Tag: ಬಿಗ್ ಬಾಸ್ ತಮಿಳು

  • ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಎಂಟ್ರಿ

    ಕಮಲ್ ಹಾಸನ್ ಬದಲು ವಿಜಯ್ ಸೇತುಪತಿ ಎಂಟ್ರಿ

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ತಮಿಳಿನ ಬಿಗ್ ಬಾಸ್‌ನಿಂದ ಕಮಲ್ ಹಾಸನ್ (Kamal Haasan) ಹೊರಬಂದ ಬೆನ್ನಲ್ಲೇ ಮತ್ತೊಂದು ಇಂಟರೆಸ್ಟಿಂಗ್ ಸುದ್ದಿ ಸಿಕ್ಕಿದೆ. ಇದೀಗ ಕಮಲ್ ಹಾಸನ್ ಜಾಗಕ್ಕೆ ವಿಜಯ್ ಸೇತುಪತಿ (Vijay Sethupathi) ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಎಂಟ್ರಿ

    ಕಮಲ್ ಹಾಸನ್ ನಂತರ ಬಿಗ್ ಬಾಸ್ (Bigg Boss Tamil 8) ನಿರೂಪಣೆಗೆ ಯಾರು ಎಂಟ್ರಿ ಕೊಡುತ್ತಾರೆ ಎಂದು ಕುತೂಹಲ ಮೂಡಿತ್ತು. ಆದರೆ ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ಕೈತುಂಬಾ ಸಿನಿಮಾಗಳ ನಡುವೆ ವಿಜಯ್ ಸೇತುಪತಿ ಈಗ ಬಿಗ್ ಬಾಸ್ ಕಾರ್ಯಕ್ರಮವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ಬಿಗ್ ಬಾಸ್ ಟೀಮ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

    ಅಂದಹಾಗೆ, 7 ವರ್ಷಗಳ ಹಿಂದೆ ಶುರುವಾದ ನನ್ನ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಮಲ್ ಹಾಸನ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.

    `ಬಿಗ್ ಬಾಸ್’ ಕಾರ್ಯಕ್ರಮದ ಮೂಲಕ ನಿಮ್ಮ ಮನ ಮತ್ತು ಮನೆ ತಲುಪಿದ್ದೇನೆ. ಅಗಾಧ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಿದ್ದೀರಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿಗೆ ಬೆಸ್ಟ್ ಆಯಿತು. ಕಲಿಕೆಯ ಅನುಭವ ನೀಡಿದ ಈ ಶೋಗೆ ನಾನು ಋಣಿಯಾಗಿದ್ದೇನೆ. ಸ್ಪರ್ಧಿಗಳಿಂದ ಹಿಡಿದು ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು ಎಂದು ಕಮಲ್ ಹಾಸನ್ ಹೇಳಿದ್ದರು.

  • ತಮಿಳು ಬಿಗ್ ಬಾಸ್:  ಇತಿಹಾಸ ಬರೆದ ವಿನ್ನರ್ ಅರ್ಚನಾ

    ತಮಿಳು ಬಿಗ್ ಬಾಸ್: ಇತಿಹಾಸ ಬರೆದ ವಿನ್ನರ್ ಅರ್ಚನಾ

    ಮೊನ್ನೆಯಷ್ಟೇ ತೆಲುಗು ಬಿಗ್ ಬಾಸ್ (Bigg Boss Tamil) ಫಿನಾಲೆ ಮುಗಿಸಿ ಬೀಗಿತ್ತು. ಇದೀಗ ತಮಿಳಿನ ಬಿಗ್ ಬಾಸ್ ಕೂಡ ಮುಗಿದಿದೆ. ಈ ಬಾರಿ ಬಿಗ್ ಬಾಸ್ ಟೈಟಲ್ (Winner) ಗೆದ್ದಿರುವ ಅರ್ಚನಾ ರವಿಚಂದ್ರನ್ (Archana Ravichandran) ಹೊಸ ಇತಿಹಾಸವನ್ನು ಬರೆದಿದ್ದಾರೆ.  ಅರ್ಚನಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಬಿಗ್ ಬಾಸ್ ಮನೆ ಪ್ರವೇಶ ಮಾಡಿದವರು, ತಮಿಳು ಬಿಗ್ ಬಾಸ್ ಇತಿಹಾಸದಲ್ಲೇ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟು ಟೈಟಲ್ ವಿನ್ ಆಗಿದ್ದಾರೆ.

    ಅರ್ಚನಾ ತಮಿಳು ಬಿಗ್ ಬಾಸ್ ಗೆದ್ದಿದ್ದರೆ, ಮೊದಲ ರನ್ನರ್ ಅಪ್ ಆಗಿ ಮಣಿಚಂದ್ರನ್ ಹೊರ ಹೊಮ್ಮಿದ್ದಾರೆ. ಅರ್ಚನಾ ಗೆಲುವು ಸಾಧಿಸುತ್ತಿದ್ದಂತೆಯೇ ಭಾರೀ ಮೊತ್ತದ ಹಣವೇ ಅವರ ಗೆಲುವಿಗೆ ಸಾಕ್ಷಿಯಾಗಿದೆ. ವಾರಕ್ಕೆ ಅವರು ಎರಡೂವರೆ ಲಕ್ಷ ಸಂಭಾವನೆಯನ್ನು ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ.

    77 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಅರ್ಚನಾ, ಟಫ್ ಕಂಟೆಸ್ಟೆಂಟ್ ಆಗಿದ್ದರು. ಕೊನೆಗೂ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಬಿಗ್ ಬಾಸ್ ಟ್ರೋಫಿಯ ಜೊತೆಗೆ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ಬಂದಿದೆ. ಅಲ್ಲದೇ, ಹಲವು ಉಡುಗೊರೆಯನ್ನೂ ಅವರಿಗೆ ನೀಡಲಾಗಿದೆ.

    ಕನ್ನಡದ ಬಿಗ್ ಬಾಸ್ ಕೂಡ ಫಿನಾಲೆ ಹಂತದಲ್ಲಿದೆ. ಇನ್ನೆರಡು ವಾರ ಕಳೆದರೆ, ಕನ್ನಡದ ಬಿಗ್ ಬಾಸ್ ಕೂಡ ಮುಗಿಯಲಿದೆ. ಈ ಬಾರಿ ಟ್ರೋಫಿ ಯಾರ ಪಾಲಾಗಲಿದೆ ಎನ್ನುವುದೇ ಸದ್ಯದ ಕುತೂಹಲ.