Tag: ಬಿಜಪಿ ಯುವಾ ಮೋರ್ಚಾ

  • ಬಿಜೆಪಿ ಯುವಾ ಮೋರ್ಚಾದ ಬೈಕ್  ರ‍್ಯಾಲಿ  ದಕ್ಷಿಣ ಕನ್ನಡ ಪ್ರವೇಶಿಸುವಂತಿಲ್ಲ

    ಬಿಜೆಪಿ ಯುವಾ ಮೋರ್ಚಾದ ಬೈಕ್  ರ‍್ಯಾಲಿ  ದಕ್ಷಿಣ ಕನ್ನಡ ಪ್ರವೇಶಿಸುವಂತಿಲ್ಲ

    ಬೆಂಗಳೂರು: ಬಿಜೆಪಿ ಯುವಾ ಮೋರ್ಚಾ ಆಯೋಜಿಸಿದ್ದ ಮಂಗಳೂರು ಚಲೋ ಬೈಕ್ ರ‍್ಯಾಲಿಗೆ ದಕ್ಷಿಣ ಕನ್ನಡ ಪೊಲೀಸರು ತಡೆ ನೀಡಿದ್ದಾರೆ.

    ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಆದೇಶ ಹೊರಡಿಸಿದ್ದು, ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ತಡೆ ನೀಡಲಾಗಿದ್ದು, ರ‍್ಯಾಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಬಾರದು ಎಂದು ಸೂಚಿಸಿದ್ದಾರೆ.

    ಮೈಸೂರು, ಮಡಿಕೇರಿ ಭಾಗದಿಂದ ಬೈಕ್ ರ‍್ಯಾಲಿ ಮೂಲಕ ಬರುವ ಕಾರ್ಯಕರ್ತರಿಗೆ ಸೆ.6ರಂದು ಸುಳ್ಯ ತಾಲೂಕಿನ ಕೇರ್ಪಳದ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಸುಳ್ಯ ಪೊಲೀಸರು ಹಾಲ್ ವ್ಯವಸ್ಥಾಪಕರಿಗೆ ನೋಟಿಸ್ ನೀಡಿದ್ದು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವಕಾಶ ನೀಡದಂತೆ ಸೂಚನೆ ನೀಡಿದ್ದಾರೆ.

    ಇದನ್ನೂ ಓದಿ:  ನಿಮ್ಮ ಯಾವುದೇ ಬೆದರಿಕೆಗೆ ನಾವು ಜಗ್ಗಲ್ಲ: ಸಿಎಂ ವಿರುದ್ಧ ಪ್ರತಾಪ್ ಸಿಂಹ ಕೆಂಡಾಮಂಡಲ

    ಏನಿದು ಮಂಗಳೂರು ಚಲೋ?
    ಆರೆಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಿಂದೆ ಪಿಎಫ್‍ಐ ಸಂಘಟನೆ ಭಾಗಿಯಾಗಿದ್ದು, ಇದನ್ನು ನಿಷೇಧಿಸುವ ಸಲುವಾಗಿ ಸೆಪ್ಟೆಂಬರ್ 7 ರಂದು ಬಿಜೆಪಿ ಯುವಾ ಮೋರ್ಚಾ ಮಂಗಳೂರು ಚಲೋವನ್ನು ಆಯೋಜಿಸಿದೆ. ಸೆಪ್ಟೆಂಬರ್ 5 ರಿಂದ ಬಿಜೆಪಿ ಬೈಕ್ ರ‍್ಯಾಲಿ ಆರಂಭವಾಗಲಿದ್ದು, ಬೆಂಗಳೂರು, ಹುಬ್ಬಳ್ಳಿಯಿಂದ ರ‍್ಯಾಲಿ ಹೊರಟರೆ, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರಿನಿಂದ ಸೆಪ್ಟೆಂಬರ್ 6ರಂದು ರ‍್ಯಾಲಿ ಹೊರಡಲಿದೆ. ಕೆಎಫ್ ಡಿ, ಪಿಎಫ್‍ಐ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಲಿದ್ದು, ಬಿಎಸ್ ಯಡಿಯೂರಪ್ಪ ಭಾಗವಹಿಸಲಿದ್ದಾರೆ.