Tag: ಬಿಗ್‌ ಬಾಸ್‌ ತೆಲುಗು 7

  • BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    BBK 11: ಕೊನೆಗೂ ಅನಾವರಣ ಆಯ್ತು ಶೋಭಾ ಶೆಟ್ಟಿ ಅಸಲಿ ಮುಖ

    ಕಿರುತೆರೆಯ ಜನಪ್ರಿಯ ‘ಅಗ್ನಿಸಾಕ್ಷಿ’ (Agnisakshi) ಸೀರಿಯಲ್‌ನಲ್ಲಿ ತನು ಪಾತ್ರದ ಮೂಲಕ ಗಮನ ಸೆಳೆದಿದ್ದ ಶೋಭಾ ಶೆಟ್ಟಿ ಆ ನಂತರ ತೆಲುಗು ಕಿರುತೆರೆಯತ್ತ ಮುಖ ಮಾಡಿದರು. ‘ಬಿಗ್ ಬಾಸ್ ತೆಲುಗು 7’ರಲ್ಲಿ ರಂಜಿಸಿದ್ದ ನಟಿ ಇದೀಗ ಮತ್ತೆ ಕನ್ನಡದ ಬಿಗ್ ಬಾಸ್ 11ರಲ್ಲಿ ಫೈರ್ ಲೇಡಿಯಾಗಿ ಅಬ್ಬರಿಸುತ್ತಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿರುವ ಶೋಭಾ ಅವರ ಅಸಲಿ ಮುಖ ಅನಾವರಣ ಆಗಿದೆ.

    ಶೋಭಾ ಶೆಟ್ಟಿ (Shobha Shetty)  ‘ಬಿಗ್ ಬಾಸ್’ನಲ್ಲಿ ಅವರು ಯಾವಾಗಲೂ ಅಗ್ರೆಸ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಈಗ ಭಾವನಾತ್ಮಕ ಮುಖವನ್ನು ತೋರಿಸಿದ್ದಾರೆ. ಕುಟುಂಬಸ್ಥರನ್ನು ನೆನೆದು ನಟಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ:ದುಬೈನಲ್ಲಿ ಸ್ಯಾಂಡಲ್‌ವುಡ್ ನಟಿಮಣಿಯರ ಮಸ್ತಿ

    ಕೆಲಸಗಳ ಕಾರಣಕ್ಕೆ ಕಳೆದ 10 ವರ್ಷಗಳಲ್ಲಿ ನಾನು ಕುಟುಂಬಕ್ಕೆ ಹೆಚ್ಚು ಟೈಮ್ ನೀಡೋಕೆ ಆಗಿಲ್ಲ. ನಾನು ಕುಟುಂಬದ ಜೊತೆ ಸಾಕಷ್ಟು ಕನೆಕ್ಟ್ ಆಗಿದ್ದೇನೆ. ನನ್ನ ಮೊದಲ ಆದ್ಯತೆ ಕುಟುಂಬ ಎಂದು ಶೋಭಾ ಭಾವುಕರಾದರು.

    ಸೆಟ್‌ನಲ್ಲಿ ಫ್ಯಾಮಿಲಿಗೆ ಸಂಬಂಧಿಸಿದ ದೃಶ್ಯ ನಡೆದರೆ ಅದು ನನಗೆ ಕನೆಕ್ಟ್ ಆಗುತ್ತದೆ. ಬೇರೆ ಭಾಷೆಯಲ್ಲಿ ನಾವು ಹೋಗಿ ಕೆಲಸ ಮಾಡಬೇಕು ಎಂದರೆ ಅದು ಅಷ್ಟು ಸುಲಭ ಅಲ್ಲ. ನಾನು ಪ್ರತಿ ಕ್ಷಣ ಕುಟುಂಬದವರನ್ನು ಮಿಸ್ ಮಾಡಿಕೊಳ್ಳುತ್ತಲೇ ಇರುತ್ತೇನೆ ಎಂದಿದ್ದಾರೆ ಶೋಭಾ.

    ಶೋಭಾ ಶೆಟ್ಟಿ ಇದನ್ನು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಅವರು ಅಳುತ್ತಿರುವುದನ್ನು ನೋಡಿ ಅನೇಕರು ಅಚ್ಚರಿ ಹೊರಹಾಕಿದ್ದಾರೆ. ಶೋಭಾಗೆ ಹೀಗೊಂದು ಮುಖ ಇದೆಯೇ ಎಂಬ ಪ್ರಶ್ನೆ ಅನೇಕರಿಗೆ ಮೂಡಿದೆ.

    ಅಂದಹಾಗೆ, ಶೋಭಾ ಅವರು ‘ಕಾರ್ತಿಕ ದೀಪಂ’ ಸೀರಿಯಲ್‌ನಲ್ಲಿ ನಟಿಸಿದರು. ತಮ್ಮ ಮನೋಜ್ಞ ನಟನೆಯ ಮೂಲಕ ತೆಲುಗು ಪ್ರೇಕ್ಷಕರಿಗೆ ನಟಿ ಹತ್ತಿರವಾಗಿದ್ದಾರೆ.

  • Bigg Boss: ನಿರೂಪಣೆಯತ್ತ ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ

    Bigg Boss: ನಿರೂಪಣೆಯತ್ತ ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ

    ನ್ನಡದ ಅಗ್ನಿಸಾಕ್ಷಿ ನಟಿಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಶುರುವಾಗಿದೆ. ಅದಕ್ಕೆ ಕಾರಣ, ‘ಬಿಗ್ ಬಾಸ್ ತೆಲುಗು’ 7ರಲ್ಲಿ (Bigg Boss Telagu 7) ನಟಿ ಸ್ಪರ್ಧಿಯಾಗಿ ಪ್ರೇಕ್ಷಕರ ಮನಗೆದ್ದಿದ್ದು, ನಟನೆಯ ಜೊತೆಗೆ ನಿರೂಪಣೆಯತ್ತ ಶೋಭಾ ಶೆಟ್ಟಿ (Shobha Shetty) ಮುಖ ಮಾಡಿದ್ದಾರೆ.

    ನಾಗಾರ್ಜುನ ನಿರೂಪಣೆ ಬಿಗ್ ಬಾಸ್‌ನಲ್ಲಿ ಶೋಭಾ ಸ್ಟ್ರಾಂಗ್ ಸ್ಪರ್ಧಿಯಾಗಿ ಹೈಲೆಟ್ ಆಗಿದ್ದರು. ಇದಾದ ನಂತರ ಶೋಭಾ ಏನ್ಮಾಡ್ತಾರೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಈಗ ಆ್ಯಂಕರ್ ಆಗಿ ನಟಿ ಭಡ್ತಿ ಪಡೆದಿದ್ದಾರೆ. ‘ಕಾಫಿ ವಿತ್ ಶೋಭಾ ಶೆಟ್ಟಿ’ ಕಾರ್ಯಕ್ರಮದಲ್ಲಿ ನಟ-ನಟಿಯರ ಸಂದರ್ಶನ ಮಾಡ್ತಿದ್ದಾರೆ. ಈ ಮೂಲಕ ಮೊದಲ ಬಾರಿಗೆ ನಿರೂಪಕಿಯಾಗಿ ಗುರುತಿಸಿಕೊಳ್ತಿದ್ದಾರೆ.

    ತೆಲುಗು ಸೀರಿಯಲ್, ಸಿನಿಮಾಗಳ ಅವಕಾಶಗಳು ಹರಿದು ಬರುತ್ತಿವೆ. ಶೋಭಾ ಕೂಡ ಸಖತ್ ಚ್ಯುಸಿಯಾಗಿ ಪ್ರಾಜೆಕ್ಟ್‌ಗಳನ್ನು ಆಯ್ಕೆ ಮಾಡ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೆ ಕನ್ನಡಕ್ಕೆ ಯಾವಾಗ ಬರುತ್ತಾರೆ ಎಂದು ಅಭಿಮಾನಿಗಳು ಕೂಡ ಕಾತರದಿಂದ ಎದುರು ನೋಡ್ತಿದ್ದಾರೆ.

    ಅಂದಹಾಗೆ, ಇತ್ತೀಚೆಗೆ ಶೋಭಾ ಬಹುಕಾಲದ ಗೆಳೆಯ ಯಶವಂತ್ ರೆಡ್ಡಿ (Yashwanth Reddy) ಜೊತೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಇಬ್ಬರ ಎಂಗೇಜ್‌ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದನ್ನೂ ಓದಿ:‘ಸಲಾರ್’ ಸಕ್ಸಸ್ ಬಳಿಕ ಏಕಾಎಕಿ ಯುರೋಪ್‌ಗೆ ಹೊರಟಿದ್ದೇಕೆ ಪ್ರಭಾಸ್?

    ಕನ್ನಡದ ಅಗ್ನಿಸಾಕ್ಷಿ, ನಮ್ಮ ರುಕ್ಕು, ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಶೋಭಾ ನಟಿಸಿದ್ದಾರೆ. ಅದರಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ನ ತನು ಪಾತ್ರದ ಮೂಲಕ ಶೋಭಾ ಮನೆಮಾತಾಗಿದ್ದರು. ಇಂದಿಗೂ ಈ ಪಾತ್ರವನ್ನು ಸ್ಮರಿಸುತ್ತಿದ್ದಾರೆ.

  • ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

    ತೆಲುಗು ಬಿಗ್ ಬಾಸ್‌ನಲ್ಲಿ ಕನ್ನಡದ ಕಂಪು- ನಟಿಯರ ಮಾತಿಗೆ ಕನ್ನಡಿಗರು ಫಿದಾ

    ತೆಲುಗಿನ ಬಿಗ್ ಬಾಸ್‌ಗೆ (Bigg Boss Telugu 7) ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಎಂಟ್ರಿ ಕೊಟ್ಟಿರೋದು ಎಲ್ಲರಿಗೂ ಗೊತ್ತೆ ಇದೆ. ನಾಗಾರ್ಜುನ ಅಕ್ಕಿನೇನಿ ನಿರೂಪಣೆಯಲ್ಲಿ ಶೋ ಮುನ್ನುಗ್ಗುತ್ತಿದೆ. ಇದೀಗ ತೆಲುಗಿನ ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಕಲರವ ಶುರುವಾಗಿದೆ. ಕನ್ನಡದ ಕಂಪು ತೆಲುಗು ವೇದಿಕೆಯಲ್ಲಿ ಪಸರಿಸುತ್ತಿರೋದು ಕನ್ನಡಿಗರಿಗೆ ಖುಷಿ ಕೊಟ್ಟಿದೆ.‌ ಇದನ್ನೂ ಓದಿ:ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ ದರ್ಶನ್

    ಈ ಬಾರಿ ವಾರಾಂತ್ಯದಲ್ಲಿ ಬಿಗ್‌ಬಾಸ್ ಮನೆಯೊಳಗೆ ಇರುವ ಸದಸ್ಯರನ್ನು ಮಾತನಾಡಿಸಲು ಕುಟುಂಬಸ್ಥರಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ಶೋಭಾ ಅವರ ತಂದೆ ಮಗಳ ಜೊತೆ ಮಾತನಾಡಿದಾಗ, ಶೋಭಾ ಅವರು, ಕನ್ನಡದಲ್ಲೇ ಮಾತನಾಡಿದ್ರು. ಬಳಿಕ ಪ್ರಿಯಾಂಕಾ ಜೈನ್ (Priyanka Jain) ಜೊತೆ ಮಾತನಾಡಿ, ಅವರು ಕೂಡ ಕನ್ನಡದವರು ಎಂದರು. ಆಗ ಪ್ರಿಯಾಂಕಾ, ನಿಮ್ಮನ್ನು ನೋಡಿದರೆ ನನ್ನ ಅಪ್ಪನ ನೆನಪಾಗುತ್ತದೆ ಎಂದರು. ಬಳಿಕ ಶೋಭಾ ತಂದೆ ಎಲ್ಲರಿಗೂ ಶುಭಾಶಯ ಹೇಳಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ತೆಲುಗು ಬಿಗ್‌ಬಾಸ್‌ನಲ್ಲಿಯೂ ಕನ್ನಡ ಮಾತನಾಡಿದ್ದಕ್ಕೆ ಕನ್ನಡದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಂತಹದ್ದೇ ವೇದಿಕೆಯಾಗಿದ್ರು ಕನ್ನಡದ ಮರೆಯದ ನಟಿಮಣಿಯರಿಗೆ ಭೇಷ್‌ ಎಂದಿದ್ದಾರೆ ಫ್ಯಾನ್ಸ್.

    ಈ ಹಿಂದೆ ಶೋಭಾ ಶೆಟ್ಟಿ, ಕನ್ನಡದ ನಟಿ ಶ್ರೀಲೀಲಾ (Sreeleela) ಅವರ ಜೊತೆ ಕನ್ನಡದಲ್ಲಿಯೇ ಮಾತನಾಡಿದ್ದರು. ಶ್ರೀಲೀಲಾ ಅವರನ್ನು ಬಿಗ್‌ಬಾಸ್ ವೇದಿಕೆಯ ಮೇಲೆ ಅತಿಥಿಯಾಗಿ ಕರೆತರಲಾಗಿತ್ತು. ಆಗ ಇವರಿಬ್ಬರೂ ಕನ್ನಡದಲ್ಲಿ ಮಾತನಾಡಿದದರು. ಹೇಗಿದ್ದೀರಾ ಎಂದೆಲ್ಲಾ ಇಬ್ಬರೂ ಕನ್ನಡದಲ್ಲಿಯೇ ಯೋಗ ಕ್ಷೇಮ ವಿಚಾರಿಸಿಕೊಂಡಿದ್ದರು. ಕನ್ನಡದವರೊಬ್ಬರು ತೆಲುಗು ಬಿಗ್‌ಬಾಸ್ ಮನೆಯೊಳಗೆ ಇರುವುದನ್ನು ಕಂಡು ಶ್ರೀಲೀಲಾ ಕರ್ನಾಟಕ ಮೀಟ್ಸ್ ಕರ್ನಾಟಕ ಎಂದು ಖುಷಿಯಿಂದ ಮಾತನಾಡಿದ್ದರು.

    ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ಶೋಭಾ ತನು ಪಾತ್ರದಲ್ಲಿ ಮಿಂಚಿದ್ದರು. ಈ ಸೀರಿಯಲ್ 6 ವರ್ಷ ಪ್ರಸಾರ ಕಂಡಿತ್ತು. ಕಾವೇರಿ, ರುಕ್ಕು ಎಂಬ ಸೀರಿಯಲ್‌ನಲ್ಲಿ ನಟಿ ಅಭಿನಯಿಸಿದ್ದರು. ‘ಅಂಜನಿಪುತ್ರ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ ಅವರ ತಂಗಿ ಪಾತ್ರದಲ್ಲಿ ಶೋಭಾ ನಟಿಸಿದ್ದರು.

  • Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    ಲ್ಲಾ ಭಾಷೆಯಲ್ಲೂ ದೊಡ್ಮನೆ ಆಟಕ್ಕೆ ತಯಾರಿ ನಡೆಯುತ್ತಿದೆ. ಬಿಗ್ ಬಾಸ್ ತೆಲುಗು ಸೀಸನ್ 7 (Bigg Boss Telugu 7) ಇದೇ ಸೆಪ್ಟೆಂಬರ್‌ನಿಂದ ಶೋ ಶುರುವಾಗಲಿದೆ. ಬಿಗ್ ಬಾಸ್ ಶೋಗಾಗಿ ಕಾದು ಕೂರುವ ಫ್ಯಾನ್ಸ್ ಗುಡ್ ನ್ಯೂಸ್ ಸಿಕ್ಕಿದೆ. ಇದೀಗ ಬಿಗ್ ಬಾಸ್ ಮನೆಗೆ ಮಲಯಾಳಂ ನಟಿ ಶಕೀಲಾ(Shakeela) ಕಾಲಿಡುತ್ತಿದ್ದಾರೆ.

    ನಾಗರ್ಜುನ ಅಕ್ಕಿನೇನಿ(Nagarjuna Akkineni) ನಿರೂಪಣೆಯ ಬಿಗ್ ಬಾಸ್ (Bigg Boss) ಪ್ರೋಮೋ ಈಗಾಗಲೇ ರಿವೀಲ್ ಆಗಿದೆ. ಸಾಕಷ್ಟು ಫನ್ ಈ ಸೀಸನ್‌ನಲ್ಲಿ ಇರಲಿದೆ ಕಾದುನೋಡಿ ಎಂದು ಫ್ಯಾನ್ಸ್‌ಗೆ ತಲೆಗೆ ಹುಳಬಿಟ್ಟಿದ್ದಾರೆ. ಇದೆಲ್ಲದರ ನಡುವೆ ದೊಡ್ಮನೆಗೆ ಹಾಟ್ ನಟಿ ಶಕೀಲಾ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಕನ್ನಡತಿ ಶ್ರೀಲೀಲಾಗೆ ಸರಸ್ವತಿ ವರಪ್ರಸಾದ ಎಂದು ಹೊಗಳಿದ ಬಾಲಯ್ಯ

    1994ರಲ್ಲಿ ತಮಿಳಿನ ಪ್ಲೇಗರ್ಲ್ಸ್ ಅವರ ಮೊದಲ ಸಿನಿಮಾ. ಬಳಿಕ ಮಲಯಾಳಂ ಚಿತ್ರರಂಗದಲ್ಲಿ ಗುರುತಿಸಿಕೊಂಡರು. ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾಗಳು ಡಬ್ ಆಗಿ ಪರಭಾಷೆಗಳಲ್ಲಿ ರಿಲೀಸ್ ಆಯಿತು. ಶಕೀಲಾ: ಆತ್ಮಕಥಾ ಹೆಸರಿನ ಆಟೋಬಯೋಗ್ರಫಿಯನ್ನು 2013ರಲ್ಲಿ ಬಿಡಗಡೆ ಮಾಡಲಾಯಿತು. ಇದು ಮಲಯಾಳಂ ಭಾಷೆಯಲ್ಲಿದೆ. ಈ ಪುಸ್ತಕದಲ್ಲಿ ಅವರು ಕುಟುಂಬ, ಸಿನಿಮಾ ಜಗತ್ತು- ರಾಜಕೀಯದ ಬಗ್ಗೆ ಹೇಳಿದ್ದಾರೆ.

    ಸದ್ಯ ಶಕೀಲಾ ಬಿಗ್ ಬಾಸ್‌ಗೆ ಕಾಲಿಡೋಕೆ ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಅವರ ಜೀವನದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ಶೋ ಮೂಲಕ ಹೆಚ್ಚಿನ ಮಾಹಿತಿ ಹೊರಬೀಳಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ತೆಲುಗು ಬಿಗ್ ಬಾಸ್ ಮನೆಗೆ ಕನ್ನಡದ ನಟಿ ಐಶ್ವರ್ಯಾ

    ನ್ನಡ ಕಿರುತೆರೆಯಲ್ಲಿ ‘ಅನುರೂಪ’, ‘ಸರ್ವ ಮಂಗಳ ಮಾಂಗಲ್ಯೇ’, ಸುಂದರಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ ಅವರು ದೊಡ್ಮನೆಗೆ ಕಾಲಿಡಲಿದ್ದಾರೆ. ತೆಲುಗು ಬಿಗ್ ಬಾಸ್‌ನಲ್ಲಿ (Bigg Boss) ಕನ್ನಡ ನಟಿ ಐಶ್ವರ್ಯಾ (Aishwarya) ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    ಟಿವಿ ಲೋಕದ ಜನಪ್ರಿಯ ‘ಅನುರೂಪ’ ಸೀರಿಯಲ್‌ನಲ್ಲಿ ನಟ ರಿಷಿಗೆ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ಅವರು ರಮೇಶ್ ಅರವಿಂದ್ (Ramesh Aravind) ನಿರ್ಮಾಣದ ‘ಸುಂದರಿ’ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ನಟಿಸಿದ್ದರು. ಸಂತು ಸ್ಟ್ರೈಟ್ ಫಾರ್ವರ್ಡ್’ ಸಿನಿಮಾದಲ್ಲಿ ಯಶ್ ತಂಗಿಯಾಗಿ ಐಶ್ವರ್ಯಾ ನಟಿಸಿದ್ದರು. ಇದನ್ನೂ ಓದಿ:ಜುಲೈ 23ಕ್ಕೆ ವಿಶ್ವಕುಂದಾಪ್ರ ಕನ್ನಡ ದಿನಕ್ಕೆ ಸಿಎಂ, ರಿಷಬ್ ಶೆಟ್ಟಿ- ಪ್ರಮೋದ್ ಶೆಟ್ಟಿ ಸಾಥ್

    ಇದೀಗ ಕನ್ನಡದ ಜೊತೆ ತೆಲುಗು ಸೀರಿಯಲ್‌ನಲ್ಲೂ ನಟಿ ಸದ್ದು ಮಾಡ್ತಿದ್ದಾರೆ. ತೆಲುಗು ಪ್ರೇಕ್ಷಕರ ಪ್ರೀತಿಯನ್ನ ಸಂಪಾದಿಸಿದ್ದಾರೆ. ದೊಡ್ಮನೆಗೆ ಹೋಗುವ ಆಫರ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

    ಇತ್ತೀಚಿಗಷ್ಟೇ ಬಿಗ್ ಬಾಸ್ ಸೀಸನ್ 7ರ (Bigg Boss Telagu 7) ನಟ ನಾಗಾರ್ಜುನ (Nagarjuna) ನಿರೂಪಣೆಯ ಪ್ರೋಮೋ ರಿವೀಲ್ ಆಗಿದೆ. ಫಸ್ಟ್ ಪ್ರೋಮೋಗೆ ಗುಡ್ ರೆಸ್ಪಾನ್ಸ್ ಸಿಕ್ಕಿದೆ. ಹಾಗೆಯೇ ಯಾರೆಲ್ಲಾ ತಾರೆಯರು ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂಬ ಕುತೂಹಲ ಕೂಡ ನಿರ್ಮಾಣವಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಶೋ ಪ್ರಸಾರವಾಗಲಿದೆ. ಸದ್ಯ ಕನ್ನಡದ ನಟಿ ಶೋಭಾ ಶೆಟ್ಟಿ, ಐಶ್ವರ್ಯಾ ಅವರು ತೆಲುಗು ಬಿಗ್ ಬಾಸ್‌ಗೆ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಇದು ನಿಜಾನಾ ಕಾದುನೋಡಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]