Tag: ಬಿಗ್‌ ಬಾಸ್‌ ತೆಲುಗು

  • BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    BBK 11: ದೊಡ್ಮನೆಯಿಂದ ಹೊರಬಂದು ಸುದೀಪ್‌ಗೆ ಸುದೀರ್ಘ ಪತ್ರ ಬರೆದ ಶೋಭಾ ಶೆಟ್ಟಿ

    ನ್ನಡದ ನಟಿ ಶೋಭಾ ಶೆಟ್ಟಿ (Shobha Shetty) ಅವರು ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ತಮ್ಮ ಸ್ವತಃ ನಿರ್ಧಾರದಿಂದ ದೊಡ್ಮನೆಯಿಂದ ನಟಿ ಹೊರಬಂದಿದ್ದಾರೆ. ಬಿಗ್ ಬಾಸ್‌ನಿಂದ ಹೊರಬಂದು ಸುದೀಪ್‌ಗೆ (Sudeep) ನಟಿ ಸುದೀರ್ಘವಾಗಿ ಪತ್ರ ಬರೆದಿದ್ದಾರೆ. ಇದೀಗ ನಟಿಯ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

    ನನ್ನ ಪ್ರೀತಿಯ ಕನ್ನಡಿಗರೇ, ನನ್ನ ಬಿಗ್ ಬಾಸ್ ಪಯಣ ಮುಗಿದಿದೆ. ಆಟದ ಮೇಲೆ ಗಮನ ಕೊಡಲು ಆರೋಗ್ಯ ಸಹಕರಿಸುತ್ತಿಲ್ಲ, ಮುನ್ನಡೆಯುವ ಇಚ್ಛೆಯಿದ್ದರೂ ದೇಹ ಮುಂದುವರಿಯಲು ಬಿಡುತ್ತಿಲ್ಲ. ಯಾರನ್ನೂ ಯಾವುದನ್ನೂ ನಾನು ಹಗುರವಾಗಿ ತೆಗೆದುಕೊಂಡಿಲ್ಲ, ಜೀವನದ ಜವಬ್ದಾರಿಗಳಿಗೆ ಆರೋಗ್ಯವನ್ನು ಕಾಪಾಡಿಕೊಂಡು ಮುನ್ನಡೆಯುವ ಸಲುವಾಗಿ ನನ್ನ ಈ ನಿರ್ಧಾರ. ಇದೆಲ್ಲದರ ಮಧ್ಯೆ ನೀವು ತೋರಿಸಿದ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಅಭಾರಿಯಾಗಿದ್ದೀನಿ, ತಿಳಿದೋ ತಿಳಿಯದೆಯೋ ನನ್ನಿಂದ ಯಾರಿಗಾದರೂ ಬೇಸರವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದಿದ್ದಾರೆ. ಇದನ್ನೂ ಓದಿ:ನಟ ದರ್ಶನ್‌ಗೆ ಜಾಮೀನು ಜೊತೆ ಆಪರೇಷನ್ ಟೆನ್ಷನ್

    ನನ್ನ ಜನರಿಗೆ, ಕಲರ್ಸ್ ಕನ್ನಡ ತಂಡಕ್ಕೆ, ಹಾಗು ನನ್ನ ಪ್ರೀತಿಯ ಕಿಚ್ಚ ಸುದೀಪ್ ಸರ್ ನಿಮಗೆ ಧನ್ಯವಾದಗಳು. ಹೊಸ ಹುರುಪಿನೊಂದಿಗೆ ನಿಮ್ಮನ್ನು ರಂಜಿಸಲು, ನಿಮ್ಮ ಪ್ರೀತಿಯನ್ನು ಮತ್ತೆ ಪಡೆಯಲು ಮತ್ತೊಂದು ರೂಪದಲ್ಲಿ ಮತ್ತೆ ನಿಮ್ಮ ಮುಂದೆ ಖಂಡಿತಾ ನಾನು ಬರುವೆ. ಇಂತಿ ಪ್ರೀತಿಯ, ಶೋಭಾ ಶೆಟ್ಟಿ ಎಂದು ಸುದೀರ್ಘ ಪತ್ರ ಬರೆದಿದ್ದಾರೆ. ಇನ್ನೂ ಬಹುತೇಕ ಅಭಿಮಾನಿಗಳಿಗೆ ನಟಿ ನಿರ್ಧಾರ ನೋವುಂಟು ಮಾಡಿದೆ. ಬಿಗ್ ಬಾಸ್ ಬಿಟ್ಟು ಬರಬಾರದಿತ್ತು ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ.

     

    View this post on Instagram

     

    A post shared by Shobha Shetty (@shobhashettyofficial)

    ತೆಲುಗಿನ ಬಿಗ್‌ಬಾಸ್ ಸೀಸನ್ 7ರಲ್ಲಿ (Bigg Boss Telugu 7)  ಸಖತ್ ಸೌಂಡು ಮಾಡಿದ್ದ ಶೋಭಾ ಶೆಟ್ಟಿ ಕೊನೆಯವರೆಗೂ ಪ್ರೀತಿ ಗಳಿಸಿ ಉಳಿದುಕೊಂಡಿದ್ದರು. ಆದರೆ ಕನ್ನಡದಲ್ಲಿ ಅವರ ಆಟ ನಡೆಯಲೇ ಇಲ್ಲ. ತೆಲುಗಿನ ವೀಕ್ಷಕರ ಅಭಿರುಚಿ ಮತ್ತು ಕನ್ನಡ ವೀಕ್ಷಕರ ಅಭಿರುಚಿ ವಿಭಿನ್ನವಾಗಿದೆ ಎಂದು ಶೋಭಾ ಅವರ ಮನಸ್ಸಿಗೆ ಅನಿಸಿತೋ ಗೊತ್ತಿಲ್ಲ. ಆದರೆ ಅನಾರೋಗ್ಯದ ಕಾರಣವನ್ನು ನೀಡಿ, ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

  • ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಇಬ್ಬರು ಸುಂದರಿಯರು

    ತೆಲುಗು ಬಿಗ್ ಬಾಸ್ ಮನೆಯಲ್ಲಿ ಕನ್ನಡದ ಇಬ್ಬರು ಸುಂದರಿಯರು

    ಟ ನಾಗಾರ್ಜುನ (Nagarjuna) ನಡೆಸಿ ಕೊಡುವ ತೆಲುಗಿನ ಬಿಗ್ ಬಾಸ್ (Bigg Boss Telugu) ಮನೆಗೆ ಇಬ್ಬರು ಕನ್ನಡತಿಯರು ಕಾಲಿಟ್ಟಿದ್ದಾರೆ. ಧಾರಾವಾಹಿ ಮತ್ತು ಕಿರುತೆರೆಯ ಮೂಲಕ ಫೇಮಸ್ ಆಗಿರೋ ಮತ್ತು ಸದ್ಯ ತೆಲುಗು ಕಿರುತೆರೆ ಪ್ರಪಂಚದಲ್ಲಿ ಬ್ಯುಸಿಯಾಗಿರೋ ಈ ಸುಂದರಿಯರು  ತೆಲುಗು ಬಿಗ್ ಬಾಸ್ ಮನೆಯಲ್ಲಿ ಕಮಾಲು ಮಾಡಲಿದ್ದಾರೆ. ಈ ಇಬ್ಬರಲ್ಲಿ ಒಬ್ಬರು ರಶ್ಮಿಕಾ ಮಂದಣ್ಣರ ಕ್ಲೋಸ್ ಫ್ರೆಂಡ್ ಅನ್ನೋದು ವಿಶೇಷ.

    ರಾಘು ಶಿವಮೊಗ್ಗ ನಿರ್ದೇಶನದ ಚೂರಿಕಟ್ಟೆ, ಪೆಂಟಾಗನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರೋ, ಹಲವಾರು ಧಾರಾವಾಹಿಗಳಲ್ಲೂ ನಟಿಸಿರೋ ಪ್ರೇರಣಾ ಕಂಬಂ (Prerna Kambam)ಈ ಬಾರಿ ದೊಡ್ಮನೆಗೆ ಪ್ರವೇಶ ಮಾಡಿದ್ದಾರೆ. ಇವರು ರಶ್ಮಿಕಾ ಮಂದಣ್ಣರ ಕ್ಲೋಸ್ ಫ್ರೆಂಡ್. ಇಬ್ಬರೂ ಒಂದೇ ರೂಮ್ ನಲ್ಲಿ ವಾಸಿಸಿದ್ದಾಗಿ ನಾಗಾರ್ಜುನ್ ಮುಂದೆ ಹೇಳಿಕೊಂಡಿದ್ದಾರೆ.

    ಪ್ರೇರಣಾ ಜೊತೆ ಕಿರುತೆರೆಯ ಮತ್ತೋರ್ವ ನಟಿ ಯಶ್ಮಿ ಗೌಡ ಕೂಡ ಸೀಸನ್ 8ರ ಸ್ಪರ್ಧಿಯಾಗಿದ್ದಾರೆ. ಪ್ರೇರಣಾ ಜೊತೆ ಯಶ್ಮಿ ಗೌಡ (Yashmi Gowda) ಬಿಗ್ ಫೈಟ್ ಕೊಡಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ. ಯಶ್ಮಿ ಗೌಡ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಹುಡುಗಿಯರ ಜೊತೆ ಇನ್ನೂ ಇಬ್ಬರು ಕನ್ನಡದ ಹುಡುಗರು ಈ ಬಾರಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

    ಈ ಸೀಸನ್ ಸಾಕಷ್ಟು ಕಾರಣಗಳಿಂದಾಗಿ ನೋಡುಗರ ಗಮನ ಸೆಳೆಯಲಿದೆ. ಕನ್ನಡದ ನಾಲ್ವರು ಈ ಬಾರಿ ಬಿಗ್ ಬಾಸ್ ತೆಲುಗು ಶೋನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲಿ ಮೂಡಿ ಬಂದ ಮನೆಯೇ ಮಂತ್ರಾಲಯ ಧಾರಾವಾಹಿಯ ನಿಖಿಲ್, ವಿದ್ಯಾ ವಿನಾಯಕ ನಟಿ ಯಶ್ಮಿ ಗೌಡ, ಕನ್ನಡದ ಬಿಗ್ ಬಾಸ್ ನಲ್ಲೂ ಕಾಣಿಸಿಕೊಂಡಿದ್ದ ಪ್ರೇರಣಾ, ಪೃಥ್ವಿರಾಜ್ ಶೆಟ್ಟಿ ಹೀಗೆ ನಾಲ್ವರು ಕಲಾವಿದರು ಈ ಬಾರಿ ತೆಲುಗು ಬಿಗ್ ಬಾಸ್ ಮನೆಯ ಪ್ರವೇಶ ಮಾಡಿದ್ದಾರೆ.

    ಕನ್ನಡದಲ್ಲಿ ಬಿಗ್ ಬಾಸ್ ಶುರುವಾಗೋ ಮುನ್ನವೇ ತೆಲುಗಿನಲ್ಲಿ ಗ್ರ್ಯಾಂಡ್ ಓಪನಿಂಗ್ ಆಗಿದೆ. 14 ಸ್ಪರ್ಧಿಗಳು ದೊಡ್ಮನೆಗೆ ಪ್ರವೇಶ ಮಾಡಲಿದ್ದಾರೆ. ಅದರಲ್ಲಿ ನಾಲ್ವರು ಕನ್ನಡದ ಮೂಲದವರೇ ಇದ್ದಾರೆ ಅನ್ನೋದು ವಿಶೇಷ. ಮುಂದಿನ ದಿನಗಳಲ್ಲಿ ಯಾವೆಲ್ಲ ಕಂಟೆಸ್ಟೆಂಟ್ ಗಳು ಗಮನ ಸೆಳೆಯುತ್ತಾರೆ ಅನ್ನೋದನ್ನ ಕಾದು ನೋಡಬೇಕು.

  • ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅರೆಸ್ಟ್

    ಬಿಗ್ ಬಾಸ್ ವಿನ್ನರ್ ಪಲ್ಲವಿ ಪ್ರಶಾಂತ್ ಅರೆಸ್ಟ್

    ವಿಧ್ವಂಸಕ ಕೃತ್ಯ ಹಾಗೂ ಅಶಾಂತಿಗೆ ಕಾರಣ ಆಗಿದ್ದಾರೆ ಎನ್ನುವ ಕಾರಣಕ್ಕಾಗಿ ತೆಲುಗಿನ ಬಿಗ್ ಬಾಸ್ ಸೀಸನ್ 7 ರ ವಿಜೇತ ಪಲ್ಲವಿ ಪ್ರಶಾಂತ್ ಅವರನ್ನು ಹೈದರಾಬಾದ್ ನ ಜುಬಿಲಿ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ (Arrest). ಪಲ್ಲವಿ ಪ್ರಶಾಂತ್ ಅವರ ಜೊತೆಗೆ ಸಹೋದರ ಮನೋಹರ್ ಅವರನ್ನು ಕೂಡ ಬಂಧಿಸಲಾಗಿದ್ದು, ನ್ಯಾಯಾಲಯವು ಇಬ್ಬರಿಗೂ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

    ಏನಿದು ಪ್ರಕರಣ?
    ಬಿಗ್ ಬಾಸ್ (Bigg Boss) ಕಂಟೆಸ್ಟೆಂಟ್ ಅಭಿಮಾನಿಗಳು ಕಿತ್ತಾಡಿಕೊಂಡ ಪ್ರಕರಣ ಹೈದರಾಬಾದ್ ನಲ್ಲಿ ಮೊನ್ನೆ ನಡೆದಿತ್ತು. ಫಿನಾಲೆ ವೇಳೆ ಸ್ಟುಡಿಯೋದಲ್ಲಿ ಗಲಾಟೆ ನಡೆದಿದ್ದು, ಕಾರು ಮತ್ತು ಬಸ್ ಗಳು ಜಖಂ ಆಗಿದ್ದವು. ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 7ರ ಗ್ರ್ಯಾಂಡ್ ಫಿನಾಲೆ ನಡೆಯುತ್ತಿತ್ತು. ಈ ವೇಳೆ ಕಂಟೆಸ್ಟೆಂಟ್ ಆಗಿದ್ದ ಅಮರ್ ದೀಪ್  (Amar Deep) ಮತ್ತು ಪಲ್ಲವಿ ಪ್ರಶಾಂತ್ (Pallavi Prashant) ಅವರ ಅಭಿಮಾನಿಗಳು ಆಗಮಿಸಿ ದಾಂಧಲೆ ಮಾಡಿದ್ದರು.

    ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ನೆಚ್ಚಿನ ಕಂಟೆಸ್ಟೆಂಟ್ ವಿನ್ನರ್ ಆಗುತ್ತಾರೆ ಎನ್ನುವುದು ಅವರವರ ಅಭಿಮಾನಿಗಳ ನಿರೀಕ್ಷೆ ಆಗಿತ್ತು. ಆದರೆ, ಆಗಿದ್ದು ಉಲ್ಟಾ ಎನ್ನುವ ಕಾರಣಕ್ಕಾಗಿ ಗಲಾಟೆ ಶುರುವಾಗಿತ್ತು. ಪಲ್ಲವಿ ಪ್ರಶಾಂತ್ ವಿನ್ ಆಗಿ, ಅಮರ್ ದೀಪ್ ರನ್ನರ್ ಅಪ್ ಆಗಿ ಘೋಷಣೆ ಆಗುತ್ತಿದ್ದಂತೆಯೇ ಗಲಾಟೆ ಶುರುವಾಗಿತ್ತು. ಇಬ್ಬರ ಫ್ಯಾನ್ಸ್ ಮಾತು ವಿಕೋಪಕ್ಕೆ ಹೋದ ಕಾರಣದಿಂದಾಗಿ ಆರ್.ಟಿ.ಸಿ ಬಸ್ ಮತ್ತು ಕಾರಿನ ಗಾಜು ಪುಡಿ ಪುಡಿ ಆಗಿದೆ.

     

    ಪಲ್ಲವಿ ಪ್ರಶಾಂತ್ ಅಭಿಮಾನಿಗಳು ರನ್ನರ್ ಅಪ್ ಆಗಿದ್ದ ಅಮರ್ ಅವರ ಕಾರಿನ ಮೇಲೂ ದಾಳಿ ಮಾಡಿದ್ದರು. ಕೂಡಲೇ ಪೊಲೀಸರು ಮಧ್ಯ ಪ್ರವೇಶಿಸಿ ಅನಾಹುತ ಆಗಿರುವುದನ್ನು ತಡೆದಿದ್ದರು. ಜೊತೆ ಇನ್ನೋರ್ವ ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಶ್ರೀ ಅವರು ಕಾರಿನ ಗಾಜು ಪುಡಿ ಪುಡಿ ಆಗಿತ್ತು.  ಈ ಕುರಿತಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಲ್ಲವಿ ಪ್ರಶಾಂತ್ ಅವರನ್ನು ಬಂಧಿಸಲಾಗಿದೆ.

  • ತೆಲುಗಿನ ಬಿಗ್ ಬಾಸ್ ಮನೆಯಿಂದ ಕನ್ನಡತಿ ಔಟ್

    ತೆಲುಗಿನ ಬಿಗ್ ಬಾಸ್ ಮನೆಯಿಂದ ಕನ್ನಡತಿ ಔಟ್

    ರಭಾಷಾ ಬಿಗ್ ಬಾಸ್ (Bigg Boss Telugu) ಶೋನಲ್ಲಿ ಭಾಗಿಯಾಗಿ, ಸಖತ್ ಸದ್ದು ಮಾಡಿದ್ದ ಕನ್ನಡತಿ ಶೋಭಾ ಶೆಟ್ಟಿ ಈ ವಾರ ಎಲಿಮಿನೇಟ್ (Eliminated) ಆಗಿದ್ದಾರೆ. ಈ ಮೂಲಕ ಅಸಂಖ್ಯಾತ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಈ ಬಾರಿ ಫಿನಾಲೆ ವೇದಿಕೆಯ ಮೇಲೆ ಶೋಭಾ ಶೆಟ್ಟಿ ಇರಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಆ ನಂಬಿಕೆ ಇದೀಗ ಸುಳ್ಳಾಗಿದೆ.

    ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ತೆಲುಗು ಕಿರುತೆರೆಯಲ್ಲಿ ಸಂಚಲನ ಮೂಡಿಸಿದ್ದರು. ನಾಗಾರ್ಜುನ (Nagarjuna) ನಿರೂಪಣೆಯ ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿ ಕಮಾಲ್ ಮಾಡ್ತಿದ್ದರು. ಕನ್ನಡದ ನಟಿಯ ಆಟ ನೋಡಿ, ಇವ್ರು ಕನ್ನಡದ ಬಿಗ್ ಬಾಸ್ ಸೀಸನ್ 10ನಲ್ಲಿ ಇರಬಾರದಿತ್ತಾ ಎಂದು ಫ್ಯಾನ್ಸ್ ಬೇಸರ ಹೊರಹಾಕಿದ್ದರು.

    ತೆಲುಗು ಬಿಗ್ ಬಾಸ್ ಸೀಸನ್-7ರಲ್ಲಿ ಬೆಂಗಳೂರಿನ ಈ ಬೆಡಗಿ ದೊಡ್ಮನೆಯಲ್ಲಿ ರೆಬೆಲ್ ಆಗಿ ಆಟ ಆಡುತ್ತಿದ್ದರು. ಅವರ ಆಟಕ್ಕೆ ಮನೆ ಮಂದಿ ಗಪ್ ಚುಪ್ ಆಗಿದ್ದರು. ಶೋಭಾ ಖಡಕ್ ಆಟ ನೋಡಿ, ಅಯ್ಯೋ ಇವರು ಕನ್ನಡದ ಬಿಗ್ ಬಾಸ್ ಶೋನಲ್ಲಿ ಇರಬೇಕಿತ್ತು ಎಂದು ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು ಈ ಕುರಿತು ಸಖತ್‌ ಟ್ರೋಲ್‌ (Troll) ಕೂಡ ಆಗಿದ್ದರು. ಈಗ ಏಕಾಏಕಿ ಮನೆಯಿಂದ ಆಚೆ ಬಂದಿದ್ದಾರೆ.

     

    ಎದುರಾಳಿಯ ಮಾತಿಗೆ ಕೌಂಟರ್ ಕೊಡೋ ಶೋಭಾ ಆಟಕ್ಕೆ ನೋಡಿ‌, ಪ್ರೇಕ್ಷಕರು ಭೇಷ್ ಎಂದಿದ್ದರು. ಕನ್ನಡದ ಶೋನಲ್ಲಿ ಶೋಭಾ ಇಲ್ಲ ಅಂತ ಬೇಸರ ಮಾಡಿಕೊಳ್ಳಬೇಡಿ. ಕನ್ನಡದಲ್ಲಿ ಸಂಗೀತಾ- ತನಿಷಾ ಮಾಸ್ ಆಗಿ ಆಟ ಆಡ್ತಿದ್ದಾರೆ. ಶೋಭಾರಂತಯೇ ಇಲ್ಲಿಯೂ ಕೂಡ ಠಕ್ಕರ್ ಕೊಡುವವರು ಇದ್ದಾರೆ ಎಂದು ಅನೇಕರು ಕಾಮೆಂಟ್ ಮಾಡಿದ್ದರು. ಕನ್ನಡದಲ್ಲಿ ಸಂಗೀತಾ ಮನೆಯೊಳಗೆ ಉಳಿದಿದ್ದಾರೆ. ಆದರೆ, ಶೋಭಾ ಈ ವಾರ ಆಚೆ ಬಂದಿದ್ದಾರೆ.

  • ಬಿಗ್ ಬಾಸ್ ಪ್ರೋಮೋ ಔಟ್- ದೊಡ್ಮನೆ ಆಟಕ್ಕೆ ಆ್ಯಂಕರ್ ಫಿಕ್ಸ್

    ಬಿಗ್ ಬಾಸ್ ಪ್ರೋಮೋ ಔಟ್- ದೊಡ್ಮನೆ ಆಟಕ್ಕೆ ಆ್ಯಂಕರ್ ಫಿಕ್ಸ್

    ಟಿವಿ ಪ್ರೇಕ್ಷಕರಿಗೆ ಇಲ್ಲಿದೆ ಸಿಹಿಸುದ್ದಿ. ಅಭಿಮಾನಿ ಪ್ರಭುಗಳ ನೆಚ್ಚಿನ ಶೋ ಆಗಿರುವ ಬಿಗ್ ಬಾಸ್‌ಗೆ (Bigg Boss) ಮುಹೂರ್ತ ಫಿಕ್ಸ್ ಆಗಿದೆ. ಬಿಗ್ ಬಾಸ್‌ಗಾಗಿಯೇ ಕಾದು ಕೂರುವ ಫ್ಯಾನ್ಸ್‌ಗೆ ಪ್ರೋಮೋ ರಿವೀಲ್ ಮಾಡುವ ಮೂಲಕ ಅಧಿಕೃತ ಅಪ್‌ಡೇಟ್ ಸಿಕ್ಕಿದೆ. ತೆಲುಗು ಬಿಗ ಬಾಸ್‌ಗೆ ನಾಗಾರ್ಜುನ್ ಅವರೇ ನಿರೂಪಕರಾಗಿ ಫಿಕ್ಸ್ ಆಗಿದ್ದಾರೆ. ಇದನ್ನೂ ಓದಿ:ಟೊಮ್ಯಾಟೋ ವಿಚಾರದಲ್ಲಿ ಕ್ಷಮೆ ಕೇಳಿದ ನಟ ಸುನೀಲ್ ಶೆಟ್ಟಿ

    ತೆಲುಗು ‘ಬಿಗ್ ಬಾಸ್ 6’ ಸಕ್ಸಸ್‌ಫುಲ್ ಸೀಸನ್ ಆಗಿ ಗೆದ್ದಿತ್ತು. ಈಗ ಬಿಗ್ ಬಾಸ್ 7ʼಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸೀಸನ್ 7 ಬರೋದರ ಬಗ್ಗೆ ವಾಹಿನಿ ಅಧಿಕೃತ ಅಪ್‌ಡೇಟ್‌ ಕೊಟ್ಟಿದೆ. ಇದರ ಬೆನ್ನಲ್ಲೇ ಯಾರೆಲ್ಲಾ ಕಲಾವಿದರು ಬರಬಹುದು ಎಂಬ ಚರ್ಚೆ ಶುರುವಾಗಿದೆ. ಕನ್ನಡದ ‘ಅಗ್ನಿಸಾಕ್ಷಿ’ (Agnisakshi) ನಟಿ ಶೋಭಾ ಶೆಟ್ಟಿ (Shobha Shetty) ಬಿಗ್ ಬಾಸ್ ಮನೆಗೆ ಬರುವ ಸಾಧ್ಯತೆ ಇದೆ ಎಂಬ ಸುದ್ದಿಯಿದೆ. ಟಿಕ್‌ ಟಾಕ್‌ ಸ್ಟಾರ್ಸ್‌, ವಿವಾದದಲ್ಲಿ ಸುದ್ದಿಯಾದವರಿಗೆ ದೊಡ್ಮನೆ ಆಟಕ್ಕೆ ಅವಕಾಶ ಸಿಗಲಿದೆ ಎಂದು ಹೇಳಲಾಗುತ್ತಿದೆ.

    ಈ ಸೀಸನ್‌ನಲ್ಲೂ ಟಾಲಿವುಡ್ ಸ್ಟಾರ್ ನಟ ನಾಗಾರ್ಜುನ (Nagarjuna) ಅವರೇ ನಿರೂಪಕರಾಗಿ ಬಂದಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. 7ನೇ ಸೀಸನ್‌ನ ನೋಡೋಕೆ ಕಾತರದಿಂದ ಬಿಗ್ ಬಾಸ್ ಫ್ಯಾನ್ಸ್ ಕಾಯ್ತಿದ್ದಾರೆ. ಹೊಸ ಸೀಸನ್‌ಗಾಗಿ ಮನೆಯ ವಿನ್ಯಾಸ, ಹೊಸ ನಿಯಮಗಳನ್ನು ತರಲು ಪ್ಲ್ಯಾನ್ ಮಾಡಲಾಗಿದೆ. ಈ ಹಿಂದಿನ ಟಾಸ್ಕ್‌ಗಳ ಬದಲು ಹೊಸ ಬಗೆಯ ಟಾಸ್ಕ್‌ಗಳನ್ನ ಸೀಸನ್ 7ರಲ್ಲಿ ನೋಡಬಹುದು.

    ಬಹುಭಾಷೆಗಳಲ್ಲಿ ಬಿಗ್ ಬಾಸ್ ಮೂಡಿ ಬರುತ್ತಿದೆ. ಈ ವರ್ಷದ ಆರಂಭದಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ ಮುಗಿದಿತ್ತು. ಸುದೀಪ್(Sudeep) ನಿರೂಪಣೆಯಲ್ಲಿ ಅದ್ಭುತವಾಗಿ ಮೂಡಿ ಬಂದಿತ್ತು. ಈಗ ಕನ್ನಡದ ಒಟಿಟಿ ಬಿಗ್ ಬಾಸ್‌ಗೆ ಸಕಲ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ‘ಕಬಾಲಿ’ ನಿರ್ಮಾಪಕ ಅರೆಸ್ಟ್ ಬೆನ್ನಲ್ಲೇ ಡ್ರಗ್ಸ್ ಪ್ರಕರಣದಲ್ಲಿ ನಟಿ ಅಶು ರೆಡ್ಡಿ ಹೆಸರು

    ಕಾಲಿವುಡ್‌ನ ‘ಕಬಾಲಿ’ (Kabali) ಸಿನಿಮಾದ ನಿರ್ಮಾಪಕ ಕೆ.ಪಿ ಚೌಧರಿ (Kp Chowdary) ಅವರು ಡ್ರಗ್ಸ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದಾರೆ. ಈ ಬೆನ್ನಲ್ಲೇ ವಿಚಾರಣೆ ಸಂದರ್ಭದಲ್ಲಿ ಅನೇಕರ ಹೆಸರನ್ನ ನಿರ್ಮಾಪಕ ಬಾಯ್ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅದರಲ್ಲಿ ಅಶು ರೆಡ್ಡಿ (Ashu Reddy) ಅವರ ಹೆಸರು ಕೇಳಿ ಬರುತ್ತಿದೆ.

    ನಟಿ ಅಶು ರೆಡ್ಡಿ ಈಗ ಸುದ್ದಿಯಲ್ಲಿದ್ದಾರೆ. ಇಷ್ಟು ದಿನ ಗ್ಲ್ಯಾಮರಸ್ ಫೋಟೋ ಮೂಲಕ ಗಮನ ಸೆಳೆಯುತ್ತಿದ್ದ ಅವರು ಈಗ ಡ್ರಗ್ ಕೇಸ್ ಮೂಲಕ ಸುದ್ದಿ ಆಗಿದ್ದಾರೆ. ರಜನಿಕಾಂತ್ ನಟನೆಯ ‘ಕಬಾಲಿ’ ಚಿತ್ರದ ನಿರ್ಮಾಪಕ ಕೆಪಿ ಚೌಧರಿ ಅವರು ಡ್ರಗ್ (Drugs) ಕೇಸ್‌ನಲ್ಲಿ ಅಂದರ್ ಆಗಿದ್ದಾರೆ. ಅಶು ರೆಡ್ಡಿ ಜೊತೆ ಅವರು ನೂರಾರು ಬಾರಿ ಫೋನ್ ಮೂಲಕ ಮಾತನಾಡಿದ್ದರು ಎನ್ನುವ ವಿಚಾರ ರಿವೀಲ್ ಆಗಿದೆ. ಡ್ರಗ್ ಮಾರಾಟ ಮಾಡುವ ವ್ಯಕ್ತಿಯ ಜೊತೆ ಇಷ್ಟೊಂದು ದೂರವಾಣಿ ಕರೆ ಏಕೆ ಎನ್ನುವ ಪ್ರಶ್ನೆ ಪೊಲೀಸರಲ್ಲಿ ಮೂಡಿದೆ.

    ಅಶು ರೆಡ್ಡಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ತೆಲುಗಿನ ಬಿಗ್ ಬಾಸ್‌ನಲ್ಲಿ (Bigg Boss Telagu) ಗಮನ ಸೆಳೆದ ಅಶು ರೆಡ್ಡಿಗೆ ಟಿವಿ ಶೋ ಮೂಲಕ ಜನಪ್ರಿಯತೆ ಪಡೆದರು. ಈಗ ಅವರ ಹೆಸರು ಡ್ರಗ್ಸ್ ಕೇಸ್‌ನಲ್ಲಿ ಅವರ ಹೆಸರು ಕೇಳಿ ಬಂದಿದೆ. ಕಬಾಲಿ ನಿರ್ಮಾಪಕ ಅವರು ನೇರವಾಗಿ ಅಶು ರೆಡ್ಡಿ ಬಗ್ಗೆ ಆರೋಪ ಮಾಡಿಲ್ಲ. ಇವರ ಮಧ್ಯೆ ಲಿಂಕ್ ಇರೋದು ವಿಚಾರಣೆ ವೇಳೆ ಗೊತ್ತಾಗಿದೆ. ಅವರ ಬಳಿ ಇದ್ದ ಮೂರು ಮೊಬೈಲ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಕೆಪಿ ಚೌಧರಿ ಅವರ ಒಂದು ಮೊಬೈಲ್‌ನಿಂದ ಅಶು ರೆಡ್ಡಿಗೆ ನೂರಾರು ಬಾರಿ ಫೋನ್ ಕಾಲ್ ಹೋಗಿದೆ. ಇದು ಏಕೆ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ:ವಿಜಯ್ ದೇವರಕೊಂಡ- ರಶ್ಮಿಕಾ ಮಂದಣ್ಣ ಸೀಕ್ರೆಟ್ ಡೇಟಿಂಗ್‌ಗೆ ಸಿಕ್ತು ಸಾಕ್ಷಿ

    ಈ ಬಗ್ಗೆ ಅಶು ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ. ಇದೆಲ್ಲಾ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಅನಾವಶ್ಯಕವಾಗಿ ಈ ಪ್ರಕರಣದಲ್ಲಿ ತನ್ನ ಹೆಸರನ್ನು ಎಳೆದು ತರಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಪೋಸ್ಟ್ ಶೇರ್ ಮಾಡಿ ಕಾಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಇದು ಸ್ಪಷ್ಟತೆ ಎಂದು ಅಶು ರೆಡ್ಡಿ ಹೇಳಿದ್ದಾರೆ.

  • ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ ನಟ ನಾಗಾರ್ಜುನ್

    ತೆಲುಗು ಬಿಗ್ ಬಾಸ್ (Bigg Boss) ಸೀಸನ್ 6 ಇತ್ತೀಚೆಗಷ್ಟೇ ಅಂತ್ಯವಾಯಿತು. ನಟ ನಾಗಾರ್ಜುನ್ ನಿರೂಪಣೆಯಲ್ಲಿ ಬಿಗ್ ಬಾಸ್ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಈ ಬೆನ್ನಲ್ಲೇ ಶಾಕಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಸೀಸನ್ 7ಕ್ಕೆ ಸಿದ್ಧತೆ ನಡೆಯುತ್ತಿರುವ ವೇಳೆಯಲ್ಲಿ ನಾಗಾರ್ಜುನ್ (Nagarjuna) ಬಿಗ್ ಬಾಸ್ ಶೋನಿಂದ ಹಿಂದೆ (Exit) ಸರಿದಿದ್ದಾರೆ ಎನ್ನಲಾಗುತ್ತಿದೆ.

    ತೆಲುಗು ಕಿರುತೆರೆಯ ಜನಪ್ರಿಯ ಶೋ ಬಿಗ್ ಬಾಸ್ ಹೋಸ್ಟ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಆದರೆ ಈ ಸುದ್ದಿಯ ಬಗ್ಗೆ ಪ್ರಾಯೋಜಕರು ಅಥವಾ ನಾಗಾರ್ಜುನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಲವು ವೈಯಕ್ತಿಕ ಕಾರಣಗಳಿಂದ ಶೋಗೆ ನಾಗಾರ್ಜುನ್ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಶೆಟ್ಟಿ ಎನರ್ಜಿ ಡಬಲ್ ಆಯ್ತು: ಅನುಪಮಾ

    ಈ ಸುದ್ದಿ ವೈರಲ್ ಆಗುತ್ತಿದ್ದಂತೆ ನಾಗಾರ್ಜುನ್ ಅವರ ಸ್ಥಾನಕ್ಕೆ ಯಾರನ್ನ ಕರೆತರುತ್ತಾರೆ ಎಂಬುದರ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಮೂಲಗಳ ಪ್ರಕಾರ, ರಾಣಾ ದಗ್ಗುಭಾಟಿ(Rana Daggubati) , ಅಥವಾ ವಿಜಯ್ ದೇವರಕೊಂಡ (Vijay Devarakonda) ಅವರನ್ನ ಕರೆತರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಹಿಂದೆ ಜ್ಯೂ.ಎನ್‌ಟಿಆರ್ ಮತ್ತು ನಾನಿ ಕೂಡ ಬಿಗ್ ಬಾಸ್ ಶೋನ ನಿರೂಪಣೆ ಮಾಡಿದ್ದರು.

    ಇನ್ನೂ ಬಿಗ್ ಬಾಸ್ ಸೀಸನ್ 6ರಲ್ಲಿ ಎಲ್.ವಿ ರೇವಂತ್ (L.v Revanth) ವಿನ್ನರ್ ಆಗಿ ಹೊರಹೊಮ್ಮಿದ್ದರು.

    Live Tv
    [brid partner=56869869 player=32851 video=960834 autoplay=true]