Tag: ಬಿಗ್‌ ಬಾಸ್‌ ಹಿಂದಿ 15

  • ಬಹುಕಾಲದ ಗೆಳೆಯನ ಜೊತೆ ನಟಿ ಸುರಭಿ ಚಂದ್ನಾ ಮದುವೆ

    ಬಹುಕಾಲದ ಗೆಳೆಯನ ಜೊತೆ ನಟಿ ಸುರಭಿ ಚಂದ್ನಾ ಮದುವೆ

    ಬಾಲಿವುಡ್‌ನಲ್ಲಿ ಮೋಡಿ ಮಾಡಿದ ಮುದ್ದು ಮುಖದ ಸುಂದರಿ ಸುರಭಿ ಚಂದ್ನಾ (Surabhi Chandna) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ಕರಣ್ ಶರ್ಮಾ (Karan Sharma) ಜೊತೆ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇದನ್ನೂ ಓದಿ:ಅಲ್ಲು ಅರ್ಜುನ್ ಸಿನಿಮಾಗೆ ಸಂಜಯ್ ದತ್ ಎಂಟ್ರಿ

    ನಾಗಿನ್ 5, ಬಿಗ್ ಬಾಸ್ ಸೀಸನ್ 15 ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸುರಭಿ ಅವರು ಉದ್ಯಮಿ ಕರಣ್ ಶರ್ಮಾ ಜೊತೆ ಕಳೆದ 13 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮಾರ್ಚ್ 2ರಂದು ಮದುವೆ ಆಗಿದ್ದಾರೆ. ಮದುವೆಯ (Wedding) ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.‌

    ತಮ್ಮ ಮದುವೆಯ ವಿಶೇಷ ದಿನಕ್ಕಾಗಿ ಸುರಭಿ ವಿಭಿನ್ನವೆನಿಸಿದ ಭಾರಿ ಅಂಬ್ರಾಯಿಡರಿ ಹಾಗೂ ಸ್ಟೋನ್ ವರ್ಕ್ ಇರುವ ಮಿಶ್ರ ಬಣ್ಣದ ಲೆಹೆಂಗಾ ಧರಿಸಿದ್ದಾರೆ. ಅದಕ್ಕೆ ಮ್ಯಾಚ್ ಆಗುವಂತೆ ಬೂದಿ ಕಲರ್ ಬಣ್ಣದ ಗ್ರ್ಯಾಂಡ್ ಶೆರ್ವಾನಿಯಲ್ಲಿ ಕರಣ್ ಶರ್ಮಾ ಮಿಂಚಿದ್ದಾರೆ. ನವಜೋಡಿಯ ಸುಂದರ ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

    ನಟಿ ಸುರಭಿ ಮದುವೆಗೆ ನಟಿ ಶ್ರೇನು, ಮಾನಸಿ ಶ್ರೀವಾಸ್ತವ್, ಶಿವಾಂಗಿ ಜೋಶಿ, ಸೇರಿದಂತೆ ಅನೇಕರು ಭಾಗಿಯಾಗಿ ಹಾರೈಸಿದ್ದಾರೆ. ಈ ಮದುವೆ ಸುದ್ದಿ ಕೇಳಿ ನಾಗಿನ್ ನಟಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮಾರ್ಚ್ 2ಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಸುರಭಿ ಚಂದ್ನಾ ಮದುವೆ

    ಮಾರ್ಚ್ 2ಕ್ಕೆ ‘ಬಿಗ್ ಬಾಸ್’ ಖ್ಯಾತಿಯ ಸುರಭಿ ಚಂದ್ನಾ ಮದುವೆ

    ಹಿಂದಿ ಕಿರುತೆರೆಯಲ್ಲಿ ಮೋಡಿ ಮಾಡಿದ ಮುದ್ದು ಮುಖದ ಸುಂದರಿ ಸುರಭಿ ಚಂದ್ನಾ(Surabhi Chandna)  ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಬಹುಕಾಲದ ಗೆಳೆಯ ಕರಣ್ ಶರ್ಮಾ (Karan Sharma) ಜೊತೆ ಜೈಪುರನಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ.

    ನಾಗಿನ್ 5, ಬಿಗ್ ಬಾಸ್ ಸೀಸನ್ 15 ಸೇರಿದಂತೆ ಹಲವು ಟಿವಿ ಶೋಗಳಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಸುರಭಿ ಅವರು ಉದ್ಯಮಿ ಕರಣ್ ಶರ್ಮಾ ಜೊತೆ ಕಳೆದ 13 ವರ್ಷಗಳಿಂದ ಡೇಟಿಂಗ್‌ನಲ್ಲಿದ್ದರು. ಈಗ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮಾರ್ಚ್‌ 2ರಂದು ಮದುವೆ (Wedding) ಜರುಗಲಿದೆ.

     

    View this post on Instagram

     

    A post shared by WeddingSutra.com (@weddingsutra)

    ಜೈಪುರ ರಾಜಸ್ಥಾನದ ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ಶುಭಕಾರ್ಯ ನಡೆಯುತ್ತಿದೆ. ಮೆಹೆಂದಿ, ಅರಿಶಿನ ಶಾಸ್ತ್ರದ ಕಾರ್ಯಕ್ರಮಗಳು ಈಗಾಗಲೇ ಶುರುವಾಗಿದೆ. ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಭಾಯ್? ಯಶ್ ಸ್ಪಷ್ಟನೆ

    ನಟಿ ಸುರಭಿ ಮದುವೆಗೆ ನಟಿ ಶ್ರೇನು, ಮಾನಸಿ ಶ್ರೀವಾಸ್ತವ್, ಶಿವಾಂಗಿ ಜೋಶಿ, ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಸದ್ಯ ಈ ಮದುವೆ ಸುದ್ದಿ ಕೇಳಿ ನಾಗಿನ್ ನಟಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್‌

    ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಶಮಿತಾ ಶೆಟ್ಟಿ ಕ್ಲಾಸ್‌

    ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ (Shamitha Shetty)  ಟ್ರೋಲಿಗರ (Troll) ಕಾಟ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶಮಿತಾಗೆ ವಯಸ್ಸಾಯ್ತು ಮದುವೆಯಾಗು ಎಂದ ನೆಟ್ಟಿಗನಿಗೆ ನಟಿ ಸಖತ್ ಆಗಿ ತಿರುಗೇಟು ನೀಡಿದ್ದಾರೆ. ಯಾವಾಗ ಮದುವೆ ಎಂದವನಿಗೆ ನಟಿ ಕುಟುಕಿದ್ದಾರೆ.

    ಶಿಲ್ಪಾ ಶೆಟ್ಟಿ (Shilpa Shetty) ಸಹೋದರಿ ಶಮಿತಾ ಶೆಟ್ಟಿ 45 ವರ್ಷ ಆಗಿದ್ದರೂ ಇನ್ನೂ ಸಿಂಗಲ್. ಸದಾ ಒಂದಲ್ಲಾ ಒಂದು ಹಾಟ್ ಫೋಟೋಶೂಟ್ ಮೂಲಕ ನಟಿ ಸದ್ದು ಮಾಡುತ್ತಿರುತ್ತಾರೆ. ಟ್ರೋಲ್‌ಗಳನ್ನು ಹೇಗೆ ಎದುರಿಸಬೇಕು ಎಂದು ನಟಿಗೆ ಗೊತ್ತಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಕೆಣಕಿದವನಿಗೆ ನಟಿ ಕೊಟ್ಟಿರೋ ಉತ್ತರ ಫ್ಯಾನ್ಸ್ ಗಮನ ಸೆಳೆದಿದೆ.

    ಮದುವೆಯಾಗು ವಯಸ್ಸಾಯ್ತು ಎಂದು ನೆಟ್ಟಿಗನೊಬ್ಬ ಶಮಿತಾಗೆ ಕೆಣಕಿದ್ದಾರೆ. ಅದಕ್ಕೆ ನಟಿ, ನಿಮಗೆ ಅಭಿನಂದನೆಗಳು. ಮಿಷನ್ ಯಶಸ್ವಿಯಾಗಿದೆ. ಮದುವೆಯಾಗುವುದು ನನ್ನ ಜೀವನದಲ್ಲಿ ನನ್ನ ಏಕೈಕ ಉದ್ದೇಶವಲ್ಲ. ನಾನು ಸ್ವತಂತ್ರವಾಗಿರುವುದಕ್ಕೆ ನನಗೆ ಖುಷಿಯಿದೆ ಎಂದಿದ್ದಾರೆ. ಇದನ್ನೂ ಓದಿ:ರಾಜಕೀಯ ಅಖಾಡಕ್ಕೆ ಮೆಗಾಸ್ಟಾರ್ ಮನೆ ಮಗಳು?

    ನಿಮ್ಮ ಜೀವನದಲ್ಲಿ ನಿಮಗೆ ಬಹಳಷ್ಟು ಪಾಸಿಟಿವಿಟಿ ಸಿಗಲಿ ಎಂದು ಹಾರೈಸುತ್ತೇನೆ. ನೀವು ಇನ್ಮುಂದೆ ಬೇರೆ ಮಹಿಳೆಯರನ್ನು ಕೆಳಗೆ ಎಳೆಯಲು ಪ್ರಯತ್ನಿಸುವುದಿಲ್ಲ ಎಂದು ಭಾವಿಸುತ್ತೇನೆ ಎಂದು ನಟಿ ತಿರುಗೇಟು ನೀಡಿದ್ದಾರೆ. ನಟಿಯ ಬೋಲ್ಡ್‌ ಉತ್ತರಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

    ಅಂದಹಾಗೆ, ಅಕ್ಕ ಶಿಲ್ಪಾ ಶೆಟ್ಟಿಯಂತೆ ಬಾಲಿವುಡ್‌ನಲ್ಲಿ ಶಮಿತಾ ಕೆರಿಯರ್‌ಗೆ ಬ್ರೇಕ್ ಸಿಗಲಿಲ್ಲ. ‘ಬಿಗ್ ಬಾಸ್ ಹಿಂದಿ ಸೀಸನ್ 15’ರಲ್ಲಿ (Bigg Boss Hindi 15) ಶಮಿತಾ ಹೈಲೆಟ್ ಆಗಿದ್ದರು. ಈ ಶೋನಿಂದ ಅಪಾರ ಅಭಿಮಾನಿಗಳನ್ನು ನಟಿ ಗಳಿಸಿದ್ದಾರೆ.