮ್ಮ ಆಡಳಿತ ಈಗ ಕರ್ನಾಟಕ ಸರ್ಕಾರಕ್ಕಿಂತಲೂ ವಯನಾಡು ಸೇವಾ ಕೇಂದ್ರದಂತಾಗಿದೆ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಇದನ್ನೂ ಓದಿ: ಬಿಜೆಪಿಯವರಿಗೆ ದುರ್ಬುದ್ಧಿ – ವಯನಾಡ್ ಪ್ರಿಯಾಂಕಾ ಗಾಂಧಿ ಕ್ಷೇತ್ರ ಅಂತ ಆರೋಪ ಮಾಡ್ತಿದ್ದಾರೆ: ರಾಮಲಿಂಗಾರೆಡ್ಡಿ
ನಮ್ಮ KSTDC ಇರುವುದು ಕರ್ನಾಟಕಕ್ಕೋ, ಕೇರಳಕ್ಕೋ ತಿಳಿಯುತ್ತಿಲ್ಲ!
ಸಿಎಂ @siddaramaiah ಮತ್ತು ಸಚಿವ @HKPatilINC ಅವರೇ, ನಮ್ಮ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ ಕಾಣಲಿಲ್ಲವೇ? ನಿಮ್ಮ ಪ್ರಿಯಾಂಕಾ ಗಾಂಧಿಯನ್ನು ಮೆಚ್ಚಿಸಲು ನಮ್ಮ ಕರುನಾಡನ್ನೇ ಕಡೆಗಣಿಸುತ್ತಿದ್ದೀರಾ?
ಆರ್.ಅಶೋಕ್ ಎಕ್ಸ್ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ವಯನಾಡಿನ ಜಿಲ್ಲಾಧಿಕಾರಿ ಮತ್ತು ನಿಧಿ ಸಂಗ್ರಹಕಾರನಂತೆ ವರ್ತಿಸುವ ಮುಖ್ಯಮಂತ್ರಿಯನ್ನು ಕರ್ನಾಟಕ ಎಷ್ಟು ದಿನ ಸಹಿಸಿಕೊಳ್ಳುತ್ತದೆ. ನೀವು ಕರ್ನಾಟಕದ ತೆರಿಗೆದಾರರ 10 ಕೋಟಿ ಹಣವನ್ನು ವಯನಾಡಿಗೆ ಮಿಂಚಿನ ವೇಗದಲ್ಲಿ ಹಸ್ತಾಂತರಿಸಿದ್ದೀರಿ. ಆನೆಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ದಾನ ಮಾಡಿದ್ದೀರಿ. ಭೂಕುಸಿತದ ನಂತರ ವಯನಾಡಿನಲ್ಲಿ 100 ಮನೆಗಳನ್ನು ನಿರ್ಮಿಸುವುದಾಗಿ ನೀವು ಘೋಷಿಸಿದ್ದೀರಿ. ನೀವು ವಯನಾಡಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕರ್ನಾಟಕದ ಸ್ವಂತ ಪ್ರವಾಸೋದ್ಯಮ ನಿಗಮವಾದ ಏSಖಿಆಅ ಅನ್ನು ಬಳಸಿದ್ದೀರಿ ಎಂದು ಕಿಡಿಕಾರಿದ್ದಾರೆ.
ಉತ್ತರ ಕರ್ನಾಟಕ ಮುಳುಗುತ್ತಿದೆ, ರೈತರು ಬಳಲುತ್ತಿದ್ದಾರೆ, ಮನೆಗಳು ಕೊಚ್ಚಿ ಹೋಗಿವೆ, 12.5 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಪರಿಹಾರವು ಇನ್ನೂ ಫೈಲ್‌ಗಳು, ಸಮೀಕ್ಷೆಗಳು, ನೆಪಗಳು, ಭಾಷಣಗಳು ಮತ್ತು ಫೋಟೋ-ಆಪ್‌ಗಳಲ್ಲಿ ಸಿಲುಕಿಕೊಂಡಿದೆ. ಕಲಬುರಗಿ, ರಾಯಚೂರು, ಯಾದಗಿರಿ, ಬೀದರ್, ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿಗೆ ಪರಿಹಾರ ಮತ್ತು ಪ್ರವಾಹ ಪರಿಹಾರದ ಕೋಟಿ ಎಲ್ಲಿದೆ? ತುರ್ತು ಎಲ್ಲಿದೆ? ನಿಮ್ಮ ಆದ್ಯತೆಗಳೇನು? ಇದನ್ನೂ ಓದಿ: ನಾನು ಯಾವ್ದೇ ಭ್ರಷ್ಟಾಚಾರ ಮಾಡಿಲ್ಲ, ಬಿಜೆಪಿಯವರು ದಾಖಲೆ ಕೊಟ್ಟರೆ ಪರಿಶೀಲಿಸ್ತಿನಿ – ಯು.ಟಿ. ಖಾದರ್
ನಮ್ಮ ಸ್ವಂತ ವಿಪತ್ತು ಪೀಡಿತ ರೈತರಿಗೆ ಹಣವನ್ನು ಸಾಗಿಸಿದ್ದಕ್ಕಿಂತ ವೇಗವಾಗಿ ನೀವು ಬೇರೆ ರಾಜ್ಯಕ್ಕೆ ಹಣವನ್ನು ಸಾಗಿಸಿದ್ದೀರಿ. ಇದು ದಾನವಲ್ಲ. ಇದು ಕುರ್ಚಿಯನ್ನು ಉಳಿಸಿಕೊಳ್ಳಲು ಹೈಕಮಾಂಡ್‌ನ ಸಮಾಧಾನ. ನಕಲಿ ಗಾಂಧಿ ಕುಟುಂಬಕ್ಕೆ ತಲೆಬಾಗುವ, ಹೈಕಮಾಂಡ್‌ನ ಎಟಿಎಂನಂತೆ ನಮ್ಮ ಖಜಾನೆಯನ್ನು ಖರ್ಚು ಮಾಡುವ ಮತ್ತು ತನ್ನ ಮೇಜಿನ ಮೇಲೆ ಆಹಾರವನ್ನು ಇಡುವ ತನ್ನದೇ ರಾಜ್ಯದ ರೈತರನ್ನು ಮರೆತುಬಿಡುವ ಮುಖ್ಯಮಂತ್ರಿ ಕರ್ನಾಟಕಕ್ಕೆ ಅಗತ್ಯವಿಲ್ಲ. ನಾವು ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿದ್ದೇವೆ. ದೆಹಲಿಯ ಕೈಗೊಂಬೆಯಲ್ಲ, ವಯನಾಡಿನ ಬ್ರಾಂಡ್ ಅಂಬಾಸಿಡರ್ ಅಲ್ಲ. ಈಗಲೇ ಪೂರ್ಣ ಪರಿಹಾರವನ್ನು ಬಿಡುಗಡೆ ಮಾಡಿ. ನಕಲಿ ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕರ್ನಾಟಕದ ಹಣವನ್ನು ಲೂಟಿ ಮಾಡುವುದನ್ನು ನಿಲ್ಲಿಸಿ. ಕರ್ನಾಟಕ ಮೊದಲು. ವಯನಾಡ್ ಮೊದಲು ಅಲ್ಲ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಾದ ಕೆಎಸ್‌ಟಿಡಿಸಿ ವಯನಾಡಿಗೆ ಕನ್ನಡಿಗರನ್ನು ಕರೆಯುತ್ತಿದೆ. ವಯನಾಡು ಕರ್ನಾಟಕಕ್ಕೆ ಸೇರಿತೇ? ಅಥವಾ ಕೆಎಸ್‌ಟಿಡಿಸಿ ಕೇರಳದ್ದಾಯಿತೇ? ತಮ್ಮ ಪಕ್ಷದ ಅಧಿನಾಯಕಿ ಪ್ರಿಯಾಂಕಾ ಗಾಂಧಿಯವರನ್ನು ಮೆಚ್ಚಿಸಲು ಕನ್ನಡ ನಾಡಿನ ಗೌರವವನ್ನು ಅಡವಿಡಲು ಹೊರಟಿದೆ ಕಾಂಗ್ರೆಸ್ ಸರ್ಕಾರ ಎಂದು ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು: ಬಿಜೆಪಿ (BJP) ಅವರಿಗೆ ದುರ್ಬುದ್ಧಿ ಇದೆ. ವಯನಾಡ್ ಪ್ರಿಯಾಂಕಾ ಗಾಂಧಿ ಅವರ ಕ್ಷೇತ್ರ ಅಂತ ಸಹಿಸೋಕೆ ಆಗದೇ ಏನೇನೋ ಆರೋಪ ಮಾಡ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕಿಡಿಕಾರಿದ್ದಾರೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ವಯನಾಡ್ ಪ್ರವಾಸೋದ್ಯಮದ ಪರವಾಗಿ ಜಾಹೀರಾತು ನೀಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ವಯನಾಡ್ ನಮ್ಮ ಪಕ್ಕದ ಕೇರಳ ರಾಜ್ಯದ ಒಂದು ಜಿಲ್ಲೆಯಾಗಿದೆ. ಅಲ್ಲಿಗೆ ಟೂರಿಸಂಗೆ ಬನ್ನಿ ಅಂತ ಕೆಎಸ್‌ಟಿಡಿಸಿ ಹೇಳಿದೆ ಅಂತ ಬಿಜೆಪಿ ಟೀಕೆ ಮಾಡಿದ್ದಾರೆ. ವಯನಾಡ್ ಪ್ರಿಪ್ರಿಯಾಂಕಾ ಗಾಂಧಿ ಪ್ರತಿನಿಧಿಸುವ ಕ್ಷೇತ್ರ. ಅದನ್ನ ಸಹಿಸೋಕೆ ಆಗದೇ ಬಿಜೆಪಿಯವರು ಹೀಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದಾಖಲಾತಿ ಇಟ್ಟುಕೊಂಡು ಬಿಜೆಪಿಯವ್ರು ಆರೋಪ ಮಾಡಲಿ – ಖಾದರ್ ಪರ ರಾಮಲಿಂಗಾರೆಡ್ಡಿ ಬ್ಯಾಟಿಂಗ್
ನಮ್ಮ ದೇಶದಲ್ಲಿ ಬೇರೆ ರಾಜ್ಯದ ಟೂರಿಸಂಗೆ ಅವಕಾಶ ಇದೆ. ನಮ್ಮ ಇಲಾಖೆಯಿಂದ ಅಯೋಧ್ಯೆ, ಗಯಾ, ವಾರಣಾಸಿ, ತಮಿಳುನಾಡು, ಚಾರ್ ದಾಮ್, ಮಾನಸ ಸರೋವರಕ್ಕೂ ಕಳುಹಿಸುತ್ತೇವೆ. ಕೇವಲ ದೇವಸ್ಥಾನ ನೋಡೋದು ಅಲ್ಲ ಟೂರಿಸಂಗೂ ನಾವು ಅವಕಾಶ ಕೊಟ್ಟಿದ್ದೇವೆ. ಇದು ಬಿಜೆಪಿ ಅವರಿಗೆ ಗೊತ್ತಿಲ್ವಾ? ಬಿಜೆಪಿಯವರು ತಲೆಬುಡ ಗೊತ್ತಿಲ್ಲದೇ ಮಾತಾಡ್ತಾರೆ ಎಂದು ಗುಡುಗಿದ್ದಾರೆ.
ಬಿಜೆಪಿ ಅವರು ವಾಟ್ಸಾಪ್ ಯೂನಿವರ್ಸಿಟಿಯಿಂದ ಇಂತಹ ಸುದ್ದಿ ಹರಡಿಸ್ತಾರೆ. ಆರೋಪ ಮಾಡದೇ ಬಿಜೆಪಿ ಅವರಿಗೆ ನಿದ್ರೆ ಬರಲ್ಲ, ಊಟ ಸೇರಲ್ಲ. ಬಿಜೆಪಿ ಅವರಿಗೆ ದುರ್ಬುದ್ಧಿ ಇದೆ. ಇದನ್ನ ಬಿಡಬೇಕು ಅಂತ ಕಿಡಿಕಾರಿದ್ದಾರೆ.
ಬೆಂಗಳೂರು: ಸ್ಪೀಕರ್ ವಿರುದ್ಧ ದಾಖಲಾತಿ ಇಟ್ಟುಕೊಂಡು ಬಿಜೆಪಿಯವರು (BJP) ಆರೋಪ ಮಾಡಬೇಕು. ಮಾಧ್ಯಮಗಳ ಮುಂದೆ ಆರೋಪ ಮಾಡೋದು ಸರಿಯಲ್ಲ ಎಂದು ಸ್ಪೀಕರ್ ಯು.ಟಿ ಖಾದರ್ ಪರವಾಗಿ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಬ್ಯಾಟಿಂಗ್ ಮಾಡಿದ್ದಾರೆ.
ಬಿಜೆಪಿ ನಾಯಕರು ಸ್ಪೀಕರ್ ಖಾದರ್ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿರುವ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಖಾದರ್ ಅವರ ಮೇಲೆ ಆರೋಪ ಮಾಡಿದ್ದಾರೆ. ಕಾಗೇರಿ ಅವರು ಹಿಂದೆ ಸ್ಪೀಕರ್, ಸಚಿವರು ಆಗಿದ್ದವರು. ಯಾವುದೇ ಅಕ್ರಮ ಆಗಿಲ್ಲ. ಪಾರದರ್ಶಕವಾಗಿದೆ ಅಂತ ಖಾದರ್ ಹೇಳಿದ್ದಾರೆ. ಸಾಕ್ಷಿ ಸಮೇತ ಕಾಗೇರಿ ಅವರು ಖಾದರ್ ಅವರಿಗೆ, ರಾಜ್ಯಪಾಲರಿಗೆ ದಾಖಲೆ ಕೊಡಲಿ. ದಾಖಲೆ ಇಟ್ಟು ಆರೋಪ ಮಾಡಲಿ. ಕೇವಲ ಮಾಧ್ಯಮದಲ್ಲಿ ಮಾತಾಡೋದು ಸರಿಯಲ್ಲ ಎಂದರು.
ಬೆಂಗಳೂರು: ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಬಿಜೆಪಿ (BJP) ಆರೋಪಗಳು ನಿರಾಧಾರ. ಪಾರದರ್ಶಕವಾಗಿಯೇ ಎಲ್ಲಾ ಕೆಲಸಗಳು ಆಗಿವೆ. ದಾಖಲೆ ಕೊಟ್ಟರೆ ಪರಿಶೀಲಿನೆ ಮಾಡ್ತೀನಿ ಎಂದು ವಿಧಾನಸಭಾ ಸ್ಪೀಕರ್ ಖಾದರ್ (UT Khader) ಬಿಜೆಪಿ ಆರೋಪಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬಿಜೆಪಿ ನಾಯಕರ ಭ್ರಷ್ಟಾಚಾರ ಆರೋಪ ಸಂಬಂಧ `ಪಬ್ಲಿಕ್ ಟಿವಿ’ಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ನನ್ನ ಮೇಲೆ ಅಸೂಯೆಯಿಂದ ಬಿಜೆಪಿ ಅವರು ಆರೋಪ ಮಾಡ್ತಿದ್ದಾರೆ. ಪಾರದರ್ಶಕವಾಗಿಯೇ ಎಲ್ಲಾ ಕೆಲಸ ಆಗಿದೆ. ಏನಾದರೂ ದಾಖಲಾತಿ ಇದ್ದರೆ ಬಿಜೆಪಿಯವರು ಬರವಣಿಗೆ ರೂಪದಲ್ಲಿ ದೂರು ಕೊಡಲಿ ಪರಿಶೀಲನೆ ಮಾಡ್ತೀನಿ ಎಂದಿದ್ದಾರೆ.ಇದನ್ನೂ ಓದಿ: ರಾಯಚೂರು | RSS ಪಥಸಂಚಲನದಲ್ಲಿ ಭಾಗಿಯಾಗಿದ್ದ ಪಿಡಿಒ ಅಮಾನತು ಆದೇಶಕ್ಕೆ ಕೆಎಟಿ ತಡೆ
ನಾನು ಶಾಸಕ, ಮಂತ್ರಿ ಆದಾಗಲೂ ನನ್ನ ಮೇಲೆ ಆರೋಪ ಬಂದಿತ್ತು. ಈಗಲೂ ಬಂದಿದೆ. ಯಾವುದರಲ್ಲೂ ಯಶಸ್ಸು ಆಗಲಿಲ್ಲ. ನನ್ನ ವಿದೇಶ ಪ್ರವಾಸದ ಬಗ್ಗೆ ಕೇಳೋಕೆ ಇವರು ಯಾರು? ರಾಜ್ಯಪಾಲರಿಗಲ್ಲ ಯಾರಿಗಾದ್ರು ದೂರು ಕೊಡಲಿ. ನಾನು ರಾಜೀನಾಮೆ ಕೊಡುವುದಿಲ್ಲ. ನನ್ನ ರಾಜೀನಾಮೆ ಕೇಳಿದಾಗಲೇ ಅವರ ಉದ್ದೇಶ ಗೊತ್ತಾಗಿದೆ. ಮೊದಲು ಅವರು ದಾಖಲಾತಿ ಕೊಡಲಿ ನಂತರ ನಾನು ಪರಿಶೀಲನೆ ಮಾಡ್ತೀನಿ ಎಂದು ಹೇಳಿದ್ದಾರೆ.
– ಕಾಂಗ್ರೆಸ್ ಪಕ್ಷವನ್ನು ಅವರ ಶಾಸಕರೇ ಹಾದಿಬೀದಿಯಲ್ಲಿ ಟೀಕಿಸುತ್ತಿದ್ದಾರೆ – ಡಿಕೆಶಿ ಪರ ಬ್ಯಾಟ್ ಬೀಸಿದ ಬಿಜೆಪಿ ಶಾಸಕ
ತುಮಕೂರು: ನವೆಂಬರ್ 14ಕ್ಕೆ ಬಿಹಾರ ಚುನಾವಣೆ (Bihar Election) ನಡೆಯುತ್ತದೆ. ಫಲಿತಾಂಶ ಬಂದ ನಂತರ ಕಾಂಗ್ರೆಸ್ (Congress) ಸರ್ಕಾರ ಪತನ ಆಗುತ್ತದೆ ಎಂದು ಬಿಜೆಪಿ ಶಾಸಕ ಸುರೇಶ್ ಗೌಡ (Suresh Gowda) ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಸುತ್ತಾಡಿ, ಫಂಡಿಂಗ್ ಮಾಡಿ 138 ಸ್ಥಾನ ಗಳಿಸಿ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ವಾಡಿಕೆಯಂತೆ ಅವರೇ ಸಿಎಂ ಆಗಬೇಕಿತ್ತು ಎಂದು ಡಿಕೆಶಿ ಪರ ಬ್ಯಾಟ್ ಬೀಸಿದರು. ಇದನ್ನೂ ಓದಿ: ಏರ್ ಇಂಡಿಯಾ 4,000 ಕೋಟಿ ನಷ್ಟ ಅನುಭವಿಸಲು ಪಾಕಿಸ್ತಾನ ಕಾರಣ – ಸಿಇಒ ಸ್ಪೋಟಕ ಮಾಹಿತಿ
ಡಿಕೆಶಿ ಅವರ ತಾಖತ್‌ನಿಂದ ಫಂಡ್ ಮೊಬಿಲೈಜ್ ಮಾಡಿರೋದ್ರಿಂದ, ಪರಿಶ್ರಮ ಹಾಕಿರೋದ್ರಿಂದ ಸರ್ಕಾರ ಬಂದಿದೆ. ಆದರೆ ಸಿದ್ದರಾಮಯ್ಯ ಸಿಎಂ ಆದರು. ಸಿದ್ದರಾಮಯ್ಯ ಏನಾದರೂ ಫಂಡಿಂಗ್ ಮಾಡಿದ್ರಾ? ಹಣ ಕೊಟ್ಟರ‍್ಯಾರು ಡಿಕೆಶಿ ಅಲ್ಲವೇ? ಡಿಕೆ ಶಿವಕುಮಾರ್ ಪರಿಶ್ರಮಕ್ಕೆ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಈಗಲೂ ಸಿದ್ದರಾಮಯ್ಯ ಡಿಕೆಶಿಯನ್ನು ಸಿಎಂ ಮಾಡಬಾರದು ಎಂದು ತಂತ್ರ ರೂಪಿಸುತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಮಾತ್ರ ತಾನು ನೂರಕ್ಕೆ ನೂರು ಸಿಎಂ ಆಗುತ್ತೇನೆ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಡಿಕೆಶಿ, ಜಾರಕಿಹೊಳಿ ಅಲ್ಲ.. ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಸಿಎಂ ಆಗ್ತಾರೆ: ಯತ್ನಾಳ್ ಬಾಂಬ್
ಆಗಾಗ ಕೊಕ್ಕೆ ಹಾಕುವ ಸಿದ್ದರಾಮಯ್ಯ, ಜಿ ಪರಮೇಶ್ವರ್, ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಮತ್ತು ಎಂ.ಬಿ.ಪಾಟೀಲ್‌ಗೆ ನೀವುಗಳೇ ಸಿಎಂ ಆಗಿ ಎಂದು ಎತ್ತಿಕಟ್ಟುತ್ತಿದ್ದಾರೆ. ಸಿದ್ದರಾಮಯ್ಯರ ಎಲ್ಲಾ ಸ್ಟ್ರಾಟಜಿ ಡಿ.ಕೆ.ಶಿವಕುಮಾರ್‌ಗೆ ಗೊತ್ತಾಗಿದೆ. ಇಬ್ಬರು ಮೇಲ್ನೋಟಕ್ಕೆ ಚೆನ್ನಾಗಿದ್ದವರಂತೆ ಕಾಣುತ್ತಾರೆ. ಆದರೆ ಸಿದ್ದರಾಮಯ್ಯ ಡಿಕೆಶಿಯನ್ನು ಗೋಡೆಗೆ ತಳ್ಳಿ ಬಕಾ, ಬಕಾ ಎಂದು ದಿನಕ್ಕೊಬ್ಬರನ್ನು ಬಿಟ್ಟು ಬಾಕ್ಸಿಂಗ್ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಮಾತ್ರ ದೇವರ ಥರ ನಿಂತುಕೊಂಡಿದ್ದಾರೆ. ಏನೇ ಇದ್ದರೂ ನವೆಂಬರ್ 14ರ ಬಳಿಕ ಈ ಸರ್ಕಾರ ಪತನ ಆಗೋದು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಹಣವನ್ನೇ ಬಿಹಾರ ಚುನಾವಣೆಗೆ ಕಳುಹಿಸಿದ್ದೇವೆ: ಡಿಕೆಶಿ ಟಾಂಗ್
ಲಕ್ನೋ: ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಯುವತಿಯರನ್ನು ಕರೆದುಕೊಂಡು ಬಂದು ಮದುವೆಯಾಗಿ ಎಂದು ಬಿಜೆಪಿ ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಯುವತಿಯರೊಂದಿಗೆ ಓಡಿಹೋದ ಯಾವುದೇ ಹಿಂದೂ ಯುವಕರಿಗೆ ಉದ್ಯೋಗ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಹಿಂದೂಗಳು ಯಾವುದೇ ಭಯವಿಲ್ಲದೆ ಏನು ಬೇಕಾದರೂ ಮಾಡಬಹುದು ಎಂದು ಉತ್ತರ ಪ್ರದೇಶದ ಮಾಜಿ ಶಾಸಕ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್ – ಸ್ವಯಂ ಘೋಷಿತ ದೇವಮಾನವ ಅಸರಾಂಗೆ ಮಧ್ಯಂತರ ಜಾಮೀನು
ಸಿದ್ಧಾರ್ಥನಗರ ಜಿಲ್ಲೆಯ ದುಮಾರಿಯಾಗಂಜ್‌ನ ಮಾಜಿ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್, ಕ್ಷೇತ್ರದ ಧಂಖರ್‌ಪುರ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಇಬ್ಬರು ಹಿಂದೂ ಮಹಿಳೆಯರನ್ನು ಮುಸ್ಲಿಂ ಪುರುಷರೊಂದಿಗೆ ಬಲವಂತವಾಗಿ ಮದುವೆಯಾಗಿಸಿ ಮತಾಂತರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಶಾಸಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂ ಹುಡುಗಿಯೊಂದಿಗೆ ಓಡಿಹೋದ ಯಾವುದೇ ಹಿಂದೂವಿನ ಮದುವೆಯನ್ನು ನಾನು ಮುಂದೆ ನಿಂತು ಮಾಡಿಸುತ್ತೇನೆ. ಅವರಿಗೆ ಉದ್ಯೋಗ ವ್ಯವಸ್ಥೆಯನ್ನೂ ಮಾಡುತ್ತೇನೆ ಎಂದು ಸಿಂಗ್ ತಿಳಿಸಿದ್ದಾರೆ.
ಈಗ ಅಖಿಲೇಶ್ ಯಾದವ್ ಅವರ ಆಡಳಿತ ಇಲ್ಲ. ಭಯಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಮುಸ್ಲಿಂ ಹುಡುಗರು ಇಬ್ಬರು ಹಿಂದೂ ಹುಡುಗಿಯರನ್ನು ಮದುವೆಯಾಗಿರುವ ವಿಚಾರ ಅಲ್ಲಿಗೆ ನಿಲ್ಲುವುದಿಲ್ಲ. ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಹುಡುಗಿಯರನ್ನು ಕರೆತಂದು ಮದುವೆಯಾಗಬೇಕು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: 25 ರಿಂದ 35 ಲಕ್ಷಕ್ಕೆ ಸರ್ಕಾರಿ ಹುದ್ದೆ ಮಾರಾಟ: ತನಿಖೆ ನಡೆಸಲು ತ.ನಾಡು ಪೊಲೀಸರಿಗೆ ಇಡಿ ಪತ್ರ
ದುಮಾರಿಯಾಗಂಜ್ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ, ಇಲ್ಲಿನ ಜನರ ಭಯಕ್ಕೆ ಕಡಿವಾಣ ಬಿದ್ದಿದೆ. ಇಲ್ಲದಿದ್ದರೆ, ಹಿಂದೂಗಳು ಭಯದಿಂದ ವಾಸಿಸುತ್ತಿದ್ದ ಹಲವಾರು ಹಳ್ಳಿಗಳಿದ್ದವು. ಅವರ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ಸುರಕ್ಷಿತವಾಗಿರಲಿಲ್ಲ. ಧಂಖರ್‌ಪುರ ಗ್ರಾಮದಲ್ಲಿ ಮುಸ್ಲಿಂ ಬಹುಸಂಖ್ಯಾತರಿದ್ದು, ಒಂದು ವಾರದಲ್ಲಿ ಇಬ್ಬರು ಹಿಂದೂಗಳನ್ನು ಆಮಿಷವೊಡ್ಡಿ ಇಸ್ಲಾಂಗೆ ಮತಾಂತರಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ.
ಬಿಜೆಪಿ ಮಾಜಿ ಶಾಸಕನ ಹೇಳಿಕೆಗಳನ್ನು ಸಮಾಜವಾದಿ ಪಕ್ಷ ಖಂಡಿಸಿದೆ. ಕೋಮು ಸಾಮರಸ್ಯವನ್ನು ಕದಡಲು ಪದೇ ಪದೇ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಮರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ರಾಮನಗರ: ಸಂಪುಟ ವಿಸ್ತರಣೆ, ಸಿಎಂ ಬದಲಾವಣೆ ವಿಚಾರ ಯಾವುದನ್ನೂ ನಾನು ಮಾತನಾಡಲ್ಲ. ನಾವು ಮಾತನಾಡಿದಷ್ಟು ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಿರಿಯ ಸಚಿವರಿಗೆ ಕೋಕ್ ಕೊಡುವ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಎಲ್ಲರಿಗೂ ಸೇರಿ ಹೇಳ್ತೀನಿ, ಮಾತನಾಡಿದಷ್ಟು ಪಕ್ಷಕ್ಕೆ ಹಾನಿ. ಸಾಧ್ಯವಾದಷ್ಟು ಎಲ್ಲರೂ ಸೈಲೆಂಟ್ ಆಗಿ ಇರಿ. ಬಿಜೆಪಿಯಲ್ಲಿರುವಷ್ಟು (BJP) ಬಣ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಏನೇ ಇದ್ದರೂ ನಾಲ್ಕು ಗೋಡೆ ಮಧ್ಯೆ ಚರ್ಚೆ ಮಾಡಬೇಕು. ಮಾಧ್ಯಮಗಳ ಮುಂದೆ ಮಾತನಾಡಿದ್ರೆ ವಿಪಕ್ಷಗಳಿಗೆ ಆಹಾರ ಆಗುತ್ತೇವೆ. ಇದನ್ನ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ (Congress) ನಾಯಕರಿಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸ್ವಾಮೀಜಿಯಾಗಿ ಕೀಳುಮಟ್ಟದ ಹೇಳಿಕೆ ನೀಡೋದು ಸರಿಯಲ್ಲ, ಗಂಭೀರವಾಗಿರಬೇಕು – ಕನ್ನೇರಿ ಶ್ರೀಗಳಿಗೆ ಸುಪ್ರೀಂ ತರಾಟೆ
ಇನ್ನೂ ಆರ್‌ಎಸ್‌ಎಸ್ ಚಟುವಟಿಕೆ ನಿರ್ಬಂಧಕ್ಕೆ ಹೈಕೋರ್ಟ್ ತಡೆ ವಿಚಾರ ಕುರಿತು ಮಾತನಾಡಿ, ಸರ್ಕಾರದ ಸರ್ಕ್ಯುಲರ್ ಮೇಲೆ ಕೋರ್ಟ್ ಆದೇಶ ಮಾಡಿದೆ. ಮುಖ್ಯಮಂತ್ರಿಗಳು ಅಪೀಲ್ ಹಾಕುತ್ತೇವೆ ಅಂತ ಹೇಳಿದ್ದಾರೆ. ಇದು ಹೊಸದಾಗಿ ನಾವು ಮಾಡಿರುವ ಕಾನೂನು ಅಲ್ಲ. ಹಿಂದೆ ಜಗದೀಶ್ ಶೆಟ್ಟರ್ ಅವರ ಕಾಲದಲ್ಲಿ ಮಾಡಿದ್ದ ಆದೇಶ. ಶಾಲಾ, ಕಾಲೇಜು ಆವರಣದಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದು ಅಂತ ಮಾಡಿದ್ದರು. ಇದು ಎಲ್ಲಾ ಪಕ್ಷಗಳು, ಎಲ್ಲಾ ಸಂಘಸಂಸ್ಥೆಗಳಿಗೂ ಅನ್ವಯ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಕಾರಿಲ್ಲ ಅಂದ್ರೆ ಹೆಣ್ಣು ಕೊಡಲ್ಲ ಅಂತ ಟನಲ್ ರಸ್ತೆ ಮಾಡೋಕೆ ಡಿಕೆಶಿ ಹೊರಟಿದ್ದಾರೆ: ತೇಜಸ್ವಿ ಸೂರ್ಯ ವಾಗ್ದಾಳಿ