Tag: ಬಿಗ್ ಬಾಸ್ ಮನೆ

  • BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    BBK 12 | ಈ ಅವಮಾನ ಯಾವತ್ತೂ ಮರೆಯೋಕಾಗಲ್ಲ; ದೊಡ್ಮನೆಯಲ್ಲಿ ಗಳಗಳನೆ ಅತ್ತ ಅಶ್ವಿನಿ ಗೌಡ

    ಬಿಗ್‌ಬಾಸ್ ಮನೆಯ ರೆಬೆಲ್ ಕಂಟೆಸ್ಟೆಂಟ್‌ ಅಶ್ವಿನಿ ಗೌಡ (Ashwini Gowda) ಗಳಗಳನೆ ಅತ್ತಿದ್ದಾರೆ. ಬಿಗ್‌ ಬಾಸ್ ಮನೆಯಲ್ಲಿ ಅವಮಾನ ಆಗ್ತಿದೆ. ಅದನ್ನ ಮರೆಯೋಕೆ ಸಾಧ್ಯವಿಲ್ಲ, ಮರೆತು ಮುಂದೆ ಹೋಗೋಕೂ ಸಾಧ್ಯವಿಲ್ಲ ಎಂದು ಬಿಕ್ಕಿದ್ದಾರೆ.

    ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಎಂದೇ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ತಿರಸ್ಕಾರ ಭಾವನೆ ಅನುಭವಿಸಿದ್ದಕ್ಕೆ ಬೇಸರದಿಂದ ಅತ್ತು ಕರೆದು ಗೋಳಾಡಿದ್ದಾರೆ.

    ಬಿಗ್‌ ಬಾಸ್ ಕನ್ನಡ (Bigg Boss Kannada) ಸೀಸನ್ 12ರ ಮೊದಲ ಕ್ಯಾಪ್ಟನ್ಸಿ ಟಾಸ್ಕ್ ನಡೆಯೋದಕ್ಕೆ ಘೋಷಣೆಯಾಗಿತ್ತು. ಆದರೆ ಈ ಟಾಸ್ಕ್‌ನಿಂದ ಒಬ್ಬ ಕಂಟೆಸ್ಟೆಂಟ್‌ನ್ನು ಕೈಬಿಡಲು ಸೂಚಿಸುವ ಅಧಿಕಾರವನ್ನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರೋ ಕಂಟೆಸ್ಟೆಂಟ್‌ಗಳಿಗೆ ನೀಡಲಾಗಿತ್ತು. ರಿಶಾ ಗೌಡ, ಸೂರಜ್ ಸಿಂಗ್ ಹಾಗೂ ಮ್ಯೂಟಂಟ್ ರಘು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಅಶ್ವಿನಿ ಗೌಡರನ್ನ ಟಾರ್ಗೆಟ್ ಮಾಡಿದ್ದಾರೆ.

    ʻಈಗಲೇ ಸರ್ವಾಧಿಕಾರಿ ಧೋರಣೆ ತೋರಿಸುತ್ತಿರುವ ಅಶ್ವಿನಿ ಗೌಡ ಕ್ಯಾಪ್ಟನ್ ಆಗ್ಬಿಟ್ರೆ ಉಳಿದ ಕಂಟೆಸ್ಟೆಂಟ್‌ಗಳಿಗೆ ಕಷ್ಟ ಆಗಬಹುದುʼ ಎಂಬ ಕಾರಣ ಕೊಟ್ಟು ಕ್ಯಾಪ್ಟೆನ್ಸಿ ಟಾಸ್ಕ್‌ನಕಿಂದ ಹೊರಗಿಟ್ಟಿದ್ದಾರೆ. ಈ ವಿರೋಧದಿಂದ ತೀವ್ರವಾಗಿ ಅಸಮಾಧಾನಗೊಂಡ ಅಶ್ವಿನಿ ನೊಂದು ಬಿಕ್ಕಿದ್ದಾರೆ. ಕ್ಯಾಪ್ಟೆನ್ಸಿ ಟಾಸ್ಕ್‌ನಿಂದ ದೂರ ಉಳಿಯುವಂತೆ ಮಾಡಿದ್ದಕ್ಕೆ ʻಬಿಗ್‌ಬಾಸ್ ಮನೆಯಲ್ಲಿ ತಮಗೆ ಅವಮಾನ ಆಗುತ್ತಿದೆ. ಇದನ್ನ ಯಾವತ್ತೂ ಮರೆಯೋಕಾಗಲ್ಲ. ರೇಸ್‌ಗೆ ಬಿಡದಿದ್ದರೆ ಯಾವ್ ಕುದುರೆ ಸ್ಟ್ರಾಂಗ್‌ ಅಂತ ಹೇಗೆ ಡಿಸೈಡ್ ಮಾಡೋದುʼ ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಅಶ್ವಿನಿ.

    ಇದು ಮೊದಲ ವಾರದ ಕ್ಯಾಪ್ಟೆನ್ಸಿ ಟಾಸ್ಕ್ ಆಗಿದ್ದು ಇಲ್ಲಿ ಸ್ಪರ್ಧೆ ಮಾಡ್ಬೇಕು ಅನ್ನೋದು ಅಶ್ವಿನಿ ಆಸೆಯಾಗಿತ್ತು. ಇದ್ರಿಂದ ಬೇಸರವಾಗಿ ತಿರಸ್ಕಾರವನ್ನ ಮನಸ್ಸಿಗೆ ತೆಗೆದುಕೊಂಡು ಅಶ್ವಿನಿ ಗೌಡ ಗಳಗಳನೆ ಅತ್ತಿದ್ದಾರೆ.

  • Bigg Boss Kannada 10: ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಬೆಂಗಳೂರಿನಲ್ಲಿ ನಿರ್ಮಾಣ

    Bigg Boss Kannada 10: ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಬೆಂಗಳೂರಿನಲ್ಲಿ ನಿರ್ಮಾಣ

    ಬಾರಿಯ ಬಿಗ್ ಬಾಸ್ (Bigg Boss Kannada) ಹತ್ತು ಹಲವು ಕಾರಣಗಳಿಂದಾಗಿ ವಿಶೇಷ ಅನಿಸಿದೆ. ಕಾರ್ಯಕ್ರಮವು ಹೇಗೆ ವಿಭಿನ್ನವಾಗಿ ರೂಪಿತವಾಗುತ್ತಿದೆಯೋ, ಹಾಗೆಯೇ ಬಿಗ್ ಬಾಸ್ ಮನೆ (Bigg Boss House) ಕೂಡ ಹೊಸ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಹಲವು ವರ್ಷಗಳ ಕಾಲ ಬಿಗ್ ಬಾಸ್ ಮನೆಯನ್ನು ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ನಿರ್ಮಾಣವಾಗುತ್ತಿತ್ತು. ವರ್ಷದಿಂದ ವರ್ಷಕ್ಕೆ ಸಣ್ಣ ಮಟ್ಟದಲ್ಲಿ ಬದಲಾವಣೆ ಮಾಡಿಕೊಂಡು ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಈ ವರ್ಷ ಎಲ್ಲವೂ ಬದಲಾಗಿದೆ.

    ಈ ಬಾರಿ ಇನೋವೆಟಿವ್ ಫಿಲ್ಮ್ ಸಿಟಿಯಲ್ಲಿ ಬಿಗ್ ಬಾಸ್ ನಡೆಯುತ್ತಿಲ್ಲ. ಬದಲಾಗಿ ಬೆಂಗಳೂರಿನ ದೊಡ್ಡ ಆಲದ ಮರದ ಬಳಿ ಮನೆಯನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಇದು ಭಾರತದಲ್ಲೇ ಅತೀ ದೊಡ್ಡ ಬಿಗ್ ಬಾಸ್ ಮನೆ ಎಂಬ ಖ್ಯಾತಿಗೆ ಪಾತ್ರವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪ್ರಶಾಂತ್ ನಾಯಕ್ ಈ ವಿಷಯದ ಕುರಿತು ಮಾತನಾಡಿ, ವಿಸ್ತೀರ್ಣದ ವಿಷಯದಲ್ಲಿ ಇದು ದೊಡ್ಡ ಮನೆ ಎಂದರು.

    ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ದಾಖಲೆ ಏನು?

    ಕನ್ನಡದ ಬಿಗ್ ಬಾಸ್ ನಾನಾ ಕಾರಣಗಳಿಂದಾಗಿ ವಿಶೇಷ ಮತ್ತು ಹೊಸತು ಅನಿಸುತ್ತದೆ. ಇಂತಹ ಶೋ ಮೂಲಕ ಕಿಚ್ಚ ಸುದೀಪ್ (Sudeep)ದಾಖಲೆಯೊಂದನ್ನು ಬರೆದಿದ್ದಾರೆ. ಆ ದಾಖಲೆಯನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯೇ ಇಂದು ಬಹಿರಂಗ ಪಡಿಸಿದೆ. ಈ ಮೂಲಕ ಸುದೀಪ್‍ ವೃತ್ತಿ ಬದುಕಿಗೆ ಇದೊಂದು ಗೌರವದ ಸಂಗತಿಯೂ ಆಗಿದೆ.

    ಭಾರತದಾದ್ಯಂತ ಬಿಗ್ ಬಾಸ್ ಶೋಗಳು ಆಯೋಜನೆಯಾಗಿವೆ. ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಕಡೆ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರವಾಗುತ್ತದೆ. ಈ ಎಲ್ಲ ಶೋಗಳಲ್ಲೂ ನಿರೂಪಕರು ಬದಲಾಗಿದ್ದಾರೆ. ಆದರೆ, ಮೊದಲ ಸೀಸನ್ ನಿಂದ ಈವರೆಗೂ ಕನ್ನಡದಲ್ಲಿ ನಿರೂಪಕರು ಬದಲಾಗಿಲ್ಲ. ಸುದೀಪ್ ಅವರೇ ಹತ್ತೂ ಸೀಸನ್ ಗಳನ್ನು ನಡೆಸಿಕೊಂಡು ಬಂದು ದಾಖಲೆ ಬರೆದಿದ್ದಾರೆ. ಇಂತಹ ದಾಖಲೆಯನ್ನು ಬೇರೆ ಯಾವ ಭಾಷೆಯಲ್ಲೂ ನಡೆದಿಲ್ಲ ಎನ್ನುವುದು ವಿಶೇಷ.

     

    ಕೇವಲ ಟಿವಿಯಲ್ಲಿ ಪ್ರಸಾರವಾಗುವ ಶೋ ಮಾತ್ರವಲ್ಲ, ಓಟಿಟಿಗಾಗಿ ಬಿಗ್ ಬಾಸ್ ಆಯೋಜನೆ ಮಾಡಿದ್ದರೂ, ಅದನ್ನೂ ಸುದೀಪ್ ಅವರೇ ನಡೆಸಿಕೊಂಡು ಬಂದಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಅಡುಗೆ ರೀತಿಯ ಕಾರ್ಯಕ್ರಮವನ್ನೂ ಅವರು ಆಯೋಜನೆ ಮಾಡಿದ್ದಾರೆ. ಈ ಎಲ್ಲ ಕಾರಣದಿಂದಾಗಿ ಸುದೀಪ್ ವಿಶೇಷ ಅನಿಸುತ್ತಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]