Tag: ಬಿಗ್‌ ಬಾಸ್‌ ಸೀಸನ್‌ 10

  • ಟರ್ಕಿಯಲ್ಲಿ ಚಿಟ್ಟೆಯಾದ ದೀಪಿಕಾ ದಾಸ್

    ಟರ್ಕಿಯಲ್ಲಿ ಚಿಟ್ಟೆಯಾದ ದೀಪಿಕಾ ದಾಸ್

    ಸ್ಯಾಂಡಲ್‌ವುಡ್ ನಟಿ, ಬಿಗ್‌ ಬಾಸ್‌ ಕನ್ನಡ 7ರ ಸ್ಪರ್ಧಿ(Bigg Boss Kannada 7) ದೀಪಿಕಾ ದಾಸ್ (Deepika Das) ಇತ್ತೀಚೆಗೆ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದರು. ಇದೀಗ ಪತಿ ಜೊತೆ ದೀಪಿಕಾ ದಾಸ್ ವೆಕೇಷನ್ ಮೂಡ್‌ನಲ್ಲಿದ್ದಾರೆ. ಟರ್ಕಿಯಲ್ಲಿ ಚಿಟ್ಟೆಯಾಗಿ ದೀಪಿಕಾ ಮಿಂಚಿದ್ದಾರೆ. ನಟಿಯ ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಪತಿ ಜೊತೆ ದೀಪಿಕಾ ಟರ್ಕಿಯಲ್ಲಿ ಬೀಡು ಬಿಟ್ಟಿದ್ದಾರೆ. ರೆಕ್ಕೆಯನ್ನು ಬೆನ್ನಿಗೆ ಸಿಕ್ಕಿಸಿ, ಕಲರ್‌ಫುಲ್ ಡ್ರೆಸ್‌ನಲ್ಲಿ ನಟಿ ಕಂಗೊಳಿಸಿದ್ದಾರೆ. ಯಾವಾಗಲೂ ಸೂರ್ಯನ ಕಿರಣಕ್ಕೆ ಮುಖ ಒಡ್ಡಿಕೊಳ್ಳಿ, ಆಗ ನೆರಳು ನಿಮ್ಮ ಹಿಂದೆಯೇ ಉಳಿಯುತ್ತದೆ ಎಂದು ಕ್ಯಾಪ್ಷನ್ ನೀಡಿದ್ದಾರೆ. ನಟಿಯ ಆಕರ್ಷಕ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

     

    View this post on Instagram

     

    A post shared by Deepika Das (@deepika__das)

    ದೀಪಿಕಾ ದಾಸ್‌ಗೆ ಗೋವಾದಲ್ಲೇ (Goa) ಮದುವೆಯಾಗುವ ಕನಸು ಇತ್ತಂತೆ. ಹೀಗಾಗಿ ಕೇವಲ ಕುಟುಂಬಸ್ಥರ ಸಮ್ಮುಖದಲ್ಲಿ ನಟಿ ದೀಪಿಕಾ ದಾಸ್ ಉದ್ಯಮಿ ದೀಪಕ್ ಎಂಬುವವರ ಜೊತೆ ಮಾರ್ಚ್ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದನ್ನೂ ಓದಿ:ಪ್ರಭಾಸ್ ಜೊತೆ ಕೀರ್ತಿ ಸುರೇಶ್ ಡ್ಯುಯೇಟ್‌

    ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ದೀಪಕ್ (Deepak) ಅವರ ಮೇಲೆ ನಿಮಗೆ ಲವ್ ಆಗಿದ್ದು ಹೇಗೆ ಎಂಬ ಪ್ರಶ್ನೆಗೆ ನಟಿ ದೀಪಿಕಾ ದಾಸ್ ಮನಬಿಚ್ಚಿ ಮಾತನಾಡಿದ್ದರು. ದೀಪಕ್ ಮತ್ತು ನಾನು ನಾಲ್ಕು ವರ್ಷದ ಸ್ನೇಹಿತರು. 4 ವರ್ಷಗಳ ಕಾರ್ಯಕ್ರಮವೊಂದರಲ್ಲಿ ಭೇಟಿಯಾದೆವು. ಕಳೆದ ಒಂದು ವರ್ಷದಿಂದ ರಿಲೇಷನ್‌ಶಿಪ್‌ನಲ್ಲಿ ಇದ್ವಿ. ಕುಟುಂಬಸ್ಥರು ಕೂಡ ನಮ್ಮ ಪ್ರೀತಿಗೆ ಓಕೆ ಎಂದರು.

    ದೀಪಕ್ ಅವರಿಗೆ ಚಿತ್ರರಂಗಕ್ಕೂ ನಂಟಿಲ್ಲ. ಅವರು ಉದ್ಯಮಿ. ಮುಂದಿನ ದಿನಗಳಲ್ಲಿ ಪ್ರೊಡಕ್ಷನ್ ಹೌಸ್ ಮಾಡುವ ಮೂಲಕ ಚಿತ್ರರಂಗಕ್ಕೆ ಕರೆತರುವ ಯೋಜನೆ ಇದೆ. ಅವರು ಜಾಸ್ತಿ ಮಾತಾಡೋದಿಲ್ಲ. ನಾನೇ ಕಮ್ಮಿ ಮಾತಾಡುತ್ತೇನೆ ಅಂದುಕೊಂಡಿದ್ದೆ, ಆದರೆ ನನಗಿಂತ ಕಮ್ಮಿ ಮಾತಾಡುವ ಹುಡುಗ ನನಗೆ ಸಿಕ್ಕಿದ್ದಾರೆ. ನಾನು ಮದುವೆಯಾಗುವ ಹುಡುಗ ಹೀಗೆ ಇರಬೇಕು, ಹಾಗೇ ಇರಬೇಕು ಅಂತಾ ಅಂದುಕೊಂಡಿರಲಿಲ್ಲ. ಆದರೆ ನಾನು ಪ್ರೀತಿ ಅಂತಾ ಹುಡುಕಿಕೊಂಡು ಹೋಗಿಲ್ಲ. ನನ್ನ ಮದುವೆಯಾಗುವ ಹುಡುಗ ಮನಸ್ಸು ಚೆನ್ನಾಗಿರಬೇಕು. ನನ್ನ ಚೆನ್ನಾಗಿ ನೋಡಿಕೊಳ್ಳುವವನಾಗಿರಬೇಕು. ನನಗೆ ಟೈಮ್ ಕೊಡುವವನಾಗಿರಬೇಕು ಜೊತೆಗೆ ದೇಶ ಸುತ್ತುವವನಾಗಿರಬೇಕು ಅಂತಾ ಈ ಹಿಂದೆ ಹೇಳಿದ್ದೆ. ಅದೇ ರೀತಿ ನಾನು ಅಂದುಕೊಂಡ ಹಾಗೇ ನನಗೆ ನನ್ನ ಸಂಗಾತಿ ಸಿಕ್ಕಿದ್ದಾರೆ ಅಂತ ಮಾತನಾಡಿದ್ದರು.

    ಬಳಿಕ ದೀಪಿಕಾ ದಾಸ್ ಪತಿ ದೀಪಕ್ ಮಾತನಾಡಿ, ನಾನು ದುಬೈ ಮೂಲದವನು ಅಲ್ಲ. ಇದೆ ಬೆಂಗಳೂರಿನ ಆರ್‌ಆರ್ ನಗರದವನು. ರಿಯಲ್ ಎಸ್ಟೇಟ್ ಜೊತೆ ದುಬೈನಲ್ಲಿ ಒಂದು ಐಟಿ ಕಂಪನಿ ಇದೆ. ದೀಪಿಕಾ ನನಗೆ ನಾಲ್ಕು ವರ್ಷಗಳಿಂದ ಗೊತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದೆವು. ಇಷ್ಟು ದಿನ ಹೇಗೆಲ್ಲಾ ದೀಪಿಕಾಗೆ ಬೆಂಬಲಿಸಿದ್ರೋ ಮುಂದಿನ ದಿನಗಳಲ್ಲಿ ಕೂಡ ಅವಳಿಗೆ ಸಪೋರ್ಟ್ ಮಾಡಿ ಎಂದು ದೀಪಕ್ ಮನವಿ ಮಾಡಿದ್ದರು.

  • Bigg Boss Kannada 10: ಯಾವಾಗಿಂದ ಶುರು, ಯಾರೆಲ್ಲ ಇರಲಿದ್ದಾರೆ?

    Bigg Boss Kannada 10: ಯಾವಾಗಿಂದ ಶುರು, ಯಾರೆಲ್ಲ ಇರಲಿದ್ದಾರೆ?

    ನ್ನಡದ ಬಿಗ್ ಬಾಸ್ ಸೀಸನ್ 10 ಶೋ ಕುರಿತಂತೆ ಮಹತ್ವದ ಸುದ್ದಿಯೊಂದು ಬಂದಿದೆ. ಈ ಶೋ ಯಾವಾಗಿಂದ ಶುರುವಾಗಲಿದೆ ಎನ್ನುವುದಕ್ಕೆ ವಾಹಿನಿಯೇ ದಿನಾಂಕವನ್ನು ಘೋಷಣೆ ಮಾಡಿದೆ. ಅಕ್ಟೋರ್ 7 ಮತ್ತು 8ರಂದು ಎರಡು ದಿನಗಳ ಕಾಲ ಪ್ರವೇಶದ ಸಂಚಿಕೆಗಳು ಪ್ರಸಾರವಾಗಲಿದ್ದು, ಅಧಿಕೃತ ಆಟ ಅಕ್ಟೋಬರ್ 9ರಿಂದ ಬಿಗ್ ಬಾಸ್ ಮನೆಯಲ್ಲಿ ಶುರುವಾಗಲಿದೆ.

    ಬಿಗ್ ಬಾಸ್ 10 ಶೋಗೆ ಕ್ಷಣಗಣನೆ ಶುರುವಾಗಿದೆ. ಸದ್ಯದಲ್ಲೇ ಪ್ರಸಾರವಾಗಲಿರುವ ಬಿಗ್ ಬಾಸ್ ಶೋ ಕುರಿತಂತೆ ಈ ಹಿಂದೆ ಸಣ್ಣದೊಂದು ಝಲಕ್ ಬಿಟ್ಟಿದ್ದರೆ, ಉಳಿದಂತೆ ಯಾವುದೇ ಆಸಕ್ತಿ ಹುಟ್ಟಿಸುವಂತೆ ಪ್ರೊಮೋ ರಿಲೀಸ್ ಮಾಡಿರಲಿಲ್ಲ. ಹಾಗಾಗಿ ಸುದೀಪ್ (Sudeep) ಅಭಿಮಾನಿಗಳಿಗೆ ಬೇಸರವಾಗಿತ್ತು. ಮೊನ್ನೆಯಷ್ಟೇ ಬೇಸರವನ್ನು ನಿವಾರಿಸುವಂತಹ ಪ್ರೊಮೋವನ್ನು ವಾಹಿನಿ ರಿಲೀಸ್ ಮಾಡಿತ್ತು. ಇದನ್ನೂ ಓದಿ:‘ಜವಾನ್’ ಚಿತ್ರದ ನಿರ್ದೇಶಕನ ಜೊತೆ ನಯನತಾರಾ ಮುನಿಸು

    ರಿಲೀಸ್ ಮಾಡಿರುವ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದರು. ಜೊತೆಗೊಂದು ಊರ ಹಬ್ಬದ ಕಾನ್ಸೆಪ್ಟ್ ನೊಂದಿಗೆ ವಿಡಿಯೋ ರಿಲಿಸ್ ಆಗಿತ್ತು. ಈ ಬಾರಿ ನೂರು ದಿನಗಳ ಹಬ್ಬವೆಂಬ ಕಾನ್ಸೆಪ್ಟ್ ನಲ್ಲಿ ಪ್ರೊಮೋ (Promo) ಮಾಡಲಾಗಿತ್ತು. ಈ ಹಬ್ಬಕ್ಕಾಗಿ ಯಾರೆಲ್ಲ ಕಾಯುತ್ತಿದ್ದಾರೆ ಎನ್ನುವುದನ್ನು ಹೇಳಲಾಗಿತ್ತು. ಈ ಪ್ರೊಮೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಬಾರಿ ವಾಹಿನಿಯು ಒಟಿಟಿ ಬಿಗ್ ಬಾಸ್ ಯೋಜನೆಗೆ ಬ್ರೇಕ್ ಹಾಕಿ, ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada) ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಟಿವಿ ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.

     

    ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಈ ಬಾರಿ ಹೊಸ ಸೀಸನ್‌ನಲ್ಲಿ ನಾಗಿಣಿ 2 (Nagini 2) ನಟಿ ನಮ್ರತಾ ಗೌಡ (Namratha Gowda), ಹುಚ್ಚ ಚಿತ್ರದ ನಾಯಕಿ ರೇಖಾ (Rekha), ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಭೂಮಿಕಾ ಬಸವರಾಜ್(Bhoomika Basavaraj), ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್ ಧ್ರುವ, ಸೇರಿದಂತೆ ಹಲವರು ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss: ದೊಡ್ಮನೆಗೆ ಬರುವ ಮುನ್ನವೇ ವರ್ಷ ಕಾವೇರಿ- ವರುಣ್ ಬ್ರೇಕಪ್

    Bigg Boss: ದೊಡ್ಮನೆಗೆ ಬರುವ ಮುನ್ನವೇ ವರ್ಷ ಕಾವೇರಿ- ವರುಣ್ ಬ್ರೇಕಪ್

    ನ್ನಡದ ರೀಲ್ಸ್ ಸ್ಟಾರ್‌ಗಳಾಗಿ ಫೇಮಸ್ ಆಗಿದ್ದ ವರ್ಷ ಕಾವೇರಿ (Varsha Kaveri)- ವರುಣ್ ಆರಾಧ್ಯ (Varun Aradhya) ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾದ ಸುದ್ದಿಗೆ ಸ್ವತಃ ವರ್ಷ ಸ್ಪಷ್ಟನೆ ನೀಡಿದ್ದಾರೆ. ಬ್ರೇಕಪ್ ಆಗಿರುವ ಬಗ್ಗೆ ಅಧಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಎಲ್ಲರಿಗೂ ನಮಸ್ಕಾರ, ತುಂಬಾ ದಿನದಿಂದ ನೀವೆಲ್ಲ ನನಗೆ ಕೇಳಿದ್ದಂತಹ ಸಾಮಾನ್ಯ ಪ್ರಶ್ನೆ ಏನೆಂದರೆ ನಿನಗೂ, ವರುಣ್‌ಗೂ ಏನಾಯಿತೆಂದು. ಆ ವಿಷಯದ ಬಗ್ಗೆ ನಾನು ಇವತ್ತು ಮಾತನಾಡಲು ಮುಂದೆ ಬಂದಿದ್ದೇನೆ. ನಿಮಗೆಲ್ಲ ಗೊತ್ತಿರುವ ವಿಷಯ ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಅವನು ಸಹ ನನ್ನ ಬಿಟ್ಟು ಬೇರೆ ಹುಡುಗಿಯ ಜೊತೆ ಪ್ರೀತಿಯನ್ನು ಇಟ್ಟುಕೊಂಡಿದ್ದ. ನನಗೆ ಆ ಹುಡುಗಿಯ ಹೆಸರು ಹೇಳಲು ಇಷ್ಟವಿಲ್ಲ. ಏಕೆಂದರೆ ಇನ್ನೊಬ್ಬರ ಮನೆಯ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ಈ ವಿಷಯಕ್ಕಾಗಿ ಹಲವಾರು ಬಾರಿ ನನ್ನ- ವರುಣ್ (Varun) ಮಧ್ಯೆ ಮನಸ್ತಾಪಗಳು ಆಗಿತ್ತು. ನಾನು ಎಷ್ಟೇ ಹೇಳಿದರೂ ಸಹ ಅವನು ಆ ಹುಡುಗಿಯನ್ನು ಬಿಡೋದಿಕ್ಕೆ ತಯಾರಿರಲಿಲ್ಲ. ಆದ್ದರಿಂದ ಅವನೇ ಹೇಳಿದ ಹಾಗೆ ನನಗೆ ನಿನ್ನನ್ನು ಪ್ರೀತಿಸಲು ಇಷ್ಟವಿಲ್ಲ ಎಂದು ತಿಳಿಸಿದ್ದ.‌ ಇದನ್ನೂ ಓದಿ:‘ಬ್ಯಾಡ್ ಮ್ಯಾನರ್ಸ್’ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ

    ನಾನು ಆ ಹುಡುಗಿಯ ಜೊತೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಹೇಳಿದಾಗ ನನ್ನ ಮನಸ್ಸಿಗೆ ತುಂಬ ನೋವಾಯ್ತು. ಆದ್ದರಿಂದ ನಾನು ಕಳೆದ ಎರಡು ತಿಂಗಳಿಂದ ನನ್ನ, ವರುಣ್ ವಿಡಿಯೋಗಳನ್ನು ಅಪ್‌ಲೋಡ್ ಮಾಡ್ತಿಲ್ಲ. ನಮ್ಮನ್ನು ಪ್ರೀತಿಸುವ ಜನಗಳಿಗೆ ಹೇಳದಿದ್ರೆ ನನಗೆ ನಾನೇ ಮೋಸ ಮಡಿಕೊಳ್ತೀನಿ ಅಂತ ಮನಸ್ಸಿಗೆ ಅನಿಸಿದೆ. ಆದ್ದರಿಂದ ನಾನು ಇವತ್ತು ನಿಮ್ಮ ಮುಂದೆ ಈ ವಿಷಯವನ್ನು ಹೇಳಿಕೊಳ್ಳಲು ಇಷ್ಟಪಡ್ತಿದ್ದೀನಿ. ಇನ್ನು ಮುಂದೆ ನನ್ನ ವರುಣ್ ಮಧ್ಯೆ ಯಾವುದೇ ರೀತಿಯ ಪ್ರೀತಿ ಸಂಬಂಧ ಇರೋದಿಲ್ಲ. ಅವನು ಆ ಹುಡುಗಿ ಜೊತೆ ಖುಷಿಯಾಗಿರಲಿ.

    ನನ್ನನ್ನು ನಂಬಿಕೊಂಡು ನನ್ನ ಕುಟುಂಬ ಇದೆ, ನಾನು ಅವರಿಗಾಗಿ ಜೀವನವನ್ನು ನಡೆಸಬೇಕು, ಆದ್ದರಿಂದ ನಿಮಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳಿದ್ದೇನೆ, ಇನ್ನು ಮುಂದೆ ನನ್ನ ಜೀವನ ನನ್ನ ಇಷ್ಟದಂತೆ ನಡೆಯುತ್ತದೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿರಿ ಎಂದು ನಾನು ಭಾವಿಸಿರುವೆ. ಇದು ಯಾವುದೇ ಫ್ರ್ಯಾಂಕ್ ಅಲ್ಲ, ಕಳೆದ 2 ತಿಂಗಳುಗಳಿಂದ ನಾನು ಇದನ್ನೂ ಫೇಸ್ ಮಾಡುತ್ತಿದ್ದೇನೆ ಎಂದು ನಟಿ ಸ್ಪಷ್ಟನೆ ನೀಡಿದ್ದಾರೆ. ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ನಿಜವಾಗಿದೆ. ಆದರೆ ವರ್ಷ ಪೋಸ್ಟ್‌ಗೆ ಆಗಲಿ, ಈ ಸುದ್ದಿ ಸಂಬಂಧಿಸಿದಂತೆ ವರುಣ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಇನ್ನೂ ಈ ವರ್ಷದ ಬಿಗ್ ಬಾಸ್ ಸೀಸನ್ 10ಕ್ಕೆ (Bigg Boss Kannada 10) ವರ್ಷ-ವರುಣ್ ಜೋಡಿಯಾಗಿ ಬರುತ್ತಾರೆ ಎನ್ನಲಾಗಿತ್ತು. ಆದರೆ ಈಗ ಬ್ರೇಕಪ್ ಮೂಲಕ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಸಿಂಗಲ್ ಆಗಿ ಆದ್ರೂ ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್‌ಗೆ ಬರುತ್ತಾರಾ? ಕಾಯಬೇಕಿದೆ.

    ಕಳೆದ ಬಾರಿ ಪ್ರೇಮ ಪಕ್ಷಿಗಳಾಗಿ ಜಶ್ವಂತ್- ನಂದು (Nandu) ಬಂದಿದ್ದರು. ದೊಡ್ಮನೆ ಆಟ (Bigg Boss) ಮುಗಿದ ಮೇಲೆ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಈಗ ವರ್ಷ ಕಾವೇರಿ- ವರುಣ್ ದೊಡ್ಮನೆಗೆ ಕಾಲಿಡುವ ಮುನ್ನವೇ ಬ್ರೇಕಪ್ ಮಾಡಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    Bigg Boss Kannada 10 ಆರಂಭ- ಈ 3 ಸೀರಿಯಲ್‌ಗೆ ಗೇಟ್ ಪಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada) ಕಾರ್ಯಕ್ರಮ ಕನ್ನಡದಲ್ಲೂ ಶುರುವಾಗುತ್ತಿದೆ. ದೊಡ್ಮನೆ ಆಟಕ್ಕೆ ವೇದಿಕೆ ಸಜ್ಜಾಗುತ್ತಿದೆ. ಸೀಸನ್ 10 ಬರುತ್ತಿರುವ ಕಾರಣ ವಾಹಿನಿಯ ಜನಪ್ರಿಯ 3 ಸೀರಿಯಲ್‌ನ ಅಂತ್ಯ ಹಾಡ್ತಿದ್ದಾರೆ.

    ಅನುಬಂಧ ಅವಾರ್ಡ್ ಕಾರ್ಯಕ್ರಮ ಮುಗಿದ ಮೇಲೆ ಬಿಗ್ ಬಾಸ್ ಸೀಸನ್ 10ರ ಶೋ ಚಾಲನೆ ಎನ್ನಲಾಗಿತ್ತು. ಅದರಂತೆ ಅನುಬಂಧ ಕಾರ್ಯಕ್ರಮ ಮುಗಿದಿದೆ. ಟಿವಿಯಲ್ಲಿ ಪ್ರಸಾರವಾಗಬೇಕಿದೆ. ದೊಡ್ಮನೆ ಆಟ ಅಕ್ಟೋಬರ್ ಮೊದಲ ವಾರದಲ್ಲಿ ಶುರುವಾಗುತ್ತಿದೆ. ಈ ಹಿನ್ನಲೆ ಜಗನ್, ವಿಜಯಲಕ್ಷ್ಮಿ ನಟನೆಯ ಲಕ್ಷಣ(Lakshna), ದಿವ್ಯಾ ಸುರೇಶ್ (Divya Suresh) ನಟನೆಯ ತ್ರಿಪುರ ಸುಂದರಿ, ಪುಣ್ಯವತಿ ಸೀರಿಯಲ್ ಅಂತ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಹೃದಯಾಘಾತದಿಂದ ‘ಜೈಲರ್’ ನಟ ಮಾರಿಮುತ್ತು ನಿಧನ

    ವಾಹಿನಿಯ ಜನಪ್ರಿಯ ಸೀರಿಯಲ್‌ಗಳಾದ ಲಕ್ಷಣ, ತ್ರಿಪುರ ಸುಂದರಿ, ಪುಣ್ಯವತಿ ಧಾರಾವಾಹಿ ಅಂತ್ಯವಾಗುತ್ತಿರುವ ಬಗ್ಗೆ ವಾಹಿನಿ ಕಡೆಯಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.

    ಈ ಬಾರಿ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳಾಗಿ ನಮ್ರತಾ ಗೌಡ(Namratha Gowda), ಸುನೀಲ್ ರಾವ್, ಮೇಘಾ ಶೆಟ್ಟಿ(Megha Shetty), ಭೂಮಿಕಾ ಬಸವರಾಜ್, ಬಿಂದು ಗೌಡ ಸೇರಿದಂತೆ ಹಲವರು ಭಾಗಿಯಾಗುತ್ತಾರೆ ಎನ್ನಲಾಗ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Bossಗೆ ಇವರೇನಾ ಸ್ಪರ್ಧಿಗಳು? ಸೋಷಿಯಲ್‌ ಮೀಡಿಯಾದಲ್ಲಿ ಪಟ್ಟಿ ವೈರಲ್‌

    Bigg Bossಗೆ ಇವರೇನಾ ಸ್ಪರ್ಧಿಗಳು? ಸೋಷಿಯಲ್‌ ಮೀಡಿಯಾದಲ್ಲಿ ಪಟ್ಟಿ ವೈರಲ್‌

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 10) ದಿನಗಣನೆ ಶುರುವಾಗಿದೆ. ಈಗಾಗಲೇ ತೆಲುಗಿನ ಬಿಗ್ ಬಾಸ್‌ಗೆ ಚಾಲನೆ ಸಿಕ್ಕಿರುವ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಸೀಸನ್ 10ರ ಕಾರ್ಯಕ್ರಮದಲ್ಲಿ ಇವರೆಲ್ಲಾ ಸ್ಪರ್ಧಿಸುತ್ತಾರಾ?

    ಬಿಗ್ ಬಾಸ್ 10ನೇ ಸೀಸನ್ ಆಗಿರುವ ಕಾರಣ ಒಟಿಟಿ ಇಲ್ಲದೇ ಟಿವಿ ಬಿಗ್ ಬಾಸ್ ಶುರು ಮಾಡಲು ವಾಹಿನಿ ನಿರ್ಧರಿಸಿದೆ. ದೊಡ್ಮನೆ ಆಟಕ್ಕೆ ತೆರೆಮರೆಯಲ್ಲಿ ಎಲ್ಲಾ ತಯಾರಿ ಕೂಡ ನಡೆಯುತ್ತಿದೆ. ಹಾಗಾದ್ರೆ ಯಾರೆಲ್ಲಾ ಸ್ಟಾರ್‌ಗಳ ಹೆಸರು ಸದ್ದು ಮಾಡ್ತಿದೆ. ಇಲ್ಲಿದೆ ಮಾಹಿತಿ.

    artist_48037_megha-shetty-photos-images-86684

    ಟಿವಿ ಲೋಕದ ಸ್ಟಾರ್ ನಟಿ ಮೇಘಾ ಶೆಟ್ಟಿ (Megha Shetty) ಅವರು ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಈಗಾಗಲೇ ‘ದಿಲ್ ಪಸಂದ್’ ಮತ್ತು ‘ತ್ರಿಬಲ್ ರೈಡಿಂಗ್’ (Triple Riding) ಚಿತ್ರಗಳು ರಿಲೀಸ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೇಘಾ ಕೂಡ ದೊಡ್ಮನೆಗೆ ಬರುತ್ತಾರೆ ಎಂದು ಚರ್ಚೆಯಾಗುತ್ತಿದೆ.

    ಸುನೀಲ್ ರಾವ್ (Sunil Rao) ಎಂದಾಕ್ಷಣ ಮೊದಲು ನೆನಪಾಗೋದು ರಮ್ಯಾ(Ramya), ಅಜಯ್ ರಾವ್ ಜೊತೆಗಿನ ಎಕ್ಸ್‌ಕ್ಯೂಸ್‌ ಮಿ (Excuse Me) ಸಿನಿಮಾ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರು ಚಿತ್ರರಂಗದಲ್ಲಿ ನಾಯಕನಾಗಿ ನಿಲ್ಲಲು ಸುನೀಲ್ ರಾವ್‌ಗೆ ಅದೃಷ್ಟ ಒಲಿಯಲಿಲ್ಲ. ಈಗ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸುತ್ತಾ, ಉದ್ಯಮಿಯಾಗಿ ಸುನೀಲ್ ಗುರುತಿಸಿಕೊಳ್ತಿದ್ದಾರೆ.

    ‘ನಾಗಿಣಿ 2’ (Nagini 2) ಸೀರಿಯಲ್‌ನ ಜೋಡಿ ನಿನಾದ್ ಹರಿತ್ಸ (Ninaad Harithsa) ಮತ್ತು ನಮ್ರತಾ ಗೌಡ (Namratha Gowda) ಇಬ್ಬರ ಹೆಸರು ಕೂಡ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ನಮ್ರತಾ, ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ ಕಲಾವಿದೆ. ಕಿರುತೆರೆಯಲ್ಲಿ ಸಿಕ್ಕ ಬ್ರೇಕ್, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ಸಿಗಲಿಲ್ಲ. ಇನ್ನೂ ನಟನೆ ಮತ್ತು ಗಾಯನದ ಮೂಲಕ ನಿನಾದ್ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಮಿಲಿಯನ್ ಗಡಿ ದಾಟಿದ ಸೋನು ಬಿಕಿನಿ ವಿಡಿಯೋ

    ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ (Rakshak Bullet Prakash) ಅವರು ‘ಗುರು ಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈಗ ದೊಡ್ಮನೆಗೆ ಕಾಲಿಡುತ್ತಾರೆ ಎಂದು ರಕ್ಷಕ್ ಸುದ್ದಿಯಲ್ಲಿದ್ದಾರೆ.

    ಪ್ರತಿ ಸೀಸನ್‌ನಲ್ಲೂ ಸಿಂಗರ್‌ಗಳಿಗೆ ಬಿಗ್ ಬಾಸ್ ಟೀಂ ಗಾಳ ಹಾಕುತ್ತಾರೆ. ಅದರಂತೆ ಈ ಬಾರಿ ರ‍್ಯಾಪರ್-ಸಿಂಗರ್ ಇಶಾನಿ (Eshani) ಕೂಡ ಬರುತ್ತಾರೆ ಎಂದು ಹೇಳಲಾಗುತ್ತಿದೆ.

    ಕಳೆದ ವರ್ಷ ಡ್ರೋನ್ ಪ್ರತಾಪ್ (Drone Prathap) ಅವರು ಬಿಗ್ ಬಾಸ್‌ಗೆ(Bigg Boss Kannada) ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬರಲಿಲ್ಲ. ಈ ಬಾರಿ ಕೂಡ ದೊಡ್ಮನೆಗೆ ಬರುವ ಅವಕಾಶ ಸಿಕ್ಕಿದೆ. ಒಪ್ಪಿ ಮನೆಗೆ ಬರುತ್ತಾರಾ ಕಾಯಬೇಕಿದೆ.

    ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಧನುಶ್ರೀ, ಸೋನು ಗೌಡಗೆ ಕಳೆದ ಬಾರಿ ಅವಕಾಶ ನೀಡಿದ್ದರು. ಈ ಬಾರಿ ಶಿಲ್ಪಾ ಗೌಡ(Shilpa Gowda), ಭೂಮಿಕಾ ಬಸವರಾಜ್(Bhumika Basavaraj), ಬಿಂದು ಗೌಡ ಬರಲಿದ್ದಾರೆ ಎನ್ನಲಾಗುತ್ತಿದೆ. ಶೋ ಶುರುವಾಗುವ ಸಮಯದಲ್ಲಿ ಅಧಿಕೃತ ಮಾಹಿತಿ ಸಿಗಲಿದೆ.

    ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಸಮ್‌ಥಿಂಗ್ ಸ್ಪೆಷಲ್ ಆಗಿ ಈ ಸೀಸನ್ ಇರಲಿದೆ ಎಂಬುದನ್ನ ವಾಹಿನಿ ತಿಳಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಆಟ ಶುರುವಾಗಲಿದೆ. ಅಷ್ಟರ ಒಳಗೆ ನಟ ಕಮ್ ನಿರೂಪಕ ಸುದೀಪ್, ಈಗಾಗಲೇ ಒಪ್ಪಿರುವ ಸಿನಿಮಾಗಳ ಕೆಲಸ ಮುಗಿಸಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Boss Kannada 10: ಬಿಗ್‌ ಬಾಸ್‌ ಶೋನಲ್ಲಿ ಯಾರೆಲ್ಲಾ ಇದ್ದಾರೆ?

    Bigg Boss Kannada 10: ಬಿಗ್‌ ಬಾಸ್‌ ಶೋನಲ್ಲಿ ಯಾರೆಲ್ಲಾ ಇದ್ದಾರೆ?

    ಹಿಂದಿ ಬಿಗ್ ಬಾಸ್ ಒಟಿಟಿ 2ಗೆ ತೆರೆ ಬಂದಿರುವ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಚಾಲನೆ ನೀಡುವ ಸೂಚನೆ ಸಿಕ್ಕಿದೆ. ಒಟಿಟಿ ಬಿಗ್ ಬಾಸ್ ಯೋಜನೆಗೆ ಬ್ರೇಕ್ ಹಾಕಿ, ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada) ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಈ ಮೂಲಕ ಟಿವಿ ಬಿಗ್ ಬಾಸ್ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ.ಇದನ್ನೂ ಓದಿ:ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದ ಮೆಗಾಸ್ಟಾರ್‌ ಚಿರಂಜೀವಿ

    ಬಿಗ್ ಬಾಸ್ ಕಾರ್ಯಕ್ರಮ ಎಲ್ಲಿ ನಡೆಯುತ್ತೆ? ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎನ್ನುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಕ್ಕೆ ಚರ್ಚೆ ನಡೆಯುತ್ತಿದೆ. ಈ ಬಾರಿ ಹೊಸ ಸೀಸನ್‌ನಲ್ಲಿ ನಾಗಿಣಿ 2 (Nagini 2) ನಟಿ ನಮ್ರತಾ ಗೌಡ (Namratha Gowda), ಹುಚ್ಚ ಚಿತ್ರದ ನಾಯಕಿ ರೇಖಾ (Rekha), ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಭೂಮಿಕಾ ಬಸವರಾಜ್(Bhoomika Basavaraj), ವರ್ಷ ಕಾವೇರಿ, ಅಗ್ನಿಸಾಕ್ಷಿ ರಾಜೇಶ್ ಧ್ರುವ, ಸೇರಿದಂತೆ ಹಲವರು ದೊಡ್ಮನೆಗೆ ಕಾಲಿಡಲಿದ್ದಾರೆ ಎನ್ನಲಾಗ್ತಿದೆ.

    ಎಲ್ಲರ ನೆಚ್ಚಿನ ಕನ್ನಡದ ಬಿಗ್ ಬಾಸ್ ಈಗ ವಾಪಸ್ಸಾಗ್ತಿದೆ. ಕಳೆದ ಸಲ ಮೊಟ್ಟಮೊದಲ ಬಾರಿಗೆ ಒಟಿಟಿಯಲ್ಲಿ ಬಂದ ಬಿಗ್ ಬಾಸ್ ಬೇರೆಯೇ ಹಂತಕ್ಕೆ ತಲುಪಿತ್ತು. ಅದೇ ಫಾರ್ಮುಲಾ ಈ ಬಾರಿನೂ ಮುಂದುವರೆಯುತ್ತೆ ಎನ್ನಲಾಗಿತ್ತು. ಆದರೆ, ಈ ಬಾರಿ ಬಿಗ್ ಬಾಸ್ ಓಟಿಟಿ (Bigg Boss 2) ಆಟಕ್ಕೆ ಬ್ರೇಕ್ ಕೊಡಲಾಗಿದೆ. ಮೊದಲು ಒಟಿಟಿ ಆ ನಂತರ ಟಿವಿಗೆ ಅನ್ನೋ ಕಾನ್ಸೆಪ್ಟ್ ಅನ್ನು ಕೈ ಬಿಟ್ಟಿದೆ ವಾಹಿನಿ.

    ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ದಿನಾಂಕ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮುಂತಾದವುಗಳ ಬಗ್ಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿದೆ. ವಾಹಿನಿಯ ಕಡೆಯಿಂದ ಬಿಗ್ ಬಾಸ್ ಸೀಸನ್ 10ಕ್ಕೆ(Bigg Boss Kannada 10) ಭರ್ಜರಿ ತಯಾರಿ ಮಾಡಿಕೊಂಡಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ತಯಾರಿಯಲ್ಲಿದ್ದಾರೆ. ಇದರ ಜೊತೆ ಜೊತೆಗೆ ಬಿಗ್ ಬಾಸ್ ಸೀಸನ್ 10ಕ್ಕೆ ತೆರೆಮರೆಯಲ್ಲಿ ತಯಾರಿ ಕೂಡ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಈ ಅವಾರ್ಡ್ಸ್ ಕಾರ್ಯಕ್ರಮ ನಡೆಯಲಿದ್ದು, ಇದು ಮುಗಿದ ನಂತರ ಕೊನೆಯ ವಾರದ ವೇಳೆಗೆ ಸುದೀಪ್‌ (Kiccha Sudeep) ನಿರೂಪಣೆಯಲ್ಲಿ ಬಿಗ್ ಬಾಸ್ ಆರಂಭ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]