Tag: ಬಿಗ್ ಬಿ

  • ಪುತ್ರಿ ಆರಾಧ್ಯ ಹುಟ್ಟುಹಬ್ಬದಲ್ಲಿ ಅಭಿಷೇಕ್ ಬಚ್ಚನ್ ಗೈರು

    ಪುತ್ರಿ ಆರಾಧ್ಯ ಹುಟ್ಟುಹಬ್ಬದಲ್ಲಿ ಅಭಿಷೇಕ್ ಬಚ್ಚನ್ ಗೈರು

    ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಪುತ್ರಿ ಆರಾಧ್ಯ (Aradhya) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗಳ ಬರ್ತ್‌ಡೇಯನ್ನು ವಿಶೇಷವಾಗಿ ನಟಿ ಆಚರಿಸಿದ್ದಾರೆ. ಮಗಳು ಆರಾಧ್ಯ ಬರ್ತ್‌ಡೇ ಸಂಭ್ರಮದಲ್ಲಿ ಅಭಿಷೇಕ್ ಭಾಗಿಯಾಗದೇ ಇರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ ಮತ್ತು ಐಶ್ವರ್ಯಾಗೆ ಡಿವೋರ್ಸ್ ಆಗಿದ್ಯಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ

    ನಟಿ ಐಶ್ವರ್ಯಾ ಹಂಚಿಕೊಂಡ ಪೋಸ್ಟ್‌ನಲ್ಲಿ, ಅಜ್ಜ ದಿವಂಗತ ಕೃಷ್ಣರಾಜ್ ರೈ ಫೋಟೋಗೆ ಮುಂದೆ ಗೌರವದಿಂದ ಆರಾಧ್ಯ ನಮಸ್ಕರಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬೃಂದ್ಯಾ ರೈ ಜೊತೆ ನಟಿ, ಆರಾಧ್ಯ ಪೋಸ್ ಕೊಟ್ಟಿದ್ದಾರೆ. ಆರಾಧ್ಯರ ಬಾಲ್ಯದ ಫೋಟೋ, ಬರ್ತ್‌ಡೇ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

    ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಬ್ಬರೂ ನನ್ನ ಜೀವನದ ಶಾಶ್ವತ ಪ್ರೀತಿ, ಅಪ್ಪ- ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ. ನನ್ನ ಹೃದಯ ನೀನು ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅಭಿಷೇಕ್ ಮತ್ತು ಬಚ್ಚನ್ ಪರಿವಾರದವರು ಇಲ್ಲದೇ ಇರೋದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಇಲ್ಲಿ ಏನೋ ಸರಿಯಿಲ್ಲ. ಐಶ್ವರ್ಯಾ ಮತ್ತು ಅಭಿಷೇಕ್ (Abhishek Bachchan) ಜೊತೆಯಾಗಿಲ್ಲ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

  • ಶೂಟಿಂಗ್‌ ಬಿಡುವಿನಲ್ಲಿ ರಜನಿಕಾಂತ್‌ ನೆಲದ ಮೇಲೆ ಮಲಗುತ್ತಿದ್ದರು: ತಲೈವಾ ಬಗ್ಗೆ ಬಿಗ್‌ಬಿ ಮೆಚ್ಚುಗೆ

    ಶೂಟಿಂಗ್‌ ಬಿಡುವಿನಲ್ಲಿ ರಜನಿಕಾಂತ್‌ ನೆಲದ ಮೇಲೆ ಮಲಗುತ್ತಿದ್ದರು: ತಲೈವಾ ಬಗ್ಗೆ ಬಿಗ್‌ಬಿ ಮೆಚ್ಚುಗೆ

    ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ರಜನಿಕಾಂತ್ ಅವರ ಸರಳತೆಯನ್ನು ಹಾಡಿಹೊಗಳಿದ್ದಾರೆ. ಈ ಹಿಂದೆ ‌’ಹಮ್’ (Hum) ಸಿನಿಮಾದ ಶೂಟಿಂಗ್‌ ಬಿಡುವಿನ ಸಮಯದಲ್ಲಿ ರಜನಿಕಾಂತ್ ಅವರು (Rajanikanth) ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು ಎಂದು ಅವರ ಸರಳತೆಯ ಬಗ್ಗೆ ಬಿಗ್‌ಬಿ ಬಣ್ಣಿಸಿದ್ದಾರೆ. ಇದನ್ನೂ ಓದಿ:ಗಾಯಕಿ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದಾರಾ ಜಯಂ ರವಿ?- ಸ್ಪಷ್ಟನೆ ನೀಡಿದ ನಟ

    ‘ವೆಟ್ಟೈಯಾನ್’ ಸಿನಿಮಾಗಾಗಿ 33 ವರ್ಷಗಳ ನಂತರ ರಜನಿಕಾಂತ್‌ ಮತ್ತು ತಲೈವಾ ಒಂದಾಗಿದ್ದಾರೆ.  ಹಾಗಾಗಿ ಈ ಚಿತ್ರದ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ. ಇನ್ನೂ ಇತ್ತೀಚೆಗೆ ನಡೆದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ರಜನಿಕಾಂತ್, ಮಂಜು ವಾರಿಯರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಆದರೆ ಬಿಗ್‌ಬಿ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಆದರೆ ತಲೈವಾ ಕುರಿತು ಸೀಕ್ರೆಟ್‌ವೊಂದನ್ನು ರಿವೀಲ್‌ ಮಾಡಿರುವ ವಿಡಿಯೋವೊಂದನ್ನು ಚಿತ್ರತಂಡಕ್ಕೆ ಕಳುಹಿಸಿ ‘ಹಮ್‌’ ಸಿನಿಮಾ ಚಿತ್ರೀಕರಣದ ಬಗ್ಗೆ ನಟ ಸ್ಮರಿಸಿದ್ದಾರೆ.

    1991ರಲ್ಲಿ ತೆರೆಕಂಡ ‘ಹಮ್’ ಸಿನಿಮಾದಲ್ಲಿ ನಾನು ಮತ್ತು ತಲೈವಾ ಜೊತೆಯಾಗಿ ನಟಿಸಿದ್ದೇವೆ. ಆಗ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್‌ ಸಿಕ್ಕಾಗ ನಾನು ನನ್ನ ಎಸಿ ಇರುವ ವಾಹನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದೆ, ರಜನಿಕಾಂತ್ ಅವರು ನೆಲದ ಮೇಲೆ ಮಲಗುತ್ತಿದ್ದರು. ಆಗ ಅವರು ತುಂಬಾ ಸಿಂಪಲ್ ಆಗಿರೋದನ್ನು ನೋಡಿ, ನಾನು ವಾಹನದಿಂದ ಹೊರಗೆ ಬಂದು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೆ ಎಂದು ಬಿಗ್‌ಬಿ ವಿವರಿಸಿದ್ದಾರೆ. ‘ವೆಟ್ಟೈಯಾನ್‌’ ಸಿನಿಮಾ ಮೂಲಕ ಮತ್ತೊಮ್ಮೆ ತಲೈವಾ ಜೊತೆ ನಟಿಸಿರೋದು ಖುಷಿಯಿದೆ ಎಂದು ಬಿಗ್‌ಬಿ ಮಾತನಾಡಿದ್ದಾರೆ.

    ಅಂದಹಾಗೆ, ‌’ವೆಟ್ಟೈಯಾನ್’ ಸಿನಿಮಾ ಇದೇ ಅಕ್ಟೋಬರ್ 10ಕ್ಕೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ರಜನಿಕಾಂತ್, ಬಿಗ್‌ಬಿ ಜೊತೆ ಮಂಜು ವಾರಿಯರ್, ರಿತಿಕಾ ಸಿಂಗ್, ರಾಣಾ ದಗ್ಗುಭಾಟಿ ಸೇರಿದಂತೆ ಅನೇಕರು ನಟಿಸಿದ್ದಾರೆ.

  • ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಿ ಮೊಮ್ಮಗಳು

    ಸಿದ್ಧಾಂತ್ ಚತುರ್ವೇದಿ ಜೊತೆ ಬ್ರೇಕಪ್‌ ಮಾಡಿಕೊಂಡ ಬಿಗ್‌ ಬಿ ಮೊಮ್ಮಗಳು

    ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Bachchan) ಮನೆಯ ಖಾಸಗಿ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿಯ ಡಿವೋರ್ಸ್ ಸುದ್ದಿ ನಡುವೆ ಬಿಗ್ ಬಿ ಮೊಮ್ಮಗಳು ನವ್ಯಾ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ. ನಟ ಸಿದ್ಧಾಂತ್ ಚತುರ್ವೇದಿ (Siddhant Chaturvedi) ಜೊತೆ ನವ್ಯಾ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಚಿತ್ರರಂಗದಲ್ಲಿ ಲವ್, ಬ್ರೇಕಪ್, ಡಿವೋರ್ಸ್, ಡೇಟಿಂಗ್ ಎಲ್ಲವೂ ಕಾಮನ್ ಆಗಿದೆ. ಸದ್ಯ ಸ್ಟಾರ್‌ ನಟಿ ಐಶ್ವರ್ಯಾ ರೈ (Aishwarya Rai) ಮತ್ತು ಅಭಿಷೇಕ್‌ ಬಚ್ಚನ್ ದಾಂಪತ್ಯ ಮುರಿದು ಬಿದ್ದಿದೆ ಎಂಬ ಸುದ್ದಿಯ ನಡುವೆ‌ ಈಗ ಸಿದ್ಧಾಂತ್ ಪ್ರೀತಿಗೆ ನವ್ಯಾ (Navya Naveli Nanda) ಗುಡ್ ಬೈ ಹೇಳಿದ್ದಾರೆ ಎಂದು ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಅಣ್ಣನ ಗೆಳೆಯನ ಮೇಲೆ ನಿಹಾರಿಕಾಗೆ ಪ್ಯಾರ್

    ಕಳೆದ 2 ವರ್ಷಗಳಿಂದ ಸಿದ್ಧಾಂತ್ ಮತ್ತು ನವ್ಯಾ ಲವ್ವಿ ಡವ್ವಿ ಶುರುವಾಗಿತ್ತು. ಮುಂಬೈ ಬೀದಿಗಳಲ್ಲಿ ಜೋಡಿ ಹಕ್ಕಿಗಳಂತೆ ಹಾರಾಡಿಕೊಂಡಿದ್ದ ಈ ಜೋಡಿಯ ನಡುವೆ ಈಗ ಬಿರುಕು ಮೂಡಿದೆ ಎನ್ನಲಾಗಿದೆ. ಬ್ರೇಕಪ್‌ಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಆದರೆ ಈಗ ಬ್ರೇಕಪ್ ನ್ಯೂಸ್ ಮಾತ್ರ ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.

    ಅಷ್ಟಕ್ಕೂ ಈ ಬ್ರೇಕಪ್ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ ಎಂಬುದು ಈ ಜೋಡಿಯೇ ತಿಳಿಸಬೇಕಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ. ಸದ್ಯ ಸಿದ್ಧಾಂತ್ ಮತ್ತು ನವ್ಯಾ ದೂರ ಆಗಿರುವ ವಿಷ್ಯ ಕೇಳಿ ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ನಿಜವೇ ಆಗಿದ್ದಲ್ಲಿ ಇಬ್ಬರೂ ಮತ್ತೆ ಒಂದಾಗಲಿ ಎಂದು ಆಶಿಸುತ್ತಿದ್ದಾರೆ.

  • ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

    ಸಿನಿಮಾಗೆ ಗುಡ್ ಬೈ, ರಾಜಕೀಯಕ್ಕೆ ಅಭಿಷೇಕ್ ಬಚ್ಚನ್ ಎಂಟ್ರಿ?

    ಸಿನಿಮಾರಂಗಕ್ಕೂ ರಾಜಕೀಯಕ್ಕೂ ತುಂಬಾನೇ ನಂಟಿದೆ. ಈಗಾಗಲೇ ಬಣ್ಣದ ಲೋಕದಿಂದ ರಾಜಕೀಯದಲ್ಲಿ ಬದುಕು ಕಟ್ಟಿಕೊಂಡು ಜನಸೇವೆ ಮಾಡಿರುವ ಅನೇಕ ಕಲಾವಿದರು ಇದ್ದಾರೆ. ಇತ್ತೀಚಿಗೆ ಕಾಲಿವುಡ್ ನಟ ವಿಜಯ್ ದಳಪತಿ, ರಾಜಕೀಯ ಎಂಟ್ರಿ ಬಗ್ಗೆ ಸಿಕ್ಕಾಪಟ್ಟೆ ಟಾಕ್ ಆಗಿತ್ತು. ಈ ಬೆನ್ನಲ್ಲೇ ಅಭಿಷೇಕ್ ಬಚ್ಚನ್ (Abhishek Bachchan) ಎಂಟ್ರಿಯಾಗುವ ಬಗ್ಗೆ ಸುಳಿವು ಸಿಕ್ಕಿದೆ.

    ಬಾಲಿವುಡ್‌ನ (Bollywood) ಹಿರಿಯ ನಟ ಬಿಗ್ ಬಿ (Bigg B) ಪುತ್ರ ಅಭಿಷೇಕ್ ಬಚ್ಚನ್ ಅವರು ತಂದೆಯಂತೆ ಚಿತ್ರರಂಗದಲ್ಲಿ ಸಕ್ಸಸ್ ಕಂಡಿಲ್ಲ. ಆದರೆ ನಟ, ವಿಲನ್ ಹೀಗೆ ಹೊಸ ಬಗೆಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ವಿಶ್ವಸುಂದರಿ ಐಶ್ವರ್ಯ ರೈ (Aishwarya Rai) ಜೊತೆ ದಾಂಪತ್ಯ ಜೀವನದಲ್ಲಿ ಖುಷಿಯಿಂದಿರೋ ಅಭಿಷೇಕ್ ಬಚ್ಚನ್ ಅವರು ಪಾಲಿಟಿಕ್ಸ್ (Politics) ಎಂಟ್ರಿ ಬಗ್ಗೆ ಗುಸು ಗುಸು ಶುರುವಾಗಿದೆ. ಇದನ್ನೂ ಓದಿ:ತಮಿಳು ಚಿತ್ರೋದ್ಯಮದತ್ತ ಮತ್ತೋರ್ವ ಕನ್ನಡದ ನಟಿ

    ಬಚ್ಚನ್ ಕುಟುಂಬಕ್ಕೆ ರಾಜಕೀಯ ಹೊಸದಲ್ಲ. ಅಭಿಷೇಕ್ ತಾಯಿ ಜಯಾ ಬಚ್ಚನ್ (Jaya Bachchan) ಅವರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಸದಸ್ಯೆ ಆಗಿದ್ದಾರೆ. ಅಮಿತಾಭ್ ಬಚ್ಚನ್ ಕೂಡ ಒಮ್ಮೆ ರಾಜಕೀಯಕ್ಕೆ ಹೋಗಿ ಬಂದಿದ್ದರು. ಈಗ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಎಂಟ್ರಿ ಪಡೆಯಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

    ಬರುವ ಲೋಕಸಭಾ ಚುನಾವಣೆಗೆ ಅಭಿಷೇಕ್ ಬಚ್ಚನ್ ಅವರನ್ನು ಕಣಕ್ಕೆ ಇಳಿಸುವ ಪ್ಲ್ಯಾನ್‌ನಲ್ಲಿ ಸಮಾಜವಾದಿ ಪಕ್ಷದವರಿದ್ದಾರೆ ಎನ್ನಲಾಗುತ್ತಿದೆ. ಆದರೆ ಮೂಲಗಳ ಪ್ರಕಾರ, ಅಭಿಷೇಕ್‌ಗೆ ರಾಜಕೀಯಕ್ಕೆ ಎಂಟ್ರಿ ಕೊಡುವ ಯೋಚನೆ ಇಲ್ಲ. ಅವರ ಗಮನ ಏನೇ ಇದ್ದರೂ ಸಿನಿಮಾ ಎಂದು ಹೇಳಲಾಗುತ್ತಿದೆ. ಬಚ್ಚನ್ ಕುಟುಂಬದ ಆಪ್ತರು ಇದು ಸುಳ್ಳು ಸುದ್ದಿ ಎಂದು ಹೇಳುತ್ತಿದ್ದಾರೆ. ಅಷ್ಟಕ್ಕೂ ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನ ನಟ ಅಭಿಷೇಕ್‌ ಬಚ್ಚನ್‌ ಹೇಳುವವರೆಗೂ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಂಚಾರಿ ರೂಲ್ಸ್ ಬ್ರೇಕ್:  ಅರೆಸ್ಟ್ ಆದೆ ಎಂದು ಫೋಟೋ ಹಾಕಿದ ಅಮಿತಾಭ್

    ಸಂಚಾರಿ ರೂಲ್ಸ್ ಬ್ರೇಕ್: ಅರೆಸ್ಟ್ ಆದೆ ಎಂದು ಫೋಟೋ ಹಾಕಿದ ಅಮಿತಾಭ್

    ಮೊನ್ನೆಯಷ್ಟೇ ಹೆಲ್ಮೆಟ್ ಧರಿಸದೇ ಬೈಕ್ ಹಿಂದೆ ಕೂತು ಸವಾರಿ ಮಾಡಿ ಟ್ರೋಲ್ ಆಗಿದ್ದ ಅಮಿತಾಭ್ ಬಚ್ಚನ್ (Amitabh Bachchan), ಇದೀಗ ಪೊಲೀಸ್ (Police) ವ್ಯಾನ್ ಸಮೇತ ಮತ್ತೊಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆ ‘ಅರೆಸ್ಟ್’ (Arrest) ಎಂದು ಬರೆದುಕೊಂಡಿದ್ದಾರೆ. ಈ ರೀತಿ ಬರೆದುಕೊಂಡಿದ್ದು ಅಮಿತಾಭ್ ಅಭಿಮಾನಿಗಳಿಗೆ ಶಾಕ್ ಆಗಿದೆ. ಜೊತೆಗೆ ಇದೇನಾದರೂ ಗಿಮಿಕ್ ಇರಬಹುದಾ ಎನ್ನುವ ಅನುಮಾನವನ್ನೂ ಹುಟ್ಟು ಹಾಕಿದೆ.

    ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಬಿಗ್ ಬಿ (Big B), ಅದು ರಸ್ತೆ ಮೇಲೆ ಸವಾರಿ ಮಾಡಿದ ಫೋಟೋ ಅಲ್ಲ, ಶೂಟಿಂಗ್ ಸಂದರ್ಭದ್ದು ಎಂದು ಸಮಜಾಯಿಸಿ ನೀಡಿದ್ದರು. ರಸ್ತೆ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೂ, ಪೊಲೀಸ್ ವ್ಯಾನ್ ಜೊತೆ ನಿಂತು ಫೋಟೋ ತಗೆಸಿಕೊಂಡು ಅರೆಸ್ಟ್ ಎಂದು ಬರೆದದ್ದು ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ಇದನ್ನೂ ಓದಿ:ಕಂಗನಾ ಸಿನಿಮಾ ನೋಡಿ ಕಣ್ಣೀರಿಟ್ಟ ರಾಜಮೌಳಿ ತಂದೆ

    ಕೆಲವರು ಯಾವುದೋ ಜಾಹೀರಾತಿನ ಶೂಟಿಂಗ್ ಇರಬೇಕು ಎಂದು ಕಾಮೆಂಟ್ ಮಾಡಿದ್ದರೆ, ಅನೇಕರು ಹೊಸ ಸಿನಿಮಾದ ಪ್ರಮೋಷನ್ ಇರಬಹುದಾ ಎಂದು ಕೇಳಿದ್ದಾರೆ. ಅಥವಾ ಹೊಸ ಸಿನಿಮಾ ಏನಾದರೂ ಒಪ್ಪಿಕೊಂಡು ರೀತಿ ಫೋಟೋ ಹಂಚಿಕೊಂಡಿರಬಹುದಾ ಎನ್ನುವ ಪ್ರಶ್ನೆಯನ್ನೂ ಮಾಡಿದ್ದಾರೆ. ಆದರೆ, ಅರೆಸ್ಟ್ ಗುಟ್ಟನ್ನು ಮಾತ್ರ ಅಮಿತಾಭ್ ಬಿಟ್ಟುಕೊಟ್ಟಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ವಿವರವನ್ನು ನೀಡಬಹುದು.

  • ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ

    ʻಅಮೃತಧಾರೆʼ ಶೂಟಿಂಗ್‌ನಲ್ಲಿ ಯೋಧರಿಂದ ಜೀವದಾನ ಸಿಕ್ಕಿದನ್ನ ಸ್ಮರಿಸಿದ ರಮ್ಯಾ

    ಕಿರುತೆರೆ ಜನಪ್ರಿಯ Weekend With Ramesh 5 ಶೋನಲ್ಲಿ ಸಾಧಕರ ಸೀಟ್ ಅನ್ನ ರಮ್ಯಾ ಅಲಂಕರಿಸಿದ್ದಾರೆ. ರಮ್ಯಾ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಅನೇಕ ವಿಚಾರಗಳು ಈ ಶೋ ಮೂಲಕ ತಿಳಿದು ಬಂದಿದೆ. ಸಿನಿಮಾ-ರಾಜಕೀಯ ಹೀಗೆ ಸಾಕಷ್ಟು ವಿಚಾರಗಳನ್ನು ನಟಿ ಹಂಚಿಕೊಂಡಿದ್ದಾರೆ. `ಅಮೃತಧಾರೆ’ (Amruthadaare) ಚಿತ್ರದಲ್ಲಿ ಬಿಗ್ ಬಿ ಜೊತೆ ನಟಿಸಿದ ಅನುಭವವನ್ನ ನಟಿ ಹೇಳಿದ್ದಾರೆ. ಇದನ್ನೂ ಓದಿ: ನನ್ನ ಜೀವನದ 3ನೇ ಪ್ರಭಾವಶಾಲಿ ವ್ಯಕ್ತಿ ರಾಹುಲ್‌ ಗಾಂಧಿ – ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ರಮ್ಯಾ ಮಾತು

    2015ರ `ಅಮೃತಧಾರೆ’ ಚಿತ್ರದಲ್ಲಿ ಧ್ಯಾನ್‌ಗೆ ನಾಯಕಿಯಾಗಿ ರಮ್ಯಾ (Ramya)  ನಟಿಸಿದ್ದರು. ಈ ಸಿನಿಮಾ ಜನರಿಗೆ ತಲುಪುವಲ್ಲಿ ಯಶಸ್ವಿಯಾಗಿತ್ತು. ವೀಕೆಂಡ್ ಟೆಂಟ್‌ನಲ್ಲಿ ರಮ್ಯಾ ಅಮಿತಾಬ್ ಬಚ್ಚನ್ (Amithab Bacchan) ಜೊತೆ ನಟಿಸಿದ್ದನ್ನು ಖುಷಿಯಿಂದ ನೆನಪಿಸಿಕೊಂದ್ದಾರೆ. ಹುಡುಗ-ಹುಡುಗ ಹಾಡಿನ ಚಿತ್ರೀಕರಣದ ವೇಳೆ ರಮ್ಯಾ ಆಮ್ಲಜನಕದ ಕೊರತೆಯಿಂದ ಪ್ರಜ್ಞೆತಪ್ಪಿ ಬಿದ್ದಿದ್ದು, ಯೋಧರಿಂದ ತಮಗೆ ಜೀವದಾನ ಸಿಕ್ಕ ಘಟನೆಗಳನ್ನು ನೆನಪಿಸಿಕೊಂಡರು. ಧ್ಯಾನ್ ಅಲಿಯಾಸ್ ಸಮೀರ್ ಅವರಿಂದ ಬಿಗ್ ಬಿ `ಅಮೃತಧಾರೆ’ ಚಿತ್ರದಲ್ಲಿ ನಟಿಸಲು ಒಪ್ಪಿದ್ದರು ಎಂದು ರಮ್ಯಾ ಹಂಚಿಕೊಂಡರು.

    ಬಳಿಕ `ಅಮೃತಧಾರೆ’ ಸಿನಿಮಾದ ನಾಯಕ ಧ್ಯಾನ್ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರುಗಳು ವಿಡಿಯೋ ಮೂಲಕ ರಮ್ಯಾರ ಸ್ನೇಹವನ್ನು ಕೊಂಡಾಡಿದರು. ರಮ್ಯಾರ ಸಿನಿಮಾಗಳನ್ನು ನಿರ್ದೇಶಿಸಿರುವ ಹಲವು ನಿರ್ದೇಶಕರು ರಮ್ಯಾರ ಸ್ನೇಹವನ್ನು, ಕೆಲಸದ ಬಗೆಗಿದ್ದ ಶ್ರದ್ಧೆಯನ್ನು ಕೊಂಡಾಡಿದರು.

    ಸ್ಯಾಂಡಲ್‌ವುಡ್ ಯುವನಟಿಯರಾದ ಅಮೃತಾ ಅಯ್ಯಂಗಾರ್, `ದಿಯಾ’ ಸಿನಿಮಾದ ಖುಷಿ ಇನ್ನು ಕೆಲವರು ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಆಗಮಿಸಿ ರಮ್ಯಾ ಅವರು ತಮಗೆ ಸ್ಪೂರ್ತಿ, ಆದರ್ಶ ಎಂದರು. ಬಳಿಕ ನೆರೆಯ ತಮಿಳುನಾಡು ಚಿತ್ರರಂಗದ ದೊಡ್ಡ ನಿರ್ದೇಶಕ ವೆಟ್ರಿಮಾರನ್ ಸಹ ವಿಡಿಯೋ ಕಳಿಸಿ ರಮ್ಯಾ ಅದ್ಭುತ ನಟಿ, ಬಹಳ ಸ್ನೇಹಜೀವಿ ಎಂದು ಕೊಂಡಾಡಿದರು.

  • ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್

    ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದ ಅಮಿತಾಭ್ ಬಚ್ಚನ್

    ಬಾಲಿವುಡ್ (Bollywood) ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಇದೀಗ ತಮ್ಮ ಸಾಕು ನಾಯಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಮುದ್ದು ನಾಯಿ ಜೊತೆಗಿನ ಫೋಟೋ ಹಂಚಿಕೊಂಡು ಬಿಗ್ ಬಿ ಭಾವುಕರಾಗಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಬಿಟೌನ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಲಿಸ್ಟ್ನಲ್ಲಿ ಸಾಲು ಸಾಲು ಸಿನಿಮಾಗಳಿವೆ. ಸದಾ ಶೂಟಿಂಗ್‌ನಲ್ಲಿ ಬ್ಯುಸಿಯಿರುವ ನಟ ಈಗ ಸೋಷಿಯಲ್ ಮೀಡಿಯಾದಲ್ಲಿ ಎಮೋಷನಲ್ ಆಗಿ ಪೋಸ್ಟ್ ಮಾಡಿದ್ದಾರೆ. ಸಾಕು ನಾಯಿ ನಿಧನಕ್ಕೆ ಬಿಗ್ ಬಿ(Big B) ಭಾವುಕರಾಗಿದ್ದಾರೆ.


    ನನಗೆ ಒಬ್ಬರು ಚಿಕ್ಕ ಸ್ನೇಹಿತರು ಇದ್ದರು. ಕೆಲಸ ಸಮಯದಲ್ಲಿ ಜೊತೆಯಲ್ಲಿದ್ದರು. ಹಾಗೆಯೇ ಬೆಳೆಯುತ್ತಿದ್ದರು. ಒಂದು ದಿನ ಹೇಳದೇ ಹೊರಟು ಬಿಡುತ್ತಾರೆ ಎಂದು ಮುದ್ದಿನ ನಾಯಿ ಬಗ್ಗೆ ಅಮಿತಾಭ್ ಕಣ್ಣೀರಿಟ್ಟಿದ್ದಾರೆ. ಬಿಗ್ ಬಿ ಭಾವುಕರಾಗಿರೋದನ್ನ ನೋಡಿ, ಫ್ಯಾನ್ಸ್ ಕೂಡ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ:ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ಸುದೀಪ್‌ ದಂಪತಿ ಭೇಟಿ

    ಇತ್ತೀಚೆಗೆ ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ `ಗುಡ್ ಬೈ’ ಕಾಂತಾರ ಮುಂದೆ ನೆಲಕಚ್ಚಿತ್ತು. ರಶ್ಮಿಕಾ ಮಂದಣ್ಣ ಮತ್ತು ಬಿಗ್ ಬಿ ಜೋಡಿ ಕಮಾಲ್ ಮಾಡುವಲ್ಲಿ ಫ್ಲಾಪ್ ಆಗಿತ್ತು. ಸದ್ಯ ಅಮಿತಾಭ್ ನಟನೆಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ತೆರೆಗೆ ಅಪ್ಪಳಿಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

    ಅಮಿತಾಭ್ ಬಚ್ಚನ್ ಅವರನ್ನ ಪ್ರಶಾಂತ್‌ನೀಲ್ ಭೇಟಿಯಾಗಿದ್ದು ಏಕೆ?

    ಬಾಲಿವುಡ್ ಮತ್ತು ಸೌತ್ ಚಿತ್ರರಂಗದ ತಾರೆಯರಾದ ಅಮಿತಾಭ್ ಬಚ್ಚನ್, ಪ್ರಭಾಸ್, ದುಲ್ಕರ್ ಸಲ್ಮಾನ್, ಪ್ರಶಾಂತ್ ನೀಲ್, ಮತ್ತು ನಾನಿ ಇತ್ತೀಚೆಗೆ ಖಾಸಗಿ ಪಾರ್ಟಿವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಜತೆಗೆ ಬಿಗ್‌ಬಿ ಅವರನ್ನು ʻಕೆಜಿಎಫ್ 2ʼ ನಿರ್ದೇಶಕ ಪ್ರಶಾಂತ್ ನೀಲ್ ಭೇಟಿಯಾಗಿದ್ದು, ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ.

    ವೈಜಯಂತಿ ನಿರ್ಮಾಣ ಸಂಸ್ಥೆಗೆ 50 ವರ್ಷ ತುಂಬಿದ ಬೆನ್ನಲ್ಲೇ ಹೈದರಾಬಾದ್‌ನಲ್ಲಿ ಹೊಸ ಕಛೇರಿಗೆ ಚಾಲನೆ ಕೊಡಲಾಗಿದೆ. ಹೆಸರಾಂತ ಸಂಸ್ಥೆ ವೈಜಯಂತಿ 50 ವರ್ಷದ ಸಂಭ್ರಮಕ್ಕೆ ಬಿಗ್‌ಬಿ, ಪ್ರಭಾಸ್, ದುಲ್ಕರ್, ಪ್ರಶಾಂತ್ ನೀಲ್, ನಾನಿ ಇವರೆಲ್ಲೂ ಸಾಕ್ಷಿಯಾಗಿದ್ದಾರೆ. ಜತೆಗೆ ಹೆಸರಾಂತ ಸಂಸ್ಥೆ ಶುಭಹಾರೈಸಿದ್ದಾರೆ. ಈ ಎಲ್ಲಾ ಬಿಗ್ ಸ್ಟರ‍್ಸ್ ಒಟ್ಟಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಇದನ್ನೂ ಓದಿ:ಶಾರುಖ್ ಖಾನ್ ನಟನೆಯ `ಜವಾನ್’ ಚಿತ್ರೀಕರಣದಲ್ಲಿ ನಯನತಾರಾ

    ಪ್ರಸ್ತುತ ಅಮಿತಾಭ್,ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ನಟನೆಯ `ಪ್ರಾಜೆಕ್ಟ್ ಕೆ’ ಚಿತ್ರಕ್ಕೆ ವೈಜಯಂತಿ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ತೆಲುಗು ಮತ್ತು ಹಿಂದಿ ಏಕಕಾಲದಲ್ಲಿ ಸಿನಿಮಾ ತೆರೆ ಕಾಣಲಿದೆ. ಜತೆಗೆ ದುಲ್ಕರ್ ನಟನೆಯ `ಸೀತಾ ರಾಮಂ’ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದೆ.

    Live Tv

  • ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಫೋಟೋ ಹಂಚಿಕೊಂಡ ಬಿಗ್ ಬಿ ಅಮಿತಾಭ್

    ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಫೋಟೋ ಹಂಚಿಕೊಂಡ ಬಿಗ್ ಬಿ ಅಮಿತಾಭ್

    ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಭೇಟಿಗೆ ಅದೆಷ್ಟೋ ವರ್ಷಗಳಿಂದ ಕಾದವರು ಇದ್ದಾರೆ. ಅವರೊಂದಿಗೆ ಒಂದು ಫೋಟೋ ತಗೆಸಿಕೊಳ್ಳಲು ಪರದಾಡಿದವರು ಇದ್ದಾರೆ. ಅವರ ನಟನೆಯ ಒಂದೇ ಒಂದು ಸಿನಿಮಾದಲ್ಲಿ ಒಂದು ದೃಶ್ಯದಲ್ಲಾದರೂ ನಟಿಸಬೇಕು ಎಂದು ಕನಸು ಕಂಡವರು ಇದ್ದಾರೆ. ಆದರೆ, ಅದೃಷ್ಟವಂತೆ ನ್ಯಾಷಿನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಿಗ್ ಬಿ ಜತೆ ನಟಿಸುವುದಲ್ಲದೇ, ಆ ಫೋಟೋವನ್ನು ಸ್ವತಃ ಅಮಿತಾಭ್ ಬಚ್ಚನ್ ಅವರೇ ಇನ್ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ : ಸೆನ್ಸಾರ್ ಪಾಸ್ ಆದ ರಾಕಿಭಾಯ್ : ಕೆಜಿಎಫ್ 1 ಗಿಂತ ಕೆಜಿಎಫ್ 2 ಸಿನಿಮಾ 13 ನಿಮಿಷ ಉದ್ದ

    ಅಮಿತಾಭ್ ಬಚ್ಚನ್ ಅವರ ಜತೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಎರಡು ಹಂತಗಳಲ್ಲಿ ಶೂಟಿಂಗ್  ಕೂಡ ಮುಗಿದಿದೆ. ಈ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ತಗೆದು ಫೋಟೋವನ್ನು ಅಮಿತಾಭ್ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಏಪ್ರಿಲ್ 2ಕ್ಕೆ ಗಣೇಶ್ ನಟನೆಯ ಹೊಸ ಸಿನಿಮಾದ ಟೈಟಲ್ ಲಾಂಚ್

    ಸದ್ಯ ಅಮಿತಾಭ್ ನಟನೆಯ ಗುಡ್ ಬೈ ಹೆಸರಿನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಅವರದ್ದು ಅಮಿತಾಭ್ ಮಗಳ ಪಾತ್ರ ಎನ್ನಲಾಗುತ್ತಿದೆ. ಈ ಬಾರಿಯ ಹುಟ್ಟು ಹಬ್ಬವನ್ನು ರಶ್ಮಿಕಾ ಅವರು ಇದೇ ಶೂಟಿಂಗ್ ಸೆಟ್ ನಲ್ಲಿ ಆಚರಿಸಿಕೊಂಡಿದ್ದರು. ಅದಲ್ಲೇ, ಅಮಿತಾಭ್ ಅವರ ಗುಣಗಾನ ಕೂಡ ಮಾಡಿದ್ದರು. ಇದನ್ನೂ ಓದಿ : ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ- ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?

    ರಶ್ಮಿಕಾ ಅವರ ಎರಡನೇ ಬಾಲಿವುಡ್ ಸಿನಿಮಾವಿದು. ಕ್ವೀನ್ ಸೇರಿದಂತೆ ಹಲವು ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿರುವ ವಿಕಾಸ್ ಬಹ್ಲ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ನೀನಾ ಗುಪ್ತಾ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.

  • ಏನಾಯ್ತು ಅಮಿತಾಭ್ ಬಚ್ಚನ್‌ಗೆ? – ಆತಂಕದಲ್ಲಿ ಅಭಿಮಾನಿಗಳು

    ಏನಾಯ್ತು ಅಮಿತಾಭ್ ಬಚ್ಚನ್‌ಗೆ? – ಆತಂಕದಲ್ಲಿ ಅಭಿಮಾನಿಗಳು

    ನೆನ್ನೆ ರಾತ್ರಿ 10.14ಕ್ಕೆ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಆತಂಕ ಹೆಚ್ಚಿಸಿದ್ದಾರೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್. ಅವರು ಆ ರೀತಿಯಲ್ಲಿ ಯಾಕೆ ಟ್ವೀಟ್ ಮಾಡಿದರು? ಅವರ ಆರೋಗ್ಯದಲ್ಲಿ ಸಮಸ್ಯೆಯಾಗಿದೆಯಾ? ಅರ್ಥವೇ ಆಗದಂತೆ ಮಾಡಿರುವ ಟ್ವೀಟ್ ಹಿಂದಿರುವ ಉದ್ದೇಶವೇನು ಎನ್ನುವ ಪ್ರಶ್ನೆಯೊಂದಿಗೆ ಆತಂಕ ವ್ಯಕ್ತಪಡಿಸಿದ್ದಾರೆ ಅಮಿತಾಭ್ ಅಭಿಮಾನಿಗಳು. ಅಲ್ಲದೇ, ಏನಾಗಿದೆ ಅಂತ ಬೇಗ ಹೇಳಿ ದೇವರೆ? ಎಂದು ಮರುಟ್ವೀಟ್ ಮಾಡಿದ್ದಾರೆ ಸಾಕಷ್ಟು ಅಭಿಮಾನಿಗಳು. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

    ಆರೋಗ್ಯದ ವಿಷಯದಲ್ಲಿ ಅಮಿತಾಭ್ ಬಚ್ಚನ್ ಪದೇ ಪದೇ ಸುದ್ದಿಯಾಗುತ್ತಿದ್ದಾರೆ. ಒಂದೊಂದು ಬಾರಿ ಅವರೇ ತಮಗಾದ  ಆರೋಗ್ಯ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡರೆ, ಮತ್ತಷ್ಟು ಬಾರಿ ಸುಳ್ಳು ಸುದ್ದಿಗಳು ಹಬ್ಬಿವೆ. ಆದರೆ, ಈ ಬಾರಿ ಸ್ವತಃ ಅಮಿತಾಭ್ ಅವರೇ, “heart pumping .. concerned .. and the hope” ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳ ಎದೆ ಬಡಿತ ಹೆಚ್ಚಿಸಿದ್ದಾರೆ. ಇದನ್ನೂ ಓದಿ : ಉಪಗ್ರಹವಾದ ಪುನೀತ್ ರಾಜ್ ಕುಮಾರ್: 100 ಸಾಹಸಿ ಮಕ್ಕಳ ಕೆಲಸವಿದು

    ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಲಕ್ಷಾಂತರ ಅಭಿಮಾನಿಗಳು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮರು ಟ್ವೀಟ್ ಮಾಡಿದ್ದಾರೆ. ಆಗಿರುವ ಸಮಸ್ಯೆಯನ್ನು ಹೇಳಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಆದರೆ, ಅಮಿತಾಭ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾಗಾಗಿ ಇನ್ನೂ ಅವರ ಅಭಿಮಾನಿಗಳು ಆತಂಕದಲ್ಲೇ ಇದ್ದಾರೆ.