Tag: ಬಿಗ್‌ ಬಾಸ್‌ ಮರಾಠಿ 5

  • Bigg Boss: ‘ಬಿಗ್‌ ಬಾಸ್‌’ಗೆ ಎಂಟ್ರಿ ರಾಖಿ ಸಾವಂತ್

    Bigg Boss: ‘ಬಿಗ್‌ ಬಾಸ್‌’ಗೆ ಎಂಟ್ರಿ ರಾಖಿ ಸಾವಂತ್

    ಕಿರುತೆರೆಯ ಜನಪ್ರಿಯ ಶೋ ದೊಡ್ಮನೆ ಆಟಕ್ಕೆ ಡ್ರಾಮಾ ಕ್ವೀನ್ ರಾಖಿ ಸಾವಂತ್ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ 11ರ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದರ ನಡುವೆ ಮರಾಠಿ ‘ಬಿಗ್ ಬಾಸ್ ಸೀಸನ್ 5’ಕ್ಕೆ (Bigg Boss Marati 5) ರಾಖಿ ಸಾವಂತ್ (Rakhi Sawant) ಆಗಮಿಸಿದ್ದಾರೆ.

     

    View this post on Instagram

     

    A post shared by Colors Marathi (@colorsmarathi)

    ರಿತೇಶ್ ದೇಶ್‌ಮುಖ್ ನಿರೂಪಣೆಯ ಮರಾಠಿ ಬಿಗ್ ಬಾಸ್‌ಗೆ ರಾಖಿ ಆಗಮಿಸಿದ್ದಾರೆ. ಈ ಕುರಿತ ಪ್ರೋಮೋವೊಂದನ್ನು ವಾಹಿನಿ ಹಂಚಿಕೊಂಡಿದೆ. ಇದರಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಎಂಟ್ರಿ ಕೊಟ್ಟಿದ್ದು, ಹಲೋ ಬಿಗ್ ಬಾಸ್ ನಾನು ಮತ್ತೆ ಬಂದಿದ್ದೇನೆ ಎಂದಿದ್ದಾರೆ.

    ಬಳಿಕ ಸ್ಪರ್ಧಿ ನಿಕ್ಕಿ ತಂಬೋಲಿ ರಾಖಿ ಕ್ವಾಟ್ಲೆ ಕೊಟ್ಟಿದ್ದಾರೆ. ರಾಖಿ ಮಾತಿಗೆ ನಿಕ್ಕಿ ಮುಖ ಕಿವುಚಿಕೊಂಡಿದ್ದಾರೆ. ಒಟ್ನಲ್ಲಿ ಇಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರೋದು ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ.

  • Bigg Boss: ದೊಡ್ಮನೆ ಆಟ ಶುರು- ನಿರೂಪಕನಾಗಿ ರಿತೇಶ್‌ ದೇಶ್‌ಮುಖ್‌ ಎಂಟ್ರಿ

    Bigg Boss: ದೊಡ್ಮನೆ ಆಟ ಶುರು- ನಿರೂಪಕನಾಗಿ ರಿತೇಶ್‌ ದೇಶ್‌ಮುಖ್‌ ಎಂಟ್ರಿ

    ‘ಬಿಗ್ ಬಾಸ್ ಕನ್ನಡ ಸೀಸನ್ 10′ (Bigg Boss Kannada 10) ಮುಗಿಯುತ್ತಿದ್ದಂತೆ ಮರಾಠಿ ಬಿಗ್ ಬಾಸ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಕಲರ್ಸ್‌ ವಾಹಿನಿಯ ಬಿಗ್ ಬಾಸ್ ಮರಾಠಿ ಸೀಸನ್ 5ರ (Bigg Boss Marathi 5) ನಿರೂಪಕನಾಗಿ ರಿತೇಶ್ ದೇಶ್‌ಮುಖ್ (Riteish Deshmukh) ಎಂಟ್ರಿ ಕೊಟ್ಟಿದ್ದಾರೆ. ಈ ಕುರಿತ ಪ್ರೋಮೋ ಕೂಡ ರಿಲೀಸ್ ಆಗಿ ಪ್ರೇಕ್ಷಕರ ಗಮನ ಸೆಳೆದಿದೆ.

    ‘ಬಿಗ್ ಬಾಸ್’ ಮರಾಠಿ ಸೀಸನ್ 5ರ ಆ್ಯಂಕರ್ ಬದಲಾಗಿದ್ದಾರೆ. ಈ ಹಿಂದೆ ಮಹೇಶ್ ಮಂಜ್ರೇಕರ್ ನಿರೂಪಕರಾಗಿದ್ದರು. ಈಗ ಆ ಜಾಗಕ್ಕೆ ಬಾಲಿವುಡ್ ನಟ ರಿತೇಶ್ ದೇಶ್‌ಮುಖ್ ಬಂದಿದ್ದಾರೆ. ನೀಲಿ ಬಣ್ಣದ ಸೂಟ್‌ನಲ್ಲಿ ರಿತೇಶ್ ಸಖತ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಾಲಿವುಡ್ ಚಿತ್ರಕ್ಕಾಗಿ ಮಡಿವಂತಿಕೆ ಬಿಟ್ಟು ಲಿಪ್‌ಲಾಕ್ ಮಾಡೋಕೆ ಸಜ್ಜಾದ ಕೀರ್ತಿ ಸುರೇಶ್

    ಈ ಪ್ರೋಮೋ ನೋಡ್ತಿದ್ದಂತೆ ಫ್ಯಾನ್ಸ್, ಈಗ ಈ ಶೋಗೆ ಕಳೆ ಬಂದಿದೆ. ಈ ಕಾರ್ಯಕ್ರಮಕ್ಕೆ ಅವರೇ ಸರಿಯಾದ ನಿರೂಪಕ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ಒಟ್ಟನಲ್ಲಿ ಮರಾಠಿ ಬಿಗ್ ಬಾಸ್ ಆರಂಭಕ್ಕೂ ಮುನ್ನ ಭಾರೀ ಸದ್ದು ಮಾಡುತ್ತಿದೆ.

    ಬಾಲಿವುಡ್ (Bollywood) ಸಿನಿಮಾಗಳ ಮೂಲಕ ಗಮನ ಸೆಳೆದಿರುವ ರಿತೇಶ್, ‘ವೇದ್’ (Ved Film) ಚಿತ್ರದ ಮೂಲಕ ಮರಾಠಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಮರಾಠಿ ಸಿನಿಮಾಗಳನ್ನು ನಟಿಸಿ, ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಅವರು ಬಿಗ್ ಬಾಸ್ ಮೂಲಕ ಟಿವಿ ಪರದೆ ಬರುತ್ತಿರೋದು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.