Tag: ಬಿಗ್‌ ಬಾಸ್‌ 11

  • ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಇಂದು ಸ್ವಗ್ರಾಮಕ್ಕೆ ಬಿಗ್ ಬಾಸ್ ವಿನ್ನರ್ ಹನುಮಂತ – ಅದ್ಧೂರಿ ಸ್ವಾಗತಕ್ಕೆ ಸ್ನೇಹಿತರು, ಗ್ರಾಮಸ್ಥರ ಸಿದ್ಧತೆ

    ಹಾವೇರಿ: ಭಜನೆ ಮತ್ತು ಶಿಶುನಾಳ ಶರೀಫ ತತ್ವಗಳನ್ನ ಹೇಳುತ್ತಾ, ಸರಿಗಮಪ ವೇದಿಕೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಹಳ್ಳಿಹೈದ ಹನುಮಂತ (Hanumantha Lamani) ಬಿಗ್ ಬಾಸ್ ಸೀಸನ್ 11ರಲ್ಲಿ (Bigg Boss 11) ವಿನ್ನರ್ ಆಗಿ ಕರುನಾಡಿನ ಜನರ ಮನಸ್ಸು ಗೆದ್ದಿದ್ದಾರೆ. ಈ ಹಿನ್ನೆಲೆ ಗ್ರಾಮದ ಸ್ನೇಹಿತರು ಹಾಗೂ ಅಭಿಮಾನಿಗಳು ಹನುಮಂತ ಅವರಿಗೆ ಅದ್ಧೂರಿ ಸ್ವಾಗತ ಮಾಡುವ ಪ್ಯ್ಲಾನ್ ಮಾಡುತ್ತಿದ್ದಾರೆ. ಹನುಮಂತ ಅವರ ತಂದೆ ತಾಯಿ ಕೂಡಾ ಇಂದು ಬೆಂಗಳೂರಿನಿಂದ ಆಗಮಿಸಲಿದ್ದಾರೆ.

    ಬಿಗ್ ಬಾಸ್ 11ರಲ್ಲಿ ಹಾವೇರಿ (Haveri) ಜಿಲ್ಲೆ ಸವಣೂರು (Savanur) ತಾಲೂಕಿನ ಚಿಲ್ಲೂರುಬಡ್ನಿಯ (Chillur Badni) ಹನುಮಂತ ಲಮಾಣಿ ವಿನ್ನರ್ ಆಗಿ ಕರುನಾಡ ಜನರ ಮನಗೆದ್ದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇಂದು ಸ್ವಗ್ರಾಮಕ್ಕೆ ಹನುಮಂತ ಆಗಮಿಸಲಿದ್ದು, ಗ್ರಾಮದ ಜನರು ಅದ್ಧೂರಿ ಸ್ವಾಗತ ಸಿದ್ಧತೆ ನಡೆಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೊಳ್ಳು, ಭಜನೆ ಹಾಗೂ ಜಾಂಜ್ ಮೇಳೆ ಸೇರಿದಂತೆ ವಿವಿಧ ಕಲಾತಂಡಗಳ ಮೂಲಕ ಸ್ವಾಗತ ಮಾಡಲಿದ್ದಾರೆ. ಅಲ್ಲದೆ ಕೆಲವು ಅಭಿಮಾನಿಗಳು ಈಗಾಗಲೇ ಹನುಮಂತ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಇದನ್ನೂ ಓದಿ: My Dear Friend – ಟ್ರಂಪ್‌ ಜೊತೆಗೆ ಮೋದಿ ದೂರವಾಣಿ ಸಂಭಾಷಣೆ

    ಉತ್ತರ ಕರ್ನಾಟಕದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ. ಕುರಿಗಾಹಿ ಹನುಮಂತ ಈಗ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಹನುಮಂತ ಅವರು ಬಹಳ ಏನೂ ಕಲಿತಿಲ್ಲ. ಕಡುಬಡತನದ ಕುಟುಂಬದಲ್ಲಿ ಬೆಳೆದ ಹನುಮಂತ, ಕುರಿ ಕಾಯುವ ಕೆಲಸ ಮಾಡುತ್ತಿದ್ದರು. ಕುರಿ ಕಾಯುತ್ತಾ ಕಾಯುತ್ತಾ ಶಿಶುನಾಳ ಶರೀಫರ ನಿನ್ನೊಳಗ ನೀನು ತಿಳದ ನೋಡಣ್ಣ ಹಾಗೂ ಕೇಳ ಜಾಣ ಶಿವ ಧ್ಯಾನ ಮಾಡಣ್ಣ ಎಂಬ ಹಾಡುಗಳನ್ನು ಹಾಡುತ್ತಿದ್ದರು. ಕೋಗಿಲೆ ಕಂಠದ ಹನುಮಂತ ಅವರ ಹಾಡುಗಳು ಖಾಸಗಿ ವಾಹಿನಿಯ ಸರಿಗಮಪ ವೇದಿಕೆಗೆ ಪ್ರವೇಶಿಸಿದವು. ಕುರಿಗಾಹಿ ಹನುಮಂತ ಅವರ ಹಾಡು ಹೇಳಿದ ತೀರ್ಪುಗಾರರು ಅವರ ಕೋಗಿಲೆ ಕಂಠಕ್ಕೆ ಫುಲ್‌ಫಿದಾ ಆಗಿಬಿಟ್ಟರು. ಸರಿಗಮಪ ವೇದಿಕೆಯಲ್ಲೂ ಹನುಮಂತ ಅವರು ಭರ್ಜರಿಯಾಗಿ ಮಿಂಚಿ ಸಖತ್ ಫೇಮಸ್ ಆಗಿದ್ದಾರೆ. ಇದೀಗ ಬಿಗ್ ಬಾಸ್‌ನಲ್ಲಿ ಸರಳ ವ್ಯಕ್ತಿತ್ವ, ತನ್ನ ಜಾನಪದ ಶೈಲಿಯ ಹಾಡುಗಳ ಮೂಲಕ ಹನುಮಂತ ಜನರ ಮನಸ್ಸು ಗೆದ್ದು, ಬಿಗ್ ಬಾಸ್‌ನಲ್ಲಿ ಜಯಶಾಲಿಯಾಗಿದ್ದಾರೆ. ಇದನ್ನೂ ಓದಿ: ತುಮಕೂರಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ವೇಳೆ ಬಂಡೆ ಸ್ಫೋಟ – ಓರ್ವ ಕಾರ್ಮಿಕ ಸಾವು

  • ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    ಮಗನ ಕೊನೆ ಶೋ ನೋಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದ ಸುದೀಪ್‌ ತಂದೆ

    – ದೊಡ್ಮನೆ ವೇದಿಕೆಯಲ್ಲಿ ತಾಯಿ ನೆನೆದು ಕಿಚ್ಚ ಭಾವುಕ

    ‘ಬಿಗ್‌ ಬಾಸ್‌ ಸೀಸನ್‌ 11′ ಕಿಚ್ಚ ಸುದೀಪ್‌ ಅವರ ಕೊನೆ ಶೋ. ಈ ಸೀಸನ್‌ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಮಗನ ಕೊನೆ ಶೋ ನೋಡಲು ಸುದೀಪ್‌ ಅವರ ತಂದೆ ಬಿಗ್‌ ಬಾಸ್‌ ಮನೆಗೆ ಬಂದಿದ್ದು ವಿಶೇಷವಾಗಿತ್ತು.

    ಸುದೀಪ್‌ ಅವರಿಗೆ ಇದು ಕೊನೆಯ ಸೀಸನ್‌ ಆಗಿದ್ದರಿಂದ ಬಿಗ್‌ ಬಾಸ್‌, ಕಿಚ್ಚನ ಬಗ್ಗೆ ಗೌರವಪೂರ್ವಕ ನುಡಿಯನ್ನಾಡಿದರು. ಅಭಿಮಾನಿಗಳ ಅಭಿಮಾನದ ಚಕ್ರವರ್ತಿ ಕಿಚ್ಚ ಸುದೀಪ್‌ ಅವರಿಗೆ ಬಿಗ್‌ ಬಾಸ್‌ ಅಭಿನಂದನೆ ಸಲ್ಲಿಸಿದರು.

    ಈ ಸೀಸನ್‌ ನಮ್ಮೆಲ್ಲರಿಗೂ ಮರೆಯಲಾಗದ ನೆನಪಿನ ಕಳಸ. ಇಲ್ಲಿ ಕಲಿತ ಪಾಠಗಳು ವಿಶೇಷ. ಸುದೀಪ್‌ ಈ ಸೀಸನ್‌ನ ಅಭೂತಪೂರ್ವ ಯಶಸ್ಸಿಗೆ ಕಾರಣರಾಗಿರುವ ನಿಮಗೆ ಬಿಗ್‌ಬಾಸ್‌ ತಂಡದ ವತಿಯಿಂದ ಒಂದು ಚಿಕ್ಕ ನೆನಪಿನ ಕಾಣಿಕೆಯನ್ನು ಬಿಗ್‌ ಬಾಸ್‌ ನೀಡಿತು.

    ಬಿಗ್‌ ಬಾಸ್‌ ಫಿನಾಲೆ ಮಧ್ಯದಲ್ಲಿ ಎಂಟ್ರಿಯಾದ ಯೋಗರಾಜ್‌ ಭಟ್‌ ಅವರು ಸುದೀಪ್‌ ಅವರ ವ್ಯಕ್ತಿ ಚಿತ್ರಣ, ತಾಯಿ ವಾತ್ಸಲ್ಯ, ತಂದೆ ಪ್ರೀತಿಯ ಬಗ್ಗೆ ತಿಳಿಸಿಕೊಟ್ಟರು. ಒಟ್ಟಾರೆ ಸುದೀಪ್‌ ಅವರಿಗೆ ಇದೊಂದು ಭಾವುಕ ಕ್ಷಣವಾಗಿತ್ತು.

    ಪುತ್ರನ ಕೊನೆ ಸೀಸನ್‌ ನೋಡಲು ಸುದೀಪ್‌ ಅವರ ತಂದೆ ಎಂ.ಸಂಜೀವ್‌ ಅವರು ಬಿಗ್‌ ಬಾಸ್‌ ಮನೆಗೆ ಆಗಮಿಸಿದ್ದರು. ಪ್ರೇಕ್ಷಕರ ವೇದಿಕೆಯಲ್ಲಿ ಕುಳಿತಿದ್ದರು. ಅವರನ್ನು ಯೋಗರಾಜ್‌ ಭಟ್‌ ಅವರು ಪರಿಚಯಿಸಿದರು. ‘ನಿಮ್ಮ ತಂದೆ ನಮಗೆ ತುಂಬಾ ಆಪ್ತರು’ ಎಂದು ಸುದೀಪ್‌ ಮುಂದೆ ಹೇಳಿದರು. ‘ನೀವು ಬಂದಿದ್ದು ಫಿನಾಲೆ ಗ್ರ್ಯಾಂಡ್‌ಗೆ ಗ್ರ್ಯಾಂಡ್‌ ಆಯ್ತು’ ಎಂದು ಸುದೀಪ್‌ ತಂದೆಗೆ ಯೋಗರಾಜ್‌ ಭಟ್‌ ಧನ್ಯವಾದ ತಿಳಿಸಿದರು.

    ಬಿಗ್‌ ಬಾಸ್‌ ನಿರೂಪಕರಾಗಿ ಸತತ 11 ಸೀಸನ್‌ಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದ ಸುದೀಪ್‌ ಅವರು ಕೊನೆ ಸೀಸನ್‌ನಲ್ಲಿ ಐದು ನಿಮಿಷ ಪ್ರೇಕ್ಷಕರಾದರು. ಇತ್ತೀಚೆಗೆ ವಿಧಿವಶರಾದ ಸುದೀಪ್‌ ಅವರ ತಾಯಿಯನ್ನು ವೇದಿಕೆಯಲ್ಲಿ ಸ್ಮರಿಸಲಾಯಿತು. ‘ಅಮ್ಮ.. ಅಮ್ಮ..’ ಹಾಡನ್ನು ಪ್ಲೇ ಮಾಡಲಾಯಿತು. ಅಗಲಿದ ತಾಯಿ ನೆನೆದು ಸುದೀಪ್‌ ಹನಿಗಣ್ಣಾದರು. ಫಿನಾಲೆ ಸಂಭ್ರಮದಲ್ಲಿದ್ದ ಬಿಗ್‌ ಬಾಸ್‌ ಮನೆ ಅರೆ ಕ್ಷಣ ಭಾವುಕವಾಯಿತು. ಕೊನೆಗೆ ಸುದೀಪ್‌ ಅವರಿಗೆ ಫ್ಯಾಮಿಲಿ ಇರುವ ಫೋಟೊ ಫ್ರೇಮ್‌ ಗಿಫ್ಟ್‌ ನೀಡಲಾಯಿತು. ವಿಶೇಷ ಕೊಡುಗೆ ನೀಡಿದ ಬಿಗ್‌ ಬಾಸ್‌ ತಂಡಕ್ಕೆ ಕಿಚ್ಚ ಕೃತಜ್ಞತೆ ಸಲ್ಲಿಸಿದರು.

  • ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್‌

    ದಾನ-ಧರ್ಮ ಬೇಕು.. ದಡ್ಡತನ ಬೇಡ: ಲಕ್ಷ ಲಕ್ಷ ಹಣವನ್ನ ದಾನ ಮಾಡ್ತೀನಿ ಎಂದ ಮಂಜು ಕಿವಿ ಹಿಂಡಿದ ಸುದೀಪ್‌

    – ಕಷ್ಟದಲ್ಲಿರೋರಿಗೆ ನೀವು ಕೊಡಬೇಕೆಂದಿದ್ದ ಹಣವನ್ನು ನಾನೇ ಕೊಡ್ತೀನಿ ಎಂದ ಕಿಚ್ಚ

    ‘ಬಿಗ್‌ ಬಾಸ್‌ ಕನ್ನಡ 11′ ರೋಚಕ ಹಂತದಲ್ಲಿದೆ. ಬಿಗ್‌ ಬಾಸ್‌ ಟ್ರೋಫಿ ಎತ್ತಿ ಹಿಡಿಯಬೇಕೆಂಬ ಆಸೆಯಲ್ಲಿದ್ದ ಉಗ್ರಂ ಮಂಜು ಅವರು ಎಲಿಮಿನೇಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದರು. ಕೊನೆದಾಗಿ ಬಿಗ್‌ ಬಾಸ್‌ ವೇದಿಕೆಯಲ್ಲಿ ಮಾತನಾಡುವಾಗ, ತಮಗೆ ಬಹುಮಾನವಾಗಿ ಬಂದ ಹಣವನ್ನೆಲ್ಲ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಹೋಗಿ ಕಿಚ್ಚ ಸುದೀಪ್‌ ಅವರಿಂದ ಕಿವಿ ಹಿಂಡಿಸಿಕೊಂಡರು.

    ಬಿಗ್‌ ಬಾಸ್‌ ಮನೆಯಿಂದ ಟಾಪ್‌ 5 ಸ್ಪರ್ಧಿಯಾಗಿ ‘ಮಂಜಣ್ಣ’ ಹೊರಬಿದ್ದರು. ದೊಡ್ಮನೆಯಲ್ಲಿ ಮಂಜು ಆಟವನ್ನು ಸುದೀಪ್‌ ಅವರು ಕೊಂಡಾಡಿದರು. ‘ನೀವಿಲ್ಲದೇ ಬಿಗ್‌ ಬಾಸ್‌ 11 ಸೀಸನ್ ಅಪೂರ್ಣ ಆಗ್ತಿತ್ತು’ ಎನ್ನುವ ದೊಡ್ಡ ಕ್ರೆಡಿಟ್‌ ಅನ್ನು ಮಂಜುಗೆ ಕೊಟ್ಟರು.

    ಐದನೇ ಸ್ಥಾನದಲ್ಲಿದ್ದ ಮಂಜುಗೆ ಅನೇಕ ಬಹುಮಾನಗಳು ಹರಿದುಬಂತು. ಎರಡು ಸಂಸ್ಥೆಯಿಂದ ಒಟ್ಟು 3 ಲಕ್ಷ ಹಣ ಬಂತು. ಮೊದಲು 2 ಲಕ್ಷ ರೂ. ಕ್ಯಾಶ್‌ ಪ್ರೈಸ್‌ ಸಿಕ್ಕಿತು. ಆದರೆ, ಆ ಹಣವನ್ನು ವಯಸ್ಸಾದ ತಾಯಂದಿರಿಗೆ ನೀಡುವುದಾಗಿ ಮಂಜು ವೇದಿಕೆಯಲ್ಲೇ ಘೋಷಿಸಿದರು. ಅವರ ತ್ಯಾಗಮಯಿ ಗುಣಕ್ಕೆ ಅಭಿಮಾನಿಗಳಿಂದ ಚಪ್ಪಾಳೆ ಸುರಿಮಳೆ ಹರಿಯಿತು.

    ಮತ್ತೆ 1 ಲಕ್ಷ ರೂ. ಬಹುಮಾನ ಸಿಕ್ಕಿತು. ಆಗ, ‘ಇದು ಯಾರಿಗೆ’ ಎಂದು ಸುದೀಪ್‌ ಕಿಚಾಯಿಸಿದರು. ಆ ಹಣವನ್ನೂ ಊರಲ್ಲಿ ಯಾರಾದರು ರೈತರಿಗೆ ಸಹಾಯ ಮಾಡಿ ಅಪ್ಪ ಎಂದು ಮಂಜು ತಮ್ಮ ತಂದೆಗೆ ಹೇಳಿದರು. ತಕ್ಷಣ ತಡೆದ ಸುದೀಪ್‌ ಅವರು, ನಿಮ್ಮ ತಂದೆಯೇ ರೈತರು.. ನೀವೆ ಇಟ್ಟುಕೊಳ್ಳಿ ಸರ್‌ ಎಂದು ಮಂಜು ಅವರ ತಂದೆಗೆ ತಿಳಿಸಿದರು.

    ‘ದಾನ-ಧರ್ಮ ಬೇಕು, ದಡ್ಡತನ ಬೇಡ.. 2 ಲಕ್ಷ ಕೊಟ್ಟಾಯ್ತು. ಈಗ ಸ್ವಲ್ಪ ಸುಮ್ನಿರಿ’ ಎಂದು ಸುದೀಪ್‌ ಅವರು ತಡೆದರು. ಮಂಜು ಅವರು ಕೊಡಬೇಕು ಎಂದುಕೊಂಡಿದ್ದ 2 ಲಕ್ಷ ಹಣವನ್ನು ನಾನೇ ಸಹಾಯ ಮಾಡ್ತೀನಿ. ಗಿಫ್ಟ್‌ ಆಗಿ ಬಂದ ಹಣವನ್ನು ಗೌರವಪೂರ್ವಕವಾಗಿ ಇಟ್ಕೊಳ್ಳಿ ಎಂದು ಮಂಜುಗೆ ಸುದೀಪ್‌ ಮನವರಿಕೆ ಮಾಡಿದರು.

    ಸಂಸ್ಥೆಯಿಂದ ಗೌರವಪೂರ್ವಕವಾಗಿ ಹಣ ನಿಮಗೆ ಬಂದಿದೆ. ಅದನ್ನು ನಿಮ್ಮ ತಂದೆ-ತಾಯಿಗೆ ಕೊಡಿ. ಕೊನೆಗೆ ಅವರಿಬ್ಬರು ಏನು ನಿರ್ಧಾರ ಮಾಡ್ತಾರೋ ಮಾಡ್ಲಿ ಎಂದು ಮಂಜುಗೆ ಕಿಚ್ಚ ಬುದ್ದಿಮಾತು ಹೇಳಿದರು. ಈ ವೇಳೆ, ಫ್ಯಾನ್ಸ್‌ ‘ಕಿಚ್ಚ.. ಕಿಚ್ಚ..’ ಎಂದು ಕೂಗಿ ಮೆಚ್ಚುಗೆ ವ್ಯಕ್ತಪಡಿಸಿದರು.

  • BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

    BB Season 11 | ಬೇರೆಯವರನ್ನು ನೋಡ್ಬೇಕು ಅಂತಾ ನಾನು ವೇಟ್ ಮಾಡ್ತಾ ಇದೀನಿ: ಸುದೀಪ್

    ಬೆಂಗಳೂರು: ಈ ಬಾರಿಯ ಬಿಗ್ ಬಾಸ್ (Bigg Boss) ರಿಯಾಲಿಟಿ ಶೋ ನಿರೂಪಣೆಯನ್ನು ಸುದೀಪ್ ಮಾಡಲ್ವಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಸುದೀಪ್ ಅವರು ನೀಡಿದ ಹೇಳಿಕೆಯಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ ಬಾಸ್ ಕೆಲವು ದಿನಗಳಲ್ಲೇ ಸೀಸನ್ 11 (Season 11) ಆರಂಭವಾಗಲಿದೆ. ಇಲ್ಲಿಯವರೆಗೂ ನಡೆದ 10 ಸೀಸನ್‌ಗಳನ್ನು ನಟ ಅಭಿನಯ ಚಕ್ರವರ್ತಿ ಸುದೀಪ್ (Abhinaya Chakravarty Sudeep) ನಿರೂಪಕರಾಗಿ ನಡೆಸಿಕೊಂಡು ಬಂದಿದ್ದರು.ಇದನ್ನೂ ಓದಿ: ಕೋರ್ಟ್ ಆದೇಶ ಪಾಲಿಸದ ಮಸ್ಕ್ – ಬ್ರೆಜಿಲ್‍ನಲ್ಲಿ ಎಕ್ಸ್ ಸೇವೆ ಸ್ಥಗಿತ

    ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಸೀಸನ್ 11ರ ನಿರೂಪಕ ಬದಲಾಗುವ ಕುರಿತು ಸುದ್ದಿ ಎಲ್ಲೆಡೆ ಹಬ್ಬಿತ್ತು ಆದರೆ ಇದಕ್ಕೆ ಸಂಬಂಧಿಸಿದಂತೆ ವಾಹಿನಿಯಾಗಲಿ, ನಟ ಸುದೀಪ್ ಆಗಲಿ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿರಲಿಲ್ಲ.

    ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಸೀಸನ್ -11 ಕ್ಕೆ ಬೇರೆಯವರೂ ಬರಲಿ ಅಂತಾ ಕಾಯ್ತಾ ಇದೀನಿ. ಬಿಗ್ ಬಾಸ್‌ನ 10 ಸೀಸನ್‌ಗಳನ್ನು ನಾನು ಡೆಡಿಕೇಟ್ ಮಾಡಿದ್ದೀನಿ. ಕಳೆದ 10 ಸೀಸನ್‌ಗಳನ್ನು ನಾನು ನಡೆಸಿಕೊಂಡು ಬಂದಿದ್ದೀನಿ. ನಾನು ಬಿಗ್ ಬಾಸ್ ನಡೆಸಿಕೊಡ್ತೀನಿ ಅಂತಾ ಎಲ್ಲರಿಗೂ ಗೊತ್ತಿದೆ. ಆದರೆ ನಾನು ಹೇಗೆ ನಡೆಸಿಕೊಡುತ್ತಿದ್ದೆ ಅಂತಾ ಯಾರಿಗಾದರೂ ಗೊತ್ತಿದ್ಯಾ? ಬಿಗ್ ಬಾಸ್‌ಗಾಗಿ ನಾನು ಎಲ್ಲಿದ್ದರೂ ಬರಬೇಕಾಗುತ್ತದೆ. ಬಿಗ್ ಬಾಸ್ ನಡೆಸಬೇಕಾದರೆ ಅದರ ಹಿಂದಿನ ಸ್ಥಿತಿ ಹೇಗಿರುತ್ತದೆ ಅಂತಾ ನನಗೆ ಗೊತ್ತಿದೆ ಎಂದು ಬಿಚ್ಚಿಟ್ಟರು.ಇದನ್ನೂ ಓದಿ: ಮದುವೆಯಾಗುವುದಾಗಿ ನಂಬಿಸಿ ನರ್ಸ್‌ ಮೇಲೆ ಅತ್ಯಾಚಾರ – 59ರ ವ್ಯಕ್ತಿ ಬಂಧನ

    ಈ ಸಂದರ್ಭದಲ್ಲಿ ಸಿನಿಮಾಗೆ ನ್ಯಾಯ ಕೊಡಬೇಕಾ? ಅಥವಾ ಬಿಗ್ ಬಾಸ್ ಶೋಗೆ ನ್ಯಾಯ ಕೊಡಬೇಕಾ? ಎಂದು ಪ್ರಶ್ನಿಸಿದರು. ಸುದೀಪ್ ಅವರು ಈ ಮಾತನ್ನು ಆಡಿದ ಬೆನ್ನಲ್ಲೇ ಈ ಬಾರಿಯ ಶೋನದಲ್ಲಿ ನಿರೂಪಣೆ ಮಾಡ್ತಾರೋ ಇಲ್ವೋ ಪ್ರಶ್ನೆ ಎದುರಾಗಿದೆ. ಮಾಧ್ಯಮಗೋಷ್ಠಿಯಲ್ಲಿ ನಾನು ಶೋ ನಡೆಸಿಕೊಡುತ್ತೇನೆ ಅಥವಾ ನಡೆಸಿಕೊಡುವುದಿಲ್ಲ ಎನ್ನುವುದರ ಬಗ್ಗೆ ಯಾವುದೇ ಸ್ಪಷ್ಟವಾದ ಉತ್ತರ ನೀಡಿಲ್ಲ. ವಾಹಿನಿ ಸಹ ಈ ವಿಚಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹೀಗಾಗಿ ಬಿಗ್ ಬಾಸ್ ಆರಂಭವಾಗುವವರೆಗೂ ಕುತೂಹಲ ಮುಂದುವರಿಯಲಿದೆ.