ಬಿಗ್ ಬಾಸ್ ತೆಲುಗು ಸೀಸನ್ 8(Bigg Boss Season 8) ಶುರುವಾಗಿದೆ. ಈ ಸೀಸನ್ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿತ್ತು. ಕಳೆದ ವರ್ಷದಂತೆ ಈ ವರ್ಷವೂ ನಿರೂಪಕರ ಬದಲಾವಣೆ ಕುರಿತು ಸಾಕಷ್ಟು ಚರ್ಚೆ ಎದ್ದಿತ್ತು. ನಟ ನಾಗಾರ್ಜುನ (Nagarjuna) ಬದಲು ಬೇರೆ ನಿರೂಪಕರು ಈ ಬಾರಿ ಇರಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಈ ಮಾತು ಸುಳ್ಳಾಗಿದೆ. ಬಿಗ್ ಬಾಸ್ ತೆಲುಗು ಸೀಸನ್ 8 ಅನ್ನು ನಾಗಾರ್ಜುನ ಅವರೇ ನಡೆಸಿಕೊಡುತ್ತಿದ್ದಾರೆ.
ಈ ಸೀಸನ್ ಸಾಕಷ್ಟು ಕಾರಣಗಳಿಂದಾಗಿ ನೋಡುಗರ ಗಮನ ಸೆಳೆಯಲಿದೆ. ಕನ್ನಡದ ನಾಲ್ವರು ಈ ಬಾರಿ ಬಿಗ್ ಬಾಸ್ ತೆಲುಗು ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲಿ ಮೂಡಿ ಬಂದ ಮನೆಯೇ ಮಂತ್ರಾಲಯ ಧಾರಾವಾಹಿಯ ನಿಖಿಲ್, ವಿದ್ಯಾ ವಿನಾಯಕ ನಟಿ ಯಶ್ಮಿ ಗೌಡ, ಕನ್ನಡದ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದ ಪ್ರೇರಣಾ, ಪೃಥ್ವಿರಾಜ್ ಶೆಟ್ಟಿ ಹೀಗೆ ನಾಲ್ವರು ಕಲಾವಿದರು ಈ ಬಾರಿ ತೆಲುಗು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ.
ಕನ್ನಡದಲ್ಲಿ ಬಿಗ್ ಬಾಸ್ ಶುರುವಾಗೋ ಮುನ್ನವೇ ತೆಲುಗಿನಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. 14 ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿ ನಾಲ್ವರು ಕನ್ನಡದ ಮೂಲದವರೇ ಇದ್ದಾರೆ ಅನ್ನೋದು ವಿಶೇಷ. ಮುಂದಿನ ದಿನಗಳಲ್ಲಿ ಯಾವೆಲ್ಲ ಕಂಟೆಸ್ಟೆಂಟ್ ಗಳು ಗಮನ ಸೆಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕು.
ಕಿರುತೆರೆಯ ದೊಡ್ಮನೆ `ಬಿಗ್ ಬಾಸ್ ಸೀಸನ್ 8’ರ ಮೂಲಕ ಗಮನ ಸೆಳೆದ ಜೋಡಿ ದಿವ್ಯಾ ಉರುಡುಗ ಮತ್ತು ಅರವಿಂದ್ ಅವರ ಪಾಲಿಗೆ ಈ ದಿನ ವಿಶೇಷವಾಗಿದೆ. ತಮ್ಮ ಜೋಡಿಯ ಫೋಟೋ ಶೇರ್ ಮಾಡಿ, ಈ ಬಗ್ಗೆ ನಟಿ ದಿವ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
`ಬಿಗ್ ಬಾಸ್ ಸೀಸನ್ 8′ 2021ರಲ್ಲಿ ಆರಂಭವಾಯಿತು. ನಟಿ ದಿವ್ಯಾ ಆಗಲೇ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದರು. ಅರವಿಂದ್ ಕೆ.ಪಿ ಅವರು ಕ್ರೀಡಾ ರಂಗದಲ್ಲಿ ಹೆಸರುವಾಸಿಯಾಗಿದ್ದರು. ಆದರೆ ಇಬ್ಬರಿಗೂ ನೇಮ್ ಆ್ಯಂಡ್ ಫೇಮ್ ಕೊಟ್ಟ ಶೋ ಅಂದ್ರೆ ಬಿಗ್ ಬಾಸ್ ಕಾರ್ಯಕ್ರಮ. ಈ ಶೋ ಮೂಲಕ ಅಪಾರ ಅಭಿಮಾನಿಗಳ ಮನ ಗೆದ್ದಿದ್ದರು.
ಈ ಶೋ ಮೂಲಕನೇ ಇಬ್ಬರು ಪರಿಚಯವಾಗಿ, ಆ ಪರಿಚಯ ಪ್ರೀತಿಗೆ ಸೇತುವೆ ಆಗಿತ್ತು. ಇದೀಗ ನಟಿ ದಿವ್ಯಾ, ಅರವಿಂದ್ ಜತೆಗಿನ ಹೊಸ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಟಿ ದಿವ್ಯಾ ಮತ್ತು ಅರವಿಂದ್ ಕೆ.ಪಿ ಭೇಟಿ ಮಾಡಿ ಇಂದಿಗೆ 500 ದಿನ ಕಳೆದಿದೆ. ಈ ವಿಶೇಷ ದಿನಕ್ಕೆ ವಿಶೇಷ ಫೋಟೋ ಹಂಚಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ್ದಾರೆ. ಭೇಟಿಯಾದ ಮೊದಲ ದಿನದಿಂದ ಇಲ್ಲಿಯವರೆಗೂ ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಲೇ ಬಂದಿದ್ದಾರೆ. ಈ ಜೋಡಿ ಭೇಟಿಯಾಗಿ 500 ದಿನದ ಸಂಭ್ರಮದ ಸಾಕ್ಷಿಯಾಗಿ ಅಭಿಮಾನಿಗಳು ಕೂಡ ವಿಶೇಷ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಶೇರ್ ಮಾಡಿಕೊಂಡು ಫ್ಯಾನ್ಸ್‌ಗೆ ದಿವ್ಯಾ ಮತ್ತು ಅರವಿಂದ್ ಜೋಡಿ ಧನ್ಯವಾದ ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಲರ್ಸ್ ಕನ್ನಡ ವಾಹಿನಿ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮೊನ್ನೆಯಷ್ಟೇ ಬಿಗ್ ಬಾಸ್ ತಯಾರಿ ಕುರಿತು ಸಣ್ಣದೊಂದು ಅಪ್ ಡೇಟ್ ಕೊಟ್ಟಿದ್ದರು. ಹೊಸ ಮನೆ ನಿರ್ಮಾಣ ಆಗುತ್ತಿರುವ ಮಸುಕಾದ ಫೋಟೋವೊಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿ ಕುತೂಹಲಕ್ಕೆ ಕಾರಣವಾಗಿದ್ದರು. ಇದೀಗ ಸದ್ದಿಲ್ಲದೇ ಪ್ರೊಮೋ ಶೂಟ್ ಕೂಡ ಮುಗಿಸಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ಪ್ರೊಮೋ ಶೂಟ್ ಮುಗಿದಿದ್ದು, ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ, ಸುದೀಪ್ ನಿನ್ನೆ ಬೆಳಗ್ಗೆಯಿಂದ ಸಂಜೆವರೆಗೂ ನಡೆದ ಬಿಗ್ ಬಾಸ್ 9ರ ಪ್ರೋಮೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ. ಸ್ವತಃ ಪರಮೇಶ್ವರ ಗುಂಡ್ಕಲ್ ಅವರೇ ಈ ಪ್ರೊಮೋವನ್ನು ಚಿತ್ರೀಕರಿಸಿದ್ದು ವಿಶೇಷ. ಈ ಬಾರಿಯ ಬಿಗ್ ಬಾಸ್ ವಿಶೇಷ ಏನು? ಯಾವ ಯಾವ ಕ್ಷೇತ್ರದ ಜನರು ಭಾಗಿಯಾಗಲಿದ್ದಾರೆ? ಸೀಸನ್ 8ರಲ್ಲಿ ಏನೆಲ್ಲ ನೋಡಬಹುದು ಎನ್ನುವ ಕುರಿತಾದ ಸ್ಕ್ರಿಪ್ಟ್ ಗೆ ಕಿಚ್ಚ ಆಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ಕೆ.ಎಲ್ ರಾಹುಲ್ ಜೊತೆ ಮದುವೆಯ ವದಂತಿಗೆ ಸ್ಪಷ್ಟನೆ ನೀಡಿದ ಅಥಿಯಾ ಶೆಟ್ಟಿ
ಬಿಗ್ ಬಾಸ್ ಸೀಸನ್ 9ರ ಪ್ರೊಮೋಗಾಗಿ ಕಿಚ್ಚ ಸುದೀಪ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದರು. ಬಿಳಿ ಅಂಗಿ, ಕರಿಪ್ಯಾಂಟು, ಮೇಲೊಂದು ಕೋಟು ಹಾಗೂ ವಿಶೇಷ ಹೇರ್ ಸ್ಟೈಲ್ ನಲ್ಲಿ ಈ ಬಾರಿ ಪ್ರೊಮೋ ಶೂಟ್ ಮಾಡಲಾಗಿದೆ. ಮೊದಲು ಓಟಿಟಿಯಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈ ಬಾರಿಯ ಬಿಗ್ ಬಾಸ್ ಪ್ರಸಾರವಾಗಲಿದ್ದು, ಅದಕ್ಕೆ ತಕ್ಕಂತೆ ಪ್ರೊಮೋಗಳನ್ನು ಶೂಟ್ ಮಾಡಲಾಗಿದೆ ಎನ್ನುತ್ತಿವೆ ಮೂಲಗಳು. ಈ ಎರಡಲ್ಲೂ ಕಿಚ್ಚನ ನಿರೂಪಣೆಯೇ ಇರಲಿದೆಯಂತೆ.
ಎರಡು ವೇದಿಕೆಯಲ್ಲಿ ಈ ಬಾರಿ ಬಿಗ್ ಬಾಸ್ ಮೂಡಿ ಬರಲಿದ್ದು, ಮೊದಲು ವೂಟ್ಸ್ ನಲ್ಲಿ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ವೂಟ್ಸ್ ನಲ್ಲಿ ಗೆದ್ದವರಿಗೆ ಕಲರ್ಸ್ ವಾಹಿನಿಯಲ್ಲಿ ನಡೆಯುವ ಬಿಗ್ ಬಾಸ್ ನಲ್ಲಿ ಭಾಗಿಯಾಗಲು ಅವಕಾಶ ನೀಡಲಾಗುತ್ತಿದೆ ಎಂದು ಹೇಳಲಾಗಿದ್ದು, ವಾಹಿನಿಯು ಅದನ್ನು ಅಧಿಕೃತವಾಗಿ ಮುಂದಿನ ದಿನಗಳಲ್ಲಿ ಹೇಳಲಿದೆಯಂತೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಬಿಗ್ ಬಾಸ್ ಸೀಸನ್ 8ರ ಆರಂಭದಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ಒಂದು ಜೋಡಿಯಾಗಿದ್ದರೆ, ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಇನ್ನೊಂದು ಜೋಡಿಯಾಗಿ ವೀಕ್ಷಕರ ಗಮನ ಸೆಳೆದಿದ್ದರು. ಇದೀಗ ವಿನ್ನರ್ ಆದ ಬಳಿಕ ಮಂಜು ಅವರು ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಏನಪ್ಪಾ ಇದು ವೈಭೋಗ, ನನ್ನ ಜಾತಕದಲ್ಲಿ ಇದೆಲ್ಲಾ ಇದೆ ಅಂತ ಗೊತ್ತಿರಲಿಲ್ಲ: ಮಂಜು
ಹೌದು. ಬಿಗ್ ಬಸಸ್ ಮನೆಯಲ್ಲಿ ದಿವ್ಯಾ ಜೊತೆಗಿನ ಗೆಳೆತನದ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮನಬಿಚ್ಚಿ ಮಾತನಾಡಿದ ಮಂಜು, ದಿವ್ಯಾ ಸುರೇಶ್ ನನ್ನ ಬೆಸ್ಟ್ ಫ್ರೆಂಡ್. ಬಿಗ್ ಬಾಸ್ ಮನೆಯೊಳಗಡೆ ಹೋದಾಗ ಅಲ್ಲಿ ನಮ್ಮವರು ಅಂತ ಯಾರೂ ಇರಲ್ಲ. ಆಗ ಹೇಳಿಕೊಳ್ಳೋಕೆ ಒಬ್ಬರು ಬೇಕು ಅನಿಸುತ್ತದೆ. ಆಗ ನಮ್ಮ ಮೆಂಟಾಲಿಟಿಗೆ ಮ್ಯಾಚ್ ಆಗೋರು ಒಬ್ಬರು ಸಿಗುತ್ತಾರೆ. ಹೀಗೆ ನನಗೆ ದಿವ್ಯಾ ಸುರೇಶ್ ಸಿಕ್ಕಿದ್ದಾಳೆ. ತುಂಬಾ ಸಪೋರ್ಟ್ ಮಾಡುತ್ತಿದ್ದಳು. ಹಾಗೆಯೇ ಒಳ್ಳೆಯ ಸ್ಪರ್ಧಿ ಕೂಡ. ಒಟ್ಟಿನಲ್ಲಿ ನಾವಿಬ್ಬರೂ ಒಳ್ಳೆಯ ಫ್ರೆಂಡ್ಸ್ ಅಂದ್ರು. ಇದನ್ನೂ ಓದಿ:ಇಷ್ಟೊಂದು ದೊಡ್ಡ ಮೊತ್ತವನ್ನು ಜೀವನದಲ್ಲೇ ನೋಡಿಲ್ಲ: ಮಂಜು
ಮನೆಯೊಳಗಡೆ ಹೋದಾಗ ಸೆಲೆಬ್ರಿಗಳಾದ ನಿಧಿ, ಶುಭಾ ಹಾಗೂ ಶಂಕರ್ ಅಶ್ವಥ್ ನೋಡಿ ಹೆಂಗಪ್ಪಾ ಇಲ್ಲಿ ಇರೋದು ಅಂದುಕೊಂಡಿದ್ದೆ. ಆದರೆ ಹೋಗ್ತಾ ಹೋಗ್ತಾ ಎಲ್ಲರೂ ನನಗೆ ಕ್ಲೋಸ್ ಆದ್ರು. ಶುಭಾ ಅಂತೂ ಈಗ ನನಗೆ ಪ್ರೀತಿಯ ಗುಂಡಮ್ಮ ಆಗಿದ್ದಾಳೆ. ಇನ್ನು ಬಾಲಿವುಡ್ ನಲ್ಲಿ ಸಿನಿಮಾ ಮಾಡಿರುವ ನಿಧಿಸುಬ್ಬಯ್ಯ ಅವರನ್ನು ನಿಧಿ, ಪಿಪಿಇ ಕಿಟ್ ಅಂತೆಲ್ಲಾ ಕರೆಯೋಕೆ ಆರಂಭಿಸಿದೆ. ಇತ್ತ ಶಂಕರ್ ಅಣ್ಣನನ್ನೂ ರೇಗಿಸ್ತೀನಿ. ಒಟ್ಟಿನಲ್ಲಿ ಸದ್ಯ ದೊಡ್ಡ ದೊಡ್ಡವರ ಜೊತೆ ಇದ್ದು ಇಂದು ನಾನು ಗೆದ್ದಿರೋದು ತುಂಬಾನೆ ಖುಷಿ ಇದೆ ಎಂದು ಮಂಜು ಹೇಳಿದರು. ಇದನ್ನೂ ಓದಿ: ಪುಟ್ಟ ಕಲಾವಿದನನ್ನು ಫಿನಾಲೆವರೆಗೆ ತಲುಪಿಸಿ ವಿನ್ನರ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್: ಮಂಜು
ಒಟ್ಟಿನಲ್ಲಿ ಮನರಂಜನೆ ಹಾಗೂ ಉತ್ತಮ ಸ್ಪರ್ಧೆಯಿಂದಲೇ ವೀಕ್ಷಕರ ಗಮನ ಸೆಳೆಯುವ ಮೂಲಕ ಲ್ಯಾಗ್ ಮಂಜು ಅವರು ವಿನ್ನರ್ ಆಗಿ ಬಿಗ್ ಬಾಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ. ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಯಾರು ಎಂದು ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ
ಬೆಂಗಳೂರು: ಬಿಗ್ ಬಾಸ್ ಸೀಸನ್ 8ರಲ್ಲಿ ವಿನ್ನರ್ ಆಗಿ ‘ಹಳ್ಳಿ ಹೈದ’ ಮಂಜು ಪಾವಗಡ ಅವರು ಹೊರಹೊಮ್ಮಿದ್ದಾರೆ. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ಮಂಜುಗೆ ನೀಡಲಾಗಿದೆ. ಇಷ್ಟೊಂದು ಮೊತ್ತವನ್ನು ನಾನು ನನ್ನ ಜೀವನದಲ್ಲಿಯೇ ನೋಡಿಲ್ಲ ಎಂದು ಮಂಜು ಹೇಳಿದ್ದಾರೆ.
ಬಿಗ್ ಬಾಸ್ ವಿನ್ನರ್ ಟ್ರೋಫಿಯನ್ನು ತನ್ನ ಮುಡಿಗೇರಿಸಕೊಂಡ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಫಿನಾಲೆಯಲ್ಲಿ ಸಿಗುವ ದೊಡ್ಡ ಮೊತ್ತದ ಹಣವನ್ನು ಇದುರೆಗೂ ಎಲ್ಲೂ ನೋಡಿಲ್ಲ, ಕೇಳಿದ್ದೀನಿ ಅಷ್ಟೇ ಎಂದು ನಗುತ್ತಲೇ ಉತ್ತರಿಸಿದರು. ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು
ಸದ್ಯ ಈ ಹಣವನ್ನು ಏನು ಮಾಡಬೇಕು ಎಂದು ಗೊತ್ತಿಲ್ಲ. ಆದರೆ ಅಪ್ಪ-ಅಮ್ಮನನ್ನು ನಾನು ಸಾಯೋವರೆಗೂ ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮಹದಾಸೆ ಇದೆ. ಅವರಿಗಿಂತ ಮುಖ್ಯ ಯಾರೂ ಇಲ್ಲ. ಯಾಕಂದ್ರೆ ಅವರು ತುಂಬಾನೆ ಕಷ್ಟಪಟ್ಟು ಸಾಕಿ, ಬೆಳೆಸಿದ್ದಾರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದೇ ದೊಡ್ಡ ಆಸೆ ಎಂದು ತಿಳಿಸಿದರು. ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ
ಇದೇ ವೇಳೆ ಬಿಗ್ ಬಾಸ್ ವೇದಿಕೆಗೆ ತೆರಳಲು ಸಿಕ್ಕ ಅವಕಾಶದ ಕುರಿತು ಮಾತನಾಡಿದ ಅವರು, ಆಸೆಗಳು ಎಲ್ಲರಿಗೂ ಇದ್ದೇ ಇರುತ್ತದೆ. ಕನ್ನಡ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಅನ್ನೋದು ಅತ್ಯಂತ ದೊಡ್ಡ ಶೋ ಆಗಿದೆ. ಇಂತಹ ವೇದಿಕೆಯಲ್ಲಿ ನನಗೆ ಅವಕಾಶ ಸಿಗುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದರು.
ಫಿನಾಲೆಯಲ್ಲಿ ಸುದೀಪ್ ಸರ್ ಎಡ ಹಾಗೂ ಬಲ ನಿಲ್ಲೋದು ಒಂದು ದೊಡ್ಡ ಸಾಧನೆಯಾಗಿದೆ. ಆ ಪರಿಸ್ಥಿತಿಯಲ್ಲಿ ತಲೆಯಲ್ಲಿ ಸಾವಿರ ಯೋಚನೆಗಳು ಓಡಾಡುತ್ತಿರುತ್ತವೆ. ಅದನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಿ ಮುಂದೆ ಬಂದಿರೋದು ತುಂಬಾ ಸಂತೋಷವಾಗಿದೆ ಎಂದು ಮಂಜು ಹೇಳಿದರು. ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ
ಸುದೀಪ್ ಸರ್ ನನ್ನ ಕೈ ಮೇಲೆ ಎತ್ತಿದಾಗ ನಿಜವಾಗಲೂ ನಾನೇ ವಿನ್ನರಾ. ಅವರು ತಿರುಗಿಸಿ ನನ್ನ ಫೋಟೋ ತೊರಿಸಿದಾಗಲೂ ನಾನೇನಾ ಎಂದು ಗಲಿಬಿಲಿಗೊಂಡೆ. ಸದ್ಯದ ಪರಿಸ್ಥಿತಿಯಲ್ಲೂ ಹಾಗೆಯೇ ಇದ್ದೀನಿ ಎಂದು ಮಂಜು ನಕ್ಕರು.
ಬಿಗ್‍ಬಾಸ್ ಫಿನಾಲೆಯಲ್ಲಿ ಟಾಪ್ 5 ನಲ್ಲಿ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಮಂಜು, ಮತ್ತು ಅರವಿಂದ್ ಮಧ್ಯೆ ಮೊದಲ ಸ್ಥಾನಕ್ಕೆ ಸ್ಪರ್ಧೆ ನಡೆದಿತ್ತು. ಸುದೀಪ್ ಅವರು ಮಂಜು ಕೈ ಮೇಲೆ ಎತ್ತುವ ಮೂಲಕವಾಗಿ ವಿನ್ನರ್ ಯಾರು ಎಂದು ಗ್ಯ್ರಾಂಡ್ ಫಿನಾಲೆಯಲ್ಲಿ ಘೋಷಣೆ ಮಾಡಿದರು. ಬಿಗ್‍ಬಾಸ್ ವಿನ್ನರ್ ಪಟ್ಟದ ಜೊತೆಗೆ ಮಂಜು ಅವರಿಗೆ 53 ಲಕ್ಷ ರೂ. ಹಣವನ್ನು ಮಂಜುಗೆ ನೀಡಲಾಗಿದೆ. ರನ್ನರ್ ಅಪ್ ಅರವಿಂದ್‍ಗೆ 11 ಲಕ್ಷ ರೂಪಾಯಿ ಹಣವನ್ನು ನೀಡಲಾಗಿದೆ. ಇದನ್ನೂ ಓದಿ: ಪುಟ್ಟ ಕಲಾವಿದನನ್ನು ಫಿನಾಲೆವರೆಗೆ ತಲುಪಿಸಿ ವಿನ್ನರ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್: ಮಂಜು
ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಶೋ 8ರ ವಿನ್ನರ್ ಆಗಿ ಮಂಜು ಪಾವಗಡ ಅವರು ಹೊರಹೊಮ್ಮಿದ್ದಾರೆ. ಇದೀಗ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಮಾತನಾಡುತ್ತಾ ಕರ್ನಾಟಕದ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವಿನ್ನರ್ ಅಂತ ಘೋಷಣೆಯಾಗುತ್ತಿದ್ದಂತೆಯೇ ತುಂಬಾನೇ ಖುಷಿಯಾದೆ. ಟಾಪ್ 5 ಅಂತ ಬಂದಾಗಲೇ ನಾನು ಗೆದ್ದಿದ್ದೀನಿ ಅನ್ನೋ ಖುಷಿ ಇತ್ತು. ಏನೂ ಇಲ್ಲದೆ ಅಂತಹ ದೊಡ್ಡ ಸ್ಟೇಜ್ ಗೆ ಹೋಗಿ ಟಾಪ್ 5 ಬರೋದು ದೊಡ್ಡ ಮಾತು ಎಂದರು.
ನನಗೆ ತುಂಬಾನೇ ಖುಷಿಯಾಗಿರುವುದು ಅಂದರೆ, 45 ಲಕ್ಷ ವೋಟ್ ಬಂದಿರುವುದು. ಇದು ತಮಾಷೆ ಮಾತೇ ಇಲ್ಲ. ಕರ್ನಾಟಕದ ಎಲ್ಲಾ ಜನತೆಗೆ ತುಂಬಾ ಧನ್ಯವಾದಗಳೂ. ಯಾಕಂದ್ರೆ ಈ ಪುಟ್ಟ ಕಲಾವಿದನನ್ನು ಪ್ರತಿ ವಾರನೂ ಇಷ್ಟಪಟ್ಟು ವೋಟ್ ಮಾಡಿ ಫಿನಾಲೆ ತಲುಪಿಸಿ ವಿನ್ನರ್ ಮಾಡಿದ್ದೀರಿ. ಅದಕ್ಕೆ ನಾನು ಯಾವತ್ತೂ ಚಿರಋಣಿ. ನಾನು ಇರುವವರೆಗೂ ಎಲ್ಲರನ್ನೂ ಮನರಂಜಿಸುತ್ತಾ ನಗಿಸುತ್ತಾ ಇರುತ್ತೇನೆ ಎಂದು ಮಂಜು ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು
ನಾನೊಬ್ಬ ರಂಗಭೂಮಿ ಕಲಾವಿದನಾಗಿದ್ದೆ. ಅಲ್ಲಿಂದ ನಾನು ಜನರನ್ನು ಮನರಂಜಿಸುವತ್ತ ಬಂದೆ. ನಾನು ಕೂಡ ಒಬ್ಬ ಬಿಗ್ ಬಾಸ್ ಶೋ ಅಭಿಮಾನಿ. ಅಂತಹ ಶೋಗೆ ನಾನೇ ಸೆಲೆಕ್ಟ್ ಆದಾಗ ತುಂಬಾ ಖುಷಿಯಾಗಿದ್ದೆ. ಈ ಶೋ 72 ದಿನ ನಡೆದ ಬಳಿಕ ಕೋವಿಡ್ ಅಲೆಯಿಂದ ಕೆಲ ದಿನಗಳ ಕಾಲ ನಿಂತು ಹೋಯಿತು. ಈ ವೇಳೆ ನನಗೆ ತುಂಬಾ ಬೇಜಾರಾಗಿತ್ತು. ಸಾವಿರಾರು ಕನಸು ಕಟ್ಟಿಕೊಂಡು ಬಂದ್ವಿ. ನಮಗೆ ಹಿಂಗೇ ಆಗ್ಬೇಕಾ ಅನ್ನೋ ನೋವು ನನ್ನನ್ನು ಕಾಡಿತ್ತು ಎಂದು ತಿಳಿಸಿದರು. ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ
ಬಿಗ್ ಬಾಸ್ ಇತಿಹಾಸದಲ್ಲಿಯೇ 2ನೇ ಇನ್ನಿಂಗ್ಸ್ ಅನ್ನೊದು ಇರಲೇ ಇಲ್ಲ. 11 ಮಂದಿ ಸ್ಪರ್ಧಿಗಳು 43 ದಿನ ಹೊರಗಡೆ ಇದ್ದು, ಮತ್ತೆ ಒಳಗಡೆ ಹೋಗಿ 48 ದಿನ ಆಡೋದು ಅಸಾಧಾರಣ ಮಾತು. ಇಂತಹ ಸ್ಪೆಷಲ್ ಎಪಿಸೋಡ್ ನಲ್ಲಿ ನಾನು ಗೆದ್ದಿರೋದು ಸಿಕ್ಕಾಪಟ್ಟೆ ಖುಷಿಯಾಗಿದೆ. ಅದಕ್ಕೆ ಕಾರಣ ವೀಕ್ಷಕರು ಕೊಟ್ಟಂತಹ ಪ್ರೀತಿ, ವಿಶ್ವಾಸ. ಇದನ್ನು ನಾನು ಸಾಯುವವರೆಗೂ ಉಳಿಸಿಕೊಳ್ಳುತ್ತೇನೆ ಎಂದು ಮಂಜು ಭರವಸೆ ನಿಡಿದರು. ಇದನ್ನೂ ಓದಿ: ಮಂಜುಗೆ ಒಲಿದ ದೊಡ್ಮನೆ ಕಿರೀಟ – ಬಿಗ್‍ಬಾಸ್ ವಿನ್ನರ್‌ಗೆ ಅದ್ಧೂರಿ ಸ್ವಾಗತ
ಬೆಂಗಳೂರು: ಕಾಮಿಡಿಯನ್ ಮಂಜು ಪಾವಗಡ ಅವರು ಈ ಬಾರಿಯ ಬಿಗ್‍ಬಾಸ್ ಸೀನ್ -8ರ ವಿನ್ನರ್ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಮಂಜುಗೆ ಭರ್ಜರಿ ಸ್ವಾಗತ ಸಿಕ್ಕಿದೆ.
ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಸ್ನೇಹಿತರಂತೂ ಹೆಗಲ ಮೇಲೆ ಹೊತ್ಕೊಂಡು ಮೆರವಣಿಗೆ ಮಾಡಿದರು. ಹಾರ ಹಾಕಿ, ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಮಂಜು ಸಾಧನೆಯನ್ನು ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರ ಮನಗೆದ್ದು ಗೆಲುವಿನ ನಗೆ ಬೀರಿದ ಮಂಜು
ಒಟ್ಟಿನಲ್ಲಿ `ಹಳ್ಳಿ ಹಕ್ಕಿ’ ಮಂಜುಗೆ ದೊಡ್ಮನೆ ಕಿರೀಟ ಒಲಿದಿದ್ದು, ಮಂಜು ಪಾವಗಡ-ಅರವಿಂದ್ ಕೆಪಿ ಮಧ್ಯೆ ಟಫ್ ಫೈಟ್ ಏರ್ಪಟ್ಟಿತ್ತು. ಕೊನೆಗೆ ಸುದೀಪ್ ಅವರು ವಿನ್ನರ್ ಮಂಜು ಪಾವಗಡ ಹೆಸರು ಘೋಷಿಸಿದ್ದಾರೆ. ಮಂಜು ಪಾವಗಡ ವಿನ್ನರ್, ಅರವಿಂದ್ ರನ್ನರ್ ಅಪ್ ಆಗಿದ್ದು, ಮಂಜುಗೆ 53 ಲಕ್ಷ, ಅರವಿಂದ್‍ಗೆ 11 ಲಕ್ಷ ಬಹುಮಾನ ದೊರೆತಿದೆ. ಇದನ್ನೂ ಓದಿ: ಟಾಸ್ಕ್ ಮಾಸ್ಟರ್, ಪರ್ಫೆಕ್ಷನಿಸ್ಟ್ ಅರವಿಂದ್‍ಗೆ ಎರಡನೇ ಸ್ಥಾನ
ಸರ್ಧೆಯ ವಿಜೇತರಾಗಿರುವ ಮಂಜು ಪಾವಗಡ ಮಜಾಭಾರತ ರಿಯಾಲಿಟಿ ಶೋ ಸ್ಪರ್ಧಿ ಯಾಗಿ ಕನ್ನಡಿಗರಿಗೆ ಪರಿಚಿತರಿದ್ದರು. ಆದರೆ ಬಿಗ್ ಬಾಸ್ ಕಾರ್ಯಕ್ರಮ ತಮಗೆ ಕೊಟ್ಟ ಅವಕಾಶವನ್ನ ಜೋಪಾನವಾಗಿ ಕಾಪಾಡಿಕೊಂಡು ಸಂದರ್ಭಕ್ಕೆ ತಕ್ಕಂತೆ ಆಟವಾಡುವುದರಲ್ಲಿ ಯಶಸ್ವಿಯಾಗಿದ್ದರು. ಮನರಂಜಿಸುತ್ತಾ ಬಂದಿದ್ದು, ಟಾಸ್ಕ್ ನಲ್ಲೂ ಉತ್ತಮ ಪರ್ಫಾಮೆನ್ಸ್ ಕೊಟ್ಟಿದ್ದರು. ಕಡು ಬಡತನದಲ್ಲಿರುವ ಮಂಜು ಬಿಗ್ ಬಾಸ್ ಗೆದ್ದ ಹಣದಿಂದ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋದಾಗಿ ಈ ಹಿಂದೆ ಹೇಳಿದ್ರು. ಹೀಗಾಗಿ ಕರುನಾಡು ಮಂಜುಗೆ ಹರಸಿದೆ. ಈ ಮೂಲಕ ಮತಗಳ ಮಹಾಪೂರವೇ ಮಂಜುಗೆ ಹರಿದುಬಂದಿತ್ತು. ಇದೇ ಕಾರಣದಿಂದ ಮಂಜು ಗೆಲ್ಲುವ ದಾರಿ ಸುಗಮವಾಯ್ತು.
ಬೆಂಗಳೂರು: ಚೀನಿ ವೈರಸ್ ನಿಂದಾಗಿ ಅರ್ಧಕ್ಕೆ ಮೊಟಕುಗೊಂಡ ಕನ್ನಡದ ಫೇಮಸ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಇದೀಗ ಮತ್ತೆ ಆರಂಭವಾಗುತ್ತಿದೆ. ನಾಳೆಯಿಂದ ಬಿಗ್ ಬಾಸ್ ಆರಂಭವಾಗುತ್ತಿದ್ದು, ಸ್ಪರ್ಧಿಗಳು ಈಗಾಗಲೇ ಪ್ರೇಕ್ಷರಿಗೆ ಮನರಂಜನೆ ನೀಡಲು ರೆಡಿಯಾಗಿದ್ದಾರೆ. ಇತ್ತ ಕಾರ್ಯಕ್ರಮ ನಿರೂಪಕ ಕಿಚ್ಚ ಸುದೀಪ್ ಕೂಡ ಹೊಸತನದೊಂದಿಗೆ ಸಿದ್ಧರಾಗಿದ್ದಾರೆ.
ಹೌದು. ನಾಳೆಯಿಂದ ಬಿಗ್ ಬಾಸ್ ಆರಂಭವಾಗುತ್ತಿರುವುದಾಗಿ ಈಗಾಗಲೇ ವಾಹಿನಿ ದೃಢಪಡಿಸಿದೆ. ಅಲ್ಲದೆ ಸ್ಪರ್ಧಿಗಳು ರೆಡಿಯಾಗುತ್ತಿರುವ ಪ್ರೋಮೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದೆ. ಇದೀಗ ಈ ಸಂಬಂಧ ಕಿಚ್ಚ ಸುದೀಪ್ ಕೂಡ ತಮ್ಮ ಫೋಟೋದೊಂದಿಗೆ ಬರೆದುಕೊಂಡು ಬಿಗ್ ಬಾಸ್ ಗೆ ಸನ್ನದ್ಧವಾಗಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: 50 ದಿನ ನಡೆಯಲಿದೆ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್
ಕಿಚ್ಚ ಹೇಳಿದ್ದೇನು..?
ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಲ್ಪ ವಿರಾಮ ಬಿದ್ದಿತ್ತು. ಇದರಿಂದ ಸ್ಪರ್ಧಿಗಳಿಗೆ ಬ್ರೇಕ್ ಸಿಕ್ತು. ಹೀಗಾಗಿ ಈಗಾಗಲೇ ಸ್ಪರ್ಧಿಗಳು ವಿರಾಮ ತೆಗೆದುಕೊಳ್ಳಲು ಹೊರ ಹೊರಗಿದ್ದಾರೆ. ಈ ಮೂಲಕ ಅವರ ಸ್ಥಾನ ಮತ್ತು ಜನಪ್ರಿಯತೆಯನ್ನು ತಿಳಿದಿದ್ದಾರೆ. ಅಲ್ಲದೆ ಕೆಲ ಕಂತುಗಳನ್ನು ನೋಡಿದ್ದಾರೆ. ಹೀಗಾಗಿ ಪ್ರತಿ ಸ್ಪರ್ಧಿಗಳು ಏನೇನು ಮಾತನಾಡಿದ್ದಾರೆಂದು ತಿಳಿದಿದೆ. ಈಗ “ಮರು-ಪ್ರವೇಶ”. ಇದು ಹೊಸದು ಮತ್ತು ಇದು ಮಜವಾಗಿದೆ ಎಂದು ಸುದೀಪ್ ತಿಳಿಸಿದ್ದಾರೆ. ಇದನ್ನೂ ಓದಿ: ನಾಳೆಯಿಂದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್- ಸ್ಪರ್ಧಿಗಳ ಎಂಟ್ರಿ ಹೇಗಿರಲಿದೆ?
ಒಟ್ಟಿನಲ್ಲಿ ನಾಳೆಯಿಂದ ಬಿಗ್ ಬಾಸ್ ವೀಕ್ಷಕರಿಗೆ ಮತ್ತೆ ಮಜನರಂಜನೆ ನೀಡಲು ಸ್ಪರ್ಧಿಗಳು ಸಜ್ಜಾಗಿದ್ದು, ಈ ಬಾರಿ ಅತೀ ಹೆಚ್ಚಿನ ಮಜಾ ಸಿಗಲಿದೆ ಎಂದು ಸುದೀಪ್ ಹೇಳಿದ್ದಾರೆ. ಹೀಗಾಗಿ ವೀಕ್ಷಕರಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿದೆ.
ಬೆಂಗಳೂರು: ಬಿಗ್‍ಬಾಸ್ ಸೀಸನ್ 8ರ ಮೊದಲ ವೀಕೆಂಡ್ ಎಪಿಸೋಡ್ ಪ್ರಸಾರವಾಗಿದೆ. ‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಸುದೀಪ್ ಎಂದಿನಂತೆ ತಮ್ಮ ಮಾತುಗಾರಿಕೆ, ಹಾಸ್ಯದಿಂದ ಮನೆಯ ಸದಸ್ಯರು ತಮ್ಮ ಮಾತಿಗೆ ತಲೆದೂಗುವಂತೆ ಮಾಡಿದರು. ಅಂತೆಯೇ ಸುದೀಪ್ ಅವರು ಎಲ್ಲರ ಬಳಿ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ಹೇಳಿದರು.
ಹೌದು. ಬಿಗ್ ಮನೆಯಲ್ಲಿ ಅತ್ಯಂತ ಉತ್ಸಾಹದಿಂದ ಮನೆಮಂದಿಯನ್ನು ನಗಿಸುವ ಲ್ಯಾಗ್ ಮಂಜು ಬಳಿ ಮನೆಯ ಸದಸ್ಯರ ಯಾವ ಒಂದು ವಿಚಾರ ಒಳ್ಳೆಯದಿದೆ ಹಾಗೂ ಈ ಒಂದು ವಿಚಾರದಿಂದ ಅವರಿಂದ ದೂರ ಇರಬೇಕು ಎಂಬುದನ್ನು ತಿಳಿಸುವಂತೆ ಹೇಳುತ್ತಾರೆ. ಅಲ್ಲದೆ ಕಿಚ್ಚ ಅವರು ಒಬ್ಬೊಬ್ಬರ ಹೆಸರನ್ನು ಹೇಳುತ್ತಾ ಬಂದರು. ದಿವ್ಯ ಉರುಗುಡ ಹೆಸರು ಹೇಳುತ್ತಿದ್ದಂತೆಯೇ ಮಂಜು ಆಕೆಯಿಂದ ಇದೇ ವಿಚಾರಕ್ಕೆ ಹುಷಾರಾಗಿರಬೇಕು ಎಂದರು.
ಸ್ಪೋರ್ಟ್, ಟಾಸ್ಕ್ ಅಂತ ಬಂದಾಗ ದಿವ್ಯ ಯಾರನ್ನೂ ಲೆಕ್ಕಕ್ಕೆ ತಗೊಳಲ್ಲ. ರಾಕ್ಷಸಿಯಂತೆ ಒಬ್ಬಳೇ ಸಿಕ್ಕಾಪಟ್ಟೆ ಫೈಟ್ ಮಾಡ್ತಾಳೆ. ಇದು ನನಗೆ ತುಂಬಾ ಒಳ್ಳೆಯ ವಿಚಾರ ಅಂದ್ರು.
ಇನ್ನು ತುಂಬಾ ಹುಷಾರಾಗಿರಬೇಕಾದ ವಿಚಾರ ಅಂದ್ರೆ ಫಸ್ಟ್ ಅವಳನ್ನು ಇಲ್ಲಿಂದ ಕಳಿಸಬೇಕು ಅನ್ನೋದಾಗಿದೆ ಅಂದ್ರು. ಲ್ಯಾಗ್ ಮಂಜು ಹೀಗೆ ಹೇಳ್ತಿದ್ದಂದೆ ಕಿಚ್ಚ ಸೇರಿದಂತೆ ಮನೆ ಮಂದಿಯೆಲ್ಲಾ ಜೋರಾಗಿ ನಕ್ಕರು. ಇತ್ತ ಮಂಜು ಹೀಗೆ ಹೇಳ್ತಿದ್ದಂತೆ ದಿವ್ಯ ಅವರು ಮಂಜು…… ಅಂತ ನಗುವಿನ ಜೊತೆ ಸಿಟ್ಟು ಹೊರಹಾಕಿದ ಪ್ರಸಂಗವೂ ನಡೆಯಿತು.
ಬೆಂಗಳೂರು: ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ನಡೆಯಬೇಕಾಗಿದ್ದ ಕನ್ನಡದ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್, ಈ ಬಾರಿ ಮಹಾಮಾರಿ ಕೊರೊನಾ ಲಾಕ್‍ಡೌನ್ ನಿಂದಾಗಿ ಜನವರಿಗೆ ಮುಂದೂಡಲ್ಪಟ್ಟಿತ್ತು. ಆದರೆ ಜನವರಿ ಕೊನೆಯಾಗುತ್ತಾ ಬಂದರೂ ಇನ್ನೂ ಬಿಗ್ ಬಾಸ್ ಆರಂಭವಾಗಿಲ್ಲ ಎಂದು ಅಭಿಮಾನಿಗಳು ಬೇಸರ ಪಡುತ್ತಿದ್ದಾಗಲೇ ಇದೀಗ ನಿರೂಪಕ ಕಿಚ್ಚ ಸುದೀಪ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಹೌದು, ಈ ಸಂಬಂಧ ಪ್ರಮೋ ಶೂಟ್ ನಲ್ಲಿ ಭಾಗವಹಿಸಿರುವ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಕಿಚ್ಚ ಸುದೀಪ್, ಬಿಗ್ ಬಾಸ್ ಸೀಸನ್ 8ರ ಪ್ರೋಮೋ ಶೂಟ್ ನಡೆಯುತ್ತಿದೆ. ಸದ್ಯದಲ್ಲಿಯೇ ಕಾರ್ಯಕ್ರಮ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
Tnx to all for luving and sharing ydays announcement.#VikrantRonaOnBurjKhalifa ___________________________
ಇನ್ನು ಪ್ರತಿಬಾರಿ ‘ಬಿಗ್ ಬಾಸ್’ ಕನ್ನಡ ರಿಯಾಲಿಟಿ ಶೋ ಬೆಂಗಳೂರಿನ ಬಿಡದಿ ಬಳಿ ಇರುವ ಇನ್ನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಡೆಯುತ್ತದೆ. ಅಂತೆಯೇ ಈ ಬಾರಿ ಕೂಡ ಅದೇ ಸೆಟ್‍ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ತಿಂಗಳ ಹಿಂದೆಯೇ ಬಿಗ್ ಬಾಸ್ ಮನೆಯ ರಿಪೇರಿ ಕಾರ್ಯ ಶುರು ಮಾಡಲಾಗಿತ್ತು. ಈ ಬಾರಿ ಸ್ಪರ್ಧಿಗಳಿಗೆ ಸಪ್ರ್ರೈಸ್ ನೀಡುವಂತಹ ಥೀಮ್‍ನಲ್ಲಿ ಮನೆಯನ್ನು ರೆಡಿ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಈ ಹಿಂದೆ ಬಿಗ್‍ಬಾಸ್ ಪ್ರಸಾರವಾಗುವ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಜೊತೆ ನಟ ಕಿಚ್ಚ ಸುದೀಪ್ ಮಾತುಕತೆ ನಡೆಸುತ್ತಿರುವ ಫೋಟೋಗಳು ವೈರಲ್ ಆಗಿದ್ದವು. ಕೊರೊನಾ ಆತಂಕದ ನಡುವೆಯೂ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯ ಬಿಗ್‍ಬಾಸ್ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿವೆ.